०९९ राम-रावणयुद्धम्

वाचनम्
ಭಾಗಸೂಚನಾ

ಶ್ರೀರಾಮ-ರಾವಣರ ಯುದ್ಧ

ಮೂಲಮ್ - 1

ಮಹೋದರ ಮಹಾಪಾರ್ಶ್ವೌ ಹತೌ ದೃಷ್ಟ್ವಾಸ ರಾವಣಃ ।
ತಸ್ಮಿಂಶ್ಚ ನಿಹತೇ ವೀರೇ ವಿರೂಪಾಕ್ಷೇ ಮಹಾಬಲೇ ॥

ಮೂಲಮ್ - 2

ಆವಿವೇಶ ಮಹಾನ್ಕ್ರೋಧೋ ರಾವಣಂ ತು ಮಹಾಮೃಧೇ ।
ಸೂತಂ ಸಂಚೋದಯಾಮಾಸ ವಾಕ್ಯಂ ಚೇದಮುವಾಚ ಹ ॥

ಅನುವಾದ

ಮಹಾಬಲನಾದ ವಿರೂಪಾಕ್ಷನು ಹಾಗೂ ಮಹೋದರ ಮಹಾಪಾರ್ಶ್ವರೂ ಯುದ್ಧದಲ್ಲಿ ನಿಧನ ಹೊಂದಲಾಗಿ ರಾವಣನು ಅತಿಶಯವಾದ ಕೋಪಾವಿಷ್ಟನಾಗಿ ಸಾರಥಿಗೆ ರಥವನ್ನು ಮುನ್ನಡೆಸುವಂತೆ ಆಜ್ಞಾಪಿಸಿದನು.॥1-2॥

ಮೂಲಮ್ - 3

ನಿಹತಾನಾಮಮಾತ್ಯಾನಾಂ ರುದ್ಧಸ್ಯ ನಗರಸ್ಯ ಚ ।
ದುಃಖಮೇವಾಪನೇಷ್ಯಾಮಿ ಹತ್ವಾತೌ ರಾಮಲಕ್ಷ್ಮಣೌ ॥

ಅನುವಾದ

ಸುತನೇ! ನನ್ನ ಮಂತ್ರಿಗಳು ಹತರಾದರು. ಲಂಕೆಯನ್ನು ಸುತ್ತಲೂ ಆಕ್ರಮಿಸಲ್ಪಟ್ಟಿದೆ. ಇದರಿಂದ ನನಗೆ ಬಹಳ ದುಃಖವಾಗಿದೆ. ಇಂದು ರಾಮ-ಲಕ್ಷ್ಮಣರನ್ನು ವಧಿಸಿಯೇ ನನ್ನ ದುಃಖವನ್ನು ದೂರಗೊಳಿಸುವೆನು.॥3॥

ಮೂಲಮ್ - 4

ರಾಮವೃಕ್ಷಂ ರಣೇ ಹನ್ಮಿ ಸೀತಾಪುಷ್ಪ ಫಲಪ್ರದಮ್ ।
ಪ್ರಶಾಖಾ ಯಸ್ಯ ಸುಗ್ರೀವೋ ಜಾಂಬವಾನ್ಕುಮುದೋ ನಲಃ ॥

ಮೂಲಮ್ - 5

ಮೈಂದಶ್ಚ ದ್ವಿವಿದಶ್ಚೈವ ಅಂಗದೋ ಗಂಧಮಾದನಃ ।
ಹನೂಮಾಂಶ್ಚ ಸುಷೇಣಶ್ಚ ಸರ್ವೇ ಚ ಹರಿಯೂಥಪಾಃ ॥

ಅನುವಾದ

ಸೀತಾರೂಪೀ ಪುಷ್ಪದಿಂದ ಲನೀಡುವ, ಸುಗ್ರೀವ, ಜಾಂಬವಂತ, ಕುಮುದ, ನೀಲ, ದ್ವಿವಿದ, ಮೈಂದ ಅಂಗದ, ಗಂಧಮಾದನ, ಹನುಮಂತ, ಸುಷೇಣಾದಿ ಸಮಸ್ತ ವಾನರ ದಳಪತಿಗಳೇ ರೆಂಬೆ-ಕೊಂಬೆಗಳುಳ್ಳ ರಾಮರೂಪೀ ವೃಕ್ಷವನ್ನು ರಣರಂಗದಲ್ಲಿ ಕಿತ್ತು ಬಿಸುಡುವೆನು.॥4-5॥

ಮೂಲಮ್ - 6

ಸ ದಿಶೋ ದಶ ಘೋಷೇಣ ರಥಸ್ಯಾತಿ ರಥೋಮಹಾನ್ ।
ನಾದಯನ್ ಪ್ರಯಯೌ ತೂರ್ಣಂ ರಾಘವಂ ಚಾಭ್ಯಧಾವತ ॥

ಅನುವಾದ

ಹೀಗೆ ಹೇಳಿ ಮಹಾ ಅತಿರಥಿ ವೀರ ರಾವಣನು ತನ್ನ ರಥದ ಗರಗರ ಶಬ್ದದಿಂದ ದಶ ದಿಕ್ಕುಗಳನ್ನು ಪ್ರತಿಧ್ವನಿಸುತ್ತಾ ಬಹಳ ವೇಗವಾಗಿ ಶ್ರೀರಘುನಾಥನ ಕಡೆಗೆ ಓಡಿದನು.॥6॥

ಮೂಲಮ್ - 7

ಪೂರಿತಾ ತೇನ ಶಬ್ದೇನ ಸನದೀಗಿರಿಕಾನನಾ ।
ಸಂಚಚಾಲ ಮಹೀ ಸರ್ವಾ ತ್ರಸ್ತಸಿಂಹಮೃಗದ್ವಿಜಾ ॥

ಅನುವಾದ

ರಥ ಶಬ್ದದಿಂದ ನದೀ, ಪರ್ವತ, ಅರಣ್ಯಸಹಿತ ಅಲ್ಲಿಯ ಇಡೀ ಭೂಮಿ ಪ್ರತಿಧ್ವನಿಸಿತು. ಧರಣಿ ಕಂಪಿಸಿತು, ಅಲ್ಲಿಯ ಪಶು-ಪಕ್ಷಿಗಳೆಲ್ಲ ಭಯಗೊಂಡವು.॥7॥

