०६५ कुम्भकर्णेन महोदरनिन्दा

वाचनम्
ಭಾಗಸೂಚನಾ

ಕುಂಭಕರ್ಣನ ರಣಯಾತ್ರೆ

ಮೂಲಮ್ - 1

ಸ ತಥೋಕ್ತಸ್ತು ನಿರ್ಭರ್ತ್ಸ್ಯ ಕುಂಭಕರ್ಣೋ ಮಹೋದರಮ್ ।
ಅಬ್ರವೀದ್ರಾಕ್ಷಸಶ್ರೇಷ್ಠಂ ಭ್ರಾತರಂ ರಾವಣಂ ತತಃ ॥

ಅನುವಾದ

ಮಹೋದರನು ಹೀಗೆ ಹೇಳಿದಾಗ ಕುಂಭಕರ್ಣನು ಅವನನ್ನು ಗದರಿಸಿ, ರಾಕ್ಷಸಶ್ರೇಷ್ಠ ತನ್ನಣ್ಣ ರಾಮಣನಲ್ಲಿ ಹೇಳಿದನು.॥1॥

ಮೂಲಮ್ - 2

ಸೋಽಹಂ ತವ ಭಯಂ ಘೋರಂ ವಧಾತ್ತಸ್ಯ ದುರಾತ್ಮನಃ ।
ರಾಮಸ್ಯಾದ್ಯ ಪ್ರಮಾರ್ಜಾಮಿ ನಿರ್ವೈರೋ ಹಿ ಸುಖೀಭವ ॥

ಅನುವಾದ

ರಾಜನೇ! ಇಂದೇ ನಾನು ಆ ದುರಾತ್ಮಾ ರಾಮನನ್ನು ವಧಿಸಿ ನಿನ್ನ ಭಯವನ್ನು ದೂರಗೊಳಿಸುವೆನು. ನೀನು ವೈರಭಾವದಿಂದ ಮುಕ್ತನಾಗಿ ಸುಖವಾಗಿರು.॥2॥

ಮೂಲಮ್ - 3

ಗರ್ಜಂತಿ ನ ವೃಥಾ ಶೂರಾ ನಿರ್ಜಲಾ ಇವ ತೋಯದಾಃ ।
ಪಶ್ಯ ಸಂಪದ್ಯಮಾನಂ ತು ಗರ್ಜಿತಂ ಯುಧಿ ಕರ್ಮಣಾ ॥

ಅನುವಾದ

ಶೂರವೀರರು ನೀರಿಲ್ಲದ ಮೋಡಗಳಂತೆ ವ್ಯರ್ಥವಾಗಿ ಗರ್ಜಿಸುವುದಿಲ್ಲ. ಈಗ ಯುದ್ಧರಂಗದಲ್ಲಿ ನಾನು ನನ್ನ ಪರಾಕ್ರಮದಿಂದ ಗರ್ಜಿಸುವುದನ್ನು ನೀನು ನೋಡುವಿಯಂತೆ.॥3॥

ಮೂಲಮ್ - 4

ನ ಮರ್ಷಯಂತಿ ಚಾತ್ಮಾನಂ ಸಂಭಾವಯಿತುಮಾತ್ಮನಾ ।
ಅದರ್ಶಯಿತ್ವಾ ಶೂರಾಸ್ತು ಕರ್ಮ ಕುರ್ವಂತಿ ದುಷ್ಕರಮ್ ॥

ಅನುವಾದ

ಶೂರರಾದವರು ತಮ್ಮನ್ನು ಹೊಗಳಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಅವರು ಮಾತಿನಿಂದ ಪ್ರದರ್ಶಿಸದೆ ತಮ್ಮ ದುಷ್ಕರವಾದ ಪರಾಕ್ರಮವನ್ನು ಪ್ರಕಟಿಸುತ್ತಾರೆ.॥4॥

ಮೂಲಮ್ - 5

ವಿಕ್ಲವಾನಾಂ ಹ್ಯಬುದ್ಧೀನಾಂ ರಾಜ್ಞಾಂ ಪಂಡಿತಮಾನಿನಾಮ್ ।
ರೋಚತೇ ತ್ವದ್ವಚೋ ನಿತ್ಯಂ ಕಥ್ಯಮಾನಂ ಮಹೋದರ ॥

ಅನುವಾದ

ಮಹೋದರನೇ ! ಹೇಡಿ, ಮೂರ್ಖ, ಸುಳ್ಳುಸುಳ್ಳೇ ತಮ್ಮನ್ನು ಪಂಡಿತನೆಂದು ತಿಳಿಯುವ ರಾಜರಿಗೆ ಮಾತ್ರ ನೀನು ಹೇಳಿದ ಈ ನಯವಾದ ಮಾತು ರುಚಿಸೀತು.॥5॥

ಮೂಲಮ್ - 6

ಯುದ್ಧೇ ಕಾಪುರುಷೈರ್ನಿತ್ಯಂ ಭವದ್ಭಿಃ ಪ್ರಿಯವಾದಿಭಿಃ ।
ರಾಜಾನಮನುಗಚ್ಛದ್ಭಿಃ ಸರ್ವಂ ಕೃತ್ಯಂ ವಿನಾಶಿತಮ್ ॥

ಅನುವಾದ

ಯುದ್ಧದಲ್ಲಿ ಹೇಡಿಗಳಂತೆ ವರ್ತಿಸುವ ನಿನ್ನಂತಹ ಚಾಡಿಕೋರರೇ ರಾಜನ ಮಾತಿನಲ್ಲಿ ಸಹಮತರಾಗಿ ಎಲ್ಲ ಕಾರ್ಯ ಕೆಡಿಸಿಬಿಡುವರು.॥6॥

ಮೂಲಮ್ - 7

ರಾಜಶೇಷಾ ಕೃತಾ ಲಂಕಾ ಕ್ಷೀಣಃ ಕೋಶೋ ಬಲಂ ಹತಮ್ ।
ರಾಜಾನಮಿಮಮಾಸಾದ್ಯ ಸುಹೃಚ್ಚಿಹ್ನಮಮಿತ್ರಕಮ್ ॥

ಅನುವಾದ

ಈಗ ಲಂಕೆಯಲ್ಲಿ ಕೇವಲ ರಾಜನೇ ಉಳಿದಿರುವನು. ಭಂಡಾರ ಬರಿದಾಗಿದೆ, ಸೈನ್ಯ ಅಳಿದುಹೋಗಿದೆ. ಇಂತಹ ರಾಜನನ್ನು ಪಡೆದ ನೀವು ಮಿತ್ರರೂಪ ದಲ್ಲಿ ಶತ್ರುಗಳ ಕಾರ್ಯ ಮಾಡಿರುವಿರಿ.॥7॥

ಮೂಲಮ್ - 8

ಏಷ ನಿರ್ಯಾಮ್ಯಹಂ ಯುದ್ಧಮುದ್ಯತಃ ಶತ್ರುನಿರ್ಜಯೇ ।
ದುರ್ನಯಂ ಭವತಾಮದ್ಯ ಸಮೀಕರ್ತುಂ ಮಿಹಾಹವೇ ॥

ಅನುವಾದ

ನೋಡು, ನೀವು ಇದುವರೆಗೆ ಅನುಸರಿಸಿಕೊಂಡು ಬಂದ ದುರ್ನೀತಿ ಯನ್ನು ಸರಿಪಡಿಸಲೆಂದೇ ನಾನೀಗ ಶತ್ರುವನ್ನು ಜಯಿಸಲು ರಣರಂಗಕ್ಕೆ ಹೋಗುತ್ತಿದ್ದೇನೆ.॥8॥

