०८३ राज-सूय-विचारः

[ಎಂಭತ್ತೆರಡನೆಯ ಸರ್ಗ]

ಭಾಗಸೂಚನಾ

ಶ್ರೀರಾಮನು ಅಗಸ್ತ್ಯರ ಆಶ್ರಮದಿಂದ ಅಯೋಧ್ಯೆಗೆ ಮರಳಿದುದು

ಮೂಲಮ್ - 1

ಋಷೇರ್ವಚನಮಾಜ್ಞಾಯ ರಾಮಃ ಸಂಧ್ಯಾಮುಪಾಸಿತುಮ್ ।
ಅಪಾಕ್ರಾಮತ್ಸರಃ ಪುಣ್ಯಮಪ್ಸರೋಗಣಸೇವಿತಮ್ ॥

ಅನುವಾದ

ಋಷಿಗಳ ಆದೇಶ ಪಡೆದು ಶ್ರೀರಾಮಚಂದ್ರನು ಸಂಧ್ಯೋಪಾಸನೆ ಮಾಡಲು ಅಪ್ಸರೆಯರಿಂದ ಸೇವಿತ ಆ ಪವಿತ್ರ ಸರೋವರದ ಬಳಿಗೆ ಹೋದನು.॥1॥

ಮೂಲಮ್ - 2

ತತ್ರೋದಕಮುಪಸ್ಪೃಶ್ಯ ಸಂಧ್ಯಾಮನ್ವಾಸ್ಯ ಪಶ್ಚಿತಾಮ್ ।
ಆಶ್ರಮಂ ಪ್ರಾವಿಶದ್ರಾಮಃ ಕುಂಭಯೋನೇರ್ಮಹಾತ್ಮನಃ ॥

ಅನುವಾದ

ಅಲ್ಲಿ ಆಚಮನ, ಸಾಯಂಸಂಧ್ಯೋಪಾಸನೆ ಮಾಡಿ, ಶ್ರೀರಾಮನು ಪುನಃ ಮಹಾತ್ಮಾ ಕುಂಭಜರ ಆಶ್ರಮವನ್ನು ಪ್ರವೇಶಿಸಿದನು.॥2॥

ಮೂಲಮ್ - 3

ತಸ್ಯಾಗಸ್ತ್ತ್ಯೋ ಬಹುಗುಣಂ ಕಂದಮೂಲಂ ತಥೌಷಧಮ್ ।
ಶಾಲ್ಯಾದೀನಿ ಪವಿತ್ರಾಣಿಭೋಜನಾರ್ಥಮಕಲ್ಪಯತ್ ॥

ಅನುವಾದ

ಅಗಸ್ತ್ಯರು ರಾಮನ ಭೋಜನಕ್ಕಾಗಿ ಬಹುಗುಣ ಯುಕ್ತ ಕಂದ-ಮೂಲಗಳನ್ನು, ಜರಾವಸ್ಥೆಯನ್ನು ಹೋಗ ಲಾಡಿಸುವ ದಿವ್ಯ ಔಷಧಿ, ಪವಿತ್ರ ಅನ್ನ ಮೊದಲಾದ ವಸ್ತುಗಳನ್ನು ಅರ್ಪಿಸಿದರು.॥3॥

ಮೂಲಮ್ - 4

ಸ ಭುಕ್ತವಾನ್ನರಶ್ರೇಷ್ಠಸ್ತದನ್ನಮಮೃತೋಪಮಮ್ ।
ಪ್ರೀತಶ್ಚ ಪರಿತುಷ್ಟಶ್ಚ ತಾಂ ರಾತ್ರಿಂ ಸಮುಪಾವಿಶತ್ ॥

ಅನುವಾದ

ನರಶ್ರೇಷ್ಠ ಶ್ರೀರಾಮನು ಆ ಅಮೃತತುಲ್ಯ ರುಚಿಕರ ಭೋಜನ ಮಾಡಿ ಪರಮ ತೃಪ್ತನಾಗಿ, ಪ್ರಸನ್ನತೆಯಿಂದ ಆ ರಾತ್ರಿಯನ್ನು ಸಂತೋಷವಾಗಿ ಅಲ್ಲಿ ಕಳೆದನು.॥4॥

