०८६ इन्द्रजिता पुनर्युद्धभूमिप्रवेशः

वाचनम्
ಭಾಗಸೂಚನಾ

ವಾನರ-ರಾಕ್ಷಸರ ಯುದ್ಧ, ಹನುಮಂತನಿಂದ ರಾಕ್ಷಸರ ಸಂಹಾರ, ಹನುಮಂತನು ಇಂದ್ರಜಿತುವನ್ನು ದ್ವಂದ್ವಯುದ್ಧಕ್ಕಾಗಿ ಆಹ್ವಾನ

ಮೂಲಮ್ - 1

ಅಥ ತಸ್ಯಾಮವಸ್ಥಾಯಾಂ ಲಕ್ಷ್ಮಣಂ ರಾವಣಾನುಜಃ ।
ಪರೇಷಾಮಹಿತಂ ವಾಕ್ಯಮರ್ಥಸಾಧಕಮಬ್ರವೀತ್ ॥

ಅನುವಾದ

ಆ ಸಮಯದಲ್ಲಿ ವಿಭೀಷಣನು ಶತ್ರುಗಳಿಗೆ ಅಹಿತಕರವಾದ ಹಾಗೂ ಲಕ್ಷ್ಮಣನ ಅರ್ಥಸಿದ್ಧಿಗೆ ಕಾರಣವಾದ ಮಾತನ್ನು ಹೇಳಿದನು.॥1॥

ಮೂಲಮ್ - 2

ಯದೇತದ್ರಾಕ್ಷಸಾನೀಕಂ ಮೇಘಶ್ಯಾಮಂ ವಿಲೋಕ್ಯತೇ ।
ಏತದಾಯೋಧ್ಯತಾಂ ಶೀಘ್ರಂ ಕಪಿಭಿಶ್ಚ ಶಿಲಾಯುಧೈಃ ॥

ಮೂಲಮ್ - 3

ತಸ್ಯಾನೀಕಸ್ಯ ಮಹತೋ ಭೇದನೇ ಯತ ಲಕ್ಷ್ಮಣ ।
ರಾಕ್ಷಸೇಂದ್ರ ಸುತೋಽಪ್ಯತ್ರ ಭಿನ್ನೇದೃಶ್ಯೋ ಭವಿಷ್ಯತಿ ॥

ಅನುವಾದ

ಲಕ್ಷ್ಮಣ! ಕಪ್ಪಾದ ಮೋಡಗಳಂತೆ ಎದುರಿಗೆ ಕಾಣುವ ರಾಕ್ಷಸರ ಸೈನ್ಯದೊಂದಿಗೆ ಶಿಲಾರೂಪೀ ಆಯುಧ ಧರಿಸಿದ ವಾನರವೀರರು ಶೀಘ್ರವಾಗಿ ಯುದ್ಧ ಮಾಡಲಿ ಮತ್ತು ನೀನೂ ಈ ವಿಶಾಲವಾಹಿನಿಯ ವ್ಯೆಹವನ್ನು ಭೇದಿಸುವ ಪ್ರಯತ್ನಮಾಡು. ಅದನ್ನು ಭೇದಿಸಿದಾಗಲೇ ಇಂದ್ರಜಿತು ನಮಗೆ ಕಾಣಿಸುವನು.॥2-3॥

ಮೂಲಮ್ - 4

ಸ ತ್ವಮಿಂದ್ರಾಶನಿಪ್ರಖ್ಯೈಃ ಶರೈರವಕಿರನ್ಪರಾನ್ ।
ಅಭಿದ್ರವಾಶು ಯಾವದ್ವೈ ನೈತತ್ ಕರ್ಮ ಸಮಾಪ್ಯತೇ ॥

ಅನುವಾದ

ಆದ್ದರಿಂದ ನೀನು ಈ ಹೋಮಕಾರ್ಯ ಮುಗಿಯುವ ಮೊದಲೇ ವಜ್ರದಂತಹ ಬಾಣಗಳ ಮಳೆಯನ್ನು ಸುರಿಸುತ್ತಾ ಶತ್ರುಗಳ ಮೇಲೆ ಆಕ್ರಮಣ ಮಾಡು.॥4॥

