१२० इन्द्रेण वरदानम्

वाचनम्
ಭಾಗಸೂಚನಾ

ಶ್ರೀರಾಮನ ಕೋರಿಕೆಯಂತೆ ಇಂದ್ರನು ಸತ್ತುಹೋದ ವಾನರರನ್ನು ಬದುಕಿಸಿದುದು, ದೇವತೆಗಳ ಪ್ರಯಾಣ ಮತ್ತು ವಾನರ ಸೈನ್ಯದ ವಿಶ್ರಾಂತಿ

ಮೂಲಮ್ - 1

ಪ್ರತಿಪ್ರಯಾತೇ ಕಾಕುತ್ಸ್ಥೇ ಮಹೇಂದ್ರಃ ಪಾಕಶಾಸನಃ ।
ಅಬ್ರವೀತ್ಪರಮಪ್ರಿತೋ ರಾಘವಂ ಪ್ರಾಂಜಲಿಂ ಸ್ಥಿತಮ್ ॥

ಅನುವಾದ

ಮಹಾರಾಜಾ ದಶರಥನು ಮರಳಿ ಹೋದಾಗ ಪಾಕ ಶಾಸನ ಇಂದ್ರನು ಅತ್ಯಂತ ಸುಪ್ರೀತನಾಗಿ ಕೈಮುಗಿದು ನಿಂತಿದ್ದ ಶ್ರೀರಘುನಾಥನಲ್ಲಿ ಇಂತೆಂದನು.॥1॥

ಮೂಲಮ್ - 2

ಅಮೋಘಂ ದರ್ಶನಂ ರಾಮ ತವಾಸ್ಮಾಕಂ ನರರ್ಷಭ ।
ಪ್ರೀತಿಯುಕ್ತಾಃ ಸ್ಮ ತೇನ ತ್ವಂ ಬ್ರೂಹಿ ಯನ್ಮನಸೇಪ್ಸಿತಮ್ ॥

ಅನುವಾದ

ನರಶ್ರೇಷ್ಠ ಶ್ರೀರಾಮಾ! ನಿಮಗೆ ನಮ್ಮ ದರ್ಶನವಾದುದು ವ್ಯರ್ಥವಾಗಬಾರದು. ನಾನು ನಿನ್ನ ಮೇಲೆ ಬಹಳ ಪ್ರಸನ್ನ ನಾಗಿದ್ದೇವೆ. ಅದಕ್ಕಾಗಿ ನಿನ್ನ ಮನಸ್ಸಿನಲ್ಲಿರುವ ಇಚ್ಛೆಯನ್ನು ನನ್ನಲ್ಲಿ ಕೇಳು.॥2॥

ಮೂಲಮ್ - 3

ಏವಮುಕ್ತೋ ಮಹೇಂದ್ರೇಣಪ್ರಸನ್ನೇನ ಮಹಾತ್ಮನಾ ।
ಸುಪ್ರಸನ್ನ ಮನಾ ಹೃಷ್ಟೋ ವಚನಂ ಪ್ರಾಹ ರಾಘವಃ ॥

ಅನುವಾದ

ಮಹಾತ್ಮಾ ಇಂದ್ರನು ಪರಮ ಪ್ರೀತನಾಗಿ ಹೀಗೆ ಹೇಳಿದಾಗ ಶ್ರೀರಾಮನ ಮನಸ್ಸಿಗೆ ತುಂಬಾ ಸಂತೋಷವಾಯಿತು. ಅವನು ಹರ್ಷಗೊಂಡು ಹೇಳಿದನು.॥3॥

ಮೂಲಮ್ - 4

ಯದಿ ಪ್ರೀತಿಃ ಸಮುತ್ಪನ್ನಾ ಮಯಿ ತೇ ವಿಬುಧೇಶ್ವರ ।
ವಕ್ಷ್ಯಾಮಿ ಕುರು ಮೇ ಸತ್ಯಂ ವಚನಂ ವದತಾಂವರ ॥

