[ಪ್ರಕ್ಷಿಪ್ತ ಸರ್ಗ 1*]
ಟಿಪ್ಪನೀ
*ಕೆಲವು ಪ್ರತಿಗಳಲ್ಲಿ ಇಲ್ಲಿ ಮೂರು ಸರ್ಗ ಇನ್ನು ಸಿಗುತ್ತವೆ. ಅದಕ್ಕೆ ಸಂಸ್ಕೃತ ಟೀಕಾಕಾರ ವ್ಯಾಖ್ಯಾನ ಸಿಗದಿರುವುದರಿಂದ ಇವನ್ನು ಪ್ರಕ್ಷಿಪ್ತ ಎಂದು ಹೇಳಲಾಗಿದೆ. ಇವುಗಳಲ್ಲಿ ಎರಡು ಸರ್ಗ ಉಪಯೋಗೀ ಇರುವುದರಿಂದ ಇಲ್ಲಿ ಅನುವಾದ ಸಹಿತ ಕೊಡಲಾಗಿದೆ.
ಭಾಗಸೂಚನಾ
ಶ್ರೀರಾಮನ ಬಾಗಿಲಿಗೆ ನಾಯಿಯೊಂದು ಬಂದುದು, ಅದನ್ನು ಸಭಾಭವನಕ್ಕೆ ಕರೆತರಲು ಶ್ರೀರಾಮನ ಆದೇಶ
ಮೂಲಮ್ - 1
ತತಃ ಪ್ರಭಾತೇ ವಿಮಲೇ ಕೃತ್ವಾ ಪೌರ್ವಾಹ್ಣಿಕೀಂ ಕ್ರಿಯಾಮ್ ।
ಧರ್ಮಾಸನಗತೋ ರಾಜಾ ರಾಮೋರಾಜೀವಲೋಚನಃ ॥
ಮೂಲಮ್ - 2
ರಾಜಧರ್ಮಾನವೇಕ್ಷನ್ ವೈ ಬ್ರಾಹ್ಮಣೈರ್ನೈಗಮೈಃಸಹ ।
ಪುರೋಧಸಾ ವಸಿಷ್ಠೇನ ಋಷಿಣಾ ಕಶ್ಯಪೇನ ಚ ॥
ಅನುವಾದ
ಅನಂತರ ನಿರ್ಮಲ ಪ್ರಭಾತಕಾಲದಲ್ಲಿ ಸಂಧ್ಯಾ ವಂದನಾದಿ ನಿತ್ಯಕರ್ಮ ಮಾಡಿ ಕಮಲನಯನ ರಾಜಾ ಶ್ರೀರಾಮನು ರಾಜಧರ್ಮಗಳನ್ನು ಪಾಲಿಸುತ್ತಾ ವೇದ ವೇತ್ತರಾದ ಬ್ರಾಹ್ಮಣರು, ಪುರೋಹಿತ ವಸಿಷ್ಠರು ಹಾಗೂ ಕಶ್ಯಪ ಮುನಿಗಳೊಂದಿಗೆ ರಾಜಸಭೆಯಲ್ಲಿ ಉಪಸ್ಥಿತನಾಗಿ ಧರ್ಮಾನುಸಾರ ವಿರಾಜಮಾನನಾದನು.॥1-2॥
ಮೂಲಮ್ - 3
ಮಂತ್ರಿಭಿರ್ವ್ಯವಹಾರಜ್ಞೈಸ್ತಥಾನ್ಯೈರ್ಧರ್ಮಪಾಠಕೈಃ ।
ನೀತಿಜ್ಞೈರಥ ಸಭ್ಯೈಶ್ಚ ರಾಜಭಿಃ ಸಾ ಸಭಾ ವೃತಾ ॥
ಅನುವಾದ
ಆ ಸಭಾ ವ್ಯವಹಾರದ ಜ್ಞಾನವುಳ್ಳ ಮಂತ್ರಿಗಳಿಂದ, ಧರ್ಮಶಾಸ್ತ್ರ, ವಿದ್ವಾಂಸರಿಂದ, ನೀತಿಜ್ಞರಿಂದ, ರಾಜರುಗಳಿಂದ, ಇತರ ಸಭಾಸದರಿಂದ ಆ ರಾಜಸಭೆ ತುಂಬಿತ್ತು.॥3॥
ಮೂಲಮ್ - 4
