[ಎಂಭತ್ತೇಳನೆಯ ಸರ್ಗ]
ಭಾಗಸೂಚನಾ
ಶ್ರೀರಾಮನು ಲಕ್ಷ್ಮಣನಿಗೆ ಇಲನೆಂಬ ರಾಜನ ಕಥೆ ಹೇಳಿದುದು
ಮೂಲಮ್ - 1
ತಚ್ಛ್ರುತ್ವಾಲಕ್ಷ್ಮಣೇನೋಕ್ತಂ ವಾಕ್ಯಂ ವಾಕ್ಯವಿಶಾರದಃ ।
ಪ್ರತ್ಯುವಾಚ ಮಹಾತೇಜಾಃ ಪ್ರಹಸನ್ರಾಘವೋ ವಚಃ ॥
ಅನುವಾದ
ಲಕ್ಷ್ಮಣನು ಹೇಳಿದ ಮಾತನ್ನು ಕೇಳಿ ಮಾತುಕತೆಯಲ್ಲಿ ನಿಪುಣನಾದ ಮಹಾತೇಜಸ್ವೀ ಶ್ರೀರಘುನಾಥನು ನಗುತ್ತಾ ಹೇಳಿದನು.॥1॥
ಮೂಲಮ್ - 2
ಏವಮೇವ ನರಶ್ರೇಷ್ಠ ಯಥಾ ವದಸಿ ಲಕ್ಷ್ಮಣ ।
ವೃತ್ರಘಾತಮಶೇಷೇಣ ವಾಜಿಮೇಧಲಂ ಚ ಯತ್ ॥
ಅನುವಾದ
ನರಶ್ರೇಷ್ಠ ಲಕ್ಷ್ಮಣ! ವೃತ್ರಾಸುರನ ಎಲ್ಲ ಪ್ರಸಂಗ ಮತ್ತು ನೀನು ತಿಳಿಸಿದ ಅಶ್ವಮೇಧ ಯಜ್ಞದ ಫಲ ಎಲ್ಲವೂ ಹಾಗೆಯೇ ಇದೇ.॥2॥
ಮೂಲಮ್ - 3
ಶ್ರೂಯತೇ ಹಿ ಪುರಾ ಸೌಮ್ಯ ಕರ್ದಮಸ್ಯ ಪ್ರಜಾಪತೇಃ ।
ಪುತ್ರೋ ಬಾಹ್ಲೀಶ್ವರಃ ಶ್ರೀಮಾನಿಲೋ ನಾಮ ಸುಧಾರ್ಮಿಕಃ ॥
ಅನುವಾದ
ಸೌಮ್ಯ! ಹಿಂದೆ ಪ್ರಜಾಪತಿ ಕರ್ದಮರ ಪುತ್ರ ಶ್ರೀಮಾನ್ ಇಲನೆಂಬುವನು ಬಾಹ್ಲಿಕ ದೇಶದ ದೊಡ್ಡ ಧರ್ಮಾತ್ಮ ನರೇಶನಿದ್ದನು.॥3॥
ಮೂಲಮ್ - 4
ಸ ರಾಜಾ ಪೃಥಿವೀಂ ಸರ್ವಾಂ ವಶೇ ಕೃತ್ವಾ ಮಹಾಯಶಾಃ ।
ರಾಜ್ಯಂ ಚೈವನರವ್ಯಾಘ್ರ ಪುತ್ರವತ್ಪರ್ಯಪಾಲಯತ್ ॥
ಅನುವಾದ
ಪುರುಷಸಿಂಹ! ಆ ಮಹಾಯಶಸ್ವೀ ಭೂಪಾಲನು ಇಡೀ ಪೃಥಿವಿಯನ್ನು ವಶದಲ್ಲಿಟ್ಟುಕೊಂಡು ತನ್ನ ರಾಜ್ಯದ ಪ್ರಜೆಯನ್ನು ಪುತ್ರರಂತೆ ಪಾಲಿಸುತ್ತಿದ್ದನು.॥4॥
ಮೂಲಮ್ - 5
ಸುರೈಶ್ಚ ಪರಮೋದಾರೈರ್ದೈತೇಯೈಶ್ಚ ಮಹಾಧನೈಃ ।
ನಾಗರಾಕ್ಷಸಗಂಧರ್ವೈರ್ಯಕ್ಷೈಶ್ಚ ಸುಮಹಾತ್ಮಭಿಃ ॥
ಮೂಲಮ್ - 6
