[ಎಪ್ಪತ್ತೊಂಭತ್ತನೆಯ ಸರ್ಗ]
ಭಾಗಸೂಚನಾ
ಇಕ್ಷ್ವಾಕುಪುತ್ರ ದಂಡಕರಾಜನ ರಾಜ್ಯಭಾರ
ಮೂಲಮ್ - 1
ತದದ್ಭುತತಮಂ ವಾಕ್ಯಂ ಶ್ರುತ್ವಾಗಸ್ತ್ಯಸ್ಯ ರಾಘವಃ ।
ಗೌರವಾದ್ವಿಸ್ಮಯಾಚ್ಚೈವ ಭೂಯಃ ಪ್ರಷ್ಟುಂ ಪ್ರಚಕ್ರಮೇ ॥
ಅನುವಾದ
ಅಗಸ್ತ್ಯರ ಈ ಅತ್ಯಂತ ಅದ್ಭುತ ಮಾತನ್ನು ಕೇಳಿ ಶ್ರೀರಘುನಾಥನ ಮನಸ್ಸಿನಲ್ಲಿ ಅವರ ಕುರಿತು ವಿಶೇಷ ಗೌರವ ಉಂಟಾಗಿ, ವಿಸ್ಮಿತನಾಗಿ ಪುನಃ ಅವರಲ್ಲಿ ಕೇಳಿದನು.॥1॥
ಮೂಲಮ್ - 2
ಭಗವಂಸ್ತದ್ವನಂ ಘೋರಂ ತಪಸ್ತಪ್ಯತಿ ಯತ್ರ ಸಃ ।
ಶ್ವೇತೋ ವೈದರ್ಭಕೋ ರಾಜಾ ಕಥಂ ತದಮೃಗದ್ವಿಜಮ್ ॥
ಅನುವಾದ
ಪೂಜ್ಯರೇ! ವಿದರ್ಭದೇಶದ ರಾಜಾಶ್ವೇತನು ಘೋರ ತಪಸ್ಸು ಮಾಡುತ್ತಿದ್ದ ಆ ಭಯಂಕರ ವನವು ಪಶು-ಪಕ್ಷಿಗಳಿಂದ ರಹಿತ ಏಕಾಯಿತು.॥2॥
ಮೂಲಮ್ - 3
ತದ್ವನಂ ಸ ಕಥಂ ರಾಜಾ ಶೂನ್ಯಂ ಮನುಜವರ್ಜಿತಮ್ ।
ತಪಶ್ಚರ್ತುಂಪ್ರವಿಷ್ಠಃ ಸ ಶ್ರೋತುಮಿಚ್ಛಾಮಿ ತತ್ತ್ವತಃ ॥
ಅನುವಾದ
ಆ ವಿದರ್ಭರಾಜನು ಆ ಶೂನ್ಯ ನಿರ್ಜನ ವನಕ್ಕೆ ತಪಸ್ಸು ಮಾಡಲು ಏಕೆ ಹೋದನು? ಇದನ್ನು ಯಥಾರ್ಥವಾಗಿ ತಿಳಿಯಲು ನಾನು ಬಯಸುತ್ತೇನೆ.॥3॥
ಮೂಲಮ್ - 4
ರಾಮಸ್ಯ ವಚನಂ ಶ್ರುತ್ವಾ ಕೌತೂಹಲಸಮನ್ವಿತಮ್ ।
ವಾಕ್ಯಂ ಪರಮತೇಜಸ್ವೀ ವಕ್ತುಮೇವೋಪಚಕ್ರಮೇ ॥
ಅನುವಾದ
ಶ್ರೀರಾಮನ ಕುತೂಹಲಯುಕ್ತ ಮಾತನ್ನು ಕೇಳಿ ಆ ಪರಮ ತೇಜಸ್ವೀ ಮಹರ್ಷಿಗಳು ಪುನಃ ಹೀಗೆ ಹೇಳತೊಡಗಿದರು.॥4॥
ಮೂಲಮ್ - 5
ಪುರಾ ಕೃತಯುಗೇ ರಾಮ ಮನುರ್ದಂಡಧರಃ ಪ್ರಭುಃ ।
