[ತೊಂಭತ್ತನೆಯ ಸರ್ಗ]
ಭಾಗಸೂಚನಾ
ಅಶ್ವಮೇಧ ಯಜ್ಞನದ ಅನುಷ್ಠಾನದಿಂದ ಇಲನಿಗೆ ಪುರುಷತ್ವದ ಪ್ರಾಪ್ತಿ
ಮೂಲಮ್ - 1
ತಥೋಕ್ತವತಿ ರಾಮೇ ತು ತಸ್ಯ ಜನ್ಮತದ್ಭುತಮ್ ।
ಉವಾಚ ಲಕ್ಷ್ಮಣೋ ಭೂಯೋ ಭರತಶ್ಚ ಮಹಾಯಶಾಃ ॥
ಅನುವಾದ
ಶ್ರೀರಾಮಚಂದ್ರನು ಪುರೂರವನ ಜನ್ಮದ ಅದ್ಭುತ ಕಥೆ ಹೇಳಿದಾಗ ಲಕ್ಷ್ಮಣ ಮತ್ತು ಮಹಾಯಶಸ್ವೀ ಭರತನು ಪುನಃ ಕೇಳಿದರು.॥1॥
ಮೂಲಮ್ - 2
ಇಲಾ ಸಾ ಸೋಮಪುತ್ರಸ್ಯ ಸಂವತ್ಸರಮಥೋಷಿತಾ ।
ಅಕರೋತ್ಕಿಂ ನರಶ್ರೇಷ್ಠ ತತ್ತ್ವಂ ಶಂಸಿತುಮರ್ಹಸಿ ॥
ಅನುವಾದ
ನರಶ್ರೇಷ್ಠನೇ ! ಸೋಮಪುತ್ರ ಬುಧನ ಬಳಿ ಒಂದು ವರ್ಷ ವಾಸಿಸಿದ ಬಳಿಕ ಇಲನು ಏನು ಮಾಡಿದನು? ಇದನ್ನು ತಿಳಿಸಲು ಕೃಪೆ ಮಾಡಿರಿ.॥2॥
ಮೂಲಮ್ - 3
ತಯೋಸ್ತದ್ವಾಕ್ಯಮಾಧುರ್ಯಂ ನಿಶಮ್ಯ ಪರಿಪೃಚ್ಛತೋಃ ।
ರಾಮಃ ಪುನರುವಾಚೇಮಾಂ ಪ್ರಜಾಪತಿಸುತೇ ಕಥಾಮ್ ॥
ಅನುವಾದ
ಸಹೋದರರು ಮಧುರವಾಣಿಯಿಂದ ಹೇಳಿದುದನ್ನು ಕೇಳಿ ಶ್ರೀರಾಮನು ಪ್ರಜಾಪತಿ ಪುತ್ರ ಇಲನ ವಿಷಯದಲ್ಲಿ ಮತ್ತೆ ಮುಂದಿನ ಕಥೆ ಪ್ರಾರಂಭಿಸಿದನು.॥3॥
ಮೂಲಮ್ - 4
ಪುರುಷತ್ವಂ ಗತೇ ಶೂರೇ ಬುಧಃ ಪರಮಬುದ್ಧಿಮಾನ್ ।
ಸಂವರ್ತಂ ಪರಮೋದಾರಮಾಜುಹಾವ ಮಹಾಯಶಾಃ ॥
ಅನುವಾದ
ಶೂರವೀರರೇ ! ಇಲನು ಒಂದು ತಿಂಗಳಿಗಾಗಿ ಪುರುಷಭಾವ ಪಡೆದಾಗ ಪರಮ ಬುದ್ಧಿವಂತ ಮಹಾಯಶಸ್ವೀ ಬುಧನು ಪರಮೋದಾರ ಮಹಾತ್ಮಾ ಸಂವರ್ತಕನನ್ನು ಕರೆಸಿದನು.॥4॥
ಮೂಲಮ್ - 5
ಚ್ಯವನಂ ಭೃಗುಪುತ್ರಂ ಚ ಮುನಿಂ ಚಾರಿಷ್ಟನೇಮಿನಮ್ ।