ಪೂಜ್ಯತೇ ನಿತ್ಯಶಃ ಸೌಮ್ಯಭಯಾರ್ತೈ ರಘುನಂದನ ।
ಅಬಿಭ್ಯಂಶ್ಚ ತ್ರಯೋ ಲೋಕಾಃ ಸರೋಷಸ್ಯ ಮಹಾತ್ಮನಃ ॥
ಅನುವಾದ
ಸೌಮ್ಯ! ರಘುನಂದನ! ಪರಮ ಉದಾರ ದೇವತೆಗಳು, ದೈತ್ಯರು, ನಾಗರು, ರಾಕ್ಷಸರು, ಗಂಧರ್ವರು, ಯಕ್ಷರು, ಇವರೆಲ್ಲ ಭಯಭೀತರಾಗಿ ಸದಾ ಇಲರಾಜನನ್ನು ಸ್ತುತಿಸಿ ಪೂಜಿಸುತ್ತಿದ್ದರು. ಆ ಮಹಾತ್ಮಾ ನರೇಶನು ಕೋಪಗೊಂಡರೆ ಮೂರು ಲೋಕದ ಪ್ರಾಣಿಗಳು ಭಯದಿಂದ ಗಡಗಡ ನಡುಗುತ್ತಿದ್ದರು.॥5-6॥
ಮೂಲಮ್ - 7
ಸ ರಾಜಾ ತಾದೃಶೋಽಪ್ಯಾಸೀದ್ಧರ್ಮೇ ವೀರ್ಯೇ ಚ ನಿಷ್ಠಿತಃ ।
ಬುದ್ಧ್ಯಾ ಚ ಪರಮೋದಾರೋ ಬಾಹ್ಲೀಕೇಶೋ ಮಹಾಯಶಾಃ ॥
ಅನುವಾದ
ಇಷ್ಟು ಪ್ರಭಾವಶಾಲಿಯಾಗಿದ್ದರು ಬಾಹ್ಲಿಕ ದೇಶದ ಒಡೆಯ ಮಹಾಯಶಸ್ವೀ ಪರಮೋದಾರ ಇಲರಾಜನು ಧರ್ಮ ಮತ್ತು ಪರಾಕ್ರಮದಲ್ಲಿ ದೃಢತೆಯಿಂದ ಸ್ಥಿರನಾಗಿದ್ದನು ಹಾಗೂ ಅವನ ಬುದ್ಧಿಯೂ ಸ್ಥಿರವಾಗಿತ್ತು.॥7॥
ಮೂಲಮ್ - 8
ಸ ಪ್ರಚಕ್ರೇ ಮಹಾಬಾಹುರ್ಮೃಗಯಾಂ ರುಚಿರೇ ವನೇ ।
ಚೈತ್ರೇ ಮನೋರಮೇ ಮಾಸೇ ಸಭೃತ್ಯಬಲವಾಹನಃ ॥
ಅನುವಾದ
ಒಮ್ಮೆ ಸೇವಕ, ಸೈನ್ಯ, ವಾಹನಗಳೊಂದಿಗೆ ಆ ಮಹಾಬಾಹು ರಾಜನು ಮನೋರಮ ಚೈತ್ರಮಾಸದಲ್ಲಿ ಒಂದು ಸುಂದರ ವನಕ್ಕೆ ಬೇಟೆಯಾಡಲು ಪ್ರಾರಂಭಿಸಿದನು.॥8॥
ಮೂಲಮ್ - 9
ಪ್ರಜಘ್ನೇ ಚ ನೃಪೋಽರಣ್ಯೇಮೃಗಾನ್ ಶತಸಹಸ್ರಶಃ ।
ಹತ್ವೈವ ತೃಪ್ತಿರ್ನಾಭೂಚ್ಚ ರಾಜ್ಞಸ್ತಸ್ಯ ಮಹಾತ್ಮನಃ ॥
ಅನುವಾದ
ರಾಜನು ಆ ವನದಲ್ಲಿ ಸಾವಿರಾರು ನೂರಾರು ಹಿಂಸಕ ಜಂತುಗಳನ್ನು ವಧಿಸಿದನು, ಆದರೆ ಇಷ್ಟು ಪ್ರಾಣಿಗಳನ್ನು ಕೊಂದರೂ ಆ ಮಹಾಮನಸ್ವೀ ನರೇಶನಿಗೆ ತೃಪ್ತಿ ಆಗಲಿಲ್ಲ.॥9॥
