०१९ अनरण्य-शापः

[ಹತ್ತೊಂಭತ್ತನೆಯ ಸರ್ಗ]

ಭಾಗಸೂಚನಾ

ರಾವಣನು ಅನರಣ್ಯನನ್ನು ವಧಿಸಿದುದು, ಅವನಿಂದ ಶಾಪ

ಮೂಲಮ್ - 1

ಅಥ ಜಿತ್ವಾ ಮರುತ್ತಂಸ ಪ್ರಯಯೌ ರಾಕ್ಷಸಾಧಿಪಃ ।
ನಗರಾಣಿ ನರೇಂದ್ರಾಣಾಂ ಯುದ್ಧಕಾಂಕ್ಷೀ ದಶಾನನಃ ॥

ಅನುವಾದ

(ಅಗಸ್ತ್ಯರು ಹೇಳುತ್ತಾರೆ - ರಘುನಂದನ !) ಹಿಂದಿನಂತೆ ಮರುತ್ತನನ್ನು ಜಯಿಸಿದ ಬಳಿಕ ರಾಕ್ಷಸರಾಜ ದಶಗ್ರೀವನು ಕ್ರಮವಾಗಿ ಇತರ ರಾಜರಲ್ಲಿಯೂ ಯುದ್ಧದ ಇಚ್ಛೆಯಿಂದ ಹೋದನು.॥1॥

ಮೂಲಮ್ - 2

ಸಮಾಸಾದ್ಯ ತು ರಾಜೇಂದ್ರಾನ್ಮಹೇಂದ್ರ ವರುಣೋಪಮಾನ್ ।
ಅಬ್ರವೀದ್ರಾಕ್ಷಸೇಂದ್ರಸ್ತು ಯುದ್ಧಂ ಮೇ ದೀಯತಾಮಿತಿ ॥

ಮೂಲಮ್ - 3

ನಿರ್ಜಿತಾಃ ಸ್ಮೇತಿ ವಾ ಬ್ರೂತ ಏಷ ಮೇ ಹಿ ಸುನಿಶ್ಚಯಃ ।
ಅವ್ಯಥಾ ಕುರ್ವತಾಮೇವಂ ಮೋಕ್ಷೋ ನೈವೋಪಪದ್ಯತೇ ॥

ಅನುವಾದ

ಮಹೇಂದ್ರ, ವರುಣರಂತೆ ಪರಾಕ್ರಮಿ ಗಳಾದ ಆ ಮಹಾರಾಜರ ಬಳಿಗೆ ಹೋಗಿ ರಾಕ್ಷಸೇಂದ್ರನು ಹೇಳುತ್ತಿದ್ದನು - ರಾಜರೇ ! ನೀವು ನನ್ನೊಡನೆ ಯುದ್ಧಮಾಡಿ ಇಲ್ಲವೆ ‘ನಾವು ಸೋತಿದ್ದೇವೆ’ ಎಂದು ಹೇಳಿ. ಇದನ್ನೆ ನಾನು ಮಾಡಿದ ನಿಶ್ಚಯವಾಗಿದೆ. ಇದಕ್ಕೆ ವಿರುದ್ಧವಾಗಿ ನಡೆದರೆ ನಿಮಗೆ ಬಿಡುಗಡೆ ಇಲ್ಲ.॥2-3॥

ಮೂಲಮ್ - 4½

ತತಸ್ತ್ವಭೀರವಃ ಪ್ರಾಜ್ಞಾಃ ಪಾರ್ಥಿವಾ ಧರ್ಮನಿಶ್ಚಯಾಃ ।
ಮಂತ್ರಯಿತ್ವಾ ತತೋಽನ್ಯೋನ್ಯಂ ರಾಜಾನಃ ಸುಮಹಾಬಲಾಃ ॥
ನಿರ್ಜಿತಾಃ ಸಮೇತ್ಯಭಾಷಂತ ಜ್ಞಾತ್ವಾ ವರಬಲಂ ರಿಪೋಃ ।