ಸಭಾ ಯಥಾ ಮಹೇಂದ್ರಸ್ಯ ಯಮಸ್ಯ ವರುಣಸ್ಯ ಚ ।
ಶುಶುಭೇ ರಾಜಸಿಂಹಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ ॥
ಅನುವಾದ
ಸುಲಭವಾಗಿ ಮಹಾಕರ್ಮ ಮಾಡುವ ರಾಜಸಿಂಹ ಶ್ರೀರಾಮನ ಆ ಸಭೆಯು ಇಂದ್ರ, ಯಮ, ವರುಣರ ಸಭೆಗಳಂತೆ ಶೋಭಿಸುತ್ತಿತ್ತು.॥4॥
ಮೂಲಮ್ - 5½
ಅಥ ರಾಮೋಽಬ್ರವೀತ್ತತ್ರ ಲಕ್ಷ್ಮಣಂ ಶುಭಲಕ್ಷಣಮ್ ।
ನಿರ್ಗಚ್ಛ ತ್ವಂಮಹಾಬಾಹೋ ಸುಮಿತ್ರಾನಂದವರ್ಧನ ॥
ಕಾರ್ಯಾರ್ಥಿನಶ್ಚ ಸೌಮಿತ್ರೇ ವ್ಯಾಹರ್ತುಂ ತ್ವಮುಪಾಕ್ರಮ ।
ಅನುವಾದ
ಅಲ್ಲಿ ಕುಳಿತಿರುವ ಭಗವಾನ್ ಶ್ರೀರಾಮನು ಶುಭಲಕ್ಷಣಸಂಪನ್ನ ಲಕ್ಷ್ಮಣನಲ್ಲಿ ಹೇಳಿದನು-ಮಾತೆ ಸುಮಿತ್ರಾನಂದವರ್ಧನ ಮಹಾ ಬಾಹು ವೀರನೇ! ನೀನು ಹೊರಗೆ ಹೋಗಿ ಯಾರು-ಯಾರು ಕಾರ್ಯಾರ್ಥಿಗಳು ಉಪಸ್ಥಿತರಾಗಿದ್ದಾರೆ ಎಂದು ನೋಡು. ಸುಮಿತ್ರಾಕುಮಾರ! ನೀನು ಆ ಕಾರ್ಯಾರ್ಥಿಗಳನ್ನು ಒಬ್ಬೊಬ್ಬರಾಗಿ ಕರೆಯಲು ಪ್ರಾರಂಭಿಸು.॥5½॥
ಮೂಲಮ್ - 6
ರಾಮಸ್ಯ ಭಾಷಿತಂ ಶ್ರುತ್ವಾ ಲಕ್ಷ್ಮಣಃ ಶುಭಲಕ್ಷಣಃ ॥
ಮೂಲಮ್ - 7
ದ್ವಾರದೇಶಮುಪಾಗಮ್ಯ ಕಾರ್ಯಿಣಶ್ಚಾಹ್ವಯತ್ಸ್ವಯಮ್ ।
ನ ಕಶ್ಚಿದಬ್ರವೀತ್ತತ್ರ ಮಮ ಕಾರ್ಯಮಿಹಾದ್ಯ ವೈ ॥
ಅನುವಾದ
ಶ್ರೀರಾಮನ ಆದೇಶವನ್ನು ಕೇಳಿ ಶುಭಲಕ್ಷಣ ಲಕ್ಷ್ಮಣನು ಮಹಾದ್ವಾರಕ್ಕೆ ಬಂದು ಕಾರ್ಯಾರ್ಥಿಗಳನ್ನು ಕರೆದನು, ಆದರೆ ನನಗೆ ಇಲ್ಲಿ ಯಾವುದೋ ಕಾರ್ಯವಿದೆ ಎಂದು ಹೇಳುವವರು ಯಾರೂ ಇರಲಿಲ್ಲ.॥6-7॥
ಮೂಲಮ್ - 8
ನಾಧಯೋ ವ್ಯಾಧಯಶ್ಚೈವ ರಾಮೇ ರಾಜ್ಯಂ ಪ್ರಶಾಸತಿ ।
ಪಕ್ವಸಸ್ಯಾ ವಸುಮತೀ ಸರ್ವೌಷಧಿಸಮನ್ವಿತಾ ॥