ಮೂಲಮ್ - 5

ಜಹಿ ವೀರ ದುರಾತ್ಮಾನಂ ಮಾಯಾಪರಮಧಾರ್ಮಿಕಮ್ ।
ರಾವಣಿಂ ಕ್ರೂರಕರ್ಮಾಣಂ ಸರ್ವಲೋಕ ಭಯಾವಹಮ್ ॥

ಅನುವಾದ

ವೀರನೇ! ಈ ದುರಾತ್ಮ ರಾವಣಕುಮಾರನು ಭಾರೀ ಮಾಯಾವಿಯೂ, ಅಧರ್ಮಿಯೂ, ಕ್ರೂರಕರ್ಮ ಮಾಡುವವನೂ, ಸರ್ವ ಲೋಕಗಳಿಗೆ ಭಯಂಕರನೂ ಆಗಿದ್ದಾನೆ. ಆದ್ದರಿಂದ ಇವನನ್ನು ವಧಿಸು.॥5॥

ಮೂಲಮ್ - 6

ವಿಭೀಷಣ ವಚಃ ಶ್ರುತ್ವಾ ಲಕ್ಷ್ಮಣಃ ಶುಭಲಕ್ಷಣಃ ।
ವವರ್ಷ ಶರವರ್ಷೇಣ ರಾಕ್ಷಸೇಂದ್ರಸುತಂ ಪ್ರತಿ ॥

ಅನುವಾದ

ವಿಭೀಷಣನ ಮಾತನ್ನು ಕೇಳಿ ಶುಭಲಕ್ಷ ಸಂಪನ್ನ ಲಕ್ಷ್ಮಣನು ರಾಕ್ಷಸರಾಜನ ಪುತ್ರನನ್ನು ಗುರಿಯಿಟ್ಟು ಬಾಣಗಳ ವರ್ಷವನ್ನು ಪ್ರಾರಂಭಿಸಿದನು.॥6॥

ಮೂಲಮ್ - 7

ಋಕ್ಷಾಃ ಶಾಖಾಮೃಗಾಶ್ಚೈವ ದ್ರುಮಪ್ರವರಯೋಧಿನಃ ।
ಅಭ್ಯಧಾವಂತ ಸಹಿತಾಸ್ತದನೀಕಮವಸ್ಥಿತಮ್ ॥

ಅನುವಾದ

ಜೊತೆಗೆ ದೊಡ್ಡ ದೊಡ್ಡ ವೃಕ್ಷವನ್ನೆತ್ತಿಕೊಂಡ ವಾನರರೂ ಹಾಗೂ ಕರಡಿಗಳೂ ಅಲ್ಲಿ ನಿಂತಿರುವ ರಾಕ್ಷಸ ಸೈನ್ಯದ ಮೇಲೆ ಒಟ್ಟಿಗೆ ಆಕ್ರಮಿಸಿದರು.॥7॥

ಮೂಲಮ್ - 8

ರಾಕ್ಷಸಾಶ್ಚ ಶಿತೈರ್ಬಾಣೈರಸಿಭಿಃ ಶಕ್ತಿತೋಮರೈಃ ।
ಅಭ್ಯರ್ವತಂತ ಸಮರೇ ಕಪಿಸೈನ್ಯಜಿಘಾಂಸವಃ ॥

ಅನುವಾದ

ಅತ್ತಕಡೆಯಿಂದ ರಾಕ್ಷಸರೂ ವಾನರ ಸೈನ್ಯವನ್ನು ನಾಶಮಾಡುವ ಇಚ್ಛೆಯಿಂದ ಯುದ್ಧದಲ್ಲಿ ಹರಿತವಾದ ಬಾಣಗಳಿಂದ, ಖಡ್ಗಗಳಿಂದ, ಶಕ್ತಿ-ತೋಮರಗಳಿಂದ ಪ್ರಹಾರ ಮಾಡುತ್ತಾ ಎದುರಿಸುತ್ತಿದ್ದರು.॥8॥

