०८१ शापः

[ಎಂಭತ್ತನೆಯ ಸರ್ಗ]

ಭಾಗಸೂಚನಾ

ದಂಡರಾಜನು ಶುಕ್ರಾಚಾರ್ಯರ ಕನ್ಯೆಯನ್ನು ಬಲಾತ್ಕರಿಸಿದುದು

ಮೂಲಮ್ - 1

ಏತದಾಖ್ಯಾಯ ರಾಮಾಯ ಮಹರ್ಷಿಃಕುಂಭಸಂಭವಃ ।
ಅಸ್ಯಾಮೇವಾಪರಂ ವಾಕ್ಯಂ ಕಥಾಯಾಮುಪಚಕ್ರಮೇ ॥

ಅನುವಾದ

ಮಹರ್ಷಿ ಕುಂಭಜರು ಶ್ರೀರಾಮನಿಗೆ ಇಷ್ಟು ಕಥೆ ಹೇಳಿ, ಮುಂದಿನದನ್ನು ಹೇಳತೊಡಗಿದರು.॥1॥

ಮೂಲಮ್ - 2

ತತಃ ಸ ದಂಡಃ ಕಾಕುತ್ಸ್ಥ ಬಹುವರ್ಷಗಣಾಯುತಮ್ ।
ಅಕರೋತ್ತತ್ರ ದಾಂತಾತ್ಮಾ ರಾಜ್ಯಂ ನಿಹತಕಂಟಕಮ್ ॥

ಅನುವಾದ

ಕಾಕುತ್ಸ್ಥ! ಅನಂತರ ರಾಜಾ ದಂಡನು ಮನ-ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಬಹಳ ವರ್ಷಗಳವರೆಗೆ ಅಕಂಟಕ ರಾಜ್ಯವನ್ನು ಆಳಿದನು.॥2॥

ಮೂಲಮ್ - 3

ಅಥ ಕಾಲೇ ತು ಕಸ್ಮಿಂಶ್ಚಿದ್ರಾಜಾ ಭಾರ್ಗವಮಾಶ್ರಮಮ್ ।
ರಮಣೀಯಮುಪಕ್ರಾಮಚ್ಚೈತ್ರೇ ಮಾಸಿ ಮನೋರಮೇ ॥

ಅನುವಾದ

ಬಳಿಕ ಯಾವಾಗಲೋ ರಾಜಾ ಮನೋರಮ ಚೈತ್ರಮಾಸದಲ್ಲಿ ಶುಕ್ರಾಚಾರ್ಯರ ರಮಣೀಯ ಆಶ್ರಮಕ್ಕೆ ಬಂದನು.॥3॥

ಮೂಲಮ್ - 4

ತತ್ರ ಭಾರ್ಗವಕನ್ಯಾಂ ಸ ರೂಪೇಣಾಪ್ರತಿಮಾಂ ಭುವಿ ।
ವಿಚರಂತೀಂ ವನೋದ್ದೇಶೇದಂಡೋಽಪಶ್ಯದನುತ್ತಮಾಮ್ ॥

ಅನುವಾದ

ಅಲ್ಲಿ ಶುಕ್ರಾಚಾರ್ಯರ ಸರ್ವೋತ್ತಮ, ಅತುಲ ಸುಂದರೀ, ಕನ್ಯೆಯು ವನದಲ್ಲಿ ಸಂಚರಿಸುತ್ತಿರುವುದನ್ನು ದಂಡನು ನೋಡಿದನು.॥4॥

ಮೂಲಮ್ - 5

ಸ ದೃಷ್ಟ್ವಾ ತಾಂ ಸುದುರ್ಮೇಧಾ ಅನಂಗಶರಪೀಡಿತಃ ।
ಅಭಿಗಮ್ಯ ಸುಸಂವಿಗ್ನಾಂ ಕನ್ಯಾಂ ವಚನಮಬ್ರವೀತ್ ॥

ಅನುವಾದ

ಆಕೆಯನ್ನು ನೋಡುತ್ತಲೇ ಆ ದುಷ್ಟಬುದ್ಧಿಯುಳ್ಳ ರಾಜನು ಕಾಮದೇವನ ಬಾಣದಿಂದ ಪೀಡಿತನಾಗಿ ಆಕೆಯ ಬಳಿಗೆ ಹೋಗಿ, ಹೆದರಿದ ಆ ಕನ್ಯೆಯ ಬಳಿ ಹೇಳಿದನು.॥5॥