ಪ್ರಮೋದನಂ ಮೋದಕರಂ ತತೋ ದುರ್ವಾಸಸಂ ಮುನಿಮ್ ॥
ಅನುವಾದ
ಭೃಗುಪುತ್ರ ಚ್ಯವನಮುನಿ, ಅರಿಷ್ಟನೇಮ, ಪ್ರಮೋದನ, ಮೋದಕರ ಮತ್ತು ದುರ್ವಾಸ ಮುನಿಯನ್ನು ಆಮಂತ್ರಿಸಿದನು.॥5॥
ಮೂಲಮ್ - 6
ಏತಾನ್ಸರ್ವಾನ್ ಸಮಾನೀಯ ವಾಕ್ಯಜ್ಞಸ್ತತ್ತ್ವದರ್ಶನಃ ।
ಉವಾಚ ಸರ್ವಾನ್ಸುಹೃದೋ ಧೈರ್ಯೇಣ ಸುಸಮಾಹಿತಾನ್ ॥
ಅನುವಾದ
ಇವರೆಲ್ಲರನ್ನು ಕರೆಸಿ ವಾಕ್ಯವಿಶಾರದನಾದ ತತ್ತ್ವದರ್ಶಿ ಬುಧನು, ಧೈರ್ಯದಿಂದ ಏಕಾಗ್ರಚಿತ್ತರಾದ ಆ ಎಲ್ಲ ಸುಹೃದರಲ್ಲಿ ಹೇಳಿದನು.॥6॥
ಮೂಲಮ್ - 7
ಅಯಂ ರಾಜಾ ಮಹಾಬಾಹುಃ ಕರ್ದಮಸ್ಯ ಇಲಃ ಸುತಃ ।
ಜಾನೀತೈನಂ ಯಥಾಭೂತಂ ಶ್ರೇಯೋ ಹ್ಯತ್ರವಿಧೀಯತಾಮ್ ॥
ಅನುವಾದ
ಈ ಮಹಾಬಾಹು ರಾಜಾ ಇಲನು ಪ್ರಜಾಪತಿ ಕರ್ದಮರ ಪುತ್ರನಾಗಿದ್ದಾನೆ. ಇವನ ಸ್ಥಿತಿಯನ್ನು ನೀವೆಲ್ಲ ತಿಳಿದೇ ಇರುವಿರಿ. ಆದ್ದರಿಂದ ಇವನ ಶ್ರೇಯಸ್ಸಾಗುವ ಯಾವುದಾದರೂ ಉಪಾಯ ಮಾಡಿರಿ.॥7॥
ಮೂಲಮ್ - 8
ತೇಷಾಂ ಸಂವದತಾಮೇವ ದ್ವಿಜೈಃ ಸಹ ಮಹಾತ್ಮಭಿಃ ।
ಕರ್ದಮಸ್ತು ಮಹಾತೇಜಾಸ್ತದ್ರಾಶ್ರಮಮುಪಾಗಮತ್ ॥
ಅನುವಾದ
ಇವರೆಲ್ಲರೂ ಹೀಗೆ ಮಾತುಕತೆಯಾಡುತ್ತಿರುವಾಗಲೇ ಮಹಾತ್ಮಾ ದ್ವಿಜರೊಂದಿಗೆ ಮಹಾತೇಜಸ್ವೀ ಪ್ರಜಾಪತಿ ಕರ್ದಮರೂ ಆ ಆಶ್ರಮಕ್ಕೆ ಬಂದರು.॥9॥
ಮೂಲಮ್ - 9
ಪುಲಸ್ತ್ಯಶ್ಚ ಕ್ರತುಶ್ಚೈವ ವಷಟ್ಕಾರಸ್ತಥೈವ ಚ ।
ಓಂಕಾರಶ್ಚ ಮಹಾತೇಜಾಸ್ತದಾಶ್ರಮಮುಪಾಗಮನ್ ॥
ಅನುವಾದ
ಜೊತೆಗ ಪುಲಸ್ತ್ಯ, ಕ್ರತು, ವಷಟ್ಕಾರ ಹಾಗೂ ಮಹಾತೇಜಸ್ವೀ ಓಂಕಾರರೂ ಆ ಆಶ್ರಮಕ್ಕೆ ಬಂದರು.॥9॥