ಮೂಲಮ್ - 9

ಸ ಸಂಪ್ರಹಾರಸ್ತುಮುಲಃ ಸಂಜಜ್ಞೇ ಕಪಿರಕ್ಷಸಾಮ್ ।
ಶಬ್ದೇನ ಮಹತಾ ಲಂಕಾಂ ನಾದಯನ್ ವೈ ಸಮಂತತಃ ॥

ಅನುವಾದ

ಹೀಗೆ ವಾನರರಿಗೂ, ರಾಕ್ಷಸರಿಗೂ, ಘನಘೋರ ಸಂಗ್ರಾಮ ನಡೆಯತೊಡಗಿತು. ಅದರ ಮಹಾ ಕೋಲಾಹಲವು ಇಡೀ ಲಂಕೆಯ ಎಲ್ಲೆಡೆ ಪ್ರತಿಧ್ವನಿಸಿತು.॥9॥

ಮೂಲಮ್ - 10

ಶಸ್ತ್ರೈಶ್ಚ ವಿವಿಧಾಕಾರೈಃ ಶಿತೈರ್ಬಾಣೈಶ್ಚ ಪಾದಪೈಃ ।
ಉದ್ಯತೈರ್ಗಿರಿಶೃಂಗೈಶ್ಚ ಘೋರೈರಾಕಾಶಮಾವೃತಮ್ ॥

ಅನುವಾದ

ನಾನಾ ಪ್ರಕಾರದ ಶಸ್ತ್ರಗಳಿಂದ, ಹರಿತವಾದ ಬಾಣಗಳಿಂದ, ಎಸೆದಿರುವ ವೃಕ್ಷಗಳಿಂದ, ಭಯಾನಕ ಪರ್ವತಗಳಿಂದ ಅಲ್ಲಿಯ ಆಕಾಶ ತುಂಬಿಹೋಯಿತು.॥10॥

ಮೂಲಮ್ - 11

ತೇ ರಾಕ್ಷಸಾ ವಾನರೇಂದ್ರೇಷು ವಿಕೃತಾನನಬಾಹವಃ ।
ನಿವೇಶಯಂತಃ ಶಸ್ತ್ರಾಣಿ ಚಕ್ರುಸ್ತೇ ಸುಮಹದ್ಭಯಮ್ ॥

ಅನುವಾದ

ವಿಕಟಮುಖ-ಬಾಹುಗಳುಳ್ಳ ರಾಕ್ಷಸರು ವಾನರ ಯೂಥಪತಿಗಳ ಮೇಲೆ ನಾನಾ ರೀತಿಯ ಶಸ್ತ್ರಗಳನ್ನು ಪ್ರಹರಿಸುತ್ತಾ ಅವರಿಗೆ ಮಹಾ ಭಯವನ್ನು ತಂದೊಡ್ಡಿತು.॥11॥

ಮೂಲಮ್ - 12

ತಥೈವ ಸಕಲೈರ್ವೃಕ್ಷೈರ್ಗಿರಿಶೃಂಗೈಶ್ಚ ವಾನರಾಃ ।
ಅಭಿಜಘ್ನುರ್ನಿಜಘ್ನುಶ್ಚ ಸಮರೇ ಸರ್ವರಾಕ್ಷಸಾನ್ ॥

ಅನುವಾದ

ಹಾಗೆಯೇ ವಾನರರೂ ಸಮರಾಂಗಣದಲ್ಲಿ ವೃಕ್ಷಗಳಿಂದ ಮತ್ತು ಪರ್ವತ ಶಿಖರಗಳಿಂದ ಸಮಸ್ತ ರಾಕ್ಷಸರನ್ನು ಕೊಲ್ಲ ತೊಡಗಿದರು.॥12॥

ಮೂಲಮ್ - 13

ಋಕ್ಷವಾನರಮುಖ್ಯೈಶ್ಚ ಮಹಾಕಾಯೈರ್ಮಹಾಬಲೈಃ ।
ರಕ್ಷಸಾಂ ವಧ್ಯಮಾನಾನಾಂ ಮಹದ್ಭಯಮಜಾಯತ ॥

ಅನುವಾದ

ಮುಖ್ಯ ಮುಖ್ಯ ಮಹಾಕಾಯ ಮಹಾಬಲಿ ಕರಡಿಗಳು ಮತ್ತು ವಾನರರು ಕಾದಾಡುತ್ತಿ ರುವಾಗ ರಾಕ್ಷಸರಿಗೆ ಮಹಾಭಯ ಆವರಿಸಿತು.॥13॥