ಅನುವಾದ

ವಾಗ್ಮಿಗಳಲ್ಲಿ ಶ್ರೇಷ್ಠ ದೇವೇಶ್ವರನೇ! ನೀನು ನನ್ನ ಮೇಲೆ ಪ್ರಸನ್ನನಾಗಿದ್ದರೆ ನನ್ನ ಒಂದು ಪ್ರಾರ್ಥನೆ ಇದೆ. ನೀನು ನನ್ನ ಪ್ರಾರ್ಥನೆಯನ್ನು ಸಲಗೊಳಿಸು.॥4॥

ಮೂಲಮ್ - 5

ಮಮ ಹೇತೋಃ ಪರಾಕ್ರಾಂತಾ ಯೇ ಗತಾ ಯಮಸಾದನಮ್ ।
ತೇ ಸರ್ವೇ ಜೀವಿತಂ ಪ್ರಾಪ್ಯ ಸಮುತ್ತಿಷ್ಠಂತು ವಾನರಾಃ ॥

ಅನುವಾದ

ನನಗಾಗಿ ಯುದ್ಧದಲ್ಲಿ ಪರಾಕ್ರಮ ತೋರಿ ಯಮಲೋಕಕ್ಕೆ ಹೋದ ಎಲ್ಲ ವಾನರರು ಜೀವಂತರಾಗಿ ಎದ್ದು ನಿಲ್ಲಲಿ.॥5॥

ಮೂಲಮ್ - 6

ಮತ್ಕೃತೇ ವಿಪ್ರಯುಕ್ತಾ ಯೇ ಪುತ್ರೈರ್ದಾರೈಶ್ಚ ವಾನರಾಃ ।
ತಾನ್ಪ್ರೀತಮನಸಃ ಸರ್ವಾನ್ದೃಷ್ಟು ಮಿಚ್ಛಾಮಿಮಾನದ ॥

ಅನುವಾದ

ಮಾನದ! ಯಾವ ವಾನರರು ನನಗಾಗಿ ತಮ್ಮ ಪತ್ನೀ-ಪುತ್ರರಿಂದ ಅಗಲಿರುವರೋ, ಅವರೆಲ್ಲರನ್ನು ಪ್ರಸನ್ನಚಿತ್ತರಾಗಿ ನೋಡಲು ನಾನು ಬಯಸುತ್ತಿರುವೆನು.॥6॥

ಮೂಲಮ್ - 7

ವಿಕ್ರಾಂತಾ ಶ್ಚಾಪಿ ಶೂರಾಶ್ಚ ನ ಮೃತ್ಯುಂ ಗಣಯಂತಿ ಚ ।
ಕೃತಯತ್ನಾ ವಿಪನ್ನಾಶ್ಚ ಜೀವಯೈತಾನ್ಪುರಂದರ ॥

ಅನುವಾದ

ಪುರಂದರ! ಅವರು ಪರಾಕ್ರಮಿ ಮತ್ತು ಶೂರವೀರರಾಗಿದ್ದರು ಮತ್ತು ಮೃತ್ಯುವನ್ನು ಪರಿಗಣಿಸುತ್ತಿರಲಿಲ್ಲ. ಅವರು ನನಗಾಗಿ ಬಹಳ ಪ್ರಯತ್ನ ಮಾಡಿರುವರು ಹಾಗೂ ಕೊನೆಗೆ ಕಾಲ ವಶರಾದರು. ನೀನು ಅವರೆಲ್ಲರನ್ನು ಬದುಕಿಸು.॥7॥

ಮೂಲಮ್ - 8

ಮತ್ಪ್ರಿಯೇಷ್ವಭಿರಕ್ತಾಶ್ಚ ನ ಮೃತ್ಯುಂ ಗಣಯಂತಿ ಯೇ ।
ತ್ವತ್ಪ್ರಸಾದಾತ್ಸಮೇಯುಸ್ತೇ ವರಮೇತಮಹಂ ವೃಣೇ ॥