ತಸ್ಯಪುತ್ರೋ ಮಹಾನಾಸೀದಿಕ್ಷ್ವಾಕುಃ ಕುಲನಂದನಃ ॥
ಅನುವಾದ
ಶ್ರೀರಾಮ! ಹಿಂದೆ ಕೃತಯುಗದಲ್ಲಿ ದಂಡಧಾರೀ ಮನುಮಹಾರಾಜನು ಭೂತಳದಲ್ಲಿ ರಾಜ್ಯವಾಳುತ್ತಿದ್ದನು. ಅವನ ಓರ್ವ ಜ್ಯೇಷ್ಠಪುತ್ರ ಇಕ್ಷ್ವಾಕು ಆಗಿದ್ದನು. ರಾಜಕುಮಾರ ಇಕ್ಷ್ವಾಕು ತನ್ನ ಕುಲವನ್ನು ಆನಂದಗೊಳಿಸುವವನಾಗಿದ್ದನು.॥5॥
ಮೂಲಮ್ - 6
ತಂ ಪುತ್ರಂ ಪೂರ್ವಕಂ ರಾಜ್ಯೇ ನಿಕ್ಷಿಪ್ಯ ಭುವಿದುರ್ಜಯಮ್ ।
ಪೃಥಿವ್ಯಾಂ ರಾಜವಂಶಾನಾಂ ಭವ ಕರ್ತೇತ್ಯುವಾಚ ತಮ್ ॥
ಅನುವಾದ
ತನ್ನ ಜ್ಯೇಷ್ಠ ಹಾಗೂ ದುರ್ಜಯ ಪುತ್ರನನ್ನು ಭೂಮಂಡಲದ ರಾಜ್ಯದಲ್ಲಿ ಸ್ಥಾಪಿಸಿ ಮನುವು ಹೇಳಿದನು- ಮಗನೇ! ನೀನು ಪೃಥಿವಿಯಲ್ಲಿ ರಾಜವಂಶವನ್ನು ಸೃಷ್ಟಿಸು.॥6॥
ಮೂಲಮ್ - 7
ತಥೈವ ಚ ಪ್ರತಿಜ್ಞಾತಂ ಪಿತುಃ ಪುತ್ರೇಣ ರಾಘವ ।
ತತಃ ಪರಮಸಂತುಷ್ಟೋ ಮನುಃ ಪುತ್ರಮುವಾಚ ಹ ॥
ಅನುವಾದ
ರಘುನಂದನ! ಪುತ್ರ ಇಕ್ಷ್ವಾಕು ತಂದೆಯ ಮುಂದೆ ಹಾಗೇ ಮಾಡುವೆನೆಂದು ಪ್ರತಿಜ್ಞೆ ಮಾಡಿದನು. ಇದರಿಂದ ಮನು ಬಹಳ ಸಂತುಷ್ಟನಾಗಿ ತನ್ನ ಮಗನಲ್ಲಿ ಹೇಳಿದನು.॥7॥
ಮೂಲಮ್ - 8
ಪ್ರೀತೋಸ್ಮಿ ಪರಮೋದಾರ ಕರ್ತಾ ಚಾಸಿ ನ ಸಂಶಯಃ ।
ದಂಡೇನ ಚ ಪ್ರಜಾ ರಕ್ಷಮಾ ಚ ದಂಡಮಕಾರಣೇ ॥
ಅನುವಾದ
ಪರಮೋದಾರ ಪುತ್ರನೇ! ನಾನು ನಿನ್ನ ಮೇಲೆ ಬಹಳ ಪ್ರಸನ್ನನಾಗಿದ್ದೇನೆ. ನೀನು ರಾಜವಂಶದ ಸೃಷ್ಟಿ ಮಾಡುವಿ ಎಂಬುದರಲ್ಲಿ ಸಂಶಯವೇ ಇಲ್ಲ. ನೀನು ದಂಡದಿಂದ ದುಷ್ಟರನ್ನು ದಮನ ಮಾಡುತ್ತ ಪ್ರಜೆಯನ್ನು ರಕ್ಷಿಸು; ಆದರೆ ಅಪರಾಧವಿಲ್ಲದೆ ಶಿಕ್ಷೆ ಕೊಡಬೇಡ.॥8॥