ಮೂಲಮ್ - 14

ಸ್ವಮನೀಕಂ ವಿಷಣ್ಣಂ ತು ಶ್ರುತ್ವಾ ಶತ್ರುಭಿರರ್ದಿತಮ್ ।
ಉದತಿಷ್ಠತ ದುರ್ಧರ್ಷಃ ಸ ಕರ್ಮಣ್ಯನನುಷ್ಠಿತೇ ॥

ಅನುವಾದ

ಇಂದ್ರಜಿತು ಭಾರೀ ದುರ್ಧರ್ಷವೀರನಾಗಿದ್ದನು. ತನ್ನ ಸೈನ್ಯವು ಶತ್ರುಗಳಿಂದ ಪೀಡಿತವಾಗಿ ದುಃಖಿತವಾಗಿರುವುದನ್ನು ಕೇಳಿದಾಗ ಅವನು ಅನುಷ್ಠಾನ ಮುಗಿಯುವ ಮೊದಲೇ ಅವನು ಯುದ್ಧಕ್ಕಾಗಿ ಎದ್ದು ನಿಂತನು.॥14॥

ಮೂಲಮ್ - 15

ವೃಕ್ಷಾಂಧಕಾರಾನ್ನಿರ್ಗತ್ಯ ಜಾತಕ್ರೋಧಃ ಸ ರಾವಣಿಃ ।
ಆರುರೋಹ ರಥಂ ಸಜ್ಜಂ ಪೂರ್ವಯುಕ್ತಂ ಸುಸಂಯತಮ್ ॥

ಅನುವಾದ

ಆಗ ಅವನು ಅತ್ಯಂತ ಕ್ರೋಧಗೊಂಡಿದ್ದನು. ಅವನು ವೃಕ್ಷಗಳ ಅಂಧಕಾರದಿಂದ ಹೊರಬಂದು ಒಂದು ಸುಸಜ್ಜಿತ ಮೊದಲೇ ಸಿದ್ಧಪಡಿಸಿದ್ದ, ಬಹಳ ಸುದೃಢವಾದ ರಥಾರೂಢನಾದನು.॥15॥

ಮೂಲಮ್ - 16

ಸ ಭೀಮಕಾರ್ಮುಕಶರಃ ಕೃಷ್ಣಾಂಜನ ಚಯೋಪಮಃ ।
ರಕ್ತಾಸ್ಯನಯನೋ ಭೀಮೋ ಬಭೌ ಮೃತ್ಯುರಿವಾಂತಕಃ ॥

ಅನುವಾದ

ಕೈಯಲ್ಲಿ ಭಯಂಕರ ಧನುಸ್ಸನ್ನು ಧರಿಸಿದ ಇಂದ್ರಜಿತು ಕಾಡಿಗೆಯ ಬೆಟ್ಟದಂತೆ ಕಂಡುಬರುತ್ತಿದ್ದನು. ಆ ಭಯಂಕರ ರಾಕ್ಷಸನ ಕಣ್ಣು-ಮುಖ ಕೆಂಪಾಗಿದ್ದು, ವಿನಾಶಕಾರೀ ಮೃತ್ಯು ವಿನಂತೆ ಕಂಡುಬರುತ್ತಿದ್ದನು.॥16॥

ಮೂಲಮ್ - 17

ದೃಷ್ಟ್ವೈವ ತು ರಥಸ್ಥಂ ತಂ ಪರ್ಯವರ್ತತ ತದ್ಬಲಮ್ ।
ರಕ್ಷಸಾಂ ಭೀಮವೇಗಾನಾಂ ಲಕ್ಷ್ಮಣೇನ ಯುಯುತ್ಸತಾಮ್ ॥

ಅನುವಾದ

ಇಂದ್ರಜಿತನು ರಥದಲ್ಲಿ ಕುಳಿತಿರುವನೆಂದು ನೋಡುತ್ತಲೇ ಲಕ್ಷ್ಮಣನೊಂದಿಗೆ ಯುದ್ಧದ ಇಚ್ಛೆಯುಳ್ಳ ಭಯಂಕರ ವೇಗಶಾಲಿ ರಾಕ್ಷಸರ ಸೈನ್ಯವು ಅವನ ಸುತ್ತಲೂ ಬಂದು ನಿಂತುಕೊಂಡಿತು.॥17॥

