[ಎಪ್ಪತ್ತಾರನೆಯ ಸರ್ಗ]
ಭಾಗಸೂಚನಾ
ಶಂಬೂಕನ ವಧೆ, ದೇವತೆಗಳ ಪ್ರಶಂಸೆ, ಅಗಸ್ತ್ಯರ ಸತ್ಕಾರ ಮತ್ತು ಆಭರಣಗಳ ಪ್ರದಾನ
ಮೂಲಮ್ - 1
ತಸ್ಯ ತದ್ವಚನಂ ಶ್ರುತ್ವಾ ರಾಮಸ್ಯಾಕ್ಲಿಷ್ಟ ಕರ್ಮಣಃ ।
ಅವಾಕ್ಶಿರಾಸ್ತಥಾ ಭೂತೋ ವಾಕ್ಯಮೇತದುವಾಚ ಹ ॥
ಅನುವಾದ
ಕ್ಲೇಶರಹಿತ ಕರ್ಮ ಮಾಡುವ ಭಗವಾನ್ ಶ್ರೀರಾಮನ ಈ ಮಾತನ್ನು ಕೇಳಿ ತಲೆಕೆಳಗೆ ನೇತಾಡುತ್ತಿದ್ದ ಆ ತಪಸ್ವಿಯು ಹೀಗೆ ಹೇಳಿದನು-॥1॥
ಮೂಲಮ್ - 2
ಶೂದ್ರಯೋನ್ಯಾಂ ಪ್ರಜಾತೋಽಸ್ಮಿ ತಪ ಉಗ್ರಂ ಸಮಾಸ್ಥಿತಃ ।
ದೇವತ್ವಂ ಪ್ರಾರ್ಥಯೇ ರಾಮ ಸಶರೀರೋ ಮಹಾಯಶಃ ॥
ಅನುವಾದ
ಮಹಾಯಶಸ್ವೀ ಶ್ರೀರಾಮಾ! ನಾನು ಶೂದ್ರನಾಗಿ ಹುಟ್ಟಿದ್ದೇನೆ ಹಾಗೂ ಸದೇಹ ಸ್ವರ್ಗಲೋಕಕ್ಕೆ ಹೋಗಿ ದೇವತ್ವ ಪಡೆಯಲು ಬಯಸುತ್ತೇನೆ.॥2॥
ಮೂಲಮ್ - 3
ನ ಮಿಥ್ಯಾಹಂ ವದೇ ರಾಮ ದೇವಲೋಕಜಿಗೀಷಯಾ ।
ಶೂದ್ರಂ ಮಾಂ ವಿದ್ಧಿ ಕಾಕುತ್ಸ್ಥ ಶಂಬೂಕಂ ನಾಮ ನಾಮತಃ ॥
ಅನುವಾದ
ಕಕುತ್ಸ್ಥಕುಲಭೂಷಣ ಶ್ರೀರಾಮ! ನಾನು ಸುಳ್ಳು ಹೇಳುವುದಿಲ್ಲ. ದೇವಲೋಕವನ್ನು ಗೆಲ್ಲಲು ನಾನು ತಪಸ್ಸಿಗೆ ತೊಡಗಿದ್ದೇನೆ. ನನ್ನ ಹೆಸರು ಶಂಬೂಕನಾಗಿದ್ದು, ನೀನು ನನ್ನನ್ನು ಶೂದ್ರನೆಂದೇ ತಿಳಿಯಿರಿ.॥3॥
ಮೂಲಮ್ - 4
ಭಾಷತಸ್ತಸ್ಯ ಶೂದ್ರಸ್ಯ ಖಡ್ಗಂ ಸುರುಚಿರಪ್ರಭಮ್ ।
ನಿಷ್ಕೃಷ್ಯ ಕೋಷಾದ್ವಿಮಲಂ ಶಿರಶ್ಚಿಚ್ಛೇದ ರಾಘವಃ ॥
ಅನುವಾದ
ಅವನು ಹೀಗೆ ಹೇಳುತ್ತಿದ್ದಂತೆ ಶ್ರೀರಾಮಚಂದ್ರನು ಒರೆಯಿಂದ ಹೊಳೆಯುತ್ತಿರುವ ಖಡ್ಗವನ್ನು ತೆಗೆದು, ಅದರಿಂದ ಅವನ ತಲೆಯನ್ನು ಕತ್ತರಿಸಿಹಾಕಿದನು.॥4॥
ಮೂಲಮ್ - 5
ತಸ್ಮಿನ್ ಶೂದ್ರೇ ಹತೇ ದೇವಾಃ ಸೇಂದ್ರಾಃಸಾಗ್ನಿಪುರೋಗಮಾಃ ।
ಸಾಧು ಸಾಧ್ವಿತಿ ಕಾಕುತ್ಸ್ಥಂ ತೇಶಶಂಸುರ್ಮುಹುರ್ಮುಹುಃ ॥
ಅನುವಾದ
ಆ ಶೂದ್ರನ ವಧೆಯಾಗುತ್ತಲೇ ಇಂದ್ರಾಗ್ನಿ ಸಹಿತ ಸಮಸ್ತ ದೇವತೆಗಳು ‘ಬಹಳ ಒಳ್ಳೆಯದು, ಬಹಳ ಒಳ್ಳೆಯದು’ ಎಂದು ಹೇಳಿ ಭಗವಾನ್ ಶ್ರೀರಾಮನನ್ನು ಪದೇ-ಪದೇ ಪ್ರಶಂಸಿಸಿದರು.॥5॥
ಮೂಲಮ್ - 6
ಪುಷ್ಪವೃಷ್ಟಿರ್ಮಹತ್ಯಾಸೀದ್ದಿವ್ಯಾನಾಂ ಸುಸುಗಂಧಿನಾಮ್ ।
ಪುಷ್ಪಾಣಾಂ ವಾಯುಮುಕ್ತಾನಾಂ ಸರ್ವತಃ ಪ್ರಪಪಾತ ಹ ॥
ಅನುವಾದ
ಆಗ ಅವನ ಮೇಲೆ ಎಲ್ಲೆಡೆಗಳಿಂದ ವಾಯುದೇವರು ಚೆಲ್ಲಿದ ದಿವ್ಯ, ಪರಮ ಸುಗಂಧಿತ ಪುಷ್ಪಗಳ ಮಳೆ ಆಗತೊಡಗಿತು.॥6॥
