०५८ ययाति-शापः

[ಐವತ್ತೆಂಟನೆಯ ಸರ್ಗ]

ಭಾಗಸೂಚನಾ

ಯಯಾತಿಗೆ ಶುಕ್ರಾಚಾರ್ಯರ ಶಾಪ

ಮೂಲಮ್ - 1

ಏವಂ ಬ್ರುವತಿ ರಾಮೇ ತು ಲಕ್ಷ್ಮಣಃ ಪರವೀರಹಾ ।
ಪ್ರತ್ಯುವಾಚ ಮಹಾತ್ಮಾನಂ ಜ್ವಲಂತಮಿವ ತೇಜಸಾ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ಶತ್ರುವೀರ ಸಂಹಾರೀ ಲಕ್ಷ್ಮಣನು ತೇಜದಿಂದ ಪ್ರಜ್ವಲಿತನಂತಾಗಿ ಮಹಾತ್ಮಾ ಶ್ರೀರಾಮನನ್ನು ಸಂಬೋಧಿಸಿ ಹೀಗೆ ಹೇಳಿದನು.॥1॥

ಮೂಲಮ್ - 2

ಮಹದದ್ಭುತಮಾಶ್ಚರ್ಯಂ ವಿದೇಹಸ್ಯ ಪುರಾತನಮ್ ।
ನಿರ್ವೃತ್ತಂ ರಾಜಶಾರ್ದೂಲ ವಸಿಷ್ಠಸ್ಯ ಮುನೇಶ್ಚ ಹ ॥

ಅನುವಾದ

ನೃಪಶ್ರೇಷ್ಠನೇ! ರಾಜಾ ವಿದೇಹ (ನಿಮಿ) ಹಾಗೂ ವಸಿಷ್ಠ ಮುನಿಯ ಪುರಾತನ ವೃತ್ತಾಂತವು ಅತ್ಯಂತ ಅದ್ಭುತ ಮತ್ತು ಆಶ್ಚರ್ಯಕರವಾಗಿದೆ.॥2॥

ಮೂಲಮ್ - 3

ನಿಮಿಸ್ತು ಕ್ಷತ್ರಿಯಃ ಶೂರೋ ವಿಶೇಷೇಣ ಚದೀಕ್ಷಿತಃ ।
ನ ಕ್ಷಮಂ ಕೃತವಾನ್ರಾಜಾ ವಸಿಷ್ಠಸ್ಯ ಮಹಾತ್ಮನಃ ॥

ಅನುವಾದ

ಆದರೆ ರಾಜಾನಿಮಿಯು ಕ್ಷತ್ರಿಯ, ಶೂರವೀರ, ವಿಶೇಷತಃ ಯಜ್ಞದ ದೀಕ್ಷೆ ಪಡೆದಿದ್ದನು; ಆದ್ದರಿಂದ ಅವರು ಮಹಾತ್ಮಾ ವಸಿಷ್ಠರ ಕುರಿತು ಉಚಿತವಾಗಿ ವರ್ತಿಸಲಿಲ್ಲ.॥3॥

ಮೂಲಮ್ - 4½

ಏವಮುಕ್ತಸ್ತು ತೇನಾಯಂ ರಾಮಃ ಕ್ಷತ್ರಿಯಪುಂಗವಃ ।
ಉವಾಚ ಲಕ್ಷ್ಮಣಂ ವಾಕ್ಯಂ ಸರ್ವಶಾಸ್ತ್ರ ವಿಶಾರದಮ್ ॥
ರಾಮೋ ರಮಯತಾಂ ಶ್ರೇಷ್ಠೋ ಭ್ರಾತರಂ ದೀಪ್ತತೇಜಸಮ್ ।

ಅನುವಾದ

ಲಕ್ಷ್ಮಣನು ಹೀಗೆ ಹೇಳಿದಾಗ ಇತರರಿಗೆ ಸಂತೋಷವನ್ನುಂಟುಮಾಡುವವರಲ್ಲಿ ಶ್ರೇಷ್ಠಕ್ಷತ್ರಿಯ ಶಿರೋಮಣಿ ಶ್ರೀರಾಮನು ಸಂಪೂರ್ಣ ಶಾಸ್ತ್ರ ವಿಶಾರದನಾದ ಮಹೇತೇಜಸ್ವೀ ಲಕ್ಷ್ಮಣನಲ್ಲಿ ಇಂತೆಂದನು.॥4½॥