ಅನುವಾದ
ಶ್ರೀರಾಮನ ಆಳ್ವಿಕೆಯಲ್ಲಿ ಎಲ್ಲಿಯೂ ಯಾರಿಗೂ ಶಾರೀರಿಕ ರೋಗಗಳಿರಲಿಲ್ಲ, ಮಾನಸಿಕ ಚಿಂತೆಗಳು ಸತಾಯಿಸುತ್ತಿರಲಿಲ್ಲ. ಪೃಥಿವಿಯಲ್ಲಿ ಎಲ್ಲ ರೀತಿಯ ಔಷಧಿಗಳು (ಅನ್ನ-ಫಲಾದಿಗಳು) ಉತ್ಪನ್ನವಾಗಿ, ಬೆಳೆದು ನಿಂತ ಹೊಲಗಳು ಎಲ್ಲೆಡೆ ಶೋಭಿಸುತ್ತಿದ್ದವು.॥8॥
ಮೂಲಮ್ - 9
ನ ಬಾಲೋ ಮ್ರಿಯತೇ ತತ್ರ ನ ಯುವಾ ನ ಚ ಮಧ್ಯಮಃ ।
ಧರ್ಮೇಣ ಶಾಸಿತಂ ಸರ್ವಂ ನ ಚ ಬಾಧಾ ವಿಧೀಯತೇ ॥
ಅನುವಾದ
ಶ್ರೀರಾಮ ರಾಜ್ಯದಲ್ಲಿ ಬಾಲಕರ, ಯುವಕರ, ನಡುವಯಸ್ಸಿನವರ ಮೃತ್ಯು ಆಗುತ್ತಿರಲಿಲ್ಲ. ಎಲ್ಲರ ಶಾಸನ ಧರ್ಮಪೂರ್ವಕ ನಡೆಯುತ್ತಿತ್ತು. ಯಾರಿಗೂ ಯಾವುದೇ ಬಾಧೆಗಳು ಇದಿರಾಗುತ್ತಿರಲಿಲ್ಲ.॥9॥
ಮೂಲಮ್ - 10
ದೃಶ್ಯತೇ ನ ಚ ಕಾರ್ಯಾರ್ಥೀ ರಾಮೇ ರಾಜ್ಯಂ ಪ್ರಶಾಸತಿ ।
ಲಕ್ಷ್ಮಣಃ ಪ್ರಾಂಜಲಿರ್ಭೂತ್ವಾ ರಾಮಾಯೈವಂ ನ್ಯವೇದಯತ್ ॥
ಅನುವಾದ
ಶ್ರೀರಾಮನ ಶಾಸನಕಾಲದಲ್ಲಿ ಎಂದೂ ಯಾರೇ ಕಾರ್ಯಾರ್ಥಿಗಳು ಕಂಡು ಬರುತ್ತಿರಲಿಲ್ಲ. ಲಕ್ಷ್ಮಣನು ಕೈಮುಗಿದುಕೊಂಡು ಶ್ರೀರಾಮಚಂದ್ರನಲ್ಲಿ ರಾಜ್ಯದ ಇಂತಹ ಸ್ಥಿತಿಯನ್ನು ತಿಳಿಸಿದನು.॥10॥
ಮೂಲಮ್ - 11
ಅಥರಾಮಃ ಪ್ರಸನ್ನಾತ್ಮಾ ಸೌಮಿತ್ರಿಮಿದಮಬ್ರವೀತ್ ।
ಭೂಯ ಏವ ತು ಗಚ್ಛ ತ್ವಂ ಕಾರ್ಯಿಣಃ ಪ್ರವಿಚಾರಯ ॥
ಅನುವಾದ
ಅನಂತರ ಪ್ರಸನ್ನಚಿತ್ತನಾದ ಶ್ರೀರಾಮನು ಸುಮಿತ್ರಾಕುಮಾರನಲ್ಲಿ ಪುನಃ ಹೀಗೆ ಹೇಳಿದನು-ಲಕ್ಷ್ಮಣ! ನೀನು ಪುನಃ ಹೋಗಿ ಕಾರ್ಯಾರ್ಥಿಗಳನ್ನು ಹುಡುಕು.॥11॥
ಮೂಲಮ್ - 12
ಸಮ್ಯಕ್ಪ್ರಣೀತಯಾ ನೀತ್ಯಾ ನಾಧರ್ಮೋ ವಿದ್ಯತೇ ಕ್ವಚಿತ್ ।