ಮೂಲಮ್ - 18

ತಸ್ಮಿಂಸ್ತು ಕಾಲೇ ಹನುಮಾನರುಜತ್ ಸ ದುರಾಸದಮ್ ।
ಧರಣೀಧರ ಸಂಕಾಶೋ ಮಹಾವೃಕ್ಷಮರಿಂದಮಃ ॥

ಅನುವಾದ

ಆಗ ಶತ್ರುದಮನನಾದ ಪರ್ವತಾಕಾರ ವಿಶಾಲಕಾಯ ಹನುಮಂತನು ಕೀಳಲು, ಪುಡಿಮಾಡಲು ಅತಿ ಕಷ್ಟಕರವಾದ ಬಹಳ ದೊಡ್ಡ ವೃಕ್ಷವನ್ನು ಕಿತ್ತುಕೊಂಡನು.॥18॥

ಮೂಲಮ್ - 19

ಸ ರಾಕ್ಷಸಾನಾಂ ತತ್ಸೈನ್ಯಂ ಕಾಲಾಗ್ನಿರಿವ ನಿರ್ದಹನ್ ।
ಚಕಾರ ಬಹುಭಿರ್ವೃಕ್ಷೈರ್ನಿಃ ಸಂಜ್ಞಂ ಯುಧಿ ವಾನರಃ ॥

ಅನುವಾದ

ಮತ್ತೆ ಆ ವಾನರ ವೀರನು ಪ್ರಳಯಾಗ್ನಿಯಂತೆ ಪ್ರಜ್ವಲಿತನಾಗಿ, ರಣರಂಗದಲ್ಲಿ ರಾಕ್ಷಸರ ಆ ಸೈನ್ಯವನ್ನು ದಗ್ಧಗೊಳಿಸುತ್ತಾ ಅಸಂಖ್ಯ ವೃಕ್ಷಗಳ ಹೊಡೆತದಿಂದ ನಿಶ್ಚೇಷ್ಟಿತಗೊಳಿಸಿದನು.॥19॥

ಮೂಲಮ್ - 20

ವಿಧ್ವಂಸಯಂತಂ ತರಸಾ ದೃಷ್ಟ್ವೈವ ಪವನಾತ್ಮಜಮ್ ।
ರಾಕ್ಷಸಾನಾಂ ಸಹಸ್ರಾಣಿ ಹನೂಮಂತಮವಾಕಿರನ್ ॥

ಅನುವಾದ

ಪವನ ಕುಮಾರನು ವೇಗವಾಗಿ ರಾಕ್ಷಸ ಸೈನ್ಯವನ್ನು ವಿಧ್ವಂಸಗೊಳಿಸುತ್ತಿರುವುದನ್ನು ನೋಡುತ್ತಲೇ ಸಾವಿರಾರು ರಾಕ್ಷಸರು ಅವನ ಮೇಲೆ ಅಸ್ತ್ರ-ಶಸ್ತ್ರಗಳನ್ನು ಮಳೆಗರೆದರು.॥20॥

ಮೂಲಮ್ - 21

ಶಿತಶೂಲಧರಾಃ ಶೂಲೈರಸಿಭಿಶ್ಚಾಸಿಪಾಣಯಃ ।
ಶಕ್ತಿಹಸ್ತಾಶ್ಚ ಶಕ್ತಿಭಿಃ ಪಟ್ಟಿಶೈಃ ಪಟ್ಟಿಶಾಯುಧಾಃ ॥

ಅನುವಾದ

ಹೊಳೆಯುತ್ತಿರುವ ಶೂಲಗಳಿಂದ, ಖಡ್ಗಗಳಿಂದ, ಶಕ್ತಿಗಳಿಂದ, ಪಟ್ಟಿಶಗಳಿಂದ ರಾಕ್ಷಸರು ಅವನ ಮೇಲೆ ಪ್ರಹಾರ ಮಾಡುತ್ತಿದ್ದರು.॥21॥

ಮೂಲಮ್ - 22

ಪರಿಘೈಶ್ಚ ಗದಾಭಿಶ್ಚ ಕುಂತೈಶ್ಚ ಶುಭದರ್ಶನೈಃ ।
ಶತಶಶ್ಚ ಶತಘ್ನೀಭಿರಾಯಸೈರಪಿ ಮುದ್ಗರೈಃ ॥

ಮೂಲಮ್ - 23

ಘೋರೈಃ ಪರಶುಭಿಶ್ಚೈವ ಭಿಂದಿಪಾಲೈಶ್ಚ ರಾಕ್ಷಸಾಃ ।
ಮುಷ್ಟಿ ಭಿರ್ವಜ್ರಕಲ್ಪೈಶ್ಚ ತಲೈರಶನಿಸಂನಿಭೈಃ ॥

