१०९ विभीषणेन रावणान्त्यकर्मकरणम्

वाचनम्
ಭಾಗಸೂಚನಾ

ವಿಭೀಷಣನ ದುಃಖ, ಶ್ರೀರಾಮನಿಂದ ಸಮಾಧಾನ, ರಾವಣನ ಅಂತ್ಯೇಷ್ಟಿಸಂಸ್ಕಾರ ಮಾಡುವಂತೆ ವಿಭೀಷಣನಿಗೆ ಆದೇಶ

ಮೂಲಮ್ - 1

ಭ್ರಾತರಂ ನಿಹತಂ ದೃಷ್ಟ್ವಾಶಯಾನಂ ನಿರ್ಜಿತಂ ರಣೇ ।
ಶೋಕವೇಗ ಪರೀತಾತ್ಮಾ ವಿಲಲಾಪ ವಿಭೀಷಣಃ ॥

ಅನುವಾದ

ಪರಾಜಿತನಾಗಿ ಅಣ್ಣನು ರಣಭೂಮಿಯಲ್ಲಿ ಸತ್ತುಬಿದ್ದಿರುವುದನ್ನು ನೋಡಿ ವಿಭೀಷಣನ ಹೃದಯ ಶೋಕಾ ವೇಗದಿಂದ ವ್ಯಾಕುಲವಾಯಿತು ಮತ್ತು ಅವನು ವಿಲಾಪಿಸತೊಡಗಿದನು.॥1॥

ಮೂಲಮ್ - 2

ವೀರವಿಕ್ರಾಂತ ವಿಖ್ಯಾತ ಪ್ರವೀಣ ನಯಕೋವಿದ ।
ಮಹಾರ್ಹ ಶಯನೋಪೇತ ಕಿಂ ಶೇಷೇದ್ಯ ನಿಹತೋ ಭುವಿ ॥

ಅನುವಾದ

ಹಾ ವಿಖ್ಯಾತ ಪರಾಕ್ರಮಿ ವೀರ ಅಣ್ಣನೇ! ಹಾ ಕಾರ್ಯಕುಶಲ ನೀತಿಜ್ಞನೇ! ನೀನು ಸದಾ ಹಂಸತೂಲಿಕಾ ತಲ್ಪದಲ್ಲಿ ಮಲಗುವವನು, ಇಂದು ಹೀಗೆ ಸತ್ತು ಭೂಮಿಯಲ್ಲಿ ಏಕೆ ಬಿದ್ದಿರುವೆ.॥2॥

ಮೂಲಮ್ - 3

ವಿಕ್ಷಿಪ್ಯ ದೀರ್ಘೌ ನಿಶ್ಚೇಷ್ಟೌ ಭುಜಾವಂಗದಭೂಷಿತೌ ।
ಮಕುಟೇನಾಪವೃತ್ತೇನ ಭಾಸ್ಕರಾಕಾರವರ್ಚಸಾ ॥

ಅನುವಾದ

ವೀರನೇ! ಅಂಗದಗಳಿಂದ ವಿಭೂಷಿತ ನಿನ್ನ ಭುಜಗಳೆರಡೂ ನಿಶ್ಚೇಷ್ಟಿತ ವಾಗಿವೆ. ಇವನ್ನು ಚಾಚಿ ಏಕೆ ಬಿದ್ದಿರುವೆ? ಸೂರ್ಯನಂತೆ ತೇಜಸ್ವೀ ನಿನ್ನ ಕಿರೀಟ ಇಲ್ಲಿ ಉರುಳಿಬಿದ್ದಿದೆ.॥3॥

ಮೂಲಮ್ - 4

ತದಿದಂ ವೀರ ಸಂಪ್ರಾಪ್ತಂ ಯನ್ಮಯಾ ಪೂರ್ವಮೀರಿತಮ್ ।
ಕಾಮಮೋಹಪರೀತಸ್ಯ ಯತ್ ತನ್ನ ರುಚಿತಂ ತವಃ ॥

ಅನುವಾದ

ವೀರವರನೇ! ನಾನು ನಿನಗೆ ಮೊದಲೇ ತಿಳಿಸಿದ್ದ ಸಂಕಟ ಇಂದು ನಿನ್ನ ಮೇಲೆ ಬಂದೆರಗಿದೆ. ಆದರೆ ಆಗ ಕಾಮ-ಮೋಹಕ್ಕೆ ವಶನಾದ್ದರಿಂದ ನಿನಗೆ ನನ್ನ ಮಾತು ರಚಿಸಲಿಲ್ಲ.॥4॥

