०४८ त्रिजटया सीतासमाश्वासनम्

वाचनम्
ಭಾಗಸೂಚನಾ

ಸೀತೆಯ ವಿಲಾಪ, ತ್ರಿಜಟೆಯು ಶ್ರೀರಾಮ-ಲಕ್ಷ್ಮಣರು ಜೀವಿತರಾಗುತ್ತಾರೆಂಬ ವಿಶ್ವಾಸ ಉಂಟಾಗುವಂತೆ ಸಮಜಾಯಿಸಿ, ಪುನಃ ಲಂಕೆಗೆ ಕರೆದುಕೊಂಡು ಹೋದುದು

ಮೂಲಮ್ - 1

ಭರ್ತಾರಂ ನಿಹತಂ ದೃಷ್ಟ್ವಾ ಲಕ್ಷ್ಮಣಂ ಚ ಮಹಾಬಲಮ್ ।
ವಿಲಲಾಪ ಭೃಶಂ ಸೀತಾ ಕರುಣಂ ಶೋಕಕರ್ಶಿತಾ ॥

ಅನುವಾದ

ತನ್ನ ಸ್ವಾಮಿ ಶ್ರೀರಾಮ-ಲಕ್ಷ್ಮಣರು ಸತ್ತು ಹೋಗಿರುವುದನ್ನು ನೋಡಿ ಸೀತೆಯು ಶೋಕ ಪೀಡಿತಳಾಗಿ ಪದೇ ಪದೇ ಕರುಣಾಜನಕವಾಗಿ ವಿಲಪಿಸತೊಡಗಿದಳು.॥1॥

ಮೂಲಮ್ - 2

ಊಚುರ್ಲಾಕ್ಷಣಿಕಾ ಯೇ ಮಾಂ ಪುತ್ರಿಣ್ಯವಿಧವೇತಿ ಚ ।
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ ॥

ಅನುವಾದ

ಸಾಮುದ್ರಿಕ ಲಕ್ಷಣಗಳನ್ನು ಬಲ್ಲ ವಿದ್ವಾಂಸರು ನನ್ನನ್ನು ಪುತ್ರವತೀ ಮತ್ತು ಸೌಭಾಗ್ಯವತೀ ಎಂದು ಹೇಳಿದ್ದರು. ಇಂದು ಶ್ರೀರಾಮನು ಮಡಿದ ಕಾರಣ ಆ ಎಲ್ಲ ಲಕ್ಷಣಗಳೂ ಸುಳ್ಳಾಯಿತಲ್ಲ.॥2॥

ಮೂಲಮ್ - 3

ಯಜ್ವನೋ ಮಹಿಷೀಂ ಯೇ ಮಾಮೂಚುಃ ಪತ್ನೀಂ ಚ ಸತ್ರಿಣಃ ।
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ ॥

ಅನುವಾದ

ನನ್ನನ್ನು ಯಜ್ಞಪರಾಯಣ ಹಾಗೂ ವಿವಿಧ ಸೂತ್ರ ಸಂಚಾಲನ ಮಾಡುವ ರಾಜಾಧಿರಾಜನ ಪತ್ನೀ ಎಂದು ತಿಳಿಸಿದ ವಿದ್ವಾಂಸರ ಮಾತು ಸುಳ್ಳಾಯಿತಲ್ಲ.॥3॥

ಮೂಲಮ್ - 4

ವೀರಪಾರ್ಥಿವಪತ್ನೀನಾಂ ಯೇ ವಿದುರ್ಭತೃ ಪೂಜಿತಾಮ್ ।
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ ॥

ಅನುವಾದ

ಯಾರು ನನ್ನ ಲಕ್ಷಣಗಳಿಂದ ರಾಜಪತ್ನಿಯರಲ್ಲಿ ಪೂಜ್ಯಳೂ, ಪತಿಯಿಂದ ಸನ್ಮಾನಿತಳೂ ಎಂದು ಹೇಳಿದ್ದರೋ, ಇಂದು ಶ್ರೀರಾಮನು ಇಲ್ಲದಿರುವಾಗ ಆ ಎಲ್ಲ ಜ್ಞಾನಿಗಳು ಮಿಥ್ಯಾವಾದಿಯಾದರಲ್ಲ.॥4॥

