०४४ भ्रातृ-प्राप्तिः

[ನಲವತ್ತನಾಲ್ಕನೆಯ ಸರ್ಗ]

ಭಾಗಸೂಚನಾ

ಸೋದರರೊಡನೆ ಶ್ರೀರಾಮನ ಸಂಭಾಷಣೆ

ಮೂಲಮ್ - 1

ವಿಸೃಜ್ಯ ತು ಸುಹೃದ್ವರ್ಗಂ ಬುದ್ಧ್ಯಾ ನಿಶ್ಚಿತ್ಯ ರಾಘವಃ ।
ಸಮೀಪೇ ದ್ವಾಃಸ್ಥಮಾಸೀನಮಿದಂ ವಚನಮಬ್ರವೀತ್ ॥

ಅನುವಾದ

ಸುಹೃದರನ್ನು ಕಳುಹಿಸಿಕೊಟ್ಟನಂತರ ಶ್ರೀರಾಮನು ಮುಂದೆ ತಾನು ಮಾಡುವ ಕಾರ್ಯವನ್ನು ಬುದ್ಧಿಯಿಂದ ನಿಶ್ಚಯಿಸಿ ಬಳಿಯಲ್ಲೇ ಇದ್ದ ದ್ವಾರಪಾಲಕನಲ್ಲಿ ಹೇಳಿದನು.॥1॥

ಮೂಲಮ್ - 2

ಶೀಘ್ರಮಾನಯ ಸೌಮಿತ್ರಂ ಲಕ್ಷ್ಮಣಂ ಶುಭಲಕ್ಷಣಮ್ ।
ಭರತಂ ಚ ಮಹಾಭಾಗಂ ಶತ್ರುಘ್ನಮಪರಾಜಿತಮ್ ॥

ಅನುವಾದ

ನೀನು ಬೇಗನೇ ಹೋಗಿ ಮಹಾಭಾಗ ಭರತ, ಸುಮಿತ್ರಾ ಕುಮಾರ ಶುಭಲಕ್ಷಣ ಲಕ್ಷ್ಮಣ ಮತ್ತು ಅಪರಾಜಿತ ವೀರ ಶತ್ರುಘ್ನನನ್ನು ಇಲ್ಲಿಗೆ ಕರೆದುಕೊಂಡು ಬಾ.॥2॥

ಮೂಲಮ್ - 3

ರಾಮಸ್ಯ ವಚನಂ ಶ್ರುತ್ವಾ ದ್ವಾಃಸ್ಥೋ ಮೂರ್ಧ್ನಿ ಕೃತಾಂಜಲಿಃ ।
ಲಕ್ಷ್ಮಣಸ್ಯ ಗೃಹಂ ಗತ್ವಾ ಪ್ರವಿವೇಶಾನಿವಾರಿತಃ ॥

ಅನುವಾದ

ಶ್ರೀರಾಮ ಚಂದ್ರನ ಆದೇಶ ಪಡೆದ ದ್ವಾರಪಾಲಕನು ತಲೆಯ ಮೇಲೆ ಅಂಜಲಿಬದ್ಧನಾಗಿ ಶ್ರೀರಾಮನಿಗೆ ನಮಸ್ಕರಿಸಿ, ಲಕ್ಷ್ಮಣನ ಮನೆಗೆ ಹೋಗಿ ಯಾವುದೇ ತಡೆಯಿಲ್ಲದೆ ಒಳಗೆ ಪ್ರವೇಶಿಸಿದನು.॥3॥

ಮೂಲಮ್ - 4

ಉವಾಚ ಸುಮಹಾತ್ಮಾನಂ ವರ್ಧಯಿತ್ವಾ ಕೃತಾಂಜಲಿಃ ।
ದ್ರಷ್ಟುಮಿಚ್ಛತಿ ರಾಜಾ ತ್ವಾಂ ಗಮ್ಯತಾಂ ತತ್ರ ಮಾ ಚಿರಮ್ ॥

ಅನುವಾದ

ಅಲ್ಲಿ ಕೈಮುಗಿದು ಲಕ್ಷ್ಮಣನ ಜಯ-ಜಯಕಾರ ಮಾಡುತ್ತಾ ಮಹಾತ್ಮಾ ಅವನಲ್ಲಿ ಹೇಳಿದನು - ರಾಜ ಕುಮಾರನೇ! ಮಹಾರಾಜರು ನಿಮ್ಮನ್ನು ನೋಡಲು ಬಯಸುತ್ತಿದ್ದಾರೆ, ವಿಳಂಬವಿಲ್ಲದೆ ಬೇಗನೇ ನಡೆಯಿರಿ.॥4॥