ಮೂಲಮ್ - 5

ಯನ್ನ ದರ್ಪಾತ್ಪ್ರಹಸ್ತೋ ವಾ ನೇಂದ್ರಜಿನ್ನಾಪರೇ ಜನಾಃ ।
ನ ಕುಂಭಕರ್ಣೋಽತಿರಥೋ ನಾತಿಕಾಯೋ ನರಾಂತಕಃ ।
ನ ಸ್ವಯಂ ಬಹು ಮನ್ಯೇಥಾಸ್ತಸ್ಯೋದರ್ಕೋಽಯಮಾಗತಃ ॥

ಅನುವಾದ

ಅಹಂಕಾರದಿಂದಾಗಿ ಪ್ರಹಸ್ತ, ಇಂದ್ರಜಿತು, ಇತರ ಜನರು, ಅತಿರಥಿ ಕುಂಭಕರ್ಣ, ಅತಿಕಾಯ ನರಾಂತಕ ಹಾಗೂ ಸ್ವತಃ ನೀನೂ ಕೂಡ ನನ್ನ ಮಾತಿಗೆ ಹೆಚ್ಚು ಮಹತ್ವ ಕೊಟ್ಟಿಲ್ಲ. ಅದರ ಫಲವೇ ಹೀಗೆ ಎದುರಾಗಿದೆ.॥5॥

ಮೂಲಮ್ - 6

ಗತಃ ಸೇತುಃ ಸುನೀತಾನಾಂ ಗತೋ ಧರ್ಮಸ್ಯ ವಿಗ್ರಹಃ ।
ಗತಃ ಸತ್ತ್ವಸ್ಯ ಸಂಕ್ಷೇಪಃ ಸುಹಸ್ತಾನಾಂ ಗತಿರ್ಗತಾ ॥

ಮೂಲಮ್ - 7

ಆದಿತ್ಯಃ ಪತಿತೋ ಭೂಮೌ ಮಗ್ನಸ್ತಮಸಿ ಚಂದ್ರಮಾಃ ।
ಚಿತ್ರಭಾನುಃ ಪ್ರಶಾಂತಾರ್ಚಿರ್ವ್ಯವಸಾಯೋ ನಿರುದ್ಯಮಃ ।
ಅಸ್ಮಿನ್ನಿಪತಿತೇ ಭೂಮೌ ವೀರೇ ಶಸ್ತ್ರಭೃತಾಂ ವರೇ ॥

ಅನುವಾದ

ಶಸ್ತ್ರಧಾರಿಗಳಲ್ಲಿ ಶ್ರೇಷ್ಠವೀರ ರಾವಣನು ಧರಾಶಾಯಿಯಾದ್ದರಿಂದ ನೀತಿಯಿಂದ ನಡೆಯುವ ಜನರ ಧರ್ಮದ ಸೇತುವೆಯೇ ಕುಸಿದುಬಿದ್ದಂತಾಯಿತು. ಧರ್ಮದ ಮೂರ್ತಿಮಂತ ವಿಗ್ರಹವೇ ಹೊರಟುಹೋಯಿತು. ಸತ್ತ್ವ (ಬಲ)ದ ಸಂಗ್ರಹದ ಸ್ಥಾನ ನಾಶವಾಯಿತು. ವೀರರಾದವರ ಆಶ್ರಯವೇ ಇಲ್ಲವಾಯಿತು. ಸೂರ್ಯ ನೆಲಕ್ಕೆ ಬಿದ್ದಿರುವನು, ಚಂದ್ರ ಕತ್ತಲೆಯಲ್ಲಿ ಮರೆಯಾದ, ಪ್ರಜ್ವಲಿತ ಅಗ್ನಿ ನಂದಿಹೋಯಿತು, ಎಲ್ಲ ಉತ್ಸಾಹ ನಿರರ್ಥಕವಾಯಿತು.॥6-7॥

