०८८ किम्-पुरुष-स्त्री-करणम्

[ಎಂಭತ್ತೆಂಟನೆಯ ಸರ್ಗ]

ಭಾಗಸೂಚನಾ

ಇಲಾ - ಬುಧರ ಪರಸ್ಪರ ದರ್ಶನ

ಮೂಲಮ್ - 1

ತಾಂ ಕಥಾಮೈಲಸಂಬದ್ಧಾಂ ರಾಮೇಣಸಮುದೀರಿತಾಮ್ ।
ಲಕ್ಷ್ಮಣೋ ಭರತಶ್ಚೈವ ಶ್ರುತ್ವಾ ಪರಮವಿಸ್ಮಿತೌ ॥

ಅನುವಾದ

ಶ್ರೀರಾಮನು ಹೇಳಿದ ಇಲಾನ ಚರಿತ್ರಸಂಬಂಧೀ ಆ ಕಥೆಯನ್ನು ಕೇಳಿ ಲಕ್ಷ್ಮಣ ಮತ್ತು ಭರತರು ಇಬ್ಬರೂ ಬಹಳ ವಿಸ್ಮಿತರಾದರು.॥1॥

ಮೂಲಮ್ - 2

ತೌ ರಾಮಂ ಪ್ರಾಂಜಲೀ ಭೂತ್ವಾ ತಸ್ಯ ರಾಜ್ಞೋ ಮಹಾತ್ಮನಃ ।
ವಿಸ್ತರಂ ತಸ್ಯ ಭಾವಸ್ಯ ತದಾ ಪಪ್ರಚ್ಛತುಃ ಪುನಃ ॥

ಅನುವಾದ

ಅವರಿಬ್ಬರೂ ಕೈಮುಗಿದು ಶ್ರೀರಾಮನಲ್ಲಿ ಮಹಾಮನಾ ರಾಜಾ ಇಲಾನ ಸ್ತ್ರೀ-ಪುರುಷಭಾವದ ವಿಸ್ತೃತ ವೃತ್ತಾಂತದ ವಿಷಯದಲ್ಲಿ ಪುನಃ ಕೇಳಿದರು-॥2॥

ಮೂಲಮ್ - 3

ಕಥಂ ಸ ರಾಜಾ ಸ್ತ್ರೀಭೂತೋ ವರ್ತಯಾಮಾಸ ದುರ್ಗತಿಃ ।
ಪುರುಷಃ ಸ ಯದಾ ಭೂತಃ ಕಾಂ ವೃತ್ತಿಂವರ್ತಯತ್ಯಸೌ ॥

ಅನುವಾದ

ಪ್ರಭೋ! ರಾಜಾ ಇಲನು ಸ್ತ್ರೀಯಾಗಿ ಬಹಳ ದುರ್ಗತಿ ಯಲ್ಲಿ ಬಿದ್ದಿರಬಹುದು. ಅವನು ಆ ಸಮಯವನ್ನು ಹೇಗೆ ಕಳೆದನು? ಅವನು ಪುರುಷನಾಗಿದ್ದಾಗ ಯಾವ ವೃತ್ತಿಯನ್ನು ಆಶ್ರಯಿಸಿದ್ದನು.॥3॥

ಮೂಲಮ್ - 4

ತಯೋಸ್ತದ್ಭಾಷಿತಂ ಶ್ರುತ್ವಾ ಕೌತೂಹಲಸಮನ್ವಿತಮ್ ।
ಕಥಯಾಮಾಸ ಕಾಕುತ್ಸ್ಥಸ್ತಸ್ಯ ರಾಜ್ಞೋ ಯಥಾಗಮಮ್ ॥

ಅನುವಾದ

ಲಕ್ಷ್ಮಣ ಮತ್ತು ಭರತರ ಆ ಕುತೂಹಲಪೂರ್ಣ ಮಾತನ್ನು ಕೇಳಿ ಶ್ರೀರಾಮಚಂದ್ರನು ಇಲರಾಜನ ವೃತ್ತಾಂತವನ್ನು ಉಪಲಬ್ಧವಿರುವ ರೂಪದಲ್ಲೇ ಪುನಃ ಹೇಳಲು ಪ್ರಾರಂಭಿಸಿದನು.॥4॥