ಮೂಲಮ್ - 10
ನಾನಾಮೃಗಾಣಾಮಯುತಂ ವಧ್ಯಮಾನಂಮಹಾತ್ಮನಾ ।
ಯತ್ರ ಜಾತೋ ಮಹಾಸೇನಸ್ತಂ ದೇಶಮುಪಚಕ್ರಮೇ ॥
ಅನುವಾದ
ಮತ್ತೆ ಆ ಮಹಾತ್ಮಾ ಇಲನ ಕೈಯಿಂದ ನಾನಾ ರೀತಿಯ ಹತ್ತು ಸಾವಿನ ಹಿಂಸಕ ಪಶು ಸತ್ತು ಹೋದುವು. ಬಳಿಕ ಅವನು ಮಹಾಸೇನನ (ಕಾರ್ತಿಕೇಯ) ಜನ್ಮವಾದ ಪ್ರದೇಶಕ್ಕೆ ಹೋದನು.॥10॥
ಮೂಲಮ್ - 11
ತಸ್ಮಿನ್ಪ್ರದೇಶೇ ದೇವೇಶಃ ಶೈಲರಾಜಸುತಾಂ ಹರಃ ।
ರಮಯಾಮಾಸ ದುರ್ಧರ್ಷಃ ಸರ್ವೈರನುಚರೈಃ ಸಹ ॥
ಅನುವಾದ
ಆ ಸ್ಥಾನದಲ್ಲಿ ದೇವತೆಗಳ ಸ್ವಾಮಿ ದುರ್ಜಯ ದೇವತೆ ಭಗವಾನ್ ಶಿವನು ತನ್ನ ಸಮಸ್ತ ಸೇವಕರೊಂದಿಗೆ ಇದ್ದು ಗಿರಿರಾಜ ಕುಮಾರಿಯ ಮನೋರಂಜನೆ ಮಾಡುತ್ತಿದ್ದನು.॥11॥
ಮೂಲಮ್ - 12
ಕೃತ್ವಾ ಸ್ತ್ರೀರೂಪಮಾತ್ಮಾನಮುಮೇಶೋಗೋಪತಿಧ್ವಜಃ ।
ದೇವ್ಯಾಃ ಪ್ರಿಯಚಿಕೀರ್ಷುಃ ಸಂಸ್ತಸ್ಮಿನ್ಪರ್ವತನಿರ್ಝರೇ ॥
ಅನುವಾದ
ವೃಷಭಧ್ವಜನಾದ ಭಗವಾನ್ ಉಮಾವಲ್ಲಭನು ತಾನೂ ಸ್ತ್ರೀರೂಪದಲ್ಲಿ ಪ್ರಕಟನಾಗಿ ದೇವೀ ಪಾರ್ವತಿಯ ಮನಸ್ಸಂತೋಷ ಪಡಿಸಲು ಅಲ್ಲಿಯ ಪರ್ವತೀಯ ಜಲಪಾತದ ಬಳಿ ಆಕೆಯೊಂದಿಗೆ ವಿಹರಿಸುತ್ತಿದ್ದನು.॥12॥
ಮೂಲಮ್ - 13
ಯತ್ರ ಯತ್ರ ವನೋದ್ದೇಶೇ ಸತ್ತ್ವಾಃ ಪುರುಷವಾದಿನಃ ।
ವೃಕ್ಷಾಃ ಪುರುಷನಾಮಾನಸ್ತೇ ಸರ್ವೇ ಸ್ತ್ರೀಜನಾಭವನ್ ॥
ಅನುವಾದ
ಆ ವನದ ಎಲ್ಲ ಭಾಗಗಳಲ್ಲಿ ಇದ್ದ ಪುಲ್ಲಿಂಗ ನಾಮಧಾರೀ ಜಂತು, ವೃಕ್ಷ ಎಲ್ಲವೂ ಸ್ತ್ರೀಲಿಂಗವಾಗಿ ಪರಿಣತವಾಗಿ ಹೋದುವು.॥13॥
ಮೂಲಮ್ - 14½
ಯಚ್ಚ ಕಿಂಚನ ತತ್ಸರ್ವಂ ನಾರೀಸಂಜ್ಞಂ ಬಭೂವ ಹ ।