ಮೂಲಮ್ - 8

ತಾಮಸಂ ಸು ಮಹಾಘೋರಂ ಚಕಾರಾಸ್ತ್ರಂ ಸುದಾರುಣಮ್ ।
ನಿರ್ದದಾಹ ಕಪೀನ್ಸರ್ವಾಂಸ್ತೇ ಪ್ರಪೇತುಃ ಸಮಂತತಃ ॥

ಅನುವಾದ

ಆಗ ರಾವಣನು ತಾಮಸ* ಎಂಬ ಅತ್ಯಂತ ಭಯಂಕರ ಮಹಾಘೋರ ಅಸ್ತ್ರವನ್ನು ಪ್ರಕಟಸಿ, ಸಮಸ್ತ ವಾನರರನ್ನು ಭಸ್ಮಮಾಡತೊಡಗಿದನು. ಎಲ್ಲೆಡೆ ವಾನರರ ಹೆಣಗಳೇ ಬೀಳತೊಡಗಿದವು.॥8॥

ಟಿಪ್ಪನೀ
  • ಆ ಅಸ್ತ್ರದ ದೇವತೆ ತಮೋಗ್ರಹ ರಾಹು ಇರುವುದರಿಂದ ಇದನ್ನು ‘ತಾಮಸ’ ಎಂದು ಹೇಳುವರು.
ಮೂಲಮ್ - 9

ಉತ್ಪಪಾತ ರಜೋ ಭೂವೌ ತೈರ್ಭಗ್ನೈಃ ಸಂಪ್ರಧಾವಿತೈಃ ।
ನಹಿ ತತ್ಸಹಿತುಂ ಶೇಕುರ್ಬ್ರಹ್ಮಣಾ ನಿರ್ಮಿತಂ ಸ್ವಯಮ್ ॥

ಅನುವಾದ

ಉಳಿದ ವಾನರರು ಪಲಾಯನ ಮಾಡುತ್ತಿದ್ದಾಗ ರಣಭೂಮಿಯಲ್ಲಿ ಧೂಳು ಎದ್ದಿತು. ಬ್ರಹ್ಮನೇ ನಿರ್ಮಿಸಿದ್ದ ತಾಮಸಾಸ್ತ್ರದ ವೇಗವನ್ನು ವಾನರಯೋಧರು ಸಹಿಸದಾದರು.॥9॥

ಮೂಲಮ್ - 10

ತಾನ್ಯನೀಕಾನ್ಯನೇಕಾನಿ ರಾವಣಸ್ಯ ಶರೋತ್ತಮೈಃ ।
ದೃಷ್ಟ್ವಾಭಗ್ನಾನಿ ಶತಶೋ ರಾಘವಃ ಪರ್ಯವಸ್ಥಿತಃ ॥

ಅನುವಾದ

ರಾವಣನ ಉತ್ತಮ ಬಾಣಗಳಿಂದ ಆಹತವಾದ ವಾನರರ ನೂರಾರು ಸೈನಿಕರು ಚೆಲ್ಲಾ ಪಲ್ಲಿಯಾದರು. ಇದನ್ನು ನೋಡಿ ಭಗವಾನ್ ಶ್ರೀರಾಮನು ಯುದ್ಧಕ್ಕಾಗಿ ಉದ್ಯುಕ್ತನಾಗಿ ಸುಸ್ಥಿರವಾಗಿ ನಿಂತುಕೊಂಡನು.॥10॥

ಮೂಲಮ್ - 11½

ತತೋ ರಾಕ್ಷಸಶಾರ್ದೂಲೋ ವಿದ್ರಾವ್ಯ ಹರಿವಾಹಿನೀಮ್ ।
ಸ ದದರ್ಶ ತತೋ ರಾಮಂ ತಿಷ್ಠಂತಮಪರಾಜಿತಮ್ ॥
ಲಕ್ಷ್ಮಣೇನ ಸಹ ಭ್ರಾತ್ರಾ ವಿಷ್ಣುನಾ ವಾಸವಂ ಯಥಾ ।

ಅನುವಾದ

ಅತ್ತ ವಾನರ ಸೈನ್ಯವನ್ನು ಓಡಿಸಿ ರಾಕ್ಷಸೇಂದ್ರ ರಾವಣನು ಯಾರಿಂದಲೂ ಪರಾಜಿತನಾಗದ ಶ್ರೀರಾಮನು ಲಕ್ಷ್ಮಣನೊಂದಿಗೆ ಇಂದ್ರನು ತಮ್ಮನಾದ ಉಪೇಂದ್ರನ ಜೊತೆ ನಿಂತಿರುವಂತೆ ಸ್ಥಿರವಾಗಿ ನಿಂತಿರುವುದನ್ನು ನೋಡಿದನು.॥11॥

ಮೂಲಮ್ - 12½

ಆಲಿಖಂತಮಿವಾಕಾಶಮವಷ್ಟಭ್ಯ ಮಹದ್ಧನುಃ ॥
ಪದ್ಮಪತ್ರವಿಶಾಲಾಕ್ಷಂ ದೀರ್ಘಬಾಹುಮರಿಂದಮಮ್ ।

ಅನುವಾದ

ರಾಮನು ತನ್ನ ವಿಶಾಲ ಧನುಸ್ಸನ್ನು ಎತ್ತಿ ಹಿಡಿದಿದ್ದನು; ಅದು ಆಕಾಶದಲ್ಲೇ ಗೆರೆ ಎಳೆಯುತ್ತಿರುವಂತೆ ಕಂಡುಬರುತ್ತಿತ್ತು. ಅವನ ವಿಶಾಲ ನೇತ್ರಗಳು ಅರಳಿದ ಕಮಲದ ಎಸಳಿನಂತೆ ಇದ್ದು, ಭುಜಗಳು ದೀರ್ಘವಾಗಿದ್ದು, ಅವು ಶತ್ರುಗಳನ್ನು ದಮನ ಮಾಡಲು ಪೂರ್ಣವಾಗಿ ಸಮರ್ಥವಾಗಿದ್ದವು.॥12½॥