ಮೂಲಮ್ - 5

ಊಚುಃ ಸಂಶ್ರವಣೇ ಯೇ ಮಾಂ ದ್ವಿಜಾಃ ಕಾರ್ತಾಂತಿಕಾಃ ಶುಭಾಮ್ ।
ತೇಽದ್ಯ ಸರ್ವೇ ಹತೇ ರಾಮೇ ಜ್ಞಾನಿನೋಽನೃತವಾದಿನಃ ॥

ಅನುವಾದ

ಜೋತಿಷ್ಯ ಶಾಸ್ತ್ರ ಬಲ್ಲ ಬ್ರಾಹ್ಮಣರು ನನ್ನನ್ನು ನಿತ್ಯ ಸೌಭಾಗ್ಯವತಿ ಎಂದು ಹೇಳಿದ್ದರು. ಇಂದು ಶ್ರೀರಾಮನು ಸತ್ತು ಹೋದುದರಿಂದ ಅವರೆಲ್ಲರೂ ಸುಳ್ಳುಗಾರರಾದರಲ್ಲ.॥5॥

ಮೂಲಮ್ - 6

ಇಮಾನಿ ಖಲು ಪದ್ಮಾನಿ ಪಾದಯೋರ್ವೈ ಕುಲಸ್ತ್ರಿಯಃ ।
ಅಧಿರಾಜ್ಯೇಽಭಿಷಿಚ್ಯಂತೇ ನರೇಂದ್ರೈಃ ಪತಿಭಿಃ ಸಹ ॥

ಅನುವಾದ

ಕಮಲದ ಚಿಹ್ನೆಗಳು ಕೈ-ಕಾಲುಗಳಲ್ಲಿದ್ದರೆ ಕುಲವತೀ ಸ್ತ್ರೀಯರು ಪತಿಯಾದ ರಾಜಾಧಿರಾಜನ ಸಾಮ್ರಾಜ್ಞಿಯಾಗಿ ಅವನೊಂದಿಗೆ ಪಟ್ಟಾಭಿಷಿಕ್ತಳಾಗುತ್ತಾಳೆ. ಅವು ನನ್ನಲ್ಲಿ ಈಗಲೂ ನಿಶ್ಚಿತವಾಗಿ ಕಾಣುತ್ತಿವೆ.॥6॥

ಮೂಲಮ್ - 7

ವೈಧವ್ಯಂ ಯಾಂತಿ ಯೈರ್ನಾರ್ಯೋಽಲಕ್ಷಣೈರ್ಭಾಗ್ಯದುರ್ಲಭಾಃ ।
ನಾತ್ಮನಸ್ತಾನಿ ಪಶ್ಯಾಮಿ ಪಶ್ಯಂತೀ ಹತಲಕ್ಷಣಾ ॥

ಅನುವಾದ

ಯಾವ ಅಶುಭ ಲಕ್ಷಣಗಳಿಂದ ಸೌಭಾಗ್ಯವು ಲಭಿಸುವುದಿಲ್ಲವೋ, ಸ್ತ್ರೀಯರು ವಿಧವೆಯರಾಗುತ್ತಾರೋ, ಅವನ್ನು ನಾನು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಹೀಗಿದ್ದರೂ ನನ್ನ ಎಲ್ಲ ಶುಭಲಕ್ಷಣಗಳು ನಿಷ್ಪಲವಾದುವಲ್ಲ.॥7॥

ಮೂಲಮ್ - 8

ಸತ್ಯನಾಮಾನಿ ಪದ್ಮಾನಿ ಸ್ತ್ರೀಣಾಮುಕ್ತಾನಿ ಲಕ್ಷಣೈಃ ।
ತಾನ್ಯದ್ಯ ನಿಹತೇ ರಾಮೇ ವಿತಥಾನಿ ಭವಂತಿ ಮೇ ॥

