०९९ अयोध्या-प्रवेशः यज्ञ-दानादि

[ತೊಂಭತ್ತೊಂಭತ್ತನೆಯ ಸರ್ಗ]

ಭಾಗಸೂಚನಾ

ಸೀತಾದೇವಿಯು ರಸಾತಲವನ್ನು ಸೇರಿದ ಬಳಿಕ ಶ್ರೀರಾಮನ ಜೀವನಚರ್ಯೆ, ರಾಮರಾಜ್ಯದ ಸ್ಥಿತಿ, ಮಾತೆಯರ ಪರಲೋಕಗಮನ

ಮೂಲಮ್ - 1

ರಜನ್ಯಾಂ ತು ಪ್ರಭಾತಾಯಾಂ ಸಮಾನೀಯ ಮಹಾಮುನಿಮ್ ।
ಗೀಯತಾಮವಿಶಂಕಾಭ್ಯಾಂ ರಾಮಃ ಪುತ್ರಾವುವಾಚ ಹ ॥

ಅನುವಾದ

ಇರುಳು ಕಳೆದು ಬೆಳಗಾದಾಗ ಶ್ರೀರಾಮಚಂದ್ರನು ದೊಡ್ಡ-ದೊಡ್ಡ ಮುನಿಗಳನ್ನು ಕರೆದು, ತನ್ನ ಇಬ್ಬರೂ ಪುತ್ರರಲ್ಲಿ ‘ಈಗ ನೀವು ನಿಃಶಂಕರಾಗಿ ಉಳಿದ ರಾಮಾಯಣದ ಗಾಯನ ಪ್ರಾರಂಭಿಸಿರಿ’ ಎಂದು ಹೇಳಿದನು.॥1॥

ಮೂಲಮ್ - 2

ತತಃ ಸಮುಪವಿಷ್ಟೇಷು ಮಹರ್ಷಿಷು ಮಹಾತ್ಮಸು ।
ಭವಿಷ್ಯದುತ್ತರಂ ಕಾವ್ಯಂ ಜಗತುಸ್ತೌ ಕುಶೀಲವೌ ॥

ಅನುವಾದ

ಮಹಾತ್ಮಾ ಮಹರ್ಷಿಗಳು ಯಥಾಸ್ಥಾನಗಳಲ್ಲಿ ಕುಳಿತುಕೊಂಡಾಗ, ಕುಶ-ಲವರು ಭಗವಂತನ ಭವಿಷ್ಯಕ್ಕೆ ಸಂಬಂಧಿಸಿದ, ಆ ಮಹಾಕಾವ್ಯದ ಒಂದಂಶವಾದ ಉತ್ತರ ಕಾಂಡವನ್ನು ಹಾಡಲು ಪ್ರಾರಂಭಿಸಿದರು.॥2॥

ಮೂಲಮ್ - 3

ಪ್ರವಿಷ್ಟಾಯಾಂ ತು ಸೀತಾಯಾಂ ಭೂತಲಂ ಸತ್ಯಸಂಪದಾ ।
ತಸ್ಯಾವಸಾನೇ ಯಜ್ಞಸ್ಯರಾಮಃ ಪರಮದುರ್ಮನಾಃ ॥

ಅನುವಾದ

ಸತ್ಯರೂಪವಾದ ಸಂಪತ್ತಿನ ಬಲದಿಂದ ಸೀತಾದೇವಿಯು ರಸಾತಲವನ್ನು ಪ್ರವೇಶಿಸಿದ ಬಳಿಕ ಆ ಯಜ್ಞದ ಅಂತ್ಯದಲ್ಲಿ ಭಗವಾನ್ ಶ್ರೀರಾಮನ ಮನಸ್ಸು ಬಹಳ ದುಃಖಿತ ವಾಯಿತು.॥3॥

ಮೂಲಮ್ - 4

ಅಪಶ್ಯಮಾನೋ ವೈದೇಹೀಂ ಮೇನೇ ಶೂನ್ಯಮಿದಂಜಗತ್ ।
ಶೋಕೇನ ಪರಮಾಯಸ್ತೋ ನ ಶಾಂತಿಂ ಮನಸಾಗಮತ್ ॥

ಅನುವಾದ

ವಿದೇಹ ಕುಮಾರಿಯನ್ನು ನೋಡದೆ ಅವನಿಗೆ ಇಡೀ ಜಗತ್ತು ಶೂನ್ಯದಂತಾಯಿತು. ಶೋಕದಿಂದ ವ್ಯಥಿತನಾದ ಕಾರಣ ಅವನ ಮನಸ್ಸಿಗೆ ಶಾಂತಿ ಇರಲಿಲ್ಲ.॥4॥

