१०९ सानुचरं निर्गमनम्

[ನೂರ ಒಂಭತ್ತನೆಯ ಸರ್ಗ]

ಭಾಗಸೂಚನಾ

ಪರಮಧಾಮಕ್ಕೆ ಹೊರಟು ನಿಂತಿರುವ ಶ್ರೀರಾಮನ ಜೊತೆಯಲ್ಲಿ ಅಯೋಧ್ಯಾವಾಸಿಗಳೆಲ್ಲರೂ ಹೊರಡುವುದು

ಮೂಲಮ್ - 1

ಪ್ರಭಾತಾಯಾಂ ತು ಶರ್ವರ್ಯಾಂ ಪೃಥುವಕ್ಷಾಮಹಾಯಶಾಃ ।
ರಾಮಃ ಕಮಲಪತ್ರಾಕ್ಷಃ ಪುರೋಧಸಮಥಾಬ್ರವೀತ್ ॥

ಅನುವಾದ

ರಾತ್ರೆಯು ಕಳೆದು ಬೆಳಗಾದಾಗ ವಿಶಾಲ ವಕ್ಷಃಸ್ಥಳವುಳ್ಳ ಮಹಾಯಶಸ್ವೀ, ಕಮಲನಯನ ಶ್ರೀರಾಮಚಂದ್ರನು ಪುರೋಹಿತರಲ್ಲಿ ಹೇಳಿದನು.॥1॥

ಮೂಲಮ್ - 2

ಅಗ್ನಿಹೋತ್ರಂ ವ್ರಜತ್ವಗ್ರೇ ದೀಪ್ಯಮಾನಂ ಸಹದ್ವಿಜೈಃ ।
ವಾಜಪೇಯಾತಪತ್ರಂ ಚ ಶೋಭಮಾನಂ ಮಹಾಪಥೇ ॥

ಅನುವಾದ

ನನ್ನ ಅಗ್ನಿಹೋತ್ರದ ಪ್ರಜ್ವಲಿತ ಅಗ್ನಿಗಳು ಬ್ರಾಹ್ಮಣರೊಂದಿಗೆ ಮುಂದೆ-ಮುಂದೆ ಹೋಗಲಿ, ಮಹಾಪ್ರಯಾಣದ ದಾರಿಯಲ್ಲಿ ಈ ಯಾತ್ರೆಯ ಸಮಯ ನನ್ನ ವಾಜಪೇಯ ಯಜ್ಞದ ಸುಂದರ ಛತ್ರವೂ ಇರಬೇಕು.॥2॥

ಮೂಲಮ್ - 3

ತತೋ ವಸಿಷ್ಠಸ್ತೇಜಸ್ವೀ ಸರ್ವಂ ನಿರವಶೇಷತಃ ।
ಚಕಾರವಿಧಿವದ್ಧರ್ಮಂ ಮಹಾಪ್ರಸ್ಥಾನಿಕಂ ವಿಧಿಮ್ ॥

ಅನುವಾದ

ಅವನು ಹೀಗೆ ಹೇಳಿದಾಗ ತೇಜಸ್ವೀ ವಸಿಷ್ಠಮುನಿಗಳು ಮಹಾಪ್ರಸ್ಥಾನಕ್ಕಾಗಿ ಉಚಿತವಾದ ಸಮಸ್ತ ಧಾರ್ಮಿಕ ಕ್ರಿಯೆಗಳನ್ನು ವಿಧಿವತ್ತಾಗಿ ಅನುಷ್ಠಾನ ಮಾಡಿದರು.॥3॥

ಮೂಲಮ್ - 4

ತತಃ ಸೂಕ್ಷ್ಮಾಂಬರಧರೋಬ್ರಹ್ಮಮಾವರ್ತಯನ್ ಪರಮ್ ।
ಕುಶಾನ್ಗೃಹೀತ್ವಾ ಪಾಣಿಭ್ಯಾಂ ಸರಯೂಂ ಪ್ರಯಯಾವಥ ॥