ಮೂಲಮ್ - 7
ಸುಪ್ರೀತಾಶ್ಚಾಬ್ರುವನ್ ರಾಮಂ ದೇವಾಃ ಸತ್ಯಪರಾಕ್ರಮಮ್ ।
ಸುರಕಾರ್ಯಮಿದಂ ದೇವ ಸುಕೃತಂ ತೇಮಹಾಮತೇ ॥
ಅನುವಾದ
ಆ ಎಲ್ಲ ದೇವತೆಗಳು ಅತ್ಯಂತ ಪ್ರಸನ್ನರಾಗಿ ಸತ್ಯಪರಾಕ್ರಮಿ ಶ್ರೀರಾಮನಲ್ಲಿ ಹೇಳಿದರು- ದೇವ! ಮಹಾಮತೇ! ನೀನು ಈದೇವತೆಗಳ ಕಾರ್ಯವನ್ನೇ ನೆರವೇರಿಸಿರುವೆ.॥7॥
ಮೂಲಮ್ - 8
ಗೃಹಾಣ ಚ ವರಂ ಸೌಮ್ಯ ಯಂ ತ್ವಮಿಚ್ಛಸ್ಯರಿಂದಮ ।
ಸ್ವರ್ಗಭಾಙ್ ನಹಿ ಶೂದ್ರೋಽಯಂ ತ್ವತ್ಕೃತೇ ರಘುನಂದನ ॥
ಅನುವಾದ
ಶತ್ರುದಮನ ರಘುಕುಲನಂದನ ಸೌಮ್ಯ ಶ್ರೀರಾಮ! ನಿನ್ನ ಈ ಸತ್ಕರ್ಮದಿಂದಲೇ ಈ ಶೂದ್ರ ಸಶರೀರ ಸ್ವರ್ಗಲೋಕಕ್ಕೆ ಹೋಗದಾದನು. ಆದ್ದರಿಂದ ನೀನು ಬಯಸುವ ವರವನ್ನು ಕೇಳು.॥8॥
ಮೂಲಮ್ - 9
ದೇವಾನಾಂ ಭಾಷಿತಂ ಶ್ರುತ್ವಾ ರಾಮಃ ಸತ್ಯಪರಾಕ್ರಮಃ ।
ಉವಾಚ ಪ್ರಾಂಜಲಿರ್ವಾಕ್ಯಂ ಸಹಸ್ರಾಕ್ಷಂ ಪುರಂದರಮ್ ॥
ಅನುವಾದ
ದೇವತೆಗಳ ಮಾತನ್ನು ಕೇಳಿ ಸತ್ಯಪರಾಕ್ರಮಿ ಶ್ರೀರಾಮನು ಕೈಮುಗಿದು ಸಹಸ್ರಾಕ್ಷ ಇಂದ್ರನಲ್ಲಿ ಹೇಳಿದನು.॥9॥
ಮೂಲಮ್ - 10
ಯದಿ ದೇವಾಃ ಪ್ರಸನ್ನಾ ಮೇದ್ವಿಜಪುತ್ರಃ ಸ ಜೀವತು ।
ದಿಶಂತು ವರಮೇತಂ ಮೇ ಈಪ್ಸಿತಂ ಪರಮಂ ಮಮ ॥
ಅನುವಾದ
ದೇವತೆಗಳು ನನ್ನ ಮೇಲೆ ಪ್ರಸನ್ನರಾಗಿದ್ದರೆ ಆ ಬ್ರಾಹ್ಮಣಪುತ್ರನು ಜೀವಿತನಾಗಲಿ. ಇದೇ ನನಗೆ ಎಲ್ಲಕ್ಕಿಂತ ಉತ್ತಮ, ಅಭೀಷ್ಟವರವಾಗಿದೆ. ದೇವತೆಗಳು ನನಗೆ ಇದೇ ವರವನ್ನು ಕೊಡಿರಿ.॥10॥
ಮೂಲಮ್ - 11
ಮಮಾಪಚಾರಾದ್ಬಾಲೋಽಸೌ ಬ್ರಾಹ್ಮಣಸ್ಯೈಕಪುತ್ರಕಃ ।
ಅಪ್ರಾಪ್ತಕಾಲಃಕಾಲೇನ ನೀತೋ ವೈವಸ್ವತಕ್ಷಯಮ್ ॥
ಅನುವಾದ
ನನ್ನ ಯಾವುದೋ ಅಪರಾಧದಿಂದ ಬ್ರಾಹ್ಮಣನ ಏಕಮಾತ್ರ ಬಾಲಕನು ಅಸಮಯದಲ್ಲಿ ಕಾಲವಶನಾದನು.॥11॥
ಮೂಲಮ್ - 12
ತಂ ಜೀವಯತ ಭದ್ರಂ ವೋ ನಾನೃತಂ ಕರ್ತುಮರ್ಹಥ ।
ದ್ವಿಜಸ್ಯ ಸಂಶ್ರುತೋಽರ್ಥೋ ಮೇ ಜೀವಯಿಷ್ಯಾಮಿ ತೇ ಸುತಮ್ ॥
ಅನುವಾದ
ನಾನು ಬ್ರಾಹ್ಮಣನಲ್ಲಿ ‘ನಿನ್ನ ಬಾಲಕನನ್ನು ಜೀವಂತಗೊಳಿಸುವೆ’ ಎಂದು ಪ್ರತಿಜ್ಞೆ ಮಾಡಿದ್ದೆ. ಆದ್ದರಿಂದ ನಿಮಗೆ ಮಂಗಳವಾಗಲೀ, ನೀವು ಆ ಬ್ರಾಹ್ಮಣ ಬಾಲಕನನ್ನು ಬದುಕಿಸಿ, ನನ್ನ ಮಾತನ್ನು ಸುಳ್ಳಾಗಿಸಬೇಡಿ.॥12॥
ಮೂಲಮ್ - 13
ರಾಘವಸ್ಯ ತು ತದ್ವಾಕ್ಯಂ ಶ್ರುತ್ವಾ ವಿಬುಧಸತ್ತಮಾಃ ।
ಪ್ರತ್ಯೂಚೂ ರಾಘವಂ ಪ್ರೀತಾ ದೇವಾಃ ಪ್ರೀತಿಸಮನ್ವಿತಮ್ ॥