ಮೂಲಮ್ - 5

ನ ಸರ್ವತ್ರ ಕ್ಷಮಾ ವೀರ ಪುರುಷೇಷು ಪ್ರದೃಶ್ಯತೇ ॥

ಮೂಲಮ್ - 6

ಸೌಮಿತ್ರೇ ದುಃಸಹೋ ರೋಷೋ ಯಥಾ ಕ್ಷಾಂತೋ ಯಯಾತಿನಾ ।
ಸತ್ತ್ವಾನುಗಂ ಪುರಸ್ಕೃತ್ಯ ತನ್ನಿಬೋಧ ಸಮಾಹಿತಃ ॥

ಅನುವಾದ

ವೀರ ಸುಮಿತ್ರಾಕುಮಾರ! ರಾಜಾ ಯಯಾತಿಯಲ್ಲಿ ಇದ್ದಂತಹ ಕ್ಷಮೆಯು ಎಲ್ಲ ಪುರುಷರಲ್ಲಿ ಕಂಡು ಬರುವುದಿಲ್ಲ. ರಾಜಾ ಯಯಾತಿಯು ಸತ್ವಗುಣಕ್ಕನುಕೂಲವಾದ ಮಾರ್ಗ ವನ್ನು ಆಶ್ರಯಿಸಿ ದುಃಸಹ ರೋಷವನ್ನು ಶಾಂತಗೊಳಿಸಿದ್ದನು. ಆ ಪ್ರಸಂಗವನ್ನು ಹೇಳುವೆನು ದತ್ತಚಿತ್ತನಾಗಿ ಕೇಳು.॥5-6॥

ಮೂಲಮ್ - 7

ನಹುಷಸ್ಯ ಸುತೋ ರಾಜಾ ಯಯಾತಿಃ ಪೌರವರ್ಧನಃ ।
ತಸ್ಯ ಭಾರ್ಯಾದ್ವಯಂ ಸೌಮ್ಯ ರೂಪೇಣಾಪ್ರತಿಮಂ ಭುವಿ ॥

ಅನುವಾದ

ಸೌಮ್ಯ! ನಹುಷನ ಪುತ್ರ ಯಯಾತಿ ರಾಜನು ಪುರವಾಸಿಗಳ, ಪ್ರಜಾಜನರ ವೃದ್ಧಿ ಮಾಡುವವನಾಗಿದ್ದನು. ಅವನಿಗೆ ಇಬ್ಬರು ಪತ್ನೀಯರಿದ್ದು ಅವರು ಅಪ್ರತಿಮ ರೂಪವತಿಯರಾಗಿದ್ದರು.॥7॥

ಮೂಲಮ್ - 8

ಏಕಾತು ತಸ್ಯ ರಾಜರ್ಷೇರ್ನಾಹುಷಸ್ಯ ಪುರಸ್ಕೃತಾ ।
ಶರ್ಮಿಷ್ಠಾ ನಾಮ ದೈತೇಯೀ ದುಹಿತಾ ವೃಷಪರ್ವಣಃ ॥

ಅನುವಾದ

ನಹುಷನಂದನ ರಾಜರ್ಷಿ ಯಯಾತಿಯ ಓರ್ವ ಪತ್ನಿಯ ಹೆಸರು ಶರ್ಮಿಷ್ಠಾ ಎಂದಿತ್ತು. ಅವಳು ರಾಜನಿಂದ ಬಹಳ ಸಮ್ಮಾನಿತಳಾಗಿದ್ದಳು. ಶರ್ಮಿಷ್ಠಾ ದೈತ್ಯಕುಲದ ಕನ್ಯೆ ಹಾಗೂ ವೃಷಪರ್ವಾನ ಪುತ್ರಿಯಾಗಿದ್ದಳು.॥8॥

