०९८ अङ्गदेन महापार्श्ववधः

वाचनम्
ಭಾಗಸೂಚನಾ

ಅಂಗದನಿಂದ ಮಹಾಪಾರ್ಶ್ವನ ವಧೆ

ಮೂಲಮ್ - 1

ಮಹೋದರೇ ತು ನಿಹತೇ ಮಹಾಪಾರ್ಶ್ವೋ ಮಹಾಬಲಃ ।
ಸುಗ್ರೀವೇಣ ಸಮೀಕ್ಷ್ಯಾಥ ಕ್ರೋಧಾತ್ಸಂರಕ್ತಲೋಚನಃ ॥

ಅನುವಾದ

ಸುಗ್ರೀವನು ಮಹೋದರನನ್ನು ಕೊಂದಿರುವುದನ್ನು ನೋಡಿ ಮಹಾಬಲಿ ಮಹಾಪಾರ್ಶ್ವನ ಕಣ್ಣುಗಳು ಕ್ರೋಧದಿಂದ ಕೆಂಪಾದವು.॥1॥

ಮೂಲಮ್ - 2½

ಅಂಗದಸ್ಯ ಚಮೂಂ ಭೀಮಾಂ ಕ್ಷೋಭಯಾಮಾಸ ಮಾರ್ಗಣೈಃ ।
ಸ ವಾನರಾಣಾಂ ಮುಖ್ಯಾನಾಮುತ್ತಮಾಂಗಾನಿ ರಾಕ್ಷಸಃ ॥
ಪಾತಯಾಮಾಸ ಕಾಯೇಭ್ಯಃ ಫಲಂ ವೃಂತಾದಿವಾನಿಲಃ ।

ಅನುವಾದ

ಅವನು ಬಾಣಗಳಿಂದ ಅಂಗದನ ಭಯಂಕರ ಸೈನ್ಯದಲ್ಲಿ ಕೋಲಾಹಲವೆಬ್ಬಿಸಿದ. ಆ ರಾಕ್ಷಸನು ಮುಖ್ಯ ಮುಖ್ಯ ವಾನರರ ತಲೆಗಳನ್ನು ಗಾಳಿಯು ಹಣ್ಣುಗಳನ್ನು ತೊಟ್ಟಿನಿಂದ ಬೀಳಿಸುವಂತೆ ಕಡಿದುರುಳಿಸಿದನು.॥2॥

ಮೂಲಮ್ - 3½

ಕೇಷಾಂಚಿದಿಷುಭಿರ್ಬಾಹೂಂಶ್ಚಿಚ್ಛೇದಾಥ ಸ ರಾಕ್ಷಸಃ ॥
ವಾನರಾಣಾಂ ಸುಸಂರದ್ಧಃ ಪಾರ್ಶ್ವಂ ಕೇಷಾಂಚಿದಾಕ್ಷಿಪತ್ ।

ಅನುವಾದ

ಕ್ರೋಧಗೊಂಡ ಮಹಾಪಾರ್ಶ್ವನು ತನ್ನ ಬಾಣಗಳಿಂದ ಎಷ್ಟೋ ವಾನರಬಾಹುಗಳನ್ನು ಕತ್ತರಿಸಿರಿ. ಪಕ್ಕೆಗಳನ್ನು ಸೀಳಿ ಹಾಕಿದನು.॥3॥

ಮೂಲಮ್ - 4½

ತೇಽರ್ದಿತಾ ಬಾಣವರ್ಷೇಣ ಮಹಾಪಾರ್ಶ್ವೇನ ವಾನರಾಃ ॥
ವಿಷಾದವಿಮುಖಾಃ ಸರ್ವೇ ಬಭೂವುರ್ಗತಚೇತಸಃ ।

ಅನುವಾದ

ಮಹಾಪಾರ್ಶ್ವನ ಬಾಣಗಳಿಂದ ಪೀಡಿತರಾದ ಅನೇಕ ವಾನರರು ಯುದ್ಧದಿಂದ ವಿಮುಖರಾದರು. ಎಲ್ಲರ ಚೈತನ್ಯ ಉಡುಗಿದಂತಾಯಿತು.॥4॥