ಅನುವಾದ
ಶ್ರೀರಾಮನ ಮಾತನ್ನು ಕೇಳಿ ಆ ವಿಬುಧಶಿರೋಮಣಿ ದೇವತೆಗಳು ಸಂತೋಷದಿಂದ ಅವನಲ್ಲಿ ಹೇಳಿದರು-॥13॥
ಮೂಲಮ್ - 14
ನಿರ್ವೃತೋ ಭವ ಕಾಕುತ್ಸ್ಥ ಸೋಽಸ್ಮಿನ್ನಹನಿ ಬಾಲಕಃ ।
ಜೀವಿತಂ ಪ್ರಾಪ್ತವಾನ್ಭೂಯಃ ಸಮೇತಶ್ಚಾಪಿಬಂಧುಭಿಃ ॥
ಅನುವಾದ
ಕಕುತ್ಸ್ಥಕುಲಭೂಷಣ! ನೀನು ಸಂತುಷ್ಟನಾಗು. ಆ ಬಾಲಕನು ಇಂದು ಪುನಃ ಜೀವಂತನಾಗಿ ತನ್ನ ಬಂಧು- ಬಾಂಧವರನ್ನು ಸೇರಿರುವನು.॥14॥
ಮೂಲಮ್ - 15
ಯಸ್ಮಿನ್ಮುಹೂರ್ತೇ ಕಾಕುತ್ಸ್ಥ ಶೂದ್ರೋಽಯಂ ವಿನಿಪಾತಿತಃ ।
ತಸ್ಮಿನ್ಮುಹೂರ್ತೇ ಬಾಲೋಽಸೌ ಜೀವೇನ ಸಮಯುಜ್ಯತ ॥
ಅನುವಾದ
ಕಾಕುತ್ಸ್ಥ! ನೀನು ಯಾವ ಮುಹೂರ್ತದಲ್ಲಿ ಈ ಶೂದ್ರನನ್ನು ಧರಾಶಾಯಿ ಗೊಳಿಸಿದೆಯೋ ಅದೇ ಮುಹೂರ್ತದಲ್ಲೇ ಆ ಬಾಲಕನು ಬದುಕಿರುವನು.॥15॥
ಮೂಲಮ್ - 16
ಸ್ವಸ್ತಿ ಪ್ರಾಪ್ನುಹಿ ಭದ್ರಂ ತೇ ಸಾಧು ಯಾಮ ನರರ್ಷಭ ।
ಅಗಸ್ತ್ಯಸ್ಯಾಶ್ರಮಪದಂ ದ್ರಷ್ಟುಮಿಚ್ಛಾಮ ರಾಘವ ॥
ಮೂಲಮ್ - 17
ತಸ್ಯ ದೀಕ್ಷಾ ಸಮಾಪ್ತಾ ಹಿ ಬ್ರಹ್ಮರ್ಷೇಃ ಸುಮಹಾದ್ಯುತೇಃ ।
ದ್ವಾದಶಂ ಹಿ ಗತಂ ವರ್ಷಂ ಜಲಶಯ್ಯಾಂ ಸಮಾಸತಃ ॥
ಅನುವಾದ
ನರಶ್ರೇಷ್ಠನೇ! ನಿನಗೆ ಮಂಗಳ ವಾಗಲಿ. ಒಳ್ಳೆಯದಾಗಲೀ. ಈಗ ನಾವು ಅಗಸ್ತ್ಯಾಶ್ರಮಕ್ಕೆ ಹೋಗುತ್ತಿದ್ದೇವೆ. ರಘುನಂದನ! ನಾವು ಮಹರ್ಷಿ ಅಗಸ್ತ್ಯರನ್ನು ದರ್ಶಿಸಬೇಕೆಂದು ಬಯಸುತ್ತೇವೆ. ಅವರು ಜಲಶಯ್ಯಾವ್ರತ ಕೈಗೊಂಡು ಹನ್ನೆರಡು ವರ್ಷಗಳು ಕಳೆದಿವೆ. ಈಗ ಆ ಮಹಾತೇಜಸ್ವೀ ಬ್ರಹ್ಮರ್ಷಿಯ ಜಲಶಯ್ಯಾವ್ರತದ ದೀಕ್ಷೆ ಸಮಾಪ್ತವಾಗಿದೆ.॥16-17॥
ಮೂಲಮ್ - 18
ಕಾಕುತ್ಸ್ಥ ತದ್ಗಮಿಷ್ಯಾಮೋ ಮುನಿಂ ಸಮಭಿನಂದಿತುಮ್ ।
ತ್ವಂ ಚಾಪಿಗಚ್ಛ ಭದ್ರಂ ತೇ ದ್ರಷ್ಟುಂ ತಮೃಷಿಸತ್ತಮಮ್ ॥
ಅನುವಾದ
ರಘುನಂದನ! ಅದಕ್ಕಾಗಿ ನಾವು ಆ ಮಹರ್ಷಿಯನ್ನು ಅಭಿನಂದಿಸಲು ಹೋಗುವೆವು. ನಿನಗೆ ಮಂಗಳವಾಗಲಿ. ನೀನೂ ಆ ಮುನಿಶ್ರೇಷ್ಠರ ದರ್ಶನ ಮಾಡಲು ಹೊರಡು.॥18॥
ಮೂಲಮ್ - 19
ಸತಥೇತಿ ಪ್ರತಿಜ್ಞಾಯ ದೇವಾನಾಂ ರಘುನಂದನಃ ।
ಆರುರೋಹ ವಿಮಾನಂ ತಂ ಪುಷ್ಪಕಂಹೇಮಭೂಷಿತಮ್ ॥
ಅನುವಾದ
ಆಗ ಬಹಳ ಒಳ್ಳೆಯದು ಎಂದು ಹೇಳಿ ಶ್ರೀರಾಮನು ದೇವತೆಗಳಲ್ಲಿ ಅಲ್ಲಿಗೆ ಹೋಗಲು ಪ್ರತಿಜ್ಞೆ ಮಾಡಿ ಆ ಸುವರ್ಣಭೂಷಿತ ಪುಷ್ಪಕವಿಮಾನವನ್ನು ಏರಿದನು.॥19॥
ಮೂಲಮ್ - 20