ಮೂಲಮ್ - 9

ಏವಮುಕ್ತವತೋ ವಾಕ್ಯಂ ಕುಂಭಕರ್ಣಸ್ಯ ಧೀಮತಃ ।
ಪ್ರತ್ಯುವಾಚ ತತೋ ವಾಕ್ಯಂ ಪ್ರಹಸನ್ರಾಕ್ಷಸಾಧಿಪಃ ॥

ಅನುವಾದ

ಬುದ್ಧಿವಂತ ಕುಂಭಕರ್ಣನು ಹೀಗೆ ವೀರೋಚಿತ ಮಾತನ್ನು ಹೇಳಿದಾಗ ರಾಕ್ಷಸರಾಜ ರಾವಣನು ನಗುತ್ತಾ ಉತ್ತರಿಸಿದನು .॥9॥

ಮೂಲಮ್ - 10

ಮಹೋದರೋಽಯಂ ರಾಮಾತ್ತು ಪರಿತ್ರಸ್ತೋ ನ ಸಂಶಯಃ ।
ನ ಹಿ ರೋಚಯತೇ ತಾತ ಯುದ್ಧಂ ಯುದ್ಧವಿಶಾರದ ॥

ಅನುವಾದ

ಯುದ್ಧವಿಶಾರನೇ! ಈ ಮಹೋದರನು ರಾಮನಿಂದ ಬಹಳ ಹೆದರಿರುವನು, ಇದರಲ್ಲಿ ಸಂಶಯವೇ ಇಲ್ಲ. ಅದರಿಂದ ಅವನು ಈ ಯುದ್ಧವನ್ನು ಮೆಚ್ಚುವುದಿಲ್ಲ.॥10॥

ಮೂಲಮ್ - 11

ಕಶ್ಚಿನ್ಮೇ ತ್ವತ್ಸಮೋ ನಾಸ್ತಿ ಸೌಹೃದೇನ ಬಲೇನ ಚ ।
ಗಚ್ಛ ಶತ್ರುವಧಾಯ ತ್ವಂ ಕುಂಭಕರ್ಣ ಜಯಾಯ ಚ ॥

ಅನುವಾದ

ಕುಂಭಕರ್ಣನೇ! ನನ್ನ ಆತ್ಮೀಯ ಜನರಲ್ಲಿ ಸೌಹಾರ್ದ ಮತ್ತು ಬಲದ ದೃಷ್ಟಿಯಿಂದ ನಿನ್ನನ್ನು ಸರಿಗಟ್ಟುವವನು ಯಾರೂ ಇಲ್ಲ. ನೀನು ಶತ್ರುಗಳನ್ನು ವಧಿಸಿ, ವಿಜಯಪಡೆಯಲು ಯುದ್ಧಕ್ಕೆ ಹೋಗು.॥11॥

ಮೂಲಮ್ - 12

ಶಯಾನಃ ಶತ್ರುನಾಶಾರ್ಥಂ ಭವಾನ್ ಸಂಬೋಧಿತೋ ಮಯಾ ।
ಅಯಂ ಹಿ ಕಾಲಃ ಸುಮಹಾನ್ ರಾಕ್ಷಸಾನಾಮರಿಂದಮ ॥

ಅನುವಾದ

ಶತ್ರುದಮನ ವೀರನೇ! ನೀನು ಮಲಗಿದ್ದೆ. ನೀನು ಶತ್ರುಗಳನ್ನು ನಾಶಮಾಡಲೆಂದೇ ನಿನ್ನನ್ನು ನಾನೇ ಎಚ್ಚರಿಸಿದುದು. ರಾಕ್ಷಸರ ಯುದ್ಧಯಾತ್ರೆಗಾಗಿ ಇದೇ ಸರ್ವೋತ್ತಮ ಸಮಯವಾಗಿದೆ.॥12॥

ಮೂಲಮ್ - 13

ಸಂಗಚ್ಛ ಶೂಲಮಾದಾಯ ಪಾಶಹಸ್ತ ಇವಾಂತಕಃ ।
ವಾನರಾನ್ ರಾಜಪುತ್ರೌ ಚ ಭಕ್ಷಯಾದಿತ್ಯತೇಜಸೌ ॥

ಅನುವಾದ

ಪಾಶಹಸ್ತನಾಗಿ ಯಮರಾಜನಂತೆ ಶೂಲವನ್ನೆತ್ತಿಕೊಂಡು ನೀನು ಹೋಗು ಹಾಗೂ ಸೂರ್ಯಸದೃಶ ತೇಜಸ್ವೀ ಆ ಇಬ್ಬರೂ ರಾಜಕುಮಾರರನ್ನು ಮತ್ತು ವಾನರರನ್ನು ಕೊಂದು ತಿಂದುಬಿಡು.॥13॥

ಮೂಲಮ್ - 14

ಸಮಾಲೋಕ್ಯ ತು ತೇ ರೂಪಂ ವಿದ್ರವಿಷ್ಯಂತಿ ವಾನರಾಃ ।
ರಾಮಲಕ್ಷ್ಮಣಯೋಶ್ಚಾಪಿ ಹೃದಯೇ ಪ್ರಸ್ಫುಟಿಷ್ಯತಃ ॥

ಅನುವಾದ

ವಾನರರು ನಿನ್ನ ರೂಪ ನೋಡುತ್ತಲೇ ಓಡಿಹೋಗುವರು ಹಾಗೂ ರಾಮ-ಲಕ್ಷ್ಮಣರ ಹೃದಯ ಒಡೆದು ಹೋದೀತು.॥14॥

ಮೂಲಮ್ - 15

ಏವಮುಕ್ತ್ವಾ ಮಹಾತೇಜಾಃ ಕುಂಭಕರ್ಣಂ ಮಹಾಬಲಮ್ ।
ಪುನರ್ಜಾತಮಿವಾತ್ಮಾನಂ ಮೇನೇ ರಾಕ್ಷಸಪುಂಗವಃ ॥

ಅನುವಾದ

ಮಹಾಬಲಿ ಕುಂಭಕರ್ಣನಲ್ಲಿ ಹೀಗೆ ಹೇಳಿ ಮಹಾತೇಜಸ್ವೀ ರಾಕ್ಷಸರಾಜಾ ರಾವಣನು ತನಗೆ ಮರುಹುಟ್ಟು ಲಭಿಸಿತೆಂದೇ ತಿಳಿದನು.॥15॥