ಮೂಲಮ್ - 5

ತಮೇವ ಪ್ರಥಮಂ ಮಾಸಂ ಸ್ತ್ರೀ ಭೂತ್ವಾ ಲೋಕಸುಂದರೀ ।
ತಾಭಿಃ ಪರಿವೃತಾ ಸ್ತ್ರೀಭಿರ್ಯೇಽಸ್ಯ ಪೂರ್ವಂ ಪದಾನುಗಾಃ ॥

ಮೂಲಮ್ - 6

ತತ್ಕಾನನಂ ವಿಗಾಹ್ಯಾಶು ವಿಜಹ್ರೇ ಲೋಕಸುಂದರೀ ।
ದ್ರುಮಗುಲ್ಮಲತಾಕೀರ್ಣಂ ಪದ್ಭ್ಯಾಂ ಪದ್ಮದಲೇಕ್ಷಣಾ ॥

ಅನುವಾದ

ಅನಂತರ ಆ ಪ್ರಥಮ ಮಾಸದಲ್ಲೇ ಇಲಾ ತ್ರಿಭುವನ ಸುಂದರೀ ನಾರಿಯಾಗಿ ವನದಲ್ಲಿ ಸಂಚರಿಸತೊಡಗಿದಳು. ಮೊದಲು ಅವನ ಸೇವಕರೂ ಸ್ತ್ರೀರೂಪದಲ್ಲಿ ಪರಿಣತರಾಗಿದ್ದರು; ಅದೇ ಸ್ತ್ರೀಯರಿಂದ ಪರಿವೃತನಾಗಿ ಲೋಕಸುಂದರೀ ಕಮಲಲೋಚನೆ ಇಲಾ ವೃಕ್ಷಲತೆಗಳಿಂದ ತುಂಬಿದ ಒಂದು ವನದಲ್ಲಿ ಪ್ರವೇಶಿಸಿ ಕಾಲ್ನಡಿಗೆಯಲ್ಲೇ ಸಂಚರಿಸತೊಡಗಿದಳು.॥5-6॥

ಮೂಲಮ್ - 7

ವಾಹನಾನಿ ಚ ಸರ್ವಾಣಿ ಸಂತ್ಯಕ್ತ್ವಾ ವೈ ಸಮಂತತಃ ।
ಪರ್ವತಾಭೋಗವಿವರೇ ತಸ್ಮಿನ್ರೇಮೇ ಇಲಾತದಾ ॥

ಅನುವಾದ

ಆಗ ಎಲ್ಲ ವಾಹನಗಳನ್ನು ಅಲ್ಲೇ ಬಿಟ್ಟು ಇಲಾ ವಿಸ್ತೃತ ಪರ್ವತಮಾಲೆಗಳ ಮಧ್ಯಭಾಗದಲ್ಲಿ ಭ್ರಮಣ ಮಾಡತೊಡಗಿದಳು.॥7॥

ಮೂಲಮ್ - 8

ಅಥ ತಸ್ಮಿನ್ವನೋದ್ದೇಶೇ ಪರ್ವತಸ್ಯಾವಿದೂರತಃ ।
ಸರಃ ಸುರುಚಿರಪ್ರಖ್ಯಂ ನಾನಾಪಕ್ಷಿಗಣಾಯುತಮ್ ॥

ಅನುವಾದ

ಆ ವನಪ್ರಾಂತದಲ್ಲಿ ಪರ್ವತದ ಬಳಿಯಲ್ಲೇ ಒಂದು ಸುಂದರ ಸರೋವರವಿತ್ತು. ಅದರಲ್ಲಿ ನಾನಾ ರೀತಿಯ ಪಕ್ಷಿಗಳು ಕಲರವ ಮಾಡುತ್ತಿದ್ದವು.॥8॥

ಮೂಲಮ್ - 9

ದದರ್ಶ ಸಾ ಇಲಾ ತಸ್ಮಿನ್ ಬುಧಂ ಸೋಮಸುತಂ ತದಾ ।
ಜ್ವಲಂತಂ ಸ್ವೇನ ವಪುಷಾ ಪೂರ್ಣಂ ಸೋಮಮಿವೋದಿತಮ್ ॥