ತತೋ ದೇವಾಃ ಪ್ರಯಾತಾಸ್ತೇ ವಿಮಾನೈರ್ಬಹುವಿಸ್ತರೈಃ ।
ರಾಮೋಽಪ್ಯನುಜಗಾಮಾಶು ಕುಂಭಯೋನೇಸ್ತಪೋವನಮ್ ॥
ಅನುವಾದ
ಅನಂತರ ಬಹುಸಂಖ್ಯಕ ದೇವತೆಗಳೂ ವಿಮಾನಗಳಲ್ಲಿ ಆರೂಢರಾಗಿ ಅಲ್ಲಿಂದ ಹೊರಟರು. ಮತ್ತೆ ಶ್ರೀರಾಮನೂ ಅವರೊಂದಿಗೆ ಶೀಘ್ರವಾಗಿ ಕುಂಭಜ ಋಷಿಯ ತಪೋವನಕ್ಕೆ ಹೋದನು.॥20॥
ಮೂಲಮ್ - 21
ದೃಷ್ಟ್ವಾತು ದೇವಾನ್ಸಂಪ್ರಾಪ್ತಾನಗಸ್ತ್ಯಸ್ತಪಸಾಂ ನಿಧಿಃ ।
ಅರ್ಚಯಾಮಾಸ ಧರ್ಮಾತ್ಮಾ ಸರ್ವಾಂಸ್ತಾನವಿಶೇಷತಃ ॥
ಅನುವಾದ
ದೇವತೆಗಳು ಬಂದಿರುವುದನ್ನು ನೋಡಿ ತಪಸ್ಸಿನ ನಿಧಿ ಧರ್ಮಾತ್ಮಾ ಅಗಸ್ತ್ಯರು ಅವರೆಲ್ಲರನ್ನು ಸಮಾನವಾಗಿ ಪೂಜಿಸಿದರು.॥21॥
ಮೂಲಮ್ - 22
ಪ್ರತಿಗೃಹ್ಯ ತತಃ ಪೂಜಾಂ ಸಂಪೂಜ್ಯ ಚ ಮಹಾಮುನಿಮ್ ।
ಜಗ್ಮುಸ್ತೇ ತ್ರಿದಶಾ ಹೃಷ್ಟಾ ನಾಕಪೃಷ್ಠಂ ಸಹಾನುಗಾಃ ॥
ಅನುವಾದ
ಅವರ ಪೂಜೆಯನ್ನು ಸ್ವೀಕರಿಸಿ ಆ ಮಹಾಮುನಿಯನ್ನು ಅಭಿನಂದಿಸಿ, ಎಲ್ಲ ದೇವತೆಗಳು ತಮ್ಮ ಅನುಚರರ ಸಹಿತ ಬಹಳ ಹರ್ಷದಿಂದ ಸ್ವರ್ಗಕ್ಕೆ ತೆರಳಿದರು.॥22॥
ಮೂಲಮ್ - 23
ಗತೇಷು ತೇಷು ಕಾಕುತ್ಸ್ಥಃ ಪುಷ್ಪಕಾದವರುಹ್ಯ ಚ ।
ತತೋಽಭಿವಾದಯಾಮಾಸ ಅ್ಯಗಸ್ತ್ಯಮೃಷಿಸತ್ತಮಮ್ ॥
ಅನುವಾದ
ಅವರು ಹೋದ ಬಳಿಕ ಶ್ರೀರಘುನಾಥನು ಪುಷ್ಪಕ ವಿಮಾನದಿಂದ ಇಳಿದು ಮುನಿಶ್ರೇಷ್ಠ ಅಗಸ್ತ್ಯರನ್ನು ನಮಸ್ಕರಿಸಿದನು.॥23॥
ಮೂಲಮ್ - 24
ಸೋಽಭಿವಾದ್ಯ ಮಹಾತ್ಮಾನಂಜ್ವಲಂತಮಿವ ತೇಜಸಾ ।
ಆತಿಥ್ಯಂ ಪರಮಂ ಪ್ರಾಪ್ಯ ನಿಷಸಾದ ನರಾಧಿಪಃ ॥
ಅನುವಾದ
ತಮ್ಮ ತೇಜದಿಂದ ಪ್ರಜ್ವಲಿಸುತ್ತಿರುವ ಮಹಾತ್ಮಾ ಅಗಸ್ತ್ಯರಿಗೆ ಅಭಿವಾದನ ಮಾಡಿ, ಅವರಿಂದ ಉತ್ತಮ ಆತಿಧ್ಯ ಪಡೆದು ನರೇಶ್ವರ ಶ್ರೀರಾಮನು ಆಸನದಲ್ಲಿ ಕುಳಿತುಕೊಂಡನು.॥24॥
ಮೂಲಮ್ - 25
ತಮುವಾಚ ಮಹಾತೇಜಾಃ ಕುಂಭಯೋನಿರ್ಮಹಾತಪಾಃ ।
ಸ್ವಾಗತಂ ತೇ ನರಶ್ರೇಷ್ಠ ದಿಷ್ಟ್ಯಾ ಪ್ರಾಪ್ತೋಽಸಿ ರಾಘವ ॥
ಅನುವಾದ
ಆಗ ಮಹಾತೇಜಸ್ವೀ, ಮಹಾತಪಸ್ವೀ ಕುಂಭಜ ಮುನಿಯು ಹೇಳಿದರು - ನರಶ್ರೇಷ್ಠ ರಘುನಂದನ! ನಿನಗೆ ಸ್ವಾಗತ, ನೀನು ಇಲ್ಲಿಗೆ ಆಗಮಿಸಿದುದು ನನಗೆ ದೊಡ್ಡ ಸೌಭಾಗ್ಯದ ಮಾತಾಗಿದೆ.॥25॥
ಮೂಲಮ್
(ಶ್ಲೋಕ - 26)
ತ್ವಂ ಮೇ ಬಹುಮತೋ ರಾಮ ಗುಣೈರ್ಬಹುಭಿರುತ್ತಮೈಃ ।
ಅತಿಥಿಃ ಪೂಜನೀಯಶ್ಚ ಮಮ ರಾಜನ್ ಹೃದಿ ಸ್ಥಿತಃ ॥
ಅನುವಾದ