ಮೂಲಮ್ - 9

ಅನ್ಯಾ ತೂಶನಸಃ ಪತ್ನೀ ಯಯಾತೇಃ ಪುರುಷರ್ಷಭ ।
ನ ತು ಸಾ ದಯಿತಾ ರಾಜ್ಞೋ ದೇವಯಾನೀ ಸುಮಧ್ಯಮಾ ॥

ಮೂಲಮ್ - 10

ತಯೋಃ ಪುತ್ರೌ ತು ಸಂಭೂತೌ ರೂಪವಂತೋ ಸಮಾಹಿತೌ ।
ಶರ್ಮಿಷ್ಠಾಜನಯತ್ಪೂರುಂ ದೇವಯಾನೀ ಯದುಂ ತದಾ ॥

ಅನುವಾದ

ಪುರುಷಶ್ರೇಷ್ಠನೇ! ಅವನ ಇನ್ನೋರ್ವ ಪತ್ನೀ ಶುಕ್ರಾಚಾರ್ಯರ ಪುತ್ರಿ ದೇವಯಾನಿಯಾಗಿದ್ದಳು. ದೇವಯಾನಿಯು ಸುಂದರಿಯಾಗಿದ್ದರೂ ರಾಜನಿಗೆ ಹೆಚ್ಚು ಪ್ರಿಯಳಾಗಿರಲಿಲ್ಲ. ಅವರಿಬ್ಬರ ಪುತ್ರರೂ ರೂಪವಂತರಿದ್ದರು. ಶರ್ಮಿಷ್ಠೆಯು ಪುರುವಿಗೆ ಜನ್ಮ ನೀಡಿದರೆ, ದೇವಯಾನಿಯು ಯದುವಿಗೆ ಜನ್ಮ ನೀಡಿದಳು. ಅವರಿಬ್ಬರೂ ಬಾಲಕರೂ ತಮ್ಮ ಚಿತ್ತವನ್ನು ಏಕಾಗ್ರವಾಗಿ ಇರಿಸಿಕೊಳ್ಳುವವರಾಗಿದ್ದರು.॥9-10॥

ಮೂಲಮ್ - 11

ಪೂರುಸ್ತು ದಯಿತೋ ರಾಜ್ಞೋ ಗುಣೈರ್ಮಾತೃಕೃತೇನಚ ।
ತತೋ ದುಃಖಸಮಾವಿಷ್ಟೋ ಯದುರ್ಮಾತರಮಬ್ರವೀತ್ ॥

ಅನುವಾದ

ತಾಯಿಯ ಶಿಕ್ಷಣದಿಂದಲೂ, ತನ್ನ ಸದ್ಗುಣಗಳಿಂದಲೂ ಪುರುವು ರಾಜನಿಗೆ ಹೆಚ್ಚು ಪ್ರಿಯನಾಗಿದ್ದನು. ಇದರಿಂದ ಯದುವಿಗೆ ಬಹಳ ದುಃಖವುಂಟಾಗಿ, ಅವನು ತಾಯಿಯಲ್ಲಿ ಹೇಳಿದನು.॥11॥

ಮೂಲಮ್ - 12

ಭಾರ್ಗವಸ್ಯ ಕುಲೇ ಜಾತಾ ದೇವಸ್ಯಾಕ್ಲಿಷ್ಟ ಕರ್ಮಣಃ ।
ಸಹಸೇ ಹೃದ್ಗತಂ ದುಃಖಮವಮಾನಂ ಚ ದುಃಸಹಮ್ ॥

ಅನುವಾದ

ಅಮ್ಮಾ! ನೀನು ಆಯಾಸವಿಲ್ಲದೆ ಮಹತ್ಕರ್ಮ ಮಾಡುವ ದೇವಸ್ವರೂಪ ಶುಕ್ರಾಚಾರ್ಯರ ಕುಲದಲ್ಲಿ ಹುಟ್ಟಿದ್ದರೂ ಇಲ್ಲಿ ಹಾರ್ದಿಕ ದುಃಖ ಮತ್ತು ದುಸ್ಸಹ ಅಪಮಾನ ಸಹಿಸುತ್ತಿರುವೆ.॥12॥

ಮೂಲಮ್ - 13

ಆವಾಂ ಚ ಸಹಿತೌ ದೇವಿ ಪ್ರವಿಶಾವ ಹುತಾಶನಮ್ ।
ರಾಜಾ ತು ರಮತಾಂ ಸಾರ್ಧಂ ದೈತ್ಯಪುತ್ರ್ಯಾ ಬಹುಕ್ಷಪಾಃ ॥