ಅನುವಾದ

ಮತ್ತೆ ಭಗವಾನ್ ಶ್ರೀರಾಮನು ಸೂಕ್ಷ್ಮವಸ್ತ್ರ ಧರಿಸಿ, ಎರಡೂ ಕೈಗಳಲ್ಲಿ ದರ್ಭೆಗಳನ್ನೆತ್ತಿಕೊಂಡು ಪರಬ್ರಹ್ಮನ ಪ್ರತಿಪಾದಕ ವೇದಮಂತ್ರಗಳನ್ನು ಉಚ್ಚರಿಸುತ್ತಾ ಸರಯೂ ತೀರಕ್ಕೆ ಬಂದನು.॥4॥

ಮೂಲಮ್ - 5

ಅವ್ಯಾಹರನ್ಕ್ವಚಿತ್ಕಿಂಚಿನ್ನಿಶ್ಚೇಷ್ಟೋ ನಿಃಸುಖಃ ಪಥಿ ।
ನಿರ್ಜಗಾಮ ಗೃಹಾತ್ತಸ್ಮಾದ್ದೀಪ್ಯಮಾನೋ ಯಥಾಂಶುಮಾನ್ ॥

ಅನುವಾದ

ಆಗ ಅವನು ವೇದಪಾಠವಲ್ಲದೆ ಯಾರಲ್ಲಿಯೂ, ಏನನ್ನು ಮಾತನಾಡುತ್ತಿರಲಿಲ್ಲ. ನಡೆಯುವುದು ಬಿಟ್ಟು ಅವನಲ್ಲಿ ಬೇರೆ ಯಾವ ಚೇಷ್ಟೆಯೂ ಕಂಡು ಬರುತ್ತಿರಲಿಲ್ಲ. ಅವನು ಲೌಕಿಕ ಸುಖದ ಪರಿತ್ಯಾಗ ಮಾಡಿ ದೇದೀಪ್ಯಮಾನ ಸೂರ್ಯನಂತೆ ಪ್ರಕಾಶಿಸುತ್ತಾ ಅರಮನೆಯಿಂದ ಹೊರಟು, ಗಂತವ್ಯ ದಾರಿದಲ್ಲಿ ಮುಂದರಿದನು.॥5॥

ಮೂಲಮ್ - 6

ರಾಮಸ್ಯ ದಕ್ಷಿಣೇ ಪಾರ್ಶ್ವೇ ಸಪದ್ಮಾಶ್ರೀರುಪಾಶ್ರಿತಾ ।
ಸವ್ಯೇಸ ಚ ಮಹೀದೇವೀ ವ್ಯವಸಾಯಸ್ತಥಾಗ್ರತಃ ॥

ಅನುವಾದ

ಭಗವಾನ್ ಶ್ರೀರಾಮನ ಬಲಪಾರ್ಶ್ವದಲ್ಲಿ ಕಮಲ ಕೈಯಲ್ಲಿ ಹಿಡಿದು ಶ್ರೀದೇವಿ ಉಪಸ್ಥಿತಳಾದಳು. ಎಡ ಭಾಗದಲ್ಲಿ ಭೂದೇವಿಯು ವಿರಾಜಿಸುತ್ತಿದ್ದಳು. ಮುಂದುಗಡೆ ಅವನ ಸಂಹಾರ ಶಕ್ತಿ ನಡೆಯುತ್ತಿತ್ತು.॥6॥

ಮೂಲಮ್ - 7

ಶರಾ ನಾನಾವಿಧಾಶ್ಚಾಪಿ ಧನುರಾಯತ್ತ ಮುತ್ತಮಮ್ ।
ತಥಾಯುಧಾಶ್ಚ ತೇ ಸರ್ವೇ ಯಯುಃ ಪುರುಷವಿಗ್ರಹಾಃ ॥

ಅನುವಾದ

ನಾನಾ ಪ್ರಕಾರದ ಬಾಣಗಳು, ವಿಶಾಲ ಉತ್ತಮ ಧನುಸ್ಸು, ಇತರ ಶಸ್ತ್ರಾಸ್ತ್ರಗಳು ಎಲ್ಲವೂ ಪುರುಷರೂಪವನ್ನು ಧರಿಸಿಕೊಂಡು ಭಗವಂತನ ಜೊತೆಗೆ ಸಾಗುತ್ತಿದ್ದರು.॥7॥