ಮೂಲಮ್ - 8

ಕಿಂ ಶೇಷಮಿವ ಲೋಕಸ್ಯ ಗತಸತ್ವಸ್ಯ ಸಂಪ್ರತಿ ।
ರಣೇ ರಾಕ್ಷಸ ಶಾರ್ದೂಲೇ ಪ್ರಸುಪ್ತ ಇವ ಪಾಂಸುಷು ॥

ಅನುವಾದ

ರಣ ಭೂಮಿಯ ಧೂಳಿನಲ್ಲಿ ರಾಕ್ಷಸಶ್ರೇಷ್ಠ ರಾವಣನು ಮಲಗಿದ್ದರಿಂದ ಈ ಲೋಕದ ಆಧಾರ ಮತ್ತು ಬಲ ಮುಗಿದು ಹೋಯಿತು. ಇನ್ನು ಇಲ್ಲಿ ಏನು ಉಳಿದಿದೆ.॥8॥

ಮೂಲಮ್ - 9

ಧೃತಿಪ್ರವಾಲಃ ಪ್ರಸಭಾಗ್ರ್ಯಪುಷ್ಪ-
ಸ್ತಪೋಬಲಃ ಶೌರ್ಯನಿಬದ್ಧಮೂಲಃ ।
ರಣೇ ಮಹಾನ್ರಾಕ್ಷಸ ರಾಜವೃಕ್ಷಃ
ಸಂಮರ್ದಿತೋ ರಾಘವಮಾರುತೇನ ॥

ಅನುವಾದ

ಅಯ್ಯೋ! ರಾಕ್ಷಸರಾಜ ವೃಕ್ಷಕ್ಕೆ ಧೈರ್ಯವೇ ಎಲೆಗಳಿದ್ದು, ಹಟವೇ ಸುಂದರ ಹೂವು, ತಪಸ್ಸೇ ಬಲ ಮತ್ತು ಶೌರ್ಯವೇ ಬೇರಾಗಿತ್ತು. ಆ ಮಹಾವೃಕ್ಷವನ್ನು ಇಂದು ರಾಘವನೆಂಬ ಬಿರುಗಾಳಿಯು ಬುಡಮೇಲಾಗಿಸಿತು.॥9॥

ಮೂಲಮ್ - 10

ತೇಜೋ ವಿಷಾಣಃ ಕುಲವಂಶವಂಶಃ
ಕೋಪಪ್ರಸಾದಾ ಪರಗಾತ್ರಹಸ್ತಃ ।
ಇಕ್ಷ್ವಾ ಕು ಸಿಂಹಾವಗೃಹೀತದೇಹಃ
ಸುಪ್ತಃ ಕ್ಷಿತೌ ರಾವಣಗಂಧಹಸ್ತೀ ॥

ಅನುವಾದ

ರಾವಣನೆಂಬ ಗಂಧಹಸ್ತಿಗೆ ತೇಜವೇ ದಂತಗಳು, ವಂಶ ಪರಂಪರೆಯೇ ಪೃಷ್ಠಭಾಗವಾಗಿತ್ತು. ಕ್ರೋಧವೇ ಕೆಳಗಿನ ಅಂಗಗಳಾಗಿದ್ದವು. ಪ್ರಸಾದವೇ ಸೊಂಡಿಲವಾಗಿತ್ತು. ಅಂತಹ ರಾವಣನೆಂಬ ಆನೆಯು ಇಕ್ಷ್ವಾಕುವಂಶೀ ಶ್ರೀರಾಮ ರೂಪಿ ಸಿಂಹನಿಂದಾಗಿ ಸೀಳಲ್ಪಟ್ಟು ಇಂದು ಅಸುನೀಗಿ ನೆಲದಲ್ಲಿ ಮಲಗಿದೆ.॥10॥

ಮೂಲಮ್ - 11

ಪರಾಕ್ರಮೋತ್ಸಾಹ ವಿಜೃಂಭಿತಾರ್ಚಿ-
ರ್ನಿಃಶ್ವಾಸಧೂಮಃ ಸ್ವಬಲಪ್ರತಾಪಃ ।
ಪ್ರತಾಪವಾನ್ಸಂಯತಿ ರಾಕ್ಷಸಾಗ್ನಿ
ರ್ನಿರ್ವಾಪಿತೋ ರಾಮ ಪಯೋಧರೇಣ ॥

ಅನುವಾದ

ಪರಾಕ್ರಮ, ಉತ್ಸಾಹಗಳೇ ಯಾರ ಉರಿಯುತ್ತಿರುವ ಅಗ್ನಿಯಂತೆ ಇದ್ದ, ನಿಃಶ್ವಾಸವೇ ಹೊಗೆಯಾಗಿದ್ದ, ತನ್ನ ಬಲವೇ ಪ್ರತಾಪವಾಗಿದ್ದ ಪ್ರತಾಪಿ ರಾವಣ ರೂಪಿ ಅಗ್ನಿಯನ್ನು ಈಗ ಶ್ರೀರಾಮರೂಪೀ ಮೇಘವು ಆರಿಸಿಬಿಟ್ಟಿತು.॥11॥