ಅನುವಾದ

ಆ ಸರೋವರದಲ್ಲಿ ತೇಜಸ್ವೀ ಶರೀರದಿಂದ, ಉದಯಿಸಿದ ಪೂರ್ಣಚಂದ್ರನಂತೆ ಪ್ರಕಾಶಿಸುತ್ತಿದ್ದ ಸೋಮಪುತ್ರ ಬಧನು ತಪಸ್ಸು ಮಾಡುತ್ತಿದ್ದುದನ್ನು ಇಲಾಳು ಅವನನ್ನು ನೋಡಿದನು..॥9॥

ಟಿಪ್ಪನೀ
  • ಎಲ್ಲಿಯವರೆಗೆ ಭಗವಾನ್ ಶಿವನ ಆದೇಶದಿಂದ ಪ್ರಾಣಿಗಳು ಸ್ತ್ರೀರೂಪವಾಗಿದ್ದರೋ, ಆ ಸೀಮೆಯ ಹೊರಗೆ ಈ ಸರೋವರವಿತ್ತು. ಅದರಿಂದ ಬುಧನಿಗೆ ಸ್ತ್ರೀತ್ವದ ಪ್ರಾಪ್ತಿ ಆಗಿರಲಿಲ್ಲ.
ಮೂಲಮ್ - 10

ತಪಂತಂ ಚ ತಪಸ್ತೀವ್ರಮಂಭೋಮಧ್ಯೇದುರಾಸದಮ್ ।
ಯಶಸ್ಕರಂ ಕಾಮಕರಂತಾರುಣ್ಯೇ ಪರ್ಯವಸ್ಥಿತಮ್ ॥

ಅನುವಾದ

ಅವನು ನೀರಿನೊಳಗೆ ತೀವ್ರ ತಪಸ್ಸಿನಲ್ಲಿ ಮುಳುಗಿದ್ದನು. ಅವನನ್ನು ಪರಾಭವ ಗೊಳಿಸುವುದು ಯಾರಿಗೂ ಅತ್ಯಂತ ಕಠಿಣವಾಗಿತ್ತು. ಅವನು ಯಶಸ್ವೀ, ಪೂರ್ಣಕಾಮ ಮತ್ತು ಯುವಕನಾಗಿದ್ದನು.॥10॥

ಮೂಲಮ್ - 11

ಸಾ ತಂ ಜಲಾಶಯಂ ಸರ್ವಂ ಕ್ಷೋಭಯಾಮಾಸ ವಿಸ್ಮಿತಾ ।
ಸಹ ತೈಃ ಪೂರ್ವಪುರುಷೈಃ ಸ್ತ್ರೀಭೂತೈ ರಘುನಂದನ ॥

ಅನುವಾದ

ರಘುನಂದನ! ಅವನನ್ನು ನೋಡಿ ಇಲಾ ಚಕಿತಳಾದಳು ಹಾಗೂ ಮೊದಲು ಪುರುಷರಾಗಿದ್ದ ಸ್ತ್ರೀಯರೊಂದಿಗೆ ನೀರಿಗಿಳಿದು ಅವರು ಇಡೀ ಜಲಾಶಯವನ್ನು ಕ್ಷುಬ್ಧಗೊಳಿಸಿದರು.॥11॥

ಮೂಲಮ್ - 12

ಬುಧಸ್ತುತಾಂ ಸಮೀಕ್ಷೈವ ಕಾಮಬಾಣವಶಂ ಗತಃ ।
ನೋಪಲೇಭೇ ತದಾತ್ಮಾನಂ ಸ ಚಚಾಲ ತದಾಂಭಸಿ ॥

ಅನುವಾದ

ಇಲೆಯನ್ನು ನೋಡುತ್ತಲೇ ಬುಧನು ಮನ್ಮಥನ ಬಾಣಗಳಿಗೆ ಗುರಿಯಾದನು. ಅವನಿಗೆ ತನು-ಮನದ ಎಚ್ಚರದಪ್ಪಿ, ಆಗ ನೀರಿನೊಳಗೇ ವಿಚಲಿತನಾದನ.॥12॥