ಅನುವಾದ

ಆದ್ದರಿಂದ ದೇವಿ! ನಾವಿಬ್ಬರೂ ಒಟ್ಟಿಗೆ ಅಗ್ನಿಪ್ರವೇಶ ಮಾಡುವ. ರಾಜನು ದೈತ್ಯಪುತ್ರಿ ಶರ್ಮಿಷ್ಠೆಯ ಜೊತೆಗೆ ಅನಂತರಾತ್ರಿಗಳವರೆಗೆ ರಮಿಸುತ್ತಾ ಇರಲಿ.॥13॥

ಮೂಲಮ್ - 14

ಯದಿ ವಾ ಸಹನೀಯಂ ತೇ ಮಾಮನುಜ್ಞಾತುಮರ್ಹಸಿ ।
ಕ್ಷಮ ತ್ವಂ ನ ಕ್ಷಮಿಷ್ಯೇ ಽಹಂ ಮರಿಷ್ಯಾಮಿ ನ ಸಂಶಯಃ ॥

ಅನುವಾದ

ನಿನಗೆ ಇದೆಲ್ಲ ಸಹಿಸಬೇಕಾದರೆ ನನಗೆ ಪ್ರಾಣತ್ಯಾಗದ ಆಜ್ಞೆಕೊಡು. ನೀನು ಸಹಿಸು, ನಾನು ಸಹಿಸಲಾರೆ. ಖಂಡಿತವಾಗಿ ಸತ್ತುಹೋಗುವೆನು.॥14॥

ಮೂಲಮ್ - 15

ಪುತ್ರಸ್ಯಭಾಷಿತಂ ಶ್ರುತ್ವಾ ಪರಮಾರ್ತಸ್ಯ ರೋದತಃ ।
ದೇವಯಾನೀ ತು ಸಂಕ್ರುದ್ಧಾ ಸಸ್ಮಾರ ಪಿತರಂ ತದಾ ॥

ಅನುವಾದ

ಅತ್ಯಂತ ಆರ್ತನಾಗಿ ಅಳುತ್ತಿರುವ ತನ್ನ ಪುತ್ರ ಯದುವಿನ ಮಾತನ್ನು ಕೇಳಿ ದೇವಯಾನಿಗೆ ಬಹಳ ಕ್ರೋಧವುಂಟಾಗಿ, ತತ್ಕಾಲ ತನ್ನ ತಂದೆ ಶುಕ್ರಾಚಾರ್ಯರನ್ನು ಸ್ಮರಿಸಿದಳು.॥15॥

ಮೂಲಮ್ - 16

ಇಂಗಿತಂ ತದಭಿಜ್ಞಾಯ ದುಹಿತುರ್ಭಾರ್ಗವಸ್ತದಾ ।
ಆಗತಸ್ತ್ವರಿತಂ ತತ್ರ ದೇವಯಾನೀ ಸ್ಮ ಯತ್ರ ಸಾ ॥

ಅನುವಾದ

ಶುಕ್ರಾಚಾರ್ಯರು ತನ್ನ ಪುತ್ರಿಯ ಚೇಷ್ಟೆಯನ್ನು ತಿಳಿದು ಕೂಡಲೇ, ದೇವಯಾನಿ ಇದ್ದಲ್ಲಿಗೆ ಬಂದು ತಲುಪಿದರು.॥16॥

ಮೂಲಮ್ - 17

ದೃಷ್ಟ್ವಾ ಚಾಪ್ರಕೃತಿಸ್ಥಾಂ ತಾಮಪ್ರಹೃಷ್ಟಾಮಚೇತನಾಮ್ ।
ಪಿತಾ ದುಹಿತರಂ ವಾಕ್ಯಂ ಕಿಮೇತದಿತಿ ಚಾಬ್ರವೀತ್ ॥

ಅನುವಾದ

ಮಗಳ ಅಸ್ವಸ್ಥ, ಅಪ್ರಸನ್ನ, ನಿಶ್ಚೇಷ್ಟಿತಳಂತಿರುವುದನ್ನು ನೋಡಿ ತಂದೆಯು ಕೇಳಿದರು - ಮಗಳೇ! ಇದೇನು ಮಾತು.॥17॥