ಮೂಲಮ್ - 12

ಸಿಂಹರ್ಕ್ಷಲಾಂಗೂಲಕಕುದ್ವಿಷಾಣಃ
ಪರಾಭಿಜಿದ್ ಗಂಧನ ಗಂಧವಾಹಃ ।
ರಕ್ಷೋವೃಷಶ್ಚಾಪಲ ಕರ್ಣಚಕ್ಷುಃ
ಕ್ಷಿತೀಶ್ವರ ವ್ಯಾಘ್ರಹತೋಽವಸನ್ನಃ ॥

ಅನುವಾದ

ರಾವಣರೂಪಿ ಗೂಳಿಗೆ ರಾಕ್ಷಸ ಸೈನ್ಯವೇ ಬಾಲ, ಹಿಳಲು ಮತ್ತು ಕೋಡುಗಳಾಗದ್ದವೋ, ಶತ್ರುಗಳ ಮೇಲೆ ವಿಜಯ ಪಡೆಯುವಂತಹ ವಾಯುವಿನಂತೆ ಪರಾಕ್ರಮ, ಉತ್ಸಾಹ ಪ್ರಕಟಗೊಳಿಸುವಂತಹ ಚಪಲತೆಯೇ ಕಣ್ಣು-ಕಿವಿಗಳಿಂದ ಕೂಡಿದ ರಾಕ್ಷಸ ಗೂಳಿಯನ್ನು ಮಹಾ ರಾಜ ಶ್ರೀರಾಮರೂಪೀ ವ್ಯಾಘ್ರನಿಂದ ಕೊಲ್ಲಲ್ಪಟ್ಟು ವಿನಾಶ ಹೊಂದಿತು.॥12॥

ಮೂಲಮ್ - 13

ವದಂತಂ ಹೇತುಮದ್ವಾಕ್ಯಂ ಪರಿಮೃಷ್ಟಾರ್ಥ ನಿಶ್ಚಯಮ್ ।
ರಾಮಃ ಶೋಕಸಮಾವಿಷ್ಪಮಿತ್ಯುವಾಚ ವಿಭೀಷಣಮ್ ॥

ಅನುವಾದ

ಚೆನ್ನಾಗಿ ಯೋಚಿಸಿ ನಿರ್ಣಯಿಸಿದ ಮತ್ತು ಯುಕ್ತಿಸಂಗತವಾದ ಮಾತನ್ನು ಹೇಳುತ್ತಿದ್ದ ಶೋಕಮಗ್ನ ವಿಭೀಷಣನಲ್ಲಿ ಆಗ ಭಗವಾನ್ ಶ್ರೀರಾಮನು ಇಂತೆಂದನು.॥13॥

ಮೂಲಮ್ - 14

ನಾಯಂ ವಿನಷ್ಟೋ ನಿಶ್ಚೇಷ್ಟಃ ಸಮರೇ ಚಂಡವಿಕ್ರಮಃ ।
ಅತ್ಯುನ್ನತ ಮಹೋತ್ಸಾಹಃ ಪತಿತೋಽಯಮಶಂಕಿತಃ ॥

ಅನುವಾದ

ವಿಭೀಷಣನೇ! ಈ ರಾವಣನು ರಣರಂಗದಲ್ಲಿ ಅಸಮರ್ಥನಾಗಿ ಸಾಯಲಿಲ್ಲ. ಇವನು ಪ್ರಚಂಡ ಪರಾಕ್ರಮ ಪ್ರಕಟಿಸುತ್ತಾ, ಉತ್ಸಾಹ ಹೆಚ್ಚುತ್ತಲೇ ಇತ್ತು. ಇವನಿಗೆ ಮೃತ್ಯುವಿನಿಂದ ಭಯವಿರಲಿಲ್ಲ. ಆದರೂ ದೈವಯೋಗದಿಂದ ರಣಭೂಮಿಯಲ್ಲಿ ಗತಪ್ರಾಣನಾಗಿ ಬಿದ್ದನು.॥14॥