ಮೂಲಮ್ - 10
ತೇ ಸರ್ವೇ ಹೃಷ್ಟಮನಸಃ ಪರಸ್ಪರಸಮಾಗಮೇ ।
ಹಿತೈಷಿಣೋ ಬ್ರಾಹ್ಲಿಪತೇಃ ಪೃಥಗ್ವಾಕ್ಯಾನ್ಯಥಾಬ್ರುವನ್ ॥
ಅನುವಾದ
ಪರಸ್ಪರ ಭೇಟಿಯಾಗಿ ಎಲ್ಲ ಮಹರ್ಷಿಗಳು ಸಂತೋಷಚಿತ್ತರಾಗಿ ಬಾಹ್ಲಿಕದೇಶದ ಒಡೆಯ ರಾಜಾ ಇಲನ ಹಿತವನ್ನು ಬಯಸುತ್ತಾ ಬೇರೆ- ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು.॥10॥
ಮೂಲಮ್ - 11
ಕರ್ದಮಸ್ತ್ವಬ್ರವೀದ್ವಾಕ್ಯಂ ಸುತಾರ್ಥಂ ಪರಮಂ ಹಿತಮ್ ।
ದ್ವಿಜಾಃ ಶೃಣುತ ಮದ್ವಾಕ್ಯಂ ಯಚ್ಛ್ರೇಯಃ ಪಾರ್ಥಿವಸ್ಯ ಹಿ ॥
ಅನುವಾದ
ಆಗ ಕರ್ದಮರು ಪುತ್ರನ ಕುರಿತು ಅತ್ಯಂತ ಹಿತಕರ ಮಾತನ್ನು ಹೇಳಿದರು - ಬ್ರಾಹ್ಮಣರೇ! ಈ ರಾಜನಿಗೆ ಶ್ರೇಯಸ್ಕರವಾದ ನನ್ನ ಮಾತನ್ನು ಕೇಳಿರಿ.॥11॥
ಮೂಲಮ್ - 12
ನಾನ್ಯಂ ಪಶ್ಯಾಮಿ ಭೈಷಜ್ಯಮಂತರಾ ವೃಷಭಧ್ವಜಮ್ ।
ನಾಶ್ವಮೇಧಾತ್ಪರೋ ಯಜ್ಞಃ ಪ್ರಿಯಶ್ಚೈವ ಮಹಾತ್ಮನಃ ॥
ಅನುವಾದ
ಈ ರೋಗದ ಔಷಧಿ ಮಾಡಬಲ್ಲವನು ಭಗವಾನ್ ಶಂಕರನಲ್ಲದೆ ಬೇರೆ ಯಾರನ್ನು ನಾನು ನೋಡುವುದಿಲ್ಲ ಹಾಗೂ ಮಹಾತ್ಮಾ ಮಹಾದೇವನಿಗೆ ಪ್ರಿಯವಾದ ಅಶ್ವಮೇಧ ಯಜ್ಞಕ್ಕಿಂತ ಮಿಗಿಲಾದ ಯಾವ ಯಜ್ಞವೂ ಇಲ್ಲ.॥12॥
ಮೂಲಮ್ - 13½
ತಸ್ಮಾದ್ಯಜಾಮಹೇ ಸರ್ವೇ ಪಾರ್ಥಿವಾರ್ಥೇ ದುರಾಸದಮ್ ।
ಕರ್ದಮೇನೈವಮುಕ್ತಾಸ್ತು ಸರ್ವ ಏವ ದ್ವಿಜರ್ಷಭಾಃ ॥
ರೋಚಯಂತಿ ಸ್ಮ ತಂ ಯಜ್ಞಂ ರುದ್ರಸ್ಯಾರಾಧನಂ ಪ್ರತಿ ।
ಅನುವಾದ