ಮಹಾರಾಜ ಶ್ರೀರಾಮಾ! ಬಹಳ ಉತ್ತಮ ಗುಣಗಳಿಂದಾಗಿ ನಿನ್ನ ಕುರಿತು ನನ್ನ ಹೃದಯದಲ್ಲಿ ಬಹಳ ಆದರವಿದೆ. ನೀನು ನನ್ನ ಆದರಣೀಯ ಅತಿಥಿಯಾಗಿದ್ದು, ಸದಾ ನನ್ನ ಮನಸ್ಸಿನಲ್ಲಿ ನೆಲೆಯಾಗಿ ಇರು.॥26॥
ಮೂಲಮ್ - 27
ಸುರಾ ಹಿ ಕಥಯಂತಿ ತ್ವಾಮಾಗತಂ ಶೂದ್ರಘಾತಿನಮ್ ।
ಬ್ರಾಹ್ಮಣಸ್ಯ ತು ಧರ್ಮೇಣ ತ್ವಯಾ ಜೀವಾಪಿತಃ ಸುತಃ ॥
ಅನುವಾದ
ನೀನು ಅಧರ್ಮಪರಾಯಣ ಶೂದ್ರನನ್ನು ವಧಿಸಿ ಬಂದಿರುವೆ ಹಾಗೂ ಧರ್ಮದ ಬಲದಿಂದ ನೀನು ಬ್ರಾಹ್ಮಣನ ಮಡಿದ ಮಗನನ್ನು ಜೀವಂತಗೊಳಿಸಿದೆ, ಎಂದು ದೇವತೆಗಳು ಹೇಳುತ್ತಿದ್ದರು.॥27॥
ಮೂಲಮ್ - 28
ಉಷ್ಯತಾಂ ಚೇಹ ರಜನೀಂ ಸಕಾಶೇ ಮಮ ರಾಘವ ।
ಪ್ರಭಾತೇ ಪುಷ್ಪಕೇಣ ತ್ವಂ ಗಂತಾಸಿ ಪುರಮೇವ ಹಿ ॥
ಮೂಲಮ್ - 29
ತ್ವಂ ಹಿ ನಾರಾಯಣಃ ಶ್ರೀಮಾನ್ ಸ್ತ್ವಯಿ ಸರ್ವಂ ಪ್ರತಿಷ್ಠಿತಮ್ ।
ತ್ವಂ ಪ್ರಭುಃ ಸರ್ವದೇವಾನಾಂ ಪುರುಷಸ್ತ್ವಂ ಸನಾತನಃ ॥
ಅನುವಾದ
ರಘುನಂದನ ! ಇಂದಿನ ರಾತ್ರೆ ನೀನು ನನ್ನ ಬಳಿಯಲ್ಲಿ ಈ ಆಶ್ರಮದಲ್ಲಿ ವಾಸಿಸು. ನಾಳೆ ಬೆಳಿಗ್ಗೆ ಪುಷ್ಪಕವಿಮಾನದ ಮೂಲಕ ತನ್ನ ನಗರಕ್ಕೆ ಹೋಗುವಿಯಂತೆ. ನೀನು ಸಾಕ್ಷಾತ್ ಶ್ರೀಮನ್ನಾರಾಯಣನಾಗಿರುವೆ. ಇಡೀ ಜಗತ್ತು ನಿನ್ನೊಳಗೆ ಪ್ರತಿಷ್ಠಿತವಾಗಿದೆ. ನೀನೇ ಸಮಸ್ತ ದೇವತೆಗಳ ಸನಾತನ ಸ್ವಾಮಿಯಾಗಿರುವೆ.॥28-29॥
ಮೂಲಮ್ - 30
ಇದಂ ಚಾಭರಣಂ ಸೌಮ್ಯ ನಿರ್ಮಿತಂ ವಿಶ್ವಕರ್ಮಣಾ ।
ದಿವ್ಯಂ ದಿವ್ಯೇನ ವಪುಷಾ ದೀಪ್ಯಮಾನಂ ಸ್ವತೇಜಸಾ ॥
ಅನುವಾದ
ಸೌಮ್ಯ! ಇದು ವಿಶ್ವಕರ್ಮನು ನಿರ್ಮಿಸಿದ ದಿವ್ಯ ಆಭೂಷಣವಾಗಿದೆ. ಅದು ತನ್ನ ದಿವ್ಯ ಮತ್ತು ತೇಜದಿಂದ ಪ್ರಕಾಶಿಸುತ್ತಿದೆ.॥30॥
ಮೂಲಮ್ - 31
ಪ್ರತಿಗೃಹ್ಣೀಷ್ವ ಕಾಕುತ್ಸ್ಥ ಮತ್ಪ್ರಿಯಂ ಕುರು ರಾಘವ ।
ದತ್ತಸ್ಯ ಹಿ ಪುನರ್ದಾನೇ ಸುಮಹತ್ ಫಲಮಚ್ಯುತೇ ॥
ಅನುವಾದ
ಕಕುತ್ಸ್ಥಕುಲ ಭೂಷಣ ರಘುನಂದನ! ನೀನು ಇದನ್ನು ತೆಗೆದುಕೊಂಡು ನನ್ನ ಪ್ರಿಯವನ್ನು ಮಾಡು; ಏಕೆಂದರೆ ಯಾರೋ ಕೊಟ್ಟ ವಸ್ತುವನ್ನು ಪುನಃ ದಾನ ಮಾಡಿದರೆ ಮಹಾಲದ ಪ್ರಾಪ್ತಿ ಎಂದು ತಿಳಿಯಲಾಗಿದೆ.॥31॥
ಮೂಲಮ್ - 32½
ಭರಣೇ ಹಿ ಭವಾನ್ ಶಕ್ತಃ ಫಲಾನಾಂ ಮಹತಾಮಪಿ ।
ತ್ವಂ ಹಿ ಶಕ್ತಸ್ತಾರಯಿತುಂ ಸೇಂದ್ರಾನಪಿ ದಿವೌಕಸಃ ॥
ತಸ್ಮಾತ್ಪ್ರದಾಸ್ಯೇ ವಿಧಿವತ್ತತ್ ಪ್ರತೀಚ್ಛ ನರಾಧಿಪ ।
ಅನುವಾದ