ಮೂಲಮ್ - 24

ಅಭಿಜಘ್ನುಃ ಸಮಾಸಾದ್ಯ ಸಮಂತಾತ್ ಪರ್ವತೋಪಮಮ್ ।
ತೇಷಾಮಪಿ ಚ ಸಂಕ್ರುದ್ಧಶ್ಚಕಾರ ಕದನಂ ಮಹತ್ ॥

ಅನುವಾದ

ಅನೇಕ ಪರಿಘಗಳಿಂದ, ಗದೆಗಳಿಂದ, ಭಲ್ಲೆಗಳಿಂದ, ನೂರಾರು ಶತಘ್ನಿಗಳಿಂದ ಲೋಹ ಮುದ್ಗರಗಳಿಂದ ಭಯಾನಕ ಗಂಡುಕೊಡಲಿಗಳಿಂದ, ಭಿಂದಿಪಾಲಗಳಿಂದ, ವಜ್ರಸದೃಶ ಮುಷ್ಟಿಗಳಿಂದ, ಸಿಡಿಲಿನಂತಹ ಅಂಗೈ ಏಟುಗಳಿಂದ ಸಮಸ್ತ ರಾಕ್ಷಸರು ಹತ್ತಿರ ಬಂದು ಸುತ್ತಲಿನಿಂದ ಪರ್ವತಾಕಾರ ಹನುಮಂತನ ಮೇಲೆ ಪ್ರಹಾರ ಮಾಡತೊಡಗಿದರು. ಮಾರುತಿಯು ಕುಪಿತನಾಗಿ ಅವರೆಲ್ಲರನ್ನು ಸಂಹರಿಸಿಬಿಟ್ಟನು.॥22-24॥

ಮೂಲಮ್ - 25

ಸ ದದರ್ಶ ಕಪಿಶ್ರೇಷ್ಠಮಚಲೋಪಮಮಿಂದ್ರಜಿತ್ ।
ಸೂದಮಾನಮಸಂತ್ರಸ್ತಮಮಿತ್ರಾನ್ ಪವನಾತ್ಮಜಮ್ ॥

ಅನುವಾದ

ಕಪಿವರ ಪವನಕುಮಾರ ಹನುಮಂತನು ಪರ್ವತದಂತೆ ಅಚಲನಾಗಿ ನಿಃಶಂಕಭಾವದಿಂದ ತನ್ನ ಶತ್ರು ಗಳನ್ನು ಸಂಹರಿಸುವುದನ್ನು ಇಂದ್ರಜಿತು ನೋಡಿದನು.॥25॥

ಮೂಲಮ್ - 26

ಸ ಸಾರಥಿಮುವಾಚೇದಂ ಯಾಹಿ ಯತ್ರೈಷ ವಾನರಃ ।
ಕ್ಷಯಮೇವ ಹಿ ನಃ ಕುರ್ಯಾದ್ರಾಕ್ಷಸಾನಾಮುಪೇಕ್ಷಿತಃ ॥

ಅನುವಾದ

ಆಗ ತನ್ನ ಸಾರಥಿಯಲ್ಲಿ ಈ ವಾನರನು ಯುದ್ಧ ಮಾಡುವಲ್ಲಿಗೆ ನಡೆ, ಎಂದು ಹೇಳಿದನು. ಇವನನ್ನು ಉಪೇಕ್ಷೆಮಾಡಿದರೆ ಇವನು ನಮ್ಮೆಲ್ಲ ರಾಕ್ಷಸರ ವಿನಾಶಮಾಡಿಬಿಡುವನು.॥26॥