ಏತಸ್ಮಿನ್ನಂತರೇ ರಾಜಾ ಸ ಇಲಃ ಕರ್ದಮಾತ್ಮಜಃ ॥
ನಿಘ್ನನ್ ಮೃಗಸಹಸ್ರಾಣಿ ತಂ ದೇಶಮುಪಚಕ್ರಮೇ ।
ಅನುವಾದ
ಅಲ್ಲಿ ಇರುವ ಚರಾಚರ ಪ್ರಾಣಿಗಳ ಸಮೂಹವೆಲ್ಲ ಸ್ತ್ರೀನಾಮಧಾರಿಗಳಾಗಿದ್ದರು. ಇದೇ ಸಮಯದಲ್ಲಿ ಕರ್ದಮ ಪುತ್ರ ಇಲನು ಸಾವಿರಾರು ಹಿಂಸಕ ಪಶುಗಳನ್ನು ವಧಿಸುತ್ತಾ ಆ ಪ್ರದೇಶಕ್ಕೆ ಹೋದನು.॥14½॥
ಮೂಲಮ್ - 15½
ಸ ದೃಷ್ಟ್ವಾ ಸ್ತ್ರೀಕೃತಂ ಸರ್ವಂ ಸವ್ಯಾಲಮೃಗಪಕ್ಷಿಣಮ್ ॥
ಆತ್ಮಾನಂ ಸ್ತ್ರೀಕೃತಂ ಚೈವ ಸಾನುಗಂ ರಘುನಂದನ ।
ಅನುವಾದ
ಅಲ್ಲಿಗೆ ಅವನು ಬಂದು ನೋಡುತ್ತಾನೆ- ಸರ್ಪ, ಪಶು-ಪಕ್ಷಿಗಳ ಸಹಿತ ಆ ವನದ ಎಲ್ಲ ಪ್ರಾಣಿ ಸಮುದಾಯವು ಸ್ತ್ರೀರೂಪವಾಗಿ ಹೋಗಿತ್ತು. ರಘುನಂದನ! ಸೇವಕರ ಸಹಿತ ತಾನೂ ಸ್ತ್ರೀರೂಪವಾಗಿ ಪರಿಣತನಾಗಿರುವುದನ್ನು ನೋಡಿದನು.॥15½॥
ಮೂಲಮ್ - 16½
ತಸ್ಯ ದುಃಖಂ ಮಹಚ್ಚಾಸೀದ್ದೃಷ್ಟ್ವಾಽಽತ್ಮಾನಂ ತಥಾಗತಮ್ ॥
ಉಮಾಪತೇಶ್ಚ ತತ್ಕರ್ಮ ಜ್ಞಾತ್ವಾ ತ್ರಾಸಮುಪಾಗಮತ್ ।
ಅನುವಾದ
ತನ್ನನ್ನು ಆ ಸ್ಥಿತಿಯಲ್ಲಿ ನೋಡಿ ರಾಜನಿಗೆ ಬಹಳ ದುಃಖವಾಯಿತು. ಇದೆಲ್ಲ ಕಾರ್ಯ ಉಮಾವಲ್ಲಭ ಮಹಾದೇವನ ಇಚ್ಚೆಯಿಂದ ಆಗಿದೆ ಎಂದು ತಿಳಿದು ಅವನು ಭಯಗೊಂಡನು.॥16½॥
ಮೂಲಮ್ - 17½
ತತೋ ದೇವಂ ಮಹಾತ್ಮಾನಂ ಶಿತಿಕಂಠಂ ಕಪರ್ದಿನಮ್ ॥
ಜಗಾಮ ಶರಣಂ ರಾಜಾ ಸಭೃತ್ಯಬಲವಾಹನಃ ।
ಅನುವಾದ
ಅನಂತರ ಸೇವಕ, ಸೈನ್ಯ, ವಾಹನ ಗಳೊಂದಿಗೆ ಇಲರಾಜನು ಜಟಾಜೂಟಧಾರೀ ಮಹಾತ್ಮಾ ಭಗವಾನ್ ನೀಲಕಂಠನಿಗೆ ಶರಣಾದನು.॥17½॥
ಮೂಲಮ್ - 18½
ತತಃ ಪ್ರಹಸ್ಯ ವರದಃ ಸಹ ದೇವ್ಯಾ ಮಹೇಶ್ವರಃ ॥