ತಸ್ಮಾದ್ರಾಜಭಯಾತ್ಸರ್ವೇ ರಕ್ಷಂತೀಹ ಪರಸ್ಪರಮ್ ॥
ಅನುವಾದ
ಚೆನ್ನಾಗಿ ಉತ್ತಮ ನೀತಿಯನ್ನು ಪ್ರಯೋಗಿಸುವುದರಿಂದ ರಾಜ್ಯದಲ್ಲಿ ಎಲ್ಲಿಯೂ ಅಧರ್ಮ ಉಳಿಯುವುದಿಲ್ಲ. ಆದ್ದರಿಂದ ಎಲ್ಲ ಜನರು ರಾಜನ ಭಯದಿಂದ ಇಲ್ಲಿ ಒಬ್ಬರು ಮತ್ತೊಬ್ಬರನ್ನು ರಕ್ಷಿಸುತ್ತಿದ್ದರು.॥12॥
ಮೂಲಮ್ - 13
ಬಾಣಾ ಇವ ಮಯಾ ಮುಕ್ತಾ ಇಹ ರಕ್ಷಂತೀ ಮೇ ಪ್ರಜಾಃ ।
ತಥಾಪಿ ತ್ವಂಮಹಾಬಾಹೋ ಪ್ರಜಾ ರಕ್ಷಸ್ವ ತತ್ಪರಃ ॥
ಅನುವಾದ
ರಾಜಸೇವಕರಾದರೋ ನಾನು ಬಿಟ್ಟ ಬಾಣದಂತೆ ಇಲ್ಲಿ ಪ್ರಜೆಗಳನ್ನು ರಕ್ಷಿಸುತ್ತಿದ್ದರೂ ಮಹಾಬಾಹೋ! ನೀನು ಸ್ವತಃ ತತ್ಪರನಾಗಿದ್ದು ಪ್ರಜೆಯ ಪಾಲನೆಯನ್ನು ಮಾಡು.॥13॥
ಮೂಲಮ್ - 14
ಏವಮುಕ್ತಸ್ತು ಸೌಮಿತ್ರಿರ್ನಿರ್ಜಗಾಮನೃಪಾಲಯಾತ್ ।
ಅಪಶ್ಯದ್ದ್ವಾರದೇಶೇ ವೈ ಶ್ವಾನಂ ತಾವದವಸ್ಥಿತಮ್ ॥
ಮೂಲಮ್ - 15
ತಮೇವ ವೀಕ್ಷಮಾಣಂ ವೈ ವಿಕ್ರೋಶಂತಂ ಮುಹುರ್ಮುಹುಃ ।
ದೃಷ್ಟ್ವಾಥ ಲಕ್ಷ್ಮಣಸ್ತಂ ವೈ ಸ ಪಪ್ರಚ್ಛಾಥ ವೀರ್ಯವಾನ್ ॥
ಅನುವಾದ
ಶ್ರೀರಾಮನು ಹೀಗೆ ಹೇಳಿದಾಗ ಸೌಮಿತ್ರಿಯು ರಾಜ್ಯ ಭವನದಿಂದ ಹೊರಗೆ ಹೊರಟನು. ಹೊರಗೆ ಬಂದು ನೋಡಿದರೆ ದ್ವಾರದಲ್ಲಿ ಒಂದು ನಾಯಿ ನಿಂತಿತ್ತು, ಅದು ಅವನನ್ನು ನೋಡಿ ಪದೇ-ಪದೇ ಬೊಗಳುತ್ತಿತ್ತು. ಇದನ್ನು ನೋಡಿ ಪರಾಕ್ರಮಿ ಲಕ್ಷ್ಮಣನು ಅದರಲ್ಲಿ ಕೇಳಿದನು.॥14-15॥
ಮೂಲಮ್ - 16
ಕಿಂ ತೇ ಕಾರ್ಯಂ ಮಹಾಭಾಗ ಬ್ರೂಹಿ ವಿಸ್ರಬ್ಧಮಾನಸಃ ।
ಲಕ್ಷ್ಮಣಸ್ಯ ವಚಃ ಶ್ರುತ್ವಾ ಸಾರಮೇಯೋಭ್ಯಭಾಷತ ॥
ಅನುವಾದ