ಮೂಲಮ್ - 16

ಕುಂಭ ಕರ್ಣಬಲಾಭಿಜ್ಞೋ ಜಾನಂಸ್ತಸ್ಯ ಪರಾಕ್ರಮಮ್ ।
ಬಭೂವ ಮುದಿತೋ ರಾಜಾ ಶಶಾಂಕ ಇವ ನಿರ್ಮಲಃ ॥

ಅನುವಾದ

ರಾವಣನು ಕುಂಭಕರ್ಣನ ಬಲವನ್ನು ಚೆನ್ನಾಗಿ ತಿಳಿದಿದ್ದನು. ಅವನ ಪರಾಕ್ರಮದಿಂದಲೂ ಪೂರ್ಣಪರಿಚನಾಗಿದ್ದನು. ಅದಕ್ಕಾಗಿ ಅವನು ನಿರ್ಮಲಚಂದ್ರನಂತೆ ಪರಮಾಹ್ಲಾದಗೊಂಡನು.॥16॥

ಮೂಲಮ್ - 17

ಇತ್ಯೇವಮುಕ್ತಃ ಸಂಹೃಷ್ಟೋ ನಿರ್ಜಗಾಮ ಮಹಾಬಲಃ ।
ರಾಜ್ಞಸ್ತು ವಚನಂ ಶ್ರುತ್ವಾ ಯೋದ್ಧುಮುದ್ಯುಕ್ತವಾಂ ಸ್ತದಾ ॥

ಅನುವಾದ

ರಾವಣನು ಹೀಗೆ ಹೇಳಿದಾಗ ಮಹಾಬಲಿ ಕುಂಭಕರ್ಣನು ಪರಮಸಂತೋಷಗೊಂಡು ರಾವಣನ ಮಾತಿನಂತೆ ಆಗ ಯುದ್ಧಕ್ಕಾಗಿ ಸಿದ್ಧನಾಗಿ ಲಂಕೆಯಿಂದ ಹೊರಗೆ ಹೊರಟನು.॥17॥

ಮೂಲಮ್ - 18

ಆದದೇ ನಿಶಿತಂ ಶೂಲಂ ವೇಗಾಚ್ಛತ್ರುನಿಬರ್ಹಣಃ ।
ಸರ್ವಂಕಾಲಾಯಸಂ ದೀಪ್ತಂ ತಪ್ತ ಕಾಂಚನಭೂಷಣಮ್ ॥

ಅನುವಾದ

ಶತ್ರುಗಳನ್ನು ಸಂಹರಿಸು ಆ ವೀರನು ಪೂರ್ಣವಾಗಿ ಉಕ್ಕಿನಿಂದ ಮಾಡಿದ ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಿರುವ ತೀಕ್ಷ್ಣವಾದ ತ್ರಿಶೂಲವನ್ನು ಧರಿಸಿದ್ದನು.॥18॥

ಮೂಲಮ್ - 19

ಇಂದ್ರಾಶನಿಸಮಪ್ರಖ್ಯಂ ವಜ್ರಪ್ರತಿಮಗೌರವಮ್ ।
ದೇವದಾನವಗಂಧರ್ವ ಯಕ್ಷಪನ್ನಗಸೂದನಮ್ ॥

ಅನುವಾದ

ಅದರ ಕಾಂತಿಯು ಇಂದ್ರನ ವಜ್ರದಂತೆ ಇತ್ತು. ಅದು ವಜ್ರಾಯುಧದಂತೆ ಇದ್ದು, ದೇವತೆ, ದಾನವರು, ಗಂಧರ್ವ, ಯಕ್ಷ, ನಾಗ ಇವರನ್ನು ಸಂಹರಿಸುವಂತಹುದಾಗಿತ್ತು.॥19॥

ಮೂಲಮ್ - 20

ರಕ್ತಮಾಲ್ಯಮಹಾದಾಮಂ ಸ್ವತಶ್ಚೋದ್ ಗತಪಾವಕಮ್ ।
ಆದಾಯ ವಿಪುಲಂ ಶೂಲಂ ಶತ್ರುಶೋಣಿತ ರಂಜಿತಮ್ ॥

ಮೂಲಮ್ - 21

ಕುಂಭಕರ್ಣೋ ಮಹಾತೇಜಾ ರಾವಣಂ ವಾಕ್ಯಮಬ್ರವೀತ್ ।
ಗಮಿಷ್ಯಾಮ್ಯಹಮೇಕಾಕೀ ತಿಷ್ಠತ್ವಿಹ ಬಲಂ ಮಮ ॥

ಅನುವಾದ

ಅದರಲ್ಲಿ ಕೆಂಪಾದ ದೊಡ್ಡ ಹೂವಿನಮಾಲೆ ನೇತಾಡುತ್ತಿತ್ತು. ಅದರಿಂದ ಬೆಂಕಿಯ ಕಿಡಿಗಳು ಸಿಡಿಯುತ್ತಿದ್ದವು. ಶತ್ರುಗಳ ರಕ್ತದಿಂದ ಬಣ್ಣಗೊಂಡ ಆ ವಿಶಾಲಶೂಲವನ್ನು ಕೈಗೆತ್ತಿಕೊಂಡು ಮಹಾತೇಜಸ್ವೀ ಕುಂಭಕರ್ಣನು ರಾವಣನಲ್ಲಿ ಹೇಳಿದನು - ‘ನಾನೊಬ್ಬನೇ ಯುದ್ಧಕ್ಕೆ ಹೋಗುವೆ. ನಮ್ಮ ಸೈನ್ಯ ಇಲ್ಲೇ ಇರಲಿ’.॥20-21॥

ಮೂಲಮ್ - 22

ಅದ್ಯ ತಾನ್ ಕ್ಷುಧಿತಃಕ್ರುದ್ದೋ ಭಕ್ಷ್ಯಯಿಷ್ಯಾಮಿ ವಾನರಾನ್ ।
ಕುಂಭಕರ್ಣವಚಃ ಶ್ರುತ್ವಾ ರಾವಣೋ ವಾಕ್ಯಮಬ್ರವೀತ್ ॥

ಅನುವಾದ

ಇಂದು ನಾನು ಹಸಿದಿದ್ದೇನೆ, ನನ್ನ ಕ್ರೋಧವು ಮಿತಿಮೀರಿದೆ. ಅದಕ್ಕಾಗಿ ಸಮಸ್ತ ವಾನರರನ್ನು ಭಕ್ಷಿಸಿ ಬಿಡುವೆನು. ಕುಂಭಕರ್ಣನ ಮಾತನ್ನು ಕೇಳಿ ರಾವಣನು ಹೇಳಿದನು.॥22॥

ಮೂಲಮ್ - 23

ಸೈನ್ಯೈಃಪರಿವೃತೋ ಗಚ್ಛ ಶೂಲಮುದ್ಗರ ಪಾಣಿಭಿಃ ।
ವಾನರಾ ಹಿ ಮಹಾತ್ಮಾನಃ ಶೂರಾಃ ಸುವ್ಯವಸಾಯಿನಃ ॥

ಮೂಲಮ್ - 24

ಏಕಾಕಿನಂ ಪ್ರಮತ್ತಂ ವಾ ನಯೇಯುರ್ದಶನೈಃ ಕ್ಷಯಮ್ ।
ತಸ್ಮಾತ್ಪರಮದುರ್ಧರ್ಷಃ ಸೈನ್ಯೈಃ ಪರಿವೃತೋ ವ್ರಜ ।
ರಕ್ಷಸಾಮಹಿತಂ ಸರ್ವಂ ಶತ್ರುಪಕ್ಷಂ ನಿಷೂದಯ ॥