ಅನುವಾದ

ಸ್ತ್ರೀಯರ ಕೈಕಾಲುಗಳಲ್ಲಿ ಕಮಲದ ಚಿಹ್ನೆಗಳಿದ್ದರೆ ಅವು ಅಮೋಘ ಫಲದಾಯಕವೆಂದು ಸಾಮುದ್ರಿಕ ಶಾಸ್ತ್ರವನ್ನು ತಿಳಿದ ವಿದ್ವಾಂಸರು ತಿಳಿಸುತ್ತಾರೆ. ಶ್ರೀರಾಮನೇನಾದರೂ ಹತನಾದರೆ ಆ ಎಲ್ಲ ಶುಭ ಲಕ್ಷಣಗಳು ವ್ಯರ್ಥವಾದುವಲ್ಲ.॥8॥

ಮೂಲಮ್ - 9

ಕೇಶಾಃ ಸೂಕ್ಷ್ಮಾಃ ಸಮಾ ನೀಲಾ ಭ್ರುವೌ ಚಾಸಂಹತೇ ಮಮ ।
ವೃತ್ತೇ ಚಾರೋಮಕೆ ಜಂಘೇ ದಂತಾಶ್ಚಾವಿರಲಾ ಮಮ ॥

ಅನುವಾದ

ನನ್ನ ಕೂದಲುಗಳು ನಯ ವಾಗಿದ್ದು, ಸಮವಾಗಿವೆ, ಕಪ್ಪಾಗಿವೆ. ಹುಬ್ಬುಗಳು ಪರಸ್ಪರ ಸೇರಿಕೊಂಡಿಲ್ಲ. ನನ್ನ ಮೊಣಕಾಲು (ಮೀನಖಂಡ)ಗಳು ದುಂಡಾಗಿಯೂ ರೋಮರಹಿತವಾಗಿವೆ. ಹಲ್ಲುಗಳು ಸಂದುಗಳಿಲ್ಲದೆ ಒತ್ತಾಗಿ ಸೇರಿಕೊಂಡಿವೆ.॥9॥

ಮೂಲಮ್ - 10

ಶಂಖೇ ನೇತ್ರೇ ಕರೌ ಪಾದೌ ಗುಲ್ಫಾವೂರೂ ಸಮೌ ಚಿತೌ ।
ಅನುವೃತ್ತ ನಖಾಃ ಸ್ನಿಗ್ಧಾಃ ಸಮಾಶ್ಚಾಂಗುಲಯೋ ಮಮ ॥

ಅನುವಾದ

ಕಣ್ಣುಗಳ ಸುತ್ತಲ ಭಾಗ, ಎರಡೂ ಕಣ್ಣುಗಳು, ಎರಡೂ ಕೈ-ಕಾಲುಗಳು, ಎರಡೂ ಮೊಣಕಾಲುಗಳು, ತೊಡೆಗಳೂ, ವಿಶಾಲ ಹಾಗೂ ದಷ್ಟಪುಷ್ಪವಾಗಿವೆ. ಎರಡು ಕೈಗಳ ಬೆರಳುಗಳು ಮೃದುವಾಗಿಯೂ ಸಮವಾಗಿವೆ. ಬೆರಳುಗಳ ಉಗುರುಗಳು ದುಂಡಾಗಿಯೂ ನುಣುಪಾಗಿಯೂ ಇವೆ.॥10॥

ಮೂಲಮ್ - 11

ಸ್ತನೌ ಚಾವಿರಲೌ ಪೀನೌ ಮಾಮಕೌ ಮಗ್ನಚೂಚುಕೌ ।
ಮಗ್ನಾ ಚೋತ್ಸೇಧನೀ ನಾಭಿಃ ಪಾರ್ಶ್ವೋರಸ್ಕಂ ಚ ಮೇ ಚಿತಮ್ ॥