ಮೂಲಮ್ - 6

ಕುತಸ್ತ್ವಮಸಿ ಸುಶ್ರೋಣಿ ಕಸ್ಯ ವಾಸಿ ಸುತಾ ಶುಭೇ ।
ಪೀಡಿತೋಽಹಮನಂಗೇನ ಪೃಚ್ಛಾಮಿ ತ್ವಾಂ ಶುಭಾನನೇ ॥

ಅನುವಾದ

ಸುಂದರೀ! ನೀನು ಎಲ್ಲಿಂದ ಬಂದಿರುವೆ? ನೀನು ಯಾರ ಪುತ್ರಿಯಾಗಿರುವೆ? ಶುಭಾನನೇ! ನಾನು ಕಾಮದೇವನಿಂದ ಪೀಡಿತನಾಗಿದ್ದೇನೆ. ಅದಕ್ಕಾಗಿ ನಿನ್ನ ಪರಿಚಯ ಕೇಳುತ್ತಿದ್ದೇನೆ.॥6॥

ಮೂಲಮ್ - 7

ತಸ್ಯ ತ್ವೇವಂ ಬ್ರುವಾಣಸ್ಯ ಮೋಹೋನ್ಮತ್ತಸ್ಯ ಕಾಮಿನಃ ।
ಭಾರ್ಗವೀ ಪ್ರತ್ಯುವಾಚೇದಂ ವಚಃ ಸಾನುನಯಂ ತ್ವಿದಮ್ ॥

ಅನುವಾದ

ಮೋಹದಿಂದ ಉನ್ಮತ್ತನಾದ ಆ ಕಾಮೀ ರಾಜನು ಹೀಗೆ ಹೇಳತೊಡಗಿದಾಗ ಭೃಗುಕನ್ಯೆಯು ವಿನಯ ಪೂರ್ವಕ ಹೀಗೆ ಉತ್ತರಿಸಿದಳು.॥7॥

ಮೂಲಮ್ - 8

ಭಾರ್ಗವಸ್ಯ ಸುತಾಂ ವಿದ್ಧಿ ದೇವಸ್ಯಾಕ್ಲಿಷ್ಟಕರ್ಮಣಃ ।
ಅರಜಾಂ ನಾಮ ರಾಜೇಂದ್ರ ಜ್ಯೇಷ್ಠಾಮಾಶ್ರಮವಾಸಿನೀಮ್ ॥

ಅನುವಾದ

ರಾಜೇಂದ್ರನೇ! ನಾನು ಪುಣ್ಯಕರ್ಮಾ ಶುಕ್ರಾಚಾರ್ಯರ ಹಿರಿಯ ಮಗಳಾಗಿದ್ದೇನೆ. ನನ್ನ ಹೆಸರು ಅರಜಾ ಎಂದಿದ್ದು, ಇದೇ ಆಶ್ರಮದಲ್ಲಿ ವಾಸಿಸುತ್ತಿದ್ದೇನೆ, ಇದು ನಿನಗೆ ತಿಳಿಯಬೇಕಾಗಿತ್ತು.॥8॥

ಮೂಲಮ್ - 9

ಮಾಂ ಮಾ ಸ್ಪೃಶ ಬಲಾದ್ರಾಜನ್ ಕನ್ಯಾ ಪಿತೃವಶಾ ಹ್ಯಹಮ್ ।
ಗುರುಃ ಪಿತಾ ಮೇ ರಾಜೇಂದ್ರ ತ್ವಂ ಚ ಶಿಷ್ಯೋ ಮಹಾತ್ಮನಃ ॥

ಅನುವಾದ

ರಾಜನೇ! ಬಲಾತ್ಕಾರವಾಗಿ ನನ್ನನ್ನು ಸ್ಪರ್ಶಿಸಬೇಡ. ನಾನು ಪಿತನ ಅಧೀನದಲ್ಲಿರುವ ಕನ್ಯೆಯಾಗಿದ್ದೇನೆ. ರಾಜೇಂದ್ರನೇ! ನನ್ನ ತಂದೆ ನಿನ್ನ ಗುರುಗಳಾಗಿದ್ದಾರೆ. ನೀನು ಆ ಮಹಾತ್ಮರ ಶಿಷ್ಯನಾಗಿರುವೆ.॥9॥

ಮೂಲಮ್ - 10

ವ್ಯಸನಂ ಸುಮಹತ್ಕ್ರುದ್ಧಃ ಸ ತೇ ದದ್ಯಾನ್ಮಹಾತಪಾಃ ।
ಯದಿ ವಾನ್ಯನ್ಮಯಾ ಕಾರ್ಯಂ ಧರ್ಮದೃಷ್ಟೇನ ಸತ್ಪಥಾ ॥

