०७८ रावणेन मकराक्षप्रेषणम्

वाचनम्
ಭಾಗಸೂಚನಾ

ರಾವಣನ ಆಜ್ಞೆಯಂತೆ ಮಕರಾಕ್ಷಸನು ಯುದ್ಧಕ್ಕಾಗಿ ಹೊರಟಿದುದು.

ಮೂಲಮ್ - 1

ನಿಕುಂಭಂ ನಿಹತಂ ಶ್ರುತ್ವಾ ಕುಂಭಂ ಚ ವಿನಿಪಾತಿತಮ್ ।
ರಾವಣಃ ಪರಮಾಮರ್ಷೀ ಪ್ರಜಜ್ವಾಲಾನಯೋ ಯಥಾ ॥

ಅನುವಾದ

ಕುಂಭ-ನಿಕುಂಭರು ಹತರಾದುದನ್ನು ಕೇಳಿ, ರಾವಣನಿಗೆ ಭಾರಿ ಕೋಪ ಬಂದು ಬೆಂಕಿಯಂತೆ ಉರಿಯತೊಡಗಿದನು.॥1॥

ಮೂಲಮ್ - 2

ನೈರ್ಋತಃ ಕ್ರೋಧಶೋಕಾಭ್ಯಾಂ ದ್ವಾಭ್ಯಾಂ ತು ಪರಿಮೂರ್ಛಿತಃ ।
ಖರಪುತ್ರಂ ವಿಶಾಲಾಕ್ಷಂ ಮಕರಾಕ್ಷಮಚೋದಯತ್ ॥

ಅನುವಾದ

ರಾವಣನು ಕ್ರೋಧ-ಶೋಕದಿಂದ ವ್ಯಾಕುಲನಾಗಿ ವಿಶಾಲಾಕ್ಷ ಖರಪುತ್ರ ಮರಕಾರ್ಷನಲ್ಲಿ ಹೇಳಿದನು.॥2॥

ಮೂಲಮ್ - 3

ಗಚ್ಛ ಪುತ್ರ ಮಯಾಽಽಜ್ಞಪ್ತೋ ಬಲೇನಾಭಿಸಮನ್ವಿತಃ ।
ರಾಘವಂ ಲಕ್ಷ್ಮಣಂ ಚೈವ ಜಹಿ ತೌ ಸವನೌಕಸೌಃ ॥

ಅನುವಾದ

ಮಗು! ನನ್ನ ಆಜ್ಞೆಯಂತೆ ವಿಶಾಲ ಸೈನ್ಯದೊಂದಿಗೆ ಯುದ್ಧಕ್ಕೆ ಹೋಗಿ ವಾನರರ ಸಹಿತ ರಾಮ-ಲಕ್ಷ್ಮಣರಿಬ್ಬರನ್ನೂ ಕೊಂದು ಹಾಕು.॥3॥

ಮೂಲಮ್ - 4

ರಾವಣಸ್ಯ ವಚಃ ಶ್ರುತ್ವಾ ಶೂರಮಾನೀ ಖರಾತ್ಮಜಃ ।
ಬಾಢಮಿತ್ಯಬ್ರವೀದ್ಧೃಷ್ಟೋ ಮಕರಾಕ್ಷೋ ನಿಶಾಚರಃ ॥

ಮೂಲಮ್ - 5

ಸೋಽಭಿವಾದ್ಯ ದಶಗ್ರೀವಂ ಕೃತ್ವಾ ಚಾಪಿ ಪ್ರದಕ್ಷಿಣಮ್ ।
ನಿರ್ಜಗಾಮ ಗೃಹಾಚ್ಛುಭ್ರಾದ್ ರಾವಣಸ್ಯಾಜ್ಞಯಾ ಬಲೀ ॥