ಈ ಆಭೂಷಣವನ್ನು ಧರಿಸಲು ನೀನೇ ಸಮರ್ಥನಾಗಿರುವೆ. ದೊಡ್ಡ-ದೊಡ್ಡ ಫಲಗಳ ಪ್ರಾಪ್ತಿ ಮಾಡಿಸುವ ಶಕ್ತಿಯೂ ನಿನ್ನಲ್ಲೇ ಇದೆ. ನೀನು ಇಂದ್ರಾದಿ ದೇವತೆಗಳನ್ನು ಉದ್ಧರಿಸಲು ಸಮರ್ಥನಾಗಿರುವೆ. ಅದಕ್ಕಾಗಿ ನರೇಶ್ವರ! ಈ ಆಭೂಷಣವನ್ನು ನಾನು ನಿನಗೆ ಕೊಡುವೆನು. ನೀನು ಇದನ್ನು ವಿಧಿವತ್ತಾಗಿ ಸ್ವೀಕರಿಸು.॥32½॥
ಮೂಲಮ್ - 33
ಅಥೋವಾಚ ಮಹಾತ್ಮಾನಮೀಕ್ಷ್ವಾಕೂಣಾಂ ಮಹಾರಥಃ ॥
ಮೂಲಮ್ - 34
ರಾಮೋ ಮತಿಮತಾಂ ಶ್ರೇಷ್ಠಃ ಕ್ಷತ್ರಧರ್ಮಮನುಸ್ಮರನ್ ।
ಪ್ರತಿಗ್ರಹೋಽಯಂ ಭಗವನ್ಬ್ರಾಹ್ಮಣಸ್ಯಾವಿಗರ್ಹಿತಃ ॥
ಅನುವಾದ
ಆಗ ಬುದ್ಧಿವಂತರಲ್ಲಿ ಶ್ರೇಷ್ಠ ಮತ್ತು ಇಕ್ಷ್ವಾಕುಕುಲದ ಮಹಾರಥೀ ವೀರ ಶ್ರೀರಾಮನು ಕ್ಷತ್ರಿಯ ಧರ್ಮದ ವಿಚಾರ ಮಾಡಿ ಮಹಾತ್ಮಾ ಅಗಸ್ತ್ಯರಲ್ಲಿ ಹೇಳಿದನು- ಪೂಜ್ಯರೇ! ದಾನ ಪಡೆಯುವುದು ಕೇವಲ ಬ್ರಾಹ್ಮಣರಿಗೆ ನಿಂದಿತವಾಗಿಲ್ಲ.॥33-34॥
ಮೂಲಮ್ - 35½
ಕ್ಷತ್ರಿಯೇಣ ಕಥಂ ವಿಪ್ರ ಪ್ರತಿಗ್ರಾಹ್ಯಂ ಭವೇತ್ತತಃ ।
ಪ್ರತಿಗ್ರಹೋ ಹಿ ವಿಪ್ರೇಂದ್ರ ಕ್ಷತ್ರಿಯಾಣಾಂ ಸುಗರ್ಹಿತಃ ॥
ಬ್ರಾಹ್ಮಣೇನ ವಿಶೇಷೇಣ ದತ್ತಂ ತದ್ವಕ್ತುಮರ್ಹಸಿ ।
ಅನುವಾದ
ವಿಪ್ರವರ್ಯರೇ! ಕ್ಷತ್ರಿಯರಿಗಾದರೋ ಪ್ರತಿಗ್ರಹ ಸ್ವೀಕರಿಸುವುದು ಅತ್ಯಂತ ನಿಂದಿತವೆಂದು ಹೇಳಲಾಗಿದೆ. ಹಾಗಿರುವಾಗ ಕ್ಷತ್ರಿಯನು ಪ್ರತಿಗ್ರಹ-ವಿಶೇಷವಾಗಿ ಬ್ರಾಹ್ಮಣನು ಕೊಟ್ಟ ದಾನ ಹೇಗೆ ಪಡೆಯಬಲ್ಲನು? ಇದನ್ನು ತಿಳಿಸುವ ಕೃಪೆ ಮಾಡಿರಿ.॥35½॥
ಮೂಲಮ್ - 36
ಏವಮುಕ್ತಸ್ತು ರಾಮೇಣ ಪ್ರತ್ಯುವಾಚ ಮಹಾನೃಷಿಃ ॥
ಮೂಲಮ್ - 37
ಆಸನ್ ಕೃತಯುಗೇ ರಾಮ ಬ್ರಹ್ಮಭೂತೇ ಪುರಾಯುಗೇ ।
ಅಪಾರ್ಥಿವಾಃ ಪ್ರಜಾಃ ಸರ್ವಾಃ ಸುರಾಣಾಂ ತು ಶತಕ್ರತುಃ ॥
ಅನುವಾದ
ಶ್ರೀರಾಮನು ಹೀಗೆ ಕೇಳಿದಾಗ ಮಹರ್ಷಿ ಅಗಸ್ತ್ಯರು ಉತ್ತರಿಸಿದರು-ರಘುನಂದನ! ಮೊದಲು ಬ್ರಹ್ಮಸ್ವರೂಪ ಕೃತಯುಗದಲ್ಲಿ ಎಲ್ಲ ಪ್ರಜೆ ರಾಜನಿಲ್ಲದೇ ಇತ್ತು. ಮುಂದೆ ಇಂದ್ರನನ್ನು ದೇವತೆಗಳ ರಾಜನನ್ನಾಗಿಸಿದರು.॥36-37॥
ಮೂಲಮ್ - 38
ತಾಃ ಪ್ರಜಾ ದೇವದೇವೇಶಂ ರಾಜಾರ್ಥಂ ಸಮುಪಾದ್ರವನ್ ।
ಸುರಾಣಾಂ ಸ್ಥಾಪಿತೋ ರಾಜಾ ತ್ವಯಾ ದೇವ ಶತಕ್ರತುಃ ॥
ಮೂಲಮ್ - 39
ಪ್ರಯಚ್ಛಾಸ್ಮಾಸು ಲೋಕೇಶ ಪಾರ್ಥಿವಂ ನರಪುಂಗವಮ್ ।
ಯಸ್ಮೈ ಪೂಜಾಂ ಪ್ರಯುಂಜಾನಾ ಧೂತಪಾಪಾಶ್ಚರೇಮಹಿ ॥
ಅನುವಾದ