ಮೂಲಮ್ - 11

ವರಯಸ್ವ ನೃಪಶ್ರೇಷ್ಠ ಪಿತರಂ ಮೇ ಮಹಾದ್ಯುತಿಮ್ ।
ಅನ್ಯಥಾ ತು ಲಂ ತುಭ್ಯಂ ಭವೇದ್ಘೋರಾಭಿಸಂಹಿತಮ್ ॥

ಅನುವಾದ

ನರಶ್ರೇಷ್ಠನೇ! ಅವರು ಮಹಾತಪಸ್ವಿಯಾಗಿದ್ದು, ಒಂದು ವೇಳೆ ಕುಪಿತರಾದರೆ ನೀನು ದೊಡ್ಡ ವಿಪತ್ತಿನಲ್ಲಿ ಬೀಳುವೆ. ನನ್ನಲ್ಲಿ ನಿನಗೆ ಬೇರೆ ಕಾರ್ಯವಿದ್ದರೆ, (ನೀನು ನನ್ನನ್ನು ಭಾರ್ಯೆ ಯಾಗಿಸಲು ಬಯಸುವೆಯಾದರೆ) ಧರ್ಮಶಾಸ್ತ್ರೋಕ್ತ ಸನ್ಮಾರ್ಗದಲ್ಲಿ ನಡೆದು ನನ್ನ ಮಹಾತೇಜಸ್ವೀ ತಂದೆಯ ಬಳಿ ನನ್ನನ್ನು ಬೇಡಿಕೋ, ಇಲ್ಲದಿದ್ದರೆ ನಿನಗೆ ತನ್ನ ಸ್ವೇಚ್ಛಾಚಾರದ ಭಯಾನಕ ಭಾರೀ ಫಲ ಭೋಗಿಸಬೇಕಾದೀತು.॥10-11॥

ಮೂಲಮ್ - 12

ಕ್ರೋಧೇನ ಹಿ ಪಿತಾ ಮೇಽಸೌತ್ರೈಲೋಕ್ಯಮಪಿ ನಿರ್ದಹೇತ್ ।
ದಾಸ್ಯತೇ ಚಾನವದ್ಯಾಂಗ ತವಮಾ ಯಾಚಿತಃ ಪಿತಾ ॥

ಅನುವಾದ

ನನ್ನ ತಂದೆಯು ತನ್ನ ಕ್ರೋಧಾಗ್ನಿಯಿಂದ ಇಡೀ ತ್ರಿಲೋಕವನ್ನು ಸುಟ್ಟುಬಿಡಬಲ್ಲರು. ಆದ್ದರಿಂದ ನರೇಂದ್ರನೇ! ನೀನು ಬಲಾತ್ಕಾರ ಮಾಡಬೇಡ. ನೀನು ಯಾಚಿಸಿದರೆ ತಂದೆಯವರು ನನ್ನನ್ನು ಖಂಡಿತವಾಗಿ ನಿನ್ನ ಕೈಗೆ ಒಪ್ಪಿಸುವರು.॥12॥

ಮೂಲಮ್ - 13

ಏವಂ ಬ್ರುವಾಣಾಮರಜಾಂ ದಂಡಃ ಕಾಮವಶಂ ಗತಃ ।
ಪ್ರತ್ಯುವಾಚ ಮದೋನ್ಮತ್ತಃ ಶಿರಸ್ಯಾಧಾಯ ಚಾಂಜಲಿಮ್ ॥

ಅನುವಾದ

ಅರಜಾ ಹೀಗೆ ಹೇಳುತ್ತಿರುವಂತೆಯೇ ಕಾಮಕ್ಕೆ ಅಧೀನನಾದ ದಂಡನು ಮದೋನ್ಮತ್ತನಾಗಿ ಕೈಗಳನ್ನು ತಲೆಯ ಮೇಲೆ ಜೋಡಿಸಿಕೊಂಡು ಹೀಗೆ ಉತ್ತರಿಸಿದನು.॥13॥

ಮೂಲಮ್ - 14

ಪ್ರಸಾದಂ ಕುರು ಸುಶ್ರೋಣಿ ನ ಕಾಲಂ ಕ್ಷೇಪ್ತುಮರ್ಹಸಿ ।
ತ್ವತ್ಕೃತೇ ಹಿ ಮಮ ಪ್ರಾಣಾ ವಿದೀರ್ಯಂತೇ ವರಾನನೇ ॥