ಮೂಲಮ್ - 5

ಬಾಢಮಿತ್ಯೇವಸೌಮಿತ್ರಿಃ ಕೃತ್ವಾ ರಾಘವಶಾಸನಮ್ ।
ಪ್ರಾದ್ರವದ್ರಥಮಾರುಹ್ಯ ರಾಘವಸ್ಯ ನಿವೇಶನಮ್ ॥

ಅನುವಾದ

ಆಗ ಸುಮಿತ್ರಾ ಕುಮಾರ ಲಕ್ಷ್ಮಣನು ಹಾಗೆಯೇ ಆಗಲಿ ಎಂದು ಹೇಳಿ ಶ್ರೀರಾಮನ ಆದೇಶವನ್ನು ಶಿರಸಾವಹಿಸಿ ಕೂಡಲೇ ರಥದಲ್ಲಿ ಕುಳಿತು ಶ್ರೀರಘುನಾಥನ ಅರಮನೆಗೆ ಧಾವಿಸಿದನು.॥5॥

ಮೂಲಮ್ - 6½

ಪ್ರಯಾಂತಂ ಲಕ್ಷ್ಮಣಂ ದೃಷ್ಟ್ವಾ ದ್ವಾಃಸ್ಥೋ ಭರತಮಂತಿಕಾತ್ ।
ಉವಾಚ ಭರತಂ ತತ್ರ ವರ್ಧಯಿತ್ವಾ ಕೃತಾಂಜಲಿಃ ॥
ವಿನಯಾವನತೋ ಭೂತ್ವಾ ರಾಜಾ ತ್ವಾಂ ದ್ರಷ್ಟುಮಿಚ್ಛತಿ ।

ಅನುವಾದ

ಲಕ್ಷ್ಮಣನು ಹೋಗುವುದನ್ನು ನೋಡಿ ದ್ವಾರಪಾಲಕನು ಭರತನ ಬಳಿಗೆ ಹೋಗಿ, ಕೈಮುಗಿದುಕೊಂಡು ಅವನ ಜಯ-ಜಯಕಾರ ಮಾಡುತ್ತಾ ವಿನೀತನಾಗಿ ಪ್ರಭೋ! ಮಹಾರಾಜರು ನಿಮ್ಮನ್ನು ನೋಡಲು ಬಯಸುತ್ತಾರೆ ಎಂದು ಹೇಳಿದನು.॥6½॥

ಮೂಲಮ್ - 7½

ಭರತಸ್ತು ವಚಃ ಶ್ರುತ್ವಾ ದ್ವಾಃಸ್ಥಾದ್ರಾಮಸಮೀರಿತಮ್ ॥
ಉತ್ಪಪಾತಾಸನಾತ್ತೂರ್ಣಂ ಪದ್ಭ್ಯಾಮೇವ ಮಹಾಬಲಃ ।

ಅನುವಾದ

ಶ್ರೀರಾಮನು ಕಳಿಸಿದ ದ್ವಾರಪಾಲಕ ನಿಂದ ಇದನ್ನು ಕೇಳಿ ಮಹಾಬಲಿ ಭರತನು ತತ್ಕ್ಷಣ ತನ್ನ ಆಸನದಿಂದ ಎದ್ದು ಕಾಲ್ನಡಿಗೆಯಿಂದಲೇ ಹೊರಟನು.॥7½॥

ಮೂಲಮ್ - 8½

ದೃಷ್ಟ್ವಾ ಪ್ರಯಾಂತಂ ಭರತಂ ತ್ವರಮಾಣಃಕೃತಾಂಜಲಿಃ ॥
ಶತ್ರುಘ್ನಭವನಂ ಗತ್ವಾ ತತೋ ವಾಕ್ಯಮುವಾಚ ಹ ।

ಅನುವಾದ

ಭರತನು ಹೊರಟಿರುವುದನ್ನು ನೋಡಿ ದ್ವಾರಪಾಲಕನು ಅವಸರದಿಂದ ಶತ್ರುಘ್ನನ ಭವನಕ್ಕೆ ಹೋಗಿ ಕೈಮುಗಿದುಕೊಂಡು ಹೇಳಿದನು.॥8½॥