ಆಗ ಎಲ್ಲ ಪ್ರಜೆಯು ದೇವದೇವೇಶ್ವರ ಬ್ರಹ್ಮನ ಬಳಿಗೆ ಹೋಗಿ ರಾಜನಿಗಾಗಿ ಹೇಳಿತು - ದೇವ! ನೀವು ಇಂದ್ರನನ್ನು ದೇವತೆಗಳ ರಾಜಪದವಿಯಲ್ಲಿ ಸ್ಥಾಪಿಸಿದಿರಿ. ಹೀಗೆಯೇ ನಮಗಾಗಿಯೂ ಯಾರಾದರೂ ಶ್ರೇಷ್ಠ ಪುರುಷನನ್ನು ರಾಜನನ್ನಾಗಿಸಿರಿ, ಅವನನ್ನು ಪೂಜಿಸಿ ನಾವು ಪಾಪರಹಿತರಾಗಿ ಭೂಮಂಡಲದಲ್ಲಿ ವಿಚರಿಸುವೆವು.॥38-39॥
ಮೂಲಮ್ - 40
ನ ವಸಾಮೋ ವಿನಾ ರಾಜ್ಞಾ ಏಷ ನೋ ನಿಶ್ಚಯಃ ಪರಃ ।
ತತೋ ಬ್ರಹ್ಮಾ ಸುರಶ್ರೇಷ್ಠೋ ಲೋಕಪಾಲಾನ್ಸವಾಸವಾನ್ ॥
ಮೂಲಮ್ - 41
ಸಮಾಹೂಯಾಬ್ರವೀತ್ಸರ್ವಾಂಸ್ತೇಜೋಭಾಗಾನ್ ಪ್ರಯಚ್ಛತ ।
ತತೋ ದದುರ್ಲೋಕಪಾಲಾಃ ಸರ್ವೇ ಭಾಗಾನ್ಸ್ವ್ವ ತೇಜಸಃ ॥
ಅನುವಾದ
ನಾವು ರಾಜನಿಲ್ಲದೆ ಇರಲಾರೆವು. ಇದು ನಮ್ಮ ಉತ್ತಮ ನಿಶ್ಚಯವಾಗಿದೆ. ಆಗ ಸುರಶ್ರೇಷ್ಠ ಬ್ರಹ್ಮದೇವರು ಇಂದ್ರಸಹಿತ ಸಮಸ್ತ ಲೋಕಪಾಲಕರಲನ್ನು ಕರೆಸಿ ಹೇಳಿದರು - ನೀವೆಲ್ಲರೂ ತಮ್ಮ-ತಮ್ಮ ತೇಜದ ಒಂದೊಂದು ಭಾಗವನ್ನು ಕೊಡಿರಿ. ಆಗ ಸಮಸ್ತ ಲೋಕಪಾಲಕರು ತಮ್ಮ-ತಮ್ಮ ತೇಜದ ಭಾಗವನ್ನು ಅರ್ಪಿಸಿದರು.॥40-41॥
ಮೂಲಮ್ - 42
ಅಕ್ಷುಪಚ್ಚ ತತೋ ಬ್ರಹ್ಮಾ ಯತೋ ಜಾತಃ ಕ್ಷುಪೋ ನೃಪಃ ।
ತಂ ಬ್ರಹ್ಮಾ ಲೋಕಪಾಲಾನಾಂ ಸಮಾಂಶೈಃ ಸಮಯೋಜಯತ್ ॥
ಅನುವಾದ
ಆಗಲೇ ಬ್ರಹ್ಮದೇವರಿಗೆ ಸೀನು ಬಂತು, ಅದರಿಂದ ಕ್ಷುಪ ಎಂಬ ರಾಜನು ಉತ್ಪನ್ನನಾದನು. ಬ್ರಹ್ಮನು ಆ ರಾಜನಿಗೆ ಲೋಕಪಾಲಕರು ಕೊಟ್ಟಿರುವ ತೇಜವನ್ನು ಅವನ ಎಲ್ಲ ಭಾಗಗಳಲ್ಲಿ ಸಂಯುಕ್ತಗೊಳಿಸಿದನು.॥42॥
ಮೂಲಮ್ - 43
ತತೋ ದದೌ ನೃಪಂ ತಾಸಾಂ ಪ್ರಜಾನಾಮೀಶ್ವರಂ ಕ್ಷುಪಮ್ ।
ತತ್ರೈಂದ್ರೇಣ ಚ ಭಾಗೇನಮಹೀಮಾಜ್ಞಾಪಯನ್ನೃಪಃ ॥
ಅನುವಾದ
ಬಳಿಕ ಬ್ರಹ್ಮನು ಕ್ಷುಪನನ್ನು ಆ ಪ್ರಜಾಜನರಿಗಾಗಿ ಅವರ ಶಾಸಕ ರಾಜನಾಗಿ ಸಮರ್ಪಿಸಿದನು. ಕ್ಷುಪನು ಅಲ್ಲಿ ರಾಜನಾಗಿ ಇಂದ್ರನು ಕೊಟ್ಟಿರುವ ತೇಜಭಾಗದಿಂದ ಪೃಥಿವಿಯ ಶಾಸನ ಮಾಡಿದನು.॥43॥
ಮೂಲಮ್ - 44½
ವಾರುಣೇನ ತು ಭಾಗೇನ ವಪುಃ ಪುಷ್ಯತಿ ಪಾರ್ಥಿವಃ ।
ಕೌಬೇರೇಣ ತು ಭಾಗೇನ ವಿತ್ತಪಾಭಾಂ ದದೌ ತದಾ ॥
ಯಸ್ತು ಯಾಮ್ಯೋಽಭವದ್ಭಾಗಸ್ತೇನ ಶಾಸ್ತಿಸ್ಮ ಸ ಪ್ರಜಾಃ ।
ಅನುವಾದ
ವರುಣನ ತೇಜದಿಂದ ಆ ಭೂಪಾಲನು ಪ್ರಜೆಯ ಶರೀರ ಪೋಷಣೆ ಮಾಡತೊಡಗಿದನು. ಕುಬೇರನ ತೇಜದಿಂದ ಅವನು ಧನಪತಿಯಾದನು ಹಾಗೂ ಯಮರಾಜನ ತೇಜದಿಂದ ಪ್ರಜೆಗಳಿಗೆ ಅಪರಾಧ ಮಾಡಿದಾಗ ಶಿಕ್ಷಿಸುತ್ತಿದ್ದನು.॥44½॥