ಮೂಲಮ್ - 5

ಪ್ರಭಾತೇ ಕಾಲ್ಯಮುತ್ಥಾಯ ಕೃತ್ವಾಽಽಹ್ನಿಕಮರಿಂದಮಃ ।
ಋಷಿಂ ಸಮುಪಚಕ್ರಾಮ ಗಮನಾಯ ರಘೂತ್ತಮಃ ॥

ಅನುವಾದ

ಬೆಳಿಗ್ಗೆ ಎದ್ದು ಶತ್ರುದಮನ ರಘುಕುಲಭೂಷಣ ಶ್ರೀರಾಮನು ನಿತ್ಯಕರ್ಮವನ್ನು ಪೂರೈಸಿ, ಅಲ್ಲಿಂದ ಹೊರಡಲು ಮಹರ್ಷಿಗಳ ಬಳಿಗೆ ಹೋದನು.॥5॥

ಮೂಲಮ್ - 6

ಅಭಿವಾದ್ಯಾಬ್ರವೀದ್ರಾಮೋ ಮಹರ್ಷಿಂ ಕುಂಭಸಂಭವಮ್ ।
ಆಪೃಚ್ಛೇ ಸ್ವಾಂ ಪುರೀಂ ಗಂತುಂ ಮಾಮನುಜ್ಞಾತುಮರ್ಹಸಿ ॥

ಅನುವಾದ

ಅಲ್ಲಿ ಮಹರ್ಷಿ ಕುಂಭಜರಿಗೆ ಪ್ರಣಾಮ ಮಾಡಿ ಶ್ರೀರಾಮನು ಹೇಳಿದನು - ಮಹರ್ಷಿಗಳೇ ! ಈಗ ನಾನು ನನ್ನ ಪುರಿಗೆ ಹೋಗಲು ನಿಮ್ಮ ಆಜ್ಞೆಯನ್ನು ಬಯಸುತ್ತೇನೆ. ದಯಮಾಡಿ ನನಗೆ ಅಪ್ಪಣೆ ಕೊಡಿರಿ.॥6॥

ಮೂಲಮ್ - 7

ಧನ್ಯೋಽಸ್ಮ್ಯನುಗೃಹೀತೋಽಸ್ಮಿ ದರ್ಶನೇನ ಮಹಾತ್ಮನಃ ।
ದ್ರಷ್ಟುಂಚೈವಾಗಮಿಷ್ಯಾಮಿ ಪಾವನಾರ್ಥಮಿಹಾತ್ಮನಃ ॥

ಅನುವಾದ

ಮಹಾತ್ಮರಾದ ನಿಮ್ಮ ದರ್ಶನದಿಂದ ನಾನು ಧನ್ಯ ಹಾಗೂ ಅನುಗ್ರಹಿತನಾಗಿದ್ದೇನೆ. ಮುಂದೆ ಎಂದಾದರೂ ನನ್ನನ್ನು ಪವಿತ್ರನಾಗಿಸಿಕೊಳ್ಳಲು, ನಿಮ್ಮ ದರ್ಶನದ ಇಚ್ಛೆ ಯಿಂದ ಇಲ್ಲಿಗೆ ಬರುವೆನು.॥7॥

ಮೂಲಮ್ - 8

ತಥಾ ವದತಿ ಕಾಕುತ್ಸ್ಥೇ ವಾಕ್ಯಮದ್ಭುತದರ್ಶನಮ್ ।
ಉವಾಚ ಪರಮಪ್ರೀತೋ ಧರ್ಮನೇತ್ರಸ್ತಪೋಧನಃ ॥

ಅನುವಾದ

ಶ್ರೀರಾಮಚಂದ್ರನು ಇಂತಹ ಅದ್ಭುತ ವಚನವನ್ನಾಡಿದಾಗ, ಧರ್ಮಚಕ್ಷು ತಪೋಧನ ಅಗಸ್ತ್ಯರು ಬಹಳ ಸಂತೋಷಗೊಂಡು ಅವನಲ್ಲಿ ಹೇಳಿದರು.॥8॥