ಅನುವಾದ

ರಾವಣನ ಮಾತನ್ನು ಕೇಳಿ ತನ್ನನ್ನು ಮಹಾಶೂರನೆಂದು ತಿಳಿದ ಖರಪುತ್ರ ಮಕರಾಕ್ಷನು ಹಾಗೆಯೇ ಆಗಲಿ ಎಂದು ಹೇಳಿ ಆ ವೀರ ನಿಶಾಚರನು ರಾವಣನಿಗೆ ಪ್ರಣಾಮಗೈದು, ಅವನಿಗೆ ಪ್ರದಕ್ಷಿಣೆ ಬಂದು ಅವನಿಂದ ಬೀಳ್ಕೊಂಡು ಅವನು ಉಜ್ವಲ ಅರಮನೆಯಿಂದ ಹೊರಟನು.॥4-5॥

ಮೂಲಮ್ - 6

ಸಮೀಪಸ್ಥಂ ಬಲಾಧ್ಯಕ್ಷಂ ಖರಪುತ್ರೋಽಬ್ರವೀದ್ ವಚಃ ।
ರಥಮಾನೀಯತಾಂ ತೂರ್ಣಂ ಸೈನ್ಯಂ ತ್ವಾನೀಯತಾಂ ತ್ವರಾತ್ ॥

ಅನುವಾದ

ಪಕ್ಕದಲ್ಲೇ ನಿಂತಿದ್ದ ಸೇನಾಪತಿಯಬಳಿ ಸೇನಾಪತಿಯೇ ! ಬೇಗನೆ ರಥವನ್ನು ತೆಗೆದುಕೊಂಡು ಬಾ ಹಾಗೂ ಕೂಡಲೇ ಸೈನ್ಯವನ್ನು ಕರೆಸು ಎಂದು ಹೇಳಿದನು.॥6॥

ಮೂಲಮ್ - 7

ತಸ್ಯ ತದ್ವಚನಂ ಶ್ರುತ್ವಾ ಬಲಾಧ್ಯಕ್ಷೋ ನಿಶಾಚರಃ ।
ಸ್ಯಂದನಂ ಚ ಬಲಂ ಚೈವ ಸಮೀಪಂ ಪ್ರತ್ಯಪಾದಯತ್ ॥

ಅನುವಾದ

ಮಕರಾಕ್ಷನ ಮಾತನ್ನು ಕೇಳಿ ನಿಶಾಚರ ಸೇನಾಪತಿಯು ರಥ ಮತ್ತು ಸೈನ್ಯವನ್ನು ಅವನ ಬಳಿ ಕರೆತಂದನು.॥7॥

ಮೂಲಮ್ - 8

ಪ್ರದಕ್ಷಿಣಂ ರಥಂ ಕೃತ್ವಾ ಆರುರೋಹ ನಿಶಾಚರಃ ।
ಸೂತಂ ಸಂಚೋದಯಾಮಾಸ ಶೀಘ್ರಂ ಮೇ ರಥಮಾವಹ ॥

ಅನುವಾದ

ಆಗ ಮಕರಾಕ್ಷನು ರಥಕ್ಕೆ ಪ್ರದಕ್ಷಿಣೆ ಬಂದು, ರಥಾರೂಢನಾಗಿ ಸಾರಥಿಗೆ. ರಥವನ್ನು ಶೀಘ್ರವಾಗಿ ಕೊಂಡು ಹೋಗು ಎಂದು ಆದೇಶಕೊಟ್ಟನು.॥8॥

ಮೂಲಮ್ - 9

ಅಥ ತಾನ್ರಾಕ್ಷಸಾನ್ಸರ್ವಾನ್ಮಕರಾಕ್ಷೋಽಬ್ರವೀದಿದಮ್ ।
ಯೂಯಂ ಸರ್ವೇ ಪ್ರಯುಧ್ಯಧ್ವಂ ಪುರಸ್ತಾನ್ಮಮ ರಾಕ್ಷಸಾಃ ॥

ಅನುವಾದ

ಬಳಿಕ ಸಮಸ್ತ ರಾಕ್ಷಸರಿಗೆ - ‘ನಿಶಾಚರರೇ! ನೀವು ನನ್ನ ಮುಂದೆ ನಿಂತು ಯುದ್ಧಮಾಡಿರಿ’ ಎಂದು ಹೇಳಿದನು.॥9॥