ಮೂಲಮ್ - 8

ವೇದಾ ಬ್ರಾಹ್ಮಣರೂಪೇಣ ಗಾಯತ್ರೀ ಸರ್ವರಕ್ಷಿಣೀ ।
ಓಂಕಾರೋಽಥ ವಷಟ್ಕಾರಃ ಸರ್ವೇ ರಾಮಮನುವ್ರತಾಃ ॥

ಅನುವಾದ

ನಾಲ್ಕೂ ವೇದಗಳು ಬ್ರಾಹ್ಮಣರ ರೂಪಧಾರಿಯಾಗಿ ನಡೆಯುತ್ತಿದ್ದವು. ಎಲ್ಲರನ್ನು ರಕ್ಷಿಸುವ ಗಾಯತ್ರೀದೇವೀ, ಓಂಕಾರ, ವಷಟ್ಕಾಲ ಭಕ್ತಿಭಾವದಿಂದ ಶ್ರೀರಾಮನನ್ನು ಅನುಸರಿಸುತ್ತಿದ್ದವು.॥8॥

ಮೂಲಮ್ - 9

ಋಷಯಶ್ಚ ಮಹಾತ್ಮಾನಃ ಸರ್ವ ಏವ ಮಹೀಸುರಾಃ ।
ಅನ್ವಗಚ್ಛನ್ಮಹಾತ್ಮಾನಂ ಸ್ವರ್ಗದ್ವಾರಮಪಾವೃತಮ್ ॥

ಅನುವಾದ

ಮಹಾತ್ಮಾ ಋಷಿಗಳು ಹಾಗೂ ಸಮಸ್ತ ಬ್ರಾಹ್ಮಣರೂ ಬ್ರಹ್ಮಲೋಕದ ತೆರೆದ ದ್ವಾರದಂತೆ ಪರಮಾತ್ಮಾ ಶ್ರೀರಾಮನ ಹಿಂದೆ-ಹಿಂದೆ ಹೋಗುತ್ತಿದ್ದರು.॥9॥

ಮೂಲಮ್ - 10

ತಂ ಯಾಂತಮನುಗಚ್ಛಂತಿ ಹ್ಯಂತಃಪುರಚರಾಃ ಸ್ತ್ರಿಯಃ ।
ಸವೃದ್ಧಬಾಲದಾಸೀಕಾಃ ಸರ್ವರ್ಷವರಕಿಂಕರಾಃ ॥

ಅನುವಾದ

ಅಂತಃಪುರದ ಸ್ತ್ರೀಯರೂ, ಬಾಲಕರೂ, ವೃದ್ಧರೂ, ದಾಸಿಯರೂ, ಅಂತಃಪುರದ ರಕ್ಷಕರು, ಸೇವಕರೊಂದಿಗೆ ಹೊರಟು ಸರಯೂ ತೀರಕ್ಕೆ ಹೋಗುತ್ತಿರುವ ಶ್ರೀರಾಮನನ್ನು ಹಿಂಬಾಲಿಸಿದರು.॥10॥

ಮೂಲಮ್ - 11

ಸಾಂತಃಪುರಶ್ಚ ಭರತಃ ಶತ್ರುಘ್ನಸಹಿತೋ ಯಯೌ ।
ರಾಮಂಗತಿಮುಪಾಗಮ್ಯ ಸಾಗ್ನಿಹೋತ್ರಮನುವ್ರತಾಃ ॥

ಅನುವಾದ

ಭರತ - ಶತ್ರುಘ್ನರು ತಮ್ಮ ಪತ್ನಿಯರೊಂದಿಗೆ ತಮ್ಮ ಆಶ್ರಯ ಸ್ವರೂಪ, ಅಗ್ನಿಹೋತ್ರದೊಂದಿಗೆ ಹೋಗುತ್ತಿರುವ ಭಗವಾನ್ ಶ್ರೀರಾಮನ ಹಿಂದೆ-ಹಿಂದೆ ನಡೆದರು.॥11॥