ಮೂಲಮ್ - 9½

ಏಹ್ಯಾಗಚ್ಛರಘುಶ್ರೇಷ್ಠ ರಾಜಾ ತ್ವಾಂ ದ್ರಷ್ಟುಮಿಚ್ಛತಿ ॥
ಗತೋ ಹಿ ಲಕ್ಷ್ಮಣಃ ಪೂರ್ವಂ ಭರತಶ್ಚ ಮಹಾಯಶಾಃ ।

ಅನುವಾದ

ರಘುಶ್ರೇಷ್ಠನೇ! ಬನ್ನಿ, ನಡೆಯಿರಿ, ಶ್ರೀರಾಮ ಮಹಾರಾಜರು ನಿಮ್ಮನ್ನು ನೋಡಲು ಬಯಸುತ್ತಿರುವರು. ಶ್ರೀಲಕ್ಷ್ಮಣ ಮತ್ತು ಮಹಾಯಶಸ್ವೀ ಭರತನೂ ಮೊದಲೇ ಹೋಗಿರುವರು.॥9½॥

ಮೂಲಮ್ - 10

ಶ್ರುತ್ವಾ ತು ವಚನಂ ತಸ್ಯ ಶತ್ರುಘ್ನಃ ಪರಮಾಸನಾತ್ ॥
ಶಿರಸಾ ವಂದ್ಯ ಧರಣೀಂ ಪ್ರಯಯೌಯತ್ರ ರಾಘವಃ ।

ಅನುವಾದ

ದ್ವಾರಪಾಲಕನ ಮಾತನ್ನು ಕೇಳಿ ಶತ್ರುಘ್ನನು ತನ್ನ ಉತ್ತಮಾಸನದಿಂದ ಎದ್ದು, ಮನಸ್ಸಿನಲ್ಲೇ ಶ್ರೀರಾಮನಿಗೆ ದಂಡವತ್ ನಮಸ್ಕರಿಸಿ ಕೂಡಲೇ ಅವನ ನಿವಾಸದ ಕಡೆಗೆ ಹೊರಟನು.॥10॥

ಮೂಲಮ್ - 11½

ದ್ವಾಃಸ್ಥಸ್ತ್ವಾಗಮ್ಯ ರಾಮಾಯ ಸರ್ವಾನೇನ ಕೃತಾಂಜಲಿಃ ॥
ನಿವೇದಯಾಮಾಸ ತಥಾ ಭ್ರಾತೃನ್ಸ್ವಾನ್ಸಮುಪಸ್ಥಿತಾನ್ ।

ಅನುವಾದ

ದ್ವಾರಪಾಲಕನು ಬಂದು ಶ್ರೀರಾಮನಿಗೆ ಕೈಮುಗಿದುಕೊಂಡು, ಪ್ರಭೋ! ತಮ್ಮ ಎಲ್ಲ ಸಹೋದರರು ಬಾಗಿಲಿಗೆ ಬಂದಿರುವರು ಎಂದು ನಿವೇದಿಸಿಕೊಂಡನು.॥11½॥

ಮೂಲಮ್ - 12½

ಕುಮಾರಾನಾಗತಾನ್ ಶ್ರುತ್ವಾ ಚಿಂತಾವ್ಯಾಕುಲಿತೇಂದ್ರಿಯಃ ॥
ಅವಾಙ್ಮುಖೋ ದೀನಮನಾ ದ್ವಾಃಸ್ಥಂ ವಚನಮಬ್ರವೀತ್ ।

ಮೂಲಮ್ - 13½

ಪ್ರವೇಶಯ ಕುಮಾರಾಂಸ್ತ್ವಂ ಮತ್ಸಮೀಪಂ ತ್ವರಾನ್ವಿತಃ ॥
ಏತೇಷು ಜೀವಿತಂ ಮಹ್ಯಮೇತೇ ಪ್ರಾಣಾಃ ಪ್ರಿಯಾ ಮಮ ।

ಅನುವಾದ

ಕುಮಾರರ ಆಗಮನವನ್ನು ಕೇಳಿ ಚಿಂತೆಯಿಂದ ವ್ಯಾಕುಲವಾದ ಇಂದ್ರಿಯಗಳುಳ್ಳ ಶ್ರೀರಾಮನು ತಲೆತಗ್ಗಿಸಿಕೊಂಡೇ ದುಃಖಿತನಾಗಿ - ನೀನು ಮೂವರೂ ರಾಜಕುಮಾರರನ್ನು ಬೇಗನೇ ನನ್ನ ಬಳಿಗೆ ಕರೆದುಕೊಂಡು ಬಾ. ನನ್ನ ಜೀವನ ಇವರ ಮೇಲೆಯೇ ಅವಲಂಬಿಸಿದೆ. ಇವರು ನನ್ನ ಪ್ರಿಯ ಪ್ರಾಣಸ್ವರೂಪರಾಗಿದ್ದಾರೆ, ಎಂದು ದ್ವಾರಪಾಲಕನಿಗೆ ಆದೇಶಿಸಿದನು.॥12½-13½॥