ಅನುವಾದ

ಕುಂಭಕರ್ಣನೇ! ನೀನು ಕೈಗಳಲ್ಲಿ ಶೂಲ, ಮುದ್ಗರಗಳನ್ನು ಧರಿಸಿದ ಸೈನಿಕರಿಂದ ಸುತ್ತುವರೆದು ಯುದ್ಧಕ್ಕೆ ಹೋಗು; ಏಕೆಂದರೆ ಮಹಾಮನಸ್ವೀ ವಾನರರು ಭಾರೀ ವೀರರೂ ಹಾಗೂ ಅತ್ಯಂತ ಉದ್ಯೋಗಿ ಆಗಿದ್ದಾರೆ. ಅವರು ಒಬ್ಬಂಟಿಗನಾದ ಅಥವಾ ಪ್ರಮತ್ತಾನಾದ ನಿನ್ನನ್ನು ಹಲ್ಲುಗಳಿಂದಲೇ ಕಚ್ಚಿಕಚ್ಚಿ ಕೊಂದುಹಾಕುವರು. ಅದಕ್ಕಾಗಿ ಸೈನ್ಯದೊಂದಿಗೆ ಸುರಕ್ಷಿತನಾಗಿ ಹೋಗು. ಆಗ ನಿನ್ನನ್ನು ಗೆಲ್ಲುವುದು ಶತ್ರುಗಳಿಗೆ ಕಷ್ಟವಾಗಬಹುದು. ನೀನು ರಾಕ್ಷಸರ ಅಹಿತ ಮಾಡುವ ಸಮಸ್ತ ಶತ್ರುಗಳನ್ನು ಸಂಹರಿಸು.॥23-24॥

ಮೂಲಮ್ - 25

ಅಥಾಸನಾತ್ ಸಮುತ್ಪತ್ಯ ಸ್ರಜಂ ಮಣಿಕೃತಾಂತರಾಮ್ ।
ಆಬಬಂಧ ಮಹಾತೇಜಾಃ ಕುಂಭಕರ್ಣಸ್ಯ ರಾವಣಃ ॥

ಅನುವಾದ

ಹೀಗೆ ಹೇಳಿ ಮಹಾತೇಜಸ್ವೀ ರಾವಣನು ಆಸನದಿಂದ ಎದ್ದು ಮಣಿಗಳನ್ನು ಪೋಣಿಸಿದ ಒಂದು ಸ್ವರ್ಣಮಾಲಿಕೆಯನ್ನು ಕುಂಭಕರ್ಣ ಕೊರಳಿಗೆ ತೊಡಿಸಿದನು.॥25॥

ಮೂಲಮ್ - 26

ಅಂಗದಾನ್ಯಂಗುಲೀವೇಷ್ಟಾನ್ ವರಾಣ್ಯಾಭರಣಾನಿ ಚ ।
ಹಾರಂ ಚ ಶಶಿಸಂಕಾಶಮಾಬಬಂಧ ಮಹಾತ್ಮನಃ ॥

ಅನುವಾದ

ತೋಳ್ಬಂದಿ, ಉಂಗುರಗಳು, ಒಳ್ಳೊಳ್ಳೆಯ ಒಡವೆಗಳನ್ನು, ಚಂದ್ರನಂತೆ ಹೊಳೆಯುವ ಹಾರವನ್ನು ಮಹಾಕಾಯ ಕುಂಭಕರ್ಣನ ಅಂಗಗಳಲ್ಲಿ ತೊಡಿಸಿದನು.॥26॥

ಮೂಲಮ್ - 27

ದಿವ್ಯಾನಿ ಚ ಸುಗಂಧೀನಿ ಮಾಲ್ಯದಾಮಾನಿ ರಾವಣಃ ।
ಗಾತ್ರೇಷು ಸಜ್ಜಯಾಮಾಸ ಶ್ರೋತ್ರಯೋಶ್ಚಾಸ್ಯ ಕುಂಡಲೇ ॥

ಅನುವಾದ

ಅಷ್ಟೇ ಅಲ್ಲ, ರಾವಣನು ಅವನ ವಿಭಿನ್ನ ಅವಯವಗಳಲ್ಲಿ ಸುಗಂಧಿತ ಹೂವುಗಳನ್ನು ಮಾಲೆಗಳನ್ನು ಮತ್ತು ಕಿವಿಗಳಲ್ಲಿ ಕುಂಡಲಗಳನ್ನು ತೊಡಿಸಿದನು.॥27॥

ಮೂಲಮ್ - 28

ಕಾಂಚನಾಂಗದಕೇಯೂರನಿಷ್ಕಾಭರಣಭೂಷಿತಃ ।
ಕುಂಭಕರ್ಣೋ ಬೃಹತ್ಕರ್ಣಃ ಸುಹುತೋಽಗ್ನಿರಿವಾಬಭೌ ॥

ಅನುವಾದ

ಸ್ವರ್ಣ ಕೇಯೂರ, ಅಂಗದ, ಪದಕ ಮುಂತಾದ ಆಭೂಷಣಗಳಿಂದ ಅಲಂಕರಿಸಿ, ಗಡಿಗೆಯಂತೆ ಕಿವಿಗಳುಳ್ಳ ಕುಂಭಕರ್ಣನು ತುಪ್ಪ ಸುರಿದ ಅಗ್ನಿಯಂತೆ ಪ್ರಜ್ವಲಿತನಾದನು.॥28॥

ಮೂಲಮ್ - 29

ಶ್ರೋಣೀಸೂತ್ರೇಣ ಮಹತಾ ಮೇಚಕೇನ ವ್ಯರಾಜತ ।
ಅಮೃತೋತ್ಪಾದನೇ ನದ್ಧೋ ಭುಜಂಗೇನೇವ ಮಂದರಃ ॥

ಅನುವಾದ

ಅವನ ಸೊಂಟದಲ್ಲಿ ಕಪ್ಪಾದ ಒಂದು ಉಡಿದಾರವಿತ್ತು. ಅದರಿಂದ ಅವನು ಸಮುದ್ರಮಂಥನದ ಸಮಯ ನಾಗರಾಜ ವಾಸುಕಿಯು ಸುತ್ತಿಕೊಂಡ ಮಂದರಾಚಲದಂತೆ ಶೋಭಿಸುತ್ತಿದ್ದನು.॥29॥

ಮೂಲಮ್ - 30

ಸ ಕಾಂಚನಂ ಭಾರಸಹಂ ನಿವಾತಂ
ವಿದ್ಯುತ್ಪ್ರಭಂ ದೀಪ್ತಮಿವಾತ್ಮಭಾಸಾ ।
ಆವಧ್ಯಮಾನಃ ಕವಚಂ ರರಾಜ
ಸಂಧ್ಯಾಭ್ರಸಂವೀತ ಇವಾದ್ರಿರಾಜಃ ॥