ಆದ್ದರಿಂದ ನಾವೆಲ್ಲರೂ ರಾಜಾ ಇಲನ ಹಿತಕ್ಕಾಗಿ ಆ ದುಷ್ಕರ ಯಜ್ಞಾನುಷ್ಠಾನ ಮಾಡುವಾ. ಕರ್ದಮರು ಹೀಗೆ ಹೇಳಿದಾಗ ಎಲ್ಲ ಶ್ರೇಷ್ಠ ಬ್ರಾಹ್ಮಣರು ಭಗವಾನ್ ರುದ್ರನ ಆರಾಧನೆಗಾಗಿ ಆ ಯಜ್ಞದ ಅನುಷ್ಠಾನವೇ ಒಳ್ಳೆಯದೆಂದು ತಿಳಿದರು.॥13½॥
ಮೂಲಮ್ - 14½
ಸಂವರ್ತಸ್ಯ ತು ರಾಜರ್ಷಿಃ ಶಿಷ್ಯಃ ಪರಪುರಂಜಯಃ ॥
ಮರುತ್ತ ಇತಿ ವಿಖ್ಯಾತಸ್ತಂ ಯಜ್ಞಂ ಸಮುಪಾಹರತ್ ।
ಅನುವಾದ
ಸಂವರ್ತಕನ ಶಿಷ್ಯ ಹಾಗೂ ಶತ್ರುನಗರವನ್ನು ಜಯಿಸುವ ಸುಪ್ರಸಿದ್ಧ ರಾಜರ್ಷಿ ಮರುತ್ತನು ಆ ಯಜ್ಞದ ಆಯೋಜನ ಮಾಡಿದನು.॥14½॥
ಮೂಲಮ್ - 15½
ತತೋ ಯಜ್ಞೋ ಮಹಾನಾಸೀದ್ಬುಧಾಶ್ರಮಸಮೀಪತಃ ॥
ರುದ್ರಶ್ಚ ಪರಮಂ ತೋಷಮಾಜಗಾಮ ಮಹಾಯಶಾಃ ।
ಅನುವಾದ
ಮತ್ತೆ ಬುಧನ ಆಶ್ರಮದ ಬಳಿಯಲ್ಲೇ ಆ ಮಹಾಯಜ್ಞವು ನೆರವೇರಿತು. ಅದರಿಂದ ಮಹಾಯಶಸ್ವೀ ರುದ್ರದೇವರಿಗೆ ಬಹಳ ಸಂತೋಷವಾಯಿತು.॥15½॥
ಮೂಲಮ್ - 16½
ಅಥ ಯಜ್ಞೇ ಸಮಾಪ್ತೇ ತು ಪ್ರೀತಃ ಪರಮಯಾ ಮುದಾ ॥
ಉಮಾಪತಿರ್ದ್ವಿಜಾನ್ಸರ್ವಾನುವಾಚ ಇಲಸಂನಿಧೌ ।
ಅನುವಾದ
ಯಜ್ಞ ಸಮಾಪ್ತವಾದಾಗ ಪರಮಾನಂದ ಪರಿಪೂರ್ಣಚಿತ್ತನಾದ ಭಗವಾನ್ ಉಮಾಪತಿಯು ಇಲನ ಬಳಿಯಲ್ಲೇ ಆ ಎಲ್ಲ ಬ್ರಾಹ್ಮಣರಲ್ಲಿ ಹೇಳಿದನು.॥16½॥
ಮೂಲಮ್ - 17½
ಪ್ರೀತೋಽಸ್ಮಿ ಹಯಮೇಧೇನ ಭಕ್ತ್ಯಾ ಚ ದ್ವಿಜಸತ್ತಮಾಃ ॥
ಅಸ್ಯ ಬಾಹ್ಲಿಪತೇಶ್ಚೈವ ಕಂ ಕರೋಮಿ ಪ್ರಿಯಂ ಶುಭಮ್ ।
ಅನುವಾದ