ಮೂಲಮ್ - 5

ವಿಸೃಜ್ಯ ಪಾರ್ಥಿವಾನ್ಸರ್ವಾನೃಕ್ಷವಾನರರಾಕ್ಷಸಾನ್ ।
ಜನೌಘಂ ವಿಪ್ರಮುಖ್ಯಾನಾಂ ವಿತ್ತಪೂರ್ವಂ ವಿಸೃಜ್ಯ ಚ ॥

ಮೂಲಮ್ - 6½

ಏವಂ ಸಮಾಪ್ಯ ಯಜ್ಞಂ ತುವಿಧಿವತ್ಸ ತು ರಾಘವಃ ।
ತತೋ ವಿಸೃಜ್ಯ ತಾನ್ಸರ್ವಾನ್ ರಾಮೋರಾಜೀವಲೋಚನಃ ॥
ಹೃದಿ ಕೃತ್ವಾ ತದಾ ಸೀತಾಮಯೋಧ್ಯಾಂ ಪ್ರವಿವೇಶ ಹ ।

ಅನುವಾದ

ಅನಂತರ ಶ್ರೀರಘುನಾಥನು ಎಲ್ಲ ರಾಜರಿಗೆ, ಕರಡಿ, ವಾನರರಿಗೆ, ರಾಕ್ಷಸರಿಗೆ, ಜನಸಮುದಾಯಕ್ಕೆ, ಮುಖ್ಯ- ಮುಖ್ಯ ಬ್ರಾಹ್ಮಣರಿಗೆ ಧನವನ್ನು ಕೊಟ್ಟು ಬೀಳ್ಕೊಟ್ಟನು. ಹೀಗೆ ವಿಧಿವತ್ತಾಗಿ ಯಜ್ಞಗಳನ್ನು ಮುಗಿಸಿ ಕಮಲನಯನ ಶ್ರೀರಾಮನು ಎಲ್ಲರನ್ನು ಬೀಳ್ಕೊಟ್ಟ ಬಳಿಕ, ಸೀತೆಯನ್ನು ಮನಸ್ಸಿನಲ್ಲೇ ಸ್ಮರಿಸುತ್ತಾ ಅಯೋಧ್ಯೆಯನ್ನು ಪ್ರವೇಶಿಸಿದನು.॥5-6½॥

ಮೂಲಮ್ - 7

ಇಷ್ಟಯಜ್ಞೋ ನರಪತಿಃ ಪುತ್ರದ್ವಯಸಮನ್ವಿತಃ ॥

ಮೂಲಮ್ - 8

ನ ಸೀತಾಯಾಃ ಪರಾಂ ಭಾರ್ಯಾಂ ವವ್ರೇ ಸರಘುನಂದನಃ ।
ಯಜ್ಞೇ ಯಜ್ಞೇ ಚ ಪತ್ನ್ಯರ್ಥಂ ಜಾನಕೀ ಕಾಂಚನೀಭವತ್ ॥

ಅನುವಾದ

ಯಜ್ಞವನ್ನು ಪೂರ್ಣಗೊಳಿಸಿ ರಘುಕುಲನಂದನ ರಾಜಾ ಶ್ರೀರಾಮನು ತನ್ನ ಎರಡು ಪುತ್ರರೊಂದಿಗೆ ಇರತೊಡಗಿದನು. ಅವನು ಸೀತೆಯಲ್ಲದೆ ಬೇರೆ ಯಾವ ಸ್ತ್ರೀಯನ್ನು ವಿವಾಹವಾಗಲಿಲ್ಲ. ಪ್ರತಿಯೊಂದು ಯಜ್ಞದಲ್ಲಿ ಧರ್ಮಪತ್ನಿಯ ಆವಶ್ಯಕತೆ ಇದ್ದಾಗ ಶ್ರೀರಘುನಾಥನು ಸೀತೆಯ ಸ್ವರ್ಣಪ್ರತಿಮೆಯನ್ನು ಮಾಡಿಸಿಕೊಂಡು ಹೋಗುತ್ತಿದ್ದನು.॥7-8॥