ಪ್ರಜಾಪತಿಸುತಂ ವಾಕ್ಯಮುವಾಚ ವರದಃ ಸ್ವಯಮ್ ।
ಅನುವಾದ
ಆಗ ದೇವೀಪಾರ್ವತಿಯೊಂದಿಗೆ ವಿರಾಜಿಸುತ್ತಿರುವ ವರದನಾಯಕ ದೇವತಾ ಮಹೇಶ್ವರನು ನಗುತ್ತಾ ಪ್ರಜಾಪತಿ ಪುತ್ರ ಇಲನಲ್ಲಿ ಹೇಳಿದನು.॥18½॥
ಮೂಲಮ್ - 19½
ಉತ್ತಿಷ್ಠೋತ್ತಿಷ್ಠ ರಾಜರ್ಷೇ ಕಾರ್ದಮೇಯ ಮಹಾಬಲ ॥
ಪುರುಷತ್ವಮೃತೇ ಸೌಮ್ಯ ವರಂ ವರಯ ಸುವ್ರತ ।
ಅನುವಾದ
ಕರ್ದಮ ಕುಮಾರ ಮಹಾಬಲಿ ರಾಜರ್ಷೇ ! ಏಳು, ಏಳು, ಸುವ್ರತನಾದ ಸೌಮ್ಯ ನರೇಶನೇ! ಪುರುಷತ್ವ ಬಿಟ್ಟು ಏನು ಬೇಕಾದರೂ ವರವನ್ನು ಕೇಳು.॥19½॥
ಮೂಲಮ್ - 20½
ತತಃ ಸ ರಾಜಾ ಶೋಕಾರ್ತಃ ಪ್ರತ್ಯಾಖ್ಯಾತೋ ಮಹಾತ್ಮನಾ ॥
ಸ್ತ್ರೀಭೂತೋಽಸೌ ನ ಜಗ್ರಾಹ ವರಮನ್ಯಂ ಸುರೋತ್ತಮಾತ್ ।
ಅನುವಾದ
ಮಹಾತ್ಮಾ ಭಗವಾನ್ ಶಂಕರನು ಹೀಗೆ ಪುರುಷತ್ವ ಕೊಡಲು ಒಪ್ಪದಿದ್ದಾಗ ಸ್ತ್ರೀರೂಪಧಾರೀ ರಾಜಾ ಇಲನು ಶೋಕತಪ್ತನಾದನು. ಅವನು ಸುರಶ್ರೇಷ್ಠ ಮಹಾದೇವನಲ್ಲಿ ಬೇರೆ ವರವನ್ನು ಬೇಡಲಿಲ್ಲ.॥20½॥
ಮೂಲಮ್ - 21
ತತಃ ಶೋಕೇನ ಮಹತಾ ಶೈಲರಾಜಸುತಾಂ ನೃಪಃ ॥
ಮೂಲಮ್ - 22½
ಪ್ರಣಿಪತ್ಯ ಉಮಾಂ ದೇವೀಂ ಸರ್ವೇಣೈವಾಂತರಾತ್ಮನಾ ।
ಈಶೇ ವರಾಣಾಂ ವರದೇ ಲೋಕಾನಾಮಸಿ ಭಾಮಿನಿ ॥
ಅಮೋಘದರ್ಶನೇ ದೇವಿ ಭಜ ಸೌಮ್ಯೇನ ಚಕ್ಷುಷಾ ।
ಅನುವಾದ
ಅನಂತರ ಮಹಾಶೋಕದಿಂದ ಪೀಡಿತನಾದ ರಾಜನು ಗಿರಿರಾಜಕುಮಾರಿ ಉಮಾದೇವಿಯ ಚರಣಗಳಲ್ಲಿ ಹೃತ್ಪೂರ್ವಕ ಪ್ರಣಾಮ ಮಾಡಿ ಪ್ರಾರ್ಥಿಸಿದನು - ಸಮಸ್ತ ವರಗಳ ಅಧೀಶ್ವರೀ ದೇವಿ! ನೀನೂ ಮಾನಿನೀಯಾಗಿರುವೆ. ಸಮಸ್ತ ಲೋಕಗಳಿಗೆ ವರ ಕೊಡುವ ದೇವಿಯೇ! ನಿನ್ನ ದರ್ಶನ ಎಂದೂ ನಿಷ್ಪಲವಾಗುವುದಿಲ್ಲ. ಆದ್ದರಿಂದ ನೀನೇ ಸೌಮ್ಯದೃಷ್ಟಿಯಿಂದ ನನ್ನ ಮೇಲೆ ಅನುಗ್ರಹ ಮಾಡು.॥21-22½॥