ಮೂಲಮ್ - 14½

ಆಜ್ಞಪ್ತಾಸ್ತು ನರೇಂದ್ರೇಣ ಕುಮಾರಾಃ ಶುಕ್ಲವಾಸಸಃ ॥
ಪ್ರಹ್ವಾಃ ಪ್ರಾಂಜಲಯೋ ಭೂತ್ವಾ ವಿವಿಶುಸ್ತೇ ಸಮಾಹಿತಾಃ ।

ಅನುವಾದ

ಮಹಾರಾಜರ ಆಜ್ಞೆ ಪಡೆದು ಆ ಶ್ವೇತವಸ್ತ್ರಧಾರಿ ಕುಮಾರರು ತಲೆತಗ್ಗಿಸಿಕೊಂಡು, ಕೈಮುಗಿದುಕೊಂಡು ಏಕಾಗ್ರಚಿತ್ತರಾಗಿ ಭವನವನ್ನು ಪ್ರವೇಶಿಸಿದರು.॥14½॥

ಮೂಲಮ್ - 15½

ತೇ ತು ದೃಷ್ಟ್ವಾ ಮುಖಂ ತಸ್ಯ ಸಗ್ರಹಂ ಶಶಿನಂ ಯಥಾ ॥
ಸಂಧ್ಯಾಗತಮಿವಾದಿತ್ಯಂ ಪ್ರಭಯಾ ಪರಿವರ್ಜಿತಮ್ ।

ಅನುವಾದ

ಚಂದ್ರನಿಗೆ ಗ್ರಹಣ ಹಿಡಿದಂತೆ ಶ್ರೀರಾಮನ ಉದಾಸ ಮುಖವನ್ನು ಅವರು ನೋಡಿದರು. ಅದು ಸಂಧ್ಯಾಕಾಲದ ಸೂರ್ಯನಂತೆ ಪ್ರಭಾಶೂನ್ಯವಾಗಿತ್ತು.॥15½॥

ಮೂಲಮ್ - 16

ಬಾಷ್ಪಪೂರ್ಣೇ ಚ ನಯನೇ ದೃಷ್ಟ್ವಾ ರಾಮಸ್ಯ ಧೀಮತಃ ।
ಹತಶೋಭಂ ಯಥಾ ಪದ್ಮಂ ಮುಖಂ ವೀಕ್ಷ್ಯ ಚತಸ್ಯ ತೇ ॥

ಅನುವಾದ

ಬುದ್ಧಿವಂತ ಶ್ರೀರಾಮನು ಎರಡೂ ಕಣ್ಣುಗಳಲ್ಲಿ ಕಂಬನಿ ತುಂಬಿತ್ತು, ಅವರ ಮುಖಾರವಿಂದದ ಶೋಭೆ ಕಳೆದುಹೋದುದನ್ನು ಅವರು ಪದೇ-ಪದೇ ನೋಡಿದರು.॥16॥

ಮೂಲಮ್ - 17

ತತೋಭಿವಾದ್ಯ ತ್ವರಿತಾಃ ಪಾದೌ ರಾಮಸ್ಯ ಮೂರ್ಧಭಿಃ ।
ತಸ್ಥುಃ ಸಮಾಹಿತಾಃ ಸರ್ವೇ ರಾಮಸ್ತ್ವಶ್ರೂಣ್ಯವರ್ತಯತ್ ॥

ಅನುವಾದ

ಬಳಿಕ ಮೂವರೂ ಸಹೋದರರು ಕೂಡಲೇ ಶ್ರೀರಾಮನಚರಣಗಳಲ್ಲಿ ಮಸ್ತಕವನ್ನಿಟ್ಟು ವಂದಿಸಿದರು. ಮತ್ತೆ ಅವರೆಲ್ಲರೂ ಪ್ರೇಮಸಮಾಧಿಸ್ಥರಾಗಿ ಬಿದ್ದುಬಿಟ್ಟರು. ಆಗ ಶ್ರೀರಾಮನು ಕಣ್ಣೀರು ಹರಿಸುತ್ತಿದ್ದನು.॥17॥