ಅನುವಾದ

ಆಗ ನಿರ್ಭಯ, ಬುದ್ಧಿವಂತ, ಧರ್ಮಪೂರ್ಣವಿಚಾರ ಮಾಡುವ ಅನೇಕ ಮಹಾಬಲಿ ರಾಜರು ಪರಸ್ಪರ ಸಲಹೆ ಪಡೆದು, ಶತ್ರುವಿನ ಪ್ರಬಲತೆ ಅರಿತು ರಾಕ್ಷಸರಾಜಾ! ನಾವು ನಿನ್ನಿಂದ ಸೋಲನ್ನೊಪ್ಪಿ ಕೊಳ್ಳುತ್ತೇವೆ ಎಂದು ಹೇಳುತ್ತಿದ್ದರು.॥4½॥

ಮೂಲಮ್ - 5½

ದುಷ್ಯಂತಃ ಸುರಥೋ ಗಾಧಿರ್ಗಯೋ ರಾಜಾ ಪುರೂರವಾಃ ॥
ಏತೇ ಸರ್ವೇಽಬ್ರುವಂಸ್ತಾತ ನಿರ್ಜಿತಾಃ ಸ್ಮೇತಿ ಪಾರ್ಥಿವಾಃ ।

ಅನುವಾದ

ದುಷ್ಯಂತ, ಸುರಥ, ಗಾಧಿ, ಗಯ, ರಾಜಾ ಪುರೂರವ ಇವರೆಲ್ಲ ರಾಜರು ತಮ್ಮ ರಾಜ್ಯಭಾರ ಕಾಲದಲ್ಲಿ ರಾವಣನ ಎದುರಿಗೆ ತಮ್ಮ ಪರಾಜಯವನ್ನು ಸ್ವೀಕರಿಸಿದ್ದರು.॥5½॥

ಮೂಲಮ್ - 6

ಅಥಾಯೋಧ್ಯಾಂ ಸಮಾಸಾದ್ಯ ರಾವಣೋ ರಾಕ್ಷಸಾಧಿಪಃ ॥

ಮೂಲಮ್ - 7

ಸುಗುಪ್ತಾಮನರಣ್ಯೇನ ಶಕ್ರೇಣೇವಾಮರಾವತೀಮ್ ।
ಸ ತಂ ಪುರುಷಶಾರ್ದೂಲಂ ಪುರಂದರ ಸಮಂ ಬಲೇ ॥

ಮೂಲಮ್ - 8

ಪ್ರಾಹ ರಾಜಾನಮಾಸಾದ್ಯ ಯುದ್ಧಂ ದೇಹೀತಿ ರಾವಣಃ ।
ನಿರ್ಜಿತೋಽಸ್ಮೀತಿ ವಾ ಬ್ರೂಹಿ ತ್ವಮೇವಂ ಮಮ ಶಾಸನಮ್ ॥

ಅನುವಾದ

ಬಳಿಕ ರಾಕ್ಷಸಾಧಿಪ ರಾವಣನು ಇಂದ್ರನಿಂದ ಸುರಕ್ಷಿತವಾದ ಅಮರಾವತಿಯಂತಿರುವ, ಮಹಾರಾಜಾ ಅನರಣ್ಯನಿಂದ ಪಾಲಿತ ಅಯೋಧ್ಯೆಗೆ ಬಂದನು. ಅಲ್ಲಿ ಇಂದ್ರನಂತೆ ಪರಾಕ್ರಮಿ ಪುರುಷಸಿಂಹ ಅನರಣ್ಯನಲ್ಲಿಗೆ ಬಂದು ಹೇಳಿದನು-ರಾಜನೇ! ನೀನು ನನ್ನೊಡನೆ ಯುದ್ಧದ ಮಾತು ಕೊಡು ಇಲ್ಲವೇ ‘ನಾನು ಸೋತೆ’ ಎಂದು ಹೇಳು. ಇದೇ ನನ್ನ ಆದೇಶವಾಗಿದೆ.॥6-8॥