ಮೂಲಮ್ - 9
ಅಪರಾಧಿಷು ಯೋ ದಂಡಃ ಪಾತ್ಯತೇ ಮಾನವೇಷು ವೈ ।
ಸ ದಂಡೋ ವಿಧಿವನ್ಮುಕ್ತಃ ಸ್ವರ್ಗಂ ನಯತಿ ಪಾರ್ಥಿವಮ್ ॥
ಅನುವಾದ
ಅಪರಾಧಿ ಮನುಷ್ಯರಿಗೆ ಕೊಡುವ ಶಿಕ್ಷೆಯು ವಿಧಿಪೂರ್ವಕವಾಗಿ ಕೊಟ್ಟು, ಶಿಕ್ಷೆಯು ರಾಜನಿಗೆ ಸ್ವರ್ಗಲೋಕ ಪ್ರಾಪ್ತವಾಗುತ್ತದೆ.॥9॥
ಮೂಲಮ್ - 10
ತಸ್ಮಾದ್ದಂಡೇ ಮಹಾಬಾಹೋ ಯತ್ನವಾನ್ ಭವ ಪುತ್ರಕ ।
ಧರ್ಮೋ ಹಿ ಪರಮೋ ಲೋಕೇ ಕುರ್ವತಸ್ತೇಭವಿಷ್ಯತಿ ॥
ಅನುವಾದ
ಅದಕ್ಕಾಗಿ ಮಹಾಬಾಹು ಪುತ್ರನೇ! ನೀನು ಶಿಕ್ಷೆಯನ್ನು ಸರಿಯಾಗಿ ಪ್ರಯೋಗ ಮಾಡಲು ಪ್ರಯತ್ನಶೀಲನಾಗು. ಹೀಗೆ ಮಾಡುವುದರಿಂದ ನಿನಗೆ ಜಗತ್ತಿನಲ್ಲಿ ಪರಮ ಧರ್ಮದ ಪ್ರಾಪ್ತಿಯಾಗುವುದು.॥10॥
ಮೂಲಮ್ - 11
ಇತಿ ತಂ ಬಹು ಸಂದಿಶ್ಯ ಮನುಃ ಪುತ್ರಂ ಸಮಾಧಿನಾ ।
ಜಗಾಮ ತ್ರಿದಿವಂ ಹೃಷ್ಟೋ ಬ್ರಹ್ಮಲೋಕಂ ಸನಾತನಮ್ ॥
ಅನುವಾದ
ಹೀಗೆ ಮಗನಿಗೆ ಬಹಳಷ್ಟು ಸಂದೇಶ ನೀಡಿ ಮನು ಸಮಾಧಿಯ ಮೂಲಕ ಬಹಳ ಹರ್ಷದೊಂದಿಗೆ ಸನಾತನ ಬ್ರಹ್ಮಲೋಕಕ್ಕೆ ತೆರಳಿದನು.॥11॥
ಮೂಲಮ್ - 12
ಪ್ರಯಾತೇ ತ್ರಿದಿವಂ ತಸ್ಮಿನ್ನಿಕ್ಷ್ವಾಕುರಮಿತಪ್ರಭಃ ।
ಜನಯಿಷ್ಯೇ ಕಥಂ ಪುತ್ರಾನಿತಿ ಚಿಂತಾಪರೋಽಭವತ್ ॥
ಅನುವಾದ
ಮನು ಬ್ರಹ್ಮಲೋಕ ನಿವಾಸಿಯಾದ ಮೇಲೆ ಅಮಿತ ತೇಜಸ್ವಿ ರಾಜಾ ಇಕ್ಷ್ವಾಕು ನಾನು ಪುತ್ರರನ್ನು ಹೇಗೆ ಉತ್ಪನ್ನ ಮಾಡಲಿ? ಎಂದು ಚಿಂತಿತನಾದನು.॥12॥
ಮೂಲಮ್ - 13
ಕರ್ಮಭಿರ್ಬಹುರೂಪೈಶ್ಚ ತೈಸ್ತೈರ್ಮನುಸುತಸ್ತದಾ ।