ಮಹಾಭಾಗ! ನಿನಗೆ ಏನು ಕೆಲಸವಿದೆ? ನಿರ್ಭಯವಾಗಿ ತಿಳಿಸು. ಲಕ್ಷ್ಮಣನ ಮಾತನ್ನು ಕೇಳಿ ನಾಯಿಯು ಹೇಳಿತು-॥16॥
ಮೂಲಮ್ - 17
ಸರ್ವಭೂತಶರಣ್ಯಾಯ ರಾಮಾಯಾಕ್ಲಿಷ್ಟ ಕರ್ಮಣೇ ।
ಭಯೇಷ್ವಭಯದಾತ್ರೇ ಚ ತಸ್ಮೈ ವಕ್ತುಂ ಸಮುತ್ಸಹೇ ॥
ಅನುವಾದ
ಯಾರು ಸಮಸ್ತ ಪ್ರಾಣಿಗಳಿಗೆ ಶರಣು ಕೊಡುವನೋ, ಕ್ಲೇಶರಹಿತ ಕರ್ಮ ಮಾಡುವನೋ, ಭಯದಲ್ಲಿ ಅಭಯ ಕೊಡುವನೋ ಆ ಭಗವಾನ್ ಶ್ರೀರಾಮನ ಮುಂದೆಯೇ ನನ್ನ ಕಾರ್ಯವನ್ನು ಹೇಳಬಲ್ಲೆ.॥17॥
ಮೂಲಮ್ - 18
ಏತಚ್ಛ್ರುತ್ವಾ ಚ ವಚನಂ ಸಾರಮೇಯಸ್ಯ ಲಕ್ಷ್ಮಣಃ ।
ರಾಘವಾಯ ತದಾಖ್ಯಾತುಂ ಪ್ರವಿವೇಶಾಲಯಂ ಶುಭಮ್ ॥
ಅನುವಾದ
ನಾಯಿಯ ಮಾತನ್ನು ಕೇಳಿ ಲಕ್ಷ್ಮಣನು ಶ್ರೀರಾಮನಿಗೆ ಇದನ್ನು ಸೂಚಿಸಲು ಸುಂದರ ರಾಜಭವನದಲ್ಲಿ ಪ್ರವೇಶಿಸಿದನು.॥18॥
ಮೂಲಮ್ - 19
ನಿವೇದ್ಯ ರಾಮಸ್ಯ ಪುನರ್ನಿರ್ಜಗಾಮ ನೃಪಾಲಯಾತ್ ।
ವಕ್ತವ್ಯಂ ಯದಿ ತೇ ಕಿಂಚಿತ್ತತ್ತ್ವಂ ಬ್ರೂಹಿ ನೃಪಾಯ ವೈ ॥
ಅನುವಾದ
ಶ್ರೀರಾಮನಿಗೆ ನಾಯಿಯ ಮಾತನ್ನು ತಿಳಿಸಿ ಲಕ್ಷ್ಮಣನು ಪುನಃ ರಾಜದ್ವಾರಕ್ಕೆ ಬಂದು ಅದರಲ್ಲಿ ಹೇಳಿದನು - ನಿನಗೆ ಏನಾದರೂ ಹೇಳುವುದಿದ್ದರೆ ಹೋಗಿ ರಾಜನಲ್ಲೇ ತಿಳಿಸು.॥19॥
ಮೂಲಮ್ - 20
ಲಕ್ಷ್ಮಣಸ್ಯ ವಚಃ ಶ್ರುತ್ವಾ ಸಾರಮೇಯೋಽಭ್ಯಭಾಷತ ।
ದೇವಾಗಾರೇ ನೃಪಾಗಾರೇ ದ್ವಿಜವೇಶ್ಮಸು ವೈ ತಥಾ ॥
ಮೂಲಮ್ - 21
ವಹ್ನಿಃ ಶತಕ್ರತುಶ್ಚೈವ ಸೂರ್ಯೋ ವಾಯುಶ್ಚ ತಿಷ್ಠತಿ ।
ನಾತ್ರ ಯೋಗ್ಯಾಸ್ತು ಸೌಮಿತ್ರೇ ಯೋನೀನಾಮಧಮಾ ವಯಮ್ ॥
ಅನುವಾದ