ಮೂಲಮ್ - 9

ಅಯೋಧ್ಯಾಧಿಪತಿಸ್ತಸ್ಯ ಶ್ರುತ್ವಾ ಪಾಪಾತ್ಮನೋ ವಚಃ ।
ಅನರಣ್ಯಸ್ತು ಸಂಕ್ರುದ್ಧೋ ರಾಕ್ಷಸೇಂದ್ರಮಥಾಬ್ರವೀತ್ ॥

ಅನುವಾದ

ಆ ಪಾಪಾತ್ಮನ ಮಾತನ್ನು ಕೇಳಿ ಅಯೋಧ್ಯಾ ನರೇಶ ಅನರಣ್ಯನಿಗೆ ಭಾರೀ ಕ್ರೋಧವುಂಟಾಗಿ ಅವನು ರಾಕ್ಷಸರಾಜನಲ್ಲಿ ಹೇಳಿದನು.॥9॥

ಮೂಲಮ್ - 10

ದೀಯತೇ ದ್ವಂದ್ವಯುದ್ಧಂ ತೇ ರಾಕ್ಷಸಾಧಿಪತೇ ಮಯಾ ।
ಸಂತಿಷ್ಠ ಕ್ಷಿಪ್ರಮಾಯತ್ತೋ ಭವ ಚೈವಂ ಭವಾಮ್ಯಹಮ್ ॥

ಅನುವಾದ

ನಿಶಾಚರಪತೇ! ನಾನು ನಿನಗೆ ದ್ವಂದ್ವಯುದ್ಧದ ಅವಕಾಶ ಕೊಡುವೆನು. ನಿಲ್ಲು, ಬೇಗನೇ ಯುದ್ಧಕ್ಕಾಗಿ ಸಿದ್ಧನಾಗು. ನಾನೂ ಸಿದ್ಧನಾಗುತ್ತೇನೆ.॥10॥

ಮೂಲಮ್ - 11

ಅಥ ಪೂರ್ವಂ ಶ್ರುತಾರ್ಥೇನ ನಿರ್ಜಿತಂ ಸುಮಹದ್ಬಲಮ್ ।
ನಿಷ್ಕ್ರಾಮತ್ತನ್ನರೇಂದ್ರಸ್ಯ ಬಲಂ ರಕ್ಷೋವಧೋದ್ಯತಮ್ ॥

ಅನುವಾದ

ರಾಜನು ರಾವಣನ ದಿಗ್ವಿಜಯದ ಸುದ್ದಿ ಮೊದಲೇ ಕೇಳಿ, ಅದಕ್ಕಾಗಿ ಅವನು ದೊಡ್ಡ ಸೈನ್ಯವನ್ನು ಸೇರಿಸಿ ಇಟ್ಟಿದ್ದನು. ರಾಜನ ಆ ಎಲ್ಲ ಸೈನ್ಯವು ಆಗ ರಾಕ್ಷಸನ ವಧೆಗಾಗಿ ಉತ್ಸಾಹದಿಂದ ನಗರದಿಂದ ಹೊರಟಿತು.॥11॥

ಮೂಲಮ್ - 12½

ನಾಗಾನಾಂ ದಶಸಾಹಸ್ರಂ ವಾಜಿನಾಂ ನಿಯುತಂ ತಥಾ ।
ರಥಾನಾಂ ಬಹುಸಾಹಸ್ರಂ ಪತ್ತೀನಾಂ ಚ ನರೋತ್ತಮ ॥
ಮಹೀಂ ಸಂಛಾದ್ಯ ನಿಷ್ಕ್ರಾಂತಂ ಸಪದಾತಿರಥಂ ರಣೇ ।

ಅನುವಾದ

ನರಶ್ರೇಷ್ಠ ಶ್ರೀರಾಮಾ! ಹತ್ತುಸಾವಿರ ಆನೆ ಸವಾರರು, ಒಂದು ಲಕ್ಷ ಕುದುರೆ ಸವಾರರು, ಅನೇಕ ಸಾವಿರ ರಥಗಳು, ಅಸಂಖ್ಯ ಕಾಲಾಳುಗಳಿಂದ ನೆಲ ಭಾಗವನ್ನು ಆಚ್ಛಾದನೆ ಮಾಡುತ್ತಾ ಎಲ್ಲ ಸೈನ್ಯ ರಣರಂಗಕ್ಕೆ ಬಂತು.॥12½॥