ಮೂಲಮ್ - 10

ಅಹಂ ರಾಕ್ಷಸರಾಜೇನ ರಾವಣೇನ ಮಹಾತ್ಮನಾ ।
ಆಜ್ಞಪ್ತಃ ಸಮರೇ ಹಂತುಂ ತಾವುಭೌ ರಾಮಲಕ್ಷ್ಮಣೌ ॥

ಅನುವಾದ

ಮಹಾಮನಾ ರಾಕ್ಷಸ ರಾಜಾ ರಾವಣನು ಯುದ್ಧದಲ್ಲಿ ರಾಮ-ಲಕ್ಷ್ಮಣರಿಬ್ಬರನ್ನೂ ಕೊಲ್ಲುವಂತೆ ನನಗೆ ಆಜ್ಞಾಪಿಸಿರುವನು.॥10॥

ಮೂಲಮ್ - 11

ಅದ್ಯ ರಾಮಂ ವಧಿಷ್ಯಾಮಿ ಲಕ್ಷ್ಮಣಂ ಚ ನಿಶಾಚರಾಃ ।
ಶಾಖಾಮೃಗಂ ಚ ಸುಗ್ರೀವಂ ವಾನರಾಂಶ್ಚ ಶರೋತ್ತಮೈಃ ॥

ಅನುವಾದ

ರಾಕ್ಷಸರೇ ಇಂದು ನಾನು ರಾಮ-ಲಕ್ಷ್ಮಣ, ವಾನರ ರಾಜ ಸುಗ್ರೀವ ಹಾಗೂ ಇತರ ವಾನರರನ್ನು ಉತ್ತಮ ಬಾಣಗಳಿಂದ ವಧಿಸಿಬಿಡುವೆನು.॥11॥

ಮೂಲಮ್ - 12

ಅದ್ಯ ಶೂಲನಿಪಾತೈಶ್ಚ ವಾನರಾಣಾಂ ಮಹಾಚಮೂಮ್ ।
ಪ್ರದಹಿಷ್ಯಾಮಿ ಸಂಪ್ರಾಪ್ತಾಂ ಶುಷ್ಕೇಂಧನಮಿವಾನಲಃ ॥

ಅನುವಾದ

ಬೆಂಕಿಯು ಒಣಗಿದ ಕಟ್ಟಿಗೆಯನ್ನು ಸುಡುವಂತೆ ಇಂದು ನಾನು ಶೂಲಗಳಿಂದ ಎದುರಿಗೆ ಬಂದ ವಾನರರ ವಿಶಾಲವಾಹಿನಿಯನ್ನು ಬೂದಿ ಮಾಡಿಬಿಡುವೆನು.॥12॥

ಮೂಲಮ್ - 13

ಮಕರಾಕ್ಷಸ್ಯ ತಚ್ಛ್ರುತ್ವಾ ವಚನಂ ತೇ ನಿಶಾಚರಾಃ ।
ಸರ್ವೇ ನಾನಾಯುಧೋಪೇತಾ ಬಲವಂತಃ ಸಮಾಹಿತಾಃ ॥

ಅನುವಾದ

ಮಕರಾಕ್ಷನ ಮಾತನ್ನು ಕೇಳಿ ನಾನಾ ರೀತಿಯ ಅಸ್ತ್ರ-ಶಸ್ತ್ರಗಳಿಂದ ಕೂಡಿದ ಸಮಸ್ತ ಬಲಿಷ್ಠ ರಾಕ್ಷಸರು ಯುದ್ಧಕ್ಕಾಗಿ ಸಿದ್ಧರಾದರು.॥13॥

ಮೂಲಮ್ - 14

ತೇ ಕಾಮರೂಪಿಣಃ ಕ್ರೂರಾ ದಂಷ್ಟ್ರಿಣಃ ಪಿಂಗಲೇಕ್ಷಣಾಃ ।
ಮಾತಂಗಾ ಇವ ನರ್ದಂತೋ ಧ್ವಸ್ತಕೇಶಾ ಭಯಾವಹಾಃ ॥