ಮೂಲಮ್ - 15

ನೈವಂ ವಿನಷ್ಟಾಃ ಶೋಚ್ಯಂತೇ ಕ್ಷತ್ರಧರ್ಮ ವ್ಯವಸ್ಥಿತಾಃ ।
ವೃದ್ಧಿಮಾಶಂಸಮಾನಾ ಯೇ ನಿಪತಂತಿ ರಣಾಜಿರೇ ॥

ಅನುವಾದ

ಯಾರು ತಮ್ಮ ಅಭ್ಯುದಯದ ಇಚ್ಛೆಯಿಂದ ಕ್ಷತ್ರಿಯ ಧರ್ಮದಲ್ಲಿ ಸ್ಥಿತನಾಗಿ ಸಮರಾಂಗಣದಲ್ಲಿ ಕೊಲ್ಲಲ್ಪಡು ವರೋ, ಅಂತಹವರ ವಿಷಯದಲ್ಲಿ ಶೋಕಿಸಬಾರದು.॥15॥

ಮೂಲಮ್ - 16

ಯೇನ ಸೇಂದ್ರಾಸಯೋ ಲೋಕಾಸ್ತ್ರಾಸಿತಾ ಯುಧಿ ಧೀಮತಾ ।
ತಸ್ಮಿನ್ಕಾಲ ಸಮಾಯುಕ್ತೇ ನ ಕಾಲಃ ಪರಿಶೋಚಿತುಮ್ ॥

ಅನುವಾದ

ಯಾವ ಬುದ್ಧಿವಂತ ವೀರನು ಇಂದ್ರಸಹಿತ ಮೂರುಲೋಕಗಳನ್ನು ಯುದ್ಧದಲ್ಲಿ ಭಯಭೀತರನ್ನಾಗಿ ಸಿದ್ದನೋ, ಅವನೆ ಈಗ ಕಾಲವಶನಾದರೆ ಅವನಿಗಾಗಿ ಶೋಕಿಸುವ ಪ್ರಮೇಯವೇ ಇಲ್ಲ.॥16॥

ಮೂಲಮ್ - 17

ನೈಕಾಂತ ವಿಜಯೋ ಯುದ್ಧೇ ಭೂತಪೂರ್ವಃ ಕದಾಚನ ।
ಪರೈರ್ವಾ ಹನ್ಯತೇ ವೀರಃ ಪರಾನ್ವಾ ಹಂತಿ ಸಂಯುಗೇ ॥

ಅನುವಾದ

ಯುದ್ಧದಲ್ಲಿ ಸದಾ ವಿಜಯವೇ ವಿಜಯ ಎಂದು ಮೊದಲು ಯಾರಿಗೂ ಆಗಲಿಲ್ಲ. ವೀರ ಪುರುಷನು ಸಂಗ್ರಾಮದಲ್ಲಿ ಒಂದೋ ಶತ್ರುವನ್ನು ಗೆಲ್ಲುತ್ತಾನೆ, ಇಲ್ಲವೇ ಮಡಿದು ಸ್ವರ್ಗಸೇರುತ್ತಾನೆ.॥17॥

ಮೂಲಮ್ - 18

ಇಯಂ ಹಿ ಪೂರ್ವೈಃ ಸಂದಿಷ್ಟಾ ಗತಿಃ ಕ್ಷತ್ರಿಯ ಸಂಮತಾ ।
ಕ್ಷತ್ರಿಯೋ ನಿಹತಃ ಸಂಖ್ಯೇ ನ ಶೋಚ್ಯ ಇತಿ ನಿಶ್ಚಯಃ ॥

ಅನುವಾದ

ಹಿಂದೆ ಮಹಾಪುರುಷರು ಹೇಳಿದ ಉತ್ತಮ ಗತಿಯೇ ಇಂದು ರಾವಣನಿಗೆ ಲಭಿಸಿದೆ. ಕ್ಷಾತ್ರವೃತ್ತಿಯನ್ನು ಆಶ್ರಯಸಿದ ವೀರರಿಗೆ ಇದು ದೊಡ್ಡ ಆದರದ ವಿಷಯ ವಾಗಿದೆ. ಕ್ಷತ್ರಿಯ ವೃತ್ತಿಯಲ್ಲಿ ಇರುವ ವೀರಪುರುಷನು ಯುದ್ಧದಲ್ಲಿ ಮಡಿದರೆ ಅವನು ಶೋಕಕ್ಕೆ ಯೋಗ್ಯನಲ್ಲ; ಇದೇ ಶಾಸ್ತ್ರೀಯ ಸಿದ್ಧಾಂತವಾಗಿದೆ.॥18॥