ಮೂಲಮ್ - 27

ಇತ್ಯುಕ್ತಃ ಸಾರಥಿಸ್ತೇನ ಯಯೌ ಯತ್ರ ಸ ಮಾರುತಿಃ ।
ವಹನ್ಪರಮದುರ್ಧರ್ಷಂ ಸ್ಥಿತಮಿಂದ್ರಜಿತಂ ರಥೇ ॥

ಅನುವಾದ

ಹೀಗೆ ಹೇಳಿದಾಗ ಸಾರಥಿಯು ಅತ್ಯಂತ ದುರ್ಜಯ ವೀರ ಇಂದ್ರಜಿತುವನ್ನು ಪವನಕುಮಾರ ಹನುಮಂತನು ವಿರಾಜಿಸುತ್ತಿದ್ದಲ್ಲಿಗೆ ಕೊಂಡುಹೋದನು.॥27॥

ಮೂಲಮ್ - 28

ಸೋಽಭ್ಯುಪೇತ್ಯ ಶರಾನ್ ಖಡ್ಗಾನ್ ಪಟ್ಟಿಶಾಂಶ್ಚ ಪರಶ್ವಧಾನ್ ।
ಅಭ್ಯವರ್ಷತ ದುರ್ಧರ್ಷಃ ಕಪಿಮೂರ್ಧ್ನನಿ ರಾಕ್ಷಸಃ ॥

ಅನುವಾದ

ಅಲ್ಲಿಗೆ ಹೋಗುತ್ತಲೇ ಆ ದುರ್ಜಯ ರಾಕ್ಷಸನು ಹನುಮಂತನ ಮಸ್ತಕದಲ್ಲಿ ಬಾಣಗಳಿಂದ, ಖಡ್ಗಗಳಿಂದ, ಪಟ್ಟಿಶಗಳಿಂದ, ಕೊಡಲಿಗಳಿಂದ ಮಳೆಗರೆಯಲು ಪ್ರಾರಂಭಿಸಿದನು.॥28॥

ಮೂಲಮ್ - 29

ತಾನಿ ಶಸ್ತ್ರಾಣಿ ಘೋರಾಣಿ ಪ್ರತಿಗೃಹ್ಯ ಸ ಮಾರುತಿಃ ।
ರೋಷೇಣ ಮಹತಾವಿಷ್ಣೋ ವಾಕ್ಯಂ ಚೇದಮುವಾಚ ಹ ॥

ಅನುವಾದ

ಆ ಭಯಾನಕ ಶಸ್ತ್ರಗಳು ತನ್ನ ಶರೀರದ ಮೇಲೆ ಬೀಳುವುದನ್ನು ನೋಡಿ ಹನುಮಂತನು ಮಹಾರೋಷಗೊಂಡು, ಹೀಗೆ ಹೇಳಿದನು.॥29॥

ಮೂಲಮ್ - 30

ಯುಧ್ಯಸ್ವ ಯದಿ ಶೂರೋಽಸಿ ರಾವಣಾತ್ಮಜ ದುರ್ಮತೇ ।
ವಾಯುಪುತ್ರಂ ಸಮಾಸಾದ್ಯ ನ ಜೀವನ್ ಪ್ರತಿಯಾಸ್ಯಸಿ ॥

ಅನುವಾದ

ದುರ್ಬುದ್ಧಿ ರಾವಣಕುಮಾರನೇ! ನೀನು ದೊಡ್ಡ ಶೂರನಾಗಿದ್ದರೆ ಬಾ, ನನ್ನೊಡನೆ ಮಲ್ಲಯುದ್ಧ ಮಾಡು. ಈ ವಾಯುಪುತ್ರನೊಂದಿಗೆ ಸೆಣಸಾಡಿ ಬದುಕಿ ಹೋಗಲಾರೆ.॥30॥

ಮೂಲಮ್ - 31

ಬಾಹುಭ್ಯಾಂ ಸಂಪ್ರಯುಧ್ಯಸ್ವ ಯದಿ ಮೇ ದ್ವಂದ್ವಮಾಹವೇ ।
ವೇಗಂ ಸಹಸ್ವ ದುರ್ಬುದ್ಧೇ ತತಸ್ತ್ವಂ ರಕ್ಷಸಾಂ ವರಃ ॥

ಅನುವಾದ

ದುರ್ಮತಿಯೇ! ನಿನ್ನ ಭುಜಗಳಿಂದ ನನ್ನೊಡನೆ ಯುದ್ಧ ಮಾಡು. ಈ ಬಾಹುಯುದ್ಧದಲ್ಲಿ ನನ್ನ ವೇಗವನ್ನು ಸಹಿಸಿದೆ ಯಾದರೆ ನಿನ್ನನ್ನು ರಾಕ್ಷಸರಲ್ಲಿ ಶ್ರೇಷ್ಠನೆಂದು ತಿಳಿಯುವೆನು.॥31॥