ಅನುವಾದ

ಅನಂತರ ಕುಂಭಕರ್ಣನ ಎದೆಗೆ ಸ್ವರ್ಣಕವಚ ಕಟ್ಟಲಾಯಿತು. ಅದು ಭಾರೀ ಆಘಾತ ಸಹಿಸಲು ಸಮರ್ಥವಾಗಿತ್ತು, ಅಸ್ತ್ರ-ಶಸ್ತ್ರಗಳಿಗೆ ಅಭೇದ್ಯವಾಗಿದ್ದು, ವಿದ್ಯುತ್ತಿನಂತೆ ಹೊಳೆಯುತ್ತಿತ್ತು. ಅದನ್ನು ಧರಿಸಿದ ಕುಂಭಕರ್ಣನು ಸಂಜೆಯ ಕೆಂಪಾದ ಮೋಡಗಳಿಂದ ಕೂಡಿದ ಗಿರಿರಾಜ ಅಸ್ತಾಚಲದಂತೆ ಶೋಭಿಸಿದನು.॥30॥

ಮೂಲಮ್ - 31

ಸರ್ವಾಭರಣಸರ್ವಾಂಗಃ ಶೂಲಪಾಣಿಃ ಸ ರಾಕ್ಷಸಃ ।
ತ್ರಿವಿಕ್ರಮಕೃತೋತ್ಸಾಹೋ ನಾರಾಯಣ ಇವಾಬಭೌ ॥

ಅನುವಾದ

ಎಲ್ಲ ಶರೀರದಲ್ಲಿ ಆವಶ್ಯಕ ಆಭರಣಗಳನ್ನು ಧರಿಸಿ, ಕೈಯಲ್ಲಿ ಶೂಲಹಿಡಿದು ಕುಂಭಕರ್ಣನು ಮುಂದುವರಿದಾಗ ತ್ರಿಲೋಕಗಳನ್ನು ಅಳೆಯಲು ಉತ್ಸಾಹಿತನಾದ ವಾಮನನಂತೆ ಕಂಡುಬರುತ್ತಿದ್ದನು.॥31॥

ಮೂಲಮ್ - 32

ಭ್ರಾತರಂ ಸಂಪರಿಷ್ವಜ್ಯ ಕೃತ್ವಾಚಾಪಿ ಪ್ರದಕ್ಷಿಣಮ್ ।
ಪ್ರಣಮ್ಯ ಶಿರಸಾ ತಸ್ಮೈ ಪ್ರತಸ್ಥೇ ಸ ಮಹಾಬಲಃ ॥

ಅನುವಾದ

ಅಣ್ಣನನ್ನು ಬಿಗಿದಪ್ಪಿ, ಅವನಿಗೆ ಪ್ರದಕ್ಷಿಣೆ ಬಂದು, ಆ ಮಹಾಬಲಿ ವೀರನು ತಲೆಬಾಗಿ ವಂದಿಸಿ, ಯುದ್ಧಕ್ಕಾಗಿ ಹೊರಟನು.॥32॥

ಮೂಲಮ್ - 33

ತಮಾಶೀರ್ಭಿಃ ಪ್ರಶಸ್ತಾಭಿಃ ಪ್ರೇಷಯಾಮಾಸ ರಾವಣಃ ।
ಶಂಖದುಂದುಭಿನಿರ್ಘೋಷೈಃ ಸೈನ್ಯೈಶ್ಚಾಪಿ ವರಾಯುಧೈಃ ॥

ಅನುವಾದ

ಆ ರಾವಣನು ಉತ್ತಮ ಆಶೀರ್ವಾದ ಕೊಟ್ಟು ಶ್ರೇಷ್ಠ ಆಯುಧಗಳಿಂದ ಸುಸಜ್ಜಿತ ಸೈನ್ಯದೊಂದಿಗೆ ಅವನನ್ನು ಯುದ್ಧಕ್ಕಾಗಿ ಬೀಳ್ಕೊಟ್ಟನು. ಆಗ ಶಂಖ, ದುಂದುಭಿಗಳು ಮೊಳಗಿದವು.॥33॥

ಮೂಲಮ್ - 34

ತಂ ಗಜೈಶ್ಚ ತುರಂಗೈಶ್ಚ ಸ್ಯಂದನೈಶ್ಚಾಂಬುದಸ್ವನೈಃ ।
ಅನುಜಗ್ಮುರ್ಮಹಾತ್ಮಾನೋ ರಥಿನೋ ರಥಿನಾಂ ವರಮ್ ॥

ಅನುವಾದ

ಆನೆ, ಕುದುರೆ ಗಳಮೇಲೆ, ಮೇಘಗರ್ಜನೆಯಂತೆ ಸದ್ದುಮಾಡುವ ರಥಗಳ ಮೇಲೆ ಹತ್ತಿ, ಅನೇಕಾನೇಕ ಮಹಾಮನಸ್ವೀ ವೀರರಥಿಗಳು, ರಥಿಗಳಲ್ಲಿ ಶ್ರೇಷ್ಠ ಕುಂಭಕರ್ಣನ ಜೊತೆಗೆ ಹೊರಟನು.॥34॥

ಮೂಲಮ್ - 35

ಸರ್ಪೈರುಷ್ಟ್ರೈಃ ಖರೈರಶ್ಚೈವ ಸಿಂಹದ್ವಿಪಮೃಗದ್ವಿಜೈಃ ।
ಅನುಜಗ್ಮುಶ್ಚ ತಂ ಘೋರಂ ಕುಂಭಕರ್ಣಂ ಮಹಾಬಲಮ್ ॥

ಅನುವಾದ

ಎಷ್ಟೋ ರಾಕ್ಷಸರು ಹಾವು, ಒಂಟೆ, ಕತ್ತೆ, ಸಿಂಹ, ಆನೆ, ಜಿಂಕೆ ಮತ್ತು ಪಕ್ಷಿಗಳ ಮೇಲೆ ಹತ್ತಿ ಆ ಭಯಂಕರ ಮಹಾಬಲಿ ಕುಂಭಕರ್ಣನ ಹಿಂದೆ ಹಿಂದೆ ನಡೆದರು.॥35॥

ಮೂಲಮ್ - 36

ಸ ಪುಷ್ಪವರ್ಷೈರವಕೀರ್ಯಮಾಣೋ
ಧೃತಾತಪತ್ರಃ ಶಿತಶೂಲಪಾಣಿಃ ।
ಮುದೋತ್ಕಟಃ ಶೋಣಿತಗಂಧ ಮತ್ತೋ
ವಿನಿರ್ಯಯೌ ದಾನವದೇವಶತ್ರುಃ ॥

ಅನುವಾದ

ಆಗ ಅವನ ಮೇಲೆ ಹೂವಿನ ಮಳೆಗರೆಯುತ್ತಿದ್ದರು. ತಲೆಯ ಮೇಲೆ ಶ್ವೇತಚ್ಛತ್ರ ಹಿಡಿದಿತ್ತು. ಕೈಯಲ್ಲಿ ತೀಕ್ಷ್ಣವಾದ ತ್ರಿಶೂಲವನ್ನು ಧರಿಸಿದ್ದದನು. ಹೀಗೆ ದೇವ-ದಾನವರ ಶತ್ರು ಹಾಗೂ ರಕ್ತದ ಗಂಧದಿಂದ ಉನ್ಮತ್ತನಾದ ಕುಂಭಕರ್ಣನು ಸ್ವಾಭಾವಿಕ ಮದದಿಂದ ಉನ್ಮತ್ತನಾಗಿ ಯುದ್ಧಕ್ಕಾಗಿ ಹೊರಟನು.॥36॥