ಮೂಲಮ್ - 13

ತತೋ ರಾಮೋ ಮಹಾತೇಜಾಃ ಸೌಮಿತ್ರಿಸಹಿತೋ ಬಲೀ ॥

ಮೂಲಮ್ - 14

ವಾನರಾಂಶ್ಚ ರಣೇ ಭಗ್ನಾ ನಾಪತಂತಂ ಚ ರಾವಣಮ್ ॥
ಸಮೀಕ್ಷ್ಯ ರಾಘವೋ ಹೃಷ್ಟೋ ಮಧ್ಯೇ ಜಗ್ರಾಹ ಕಾರ್ಮುಕಮ್ ॥

ಅನುವಾದ

ಅನಂತರ ಲಕ್ಷ್ಮಣ ಸಹಿತನಾಗಿ ನಿಂತಿದ್ದ ಮಹಾತೇಜಸ್ವೀ ಮಹಾಬಲಿ ಶ್ರೀರಾಮನು ರಣರಂಗದಲ್ಲಿ ಓಡುತ್ತಿರುವ ವಾನರರನ್ನು, ತನ್ನೆಡೆಗೆ ಬರುತ್ತಿರುವ ರಾವಣನನ್ನು ನೋಡಿ ಹರ್ಷಗೊಂಡು ಧನುಸ್ಸನ್ನು ದೃಢವಾಗಿ ಹಿಡಿದುಕೊಂಡನು.॥13-14॥

ಮೂಲಮ್ - 15

ವಿಸ್ಫಾರಯಿತುಮಾರೇಭೇ ತತಃ ಸ ಧನುರುತ್ತಮಮ್ ।
ಮಹಾವೇಗಂ ಮಹಾನಾದಂ ನಿರ್ಭಿಂದನ್ನಿವ ಮೇದಿನೀಮ್ ॥

ಅನುವಾದ

ಅವನು ತನ್ನ ಮಹಾವೇಗಶಾಲಿ ಹಾಗೂ ಮಹಾನಾದ ಪ್ರಕಟಿಸುವ ಉತ್ತಮ ಧನುಸ್ಸನ್ನು ಸೆಳೆದು ಭೂಮಿಯನ್ನೇ ವಿವೀರ್ಣಗೊಳಿಸುವಂತೆ ಧನುಷ್ಟಂಕಾರ ಮಾಡತೊಡಗಿದನು.॥15॥

ಮೂಲಮ್ - 16

ರಾವಣಸ್ಯ ಚ ಬಾಣೌಘೈ ರಾಮವಿಸ್ಫಾರಿತೇನ ಚ ।
ಶಬ್ದೇನ ರಾಕ್ಷಸಾಸ್ತೇನ ಪೇತುಶ್ಚ ಶತಶಸ್ತದಾ ॥

ಅನುವಾದ

ರಾವಣನ ಬಾಣಗಳಿಂದ ಹಾಗೂ ಶ್ರೀರಾಮನ ಧನುಷ್ಟಂಕಾರದಿಂದ ಪ್ರಕಟವಾದ ಶಬ್ದದಿಂದ ಆತಂಕಿತರಾದ ನೂರಾರು ರಾಕ್ಷಸರು ಧರಾಶಾಯಿಯಾದರು.॥16॥

ಮೂಲಮ್ - 17

ತಯೋಃ ಶರಪಥಂ ಪ್ರಾಪ್ಯ ರಾವಣೋ ರಾಜಪುತ್ರಯೋಃ ।
ಸ ಬಭೌ ಚ ಯಥಾ ರಾಹುಃ ಸಮೀಪೇ ಶಶಿಸೂರ್ಯಯೋಃ ॥

ಅನುವಾದ

ರಾಜಪುತ್ರರಾದ ರಾಮ-ಲಕ್ಷ್ಮಣರ ಬಾಣಗಳ ಗುರಿಗೆ ಎದುರಾಗಿ ಬಂದಿರುವ ರಾವಣನು ಚಂದ್ರ-ಸೂರ್ಯರ ಬಳಿಗೆ ಬಂದ ರಾಹುವಿನಂತೆ ಶೋಭಿಸುತ್ತಿದ್ದರು.॥17॥

ಮೂಲಮ್ - 18

ತಮಿಚ್ಛನ್ಪ್ರಥಮಂ ಯೋದ್ಧುಂ ಲಕ್ಷ್ಮಣೋ ನಿಶಿತೈಃ ಶರೈಃ ।
ಮುಮೋಚ ಧನುರಾಯಮ್ಯಶರಾನಗ್ನಿಶಿಖೋಪಮಾನ್ ॥

ಅನುವಾದ

ಲಕ್ಷ್ಮಣನು ತನ್ನ ಹರಿತವಾದ ಬಾಣಗಳಿಂದ ರಾವಣ ನೊಂದಿಗೆ ಮೊದಲು ಯುದ್ಧ ಮಾಡಲು ಬಯಸುತ್ತಿದ್ದನು; ಅದಕ್ಕಾಗಿ ಧನುಸ್ಸನ್ನು ಝವಡೆಗೈದು ಅಗ್ನಿಶಿಖೆಯಂತಿರುವ ತೇಜಸ್ವೀ ಬಾಣಗಳನ್ನು ಬಿಡತೊಡಗಿದನು.॥18॥

ಮೂಲಮ್ - 19

ತಾನ್ಮುಕ್ತಮಾತ್ರಾನಾಕಾಶೇ ಲಕ್ಷ್ಮಣೇನ ಧನುಷ್ಮತಾ ।
ಬಾಣಾನ್ಬಾಣೈರ್ಮಹಾತೇಜಾ ರಾವಣಃ ಪ್ರತ್ಯವಾರಯತ್ ॥

ಅನುವಾದ

ಧನುರ್ಧರ ಲಕ್ಷ್ಮಣನ ಬಾಣಗಳನ್ನು ಮಹಾತೇಜಸ್ವೀ ರಾವಣನು ತನ್ನ ಸಾಯಕಗಳಿಂದ ಆಕಾಶದಲ್ಲೇ ಕತ್ತರಿಸಿಬಿಟ್ಟನು.॥19॥