ಮೂಲಮ್ - 13½

ತತಃ ಪ್ರವೃತ್ತಂ ಸುಮಹದ್ಯುದ್ಧಂ ಯುದ್ಧವಿಶಾರದ ॥
ಅನರಣ್ಯಸ್ಯ ನೃಪತೇ ರಾಕ್ಷಸೇಂದ್ರಸ್ಯ ಚಾದ್ಭುತಮ್ ।

ಅನುವಾದ

ಯುದ್ಧವಿಶಾರದ ರಘುವೀರ ! ಮತ್ತೆ ರಾಜಾ ಅನರಣ್ಯ ಮತ್ತು ರಾವಣರಲ್ಲಿ ಭಾರೀ ಅದ್ಭುತ ಸಂಗ್ರಾಮ ಪ್ರಾರಂಭವಾಯಿತು.॥13½॥

ಮೂಲಮ್ - 14½

ತದ್ರಾವಣ ಬಲಂ ಪ್ರಾಪ್ಯ ಬಲಂ ತಸ್ಯ ಮಹೀಪತೇಃ ॥
ಪ್ರಾಣಶ್ಯತ ತದಾ ಸರ್ವಂ ಹವ್ಯಂ ಹುತಮಿವಾನಲೇ ।

ಅನುವಾದ

ಆಗ ರಾಜನ ಎಲ್ಲ ಸೈನ್ಯವು ರಾವಣನ ಸೈನ್ಯದೊಂದಿಗೆ ಕಾದಾಡುತ್ತಾ ಅಗ್ನಿಯಲ್ಲಿ ಹಾಕಿದ ಆಹುತಿಯು ಪೂರ್ಣಭಸ್ಮವಾಗುವಂತೆ ನಾಶವಾಗ ತೊಡಗಿತು.॥14½॥

ಮೂಲಮ್ - 15

ಯುದ್ಧ್ವಾ ಚ ಸುಚಿರಂ ಕಾಲಂ ಕೃತ್ವಾ ವಿಕ್ರಮಮುತ್ತಮಮ್ ॥

ಮೂಲಮ್ - 16

ಪ್ರಜ್ವಲಂತಂ ಸಮಾಸಾದ್ಯ ಕ್ಷಿಪ್ರಮೇವಾವಶೋಷಿತಮ್ ।
ಪ್ರಾವಿಶತ್ಸಂಕುಲಂ ತತ್ರ ಶಲಭಾ ಇವ ಪಾವಕಮ್ ॥

ಅನುವಾದ

ಆ ಸೈನ್ಯವು ಬಹಳ ಹೊತ್ತು ಕಾದಾಡಿತು, ಪರಾಕ್ರಮ ತೋರಿತು, ಆದರೆ ತೇಜಸ್ವೀ ರಾವಣನನ್ನು ಎದುರಿಸುತ್ತಾ ಬಹಳ ಕಡಿಮೆ ಸಂಖ್ಯೆಯಲ್ಲಿ ಉಳಿದು ಕೊನೆಗೆ ಪತಂಗಗಳು ಅಗ್ನಿಯಲ್ಲಿ ಬಿದ್ದು ಭಸ್ಮವಾಗುವಂತೆ ಕಾಲನಿಗೆ ತುತ್ತಾಯಿತು.॥15-16॥

ಮೂಲಮ್ - 17

ಸೋಽಪಶ್ಯತ್ತನ್ನರೇಂದ್ರಸ್ತು ನಶ್ಯಮಾನಂ ಮಹಾಬಲಮ್ ।
ಮಹಾರ್ಣವಂ ಸಮಾಸಾದ್ಯ ವನಾಪಗಶತಂ ಯಥಾ ॥

ಅನುವಾದ

ಜಲದಿಂದ ತುಂಬಿದ ಭಾರೀ ನೂರಾರು ನದಿಗಳು ಸಮುದ್ರದಲ್ಲಿ ಸೇರಿ ಹೋಗುವಂತೆ ತನ್ನ ಸೈನ್ಯವು ನಾಶವಾಗುವುದನ್ನು ರಾಜನು ನೋಡಿದನು.॥17॥