ಜನಯಾಮಾಸ ಧರ್ಮಾತ್ಮಾ ಶತಂ ದೇವಸುತೋಪಮಾನ್ ॥
ಅನುವಾದ
ಆಗ ಯಜ್ಞ, ದಾನ, ತಪಸ್ಸುರೂಪೀ ವಿವಿಧ ಕರ್ಮಗಳಿಂದ ಧರ್ಮಾತ್ಮಾ ಮನುಪುತ್ರನು ದೇವ ಕುಮಾರರಂತಹ ತೇಜಸ್ವೀ ನೂರು ಪುತ್ರರನ್ನು ಉತ್ಪನ್ನ ಮಾಡಿದನು.॥13॥
ಮೂಲಮ್ - 14
ತೇಷಾಮವರಜಸ್ತಾತ ಸರ್ವೇಷಾಂ ರಘುನಂದನ ।
ಮೂಢಶ್ಚಾಕೃತವಿದ್ಯಶ್ಚ ನ ಶುಶ್ರೂಷತಿ ಪೂರ್ವಜಾನ್ ॥
ಅನುವಾದ
ಅಯ್ಯಾ ರಘುನಂದನ! ಅವರಲ್ಲಿ ಎಲ್ಲರಿಗಿಂತ ಕಿರಿಯನಾದವನು ಮೂಢ ಮತ್ತು ಅವಿದ್ಯಾವಂತನಾಗಿದ್ದನು, ಅದರಿಂದ ತನ್ನ ಅಣ್ಣಂದಿರ ಸೇವೆ ಮಾಡುತ್ತಿರಲಿಲ್ಲ.॥14॥
ಮೂಲಮ್ - 15
ನಾಮ ತಸ್ಯ ಚ ದಂಡೇತಿ ಪಿತಾ ಚಕ್ರೇಽಲ್ಪಮೇಧಸಃ ।
ಅವಶ್ಯಂ ದಂಡ ಪತನಂ ಶರೀರೇಽಸ್ಯ ಭವಿಷ್ಯತಿ ॥
ಅನುವಾದ
ಇವನ ಶರೀರದ ಮೇಲೆ ಅವಶ್ಯವಾಗಿ ದಂಡಪ್ರಯೋಗವಾಗಬಹುದೆಂದು ಯೋಚಿಸಿ ತಂದೆಯು ಆ ಮಂದಬುದ್ಧಿ ಪುತ್ರನ ಹೆಸರು ದಂಡ ಎಂದು ಇಟ್ಟನು.॥15॥
ಮೂಲಮ್ - 16
ಅಪಶ್ಯಮಾನಸ್ತಂ ದೇಶಂ ಘೋರಂ ಪುತ್ರಸ್ಯ ರಾಘವ ।
ವಿಂಧ್ಯಶೈವಲಯೋರ್ಮಧ್ಯೇ ರಾಜ್ಯಂಪ್ರಾದಾದರಿಂದಮ ॥
ಅನುವಾದ
ಶತ್ರುದಮನ ಶ್ರೀರಾಮಾ! ಆ ಪುತ್ರನಿಗೆ ಯೋಗ್ಯವಾದ ಬೇರೆ ಯಾವುದೇ ಭಯಂಕರ ದೇಶವು ಕಾಣದಿದ್ದಾಗ, ರಾಜನು ಅವನಿಗೆ ವಿಂಧ್ಯ ಮತ್ತು ಶೈವಲ ಪರ್ವತದ ನಡುವಿನ ರಾಜ್ಯವನ್ನು ಕೊಟ್ಟನು.॥16॥
ಮೂಲಮ್ - 17
ಸ ದಂಡಸ್ತತ್ರ ರಾಜಾಭೂದ್ರಮ್ಯೇ ಪರ್ವತರೋಧಸಿ ।
ಪುರಂ ಚಾಪ್ರತಿಮಂ ರಾಮನ್ಯವೇಶಯದನುತ್ತಮಮ್ ॥
ಅನುವಾದ