ಮೂಲಮ್ - 19

ತದೇವಂ ನಿಶ್ಚಯಂ ದೃಷ್ಟ್ವಾತತ್ತ್ವಮಾಸ್ಥಾಯ ವಿಜ್ವರಃ ।
ಯದಿಹಾ ನಂತರಂ ಕಾರ್ಯಂ ಕಲ್ಪ್ಯಂ ತದನುಚಿಂತಯ ॥

ಅನುವಾದ

ಶಾಸ್ತ್ರದ ಈ ನಿಶ್ಚಯದಲ್ಲಿ ವಿಚಾರಮಾಡಿ ಸಾತ್ತ್ವಿಕ ಬುದ್ಧಿಯನ್ನು ಆಶ್ರಯಸಿ ನೀನು ನಿಶ್ಚಿಂತನಾಗು ಹಾಗೂ ಈಗ ಮಾಡಬೇಕಾದ ಪ್ರೇತ ಸಂಸ್ಕಾರಾದಿ ಕಾರ್ಯದ ಕುರಿತು ವಿಚಾರ ಮಾಡು.॥19॥

ಮೂಲಮ್ - 20

ತಮುಕ್ತವಾಕ್ಯಂ ವಿಕ್ರಾಂತಂ ರಾಜಪುತ್ರಂ ವಿಭೀಷಣಃ ।
ಉವಾಚ ಶೋಕ ಸಂತಪ್ತೋ ಭ್ರಾತುರ್ಹಿತಮನಂತರಮ್ ॥

ಅನುವಾದ

ಪರಮ ಪರಾಕ್ರಮಿ ರಾಜಕುಮಾರ ಶ್ರೀರಾಮನು ಹೀಗೆ ಹೇಳಿದಾಗ ಶೋಕಸಂತಪ್ತನಾದ ವಿಭೀಷಣನು ತನ್ನ ಅಣ್ಣನ ಕುರಿತು ಹಿತಕರ ಮಾತನ್ನು ಹೇಳಿದನು.॥20॥

ಮೂಲಮ್ - 21

ಯೋಽಯಂ ವಿಮರ್ದೇಷ್ವ ವಿಭಗ್ನ ಪೂರ್ವಃ
ಸುರೈಃ ಸಮಸ್ತೈರಪಿ ವಾಸವೇನ ।
ಭವಂತ ಮಾಸಾದ್ಯ ರಣೇ ವಿಭಗ್ನೋ
ವೇಲಾಮಿವಾಸಾದ್ಯ ಯಥಾ ಸಮುದ್ರಃ ॥

ಅನುವಾದ

ಭಗವಂತಾ! ಹಿಂದೆ ಯುದ್ಧದ ಸಂದರ್ಭದಲ್ಲಿ ಸಮಸ್ತ ದೇವತೆಗಳು, ಇಂದ್ರನೂ ಕೂಡ ಯಾರನ್ನು ಹಿಮ್ಮೆಟ್ಟಿಸಲಾಗಲಿಲ್ಲವೋ ಆ ರಾವಣನು ಇಂದು ರಣರಂಗದಲ್ಲಿ ನಿನ್ನನ್ನು ಎದುರಿಸಿ ಸಮುದ್ರವು ತೀರದವರೆಗೆ ಹೋಗಿ ಶಾಂತವಾಗುವಂತೆಯೇ ಶಾಂತನಾದನು.॥21॥

ಮೂಲಮ್ - 22

ಅನೇನ ದತ್ತಾನಿ ವನೀಪಕೇಷು
ಭುಕ್ತಾಶ್ಚ ಭೋಗಾ ನಿಭೃತಾಶ್ಚ ಭೃತ್ಯಾಃ ।
ಧನಾನಿ ಮಿತ್ರೇಷು ಸಮರ್ಪಿತಾನಿ
ವೈರಾಣ್ಯಮಿತ್ರೇಷು ಚ ಯಾಪಿತಾನಿ ॥