ಮೂಲಮ್ - 20

ಏಕಮೇಕೇನ ಬಾಣೇನ ತ್ರಿಭಿಸ್ತ್ರೀನ್ದಶಭಿರ್ದಶ ।
ಲಕ್ಷ್ಮಣಸ್ಯ ಪ್ರಚಿಚ್ಛೇದ ದರ್ಶಯನ್ಪಾಣಿಲಾಘವಮ್ ॥

ಅನುವಾದ

ರಾವಣನು ತನ್ನ ಕೈಚಳಕದಿಂದ ಲಕ್ಷ್ಮಣನ ಒಂದೊಂದು ಬಾಣಗಳನ್ನು ಒಂದೊಂದು ಬಾಣದಿಂದ ಮೂರು ಬಾಣ ಗಳನ್ನು ಮೂರು ಬಾಣಗಳಿಂದ, ಹತ್ತು ಬಾಣಗಳನ್ನು ಅಷ್ಟೇ ಬಾಣಗಳಿಂದ ತುಂಡರಿಸಿದನು.॥20॥

ಮೂಲಮ್ - 21

ಅಭ್ಯತಿಕ್ರಮ್ಯ ಸೌಮಿತ್ರಿಂ ರಾವಣಃ ಸಮಿತಿಂಜಯಃ ।
ಆಸಸಾದ ತತೋ ರಾಮಂ ಸ್ಥಿತಂ ಶೈಲಮಿವಾಪರಮ್ ॥

ಅನುವಾದ

ಸಮರ ವಿಜಯಿ ರಾವಣನು ಸೌಮಿತ್ರಿಯನ್ನು ದಾಟಿ ರಣಭೂಮಿಯಲ್ಲಿ ಇನ್ನೊಂದು ಪರ್ವತದಂತೆ ಅವಿಚಲನಾಗಿ ನಿಂತಿರುವ ಶ್ರೀರಾಮನ ಬಳಿಗೆ ತಲುಪಿದನು.॥21॥

ಮೂಲಮ್ - 22

ಸ ರಾಘವಂ ಸಮಾಸಾದ್ಯ ಕ್ರೋಧಸಂರಕ್ತಲೋಚನಃ ।
ವ್ಯಸೃಜಚ್ಛರವರ್ಷಾಣಿ ರಾವಣೋ ರಾಕ್ಷಶೇಶ್ವರಃ ॥

ಅನುವಾದ

ಶ್ರೀರಘುನಾಥನ ಹತ್ತಿರ ಹೋಗಿ ಕ್ರೋಧದಿಂದ ಕಣ್ಣು ಕೆಂಪಾದ ರಾಕ್ಷಸರಾಜ ರಾವಣನು ರಾಮನ ಮೇಲೆ ಬಾಣಗಳ ಮಳೆಗರೆಯತೊಡಗಿದನು.॥22॥

ಮೂಲಮ್ - 23

ಶರಧಾರಾಸ್ತತೋ ರಾಮೋ ರಾವಣಸ್ಯ ಧನುಶ್ಚ್ಯುತಾಃ ।
ದೃಷ್ಟ್ವೈವಾಪತಿತಾಃ ಶೀಘ್ರಂ ಭಲ್ಲಾನ್ಜಗ್ರಾಹ ಸತ್ವರಮ್ ॥

ಅನುವಾದ

ರಾವಣನ ಧನುನಿಸ್ಸಿಂದ ಸುರಿದ ಬಾಣವರ್ಷವನ್ನು ನೋಡಿ ಶ್ರೀರಾಮನು ಶೀಘ್ರವಾಗಿ ಕೆಲವು ಭಲ್ಲ ಎಂಬ ಬಾಣಗಳನ್ನೆತ್ತಿಕೊಂಡನು.॥23॥

ಮೂಲಮ್ - 24

ತಾನ್ಶರೌಘಾಂಸ್ತತೋ ಭಲ್ಲೈಸ್ತೀಕ್ಷ್ಣೈಶ್ಚಿಚ್ಛೇದ ರಾಘವಃ ।
ದೀಪ್ಯಮಾನಾನ್ ಮಹಾಘೋರಾನ್ ಛರಾನಾಶೀವಿಷೋಪಮಾನ್ ॥

ಅನುವಾದ

ರಘುಕುಲ ಭೂಷಣ ಶ್ರೀರಾಮನು ರಾವಣನ ವಿಷಧರ ಸರ್ಪದಂತಿರುವ ಮಹಾ ಭಯಂಕರ ಹಾಗೂ ಪ್ರಕಾಶಮಾನ ಬಾಣಗಳನ್ನು ತೀಕ್ಷ್ಣವಾದ ಭಲ್ಲಗಳಿಂದ ಕತ್ತರಿಸಿ ಹಾಕಿದನು.॥24॥

ಮೂಲಮ್ - 25

ರಾಘವೋ ರಾವಣಂ ತೂರ್ಣಂ ರಾವಣೋ ರಾಘವಂ ತದಾ ।
ಅನ್ಯೋನ್ಯಂ ವಿವಿಧೈಸ್ತೀಕ್ಷ್ಣೈಃ ಶರವರ್ಷೈರ್ವವರ್ಷತುಃ ॥

ಅನುವಾದ

ಮತ್ತೆ ಶ್ರೀರಾಮನು ರಾವಣನನ್ನು ಮತ್ತು ರಾವಣನು ರಾಮನನ್ನು ಗುರಿಯಿಟ್ಟು ಇಬ್ಬರೂ ಶೀಘ್ರವಾಗಿ ಒಬ್ಬರು ಮತ್ತೊಬ್ಬರ ಮೇಲೆ ಬಗೆ ಬಗೆಯ ಹರಿತವಾದ ಬಾಣಗಳನ್ನು ಮಳೆಗರೆಯತೊಡಗಿದನು.॥25॥

ಮೂಲಮ್ - 26

ಚೇರತುಶ್ಚ ಚಿರಂ ಚಿತ್ರಂ ಮಂಡಲಂ ಸವ್ಯದಕ್ಷಿಣಮ್ ।
ಬಾಣವೇಗಾತ್ ಸಮುತ್ಕ್ಷಿಪ್ತಾವನ್ಯೋನ್ಯಮಪರಾಜಿತೌ ॥