ಅನುವಾದ

ನನ್ನ ಎರಡೂ ಸ್ತನಗಳು ಪರಸ್ಪರ ಸೇರಿ ಕೊಂಡಿವೆ ಹಾಗೂ ಸ್ಥೂಲವಾಗಿವೆ. ಸ್ತನಗಳ ತೊಟ್ಟುಗಳು ಕೆಳಮುಖವಾಗಿವೆ. ನನ್ನ ಹೊಕ್ಕಳು ಆಳವಾಗಿದ್ದು, ಸುತ್ತಲ ಭಾಗ ಎತ್ತರವಾಗಿದೆ. ನನ್ನ ಪಾರ್ಶ್ವಗಳು ಮತ್ತು ಎದೆ ಪುಷ್ಟ ವಾಗಿದೆ.॥1.॥

ಮೂಲಮ್ - 12

ಮಮ ವರ್ಣೋ ಮಣಿನಿಭೋ ಮೃದೂನ್ಯಂಗರುಹಾಣಿ ಚ ।
ಪ್ರತಿಷ್ಠಿತಾಂ ದ್ವಾದಶಭಿರ್ಮಾಮೂಚುಃ ಶುಭಲಕ್ಷಣಾಮ್ ॥

ಅನುವಾದ

ನನ್ನ ಅಂಗಕಾಂತಿಯು ಸಾಣೆಹಿಡಿದ ರತ್ನದಂತೆ ಉಜ್ವಲವಾಗಿದೆ. ಶರೀರದ ರೋಮಗಳು ಮೃದುವಾಗಿದ್ದು, ಕಾಲಿನ ಹತ್ತು ಬೆರಳುಗಳೂ ಮತ್ತು ಎರಡೂ ಅಂಗಾಲುಗಳು ನೆಲಕ್ಕೆ ಸರಿಯಾಗಿ ತಾಗಿಕೊಂಡಿವೆ. ಇವೆಲ್ಲದರ ಕಾರಣ ಸಾಮುದ್ರಿಕ ಶಾಸ್ತ್ರಿಗಳು ಶುಭವೆಂದು ತಿಳಿಸಿರುವರು.॥12॥

ಮೂಲಮ್ - 13

ಸಮಗ್ರಯವಮಚ್ಛಿದ್ರಂ ಪಾಣಿಪಾದಂ ಚ ವರ್ಣವತ್ ।
ಮಂದಸ್ಮಿತೇತ್ಯೇವ ಚ ಮಾಂ ಕನ್ಯಾಲಾಕ್ಷಣಿಕಾ ವಿದುಃ ॥

ಅನುವಾದ

ನನ್ನ ಕೈ-ಕಾಲುಗಳು ಕೆಂಪಾಗಿಯೂ ಉತ್ತಮ ಕಾಂತಿಯುಕ್ತವಾಗಿವೆ. ನನ್ನ ಬೆರಳುಗಳು ಗಿಣ್ಣಿನಲ್ಲಿ ಗೋದಿಯಾಕಾರದ ರೇಖೆಗಳಿವೆ. ಬೆರಳುಗಳು ಜೋಡಿಸಿದಾಗ ಅವುಗಳಲ್ಲಿ ಸ್ವಲ್ಪವೂ ಸಂದುಗಳು ಕಾಣುವುದಿಲ್ಲ. ಕನ್ಯಾ ಲಕ್ಷಣಗಳನ್ನು ತಿಳಿದ ವಿದ್ವಾಂಸರು ಈ ಲಕ್ಷಣಗಳಿಂದ ಮಂದಸ್ಮಿತ ಎಂದು ಹೇಳಿರುವರು.॥1.॥

ಮೂಲಮ್ - 14

ಆಧಿರಾಜ್ಯೇಽಭಿಷೇಕೋ ಮೇ ಬ್ರಾಹ್ಮಣೈಃ ಪತಿನಾ ಸಹ ।
ಕೃತಾಂತ ಕುಶಲೈರುಕ್ತಂ ತತ್ಸರ್ವಂ ವಿತಥೀಕೃತಮ್ ॥