ಮೂಲಮ್ - 32

ಹನೂಮಂತಂ ಜಿಘಾಂಸಂತಂ ಸಮುದ್ಯತ ಶರಾಸನಮ್ ।
ರಾವಣಾತ್ಮಜಮಾಚಷ್ಟೇ ಲಕ್ಷ್ಮಣಾಯ ವಿಭೀಷಣಃ ॥

ಅನುವಾದ

ರಾವಣಕುಮಾರ ಇಂದ್ರಜಿತು ಧನಸ್ಸು ಎತ್ತಿ ಹನುಮಂತನನ್ನು ವಧಿಸಲು ಬಯಸುತ್ತಿದ್ದಾನೆ. ಈ ಸ್ಥಿತಿಯಲ್ಲಿ ವಿಭೀಷಣನು ಲಕ್ಷ್ಮಣನಿಗೆ ಅವನ ಪರಿಚಯವನ್ನು ಮಾಡಿದನು.॥32॥

ಮೂಲಮ್ - 33

ಯಃ ಸ ವಾಸವನಿರ್ಜೇತಾ ರಾವಣಸ್ಯಾತ್ಮಸಂಭವಃ ।
ಸ ಏಷ ರಥಮಾಸ್ಥಾಯ ಹನೂಮಂತಂ ಜಿಘಾಂಸತಿ ॥

ಮೂಲಮ್ - 34

ತಮಪ್ರತಿಮಸಂಸ್ಥಾನೈಃ ಶರೈಃ ಶತ್ರುವಿದಾರಣೈಃ ।
ಜೀವಿತಾಂತಕರೈರ್ಘೋರೈಃ ಸೌಮಿತ್ರೇ ರಾವಣಿಂ ಜಹಿ ॥

ಅನುವಾದ

ಸುಮಿತ್ರಾನಂದನ! ಇಂದ್ರನನ್ನು ಗೆದ್ದಿರುವ ರಾವಣನ ಪುತ್ರನೇ ರಥದಲ್ಲಿ ಕುಳಿತು ಹನುಮಂತನನ್ನು ವಧಿಸಲು ಇಚ್ಛಿಸುತ್ತಿದ್ದಾನೆ. ಆದ್ದರಿಂದ ನೀನು ಶತ್ರುಗಳನ್ನು ವಿದಾರಣಗೊಳಿಸುವ, ಅನುಪಮ ಆಕಾರಪ್ರಕಾರಗಳಿಂದ ಕೂಡಿದ, ಪ್ರಾಣಾಂತಕಾರೀ ಭಯಂಕರ ಬಾಣಗಳಿಂದ ಈ ರಾವಣಿಯನ್ನು ಕೊಂದುಬಿಡು.॥33-34॥

ಮೂಲಮ್ - 35

ಇತ್ಯೇವಮುಕ್ತಸ್ತು ತದಾ ಮಹಾತ್ಮಾ
ವಿಭೀಷಣೇನಾರಿ ವಿಭೀಷಣೇನ ।
ದದರ್ಶ ತಂ ಪರ್ವತ ಸಂನಿಕಾಶಂ
ರಥಸ್ಥಿತಂ ಭೀಮಬಲಂ ದೂರಾಸದಮ್ ॥

ಅನುವಾದ

ಶತ್ರು ಗಳನ್ನು ಭಯಗೊಳಿಸುವ ವಿಭೀಷಣನು ಹೀಗೆ ಹೇಳಿದಾಗ ಮಹಾತ್ಮಾ ಲಕ್ಷ್ಮಣನು ರಥದಲ್ಲಿ ಕುಳಿತಿರುವ ಆ ಭಯಂಕರ ಬಲಶಾಲೀ ಪರ್ವತಾಕಾರ ದುರ್ಜಯ ರಾಕ್ಷಸನನ್ನು ನೋಡಿದನು.॥3.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಭತ್ತಾರನೆಯ ಸರ್ಗ ಪೂರ್ಣವಾಯಿತು.॥86॥