ಅನುವಾದ

ಅವರಿಬ್ಬರೂ ಬಹಳ ಹೊತ್ತು ಎಡ-ಬಲದ ವಿಚಿತ್ರ ಪಟ್ಟುಗಳನ್ನು ಬದಲಿಸುತ್ತಾ ವಿಚರಿಸುತ್ತಿದ್ದರು. ವೇಗವಾದ ಬಾಣಗಳಿಂದ ಒಬ್ಬರು ಮತ್ತೊಬ್ಬರನ್ನು ಗಾಯಗೊಳಿಸುತ್ತಾ ವೀರರಿಬ್ಬರಲ್ಲಿ ಯಾರೂ ಸೋಲುತ್ತಿರಲಿಲ್ಲ.॥26॥

ಮೂಲಮ್ - 27

ತಯೋರ್ಭೂತಾನಿ ವಿತ್ರೇಸುರ್ಯುಗಪತ್ಸಂ ಪ್ರಯುಧ್ಯತೋಃ ।
ರೌದ್ರಯೋಃ ಸಾಯಕಮುಚೋರ್ಯಮಾಂತಕನಿಕಾಶಯೋಃ ॥

ಅನುವಾದ

ಒಟ್ಟಿಗೆ ಕಾದಾಡುತ್ತಾ, ಸಾಯಕಗಳನ್ನು ಮಳೆಗರೆಯುತ್ತಾ ಶ್ರೀರಾಮ ಮತ್ತು ರಾವಣರು ಯಮರಾಜ ಮತ್ತು ಅಂತಕರಂತೆ ಭಯಂಕರವಾಗಿ ಅನಿಸುತ್ತಿದ್ದರು. ಅವರ ಯುದ್ಧದಿಂದ ಸಮಸ್ತ ಪ್ರಾಣಿಗಳು ನಡುಗಿಹೋದವು.॥27॥

ಮೂಲಮ್ - 28

ಸತತಂ ವಿವಿಧೈರ್ಬಾಣೈರ್ಬಭೂವ ಗಗನಂ ತದಾ ।
ಘನೈರಿವಾತಪಾಪಾಯೇ ವಿದ್ಯುನ್ಮಾಲಾಸಮಾಕುಲೈಃ ॥

ಅನುವಾದ

ವರ್ಷಾ ಋತುವಿನಲ್ಲಿ ಮಿಂಚಿನಿಂದ ಕೂಡಿದ ಮೋಡಗಳಿಂದ ಆಕಾಶವು ಆಚ್ಛಾದಿತವಾದಂತೆ ಆಗ ನಾನಾ ವಿಧವಾದ ಬಾಣಗಳಿಂದ ನಭ ಮುಚ್ಚಿಹೋಗಿತ್ತು.॥28॥

ಮೂಲಮ್ - 29

ಗವಾಕ್ಷಿತಮಿವಾಕಾಶಂ ಬಭೂವ ಶರವೃಷ್ಟಿಭಿಃ ।
ಮಹಾವೇಗೈಃ ಸುತೀಕ್ಷ್ಣಾಗ್ರೈರ್ಗೃಧ್ರ ಪತ್ರೈಃಸುವಾಜಿತೈಃ ॥

ಅನುವಾದ

ಹದ್ದಿನ ರೆಕ್ಕೆಗಳಿಂದ ಸುಂದರ ಸುಶೋಭಿತ ಹಾಗೂ ಹರಿತವಾದ ಮಹಾವೇಗಶಾಲೀ ಬಾಣಗಳ ಸತತ ವರ್ಷದಿಂದ ಆಕಾಶದಲ್ಲಿ ಅನೇಕ ಗಾಳಿಕಿಂಡಿಗಳು ನಿರ್ಮಿಸಿದೆಯೇ ಎಂಬಂತೆ ಅನಿಸುತ್ತಿತ್ತು.॥29॥

ಮೂಲಮ್ - 30

ಶರಾಂಧಕಾರಮಾಕಾಶಂ ಚಕ್ರತುಃ ಪರಮಂ ತದಾ।
ಗತೇಽಸ್ತಂ ತಪನೇ ಚಾಪಿ ಮಹಾಮೇಘಾವಿವೋತ್ಥಿತೌ ॥

ಅನುವಾದ

ಮಹಾಮೇಘಗಳಂತೆಯೇ ನಿಂತಿದ್ದ ರಾಮ-ರಾವಣರು ಆಕಾಶವನ್ನು ಬಾಣಗಳಿಂದ ಅಂಧಕಾರ ಮಯವನ್ನಾಗಿ ಮಾಡಿದರು. ಸೂರ್ಯನು ಅಸ್ತಂಗತ ನಾದನೂ ಅವರು ಯುದ್ಧ ಮಾಡುತ್ತಲೇ ಇದ್ದರು.॥30॥

ಮೂಲಮ್ - 31

ತಯೋರಭೂನ್ಮಹಾಯುದ್ಧಮನ್ಯೋನ್ಯ ವಧಕಾಂಕ್ಷಿಣೋಃ ।
ಅನಾಸಾದ್ಯಮಚಿನ್ತ್ಯಂ ಚ ವೃತ್ರವಾಸವಯೋರಿವ ॥

ಅನುವಾದ

ಇಬ್ಬರೂ ಒಬ್ಬರು ಮತ್ತೊಬ್ಬರನ್ನು ವಧಿಸಲು ಬಯಸುತ್ತಿದ್ದರು. ಆದ್ದರಿಂದ ವೃತ್ರಾಸುರ ಮತ್ತು ಇಂದ್ರರಂತೆ ಅವರಿಬ್ಬರಲ್ಲಿ ದುರ್ಲಭ ಹಾಗೂ ಅಚಿಂತ್ಯವಾದ ಮಹಾಯುದ್ಧ ಮಾಡತೊಡಗಿದರು.॥31॥

ಮೂಲಮ್ - 32

ಉಭೌ ಹಿ ಪರಮೇಷ್ವಾಸಾವುಭೌ ಯುದ್ಧವಿಶಾರದೌ ।
ಉಭಾವಸ್ತ್ರವಿದಾಂ ಮುಖ್ಯಾವುಭೌ ಯುದ್ಧೇ ವಿಚೇರತುಃ ॥

ಅನುವಾದ

ಇಬ್ಬರೂ ಮಹಾಧನುರ್ಧರರೂ, ಯುದ್ಧ ಕಲೆಯಲ್ಲಿ ನಿಪುಣರೂ ಆಗಿದ್ದರು. ಇಬ್ಬರೂ ಅಸ್ತ್ರವೇತ್ತರಲ್ಲಿ ಶ್ರೇಷ್ಠರಾಗಿದ್ದರು; ಆದ್ದರಿಂದ ಇಬ್ಬರೂ ಉತ್ಸಾಹದಿಂದ ರಣಭೂಮಿಯಲ್ಲಿ ಸಂಚರಿಸುತ್ತಿದ್ದರು.॥32॥