ಮೂಲಮ್ - 18

ಪೃಚ್ಛಂತಮಸಕೃತ್ತಂವೈ ಭಾರ್ಗವಂ ದೀಪ್ತತೇಜಸಮ್ ।
ದೇವಯಾನೀ ತು ಸಂಕ್ರುದ್ಧಾ ಪಿತರಂವಾಕ್ಯಮಬ್ರವೀತ್ ॥

ಮೂಲಮ್ - 19

ಅಹಮಗ್ನಿಂ ವಿಷಂ ತೀಕ್ಷ್ಣಮಪೋ ವಾ ಮುನಿಸತ್ತಮ ।
ಭಕ್ಷಯಿಷ್ಯೇ ಪ್ರವೇಕ್ಷ್ಯೇ ವಾ ನ ತು ಶಕ್ಷ್ಯಾಮಿ ಜೀವಿತುಮ್ ॥

ಅನುವಾದ

ಉರಿಯುತ್ತಿದ್ದ ತೇಜವುಳ್ಳ ತಂದೆ ಭೃಗುನಂದನ ಶುಕ್ರಾಚಾರ್ಯರು ಪದೇ-ಪದೇ ಕೇಳಿದಾಗ, ದೇವಯಾನಿಯು ಅತ್ಯಂತ ಕುಪಿತಳಾಗಿ ಹೇಳಿದಳು - ಮುನಿಶ್ರೇಷ್ಠ! ನಾನು ಪ್ರಜ್ವಲಿತ ಅಗ್ನಿಯನ್ನು ಅಥವಾ ಆಳವಾದ ನೀರಿನಲ್ಲಿ ಪ್ರವೇಶಿಸುವೆ, ಇಲ್ಲವೇ ವಿಷ ತಿಂದು ಬಿಡುವೆ; ಆದರೆ ಈ ಪ್ರಕಾರ ಅಪಮಾನಿತಳಾಗಿ ಬದುಕಿ ಇರಲಾರೆ.॥18-19॥

ಮೂಲಮ್ - 20

ನ ಮಾಂ ತ್ವಮವಜಾನೀಷೇ ದುಃಖಿತಾಮವಮಾನಿತಾಮ್ ।
ವೃಕ್ಷಸ್ಯಾವಜ್ಞಯಾ ಬ್ರಹ್ಮಂಶ್ಛಿದ್ಯಂತೇ ವೃಕ್ಷಜೀವಿನಃ ॥

ಅನುವಾದ

ನಾನು ಇಲ್ಲಿ ಎಷ್ಟು ದುಃಖಿತಳಾಗಿದ್ದೇನೆ ಮತ್ತು ಅಪಮಾನಿತಳಾಗಿರುವುದನ್ನು ನೀವು ತಿಳಿದಿಲ್ಲ. ಬ್ರಹ್ಮನ್! ವೃಕ್ಷವನ್ನು ಉಪೇಕ್ಷಿಸಿದರೆ ಅದನ್ನು ಆಶ್ರಯಿಸಿದ ಫಲ - ಪುಷ್ಪಗಳಿಗೆ, ಪಕ್ಷಿಗಳಿಗೂ ತೊಂದರೆಯಾಗುವುದಲ್ಲವೇ.॥20॥

ಮೂಲಮ್ - 21

ಅವಜ್ಞಯಾ ಚ ರಾಜರ್ಷಿಃ ಪರಿಭೂಯಚ ಭಾರ್ಗವ ।
ಮಯ್ಯವಜ್ಞಾಂ ಪ್ರಯುಂಕ್ತೇ ಹಿ ನ ಚ ಮಾಂ ಬಹುಮನ್ಯತೇ ॥

ಅನುವಾದ

ಭೃಗುನಂದರೇ! ರಾಜರ್ಷಿ ಯಯಾತಿಯು ನಿಮ್ಮ ಕುರಿತು ಅನಾದರ ಭಾವವಿರಿಸಿದ್ದರಿಂದ ನನ್ನ ಅವಹೇಳನವೂ ಆಗಿದೆ. ನನಗೆ ಹೆಚ್ಚಿನ ಆದರ ಕೊಡುತ್ತಿಲ್ಲ.॥21॥