ಅನುವಾದ

ನನ್ನ ಪ್ರಿಯವನ್ನು ಮಾಡಲು ತೊಡಗಿದ್ದು, ಮೃತ್ಯುವನ್ನು ಎಣಿಸದೆ ಇರುವ ವಾನರರೆಲ್ಲರೂ ನಿನ್ನ ಕೃಪೆಯಿಂದ ಪುನಃ ನನ್ನೊಂದಿಗೆ ಸೇರಿಕೊಳ್ಳಲಿ; ಈ ವರವನ್ನು ನಾನು ಬಯಸುತ್ತಿದ್ದೇನೆ.॥8॥

ಮೂಲಮ್ - 9

ನೀರುಜೋ ನಿರ್ವ್ರಣಾಂಶ್ಚೈವ ಸಂಪನ್ನ ಬಲಪೌರುಷಾನ್ ।
ಗೋಲಾಂಗೂಲಾಂಸ್ತಥೈರ್ಕ್ಷಾಂಶ್ಚದ್ರೃಷ್ಟುಮಿಚ್ಛಾಮಿ ಮಾನದ ॥

ಅನುವಾದ

ಮಾನದ ದೇವರಾಜನೇ! ಈ ವಾನರ, ಗೋಲಾಂಗುಲ, ಕರಡಿ ಇವರನ್ನು ನಿರೋಗಿ, ವ್ರಣಹೀನ, ಬಲಪೌರುಷಗಳಿಂದ ಸಂಪನ್ನರಾಗಿ ನೋಡಲು ನಾನು ಬಯಸುತ್ತಿರುವೆನು.॥9॥

ಮೂಲಮ್ - 10

ಅಕಾಲೇ ಚಾಪಿ ಪುಷ್ಪಾಣಿ ಮೂಲಾನಿ ಚ ಫಲಾನಿ ಚ ।
ನದ್ಯಶ್ಚ ವಿಮಲಾಸ್ತತ್ರ ತಿಷ್ಠೇಯುರ್ಯತ್ರ ವಾನರಾಃ ॥

ಅನುವಾದ

ಈ ವಾನರರು ಇರುವಲ್ಲಿ ಅಕಾಲದಲ್ಲಿಯೂ ಫಲ-ಮೂಲ-ಪುಷ್ಪಗಳಿಂದ ಸಮೃದ್ಧವಾಗಲಿ ಹಾಗೂ ನಿರ್ಮಲ ನೀರುಳ್ಳ ನದಿಗಳು ಹರಿಯುತ್ತಿರಲಿ.॥10॥

ಮೂಲಮ್ - 11

ಶ್ರುತ್ವಾ ತು ವಚನಂ ತಸ್ಯ ರಾಘವಸ್ಯ ಮಹಾತ್ಮನಃ ।
ಮಹೇಂದ್ರಃ ಪ್ರತ್ಯುವಾಚೇದಂ ವಚನಂ ಪ್ರೀತಿ ಸಂಯುತಮ್ ॥

ಅನುವಾದ

ಮಹಾತ್ಮಾ ರಾಘವನ ಈ ಮಾತನ್ನು ಕೇಳಿ ಮಹೇಂದ್ರನು ಸಂತೋಷದಿಂದ ಉತ್ತರಿಸಿದನು.॥11॥

ಮೂಲಮ್ - 12

ಮಹಾನಯಂ ವರಸ್ತಾತ ತ್ವಯೋಕ್ತೋ ರಘೂತ್ತಮ ।
ದ್ವಿರ್ಮಯಾ ನೋಕ್ತಪೂರ್ವಂ ಚ ತಸ್ಮಾದೇತದ್ಭವಿಷ್ಯತಿ ॥

ಅನುವಾದ

ಅಯ್ಯಾ ರಘುವಂಶ ವಿಭೂಷಣ! ನೀನು ದೊಡ್ಡ ವರವನ್ನೇ ಕೇಳಿರುವೆ; ಆದರೆ ನಾನು ಎಂದೂ ಎರಡಾಡಲಿಲ್ಲ; ಆದ್ದರಿಂದ ಈ ವರವನ್ನು ಅವಶ್ಯವಾಗಿ ಸಫಲಗೊಳಿಸುವನು.॥12॥