ಮೂಲಮ್ - 37

ಪದಾತಯಶ್ಚ ಬಹವೋ ಮಹಾನಾದಾ ಮಹಾಬಲಾಃ ।
ಅನ್ವಯೂ ರಾಕ್ಷಸಾ ಭೀಮಾ ಭೀಮಾಕ್ಷಾಃ ಶಸ್ತ್ರಪಾಣಯಃ ॥

ಅನುವಾದ

ಅವನೊಂದಿಗೆ ಬಲಿಷ್ಠವಾಗಿ ಜೋರಾಗಿ ಗರ್ಜಿಸುತ್ತಿರುವ, ಭೀಷಣ ಕಣ್ಣುಗಳುಳ್ಳ, ಭಯಾನಕ ರೂಪವುಳ್ಳ ಅನೇಕ ಕಾಲಾಳು ರಾಕ್ಷಸರು ಕೈಗಳಲ್ಲಿ ನಾನಾ ಪ್ರಕಾರದ ಅಸ್ತ್ರ-ಶಸ್ತ್ರ ಹಿಡಿದು ಹೊರಟರು.॥37॥

ಮೂಲಮ್ - 38

ರಕ್ತಾಕ್ಷಾಃ ಸುಬಹುವ್ಯಾಮಾ ನೀಲಾಂಜನಚಯೋಪಮಾಃ ।
ಶೂಲಾನುದ್ಯಮ್ಯ ಖಡ್ಗಾಂಶ್ಚ ನಿಶಿತಾಂಶ್ಚ ಪರಶ್ವಧಾನ್ ॥

ಮೂಲಮ್ - 39

ಭಿಂದಿಪಾಲಾಂಶ್ಚ ಪರಿಘಾನ್ ಗದಾಶ್ಚ ಮುಸಲಾನಿ ಚ ।
ತಾಲಸ್ಕಂಧಾಶ್ಚ ವಿಪುಲಾನ್ಕ್ಷೇಪಣೀಯಾನ್ ದುರಾಸದಾನ್ ॥

ಅನುವಾದ

ಅವರೆಲ್ಲರ ಕಣ್ಣುಗಳು ಕೋಪದಿಂದ ಕೆಂಪಾಗಿದ್ದವು. ಅನೇಕ ಮಾರುಗಳಷ್ಟು ಎತ್ತರ ವಾಗಿದ್ದು, ಕಾಡಿಗೆಯ ರಾಶಿಯಂತೆ ಕಾಣುತ್ತಿದ್ದರು. ಅವರು ತಮ್ಮ ಕೈಗಳಲ್ಲಿ ಶೂಲ, ಖಡ್ಗ, ಹರಿತವಾದ ಗಂಡು ಕೊಡಲಿ, ಭಿಂದಿಪಾಲ, ಪರಿಘ, ಗದೆ, ಮುಸಲ, ದೊಡ್ಡ ದೊಡ್ಡ ತಾಳೆ ಮರದ ರೆಂಬೆಗಳು ಹಾಗೂ ಯಾರಿಂದಲೂ ಕತ್ತರಿಸಲಾಗದ ಆಯುಧಗಳನ್ನು ಎತ್ತಿಕೊಂಡು ಹೋಗುತ್ತಿದ್ದರು.॥38-39॥

ಮೂಲಮ್ - 40

ಅಥಾನ್ಯದ್ವ ಪುರಾದಾಯ ದಾರುಣಂ ಘೋರದರ್ಶನಮ್ ।
ನಿಷ್ಪಪಾತ ಮಹಾತೇಜಾಃ ಕುಂಭಕರ್ಣೋ ಮಹಾಬಲಃ ॥

ಅನುವಾದ

ಅನಂತರ ಮಹಾತೇಜಸ್ವೀ ಮಹಾಬಲಿ ಕುಂಭಕರ್ಣನು ನೋಡಿದರೆ ಭಯಗೊಳ್ಳುವಂತಹ ಉಗ್ರರೂಪವನ್ನು ಧರಿಸಿದನು. ಇಂತಹ ರೂಪಧರಿಸಿ ಅವನು ಯುದ್ಧಕ್ಕಾಗಿ ಹೊರಟನು.॥40॥

ಮೂಲಮ್ - 41

ಧನುಃಶತಪರೀಣಾಹಃ ಸ ಷಟ್ಶತಸಮುಚ್ಛ್ರಿತಃ ।
ರೌದ್ರಃ ಶಕಟಚಕ್ರಾಕ್ಷೋ ಮಹಾಪರ್ವತ ಸಂನಿಭಃ ॥

ಅನುವಾದ

ಆಗ ಅವನು ಆರೂ ನೂರು ಧನುಸ್ಸಿನಷ್ಟು ಅಗಲ ಮತ್ತು ನೂರು ಧನುಸ್ಸಿನಷ್ಟು ಎತ್ತರವಾದನು. ಅವನ ಕಣ್ಣುಗಳು ಗಾಡಿಯ ಚಕ್ರದಂತೆ ಅನಿಸುತ್ತಿತ್ತು. ಅವನು ವಿಶಾಲ ಪರ್ವತದಂತೆ ಭಯಂಕರವಾಗಿ ಕಾಣುತ್ತಿದ್ದನು.॥41॥

ಮೂಲಮ್ - 42

ಸಂನಿಪರ್ತ್ಯ ಚ ರಕ್ಷಾಂಸಿ ದಗ್ಧ ಶೈಲೋಪಮೋ ಮಹಾನ್ ।
ಕುಂಭಕರ್ಣೋ ಮಹಾವಕ್ತ್ರಃ ಪ್ರಹಸನ್ನಿದಮಬ್ರವೀತ್ ॥

ಅನುವಾದ

ಮೊದಲಿಗೆ ಅವನು ರಾಕ್ಷಸ ಸೈನ್ಯದ ವ್ಯೂಹ ರಚಿಸಿ, ದಾವಾನಲದಿಂದ ಸುಟ್ಟ ಪರ್ವತದಂತಹ ಮಹಾಕಾಯ ಕುಂಭಕರ್ಣನು ತನ್ನ ವಿಶಾಲ ಬಾಯಿ ತೆರೆದು ಅಟ್ಟಹಾಸ ಮಾಡುತ್ತಾ ನುಡಿದನು .॥42॥

ಮೂಲಮ್ - 43

ಅದ್ಯ ವಾನರಮುಖ್ಯಾನಾಂ ತಾನಿ ಯೂಥಾನಿ ಭಾಗಶಃ ।
ನಿರ್ದಹಿಷ್ಯಾಮಿ ಸಂಕ್ರುದ್ಧಃ ಪತಂಗಾನಿವ ಪಾವಕಃ ॥

ಅನುವಾದ

ರಾಕ್ಷಸರೇ! ಬೆಂಕಿಯು ಪತಂಗಗಳನ್ನು ಸುಡುವಂತೆ ನಾನೂ ಕುಪಿತನಾಗಿ ಇಂದು ಮುಖ್ಯ ಮುಖ್ಯ ವಾನರರ ಒಂದೊಂದು ಪಂಗಡವನ್ನು ಭಸ್ಮಮಾಡಿ ಬಿಡುವೆ.॥43॥