ಮೂಲಮ್ - 5½

ನಿಶಮ್ಯ ಬಲಮುದ್ವಿಗ್ನಮಂಗದೋ ರಾಕ್ಷಸಾರ್ದಿತಮ್ ॥
ವೇಗಂ ಚಕ್ರೇ ಮಹಾವೇಗಃ ಸಮುದ್ರ ಇವ ಪರ್ವಣಿ ।

ಅನುವಾದ

ಆ ರಾಕ್ಷಸನಿಂದ ಪೀಡಿತವಾದ ವಾನರ ಸೈನ್ಯವು ಉದ್ವಿಗ್ನರಾದುದನ್ನು ನೋಡಿ, ಮಹಾವೇಗಶಾಲೀ ಅಂಗದನು ಪೂರ್ಣಿಮೆಯ ದಿನ ಸಮುದ್ರಕ್ಕೆ ಭರತ ಬರುವಂತೆ ಭಾರೀ ವೇಗವನ್ನು ಪ್ರಕಟಿಸಿದನು.॥5॥

ಮೂಲಮ್ - 6½

ಆಯಸಂ ಪರಿಘಂ ಗೃಹ್ಯ ಸೂರ್ಯರಶ್ಮಿಸಮಪ್ರಭಮ್ ॥
ಸಮರೇ ವಾನರಶ್ರೇಷ್ಠೋ ಮಹಾಪಾರ್ಶ್ವೇ ನ್ಯಪಾತಯತ್ ।

ಅನುವಾದ

ವಾನರಶ್ರೇಷ್ಠ ಅಂಗದನು ಸೂರ್ಯಕಿರಣದಂತಿರುವ ಹೊಳೆಯುವ ಉಕ್ಕಿನ ಪರಿಘವನ್ನು ಎತ್ತಿ ಮಹಾಪಾರ್ಶ್ವನ ಮೇಲೆ ಪ್ರಹರಿಸಿದನು.॥6॥

ಮೂಲಮ್ - 7½

ಸ ತು ತೇನ ಪ್ರಹಾರೇಣ ಮಹಾಪಾರ್ಶ್ವೋ ವಿಚೇತನಃ ॥
ಸಸೂತಃ ಸ್ಯನ್ದನಾತ್ತಸ್ಮಾದ್ ವಿಸಂಜ್ಞಶ್ಚಾಪತದ್ ಭುವಿ ।

ಅನುವಾದ

ಆ ಪ್ರಹಾರದಿಂದ ಮಹಾಪಾರ್ಶ್ವನು ಮೂರ್ಛಿತನಾಗಿ ಸಾರಥಿ ಸಹಿತ ರಥದಿಂದ ಕೆಳಗೆ ಬಿದ್ದು ಬಿಟ್ಟನು.॥7॥

ಮೂಲಮ್ - 8

ತಸ್ಯರ್ಕ್ಷರಾಜಸ್ತೇಜಸ್ವೀ ನೀಲಾಂಜನಚಯೋಪಮಃ ॥
ನಿಷ್ಪತ್ಯ ಸುಮಹಾವೀರ್ಯಃ ಸ್ವಯೂಥಾನ್ಮೇಘಸಂನಿಭಾತ್ ।

ಮೂಲಮ್ - 9

ಪ್ರಗೃಹ್ಯ ಗಿರಿಶೃಂಗಾಭಾಂ ಕ್ರುದ್ಧಃ ಸುವಿಪುಲಾಂ ಶಿಲಾಮ್ ॥
ಅಶ್ವಾನ್ಜಘಾನ ತರಸಾ ಬಭಂಜ ಸ್ಯದನಂ ಚ ತಮ್ ।