ಮೂಲಮ್ - 13

ಸಮುತ್ತಿಷ್ಠಂತು ತೇ ಸರ್ವೇ ಹತಾ ಯೇ ಯುಧಿ ರಾಕ್ಷಸೈಃ ।
ಋಕ್ಷಾಶ್ಚ ಸಹ ಗೋಪುಚ್ಛೈರ್ನಿಕೃತ್ತಾನನಬಾಹವಃ ॥

ಅನುವಾದ

ಯುದ್ಧದಲ್ಲಿ ಹತರಾದ ಮತ್ತು ರಾಕ್ಷಸರು ಮಸ್ತಕ, ಭುಜಗಳನ್ನು ಕತ್ತರಿಸಿ ಹಾಕಿದ ಎಲ್ಲ ವಾನರರು, ಕರಡಿಗಳು, ಗೋಲಾಂಗೂಲರು ಜೀವಂತರಾಗಲಿ.॥13॥

ಮೂಲಮ್ - 14

ನೀರುಜೋ ನಿರ್ವ್ರಣಾಶ್ಚೈವ ಸಂಪನ್ನ ಬಲಪೌರುಷಾಃ ।
ಸಮುತ್ಥಾಸ್ಯಂತಿ ಹರಯಃ ಸುಪ್ತಾ ನಿದ್ರಾಕ್ಷಯೇ ಯಥಾ ॥

ಅನುವಾದ

ನಿದ್ದೆಯಿಂದ ಎದ್ದ ಮನುಷ್ಯರಂತೆ ಆ ಎಲ್ಲ ವಾನರರು ನಿರೋಗಿ, ವ್ರಣಹೀನ, ಬಲ-ಪೌರುಷಗಳಿಂದ ಸಂಪನ್ನರಾಗಿ ಎದ್ದು ಕುಳಿತುಕೊಳ್ಳುವರು.॥14॥

ಮೂಲಮ್ - 15

ಸುಹೃದ್ಭಿರ್ಬಾಂಧವೈಶ್ಚೈವ ಜ್ಞಾತಿಭಿಃ ಸ್ವಜನೇನ ಚ ।
ಸರ್ವ ಏವ ಸಮೇಷ್ಯಂತಿ ಸಂಯುಕ್ತಾಃ ಪರಯಾ ಮುದಾ ॥

ಅನುವಾದ

ಎಲ್ಲರು ಪರಮಾನಂದದಿಂದ ಕೂಡಿಕೊಂಡು, ತಮ್ಮ ಸುಹೃದ, ಬಾಂಧವ, ಜ್ಞಾತಿ ಬಂಧುಗಳು ಹಾಗೂ ಸ್ವಜನರನ್ನು ಕೂಡಿ ಕೊಳ್ಳುವರು.॥15॥

ಮೂಲಮ್ - 16

ಅಕಾಲೇ ಪುಷ್ಪಶಬಲಾಃ ಫಲವಂತಶ್ಚ ಪಾದಪಾಃ ।
ಭವಿಷ್ಯಂತಿ ಮಹೇಷ್ವಾಸ ನದ್ಯಶ್ಚ ಸಲಿಲಾಯುತಾಃ ॥

ಅನುವಾದ

ಮಹಾಧನುರ್ಧರ ವೀರ! ಈ ವಾನರರು ಇರುವಲ್ಲಿ ಅಸಮಯದಲ್ಲಿಯೂ ವೃಕ್ಷಗಳು ಫಲ-ಪುಷ್ಪಭರಿತವಾಗಿರುವವು ಮತ್ತು ನದಿಗಳು ನೀರಿನಿಂದ ತುಂಬಿರುವವು.॥16॥

ಮೂಲಮ್ - 17

ಸವ್ರಣೈಃ ಪ್ರಥಮಂ ಗಾತ್ರೈರಿದಾನೀಂ ರ್ನಿರ್ವ್ರಣೈಃ ಸಮೈಃ ।
ತತಃ ಸಮುತ್ಥಿತಾಃ ಸರ್ವೇ ಸುಪ್ತ್ವೇವ ಹರಿಸತ್ತಮಾಃ ॥