ಮೂಲಮ್ - 13

ಇಲಾಂ ನಿರೀಕ್ಷಮಾಣಸ್ತು ತ್ರೈಲೋಕ್ಯಾದಧಿಕಾಂ ಶುಭಾಮ್ ।
ಚಿತ್ತಂ ಸಮಭ್ಯತಿಕ್ರಾಮನ್ ಕಾ ನ್ವಿಯಂ ದೇವತಾಧಿಕಾ ॥

ಅನುವಾದ

ಇಲಾ ತ್ರಿಲೋಕದಲ್ಲಿ ಎಲ್ಲರಿಗಿಂತ ಹೆಚ್ಚು ಸುಂದರಿಯಾಗಿದ್ದಳು. ಆಕೆಯನ್ನು ನೋಡುತ್ತಲೇ ಬುಧನು ಮನಸ್ಸು ಆಕೆಯಲ್ಲಿ ಆಸಕ್ತವಾಯಿತು. ಈ ಸ್ತ್ರೀ ಯಾರು? ದೇವಾಂಗನೆಯರಿಗಿಂತಲೂ ಹೆಚ್ಚು ರೂಪವತಿಯಾಗಿದ್ದಾಳೆ. ಈಕೆ ಯಾರು ಎಂದು ಯೋಚಿಸತೊಡಗಿದನು.॥13॥

ಮೂಲಮ್ - 14

ನ ದೇವೀಷು ನ ನಾಗೀಷು ನಾಸುರೀಷ್ವಪ್ಸರಃಸು ಚ ।
ದೃಷ್ಟಪೂರ್ವಾ ಮಯಾ ಕಾಚಿದ್ರೂಪೇಣಾನೇನ ಶೋಭಿತಾ ॥

ಅನುವಾದ

ದೇವವನಿತೆಯಲ್ಲಿ, ನಾಗವಧುಗಳಲ್ಲಿ, ಅಸುರ ಸ್ತ್ರೀಯರಲ್ಲಿ, ಅಪ್ಸರೆಯರಲ್ಲಿಯೂ ಹಿಂದೆ ಇಂತಹ ಮನೋಹರ ರೂಪದಿಂದ ಶೋಭಿಸುವ ಸ್ತ್ರೀಯರನ್ನು ನಾನು ಎಂದೂ ನೋಡಲಿಲ್ಲ.॥14॥

ಮೂಲಮ್ - 15

ಸದೃಶೀಯಂ ಮಮ ಭವೇದ್ಯದಿ ನಾನ್ಯಪರಿಗ್ರಹಃ ।
ಇತಿ ಬುದ್ಧಿಂ ಸಮಾಸ್ಥಾಯ ಜಲಾತ್ಕೂಲಮುಪಾಗಮತ್ ॥

ಅನುವಾದ

ಇವಳು ಬೇರೆಯವರಿಗೆ ವಿವಾಹಿತವಾಗದಿದ್ದರೆ ಸರ್ವಥಾ ನನ್ನ ಪತ್ನಿಯಾಗಲು ಯೋಗ್ಯವಾಗಿದ್ದಾಳೆ. ಹೀಗೆ ಯೋಚಿಸಿ ನೀರಿನಿಂದ ಹೊರಗೆ ಬಂದು ತೀರಕ್ಕೆ ಬಂದನ.॥15॥

ಮೂಲಮ್ - 16

ಆಶ್ರಮಂ ಸಮುಪಾಗಮ್ಯ ತತಸ್ತಾಃಪ್ರಮದೋತ್ತಮಾಃ ।
ಶಬ್ದಾಪಯತ ಧರ್ಮಾತ್ಮಾತಾಶ್ಚೈನಂ ಚ ವವಂದಿರೇ ॥

ಅನುವಾದ

ಮತ್ತೆ ಆಶ್ರಮಕ್ಕೆ ಹೋಗಿ ಆ ಧರ್ಮಾತ್ಮನು ಹಿಂದಿನ ಎಲ್ಲ ಸುಂದರಿಯರನ್ನು ಕೂಗಿ ಕರೆದನು ಮತ್ತು ಅವರೆಲ್ಲರೂ ಬಂದು ಅವನಿಗೆ ಪ್ರಣಾಮಮಾಡಿದರು.॥16॥