ಮೂಲಮ್ - 12

ತೇ ಚ ಸರ್ವೇ ಮಹಾತ್ಮಾನಃ ಸಾಗ್ನಿಹೋತ್ರಾಃ ಸಮಾಗತಾಃ ।
ಸಪುತ್ರದಾರಾಃ ಕಾಕುತ್ಸ್ಥ ಮನುಜಗ್ಮುರ್ಮಹಾಮತಿಮ್ ॥

ಅನುವಾದ

ಆ ಎಲ್ಲ ಮಹಾತ್ಮಾಶ್ರೇಷ್ಠ ಪುರುಷರು ಹಾಗೂ ಬ್ರಾಹ್ಮಣರು ಅಗ್ನಿಹೋತ್ರದ ಅಗ್ನಿ ಹಾಗೂ ಪತ್ನೀ-ಪುತ್ರರೊಂದಿಗೆ ಈ ಮಹಾಯಾತ್ರೆಯಲ್ಲಿ ಸಮ್ಮಿಲಿತರಾಗಿ ಪರಮ ಬುದ್ಧಿವಂತ ಶ್ರೀರಾಮನನ್ನು ಅನುಗಮನ ಮಾಡುತ್ತಿದ್ದರು.॥12॥

ಮೂಲಮ್ - 13

ಮಂತ್ರಿಣೋ ಭೃತ್ಯವರ್ಗಾಶ್ಚ ಸಪುತ್ರಪಶುಬಾಂಧವಾಃ ।
ಸರ್ವೇ ಸಹಾನುಗಾ ರಾಮಮನ್ವಗಚ್ಛನ್ಪ್ರಹೃಷ್ಟವತ್ ॥

ಅನುವಾದ

ಸಮಸ್ತ ಮಂತ್ರಿಗಳು, ಭೃತ್ಯವರ್ಗವೂ ತಮ್ಮ ಪತ್ನಿ, ಪುತ್ರ, ಪಶು, ಬಂಧು-ಬಾಂಧವರೊಂದಿಗೆ, ಅನುಚರರ ಸಹಿತ ಹರ್ಷದಿಂದ ಶ್ರೀರಾಮನ ಹಿಂದೆ-ಹಿಂದೆ ಹೋಗುತ್ತಿದ್ದರು.॥13॥

ಮೂಲಮ್ - 14

ತತಃ ಸರ್ವಾಃ ಪ್ರಕೃತಯೋ ಹೃಷ್ಟಪುಷ್ಟಜನಾವೃತಾಃ ।
ಗಚ್ಛಂತಮನುಗಚ್ಛಂತಿ ರಾಘವಂ ಗುಣರಂಜಿತಾಃ ॥

ಮೂಲಮ್ - 15

ತತಃ ಸಸ್ತ್ರೀಪುಮಾಂಸಸ್ತೇ ಸಪಕ್ಷಿಪಶುಬಾಂಧವಾಃ ।
ರಾಘವಸ್ಯಾನುಗಾಃ ಸರ್ವೇ ಹೃಷ್ಟಾವಿಗತಕಲ್ಮಷಾಃ ॥

ಅನುವಾದ

ಹೃಷ್ಟ-ಪುಷ್ಟ ಜನರಿಂದ ತುಂಬಿದ ಸಮಸ್ತ ಪ್ರಜಾ ಜನರು ಶ್ರೀರಘುನಾಥನ ಗುಣಗಳಲ್ಲಿ ಮುಗ್ಧರಾಗಿದ್ದರು, ಅದಕ್ಕಾಗಿ ಅವರು ಸ್ತ್ರೀ-ಪುರುಷರು, ಪಶು-ಪಕ್ಷಿ ಹಾಗೂ ಬಂಧು ಬಾಂಧವರೊಂದಿಗೆ ಆ ಮಹಾಯಾತ್ರೆಯಲ್ಲಿ ಶ್ರೀರಾಮನ ಅನುಗಾಮಿಯಾದರು. ಅವರೆಲ್ಲರ ಮನಸ್ಸಿನಲ್ಲಿ ಪ್ರಸನ್ನತೆ ಇದ್ದು, ಎಲ್ಲರೂ ಪಾಪರಹಿತರಾಗಿದ್ದರು.॥14-15॥