ಅನುವಾದ

ಆಗಲೇ ಕಪ್ಪಾದ ಇದ್ದಲಿನ ರಾಶಿಯಂತೆ ಕಪ್ಪಾದ ಮಹಾಪರಾಕ್ರಮಿ ಹಾಗೂ ತೇಜಸ್ವೀ ಋಕ್ಷರಾಜ ಜಾಂಬವಂತನು ಕೃಷ್ಣಮೇಘಗಳಂತಿರುವ ತನ್ನ ಸೈನ್ಯದಿಂದ ಹೊರಬಂದು ಪರ್ವತ ಶಿಖರದಂತಹ ದೊಡ್ಡದೊಂದು ಬಂಡೆಯನ್ನಿತ್ತಿಕೊಂಡು ಆ ರಾಕ್ಷಸನ ಕುದುರೆಗಳನ್ನು ಕೊಂದು, ರಥವನ್ನು ಪುಡಿಯಾಗಿಸಿದನು.॥8-9॥

ಮೂಲಮ್ - 10

ಮುಹೂರ್ತಾಲ್ಲಬ್ಧ ಸಂಜ್ಞಸ್ತು ಮಹಾಪಾರ್ಶ್ವೋ ಮಹಾಬಲಃ ॥

ಮೂಲಮ್ - 11

ಅಂಗದಂ ಬಹುಭಿರ್ಬಾಣೈರ್ಭೂಯಸ್ತಂ ಪ್ರತ್ಯವಿಧ್ಯತ ।
ಜಾಂಬವಂತಂ ತ್ರಿಭಿರ್ಬಾಣೈರಾಜಘಾನ ಸ್ತನಾಂತರೇ ॥

ಅನುವಾದ

ಎರಡು ಘಳಿಗೆ ಬಳಿಕ ಎಚ್ಚರಗೊಂಡ ಮಹಾಪಾಶ್ವನು ಅನೇಕ ಬಾಣಗಳಿಂದ ಅಂಗದನನ್ನು ಗಾಯಗೊಳಿಸಿ, ಜಾಂಬವಂತನ ಎದೆಗೂ ಮೂರು ಬಾಣಗಳನ್ನು ಹೊಡೆದನು.॥10-11॥

ಮೂಲಮ್ - 12½

ಋಕ್ಷರಾಜಂ ಗವಾಕ್ಷಂ ಚ ಜಘಾನ ಬಹುಭಿಃ ಶರೈಃ ।
ಗವಾಕ್ಷಂ ಜಾಂಬವಂತಂ ಚ ಸ ದೃಷ್ಟ್ವಾ ಶರಪೀಡಿತೌ ॥
ಜಗ್ರಾಹ ಪರಿಘಂ ಘೋರಮಂಗದಃ ಕ್ರೋಧಮೂರ್ಛಿತಃ ।

ಅನುವಾದ

ಇಷ್ಟೇ ಅಲ್ಲದೆ ಕರಡಿಗಳ ರಾಜ ಗವಾಕ್ಷನನ್ನು ಅವನು ಅನೇಕ ಬಾಣಗಳಿಂದ ಕ್ಷತ-ವಿಕ್ಷತ ಗೊಳಿಸಿದನು. ಗವಾಕ್ಷ ಮತ್ತು ಜಾಂಬವಂತರು ಬಾಣಗಳಿಂದ ಪೀಡಿತರಾದುದನ್ನು ನೋಡಿ ಅಂಗದನಿಗೆ ಅಸೀಮ ಕ್ರೋಧ ವುಂಟಾಗಿ ಭಯಂಕರ ಪರಿಘವನ್ನು ಎತ್ತಿಕೊಂಡನು.॥12॥

ಮೂಲಮ್ - 13

ತಸ್ಯಾಂಗದಃ ಸರೋಷಾಕ್ಷೋ ರಾಕ್ಷಸಸ್ಯ ತಮಾಯಸಮ್ ॥

ಮೂಲಮ್ - 14½

ದೂರಸ್ಥಿತಸ್ಯ ಪರಿಘಂ ರವಿರಶ್ಮಿಸಮಪ್ರಭಮ್ ।
ದ್ವಾಭ್ಯಾಂ ಭುಜಾಭ್ಯಾಂ ಸಂಗೃಹ್ಯ ಭ್ರಾಮಯಿತ್ವಾ ಚ ವೇಗವತ್ ॥
ಮಹಾಪಾಶ್ವಸ್ಯ ಚಿಕ್ಷೇಪವಧಾರ್ಥಂ ವಾಲಿನಃ ಸುತಃ ।