ಲಕ್ಷ್ಮಣನ ಮಾತನ್ನು ಕೇಳಿ ನಾಯಿಯು ಹೇಳಿತು - ಸುಮಿತ್ರಾನಂದನ! ದೇವಾಲಯದಲ್ಲಿ, ರಾಜಭವನದಲ್ಲಿ, ಬ್ರಾಹ್ಮಣರ ಮನೆಗಳಲ್ಲಿ ಅಗ್ನಿ, ಇಂದ್ರ, ಸೂರ್ಯ, ವಾಯು ಸದಾ ಸ್ಥಿತರಾಗಿರುತ್ತಾರೆ. ಆದ್ದರಿಂದ ನಮ್ಮಂತಹ ಅಧಮ ಯೋನೀ ಜೀವರಿಗೆ ಸ್ವೇಚ್ಛೆಯಿಂದ ಅಲ್ಲಿಗೆ ಹೋಗುವುದು ಯೋಗ್ಯವಲ್ಲ.॥20-21॥
ಮೂಲಮ್ - 22
ಪ್ರವೇಷ್ಟುಂ ನಾತ್ರ ಶಕ್ಷ್ಯಾಮಿ ಧರ್ಮೋ ವಿಗ್ರಹವಾನ್ನೃಪಃ ।
ಸತ್ಯವಾದೀ ರಣಪಟುಃ ಸರ್ವಸತ್ತ್ವಹಿತೇ ರತಃ ॥
ಅನುವಾದ
ನಾನು ಈ ರಾಜಭವನದಲ್ಲಿ ಪ್ರವೇಶಿಸಲಾರೆ; ಏಕೆಂದರೆ ರಾಜಾಶ್ರೀರಾಮನು ಧರ್ಮದ ಮೂರ್ತಿಮಂತ ಸ್ವರೂಪವಾಗಿದ್ದಾನೆ. ಅವನು ಸತ್ಯವಾದೀ, ಸಂಗ್ರಾಮಕುಶಲ ಮತ್ತು ಸಮಸ್ತ ಪ್ರಾಣಿಗಳ ಹಿತದಲ್ಲಿ ತತ್ಪರನಾಗಿರುವನು.॥22॥
ಮೂಲಮ್ - 23
ಷಾಡ್ಗುಣ್ಯಸ್ಯ ಪದಂ ವೇತ್ತಿ ನೀತಿಕರ್ತಾ ಸ ರಾಘವಃ ।
ಸರ್ವಜ್ಞಃ ಸರ್ವದರ್ಶೀ ಚ ರಾಮೋ ರಮಯತಾಂ ವರಃ ॥
ಅನುವಾದ
ಅವನು ಸಂಧೀ, ವಿಗ್ರಹ ಆದಿ ಆರು ಗುಣಗಳ ಪ್ರಯೋಗದ ಸಂದರ್ಭಗಳನ್ನು ತಿಳಿದಿರುವನು. ಶ್ರೀರಾಮನು ನ್ಯಾಯ ಮಾಡುವವನೂ, ಸರ್ವಜ್ಞನೂ, ಸರ್ವದರ್ಶಿಯೂ ಆಗಿದ್ದಾನೆ. ಶ್ರೀರಾಮನು ಇತರರ ಮನಸ್ಸನ್ನು ರಮಿಸುವವನಾಗಿದ್ದಾನೆ.॥23॥
ಮೂಲಮ್ - 24
ಸ ಸೋಮಃ ಸ ಚ ಮೃತ್ಯುಶ್ಚ ಸ ಯಮೋ ಧನದಸ್ತಥಾ ।
ವಹ್ನಿಃಶತಕ್ರತುಶ್ಚೈವ ಸೂರ್ಯೋ ವೈ ವರುಣಸ್ತಥಾ ॥
ಅನುವಾದ
ಅವನೇ ಚಂದ್ರ, ಮೃತ್ಯು, ಯಮ, ಕುಬೇರ, ಅಗ್ನಿ, ಇಂದ್ರ, ಸೂರ್ಯ, ವರುಣ ಎಲ್ಲವಾ ಆಗಿರುವನು.॥24॥
ಮೂಲಮ್ - 25
ತಸ್ಯ ತ್ವಂ ಬ್ರೂಹಿ ಸೌಮಿತ್ರೇ ಪ್ರಜಾಪಾಲಃ ಸ ರಾಘವಃ ।