ಮೂಲಮ್ - 9

ದರ್ಶವರ್ಷಸಹಸ್ರಾಣಿ ವಾಜಿಮೇಧಾನಥಾಕರೋತ್ ।
ವಾಜಪೇಯಾನ್ದಶಗುಣಾಂಸ್ತಥಾಬಹುಸುವರ್ಣಕಾನ್ ॥

ಅನುವಾದ

ಅವನು ಹತ್ತು ಸಾವಿರ ವರ್ಷಗಳವರೆಗೆ ಯಜ್ಞ ಮಾಡಿದನು. ಎಷ್ಟೋ ಅಶ್ವಮೇಧ ಯಜ್ಞಗಳನ್ನು, ಅವುಗಳಿಗಿಂತ ಹತ್ತು ಪಟ್ಟು ವಾಜಪೇಯ ಯಜ್ಞಗಳನ್ನು ನಡೆಸಿದನು. ಅವುಗಳಲ್ಲಿ ಅಸಂಖ್ಯ ಸ್ವರ್ಣಮುದ್ರೆಗಳನ್ನು ದಕ್ಷಿಣೆಯಾಗಿ ಕೊಡಲಾಗಿತ್ತು.॥9॥

ಮೂಲಮ್ - 10

ಅಗ್ನಿಷ್ಟೋಮಾತಿರಾತ್ರಾಭ್ಯಾಂ ಗೋಸವೈಶ್ಚ ಮಹಾಧನೈಃ ।
ಈಜೇ ಕ್ರತುಭಿರನ್ಯೈಶ್ಚ ಸ ಶ್ರೀಮಾನಾಪ್ತದಕ್ಷಿಣೈಃ ॥

ಅನುವಾದ

ಶ್ರೀರಾಮನು ಹೇರಳ ದಕ್ಷಿಣೆಗಳಿಂದ ಕೂಡಿದ ಅಗ್ನಿಷ್ಟೋಮ, ಅತಿರಾತ್ರ, ಗೋಸವ, ಹಾಗೂ ಇತರ ದೊಡ್ಡ-ದೊಡ್ಡ ಯಜ್ಞಗಳ ಅನುಷ್ಠಾನ ಮಾಡಿ, ಅಪಾರ ಧನರಾಶಿಯನ್ನು ವ್ಯಯಿಸಿದನು.॥10॥

ಮೂಲಮ್ - 11

ಏವಂ ಸ ಕಾಲಃ ಸುಮಹಾನ್ ರಾಜ್ಯಸ್ಥಸ್ಯ ಮಹಾತ್ಮನಃ ।
ಧರ್ಮೇ ಪ್ರಯತಮಾನಸ್ಯ ವ್ಯತೀಯಾದ್ರಾಘವಸ್ಯಚ ॥

ಅನುವಾದ

ಈ ಪ್ರಕಾರ ರಾಜ್ಯವಾಳುತ್ತಿರುವಾಗ ಮಹಾತ್ಮಾ ಭಗವಾನ್ ಶ್ರೀರಘುನಾಥನ ಹೆಚ್ಚಿನ ಸಮಯ ಧರ್ಮಪಾಲನೆಯ ಪ್ರಯತ್ನದಲ್ಲೇ ಕಳೆಯಿತು.॥11॥

ಮೂಲಮ್ - 12

ಯಕ್ಷವಾನರರಕ್ಷಾಂಸಿ ಸ್ಥಿತಾ ರಾಮಸ್ಯ ಶಾಸನೇ ।
ಅನುರಂಜಂತಿ ರಾಜಾನೋ ಹ್ಯಹನ್ಯಹನಿ ರಾಘವಮ್ ॥

ಅನುವಾದ

ಕರಡಿಗಳೂ, ವಾನರರೂ, ರಾಕ್ಷಸರೂ, ಕೂಡ ಶ್ರೀರಾಮನ ಆಜ್ಞೆಗೆ ಅಧೀನರಾಗಿದ್ದರು. ಭೂಮಂಡಲದ ಎಲ್ಲ ರಾಜರೂ ಪ್ರತಿದಿನ ಶ್ರೀರಘುನಾಥನನ್ನು ಸಂತೋಷಗೊಳಿಸುತ್ತಿದ್ದರು.॥12॥