ಮೂಲಮ್ - 15

ಪರಿವಾರ್ಯ ಮಹಾಕಾಯಾ ಮಹಾಕಾಯಂ ಖರಾತ್ಮಜಮ್ ।
ಅಭಿಜಗ್ಮುಸ್ತತೋ ಹೃಷ್ಟಾಶ್ಚಾಲಯಂತೋ ವಸುಂಧರಾಮ್ ॥

ಅನುವಾದ

ಅವರೆಲ್ಲರೂ ಕಾಮ ರೂಪಿಯಾಗಿದ್ದು, ಕ್ರೂರಸ್ವಭಾವದವರಾಗಿದ್ದರು. ಅವರ ಕೊರೆದಾಡೆಗಳು ದೊಡ್ಡ ದೊಡ್ಡದಾಗಿದ್ದು, ಪಿಂಗಳವರ್ಣದ ಕಣ್ಣುಗಳಿದ್ದು, ಕೂದಲು ಕೆದರಿಕೊಂಡಿದ್ದವು, ಇದರಿಂದ ಅವರು ಭಯಾನಕರಾಗಿ ಕಾಣುತ್ತಿದ್ದರು. ಆನೆಯಂತೆ ಅರಚುತ್ತಾ ಆ ವಿಶಾಲಕಾಯ ನಿಶಾಚರರು ಖರಪುತ್ರ ಮಹಾಕಾಯ ಮಕರಾಕ್ಷನನ್ನು ಸುತ್ತುವರಿದು ಭೂಮಿಯನ್ನು ನಡುಗಿಸುತ್ತಾ ಹರ್ಷದಿಂದ ರಣರಂಗದ ಕಡೆಗೆ ಹೊರಟರು.॥14-15॥

ಮೂಲಮ್ - 16

ಶಂಖ ಭೇರೀ ಸಹಸ್ರಾಣಾಮಾಹತಾನಾಂ ಸಮಂತತಃ ।
ಕ್ಷ್ವೇಲಿತಾಸ್ಫೋಟಿತಾನಾಂ ಚ ತತ್ರ ಶಬ್ದೋ ಮಹಾನಭೂತ್ ॥

ಅನುವಾದ

ಆಗ ಎಲ್ಲೆಡೆ ಶಂಖಧ್ವನಿಗಳು ಮೊಳಗುತ್ತಿದ್ದವು. ಸಾವಿರಾರು ಭೇರಿ ನಿನಾದಗಳೊಂದಿಗೆ, ತಾಳತಟ್ಟುತ್ತಾ ಯೋಧರ ಗರ್ಜನೆಯ ಶಬ್ದವು ಸೇರಿಕೊಂಡಿತ್ತು. ಹೀಗೆ ಭಾರೀ ಕೋಲಾಹಲ ಉಂಟಾಯಿತು.॥1.॥

ಮೂಲಮ್ - 17

ಪ್ರಭ್ರಷ್ಟೋಽಥ ಕರಾತ್ತಸ್ಯ ಪ್ರತೋದಃ ಸಾರಥೇಸ್ತದಾ ।
ಪಪಾತ ಸಹಸಾ ದೈವಾದ್ ಧ್ವಜಸ್ತಸ್ಯ ತು ರಕ್ಷಸಃ ॥

ಅನುವಾದ

ಆಗ ಮಕರಾಕ್ಷಸನ ಸಾರಥಿಯ ಚಾವಟಿಗೆ ಕೆಳಗೆ ಬಿತ್ತು, ದೈವವಶ ಆ ರಾಕ್ಷಸನ ಧ್ವಜ ಮುರಿದು ಬಿದ್ದು ನೆಲಸಮವಾಯಿತು.॥17॥

ಮೂಲಮ್ - 18

ತಸ್ಯ ತೇ ರಥಸಂಯುಕ್ತಾ ಹಯಾ ವಿಕ್ರಮವರ್ಜಿತಾಃ ।
ಚರಣೈರಾಕುಲೈರ್ಗತ್ವಾ ದೀನಾಃ ಸಾಸ್ರಮುಖಾ ಯುಯುಃ ॥