ಮೂಲಮ್ - 16

ಸ್ನಾತಾಃಪ್ರಮುದಿತಾಃ ಸರ್ವೇಹೃಷ್ಟಪುಷ್ಟಾಶ್ಚ ವಾನರಾಃ ।
ದೃಢಂ ಕಿಲಕಿಲಾಶಬ್ದೈಃಸರ್ವಂ ರಾಮಮನುವ್ರತಮ್ ॥

ಅನುವಾದ

ಸಮಸ್ತ ಹೃಷ್ಟ-ಪುಷ್ಟ ವಾನರರೂ ಸ್ನಾನಮಾಡಿ ಪ್ರಸನ್ನತೆಯಿಂದ ಕಲ-ಕಲ ಧ್ವನಿಮಾಡುತ್ತಾ ಭಗವಾನ್ ಶ್ರೀರಾಮನ ಜೊತೆಗೆ ಹೋಗುತ್ತಿದ್ದರು. ಆ ಎಲ್ಲ ಸಮುದಾಯವು ಶ್ರೀರಾಮನ ಭಕ್ತವಾಗಿತ್ತು.॥16॥

ಮೂಲಮ್ - 17

ನ ತತ್ರ ಕಶ್ಚಿದ್ದೀನೋ ವಾ ವ್ರೀಡಿತೋ ವಾಪಿ ದುಃಖಿತಃ ।
ಹೃಷ್ಟಂ ಪ್ರಮುದಿತಂ ಸರ್ವಂ ಬಭೂವ ಪರಮಾದ್ಭುತಮ್ ॥

ಅನುವಾದ

ಅದರಲ್ಲಿ ದೀನರೂ, ದುಃಖಿಗಳೂ, ಲಜ್ಜಿತರೂ ಯಾರೂ ಇರಲಿಲ್ಲ. ಅಲ್ಲಿ ಸೇರಿದ ಎಲ್ಲ ಜನರ ಮನಸ್ಸಿನಲ್ಲಿ ಮಹಾಹರ್ಷ ತುಂಬಿತ್ತು. ಹೀಗೆ ಆ ಜನಸಮುದಾಯವು ಅತ್ಯಂತ ಆಶ್ಚರ್ಯಕರವಾಗಿ ಕಂಡು ಬರುತ್ತಿತ್ತು.॥17॥

ಮೂಲಮ್ - 18

ದ್ರಷ್ಟುಕಾಮೋಽಥ ನಿರ್ಯಾಂತಂ ರಾಮಂ ಜಾನಪದೋ ಜನಃ ।
ಯಃ ಪ್ರಾಪ್ತಃ ಸೋಪಿ ದೃಷ್ಟ್ವೈವ ಸ್ವರ್ಗಾಯಾನುಗತೋ ಜನಃ ॥

ಅನುವಾದ

ದೇಶದ ಜನರಲ್ಲಿ ಶ್ರೀರಾಮನ ಯಾತ್ರೆಯನ್ನು ನೋಡಲು ಬಂದಿದ್ದವರೂ ಕೂಡ ಈ ಮಹಾಸಮಾರೋಹ ನೋಡುತ್ತಲೇ ಭಗವಂತನ ಜೊತೆಗೆ ಪರಂಧಾಮಕ್ಕೆ ಹೋಗಲು ಸಿದ್ಧರಾದರು.॥18॥