ಮೂಲಮ್ - 13

ಕಾಲೇ ವರ್ಷತಿ ಪರ್ಜನ್ಯಃ ಸುಭಿಕ್ಷಂ ವಿಮಲಾ ದಿಶಃ ।
ಹೃಷ್ಟಪುಷ್ಟಜನಾಕೀರ್ಣಂ ಪುರಂ ಜನಪದಸ್ತಥಾ ॥

ಅನುವಾದ

ಶ್ರೀರಾಮನ ರಾಜ್ಯದಲ್ಲಿ ಮೋಡಗಳು ಸಮಯಕ್ಕೆ ಸರಿಯಾಗಿ ಮಳೆ ಸುರಿಸುತ್ತಿದ್ದವು. ಸದಾ ಸುಭಿಕ್ಷವಾಗಿದ್ದು, ದುರ್ಭಿಕ್ಷ ಇರಲೇ ಇಲ್ಲ. ಸಮಸ್ತ ದಿಕ್ಕುಗಳು ನಿರ್ಮಲವಾಗಿದ್ದವು, ನಗರ ಮತ್ತು ರಾಷ್ಟ್ರವು ಹೃಷ್ಟ-ಪುಷ್ಟ ಜನರಿಂದ ತುಂಬಿರುತ್ತಿತ್ತು.॥13॥

ಮೂಲಮ್ - 14

ನಾಕಾಲೇ ಮ್ರಿಯತೇ ಕಶ್ಚಿನ್ನ ವ್ಯಾಧಿಃಪ್ರಾಣಿನಾಂತಥಾ ।
ನಾನರ್ಥೋ ವಿದ್ಯತೇ ಕಶ್ಚಿದ್ರಾಮೇ ರಾಜ್ಯಂ ಪ್ರಶಾಸತಿ ॥

ಅನುವಾದ

ಶ್ರೀರಾಮನ ಆಳ್ವಿಕೆಯ ಕಾಲದಲ್ಲಿ ಯಾರದೂ ಅಕಾಲ ಮೃತ್ಯು ಆಗುತ್ತಿರಲಿಲ್ಲ. ಪ್ರಾಣಿಗಳಿಗೆ ಯಾವುದೇ ರೋಗ ಸತಾಯಿಸುತ್ತಿರಲಿಲ್ಲ. ಜಗತ್ತಿನಲ್ಲಿ ಯಾವುದೇ ಉಪದ್ರವಗಳು ತಲೆದೋರುತ್ತಿರಲಿಲ್ಲ.॥14॥

ಮೂಲಮ್ - 15

ಅಥದೀರ್ಘಸ್ಯ ಕಾಲಸ್ಯ ರಾಮಮಾತಾ ಯಶಸ್ವಿನೀ ।
ಪುತ್ರಪೌತ್ರೈಃ ಪರಿವೃತಾ ಕಾಲಧರ್ಮಮುಪಾಗಮತ್ ॥

ಅನುವಾದ

ಅನಂತರ ದೀರ್ಘಕಾಲ ಕಳೆದಾಗ ಪುತ್ರ-ಪೌತ್ರವತಿಯಾದ ಪರಮ ಯಶಸ್ವಿನಿ ಶ್ರೀರಾಮಮಾತಾ ಕೌಸಲ್ಯಾದೇವಿಯು ಕಾಲ ಧರ್ಮಕ್ಕನುಸಾರ ಸ್ವರ್ಗಸ್ಥಳಾದಳು.॥15॥

ಮೂಲಮ್ - 16

ಅನ್ವಿಯಾಯ ಸುಮಿತ್ರಾ ಚ ಕೈಕೇಯೀ ಚಯಶಸ್ವಿನೀ ।
ಧರ್ಮಂ ಕೃತ್ವಾ ಬಹುವಿಧಂ ತ್ರಿದಿವೇ ಪರ್ಯವಸ್ಥಿತಾ ॥