ಮೂಲಮ್ - 9

ಅತ್ಯದ್ಭುತಮಿದಂ ವಾಕ್ಯಂ ತವ ರಾಮ ಶುಭಾಕ್ಷರಮ್ ।
ಪಾವನಃ ಸರ್ವಭೂತಾನಾಂ ತ್ವಮೇವ ರಘುನಂದನ ॥

ಅನುವಾದ

ಶ್ರೀರಾಮಾ! ನಿನ್ನ ಸುಂದರ ವಚನ ಅದ್ಭುತವಾಗಿದೆ. ರಘುನಂದನ! ಸಮಸ್ತ ಪ್ರಾಣಿಗಳನ್ನು ಪವಿತ್ರ ಮಾಡುವವನು ನೀನೇ ಆಗಿರುವೆ.॥9॥

ಮೂಲಮ್ - 10

ಮುಹೂರ್ತಮಪಿ ರಾಮ ತ್ವಾಂ ಯೇಽನುಪಶ್ಯಂತಿಕೇಚನ ।
ಪಾವಿತಾಃಸ್ವರ್ಗಭೂತಾಶ್ಚ ಪೂಜ್ಯಾಸ್ತೇ ತ್ರಿದಿವೇಶ್ವರೈಃ ॥

ಅನುವಾದ

ಶ್ರೀರಾಮ! ಯಾರಾದರೂ ಒಂದು ಮುಹೂರ್ತವಾದರೂ ನಿನ್ನ ದರ್ಶನ ಮಾಡುವವನು ಪವಿತ್ರನಾಗಿ ಸ್ವರ್ಗಕ್ಕೆ ಅಧಿಕಾರಿಯಾಗಿ, ದೇವತೆಗಳಿಗೂ ಪೂಜನೀಯನಾಗುತ್ತಾನೆ.॥10॥

ಮೂಲಮ್ - 11

ಯೇ ಚ ತ್ವಾಂ ಘೋರಚಕ್ಷುರ್ಭಿಃ ಪಶ್ಯಂತಿ ಪ್ರಾಣಿನೋ ಭುವಿ ।
ಹತಾಸ್ತೇ ಯಮದಂಡೇನ ಸದ್ಯೋ ನಿರಯಗಾಮಿನಃ ॥

ಅನುವಾದ

ಈ ಭೂತಳದಲ್ಲಿ ನಿನ್ನನ್ನು ಕ್ರೂರದೃಷ್ಟಿಯಿಂದ ನೋಡುವವನು ಯಮದಂಡದಿಂದ ಹೊಡೆಯಲ್ಪಟ್ಟು ತತ್ಕಾಲ ನರಕಕ್ಕೆ ಬೀಳುವನು.॥11॥

ಮೂಲಮ್ - 12

ಈದೃಶಸ್ತ್ವಂ ರಘುಶ್ರೇಷ್ಠ ಪಾವನಃ ಸರ್ವದೇಹಿನಾಮ್ ।
ಭುವಿ ತ್ವಾಂ ಕಥಯಂತೋ ಹಿ ಸಿದ್ಧಿಮೇಷ್ಯಂತಿ ರಾಘವ ॥

ಅನುವಾದ

ರಘುಶ್ರೇಷ್ಠನೇ! ಇಂತಹ ಐಶ್ವರ್ಯಶಾಲಿ ನೀನು ಸಮಸ್ತ ದೇಹಧಾರಿಗಳನ್ನು ಪವಿತ್ರ ಮಾಡು ವವನಾಗಿರುವೆ. ರಘುನಂದನ! ಪೃಥಿವಿಯಲ್ಲಿ ನಿನ್ನ ಕಥೆ ಹೇಳುವವರು ಸಿದ್ಧಿಯನ್ನು ಪಡೆಯುತ್ತಾರೆ.॥12॥

ಮೂಲಮ್ - 13

ತ್ವಂ ಗಚ್ಛಾರಿಷ್ಟಮವ್ಯಗ್ರಃ ಪಂಥಾನಮಕುತೋಭಯಮ್ ।
ಪ್ರಶಾಧಿ ರಾಜ್ಯಂ ಧರ್ಮೇಣ ಗತಿರ್ಹಿ ಜಗತೋ ಭವಾನ್ ॥