ಮೂಲಮ್ - 17

ಸ ತಾಃ ಪಪ್ರಚ್ಛ ಧರ್ಮಾತ್ಮಾ ಕಸ್ಯೈಷಾ ಲೋಕಸುಂದರೀ ।
ಕಿಮರ್ಥಮಾಗತಾ ಚೈವ ಸರ್ವಮಾಖ್ಯಾತ ಮಾ ಚಿರಮ್ ॥

ಅನುವಾದ

ಆಗ ಧರ್ಮಾತ್ಮ ಬುಧನು ಆ ಎಲ್ಲ ಸ್ತ್ರೀಯರಲ್ಲಿ ಕೇಳಿದನು- ಈ ಲೋಕ ಸುಂದರಿ ನಾರಿಯು ಯಾರ ಪತ್ನಿಯಾಗಿದ್ದಾಳೆ ಮತ್ತು ಯಾತಕ್ಕಾಗಿ ಇಲ್ಲಿಗೆ ಬಂದಿರುವಳು? ಇದೆಲ್ಲವನ್ನು ನೀವು ಬೇಗನೇ ತಿಳಿಸಿರಿ.॥17॥

ಮೂಲಮ್ - 18

ಶುಭಂ ತು ತಸ್ಯ ತದ್ವಾಕ್ಯಂ ಮಧುರಂ ಮಧುರಾಕ್ಷರಮ್ ।
ಶ್ರುತ್ವಾ ಸ್ತ್ರಿಯಶ್ಚ ತಾಃ ಸರ್ವಾ ಊಚುರ್ಮಧುರಯಾ ಗಿರಾ ॥

ಅನುವಾದ

ಬುಧನು ನುಡಿದ ಮಧರವಾದ ಆ ಶುಭವಚನವನ್ನು ಕೇಳಿ ಎಲ್ಲ ಸ್ತ್ರೀಯರು ಮಧುರವಾಗಿ ಹೇಳಿದರು.॥18॥

ಮೂಲಮ್ - 19

ಅಸ್ಮಾಕಮೇಷಾ ಸುಶ್ರೋಣೀ ಪ್ರಭುತ್ವೇ ವರ್ತತೇ ಸದಾ ।
ಅಪತಿಃ ಕಾನನಾಂತೇಷು ಸಹಾಸ್ಮಾಭಿಶ್ಚರತ್ಯಸೌ ॥

ಅನುವಾದ

ಬ್ರಹ್ಮನ್! ಈ ಸುಂದರಿಯು ಸದಾ ನಮ್ಮ ಸ್ವಾಮಿನಿಯಾಗಿದ್ದಾಳೆ. ಇವಳಿಗೆ ಯಾರೂ ಪತಿ ಇಲ್ಲ. ಈಕೆ ನಮ್ಮೊಂದಿಗೆ ತನ್ನ ಇಚ್ಛೆಗನುಸಾರ ವನ ಪ್ರಾಂತದಲ್ಲಿ ಸಂಚರಿಸುತ್ತಾ ಇರುತ್ತಾಳೆ.॥19॥

ಮೂಲಮ್ - 20

ತದ್ವಾಕ್ಯಮವ್ಯಕ್ತಪದಂ ತಾಸಾಂ ಸ್ತ್ರೀಣಾಂ ನಿಶಮ್ಯ ಚ ।
ವಿದ್ಯಾಮಾವರ್ತಿನೀಂ ಪುಣ್ಯಾಮಾವರ್ತಯತ ಸ ದ್ವಿಜಃ ॥

ಅನುವಾದ

ಆ ಸ್ತ್ರೀಯರ ಮಾತು ಎಲ್ಲ ರೀತಿಯಿಂದ ಸುಷ್ಪಷ್ಟವಾಗಿತ್ತು. ಅದನ್ನು ಕೇಳಿ ಬ್ರಾಹ್ಮಣ ಬುಧನು ಪುಣ್ಯಮಯೀ ಆವರ್ತನೀ ವಿದ್ಯೆ ಯನ್ನು ಸ್ಮರಿಸಿದನು.॥20॥