ಮೂಲಮ್ - 33

ಉಭೌ ಹಿ ಯೇನ ವ್ರಜತಸ್ತೇನ ತೇನ ಶರೋರ್ಮಯಃ ।
ಊರ್ಮಯೋ ವಾಯುನಾ ವಿದ್ಧಾ ಜಗ್ಮುಃ ಸಾಗರಯೋರಿವ ॥

ಅನುವಾದ

ವಾಯುವಿನ ಹೊಡೆತದಿಂದ ಸಮುದ್ರದಲ್ಲಿ ಉತ್ತಾಲ ತಂಗಳು ಏಳುವಂತೆಯೇ ಅವರು ಸಂಚರಿಸುವಲೆಲ್ಲ ಬಾಣಗಳ ಅಲೆಗಳೇ ಏಳುತ್ತಿದ್ದವು.॥33॥

ಮೂಲಮ್ - 34

ತತಃ ಸಂಸಕ್ತಹಸ್ತಸ್ತು ರಾವಣೋ ಲೋಕರಾವಣಃ ।
ನಾರಾಚಮಾಲಾಂ ರಾಮಸ್ಯ ಲಲಾಟೇ ಪ್ರತ್ಯಮುಂಚತ ॥

ಅನುವಾದ

ಬಾಣಗಳನ್ನೇ ಬಿಡಲು ತೊಡಗಿರುವ, ಸಮಸ್ತ ಲೋಕಗಳನ್ನು ಅಳುವಂತೆ ಮಾಡುವ ರಾವಣನು ಶ್ರೀರಾಮಚಂದ್ರನ ಹಣೆಯಲ್ಲಿ ಬಾಣಗಳ ಮಾಲೆಯಿಂದ ಅಲಂಕರಿಸಿದನು.॥34॥

ಮೂಲಮ್ - 35

ರೌದ್ರಚಾಪ ಪ್ರಯುಕ್ತಾಂ ತಾಂ ನೀಲೋತ್ಪಲದಲಪ್ರಭಾಮ್ ।
ಶಿರಸಾಧಾರಯದ್ ರಾಮೋ ನ ವ್ಯಥಾಮಭ್ಯಪದ್ಯತ ॥

ಅನುವಾದ

ಭಯಂಕರ ಧನುಸ್ಸಿನಿಂದ ಬಿಟ್ಟಿರುವ ನೀಲ ಕಮಲ ದಲದಂತೆ ಶ್ಯಾಮಲ ಕಾಂತಿಯಿಂದ ಪ್ರಕಾಶಿತವಾದ ಆ ನಾರಾಚ ಮಾಲೆಯನ್ನು ಶ್ರೀರಾಮಚಂದ್ರನು ತನ್ನ ಶಿರದಲ್ಲಿ ಧರಿಸಿದನು, ಆದರೆ ಕೊಂಚವೂ ವ್ಯಥಿತವಾಗಲಿಲ್ಲ.॥35॥

ಮೂಲಮ್ - 36

ಅಥ ಮಂತ್ರಾನಪಿ ಜಪನ್ ರೌದ್ರಮಸ್ತ್ರಮುದೀರಯನ್ ।
ಶರಾನ್ಭೂಯಃ ಸಮಾದಾಯ ರಾಮಃ ಕ್ರೋಧಸಮನ್ವಿತಃ ॥

ಅನುವಾದ

ಅನಂತರ ಕ್ರೋಧಗೊಂಡ ಶ್ರೀರಾಮನು ಪುನಃ ಅನೇಕ ಬಾಣಗಳನ್ನೆತ್ತಿಕೊಂಡು ಮಂತ್ರಜಪಪೂರ್ವಕ ರೌದ್ರಾಸವನ್ನು ಪ್ರಯೋಗಿಸಿದನು.॥36॥

ಮೂಲಮ್ - 37

ಮುಮೋಚ ಚ ಮಹಾತೇಜಾಶ್ಚಾಪಮಾಯಮ್ಯ ವೀರ್ಯವಾನ್ ।
ತಾನ್ಶರಾನ್ ರಾಕ್ಷಸೇಂದ್ರ್ರಾಯ ಚಿಕ್ಷೇಪಾಚ್ಛಿನ್ನಸಾಯಕಃ ॥

ಅನುವಾದ

ಮತ್ತೆ ಮಹಾತೇಜಸ್ವೀಯೂ ಮಹಾ ಪರಾಕ್ರಮಿಯೂ, ಅವಿಚ್ಛಿನ್ನರೂಪದಿಂದ ಬಾಣ ವರ್ಷಾ ಮಾಡುವವನೂ ಆದ ಶ್ರೀರಾಮನ ಧನುಸ್ಸನ್ನು ಆ ಕರ್ಣಾಂತ ಸೆಳೆದು ಎಲ್ಲ ಬಾಣಗಳನ್ನು ರಾವಣನ ಮೇಲೆ ಎಸೆದನು.॥37॥

ಮೂಲಮ್ - 38

ತೇ ಮಹಾಮೇಘಸಂಕಾಶೇ ಕವಚೇ ಪತಿತಾಃ ಶರಾಃ ।
ಅವಧ್ಯೇ ರಾಕ್ಷಸೇಂದ್ರಸ್ಯ ನ ವ್ಯಥಾಂ ಜನಯಂಸ್ತದಾ ॥

ಅನುವಾದ

ಆ ಬಾಣಗಳು ರಾಕ್ಷಸರಾಜ ರಾವಣನ ಮಹಾಮೇಘದಂತೆ ಕಪ್ಪಾದ ಅಭೇದ್ಯ ಕವಚಕ್ಕೆ ತಾಗಿದ್ದವು; ಆದ್ದರಿಂದ ಅವನನ್ನು ವ್ಯಥಿತಗೊಳಿಸಲಾಗಲಿಲ್ಲ.॥38॥