ಮೂಲಮ್ - 17

ಸರ್ವಾಃ ಪ್ರಮುದಿತಾಃ ಸ್ವರ್ಗೇ ರಾಜ್ಞಾ ದಶರಥೇನ ಚ ।
ಸಮಾಗತಾ ಮಹಾಭಾಗಾಃ ಸರ್ವಧರ್ಮಂ ಚ ಲೇಭೀರೇ ॥

ಅನುವಾದ

ಸುಮಿತ್ರೆ ಮತ್ತು ಕೈಕೇಯಿಯರೂ ಆಕೆಯ ದಾರಿಯನ್ನೇ ಹಿಡಿದರು. ಈ ರಾಣಿಯರೆಲ್ಲ ಜೀವನಕಾಲದಲ್ಲಿ ನಾನಾರೀತಿಯ ಧರ್ಮಾನುಷ್ಠಾನಮಾಡಿ ಕೊನೆಗೆ ಸಾಕೇತ ಧಾಮವನ್ನು ಪಡೆದುಕೊಂಡು, ಬಹಳ ಸಂತೋಷದಿಂದ ಅಲ್ಲಿ ದಶರಥನನ್ನು ಸೇರಿಕೊಂಡರು. ಆ ಮಹಾಭಾಗಾ ರಾಣಿಯರಿಗೆ ಎಲ್ಲ ಧರ್ಮಗಳ ಪೂರ್ಣಫಲ ಪ್ರಾಪ್ತವಾಯಿತು.॥16-17॥

ಮೂಲಮ್ - 18

ತಾಸಾಂ ರಾಮೋ ಮಹಾದಾನಂ ಕಾಲೇ ಕಾಲೇ ಪ್ರಯಚ್ಛತಿ ।
ಮಾತೃಣಾಮವಿಶೇಷೇಣ ಬ್ರಾಹ್ಮಣೇಷು ತಪಸ್ವಿಷು ॥

ಅನುವಾದ

ಶ್ರೀರಘುನಾಥನು ಸಮಯಕ್ಕೆ ಸರಿಯಾಗಿ ತನ್ನ ಎಲ್ಲ ಮಾತೆಯರ ನಿಮಿತ್ತದಿಂದ ಯಾವುದೇ ಭೇದಭಾವವಿಲ್ಲದೆ ತಪಸ್ವೀ ಬ್ರಾಹ್ಮಣರಿಗೆ ಮಹಾದಾನಗಳನ್ನು ಮಾಡುತ್ತಿದ್ದನು.॥18॥

ಮೂಲಮ್ - 19

ಪಿತ್ರ್ಯಾಣಿ ಬ್ರಹ್ಮರತ್ನಾನಿ ಯಜ್ಞಾನ್ ಪರಮದುಸ್ತರಾನ್ ।
ಚಕಾರ ರಾಮೋ ಧರ್ಮಾತ್ಮಾ ಪಿತೃನ್ದೇವಾನ್ವಿವರ್ಧಯನ್ ॥

ಅನುವಾದ

ಧರ್ಮಾತ್ಮಾ ಶ್ರೀರಾಮನು ಶ್ರಾದ್ಧದಲ್ಲಿ ಉಪಯೋಗಿ ಉತ್ತಮೋತ್ತಮ ವಸ್ತುಗಳನ್ನು ಬ್ರಾಹ್ಮಣರಿಗೆ ಕೊಟ್ಟು, ಪಿತೃಗಳನ್ನು, ದೇವತೆಗಳನ್ನು ಸಂತುಷ್ಟಗೊಳಿಸಲು ಪಿಂಡಪಿತೃ ಯಜ್ಞವೇ ಮುಂತಾದ ಅತ್ಯಂತ ದುಸ್ತರ ಯಜ್ಞಗಳನ್ನು ಮಾಡುತ್ತಾನೆ.॥19॥

ಮೂಲಮ್ - 20

ಏವಂ ವರ್ಷಸಹಸ್ರಾಣಿ ಬಹೂನ್ಯಥ ಯಯುಃ ಸುಖಮ್ ।
ಯಜ್ಞೈರ್ಬಹುವಿಧಂ ಧರ್ಮಂ ವರ್ಧಯಾನಸ್ಯಸರ್ವದಾ ॥

ಅನುವಾದ

ಈ ಪ್ರಕಾರ ಯಜ್ಞಗಳ ಮೂಲಕ ಸದಾಕಾಲ ವಿವಿಧ ಧರ್ಮಗಳನ್ನು ಪಾಲಿಸುತ್ತಾ ಶ್ರೀರಾಮನು ಎಷ್ಟೋ ಸಾವಿರ ವರ್ಷಗಳು ಸುಖವಾಗಿ ಕಳೆದನು.॥20॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು. ॥99॥