ಅನಾಜ್ಞಪ್ತಸ್ತು ಸೌಮಿತ್ರೇ ಪ್ರವೇಷ್ಟುಂನೇಚ್ಛಯಾಮ್ಯಹಮ್ ॥
ಅನುವಾದ
ಸುಮಿತ್ರಾನಂದನ! ಶ್ರೀರಘುನಾಥನು ಪ್ರಜಾಪಾಲಕನಾಗಿದ್ದಾನೆ. ನೀವು ಅವನಲ್ಲಿ ಹೇಳಿರಿ. ನಾನು ಅವನ ಆಜ್ಞೆ ಪಡೆಯದೆ ಈ ಭವನದಲ್ಲಿ ಪ್ರವೇಶಿಸಲು ಬಯಸುವುದಿಲ್ಲ.॥25॥
ಮೂಲಮ್ - 26
ಆನೃಶಂಸ್ಯಾನ್ಮಹಾಭಾಗಃ ಪ್ರವಿವೇಶ ಮಹಾದ್ಯುತಿಃ ।
ನೃಪಾಲಯಂ ಪ್ರವಿಶ್ಯಾಥ ಲಕ್ಷ್ಮಣೋ ವಾಕ್ಯಮಬ್ರವೀತ್ ॥
ಅನುವಾದ
ಇದನ್ನು ಕೇಳಿ ಮಹಾತೇಜಸ್ವೀ ಮಹಾಭಾಗ ಲಕ್ಷ್ಮಣನು ದಯಾವಶ ರಾಜಭವನವನ್ನು ಪ್ರವೇಶಿಸಿ ಹೇಳಿದನು.॥26॥
ಮೂಲಮ್ - 27
ಶ್ರೂಯತಾಂ ಮಮ ವಿಜ್ಞಾಪ್ಯಂ ಕೌಸಲ್ಯಾನಂದವರ್ಧನ ।
ಯನ್ಮಯೋಕ್ತಂ ಮಹಾಬಾಹೋ ತವ ಶಾಸನಜಂ ವಿಭೋ ॥
ಅನುವಾದ
ಕೌಸಲ್ಯಾನಂದವರ್ದಕ ಮಹಾಬಾಹು ಶ್ರೀರಾಮಾ! ನನ್ನ ನಿವೇದನೆಯನ್ನು ಆಲಿಸಿರಿ. ನಿಮ್ಮ ಆದೇಶದಂತೆ ನಾನು ಹೊರಗೆ ಹೋಗಿ ಕಾರ್ಯಾರ್ಥಿಗಳನ್ನು ಕರೆದೆ.॥27॥
ಮೂಲಮ್ - 28
ಶ್ವಾ ವೈ ತೇ ತಿಷ್ಠತೇ ದ್ವಾರಿ ಕಾರ್ಯಾರ್ಥೀ ಸಮುಪಾಗತಃ ।
ಲಕ್ಷ್ಮಣಸ್ಯ ವಚಃ ಶ್ರುತ್ವಾ ರಾಮೋ ವಚನಮಬ್ರವೀತ್ ।
ಸಂಪ್ರವೇಶಯ ವೈ ಕ್ಷಿಪ್ರಂ ಕಾರ್ಯಾರ್ಥೀ ಯೋಽತ್ರ ತಿಷ್ಠತಿ ॥
ಅನುವಾದ
ಆಗ ನಿಮ್ಮ ದ್ವಾರದಲ್ಲಿ ಒಂದು ನಾಯಿ ನಿಂತಿದೆ, ಅದು ಕಾರ್ಯಾರ್ಥಿ ಯಾಗಿ ಬಂದಿದೆ. ಲಕ್ಷ್ಮಣನ ಮಾತನ್ನು ಕೇಳಿ ಶ್ರೀರಾಮನು ಹೇಳಿದನು - ಇಲ್ಲಿ ಕಾರ್ಯಾರ್ಥಿಯಾಗಿ ಯಾರೇ ನಿಂತಿದ್ದರೆ, ಅವರನ್ನು ಶೀಘ್ರವಾಗಿ ಭವನದೊಳಗೆ ಕರೆದುಕೊಂಡು ಬಾ.॥28॥
ಅನುವಾದ (ಸಮಾಪ್ತಿಃ)
ಪ್ರಕ್ಷಿಪ್ತ ಒಂದನೆಯ ಸರ್ಗ ಪೂರ್ಣವಾಯಿತು.