ಮೂಲಮ್ - 39

ಪುನರೇವಾಥ ತಂ ರಾಮೋ ರಥಸ್ಥಂ ರಾಕ್ಷಸಾಧಿಪಮ್ ।
ಲಲಾಟೇ ಪರಮಾಸ್ತ್ರೇಣ ಸರ್ವಾಸ್ತ್ರ ಕುಶಲೋಽಭಿನತ್ ॥

ಅನುವಾದ

ಸಮಸ್ತ ಅಸ್ತ್ರಸಂಚಲನದಲ್ಲಿ ಕುಶಲನಾದ ಶ್ರೀರಾಮನು ಪುನಃ ರಥದಲ್ಲಿ ಕುಳಿತಿರುವ ರಾವಣನ ಹಣೆಗೆ ಉತ್ತಮ ಅಸ್ತ್ರಗಳಿಂದ ಪ್ರಹರಿಸಿ ಅವನನ್ನು ಗಾಯಗೊಳಿಸದನು.॥39॥

ಮೂಲಮ್ - 40

ತೇ ಭಿತ್ತ್ವಾ ಬಾಣರೂಪಾಣಿ ಪಂಚಶೀರ್ಷಾ ಇವೋರಗಾಃ ।
ಶ್ವಸಂತೋ ವಿವಿಶುರ್ಭೂಮಿಂ ರಾವಣ ಪ್ರತಿಕೂಲಿತಾಃ ॥

ಅನುವಾದ

ಶ್ರೀರಾಮನ ಆ ಉತ್ತಮ ಬಾಣಗಳು ಗಾಯಗೊಳಿಸಿ, ಅವನು ನಿವಾರಿಸಿದಾಗ ಫೂತ್ಕರಿಸುತ್ತಾ ಐದು ಹೆಡೆಗಳುಳ್ಳ ಸರ್ಪಗಳಂತೆ ಧರಣಿಯಲ್ಲಿ ಸೇರಿಹೋಗುತ್ತಿದ್ದವು.॥40॥

ಮೂಲಮ್ - 41

ನಿಹತ್ಯ ರಾಘವಸ್ಯಾಸ್ತ್ರಂ ರಾವಣಃ ಕ್ರೋಧಮೂರ್ಛಿತಃ ।
ಅಸುರಂ ಸುಮಹಾಘೋರಮಸ್ತ್ರಂ ಪ್ರಾದುಶ್ಚಕಾರ ಸಃ ॥

ಅನುವಾದ

ಶ್ರೀರಘುನಾಥನ ಅಸ್ತ್ರವನ್ನು ನಿವಾರಿಸಿ ಕ್ರೋಧ ಮೂರ್ಛಿತನಾದ ರಾವಣನು ಆಸುರ ಎಂಬ ಇನ್ನೊಂದು ಭಯಂಕರವಾದ ಅಸ್ತ್ರ ಪ್ರಕಟಿಸಿದನು.॥41॥

ಮೂಲಮ್ - 42

ಸಿಂಹವ್ಯಾಘ್ರಮುಖಾಂಶ್ಚಾಪಿ ಕಂಕಕೋಕಮುಖಾನಪಿ ।
ಗೃಧ್ರಶ್ಯೇನಮುಖಾಂಶ್ಚಾಪಿ ಶೃಗಾಲವದನಾಂಸ್ತಥಾ ॥

ಮೂಲಮ್ - 43

ಈಹಾಮೃಗಮುಖಾಂಶ್ಚಾಪಿವ್ಯಾದಿತಾಸ್ಯಾನ್ ಭಯಾವಹಾನ್ ।
ಪಂಚಾಸ್ಯಾಂಲ್ಲೇಲಿಹಾನಾಂಶ್ಚ ಸಸರ್ಜ ನಿಶಿತಾನ್ಶರಾನ್ ॥

ಮೂಲಮ್ - 44

ಶರಾನ್ ಖರಮುಖಾಂಶ್ಚಾನ್ಯಾನ್ ವರಾಹಮುಖ ಸಂಶ್ರಿತಾನ್
ಶ್ವಾನ ಕುಕ್ಕುಟವಕ್ತ್ರಾಂಶ್ಚ ಮಕರಾಶೀವಿಷಾನನಾನ್ ॥

ಮೂಲಮ್ - 45

ಏತಾಶ್ಚಾನ್ಯಾಂಶ್ಚ ಮಾಯಾಭಿಃ ಸಸರ್ಜ ನಿಶಿತಾನ್ ಶರಾನ್ ।
ರಾಮಂ ಪ್ರತಿ ಮಹಾತೇಜಾಃ ಕ್ರುದ್ಧಃ ಸರ್ಪ ಇವ ಶ್ವಸನ್ ॥

ಅನುವಾದ

ಅದರಿಂದ ಸಿಂಹ, ಹುಲಿ, ಕಂಕ, ಚಕ್ರವಾಕ, ಹದ್ದು, ಗಿಡುಗ, ಗುಳ್ಳೆನರಿ, ಕುರಿಗಳು, ಕತ್ತೆ, ಹಂದಿ, ನಾಯಿ, ಕೋಳಿ, ಮೊಸಳೆ ಮತ್ತು ವಿಷಭರಿತ ಸರ್ಪಗಳಂತೆ ಮುಖವುಳ್ಳ ಬಾಣಗಳ ವೃಷ್ಟಿ ಬೀಳ ತೊಡಗಿದವು. ಆ ಬಾಣಗಳು ಬಾಯಿತೆರೆದು, ತುಟಿಗಳನ್ನು ಸವರುತ್ತಾ ಐದು ಹೆಡೆಗಳುಳ್ಳ ಭಯಂಕರ ಸರ್ಪಗಳಂತೆ ಕಂಡುಬರುತ್ತಿದ್ದವು. ಸರ್ಪದಂತೆ ಬುಸುಗುಟ್ಟುತ್ತಾ ಕುಪಿತನಾದ ಮಹಾತೇಜಸ್ವೀ ರಾವಣನು ಇದನ್ನು ಹಾಗೂ ಇತರ ತೀಕ್ಷ್ಣಬಾಣಗಳನ್ನು ಶ್ರೀರಾಮನ ಮೇಲೆ ಪ್ರಯೋಗಿಸಿದನು.॥42-45॥