ಮೂಲಮ್ - 22

ತಸ್ಯಾಸ್ತದ್ವಚನಂ ಶ್ರುತ್ವಾ ಕೋಪೇನಾಭಿಪರೀವೃತಃ ।
ವ್ಯಾಹರ್ತುಮುಪಚಕ್ರಾಮ ಭಾರ್ಗವೋ ನಹುಷಾತ್ಮಜಮ್ ॥

ಅನುವಾದ

ದೇವಯಾನಿಯ ಈ ಮಾತನ್ನು ಕೇಳಿ ಭೃಗುನಂದನ ಶುಕ್ರಾಚಾರ್ಯರಿಗೆ ತುಂಬಾ ಸಿಟ್ಟುಬಂದು, ಅವರು ನಹುಷ ಪುತ್ರ ಯಯಾತಿಗೆ ಉದ್ದೇಶಿಸಿ ಹೀಗೆ ಹೇಳಲು ಉಪಕ್ರಮಿಸಿದರು.॥22॥

ಮೂಲಮ್ - 23

ಯಸ್ಮಾನ್ಮಾಮವಜಾನೀಷೇ ನಾಹುಷ ತ್ವಂ ದುರಾತ್ಮವಾನ್ ।
ವಯಸಾ ಜರಯಾ ಜೀರ್ಣಃ ಶೈಥಿಲ್ಯಮುಪಯಾಸ್ಯಸಿ ॥

ಅನುವಾದ

ನಹಷಕುಮಾರ ! ನೀನು ದುರಾತ್ಮನಾದ್ದರಿಂದ ನನ್ನ ಅವಹೇಳನ ಮಾಡುತ್ತಿರುವೆ, ಅದಕ್ಕಾಗಿ ನೀನು ಜರಾ-ಜೀರ್ಣ ಮುದುಕನಾಗಿ ಹೋಗು. ನೀನು ಸರ್ವಥಾ ಶಿಥಿಲನಾಗಿ ಹೋಗುವೆ.॥23॥

ಮೂಲಮ್ - 24

ಏವಮುಕ್ತ್ವಾ ದುಹಿತರಂ ಸಮಾಶ್ವಾಸ್ಯ ಸ ಭಾರ್ಗವಃ ।
ಪುನರ್ಜಗಾಮ ಬ್ರಹ್ಮರ್ಷಿರ್ಭವನಂ ಸ್ವಂ ಮಹಾಯಶಾಃ ॥

ಅನುವಾದ

ರಾಜನಿಗೆ ಹೀಗೆ ಹೇಳಿ, ಮಗಳಿಗೆ ಆಶ್ವಾಸನೆ ಕೊಟ್ಟು ಮಹಾಯಶಸ್ವೀ ಬ್ರಹ್ಮರ್ಷಿ ಶುಕ್ರಾಚಾರ್ಯರು ತಮ್ಮ ಮನೆಗೆ ಹೊರಟುಹೋದರು.॥24॥

ಮೂಲಮ್ - 25

ಸ ಏವಮುಕ್ತ್ವಾ ದ್ವಿಜಪುಂಗವಾಗ್ರ್ಯಃ
ಸುತಾಂ ಸಮಾಶ್ವಾಸ್ಯಚ ದೇವಯಾನೀಮ್ ।
ಪುನರ್ಯಯೌ ಸೂರ್ಯಸಮಾನತೇಜಾ
ದತ್ತ್ವಾ ಚ ಶಾಪಂ ನಹುಷಾತ್ಮಜಾಯ ॥

ಅನುವಾದ

ಸೂರ್ಯಸಮಾನ ತೇಜಸ್ವೀ ಹಾಗೂ ಬ್ರಾಹ್ಮಣರಲ್ಲಿ ಅಗ್ರಗಣ್ಯರಾದ ಶುಕ್ರಾಚಾರ್ಯರು ದೇವಯಾನಿಗೆ ಆಶ್ವಾಸನೆಯನ್ನಿತ್ತು, ಯಯಾತಿಗೆ ಹೀಗೆ ಶಾಪಕೊಟ್ಟು ತೆರಳಿದರು.॥25॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಐವತ್ತೆಂಟನೆಯ ಸರ್ಗ ಪೂರ್ಣವಾಯಿತು. ॥58॥