ಮೂಲಮ್ - 21

ಸೋಽರ್ಥಂ ವಿದತ್ವಾ ಸಕಲಂ ತಸ್ಯ ರಾಜ್ಞೋ ಯಥಾ ತಥಾ ।
ಸರ್ವಾ ಏವ ಸ್ತ್ರಿಯಸ್ತಾಶ್ಚ ಬಭಾಷೇ ಮುನಿಪುಂಗವಃ ॥

ಅನುವಾದ

ಆ ರಾಜನ ವಿಷಯದ ಎಲ್ಲ ಮಾತುಗಳು ಯಥಾರ್ಥರೂಪದಿಂದ ತಿಳಿದು ಮುನಿವರ ಬುಧನು ಆ ಎಲ್ಲ ಸ್ತ್ರೀಯರಲ್ಲಿ ಹೇಳಿದನು.॥21॥

ಮೂಲಮ್ - 22

ಅತ್ರ ಕಿಂಪುರುಷಿರ್ಭೂತ್ವಾ ಶೈಲರೋಧಸಿ ವತ್ಸ್ಯಥ ।
ಆವಾಸಸ್ತು ಗಿರಾವಸ್ಮಿನ್ ಶೀಘ್ರಮೇವ ವಿಧೀಯತಾಮ್ ॥

ಅನುವಾದ

ನೀವೆಲ್ಲರೂ ಕಿಂಪುರುಷೀ ‘ಕಿನ್ನರಿ’ಯಾಗಿ ಪರ್ವತದ ತಪ್ಪಲಿನಲ್ಲಿ ಇರುವಿರಿ. ಈ ಪರ್ವತದ ಮೇಲೆ ಶೀಘ್ರವೇ ತನಗಾಗಿ ನಿವಾಸ ಸ್ಥಾನ ಮಾಡಿಕೊಳ್ಳಿ.॥22॥

ಮೂಲಮ್ - 23

ಮೂಲಪತ್ರಲೈಃ ಸರ್ವಾ ವರ್ತಯಿಷ್ಯಥ ನಿತ್ಯದಾ ।
ಸ್ತ್ರಿಯಃ ಕಿಂಪುರುಷಾನ್ನಾಮ ಭರ್ತೃನ್ಸಮುಪಲಪ್ಸ್ಯಥ ॥

ಅನುವಾದ

ಪತ್ರ ಮತ್ತು ಫಲ - ಮೂಲಗಳಿಂದ ನಿವೇಲ್ಲರೂ ಸದಾ ಜೀವನ ನಿರ್ವಾಹ ಮಾಡಿರಿ. ಮುಂದೆ ನೀವೆಲ್ಲ ಸ್ತ್ರೀಯರು ಕಿಂಪುರುಷ ಎಂಬ ಪತಿಗಳನ್ನು ಪಡೆಯುವಿರ.॥23॥

ಮೂಲಮ್ - 24

ತಾಃ ಶ್ರುತ್ವಾ ಸೋಮಪುತ್ರಸ್ಯ ಸ್ತ್ರಿಯಃ ಕಿಂಪುರುಷೀಕೃತಾಃ ।
ಉಪಾಸಾಂಚಕ್ರಿರೇ ಶೈಲಂ ವಧ್ವಸ್ತಾ ಬಹುಲಾಸ್ತದಾ ॥

ಅನುವಾದ

ಕಿಂ ಪುರುಷೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಸ್ತ್ರೀಯರು ಸೋಮ ಪುತ್ರ ಬುಧನ ಮೇಲಿನ ಮಾತನ್ನು ಕೇಳಿ ಬಹುಸಂಖ್ಯೆಯಲ್ಲಿ ಇದ್ದ ಅವರು ಪರ್ವತದ ಮೇಲೆ ಇರತೊಡಗಿದರು.॥24॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಂಭತ್ತೆಂಟನೆಯ ಸರ್ಗ ಪೂರ್ಣವಾಯಿತು.॥88॥