ಮೂಲಮ್ - 18

ತತಃ ಶಕ್ರಧನುಃಪ್ರಖ್ಯಂ ಧನುರ್ವಿಸ್ಫಾರಯನ್ ಸ್ವಯಮ್ ।
ಆಸಸಾದ ನರೇಂದ್ರಸ್ತಂ ರಾವಣಂ ಕ್ರೋಧಮೂರ್ಛಿತಃ ॥

ಅನುವಾದ

ಆಗ ಮಹಾರಾಜ ಅನರಣ್ಯನು ಕ್ರೋಧಗೊಂಡು ಇಂದ್ರ ಧನುಸ್ಸಿನಂತೆ ತನ್ನ ಮಹಾ ಧನುಸ್ಸನ್ನು ಟಂಕಾರ ಮಾಡುತ್ತಾ ರಾವಣನನ್ನು ಎದುರಿಸಲು ಆಗಮಿಸಿದನು..॥18॥

ಮೂಲಮ್ - 19

ಅನರಣ್ಯೇನ ತೇಽಮಾತ್ಯಾಮಾರೀಚ ಶುಕಸಾರಣಾಃ ।
ಪ್ರಹಸ್ತಸಹಿತಾ ಭಗ್ನಾ ವ್ಯದ್ರವಂತ ಮೃಗಾ ಇವ ॥

ಅನುವಾದ

ಸಿಂಹವನ್ನು ನೋಡಿ ಜಿಂಕೆಗಳು ಓಡಿಹೋಗುವಂತೆ ಮಾರೀಚ, ಶುಕ, ಸಾರಣ, ಪ್ರಹಸ್ತ ಈ ನಾಲ್ವರೂ ರಾಕ್ಷಸ ಮಂತ್ರಿಗಳು ಅನರಣ್ಯನಿಂದ ಓಡಿ ಪಲಾಯನ ಮಾಡಿದರು.॥19॥

ಮೂಲಮ್ - 20

ತತೋ ಬಾಣಶತಾನ್ಯಷ್ಟೌ ಪಾತಯಾಮಾಸ ಮೂರ್ಧನಿ ।
ತಸ್ಯ ರಾಕ್ಷಸ ರಾಜಸ್ಯ ಇಕ್ಷ್ವಾಕುಕುಲನಂದನಃ ॥

ಅನುವಾದ

ಅನಂತರ ಇಕ್ಷ್ವಾಕುಕುಲನಂದನ ರಾಜಾ ಅನರಣ್ಯನು ರಾಕ್ಷಸರಾಜ ರಾವಣನ ಮಸ್ತಕದಲ್ಲಿ ಎಂಟು ನೂರು ಬಾಣಗಳನ್ನು ಪ್ರಯೋಗಿಸಿದನು.॥20॥

ಮೂಲಮ್ - 21

ತಸ್ಯ ಬಾಣಾಃ ಪತಂತಸ್ತೇ ಚಕ್ರಿರೇ ನ ಕ್ಷತಂ ಕ್ವಚಿತ್ ।
ವಾರಿಧಾರಾ ಇವಾಭ್ರೇಭ್ಯಃ ಪತಂತ್ಯೋ ಗಿರಿಮೂರ್ಧನಿ ॥

ಅನುವಾದ

ಪರ್ವತ ಶಿಖರದಲ್ಲಿ ಬಿದ್ದ ಮಳೆಯು ಅದನ್ನು ಕ್ಷತಿಗೊಳಿಸದಂತೆ ಆ ಸುರಿಯುವ ಬಾಣಗಳು ಆ ನಿಶಾಚರನ ಶರೀರದಲ್ಲಿ ಗಾಯಗೊಳಿಸದೇ ಹೋದವು.॥21॥