ಮೂಲಮ್ - 44

ನಾಪರಾಧ್ಯಂತಿ ಮೇ ಕಾಮಂ ವಾನರಾ ವನಚಾರಿಣಃ ।
ಜಾತಿರಸ್ಮದ್ವಿಧಾನಾಂ ಸಾ ಪುರೋದ್ಯಾನ ವಿಭೂಷಣಮ್ ॥

ಅನುವಾದ

ಕಾಡಾಡಿಗಳಾದ ವಾನರರು ಸ್ವೇಚ್ಛೆಯಿಂದ ನನಗೆ ಯಾವ ಅಪರಾಧವನ್ನು ಮಾಡಿಲ್ಲ. ಅವರು ವಧೆಗೆ ಯೋಗ್ಯರಲ್ಲ. ವಾನರ ಜಾತಿಯು ನಮ್ಮ ನಗರೋದ್ಯಾನದ ಆಭೂಷಣವಾಗಿದೆ.॥44॥

ಮೂಲಮ್ - 45

ಪುರರೋಧಸ್ಯ ಮೂಲಂ ತು ರಾಘವಃ ಸಹಲಕ್ಷ್ಮಣಃ ।
ಹತೇ ತಸ್ಮಿನ್ಹತಂ ಸರ್ವಂ ತಂ ವಧಿಷ್ಯಾಮಿ ಸಂಯುಗೇ ॥

ಅನುವಾದ

ವಾಸ್ತವದಲ್ಲಿ ಲಂಕೆಯನ್ನು ಆಕ್ರಮಿಸಿದ ಪ್ರಧಾನ ಕಾರಣ ಲಕ್ಷ್ಮಣ ಸಹಿತ ರಾಮನೇ ಆಗಿದ್ದಾನೆ. ಆದ್ದರಿಂದ ಮೊಟ್ಟಮೊದಲಿಗೆ ನಾನು ಅವನನ್ನೇ ಯುದ್ಧದಲ್ಲಿ ಕೊಲ್ಲುವೆನು. ಅವನು ಮಡಿದರೆ ಎಲ್ಲ ವಾನರ ಸೈನ್ಯ ಸತ್ತಂತೆ ಆಗುವುದು.॥45॥

ಮೂಲಮ್ - 46

ಏವಂ ತಸ್ಯ ಬ್ರುವಾಣಸ್ಯ ಕುಂಭಕರ್ಣಸ್ಯ ರಾಕ್ಷಸಾಃ ।
ನಾದಂ ಚಕ್ರುರ್ಮಹಾಘೋರಂ ಕಂಪಯಂತ ಇವಾರ್ಣವಮ್ ॥

ಅನುವಾದ

ಕುಂಭಕರ್ಣನು ಹೀಗೆ ಹೇಳಿದಾಗ ರಾಕ್ಷಸರು ಸಮುದ್ರವನ್ನೇ ಕಂಪಿತಗೊಳಿಸುವಂತಹ ಭಯಾನಕ ಗರ್ಜನೆ ಮಾಡಿದರು.॥46॥

ಮೂಲಮ್ - 47

ತಸ್ಯ ನಿಷ್ಪತತಸ್ತೂರ್ಣಂ ಕುಂಭಕರ್ಣಸ್ಯ ಧೀಮತಃ ।
ಬಭೂವುರ್ಘೋರರೂಪಾಣಿ ನಿಮಿತ್ತಾನಿ ಸಮಂತತಃ ॥

ಅನುವಾದ

ಬುದ್ಧಿವಂತ ರಾಕ್ಷಸ ಕುಂಭಕರ್ಣನು ರಣಭೂಮಿಯ ಕಡೆಗೆ ಹೊರಟಾಗ ಎಲ್ಲೆಡೆ ಘೋರ ಅಪಶಕುನಗಳಾಗತೊಡಗಿದವು.॥47॥

ಮೂಲಮ್ - 48

ಉಲ್ಕಾಶನಿಯುತಾ ಮೇಘಾ ಬಭೂವುರ್ಗರ್ದಭಾರುಣಾಃ ।
ಸಸಾಗರವನಾ ಚೈವ ವಸುಧಾ ಸಮಕಂಪತ ॥

ಅನುವಾದ

ಕತ್ತೆಯ ಬಣ್ಣದಂತೆ ಬೂದು ಬೂದು ಮೇಘಗಳು ಕಾಣಿಸಿಕೊಂಡವು. ಜೊತೆಗೆ ಉಲ್ಕಾಪಾತವಾಗಿ, ಸಿಡಿಲು ಬೀಳತೊಡಗಿತು. ಸಮುದ್ರ ಮತ್ತು ವನಗಳ ಸಹಿತ ಪೃಥಿವಿಯು ನಡುಗತೊಡಗಿತು.॥48॥

ಮೂಲಮ್ - 49

ಘೋರರೂಪಾಃ ಶಿವಾ ನೇದುಃ ಸಜ್ಜಾಲಕವಲೈರ್ಮುಖೈಃ ।
ಮಂಡಲಾನ್ಯಪಸವ್ಯಾನಿ ಬಬಂಧುಶ್ಚ ವಿಹಂಗಮಾಃ ॥

ಅನುವಾದ

ಭಯಾನಕ ಗುಳ್ಳೆನರಿಗಳು ಬೆಂಕಿಯನ್ನು ಉಗುಳುತ್ತಾ, ಅಮಂಗಳ ದನಿಯಿಂದ ಕೂಗುತ್ತಿದ್ದವು. ಪಕ್ಷಿಗಳು ಕುಂಭಕರ್ಣನನ್ನು ಅಪ್ರದಕ್ಷಿಣೆಯಾಗಿ ಮಂಡಲಾಕಾರ ಸುತ್ತತೊಡಗಿದವು.॥49॥

ಮೂಲಮ್ - 50

ನಿಷ್ಪಪಾತ ಚ ಗೃಧ್ರೊಽಸ್ಯ ಶೂಲೈ ವೈ ಪಥಿ ಗಚ್ಛತಃ ।
ಪ್ರಾಸ್ಫುರನ್ನಯನಂ ಚಾಸ್ಯ ಸವ್ಯೋ ಬಾಹುರಕಂಪತ ॥

ಅನುವಾದ

ದಾರಿಯಲ್ಲಿ ಹೋಗುವಾಗ ಕುಂಭಕರ್ಣನ ಶೂಲದ ಮೇಲೆ ರಣಹದ್ದು ಬಂದು ಕುಳಿತುಕೊಂಡಿತು. ಅವನ ಎಡಕಣ್ಣು ಮತ್ತು ಎಡಭುಜ ಅದುರತೊಡಗಿತು.॥50॥

ಮೂಲಮ್ - 51

ನಿಷ್ಪಪಾತ ತದಾ ಚೋಲ್ಕಾ ಜ್ವಲಂತೀ ಭೀಮನಿಃಸ್ವನಾ ।
ಆದಿತ್ಯೋ ನಿಷ್ಪ್ರಭಶ್ಚಾಸೀನ್ನ ವಾತಿ ಚ ಸುಖೋಽನಿಲಃ ॥