ಶ್ರೀರಾಮಾ! ಪರ್ವತೀಯ ಆ ರಮಣೀಯ ಪ್ರಾಂತದಲ್ಲಿ ದಂಡ ರಾಜನಾದನು. ಅವನು ತಾನು ಇರಲು ಒಂದು ಬಹಳ ಅನುಪಮ, ಉತ್ತಮ ನಗರವನ್ನು ಸ್ಥಾಪಿಸಿದನು.॥17॥
ಮೂಲಮ್ - 18
ಪುರಸ್ಯ ಚಾಕರೋನ್ನಾಮ ಮಧುಮಂತಮಿತಿ ಪ್ರಭೋ ।
ಪುರೋಹಿತಂ ತೂಶನಸಂ ವರಯಾಮಾಸ ಸುವ್ರತಮ್ ॥
ಅನುವಾದ
ಪ್ರಭೋ! ಅವನು ಆ ನಗರದ ಹೆಸರನ್ನು ಮಧುಮಂತನೆಂದು ಇಟ್ಟು, ಸುವ್ರತರಾದ ಶುಕ್ರಾಚಾರ್ಯರನ್ನು ತನ್ನ ಪುರೋಹಿತನನ್ನಾಗಿಸಿಕೊಂಡನು.॥18॥
ಮೂಲಮ್ - 19
ಏವಂ ಸ ರಾಜಾ ತದ್ರಾಜ್ಯಮಕರೋತ್ಸಪುರೋಹಿತಃ ।
ಪ್ರಹೃಷ್ಟ ಮನುಜಾಕೀರ್ಣಂ ದೇವರಾಜೋ ಯಥಾದಿವಿ ॥
ಅನುವಾದ
ಹೀಗೆ ಸ್ವರ್ಗದಲ್ಲಿ ದೇವೇಂದ್ರನಂತೆ ಭೂತಳದಲ್ಲಿ ರಾಜಾ ದಂಡನು ಪುರೋಹಿತನೊಂದಿಗೆ ಇರುತ್ತಾ ದಷ್ಟ-ಪುಷ್ಟ ಜನರಿಂದ ತುಂಬಿದ ಆ ರಾಜ್ಯವನ್ನು ಆಳತೊಡಗಿದನು.॥19॥
ಮೂಲಮ್ - 20
ತತಃ ಸ ರಾಜಾ ಮನುಜೇಂದ್ರಪುತ್ರಃ
ಸಾರ್ಧಂ ಚ ತೇನೋಶನಸಾ ತದಾನೀಮ್ ।
ಚಕಾರ ರಾಜ್ಯಂ ಸುಮಹನ್ಮಹಾತ್ಮಾ
ಶಕ್ರೋ ದಿವೀವೋಶನಸಾ ಸಮೇತಃ ॥
ಅನುವಾದ
ಆಗ ಆ ಮಹಾತ್ಮಾ ರಾಜಕುಮಾರ ಮಹಾರಾಜ ದಂಡನು ಶುಕ್ರಾಚಾರ್ಯರೊಂದಿಗೆ ಇದ್ದು ತನ್ನ ರಾಜ್ಯವನ್ನು, ಸ್ವರ್ಗದಲ್ಲಿ ದೇವೇಂದ್ರನು ದೇವಗುರು ಬೃಹಸ್ಪತಿಯೊಂದಿಗೆ ಇದ್ದು, ರಾಜ್ಯವನ್ನು ಪಾಲಿಸುವಂತೆಯೇ ಆಳಿದನು.॥20॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಎಪ್ಪತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು. ॥79॥