ಮೂಲಮ್ - 22

ತತೋ ರಾಕ್ಷಸರಾಜೇನ ಕ್ರುದ್ಧೇನ ನೃಪತಿಸ್ತದಾ ।
ತಲೇನಾಭಿಹತೋ ಮೂರ್ಧ್ನಿ ಸ ರಥಾನ್ನಿಪಪಾತಹ ॥

ಅನುವಾದ

ಆಗ ಕುಪಿತನಾದ ರಾವಣನು ರಾಜನ ತಲೆಗೆ ಒಂದು ಏಟುಕೊಟ್ಟನು. ಇದರಿಂದ ಆಹತನಾಗಿ ರಾಜನು ರಥದಿಂದ ಕೆಳಗೆ ಉರುಳಿದನು.॥22॥

ಮೂಲಮ್ - 23

ಸ ರಾಜಾ ಪತಿತೋ ಭೂಮೌ ವಿಹ್ವಲಃ ಪ್ರವಿವೇಪಿತಃ ।
ವಜ್ರದಗ್ಧ ಇವಾರಣ್ಯೇ ಸಾಲೋ ನಿಪತಿತೋ ಯಥಾ ॥

ಅನುವಾದ

ಸಿಡಿಲು ಬಡಿದಾಗ ಒಣಗಿದ ಮರವು ದಗ್ಧವಾಗಿ ಉರುಳುವಂತೆ ರಾಜಾ ಅನರಣ್ಯನು ವ್ಯಾಕುಲನಾಗಿ ನೆಲಕ್ಕೆ ಬಿದ್ದು ಗಡ-ಗಡ ನಡುಗತೊಡಗಿದನು.॥23॥

ಮೂಲಮ್ - 24

ತಂ ಪ್ರಹಸ್ಯಾಬ್ರವೀದ್ರಕ್ಷ ಇಕ್ಷ್ವಾಕುಂ ಪೃಥಿವೀಪತಿಮ್ ।
ಕಿಮಿದಾನೀಂ ಫಲಂ ಪ್ರಾಪ್ತಂ ತ್ವಯಾ ಮಾಂ ಪ್ರತಿ ಯುಧ್ಯತಾ ॥

ಅನುವಾದ

ಇದನ್ನು ನೋಡಿ ರಾವಣನು ಜೋರಾಗಿ ನಕ್ಕು ಆ ಇಕ್ಷ್ವಾಕು ನರೇಶನಲ್ಲಿ ಹೇಳಿದನು - ಈಗ ನನ್ನೊಡನೆ ಯುದ್ಧ ಮಾಡಿ ನಿನಗೇನು ಫಲ ದೊರಕಿತು.॥24॥

ಮೂಲಮ್ - 25

ತ್ರೈಲೋಕ್ಯೇ ನಾಸ್ತಿ ಯೋ ದ್ವಂದ್ವ್ವಂ ಮಮ ದದ್ಯಾನ್ನರಾಧಿಪ ।
ಶಂಕೇ ಪ್ರಸಕ್ತೋ ಭೋಗೇಷು ನ ಶೃಣೋಷಿ ಬಲಂ ಮಮ ॥

ಅನುವಾದ

ನರೇಶ್ವರ! ನನ್ನೊಡನೆ ದ್ವಂದ್ವಯುದ್ಧ ಮಾಡುವಂತಹ ವೀರನು ಮೂರು ಲೋಕಗಳಲ್ಲಿ ಯಾರೂ ಇಲ್ಲ. ನೀನು ಭೋಗಗಳಲ್ಲಿ ಹೆಚ್ಚು ಆಸಕ್ತನಾದ್ದರಿಂದ ನನ್ನ ಬಲ ಪರಾಕ್ರಮ ಕೇಳಿಲ್ಲ ಎಂದು ತೋರುತ್ತದೆ.॥25॥