ಅನುವಾದ

ಅವನ ಆ ಪರಿಘವು ಸೂರ್ಯನ ಕಿರಣಗಳಂತೆ ತನ್ನ ಪ್ರತಿಭೆ ಬೀರುತ್ತಿತ್ತು. ವಾಲಿಪುತ್ರ ಅಂಗದನು ಉರಿಗಣ್ಣಿನಿಂದ ನೋಡುತ್ತಾ, ಕ್ರೋಧದಿಂದ ಪರಿಘವನ್ನು ತಿರುಗಿಸಿ ಮಹಾ ಪಾರ್ಶ್ವನನ್ನು ಕೊಲ್ಲಲು ವೇಗವಾಗಿ ಪ್ರಯೋಗಿಸಿದನು.॥13-14॥

ಮೂಲಮ್ - 15½

ಸ ತು ಕ್ಷಿಪ್ತೋ ಬಲವತಾ ಪರಿಘಸ್ತಸ್ಯ ರಕ್ಷಸಃ ॥
ಧನುಶ್ಚ ಸಶರಂ ಹಸ್ತಾಚ್ಛಿರಸ್ತ್ರಾಣಂ ಚ ಪಾತಯತ್ ।

ಅನುವಾದ

ಬಲವಂತ ಅಂಗದನು ಪ್ರಯೋಗಿಸಿದ ಪರಿಘವು ಮಹಾಪಾರ್ಶ್ವನ ಕೈಯಿಂದ ಧನುಸ್ಸು ಮತ್ತು ಕಿರೀಟ ಕೆಡಹಿಬಿಟ್ಟಿತು.॥15॥

ಮೂಲಮ್ - 16½

ತಂ ಸಮಾಸಾದ್ಯ ವೇಗೇನ ವಾಲಿಪುತ್ರಃ ಪ್ರತಾಪವಾನ್ ॥
ತಲೇನಾಭ್ಯಹನತ್ ಕ್ರುದ್ಧಃ ಕರ್ಣಮೂಲೇ ಸಕುಂಡಲೇ ।

ಅನುವಾದ

ಮತ್ತೆ ಪ್ರತಾಪಿ ಅಂಗದನು ವೇಗವಾಗಿ ಅವನ ಬಳಿ ಸಾರಿ, ಕುಪಿತನಾಗಿ ಕುಂಡಲಯುಕ್ತ ಕೆನ್ನೆಗೆ ಅಂಗೈಯಿಂದ ಒಂದು ಏಟು ಕೊಟ್ಟನು.॥16॥

ಮೂಲಮ್ - 17½

ಸ ತು ಕ್ರುದ್ಧೋ ಮಹಾವೇಗೋ ಮಹಾಪಾರ್ಶ್ವೋ ಮಹಾದ್ಯುತಿಃ ॥
ಕರೇಣೈಕೇನ ಜಗ್ರಾಹ ಸುಮಹಾಂತಂ ಪರಶ್ವಧಮ್ ।

ಅನುವಾದ

ಆಗ ಮಹಾವೇಗಶಾಲಿ ಮಹಾತೇಜಸ್ವೀ ಮಹಾಪಾರ್ಶ್ವನು ಕುಪಿತನಾಗಿ ಒಂದು ಕೈಯಲ್ಲಿ ಭಾರೀ ದೊಡ್ಡ ಗಂಡುಕೊಡಲಿಯನ್ನೆತ್ತಿಕೊಂಡನು.॥17॥