ಮೂಲಮ್ - 45½
ತಥೈಂದ್ರೇಣ ನರಶ್ರೇಷ್ಠ ಭಾಗೇನ ರಘುನಂದನ ॥
ಪ್ರತಿಗೃಹ್ಣೀಷ್ವ ಭದ್ರಂ ತೇ ತಾರಣಾರ್ಥಂ ಮಮಪ್ರಭೋ ।
ಅನುವಾದ
ನರಶ್ರೇಷ್ಠ ರಘುನಂದನ! ನೀನೂ ರಾಜನಾದ ಕಾರಣ ಎಲ್ಲ ಲೋಕಪಾಲರ ತೇಜದಿಂದ ಸಂಪನ್ನನಾಗಿರುವೆ. ಆದ್ದರಿಂದ ಪ್ರಭೋ! ಇಂದ್ರಸಂಬಂಧೀ ತೇಜೋಭಾಗದಿಂದ ನೀನು ನನ್ನ ಉದ್ಧಾರಕ್ಕಾಗಿ ಈ ಆಭೂಷಣ ಸ್ವೀಕರಿಸು.॥45½॥
ಮೂಲಮ್ - 46
ತದ್ರಾಮಃ ಪ್ರತಿಜಗ್ರಾಹ ಮುನೇಸ್ತಸ್ಯ ಮಹಾತ್ಮನಃ ॥
ಮೂಲಮ್ - 47½
ದಿವ್ಯಮಾಭರಣಂಚಿತ್ರಂ ಪ್ರದೀಪ್ತಮಿವ ಭಾಸ್ಕರಮ್ ।
ಪ್ರತಿಗೃಹ್ಯ ತತೋ ರಾಮಸ್ತದಾಭರಣಮುತ್ತಮಮ್ ॥
ಆಗಮಂ ತಸ್ಯ ದೀಪ್ತಸ್ಯ ಪ್ರಷ್ಟುಮೇವೋಪಚಕ್ರಮೇ ।
ಅನುವಾದ
ಆಗ ಭಗವಾನ್ ಶ್ರೀರಾಮನು ಆ ಮಹಾತ್ಮಾ ಮುನಿಯು ಕೊಟ್ಟ ಆ ಸೂರ್ಯಸದೃಶ ಪ್ರಕಾಶಮಾನ ದಿವ್ಯ ವಿಚಿತ್ರ, ಉತ್ತಮ ಆಭೂಷಣವನ್ನು ಸ್ವೀಕರಿಸಿ, ಅದರ ಉಪಲಬ್ಧಿಯ ವಿಷಯದಲ್ಲಿ ಕೇಳಿದನು.॥46-47½॥
ಮೂಲಮ್ - 48
ಅತ್ಯದ್ಭುತಮಿದಂ ದಿವ್ಯಂ ವಪುಷಾ ಯುಕ್ತಮದ್ಭುತಮ್ ॥
ಮೂಲಮ್ - 49½
ಕಥಂ ವಾ ಭವತಾ ಪ್ರಾಪ್ತಂ ಕುತೋ ವಾ ಕೇನ ವಾಽಹೃತಮ್ ।
ಕೌತೂಹಲತಯಾ ಬ್ರಹ್ಮನ್ ಪೃಚ್ಛಾಮಿ ತ್ವಾಂ ಮಹಾಯಶಃ ॥
ಆಶ್ಚರ್ಯಾಣಾಂ ಬಹೂನಾಂ ಹಿ ನಿಧಿಃ ಪರಮಕೋ ಭವಾನ್ ।
ಅನುವಾದ
ಮಹಾಯಶಸ್ವೀ ಮುನಿಗಳೇ! ಇದು ಅತ್ಯಂತ ಅದ್ಭುತ, ದಿವ್ಯ ಆಕಾರದಿಂದ ಕೂಡಿದ ಆಭೂಷಣವು ನಿಮಗೆ ಹೇಗೆ ಪ್ರಾಪ್ತವಾಯಿತು ಅಥವಾ ಇದನ್ನು ಯಾರು ಎಲ್ಲಿಂದ ತಂದರು? ಬ್ರಹ್ಮನ್! ನಾನು ಕುತೂಹಲದಿಂದ ಇದನ್ನು ನಿಮ್ಮಲ್ಲಿ ಕೇಳುತ್ತಿದ್ದೇನೆ; ಏಕೆಂದರೆ ನೀವು ಅನೇಕ ಆಶ್ಚರ್ಯಗಳ ನಿಧಿ ಆಗಿರುವಿರಿ.॥48-49½॥
ಮೂಲಮ್ - 50
ಏವಂ ಬ್ರುವತಿ ಕಾಕುತ್ಸ್ಥೇ ಮುನಿರ್ವಾಕ್ಯಮಥಾಬ್ರವೀತ್ ॥
ಮೂಲಮ್ - 51
ಶೃಣು ರಾಮ ಯಥಾವೃತ್ತಂ ಪುರಾ ತ್ರೇತಾಯುಗೇ ಯುಗೇ ॥
ಅನುವಾದ
ಕಕುತ್ಸ್ಥಕುಲಭೂಷಣ ಶ್ರೀರಾಮನು ಹೀಗೆ ಕೇಳಿದಾಗ ಮುನಿವರ ಅಗಸ್ತ್ಯರು ಹೇಳಿದರು - ಶ್ರೀರಾಮಾ ! ಹಿಂದಿನ ಚತುರ್ಯುಗೀಯ ತ್ರೇತಾಯುಗದಲ್ಲಿ ಘಟಿಸಿದ ವೃತ್ತಾಂತವನ್ನು ನಿನಗೆ ತಿಳಿಸುವೆ ಕೇಳು.॥50-51॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಎಪ್ಪತ್ತಾರನೆಯ ಸರ್ಗ ಪೂರ್ಣವಾಯಿತು. ॥76॥