ಅನುವಾದ

ಸುಂದರೀ! ಕೃಪೆದೋರು, ಸಮಯ ಕಳೆಯಬೇಡ. ವರಾನನೇ! ನಿನಗಾಗಿ ನನ್ನ ಪ್ರಾಣಗಳೇ ಹೊರಗೆ ಹೊರಟುಹೋಗುತ್ತಿವೆ.॥14॥

ಮೂಲಮ್ - 15

ತ್ವಾಂ ಪ್ರಾಪ್ಯ ತು ವಧೋ ವಾಪಿ ಪಾಪಂ ವಾಪಿ ಸುದಾರುಣಮ್ ।
ಭಕ್ತಂ ಭಜಸ್ವ ಮಾಂ ಭೀರು ಭಜಮಾನಂ ಸುವಿಹ್ವಲಮ್ ॥

ಅನುವಾದ

ನಿನ್ನನ್ನು ಪಡೆದ ಮೇಲೆ ನಾನು ಸತ್ತುಹೋದರೂ ನನಗೆ ಅತ್ಯಂತ ದಾರುಣ ದುಃಖ ಪ್ರಾಪ್ತವಾದರೂ ಯಾವುದೇ ಚಿಂತೆ ಇಲ್ಲ. ಭೀರು! ನಾನು ನಿನ್ನ ಭಕ್ತನಾಗಿದ್ದೇನೆ. ಅತ್ಯಂತ ವ್ಯಾಕುಲನಾದ ಸೇವಕನಾದ ನನ್ನನ್ನು ಸ್ವೀಕರಿಸು.॥15॥

ಮೂಲಮ್ - 16

ಏವಮುಕ್ತ್ವಾ ತು ತಾಂ ಕನ್ಯಾಂ ದೋರ್ಭಾಂ ಪ್ರಾಪ್ಯಬಲಾದ್ಬಲೀ ।
ವಿಸ್ಫುರಂತಿಂ ಯಥಾಕಾಮಂ ಮೈಥುನಾಯೋಪಚಕ್ರಮೇ ॥

ಅನುವಾದ

ಹೀಗೆ ಹೇಳಿ ಆ ಬಲಿಷ್ಠ ರಾಜನು ಆ ಭಾರ್ಗವ ಕನ್ಯೆಯನ್ನು ಬಲಾತ್ಕಾರದಿಂದ ಅಪ್ಪಿಕೊಂಡನು. ಅವಳು ಬಿಡಿಸಿಕೊಳ್ಳಲು ಒದ್ದಾಡಿದಳು, ಆದರೂ ಅವನು ತನ್ನ ಇಚ್ಛಾನುಸಾರ ಆಕೆಯೊಂದಿಗೆ ಸಮಾಗಮ ಮಾಡಿದನು.॥16॥

ಮೂಲಮ್ - 17

ತಮನರ್ಥಂ ಮಹಾಘೋರಂ ದಂಡಃ ಕೃತ್ವಾ ಸುದಾರುಣಮ್ ।
ನಗರಂ ಪ್ರಯಯಾವಾಶು ಮಧುಮಂತಮನುತ್ತಮಮ್ ॥

ಅನುವಾದ

ಆ ಅತ್ಯಂತ ದಾರುಣ, ಭಯಂಕರ ಅನರ್ಥಗೈದು ದಂಡನು ಕೂಡಲೇ ತನ್ನ ಉತ್ತಮ ನಗರ ಮಧುಮಂತಕ್ಕೆ ಹೊರಟುಹೋದನು.॥17॥

ಮೂಲಮ್ - 18

ಅರಜಾಪಿ ರುದಂತೀ ಸಾ ಆಶ್ರಮಸ್ಯಾವಿದೂರತಃ ।
ಪ್ರತೀಕ್ಷತೇ ಸುಸಂತ್ರಸ್ತಾ ಪಿತರಂ ದೇವಸಂನಿಭಮ್ ॥

ಅನುವಾದ

ಅರಜಾ ಕೂಡ ಭಯಗೊಂಡು ಅಳುತ್ತಾ ಆಶ್ರಮದ ಬಳಿಯಲ್ಲೇ ತನ್ನ ದೇವತುಲ್ಯ ತಂದೆಯು ಬರುವ ದಾರಿ ನೋಡತೊಡಗಿದಳು.॥18॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಂಭತ್ತನೆಯ ಸರ್ಗ ಪೂರ್ಣವಾಯಿತು. ॥80॥