ಮೂಲಮ್ - 18½

ತಂ ತೈಲಧೌತಂ ವಿಮಲಂ ಶೈಲಸಾರಮಯಂ ದೃಢಮ್ ॥
ರಾಕ್ಷಸಃ ಪರಮಕ್ರುದ್ಧೋ ವಾಲಿಪುತ್ರೇ ನ್ಯಪಾತಯತ್ ।

ಅನುವಾದ

ಆ ಕೊಡಲಿಯು ಒಳ್ಳೆಯ ಕಬ್ಬಿಣದಿಂದ ಮಾಡಿದ್ದು, ದೃಢವಾದ ಅದನ್ನು ಎಣ್ಣೆಯಲ್ಲಿ ಅದ್ದಿ ಶುದ್ಧಗೊಳಿಸಿತ್ತು. ರಾಕ್ಷಸ ಮಹಾಪಾರ್ಶ್ವನು ಅತ್ಯಂತ ಕುಪಿತನಾಗಿ ಆ ಕೊಡಲಿಯಿಂದ ಅಂಗದನನ್ನು ಪ್ರಹರಿಸಿದನು.॥18॥

ಮೂಲಮ್ - 19½

ತೇನ ವಾಮಾಂಸಲಕೇ ಭೃಶಂ ಪ್ರತ್ಯವಪಾತಿತಮ್ ॥
ಅಂಗದೋ ಮೋಕ್ಷಯಾಮಾಸ ಸರೋಷಃ ಸ ಪರಶ್ವಧಮ್ ।

ಅನುವಾದ

ಅವನು ಅಂಗದನ ಎಡ ಹೆಗಲಿಗೆ ವೇಗವಾಗಿ ಆ ಕೊಡಲಿಯಿಂದ ಹೊಡೆದಿದ್ದನು; ಆದರೆ ರೋಷಗೊಂಡ ಅಂಗದನು ಪಕ್ಕಕ್ಕೆ ಸರಿದು ಏಟನ್ನು ವ್ಯರ್ಥಗೊಳಿಸಿದನು.॥19॥

ಮೂಲಮ್ - 20½

ಸ ವೀರೋ ವಜ್ರಸಂಕಾಶಮಂಗದೋ ಮುಷ್ಟಿಮಾತ್ಮನಃ ॥
ಸಂವರ್ತಯತ್ ಸುಸಂಕ್ರುದ್ಧಃ ಪಿತುಸ್ತುಲ್ಯಪರಾಕ್ರಮಃ ।

ಅನುವಾದ

ಅನಂತರ ಅತ್ಯಂತ ಕ್ರೋಧಗೊಂಡು ತಂದೆಯಂತೆ ಪರಾಕ್ರಮಿಯಾದ ವೀರ ಅಂಗದನು ವಜ್ರದಂತಹ ಮುಷ್ಟಿಯನ್ನು ಬಿಗಿದನು.॥20॥

ಮೂಲಮ್ - 21½

ರಾಕ್ಷಸಸ್ಯ ಸ್ತನಾಭ್ಯಾಶೇಮರ್ಮಜ್ಞೋ ಹೃದಯಂ ಪ್ರತಿ ॥
ಇಂದ್ರಾಶನಿಸಮಸ್ಪರ್ಶಂ ಸ ಮುಷ್ಟಿಂ ವಿನ್ಯಪಾತಯತ್ ।

ಅನುವಾದ

ಹೃದಯದ ಮರ್ಮಸ್ಥಾನವನ್ನು ಬಲ್ಲ ಅವನು ರಾಕ್ಷಸನ ಸ್ತನಗಳ ಬಳಿ ಎದೆಗೆ ವೇಗವಾಗಿ ಗುದ್ದಿದನು. ಅದರ ಸ್ಪರ್ಶ ಇಂದ್ರನ ವಜ್ರಾಯುಧದಂತೆ ಅಸಹ್ಯವಾಗಿತ್ತು.॥21॥

ಮೂಲಮ್ - 22½

ತೇನ ತಸ್ಯ ನಿಪಾತೇನ ರಾಕ್ಷಸಸ್ಯ ಮಹಾಮೃಧೇ ॥
ಪಾಲ ಹೃದಯಂ ಚಾಸ್ಯ ಸಪಪಾತ ಹತೋ ಭುವಿ ।

ಅನುವಾದ

ಅಂಗದನ ಗುದ್ದು ಬೀಳುತ್ತಲೇ ರಾಕ್ಷಸ ಮಹಾಪಾರ್ಶ್ವನ ಹೃದಯ ಒಡೆದು ಹೋಗಿ, ಅವನು ಸತ್ತು ನೆಲಕ್ಕೆ ಬಿದ್ದುಹೋದನು.॥22॥