ಮೂಲಮ್ - 18

ಬಭೂವುರ್ವಾನರಾಃ ಸರ್ವೇ ಕಿಂತ್ವೇತದಿತಿ ವಿಸ್ಮಿತಾಃ ।
ಕಾಕುತ್ಸ್ಥಂ ಪರಿಪೂರ್ಣಾರ್ಥಂ ದೃಷ್ಟ್ವಾ ಸರ್ವೇ ಸುರೋತ್ತಮಾಃ ॥

ಮೂಲಮ್ - 19

ಅಬ್ರುವನ್ ಪರಮಪ್ರೀತಾಃ ಸ್ತುತ್ವಾ ರಾಮಂ ಸಹಲಕ್ಷ್ಮಣಮ್ ।
ಗಚ್ಛಾಯೋಧ್ಯಾಮಿತೋ ರಾಜನ್ ವಿಸರ್ಜಯ ಚವಾನರಾನ್ ॥

ಅನುವಾದ

ಅವರು ಹೀಗೆ ಜೀವಂತಗೊಂಡಿರುವುದನ್ನು ನೋಡಿ ಎಲ್ಲ ವಾನರರು ಆಶ್ಚರ್ಯಚಕಿತರಾಗಿ ಇದೇನಾಯಿತು? ಎಂದು ಹೇಳತೊಡಗಿದರು. ಸಫಲ ಮನೋರಥವಾದ ಶ್ರೀರಾಮಚಂದ್ರನನ್ನು ನೋಡಿ ಸಮಸ್ತ ಶ್ರೇಷ್ಠದೇವತೆಗಳು ಅತ್ಯಂತ ಪ್ರಸನ್ನರಾಗಿ ಲಕ್ಷ್ಮಣಸಹಿತ ಶ್ರೀರಾಮನನ್ನು ಸ್ತುತಿಸುತ್ತಾ ಹೇಳಿದರು- ರಾಜನೇ! ಈಗ ನೀವು ಅಯ್ಯೋಧ್ಯೆಗೆ ತೆರಳಿರಿ ಹಾಗೂ ಸಮಸ್ತವಾನರರನ್ನು ಬೀಳ್ಕೊಡಿರಿ.॥17-19॥

ಮೂಲಮ್ - 20

ಮೈಥಿಲೀಂ ಸಾಂತ್ವಯಸ್ವೈನಾಮನುರಕ್ತಾಂ ಯಶಸ್ವಿನೀಮ್ ।
ಭ್ರಾತರಂ ಭರತಂ ಪಶ್ಯ ತ್ವಚ್ಛೋಕಾದ್ ವ್ರತಧಾರಿಣಮ್ ॥

ಅನುವಾದ

ಈ ಮಿಥಿಲೇಶಕುಮಾರಿ ಯಶಸ್ವಿನಿ ಸೀತೆಯು ನಿಮ್ಮಲ್ಲಿ ಅನುರಾಗವಿಟ್ಟಿರುವಳು. ಆಕೆಯನ್ನು ಸಾಂತ್ವನಪಡಿಸಿರಿ. ತಮ್ಮನಾದ ಭರತನು ನಿಮ್ಮ ಶೋಕದಿಂದ ಪೀಡಿತನಾಗಿ ವ್ರತಸ್ಥನಾಗಿದ್ದಾನೆ; ಆದ್ದರಿಂದ ಅವನನ್ನು ಭೆಟ್ಟಿಯಾಗಿರಿ.॥20॥

ಮೂಲಮ್ - 21

ಶತ್ರುಘ್ನಂ ಚ ಮಹಾತ್ಮಾನಂ ಮಾತೃಃ ಸರ್ವಾಃ ಪರಂತಪ ।
ಅಭಿಷೇಚಯಚಾತ್ಮಾನಂ ಪೌರಾನ್ಗತ್ವಾ ಪ್ರಹರ್ಷಯ ॥