ಮೂಲಮ್ - 26

ತಸ್ಯೈವಂ ಬ್ರುವತೋ ರಾಜಾ ಮಂದಾಸು ರ್ವಾಕ್ಯಮಬ್ರವೀತ್ ।
ಕಿಂ ಶಕ್ಯಮಿಹ ಕರ್ತುಂ ವೈ ಕಾಲೋ ಹಿ ದುರತಿಕ್ರಮಃ ॥

ಅನುವಾದ

ರಾಜನ ಪ್ರಾಣಶಕ್ತಿ ಕ್ಷೀಣವಾಯಿತು. ಹೀಗೆ ಆಡುತ್ತಿರುವ ರಾವಣನ ವಚನ ಕೇಳಿ ಹೇಳಿದನು - ರಾಕ್ಷಸರಾಜನೇ! ಈಗ ಇಲ್ಲೇನು ಮಾಡಬಹುದು? ಏಕೆಂದರೆ ಕಾಲವನ್ನು ಉಲ್ಲಂಘಿಸುವುದು ಅತ್ಯಂತ ದುಷ್ಕರವಾಗಿದೆ.॥26॥

ಮೂಲಮ್ - 27

ನಹ್ಯಹಂ ನಿರ್ಜಿತೋ ರಕ್ಷಸ್ತ್ವಯಾ ಚಾತ್ಮಪ್ರಶಂಸಿನಾ ।
ಕಾಲೇನೈವ ವಿಪನ್ನೋಽಹಂ ಹೇತುಭೂತಸ್ತು ಮೇಭವಾನ್ ॥

ಅನುವಾದ

ರಾಕ್ಷಸನೇ! ನೀನು ತನ್ನನ್ನು ಪ್ರಶಂಸಿಸಿಕೊಳ್ಳುತ್ತಿರುವೆ; ಆದರೆ ನೀನು ಇಂದು ನನ್ನನ್ನು ಪರಾಜಿತಗೊಳಿಸಿದುದರಲ್ಲಿ ಕಾಲವೇ ಕಾರಣವಾಗಿದೆ. ನೀನಾದರೋ ನನ್ನ ಮೃತ್ಯುವಿನಲ್ಲಿ ನಿಮಿತ್ತಮಾತ್ರನಾದೆ.॥27॥

ಮೂಲಮ್ - 28

ಕಿಂ ತ್ವಿದಾನೀಂ ಮಯಾ ಶಕ್ಯಂ ಕರ್ತುಂ ಪ್ರಾಣಪರೀಕ್ಷಯೇ ।
ನಹ್ಯಹಂ ವಿಮುಖೀ ರಕ್ಷೋ ಯುಧ್ಯಮಾನಸ್ತ್ವಯಾಹತಃ ॥

ಅನುವಾದ

ನನ್ನ ಪ್ರಾಣಗಳು ಹೋಗುತ್ತಿವೆ, ಆದ್ದರಿಂದ ನಾನು ಏನು ಮಾಡಬಲ್ಲೆ? ನಿಶಾಚರನೇ! ನಾನು ಯುದ್ಧದಲ್ಲಿ ಬೆನ್ನು ತೋರಲಿಲ್ಲ ಇದು ನನಗೆ ಸಂತೋಷವಿದೆ. ಯುದ್ಧ ಮಾಡುತ್ತಾ ನಿನ್ನ ಕೈಯಿಂದ ಸಾಯುತ್ತಾನೆ.॥28॥

ಮೂಲಮ್ - 29

ಇಕ್ಷ್ವಾಕು ಪರಿಭಾವಿತ್ವಾದ್ ವಚೋ ವಕ್ಷ್ಯಾಮಿ ರಾಕ್ಷಸ ।
ಯದಿ ದತ್ತಂ ಯದಿ ಹುತಂ ಯದಿ ಮೇ ಸುಕೃತಂ ತಪಃ ।
ಯದಿ ಗುಪ್ತಾಃ ಪ್ರಜಾಃ ಸಮ್ಯಕ್ತದಾ ಸತ್ಯಂ ವಚೋಽಸ್ತು ಮೇ ॥