ಅನುವಾದ

ನೀನು ನಿಶ್ಚಿಂತನಾಗಿ ಕ್ಷೇಮವಾಗಿ ತೆರಳು. ನಿನ್ನ ಮಾರ್ಗದಲ್ಲಿ ಎಲ್ಲಿಯೂ ಭಯ ಇಲ್ಲದಿರಲಿ. ನೀನು ಧರ್ಮಪೂರ್ವಕ ರಾಜ್ಯವಾಳು; ಏಕೆಂದರೆ ನೀನೇ ಜಗತ್ತಿನ ಪರಮಾಶ್ರಯನಾಗಿರುವೆ.॥13॥

ಮೂಲಮ್ - 14

ಏವಮುಕ್ತಸ್ತು ಮುನಿನಾ ಪ್ರಾಂಜಲಿಃ ಪ್ರಗ್ರಹೋ ನೃಪಃ ।
ಅಭ್ಯವಾದಯತ ಪ್ರಾಜ್ಞಸ್ತಮೃಷಿಂ ಸತ್ಯಶೀಲಿನಮ್ ॥

ಅನುವಾದ

ಮುನಿಯು ಹೀಗೆ ಹೇಳಿದಾಗ ಪ್ರಾಜ್ಞನಾದ ರಾಜ ಶ್ರೀರಾಮನು ಭುಜಗಳನ್ನೆತ್ತಿ ಕೈಮುಗಿದು ಆ ಸತ್ಯಶೀಲ ಮಹರ್ಷಿಗಳಿಗೆ ಪ್ರಣಾಮಮಾಡಿದನು.॥14॥

ಮೂಲಮ್ - 15

ಅಭಿವಾದ್ಯ ಋಷಿಶ್ರೇಷ್ಠಂ ತಾಂಶ್ಚ ಸರ್ವಾಂಸ್ತಪೋಧನಾನ್ ।
ಅಧ್ಯಾರೋಹತ್ತದವ್ಯಗ್ರಃ ಪುಷ್ಪಕಂ ಹೇಮಭೂಷಿತಮ್ ॥

ಅನುವಾದ

ಹೀಗೆ ಮುನಿವರ ಅಗಸ್ತ್ಯರಿಗೆ ಹಾಗೂ ಇತರ ಎಲ್ಲ ತಪೋವನ ಋಷಿಗಳಿಗೆ ಯಥೋಚಿತ ಅಭಿವಾದನ ಮಾಡಿ ಅವ್ಯಗ್ರನಾಗಿ ಸುವರ್ಣಭೂಷಿತ ಪುಷ್ಪಕ ವಿಮಾನವನ್ನು ಏರಿದನು.॥15॥

ಮೂಲಮ್ - 16

ತಂ ಪ್ರಯಾಂತಂ ಮುನಿಗಣಾ ಆಶೀರ್ವಾದೈಃಸಮಂತತಃ ।
ಅಪೂಜಯನ್ಮಹೇಂದ್ರಾಭಂ ಸಹಸ್ರಾಕ್ಷಮಿವಾಮರಾಃ ॥

ಅನುವಾದ

ದೇವತೆಗಳು ಇಂದ್ರನನ್ನು ಪೂಜಿಸುವಂತೆಯೇ ಹೊರಟು ನಿಂತ ಮಹೇಂದ್ರತುಲ್ಯ ತೇಜಸ್ವೀ ಶ್ರೀರಾಮನನ್ನು ಪೂಜಿಸಿ, ಋಷಿಗಳೆಲ್ಲರೂ ಆಶೀರ್ವದಿಸಿದರು.॥16॥