ಮೂಲಮ್ - 19

ಋಕ್ಷವಾನರರಕ್ಷಾಂಸಿ ಜನಾಶ್ಚ ಪುರವಾಸಿನಃ ।
ಆಗಚ್ಛನ್ಪರಯಾ ಭಕ್ತ್ಯಾ ಪೃಷ್ಠತಃ ಸುಸಮಾಹಿತಾಃ ॥

ಅನುವಾದ

ಕರಡಿಗಳು, ವಾನರರು, ರಾಕ್ಷಸರು, ಪುರವಾಸಿಗಳು ಬಹಳ ಭಕ್ತಿಯೊಂದಿಗೆ ಶ್ರೀರಾಮ ಚಂದ್ರನ ಹಿಂದೆ-ಹಿಂದೆ ಏಕಾಗ್ರಚಿತ್ತರಾಗಿ ನಡೆದುಕೊಂಡು ಬರುತ್ತಿದ್ದರು.॥19॥

ಮೂಲಮ್ - 20

ಯಾನಿ ಭೂತಾನಿ ನಗರೇಽಪ್ಯಂತರ್ಧಾನಗತಾನಿ ಚ ।
ರಾಘವಂ ತಾನ್ಯನುಯಯುಃ ಸ್ವರ್ಗಾಯ ಸಮುಪಸ್ಥಿತಮ್ ॥

ಅನುವಾದ

ಅಯೋಧ್ಯೆಯಲ್ಲಿದ ಅದೃಶ್ಯ ಪ್ರಾಣಿಗಳೂ ಕೂಡ ಸಾಕೇತ ಧಾಮಕ್ಕೆ ತೆರಳಲು ಶ್ರೀರಘುನಾಥನನ್ನು ಹಿಂಬಾಲಿಸಿದವು.॥20॥

ಮೂಲಮ್ - 21

ಯಾನಿ ಪಶ್ಯಂತಿ ಕಾಕುತ್ಸ್ಥಂ ಸ್ಥಾವರಾಣಿ ಚರಾಣಿ ಚ ।
ಸರ್ವಾಣಿ ರಾಮಗಮನೇ ಹ್ಯನುಜಗ್ಮುರ್ಹಿ ತಾನ್ಯಪಿ ॥

ಅನುವಾದ

ಶ್ರೀರಘುನಾಥನು ಹೋಗುತ್ತಿರುವುದನ್ನು ನೋಡಿದ ಚರಾಚರ ಪ್ರಾಣಿಗಳೂ ಆ ಯಾತ್ರೆಯಲ್ಲಿ ಅವರ ಹಿಂದೆಯೇ ಹೊರಟವು.॥21॥

ಮೂಲಮ್ - 22

ನೋಚ್ಛ್ವಸತ್ತದಯೋಧ್ಯಾಯಾಂ ಸುಸೂಕ್ಷ್ಮಮಪಿ ದೃಶ್ಯತೇ ।
ತಿರ್ಯಗ್ಯೋನಿಗತಾಶ್ಚಾಪಿ ಸರ್ವೇರಾಮಮನುವ್ರತಾಃ ॥

ಅನುವಾದ

ಆಗ ಅಯೋಧ್ಯೆಯಲ್ಲಿ ಉಸಿರಾಡುವ ಯಾವುದೇ ಚಿಕ್ಕ ಪ್ರಾಣಿಯೂ ಉಳಿಯಲಿಲ್ಲ. ತಿರ್ಯಗ್ ಯೋನಿಯ ಸಮಸ್ತ ಜೀವಿಗಳೂ ಶ್ರೀರಾಮನಲ್ಲಿ ಭಕ್ತಿಭಾವದಿಂದ ಅವನ ಹಿಂದೆ-ಹಿಂದೆ ಹೋಗುತ್ತಿರುವುದು ಕಂಡು ಬರುತ್ತಿತ್ತು.॥22॥

ಮೂಲಮ್ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ನೂರ ಒಂಭತ್ತನೆಯ ಸರ್ಗ ಪೂರ್ಣವಾಯಿತು.॥109॥

ಅನುವಾದ (ಸಮಾಪ್ತಿಃ)