ಅನುವಾದ

ಪರಂತಪ! ಮಹಾತ್ಮಾ ಶತ್ರುಘ್ನ ಹಾಗೂ ಸಮಸ್ತ ತಾಯಂದಿರನ್ನು ನೀವು ಹೋಗಿ ಭೆಟ್ಟಿಯಾಗಿರಿ. ತನ್ನ ಪಟ್ಟಾಭಿಷೇಕ ಮಾಡಿಸಿಕೊಂಡು ಪುರವಾಸಿಗಳನ್ನು ಹರ್ಷಗೊಳಿಸಿರಿ.॥21॥

ಮೂಲಮ್ - 22

ಏವಮುಕ್ತ್ವಾ ಸಹಸ್ರಾಕ್ಷೋ ರಾಮಂ ಸೌಮಿತ್ರಿಣಾ ಸಹ ।
ವಿಮಾನೈಃ ಸೂರ್ಯಸಂಕಾಶೈರ್ಯಯೌ ಹೃಷ್ಟಃ ಸುರೈಃ ಸಹ ॥

ಅನುವಾದ

ಶ್ರೀರಾಮ-ಲಕ್ಷ್ಮಣರಲ್ಲಿ ಹೀಗೆ ಹೇಳಿ ದೇವೇಂದ್ರನು ಎಲ್ಲ ದೇವತೆಗಳೊಂದಿಗೆ ಸೂರ್ಯತುಲ್ಯ ತೇಜಸ್ವೀ ವಿಮಾನಗಳ ಮೂಲಕ ಸಂತೋಷದಿಂದ ತಮ್ಮ ಲೋಕಕ್ಕೆ ತೆರಳಿದರು.॥22॥

ಮೂಲಮ್ - 23

ಅಭಿವಾದ್ಯ ಚ ಕಾಕುತ್ಸ್ಥಃ ಸರ್ವಾಂಸ್ತಾಂಸ್ತ್ರಿದಶೋತ್ತಮಾನ್ ।
ಲಕ್ಷ್ಮಣೇನ ಸಹ ಭ್ರಾತ್ರಾ ವಾಸಮಾಜ್ಞಾಪಯತ್ತದಾ ॥

ಅನುವಾದ

ಆ ಸಮಸ್ತ ದೇವತೆಗಳಿಗೆ ನಮಸ್ಕರಿಸಿ ಲಕ್ಷ್ಮಣ ಸಹಿತ ಶ್ರೀರಾಮನು ಎಲ್ಲರಿಗೆ ವಿಶ್ರಮಿಸುವಂತೆ ಆಜ್ಞಾಪಿಸಿದನು.॥23॥

ಮೂಲಮ್ - 24

ತತಸ್ತು ಸಾ ಲಕ್ಷ್ಮಣರಾಮಪಾಲಿತಾ
ಮಹಾಚಮೂರ್ಹೃಷ್ಟಜನಾ ಯಶಸ್ವಿನೀ ।
ಶ್ರಿಯಾ ಜ್ವಲಂತೀ ವಿರರಾಜ ಸರ್ವತೋ
ನಿಶಾ ಪ್ರಣೀತೇವ ಹಿ ಶೀತರಶ್ಮಿನಾ ॥

ಅನುವಾದ

ಶ್ರೀರಾಮ-ಲಕ್ಷ್ಮಣರಿಂದ ಸುರಕ್ಷಿತ ಹಾಗೂ ಹೃಷ್ಟ-ಪುಷ್ಟವಾದ, ಯಶಸ್ವೀ ವಿಶಾಲ ವಾನರ ಸೈನ್ಯವು ಚಂದ್ರನ ಬೆಳದಿಂಗಳಿಂದ ಶೋಭಿಸುವ ರಾತ್ರಿಯಂತೆ ಅದ್ಭುತ ಶೋಭಾಸಂಪನ್ನವಾಗಿ ವಿರಾಜಿಸುತ್ತಿತ್ತು.॥24॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಇಪ್ಪತ್ತನೆಯ ಸರ್ಗ ಪೂರ್ಣವಾಯಿತು.॥120॥