ಮೂಲಮ್ - 18

ತಾನ್ಪರಿಷ್ವಜ್ಯ ಬಾಹುಭ್ಯಾಮುತ್ಥಾಪ್ಯ ಚ ಮಹಾಬಲಃ ।
ಆಸನೇಷ್ವಾಸತೇತ್ಯುಕ್ತ್ವಾ ತತೋ ವಾಕ್ಯಂ ಜಗಾದ ಹ ॥

ಅನುವಾದ

ಮಹಾಬಲಿ ರಘುನಾಥನು ಎರಡೂ ಭುಜಗಳಿಂದ ಎಬ್ಬಿಸಿ ಅವರೆಲ್ಲರನ್ನು ಆಲಿಂಗಿಸಿಕೊಂಡನು. ಈ ಆಸನದಲ್ಲಿ ಕುಳಿತುಕೊಳ್ಳಿ ಎಂದು ಹೇಳಿದಾಗ ಅವರು ಕುಳಿತುಕೊಂಡಾಗ ಮತ್ತೆ ನುಡಿದನು.॥18॥

ಮೂಲಮ್ - 19

ಭವಂತೋ ಮಮ ಸರ್ವಸ್ವಂ ಭವಂತೋ ಜೀವಿತಂ ಮಮ ।
ಭವದ್ಭಿಶ್ಚ ಕೃತಂ ರಾಜ್ಯಂ ಪಾಲಯಾಮಿ ನರೇಶ್ವರಾಃ ॥

ಅನುವಾದ

ರಾಜಕುಮಾರರೇ! ನೀವು ನನ್ನ ಸರ್ವಸ್ವರಾಗಿದ್ದೀರಿ. ನೀವೇ ನನ್ನ ಜೀವನರಾಗಿದ್ದೀರಿ ಹಾಗೂ ನಿಮ್ಮಿಂದಲೇ ಸಂಪಾದಿತ ಈ ರಾಜ್ಯವನ್ನು ನಾನು ಪಾಲಿಸುತ್ತಿದ್ದೇನೆ.॥19॥

ಮೂಲಮ್ - 20

ಭವಂತಃ ಕೃತಶಾಸ್ತ್ರಾರ್ಥಾ ಬುದ್ಧ್ಯಾ ಚ ಪರಿನಿಷ್ಠಿತಾಃ ।
ಸಂಭೂಯ ಚ ಮದರ್ಥೋಽಯಮನ್ವೇಷ್ಟವ್ಯೋ ನರೇಶ್ವರಾಃ ॥

ಅನುವಾದ

ನರೇಶ್ವರರೇ ! ನೀವು ಎಲ್ಲ ಶಾಸ್ತ್ರಗಳ ಜ್ಞಾನಿಗಳಾಗಿದ್ದು, ಅವುಗಳಲ್ಲಿ ಹೇಳಿದ ಕರ್ತವ್ಯಗಳನ್ನು ಪಾಲಿಸುವವರಾಗಿದ್ದೀರಿ. ನಿಮ್ಮ ಬುದ್ಧಿ ಪರಿಪಕ್ವವಾಗಿದೆ. ಈಗ ನಾನು ನಿಮ್ಮ ಮುಂದೆ ಇಡುವ ಕಾರ್ಯವನ್ನು ನೀವೆಲ್ಲರೂ ಸೇರಿ ನನ್ನ ಸಮಸ್ಯೆಗೆ ಮಾರ್ಗ ಹುಡುಕಬೇಕಾಗಿದೆ.॥20॥

ಮೂಲಮ್ - 21

ತಥಾ ವದತಿ ಕಾಕುತ್ಸ್ಥೇ ಅವಧಾನಪರಾಯಣಾಃ ।
ಉದ್ವಿಗ್ನಮನಸಃ ಸರ್ವೇ ಕಿಂ ನು ರಾಜಾಭಿಧಾಸ್ಯತಿ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಎಲ್ಲ ಸಹೋದರರು ಆಶ್ಚರ್ಯಪಟ್ಟರು. ಎಲ್ಲರ ಚಿತ್ತ ಉದ್ವಿಗ್ನವಾಯಿತು ಮತ್ತು ಮಹಾರಾಜರು ನಮ್ಮಲ್ಲಿ ಏನು ಹೇಳುವರೋ ತಿಳಿಯದು ಎಂದು ಯೋಚಿಸತೊಡಗಿದರು.॥21॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥44॥