ದ್ವಿಜಶ್ರೇಷ್ಠರೇ! ನಾನು ನಿಮ್ಮ ಭಕ್ತಿಯಿಂದ ಮತ್ತು ಅಶ್ವಮೇಧ ಯಜ್ಞಾನುಷ್ಠಾನದಿಂದ ಬಹಳ ಪ್ರಸನ್ನನಾಗಿದ್ದೇನೆ. ನಾನು ಬಾಹ್ಲಿಕ ನರೇಶ ಇಲನ ಯಾವ ಶುಭ-ಪ್ರಿಯ ಕಾರ್ಯ ಮಾಡಲಿ ಹೇಳಿರಿ.॥17½॥
ಮೂಲಮ್ - 18½
ತಥಾ ವದತಿ ದೇವೇಶೇ ದ್ವಿಜಾಸ್ತೇ ಸುಸಮಾಹಿತಾಃ ॥
ಪ್ರಸಾದಯಂತಿ ದೇವೇಶಂ ಯಥಾ ಸ್ಯಾತ್ಪುರುಷಸ್ತ್ವಿಲಾ ।
ಅನುವಾದ
ದೇವೇಶ್ವರ ಶಿವನು ಹೀಗೆ ಹೇಳಿದಾಗ ಆ ಎಲ್ಲ ಬ್ರಾಹ್ಮಣರು ಏಕಾಗ್ರಚಿತ್ತರಾಗಿ, ಆ ದೇವಾಧಿದೇವನನ್ನು ನಾರೀ ಇಲಾ ಸದಾಕಾಲ ಪುರುಷ ಇಲನಾಗುವಂತೆ ಮಾಡಬೇಕೆಂದು ಪ್ರಾರ್ಥಿಸಿದರು.॥18½॥
ಮೂಲಮ್ - 19½
ತತಃ ಪ್ರೀತೋ ಮಹಾದೇವಃ ಪುರುಷತ್ವಂ ದದೌ ಪುನಃ ॥
ಇಲಾಯೈ ಸುಮಹಾತೇಜಾ ದತ್ತ್ವಾ ಚಾಂತರಧೀಯತ ।
ಅನುವಾದ
ಆಗ ಪ್ರಸನ್ನನಾದ ಮಹಾತೇಜಸ್ವೀ ಮಹಾದೇವನು ಇಲನಿಗೆ ಸದಾ ಪುರುಷತ್ವ ಪ್ರದಾನ ಮಾಡಿದನು ಹಾಗೂ ಹೀಗೆ ಮಾಡಿ ಅವನು ಅಂತರ್ಧಾನನಾದನು.॥19½॥
ಮೂಲಮ್ - 20½
ನಿರ್ವೃತ್ತೇ ಹಯಮೇಧೇ ಚಗತೇಚಾದರ್ಶನಂ ಹರೇ ॥
ಯಥಾಗತಂ ದ್ವಿಜಾಃ ಸರ್ವೇ ಹ್ಯಗಚ್ಛಂದಿರ್ಘದರ್ಶಿನಃ ।
ಅನುವಾದ
ಅಶ್ವಮೇಧ ಯಜ್ಞ ಸಮಾಪ್ತವಾದಾಗ ಮಹಾದೇವನು ದರ್ಶನ ಕೊಟ್ಟು ಅದೃಶ್ಯನಾದನು. ಆಗ ಆ ಎಲ್ಲ ದೀರ್ಘದರ್ಶಿ ಬ್ರಾಹ್ಮಣರು ತಮ್ಮ-ತಮ್ಮ ಸ್ಥಾನಗಳಿಗೆ ತೆರಳಿದರು.॥20½॥
ಮೂಲಮ್ - 21½
ರಾಜಾ ತು ಬಾಹ್ಲಿಮುತ್ಸೃಜ್ಯ ಮಧ್ಯದೇಶೇ ಹ್ಯನುತ್ತಮಮ್ ॥
ನಿವೇಶಯಾಮಾಸ ಪುರಂ ಪ್ರತಿಷ್ಠಾನಂ ಯಶಸ್ಕರಮ್ ।
ಅನುವಾದ