ಮೂಲಮ್ - 46

ಆಸುರೇಣ ಸಮಾವಿಷ್ಟಃ ಸೋಽಸ್ತ್ರೇಣ ರಘುಪುಂಗವಃ ।
ಸಸರ್ಜಾಸ್ತ್ರಂ ಮಹೋತ್ಸಾಹಂ ಪಾವಕಂ ಪಾವಕೋಪಮಃ ॥

ಅನುವಾದ

ಆ ಅಸುರಾಸ್ತ್ರದಿಂದ ಆವೃತನಾದ ಅಗ್ನಿತುಲ್ಯ ತೇಜಸ್ವೀ, ಮಹಾಉತ್ಸಾಹೀ ರಘುಕುಲತಿಲಕ ಶ್ರೀರಾಮನು ಆಗ್ನೇಯಾಸ್ತ್ರವನ್ನು ಪ್ರಯೋಗಿಸಿದನು.॥46॥

ಮೂಲಮ್ - 47½

ಅಗ್ನಿದೀಪ್ತಮುಖಾನ್ ಬಾಣಾಂಸ್ತತ್ರ ಸೂರ್ಯಮುಖಾನಪಿ ।
ಚಂದ್ರಾರ್ಧ ಚಂದ್ರ್ರವಕಾಂಶ್ಚ ಧೂಮಕೇತು ಮುಖಾನಪಿ ।
ಗ್ರಹ ನಕ್ಷತ್ರವರ್ಣಾಂಶ್ಚ ಮಹೋಲ್ಕಾಮುಖ ಸಂಸ್ಥಿತಾನ್ ॥
ವಿದ್ಯುಜ್ಜಿಹ್ವೋಪಮಾಂಶ್ಚಾಪಿ ಸಸರ್ಜವಿ ವಿಧಾನ್ ಶರಾನ್ ।

ಅನುವಾದ

ಅದರಿಂದ ಅವನು ಅಗ್ನಿ, ಸೂರ್ಯ, ಚಂದ್ರ, ಅರ್ಧಚಂದ್ರ, ಧೂಮಕೇತು, ಗ್ರಹ, ನಕ್ಷತ್ರ, ಉಲ್ಕೆ, ಸಿಡಿಲು ಇವುಗಳ ಪ್ರಭೆಯಂತೆ ಪ್ರಜ್ವಲಿತ ತುದಿಗಳುಳ್ಳ ನಾನಾ ವಿಧದ ಬಾಣಗಳನ್ನು ಪ್ರಕಟಿಸಿದನು.॥47½॥

ಮೂಲಮ್ - 48½

ತೇ ರಾವಣಶರಾ ಘೋರಾ ರಾಘವಾಸ್ತ್ರ ಸಮಾಹತಾಃ ॥
ವಿಲಯಂ ಜಗ್ಮುರಾಕಾಶೇ ಜಘ್ನುಶ್ಚೈವ ಸಹಸ್ರಶಃ ।

ಅನುವಾದ

ಶ್ರೀರಘುನಾಥನ ಆಗ್ನೇಯಾಸ್ತ್ರದಿಂದ ಆಹತವಾಗಿ ರಾವಣನ ಆ ಭಯಂಕರ ಬಾಣವು ಆಕಾಶದಲ್ಲೇ ವಿಲೀನವಾಯಿತು, ಆದರೂ ಅದರಿಂದ ಸಾವಿರಾರು ವಾನರರು ಹತರಾದರು.॥48½॥

ಮೂಲಮ್ - 49

ತದಸ್ತ್ರಂ ನಿಹತಂ ದೃಷ್ಟ್ವಾ ರಾಮೇಣಾಕ್ಲಿಷ್ಟಕರ್ಮಣಾ ॥

ಮೂಲಮ್ - 50

ಹೃಷ್ಟಾ ನೇದುಸ್ತತಃ ಸರ್ವೇ ಕಪಯಃ ಕಾಮರೂಪಿಣಃ ।
ಸುಗ್ರೀವಾಭಿಮುಖಾ ವೀರಾಃ ಸಂಪರಿಕ್ಷಿಪ್ಯ ರಾಘವಮ್ ॥

ಅನುವಾದ

ಅನಾಯಾಸವಾಗಿ ಕ್ಲಿಷ್ಟಕರ್ಮವನ್ನು ಮಾಡುವ ಶ್ರೀರಾಮನು ಆ ಅಸುರಾಸ್ತ್ರವನ್ನು ನಾಶಮಾಡಿದನು. ಇದನ್ನು ನೋಡಿದ ಕಾಮರೂಪೀ ಸುಗ್ರೀವಾದಿ ಎಲ್ಲ ವೀರವಾನರರು ಶ್ರೀರಾಮನ ಸುತ್ತಲೂ ನೆರೆದು ಹರ್ಷನಾದ ಮಾಡತೊಡಗಿದರು.॥49-50॥

ಮೂಲಮ್ - 51

ತತಸ್ತದಸಂ ವಿನಿಹತ್ಯ ರಾಘವಃ
ಪ್ರಸಹ್ಯ ತದ್ರಾವಣಬಾಹು ನಿಃಸೃತಮ್ ।
ಮುದಾನ್ವಿತೋ ದಾಶರಥಿರ್ಮಹಾತ್ಮಾ
ವಿನೇದುರುಚ್ಚೈರ್ಮುದಿತಾಃ ಕಪೀಶ್ವರಾಃ ॥

ಅನುವಾದ

ದಶರಥನಂದನ ಮಹಾತ್ಮಾ ಶ್ರೀರಾಮನು ರಾವಣನು ಪ್ರಯೋಗಿಸಿದ ಆ ಅಸುರಾಸ್ತ್ರವನ್ನು ಬಲಪೂರ್ವಕ ವಿನಾಶ ಮಾಡಿ ಬಹಳ ಪ್ರಸನ್ನನಾದನು ಹಾಗೂ ವಾನರ ದಳಪತಿಗಳು ಆನಂದ ಮಗ್ನರಾಗಿ ಗಟ್ಟಿಯಾಗಿ ಸಿಂಹನಾದ ಮಾಡತೊಡಗಿದನು.॥51॥

ಮೂಲಮ್ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥99॥

ಅನುವಾದ (ಸಮಾಪ್ತಿಃ)