ಮೂಲಮ್ - 23½
ಹೃದ್ಗತಂ ತಸ್ಯ ರಾಜರ್ಷೇರ್ವಿಜ್ಞಾಯ ಹರಸನ್ನಿಧೌ ॥
ಪ್ರತ್ಯುವಾಚ ಶುಭಂ ವಾಕ್ಯಂ ದೇವೀ ರುದ್ರಸ್ಯ ಸಮ್ಮತಾ ।
ಅನುವಾದ
ರಾಜರ್ಷಿ ಇಲಾನ ಹಾರ್ದಿಕ ಅಭಿಪ್ರಾಯವನ್ನು ತಿಳಿದು ರುದ್ರಪ್ರಿಯಾ ದೇವೀ ಪಾರ್ವತಿಯು ಮಹಾದೇವನ ಬಳಿಯಲ್ಲಿ ರಾಜನಲ್ಲಿ ಹೀಗೆ ಶುಭ ಮಾತನ್ನು ಹೇಳಿದಳು.॥23½॥
ಮೂಲಮ್ - 24½
ಅರ್ಧಸ್ಯ ದೇವೋ ವರದೋ ವರಾರ್ಧಸ್ಯ ತವ ಹ್ಯಹಮ್ ॥
ತಸ್ಮಾದರ್ಧಂ ಗೃಹಾಣ ತ್ವಂ ಸ್ತ್ರೀಪುಂಸೋರ್ಯಾವದಿಚ್ಛಸಿ ।
ಅನುವಾದ
ರಾಜನೇ! ನೀನು ಪುರುಷತ್ವಪ್ರಾಪ್ತಿರೂಪೀ ವರವನ್ನು ಇಚ್ಛಿಸುತ್ತಿರುವೆ. ಅದರ ಅರ್ಧಭಾಗದ ದಾತೃನು ಮಹಾದೇವನಿರುವನು ಮತ್ತು ಅರ್ಧ ವರವನ್ನು ನಾನು ನಿನಗೆ ಕೊಡಬಲ್ಲೆ. (ಅರ್ಥಾತ್ ನಿನಗೆ ಸಂಪೂರ್ಣ ಜೀವನಕ್ಕಾಗಿ ಪ್ರಾಪ್ತವಾದ ಸ್ತ್ರೀತ್ವದಲ್ಲಿ ಅರ್ಧ ಜೀವನಕ್ಕಾಗಿ ಪುರುಷತ್ವವಾಗಿ ಪರಿವರ್ತನ ಮಾಡಬಲ್ಲೆ.) ನೀನು ಎಷ್ಟೆಷ್ಟು ಕಾಲದವರೆಗೆ ಸ್ತ್ರೀ ಮತ್ತು ಪುರುಷನಾಗಿ ಇರಲು ಬಯಸುವೆಯೋ ಅದನ್ನು ನೀನೇ ಹೇಳು.॥24½॥
ಮೂಲಮ್ - 25
ತದದ್ಭುತತರಂ ಶ್ರುತ್ವಾ ದೇವ್ಯಾ ವರಮನುತ್ತಮಮ್ ॥
ಮೂಲಮ್ - 26½
ಸಂಪ್ರಹೃಷ್ಟಮನಾ ಭೂತ್ವಾ ರಾಜಾವಾಕ್ಯಮಥಾಬ್ರವೀತ್ ।
ಯದಿ ದೇವಿ ಪ್ರಸನ್ನಾ ಮೇ ರೂಪೇಣಾಪ್ರತಿಮಾ ಭುವಿ ॥
ಮಾಸಂ ಸ್ತ್ರೀತ್ವಮುಪಾಸಿತ್ವಾ ಮಾಸಂ ಸ್ಯಾಂಪುರುಷಃ ಪುನಃ ।
ಅನುವಾದ