ರಾಜಾ ಇಲನು ಬಾಹ್ಲಿಕ ದೇಶವನ್ನು ಬಿಟ್ಟು ಗಂಗಾ-ಯಮುನಾ ಸಂಗಮದ ಹತ್ತಿರ, ಮಧ್ಯದೇಶದಲ್ಲಿ ಒಂದು ಪರಮೋತ್ತಮ ಯಶಸ್ವೀ ಪ್ರತಿಷ್ಠಾನಪುರವನ್ನು ನೆಲೆಗೊಳಿಸಿದನು.॥21½॥
ಮೂಲಮ್ - 22½
ಶಶಬಿಂದುಶ್ಚ ರಾಜರ್ಷಿರ್ಬಾಹ್ಲಿಂ ಪರಪುರಂಜಯಃ ॥
ಪ್ರತಿಷ್ಠಾನೇ ಇಲೋ ರಾಜಾ ಪ್ರಜಾಪತಿಸುತೋಬಲೀ ।
ಅನುವಾದ
ಶತ್ರುನಗರ ವಿಜಯೀ ರಾಜರ್ಷಿ ಶಶಬಿಂದುವು ಬಾಹ್ಲಿಕ ದೇಶದ ರಾಜ್ಯವನ್ನು ಸ್ವೀಕರಿಸಿದನು ಮತ್ತು ಪ್ರಜಾಪತಿ ಕರ್ದಮ ಪುತ್ರ ಬಲವಂತ ರಾಜಾ ಇಲನು ಪ್ರತಿಷ್ಠಾನಪುರದ ಶಾಸಕನಾದನು.॥22½॥
ಮೂಲಮ್ - 23½
ಸ ಕಾಲೇ ಪ್ರಾಪ್ತವಾನ್ಲ್ಲೋಕಮಿಲೋ ಬ್ರಾಹ್ಮಮನುತ್ತಮಮ್ ॥
ಐಲಃ ಪುರೂರವೋ ರಾಜಾ ಪ್ರತಿಷ್ಠಾನಮವಾಪ್ತವಾನ್ ।
ಅನುವಾದ
ಸಮಯ ಬಂದಾಗ ರಾಜಾ ಇಲವು ಶರೀರ ತ್ಯಜಿಸಿ ಪರಮೋತ್ತಮ ಬ್ರಹ್ಮಲೋಕವನ್ನು ಹೊಂದಿದನು. ಇಲಾಳ ಪುತ್ರ ರಾಜಾ ಪುರೂರವನು ಪ್ರತಿಷ್ಠಾನ ಪುರದ ರಾಜ್ಯವನ್ನು ಪಡೆದುಕೊಂಡನು.॥23½॥
ಮೂಲಮ್ - 24
ಈದೃಶೋ ಹ್ಯಶ್ವಮೇಧಸ್ಯ ಪ್ರಭಾವಃ ಪುರುಷರ್ಷಭೌ ।
ಸ್ತ್ರೀಭೂತಃ ಪೌರುಷಂ ಲೇಭೇ ಯಚ್ಚಾನ್ಯದಪಿ ದುರ್ಲಭಮ್ ॥
ಅನುವಾದ
ಪುರುಷಶ್ರೇಷ್ಠ ಭರತ-ಲಕ್ಷ್ಮಣರೇ! ಅಶ್ವಮೇಧ ಯಜ್ಞದ ಪ್ರಭಾವ ಹೀಗಿದೆ. ಸ್ತ್ರೀರೂಪಿಯಾಗಿದ್ದ ಇಲನು ಈ ಯಜ್ಞದ ಪ್ರಭಾವದಿಂದ ಪುರುಷತ್ವ ಪ್ರಾಪ್ತಿಮಾಡಿಕೊಂಡನು ಹಾಗೂ ಇನ್ನೂ ದುರ್ಲಭ ವಸ್ತುಗಳನ್ನು ಕರಗತ ಮಾಡಿಕೊಂಡನು.॥24॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ತೊಂಭತ್ತನೆಯ ಸರ್ಗ ಪೂರ್ಣವಾಯಿತು. ॥90॥