ಮೂಲಮ್ - 23½

ತಸ್ಮಿನ್ನಿಪತಿತೇ ಭೂಮೌ ತತ್ ಸೈನ್ಯಂ ಸಂಪ್ರಚುಕ್ಷುಭೇ ॥
ಅಭವಚ್ಚ ಮಹಾನ್ಕ್ರೋಧಃ ಸಮರೇ ರಾವಣಸ್ಯ ತು ।

ಅನುವಾದ

ಅವನು ಸತ್ತು ಭೂಮಿಗೆ ಬಿದ್ದುಹೋದಾಗ ಅವನ ಸೈನ್ಯ ವಿಕ್ಷುಬ್ಧವಾಯಿತು. ಹಾಗೂ ಯುದ್ಧಭೂಮಿಯಲ್ಲಿ ರಾವಣನಿಗೆ ಮಹಾಕ್ರೋಧ ವುಂಟಾಯಿತು.॥23॥

ಮೂಲಮ್ - 24

ವಾನರಾಣಾಂ ಪ್ರಹೃಷ್ಟಾನಾಂ ಸಿಂಹನಾದಃ ಸುಪುಷ್ಕಲಃ ॥

ಮೂಲಮ್ - 25

ಸ್ಫೋಟಯನ್ನಿವ ಶಬ್ದೇನ ಲಂಕಾಂ ಸಾಟ್ಟಾಲ ಗೋಪುರಾಮ್ ।
ಸಹೇಂದ್ರೇಣೇವ ದೇವಾನಾಂ ನಾದಃ ಸಮಭವನ್ಮಹಾನ್ ॥

ಅನುವಾದ

ಆಗ ಹರ್ಷಗೊಂಡ ವಾನರರು ಮಹಾಸಿಂಹನಾದ ಮಾಡತೊಡಗಿದರು. ಅದು ಲಂಕೆಯ ಗೋಪುರಸಹಿತ ದೊಡ್ಡ ಸೌಧಗಳು ಉರುಳುವಂತೆ ಅನಿಸುತ್ತಿತ್ತು. ಅಂಗದ ಸಹಿತ ವಾನರರ ಆ ಮಹಾ ಸಿಂಹನಾದವು ಇಂದ್ರಸಹಿತ ದೇವತೆಗಳ ಗಂಭೀರ ಘೋಷದಂತೆ ಕಂಡುಬರುತ್ತಿತ್ತು.॥24-25॥

ಮೂಲಮ್ - 26

ಅಥೇಂದ್ರಶತ್ರುಸ್ತ್ರಿದಶಾಲಯಾನಾಂ
ವನೌಕಸಾಂ ಚೈವ ಮಹಾಪ್ರಣಾದಮ್ ।
ಶ್ರುತ್ವಾ ಸರೋಷಂ ಯುಧಿ ರಾಕ್ಷಸೇಂದ್ರಃ
ಪುನಶ್ಚ ಯುದ್ಧಾಭಿಮುಖೋವತಸ್ಥೇ ॥

ಅನುವಾದ

ಯುದ್ಧರಂಗದಲ್ಲಿ ದೇವತೆಗಳ ಹಾಗೂ ವಾನರರ ಆ ಭಾರೀ ಗರ್ಜನೆ ಕೇಳಿ ಇಂದ್ರದ್ರೋಹಿ ರಾಕ್ಷಸರಾಜಾ ರಾವಣನು ಪುನಃ ರೋಷಪೂರ್ವಕ ಯುದ್ಧಕ್ಕಾಗಿ ಉತ್ಸುಕನಾಗಿ ಎದ್ದು ನಿಂತನು.॥26॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ತೊಂಭತ್ತೆಂಟನೆಯ ಸರ್ಗ ಪೂರ್ಣವಾಯಿತು.॥98॥