ಮೂಲಮ್ - 17

ಸ್ವಸ್ಥ ಸ ದದೃಶೇ ರಾಮಃ ಪುಷ್ಪಕೇ ಹೇಮಭೂಷಿತೇ ।
ಶಶೀ ಮೇಘಸಮೀಪಸ್ಥೋ ಯಥಾ ಜಲಧರಾಗಮೇ ॥

ಅನುವಾದ

ಆ ಸ್ವರ್ಣಭೂಷಿತ ಪುಷ್ಪಕವಿಮಾನದಲ್ಲಿ ಆಕಾಶದಲ್ಲಿ ಸ್ಥಿತನಾದ ಶ್ರೀರಾಮನು ವರ್ಷಾಕಾಲದ ಮೇಘಗಳ ಬಳಿ ಇರುವ ಚಂದ್ರನಂತೆ ಕಂಡುಬರುತ್ತಿದ್ದನು.॥17॥

ಮೂಲಮ್ - 18

ತತೋಽರ್ಧದಿವಸೇ ಪ್ರಾಪ್ತೇ ಪೂಜ್ಯಮಾನಸ್ತತಸ್ತತಃ ।
ಅಯೋಧ್ಯಾಂ ಪ್ರಾಪ್ಯ ಕಾಕುತ್ಸ್ಥೋ ಮಧ್ಯಕಕ್ಷಾಮವಾತರತ್ ॥

ಅನುವಾದ

ಅನಂತರ ಅಲ್ಲಲ್ಲಿ ಸಮ್ಮಾನ ಪಡೆಯುತ್ತಾ ಶ್ರೀರಘುರಾಮನು ಮಧ್ಯಾಹ್ನ ಸಮಯಕ್ಕೆ ಅಯೋಧ್ಯೆಗೆ ತಲುಪಿ ನಡು ಅಂಗಳದಲ್ಲಿ ಇಳಿದನು.॥18॥

ಮೂಲಮ್ - 19

ತತೋ ವಿಸೃಜ್ಯ ರುಚಿರಂ ಪುಷ್ಪಕಂ ಕಾಮಗಾಮಿನಮ್ ।
ವಿಸರ್ಜಯಿತ್ವಾ ಗಚ್ಛೇತಿ ಸ್ವಸ್ತಿ ತೇಽಸ್ತ್ವಿತಿ ಚ ಪ್ರಭುಃ ॥

ಅನುವಾದ

ಬಳಿಕ ಇಚ್ಛಾನುಸಾರ ಚಲಿಸುವ ಆ ಸುಂದರ ಪುಷ್ಪಕ ವಿಮಾನವನ್ನು ಅಲ್ಲೇ ಬಿಟ್ಟು ಪ್ರಭು ಶ್ರೀರಾಮನು ಅದರ ಬಳಿ ಹೇಳಿದನು-ಈಗ ನೀನು ಹೋಗು, ನಿನಗೆ ಮಂಗಳವಾಗಲಿ.॥19॥

ಮೂಲಮ್ - 20

ಕಕ್ಷಾಂತರಸ್ಥಿತಂ ಕ್ಷಿಪ್ರಂ ದ್ವಾಸ್ಸ್ಥಂ ರಾಮೋಽಬ್ರವೀದ್ವಚಃ ।
ಲಕ್ಷ್ಮಣಂ ಭರತಂ ಚೈವ ಗತ್ವಾ ತೌ ಲಘುವಿಕ್ರವೌ ।
ಮಮಾಗಮನಮಾಖ್ಯಾಯ ಶಬ್ದಾಪಯತ ಮಾ ಚಿರಮ್ ॥

ಅನುವಾದ

ಮತ್ತೆ ಶ್ರೀರಾಮನು ಅಲ್ಲೇ ನಿಂತಿದ್ದ ದ್ವಾರಪಾಲಕರಲ್ಲಿ ಹೇಳಿದನು - ನೀನು ಈಗಲೇ ಹೋಗಿ ಶೀಘ್ರಪರಾಕ್ರಮಿ ಭರತ ಮತ್ತು ಲಕ್ಷ್ಮಣರಿಗೆ ನಾನು ಬಂದ ಸೂಚನೆ ಕೊಟ್ಟು, ಅವರನ್ನು ಬೇಗನೆ ಕರೆದು ತಾ.॥20॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಂಭತ್ತೆರಡನೆಯ ಸರ್ಗ ಪೂರ್ಣವಾಯಿತು. ॥82॥