ದೇವೀ ಪಾರ್ವತಿಯ ಆ ಪರಮೋತ್ತಮ ಮತ್ತು ಅದ್ಭುತ ವರವನ್ನು ಕೇಳಿ ರಾಜನ ಮನಸ್ಸಿನಲ್ಲಿ ಬಹಳ ಹರ್ಷವಾಯಿತು ಹಾಗೂ ಹೀಗೆ ಹೇಳಿದನು - ದೇವಿ! ನೀನು ನನ್ನ ಮೇಲೆ ಪ್ರಸನ್ನಳಾಗಿರುವೆಯಾದರೆ ನಾನು ಒಂದು ತಿಂಗಳು ಭೂಮಿಯಲ್ಲಿ ಅನುಪಮ ರೂಪವತಿ ಸ್ತ್ರೀಯ ರೂಪದಲ್ಲಿ ಇದ್ದು, ಮತ್ತೆ ಒಂದು ತಿಂಗಳವರೆಗೆ ಪುರುಷನಾಗಿ ಇರುವೆನು.॥25-26½॥
ಮೂಲಮ್ - 27
ಈಪ್ಸಿತಂ ತಸ್ಯ ವಿಜ್ಞಾಯ ದೇವೀ ಸುರುಚಿರಾನನಾ ॥
ಮೂಲಮ್ - 28½
ಪ್ರತ್ಯುವಾಚ ಶುಭಂ ವಾಕ್ಯಮೇವಮೇವ ಭವಿಷ್ಯತಿ ।
ರಾಜನ್ಪುರುಷಭೂತಸ್ತ್ವಂ ಸ್ತ್ರೀಭಾವಂ ನ ಸ್ಮರಿಷ್ಯಸಿ ॥
ಸ್ತ್ರೀ ಭೂತಶ್ಚ ಪರಂ ಮಾಸಂ ನ ಸ್ಮರಿಷ್ಯಸಿಪೌರುಷಮ್ ।
ಅನುವಾದ
ರಾಜನ ಮನೋಭಾವವನ್ನು ತಿಳಿದು ಸುಂದರಮುಖವುಳ್ಳ ಪಾರ್ವತೀ ದೇವಿಯು ಹೀಗೆ ನುಡಿದಳು - ‘ಹಾಗೆಯೇ ಆಗುವುದು’. ರಾಜನೇ! ನೀನು ಪುರುಷರೂಪದಲ್ಲಿರುವಾಗ ನಿನಗೆ ತನ್ನ ಸ್ತ್ರೀ ಜೀವನದ ನೆನಪು ಇರಲಾರದು ಮತ್ತು ಸ್ತ್ರೀರೂಪ ದಲ್ಲಿರುವಾಗ ನಿನಗೆ ಪುರುಷಭಾವದ ಸ್ಮರಣೆ ಬರಲಾರದು.॥27-28½॥
ಮೂಲಮ್ - 29
ಏವಂ ಸ ರಾಜಾ ಪುರುಷೋ ಮಾಸಂ ಭೂತ್ವಾಥಕಾರ್ದಮಿಃ ।
ತ್ರೈಲೋಕ್ಯಸುಂದರೀ ನಾರೀ ಮಾಸಮೇಕಮಿಲಾಭವತ್ ॥
ಅನುವಾದ
ಹೀಗೆ ಕರ್ದಮಕುಮಾರ ಇಲರಾಜನು ಒಂದು ತಿಂಗಳವರೆಗೆ ಪುರುಷನಾಗಿದ್ದು, ಒಂದು ತಿಂಗಳು ತ್ರಿಲೋಕ ಸುಂದರೀ ನಾರೀ ಇಲಾಳ ರೂಪದಲ್ಲಿ ಇರತೊಡಗಿದನು.॥29॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಂಭತ್ತೇಳನೆಯ ಸರ್ಗ ಪೂರ್ಣವಾಯಿತು. ॥87॥