ಅನುವಾದ

ಆದರೆ ರಾಕ್ಷಸನೇ! ನೀನು ವ್ಯಂಗ್ಯಪೂರ್ಣ ಮಾತುಗಳಿಂದ ಇಕ್ಷ್ವಾಕುಕುಲದ ಅಪಮಾನ ಮಾಡಿದೆ. ಇದರಿಂದ ನಿನಗೆ ಶಾಪ ಕೊಡುತ್ತಿದ್ದೇನೆ. ನಿನಗೆ ಅಮಂಗಲ ಮಾತನ್ನು ಹೇಳುತ್ತೇನೆ. ನಾನು ದಾನ, ಪುಣ್ಯ, ಹೋಮ, ತಪಸ್ಸು ಮಾಡಿದ್ದರೆ, ನಾನು ಧರ್ಮಕ್ಕನುಸಾರ ಪ್ರಜೆಗಳನ್ನು ಚೆನ್ನಾಗಿ ಪಾಲಿಸಿದಿದ್ದರೆ, ನನ್ನ ಮಾತು ನಿಜವಾಗಲಿ.॥29॥

ಮೂಲಮ್ - 30

ಉತ್ಪತ್ಸ್ಯತೇ ಕುಲೇ ಹ್ಯಸ್ಮಿನ್ನಿಕ್ಷ್ವಾಕೂಣಾಂ ಮಹಾತ್ಮನಾಮ್ ।
ರಾಮೋ ದಾಶರಥಿರ್ನಾಮ ಸ ತೇ ಪ್ರಾಣಾನ್ ಹರಿಷ್ಯತಿ ॥

ಅನುವಾದ

ಮಹಾತ್ಮಾ ಇಕ್ಷ್ವಾಕುವಂಶೀ ರಾಜರ ವಂಶದಲ್ಲೇ ದಶರಥನಂದನ ಶ್ರೀರಾಮನು ಪ್ರಕಟನಾಗಿ ನಿನ್ನ ಪ್ರಾಣಗಳನ್ನು ಅಪಹರಿಸುವನು.॥30॥

ಮೂಲಮ್ - 31

ತತೋ ಜಲಧರೋದಗ್ರಸ್ತಾಡಿತೋ ದೇವದುಂದುಭಿಃ ।
ತಸ್ಮಿನ್ನುದಾಹೃತೇ ಶಾಪೇ ಪುಷ್ಪವೃಷ್ಟಿಶ್ಚ ಖಾಚ್ಚ್ಯುತಾ ॥

ಅನುವಾದ

ರಾಜನು ಹೀಗೆ ಶಪಿಸಿದಾಗ ಮೇಘಗಳು ಗಂಭೀರ ಧ್ವನಿಯಲ್ಲಿ ದೇವತೆಗಳು ದುಂದುಭಿಗಳನ್ನು ನುಡಿಸಿದರು, ಆಕಾಶದಿಂದ ಪುಷ್ಪವೃಷ್ಟಿಯಾಯಿತು.॥31॥

ಮೂಲಮ್ - 32

ತತಃ ಸ ರಾಜಾ ರಾಜೇಂದ್ರ ಗತಃ ಸ್ಥಾನಂ ತ್ರಿವಿಷ್ಟಪಮ್ ।
ಸ್ವರ್ಗತೇ ಚನೃಪೇ ತಸ್ಮಿನ್ರಾಕ್ಷಸಃ ಸೋಽಪಸರ್ಪತ ॥

ಅನುವಾದ

ರಾಜಾಧಿರಾಜ ಶ್ರೀರಾಮಾ! ಬಳಿಕ ಅನರಣ್ಯನು ಸ್ವರ್ಗಸ್ಥನಾದನು. ಅವನು ಸ್ವರ್ಗಗಾಮಿಯಾದ ಮೇಲೆ ರಾಕ್ಷಸ ರಾವಣನು ಅಲ್ಲಿಂದ ಬೇರೆಡೆಗೆ ತೆರಳಿದನು.॥32॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಹತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು. ॥19॥