ಅನುವಾದ

ಅವನ ರಥಕ್ಕೆ ಹೂಡಿದ ಕುದುರೆಗಳು ನಿರುತ್ಸಾಹಿಗಳಾಗಿ ಸರಿಯಾಗಿ ನಡೆಯದಾದವು. ಮೊದಲಿಗೆ ಸ್ವಲ್ಪ ದೂರ ಎಡವುತ್ತಾ ತಡುವುತ್ತಾ ನಡೆದು, ಮತ್ತೆ ಸರಿಯಾಗಿ ನಡೆಯತೊಡಗಿದವು. ಆದರೂ ಅವು ಬಹಳ ದುಃಖಿತರಾಗಿ ಕಣ್ಣೀರು ಹರಿಸುತ್ತಿದ್ದವು.॥18॥

ಮೂಲಮ್ - 19

ಪ್ರವಾತಿ ಪವನಸ್ತಸ್ಮಿನ್ ಪಪಾಂಸುಃ ಖರದಾರುಣಃ ।
ನಿರ್ಯಾಣೇ ತಸ್ಯ ರೌದ್ರಸ್ಯ ಮಕರಾಕ್ಷಸ್ಯ ದುರ್ಮತೇಃ ॥

ಅನುವಾದ

ದುಷ್ಟಬುದ್ಧಿಯುಳ್ಳ ಆ ಭಯಂಕರ ರಾಕ್ಷಸ ಮಕರಾಕ್ಷಸ ಪ್ರಯಾಣದ ಸಮಯ ಧೂಳು ತುಂಬಿದ ದಾರುಣ ಪ್ರಚಂಡ ಗಾಳಿ ಬೀಸುತ್ತಿತ್ತು.॥19॥

ಮೂಲಮ್ - 20

ತಾನಿ ದೃಷ್ಟ್ವಾ ನಿಮಿತ್ತಾನಿ ರಾಕ್ಷಸಾ ವೀರ್ಯವತ್ತಮಾಃ ।
ಅಚಿಂತ್ಯ ನಿರ್ಗತಾಃ ಸರ್ವೇ ಯತ್ರ ತೌ ರಾಮಲಕ್ಷ್ಮಣೌ ॥

ಅನುವಾದ

ಅವೆಲ್ಲ ಅಪಶಕುನಗಳು ನೋಡಿಯೂ ಮಹಾಬಲ ಶಾಲಿ ರಾಕ್ಷಸನು ಅದರ ಪರಿವೆ ಇಲ್ಲದೆ ಎಲ್ಲರೂ ಶ್ರೀರಾಮ-ಲಕ್ಷ್ಮಣರಿದ್ದಲ್ಲಿಗೆ ಹೋದರು.॥20॥

ಮೂಲಮ್ - 21

ಘನಗಜಮಹಿಷಾಂಗತುಲ್ಯವರ್ಣಾಃ
ಸಮರಮುಖೇಷ್ವಸಕೃದ್ಗದಾಸಿಭಿನ್ನಾಃ ।
ಅಹಮಹಮಿತಿ ಯುದ್ಧಕೌಶಲಾಸ್ತೇ
ರಜನಿಚರಾಃ ಪರಿಬಭ್ರಮುರ್ಮುಹುಸ್ತೇ ॥

ಅನುವಾದ

ಆ ರಾಕ್ಷಸರು ಮೋಡ, ಆನೆ, ಕೋಣದಂತೆ ಕಪ್ಪಾದ ಶರೀರದವರಾಗಿದ್ದರು. ಅವರು ಯುದ್ಧದಲ್ಲಿ ಅನೇಕ ಸಲ ಗದೆ-ಖಡ್ಗಗಳಿಂದ ಗಾಯಗೊಂಡಿದ್ದರು. ಅವರಲ್ಲಿ ಯುದ್ಧಕೌಶಲ್ಯ ತುಂಬಿತ್ತು. ಆ ನಿಶಾಚರರು ನಾನು ಮೊದಲು ಕಾಡುವೆ, ಮೊದಲು ಯುದ್ಧ ನಾನು ಮಾಡುವೆ ಎಂದು ಪದೇ ಪದೇ ಹೇಳುತ್ತಾ ಎಲ್ಲೆಡೆ ಸಂಚರಿಸತೊಡಗಿದರು.॥2.॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಪ್ಪತ್ತೆಂಟನೆಯ ಸರ್ಗ ಪೂರ್ಣವಾಯಿತು. ॥78॥