ಅನುವಾದ

ಇವನು ಯಾಚಕರಿಗೆ ದಾನ ಕೊಟ್ಟಿದ್ದನು, ಭೋಗ ಭೋಗಿಸಿದನು, ಭೃತ್ಯರನ್ನು ಪೋಷಿಸಿದನು, ಮಿತ್ರರಿಗೆ ಧನವನ್ನು ಅರ್ಪಿಸಿದನು ಮತ್ತು ಶತ್ರುಗಳ ವೈರದ ಪ್ರತಿಕಾರ ಮಾಡಿದನು.॥22॥

ಮೂಲಮ್ - 23

ಏಷೋಽಹಿತಾಗ್ನಿಶ್ಚ ಮಹಾತಪಾಶ್ಚ
ವೇದಾಂತಗಃ ಕರ್ಮಸು ಜಾಗ್ರ್ಯಶೂರಃ ।
ಏತಸ್ಯ ಯತ್ಪ್ರೇತಗತಸ್ಯ ಕೃತ್ಯಂ
ತತ್ಕರ್ತುಮಿಚ್ಛಾಮಿ ತವ ಪ್ರಸಾದಾತ್ ॥

ಅನುವಾದ

ಈ ರಾವಣನು ಅಗ್ನಿಹೋತ್ರಿ, ಮಹಾತಪಸ್ವೀ, ವೇದಾಂತವೇತ್ತನು, ಯಜ್ಞಯಾಗಾದಿ ಕರ್ಮಗಳಲ್ಲಿ ಪರಮ ಕರ್ಮಠನಾಗಿದ್ದನು. ಈಗ ಈ ಪ್ರೇತಭಾವ ಹೊಂದಿರುವನು. ಆದ್ದರಿಂದ ನಾನೇ ನಿನ್ನ ಕೃಪೆಯಿಂದ ಇವನ ಪ್ರೇತ ಕೃತ್ಯ ಮಾಡಲು ಬಯಸುತ್ತೇನೆ.॥23॥

ಮೂಲಮ್ - 24

ಸ ತಸ್ಯ ವಾಕ್ಯೈಃ ಕರುಣೈರ್ಮಹಾತ್ಮಾ
ಸಂಬೋಧಿತಃ ಸಾಧು ವಿಭಿಷಣೇನ ।
ಆಜ್ಞಾಪಯಾಮಾಸ ನರೇಂದ್ರ ಸೂನುಃ
ಸ್ವರ್ಗೀಯಮಾಧಾನಮದೀನಸತ್ತ್ವಃ ॥

ಅನುವಾದ

ವಿಭೀಷಣನ ಕರುಣಾಜನಕ ಮಾತುಗಳಿಂದ ಚೆನ್ನಾಗಿ ಸಮಜಾಯಿಸಿದ ಬಳಿಕ, ಉದಾರಚಿತ್ತನಾದ ನರೇಂದ್ರ ಶ್ರೀರಾಮನು ರಾವಣನಿಗೆ ಸ್ವರ್ಗಲೋಕ ಪ್ರಾಪಕವಾದ ಅಂತೇಷ್ಟಿಕರ್ಮ ಮಾಡುವಂತೆ ಆಜ್ಞಾಪಿಸಿದನು.॥24॥

ಮೂಲಮ್ - 25

ಮರಣಾಂತಾನಿ ವೈರಾಣಿ ನಿರ್ವೃತ್ತಂ ನಃ ಪ್ರಯೋಜನಮ್ ।
ಕ್ರಿಯತಾಮಸ್ಯ ಸಂಸ್ಕಾರೋ ಮಮಾಪ್ಯೇಷ ಯಥಾ ತವ ॥

ಅನುವಾದ

ರಾಮನೆಂದ ವಿಭೀಷಣನೆ! ಬದುಕಿರುವವರೆಗೆ ವೈರ ಇರುತ್ತದೆ, ಸತ್ತನಂತರ ವೈರವು ಅಂತ್ಯವಾಗುತ್ತದೆ. ಈಗ ನಮ್ಮ ಪ್ರಯೋಜನ ಸಿದ್ಧವಾಯಿತು; ಆದ್ದರಿಂದ ಈಗ ನೀನು ಇವನ ಸಂಸ್ಕಾರ ಮಾಡು. ಈಗ ಇವನು ನಿನಗೆ ಸ್ನೇಹಪಾತ್ರನಿರುವಂತೆಯೇ ನನಗೂ ಸ್ನೇಹಭಾಜನನಾಗಿದ್ದಾನೆ.॥25॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಒಂಭತ್ತನೆಯ ಸರ್ಗ ಪೂರ್ಣವಾಯಿತು. ॥109॥