ಅನುವಾದ

ಆಗಲೇ ಉರಿಯುತ್ತಿರುವ ಉಲ್ಕೆಯು ಭಯಂಕರ ಶಬ್ದ ಮಾಡುತ್ತಾ ಬಿದ್ದಿತು. ಸೂರ್ಯನು ಕಾಂತಿಹೀನನಾದನು. ವಾಯುವು ಸುಖಕರವಾಗಿ ಬೀಸುತ್ತಿರಲಿಲ್ಲ.॥51॥

ಮೂಲಮ್ - 52

ಅಚಿಂತಕಯನ್ಮಹೋತ್ಪಾತಾನುದಿತಾನ್ ರೋಮಹರ್ಷಣಾನ್ ।
ನಿರ್ಯಯೌ ಕುಂಭಕರ್ಣಸ್ತು ಕೃತಾಂತ ಬಲಚೋದಿತಃ ॥

ಅನುವಾದ

ಹೀಗೆ ರೋಮಾಂಚಕ ಅನೇಕ ದೊಡ್ಡ ದೊಡ್ಡ ಉತ್ಪಾತಗಳು ಪ್ರಕಟಗೊಂಡವು. ಆದರೆ ಅದನ್ನು ಲೆಕ್ಕಿಸದೆ ಕಾಲಶಕ್ತಿಯಿಂದ ಪ್ರೇರಿತನಾದ ಕುಂಭಕರ್ಣನು ಯುದ್ಧಕ್ಕಾಗಿ ಹೊರಟನು.॥52॥

ಮೂಲಮ್ - 53

ಸ ಲಂಘಯಿತ್ವಾ ಪ್ರಾಕಾರಂ ಪದ್ಭ್ಯಾಂ ಪರ್ವತ ಸಂನಿಭಃ ।
ದದರ್ಶಾಭ್ರಘನಪ್ರಖ್ಯಂ ವಾನರಾನೀಕಮದ್ಭುತಮ್ ॥

ಅನುವಾದ

ಅವನು ಪರ್ವತದಂತೆ ಎತ್ತರನಾಗಿದ್ದು, ಲಂಕೆಯ ಪ್ರಾಕಾರವನ್ನು ದಾಟಿ, ದಟ್ಟವಾದ ಮೇಘಗಳಂತಿದ್ದ ಪರಮಾದ್ಭುತ ವಾನರ ಸೈನ್ಯವನ್ನು ನೋಡಿದನು.॥53॥

ಮೂಲಮ್ - 54

ತೇ ದೃಷ್ಟ್ವಾರಾಕ್ಷಸಶ್ರೇಷ್ಠಂ ವಾನರಾಃ ಪರ್ವತೋಪಮಮ್ ।
ವಾಯುನುನ್ನಾ ಇವ ಘನಾ ಯಯುಃ ಸರ್ವಾ ದಿಶಸ್ತದಾ ॥

ಅನುವಾದ

ಆ ಪರ್ವತಾಕಾರ ಶ್ರೇಷ್ಠ ರಾಕ್ಷಸನನ್ನು ನೋಡುತ್ತಲೇ ಸಮಸ್ತ ವಾನರರು ಬಿರುಗಾಳಿಯಿಂದ ಮೋಡಗಳು ಚೆಲ್ಲಾಪಿಲ್ಲಿಯಾಗುವಂತೆ ದಿಕ್ಕಾಪಾಲಾಗಿ ಓಡಿದರು.॥54॥

ಮೂಲಮ್ - 55

ತದ್ವಾನರಾನೀಕಮತಿಪ್ರಚಂಡಂ
ದಿಶೋ ದ್ರವದ್ಭಿನ್ನಮಿವಾಭ್ರಜಾಲಮ್ ।
ಸ ಕುಂಭಕರ್ಣಃ ಸಮವೇಕ್ಷ್ಯ ಹರ್ಷಾ-
ನ್ನನಾದ ಭೂಯೋ ಘನವದ್ಘನಾಭಃ ॥

ಅನುವಾದ

ಭಿನ್ನ ಭಿನ್ನವಾದ ಮೋಡಗಳ ಸಮೂಹದಂತೆ ಆ ಅತಿಶಯ ಪ್ರಚಂಡ ವಾನರ ವಾಹಿನಿಯು ದಿಕ್ಕಾಪಾಲಾಗಿ ಓಡುವುದನ್ನು ನೋಡಿ ಮೇಘದಂತಹ ಕಪ್ಪಾದ ಕುಂಭಕರ್ಣನು ಹರ್ಷದಿಂದ ನೀರು ತುಂಬಿದ ಮೇಘಗಳಂತೆ ಗಂಭೀರವಾಗಿ ಪದೇ ಪದೇ ಗರ್ಜಿಸ ತೊಡಗಿದನು.॥55॥

ಮೂಲಮ್ - 56

ತೇ ತಸ್ಯ ಘೋರಂ ನಿನದಂ ನಿಶಮ್ಯ
ಯಥಾ ನಿನಾದಂ ದಿವಿವಾರಿದಸ್ಯ ।
ಪೇತುರ್ಧರಣ್ಯಾಂ ಬಹವಃ ಪ್ಲವಂಗಾ
ನಿಕೃತ್ತಮೂಲಾ ಇವ ಶಾಲವೃಕ್ಷಾಃ ॥

ಅನುವಾದ

ಮೇಘಗರ್ಜನೆಯಂತೆ ಆ ರಾಕ್ಷಸನ ಸಿಂಹನಾದವನ್ನು ಕೇಳಿ ಅನೇಕ ವಾನರರು ಬುಡಕಡಿದ ತಾಳೆಮರದಂತೆ ನೆಲದಲ್ಲಿ ಬಿದ್ದುಬಿಟ್ಟರು.॥56॥

ಮೂಲಮ್ - 57

ವಿಪುಲಪರಿಘವಾನ್ ಸ ಕುಂಭಕರ್ಣೋ
ರಿಪುನಿಧನಾಯ ವಿನಿಃಸೃತೋ ಮಹಾತ್ಮಾ ।
ಕಪಿಗಣಭಯಮಾದದತ್ಸುಭೀಮಂ
ಪ್ರಭುರಿವ ಕಿಂಕರದಂಡವಾನ್ ಯುಗಾಂತೇ ॥

ಅನುವಾದ

ಮಹಾಕಾಯ ಕುಂಭಕರ್ಣನು ಶೂಲದಂತಹ ವಿಶಾಲ ಪರಿಘವನ್ನು ಒಂದು ಕೈಯಲ್ಲಿ ಧರಿಸಿದ್ದನು. ಅವನು ವಾನರರಿಗೆ ಘೋರ ಭಯವನ್ನುಂಟು ಮಾಡುತ್ತಾ ಪ್ರಳಯಕಾಲದಲ್ಲಿ ಸಂಹಾರ ಸಾಧನಭೂತ ಕಾಲದಂಡದಿಂದ ಕೂಡಿದ ಭಗವಾನ್ ಕಾಲ ರುದ್ರನಂತೆ ಶತ್ರುಗಳನ್ನು ವಿನಾಶ ಮಾಡಲು ಲಂಕೆಯಿಂದ ಹೊರಬಂದನು.॥57॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಅರವತ್ತೈದನೆಯ ಸರ್ಗ ಪೂರ್ಣವಾಯಿತು.॥65॥