ಅನುವಾದ

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಪುಣರಾದ ಬ್ರಾಹ್ಮಣರು ನನಗೆ ಪತಿಯೊಡನೆ ರಾಜ್ಯಾಭಿಷೇಕವಾಗುವುದೆಂದು ಹೇಳಿದ್ದರು. ಆದರೆ ಇಂದು ಅವರ ಮಾತೆಲ್ಲ ಸುಳ್ಳಾಗಿಹೋಯಿತಲ್ಲ.॥14॥

ಮೂಲಮ್ - 15

ಶೋಧಯಿತ್ವಾ ಜನಸ್ಥಾನಂ ಪ್ರವೃತ್ತಿಮುಪಲಭ್ಯ ಚ ।
ತೀರ್ತ್ವಾ ಸಾಗರಮಕ್ಷೋಭ್ಯಂ ಭ್ರಾತರೌ ಗೋಷ್ಪದೇ ಹತೌ ॥

ಅನುವಾದ

ಇವರಿಬ್ಬರೂ ಜನಸ್ಥಾನದಲ್ಲಿ ನನ್ನನ್ನು ಶೋಭಿಸಿ, ರಾಕ್ಷಸರನ್ನು ಕೊಂದು, ನಾನಿಲ್ಲಿರುವ ಸಮಾಚಾರ ತಿಳಿದು ಅಕ್ಷೋಭ್ಯ ಸಮುದ್ರವನ್ನು ದಾಟಿ ಬಂದರು. ಆದರೆ ಅಯ್ಯೋ! ಇಷ್ಟೆಲ್ಲ ಮಾಡಿಯೂ ಕೆಲವೇ ರಾಕ್ಷಸ ಸೈನ್ಯದಿಂದ ಸೋಲುವುದು ಇವರಿಗೆ ಹಸುವಿನ ಗೊರಸಿನಷ್ಟು ನೀರನ್ನು ದಾಟಿ ಸತ್ತುಹೋದರಲ್ಲ.॥15॥

ಮೂಲಮ್ - 16

ನನು ವಾರುಣಮಾಗ್ನೇಯಮೈಂದ್ರಂ ವಾಯವ್ಯಮೇವ ಚ ।
ಅಸ್ತ್ರಂ ಬ್ರಹ್ಮಶಿರಶ್ಚೈವ ರಾಘವೌ ಪ್ರತ್ಯಪದ್ಯತಮ್ ॥

ಅನುವಾದ

ರಘುವಂಶೀ ಇವರಿಬ್ಬರೂ ವಾರುಣ, ಆಗ್ನೇಯ, ಐಂದ್ರ, ವಾಯವ್ಯ, ಬ್ರಹ್ಮಶಿರ ಮೊದಲಾದ ಅಸ್ತ್ರಗಳನ್ನು ಬಲ್ಲವರಾಗಿದ್ದರು. ಸಾಯುವ ಮೊದಲು ಆ ಮಹಾಸಗಳನ್ನು ಪ್ರಯೋಗಿಸಿಲೇ ಇಲ್ಲವೇ.॥1.॥

ಮೂಲಮ್ - 17

ಅದೃಶ್ಯಮಾನೇನ ರಣೇ ಮಾಯಯಾ ವಾಸವೋಪಮೌ ।
ಮಮ ನಾಥಾವನಾಥಾಯಾ ನಿಹತೌ ರಾಮಲಕ್ಷ್ಮಣೌ ॥

ಅನುವಾದ

ಅನಾಥೆಯಾದ ನನಗೆ ರಕ್ಷಕರಾಗಿದ್ದ ಶ್ರೀರಾಮ ಲಕ್ಷ್ಮಣರು ಇಂದ್ರನಂತೆ ಪರಾಕ್ರಮಿಗಳಾಗಿದ್ದರು. ಆದರೆ ಇಂದ್ರಜಿತು ಮಾಯೆಯಿಂದ ಅದೃಶ್ಯನಾಗಿದ್ದುಕೊಂಡೇ ಇವರನ್ನು ರಣಭೂಮಿಯಲ್ಲಿ ಸಂಹರಿಸಿಬಿಟ್ಟನು.॥17॥

ಮೂಲಮ್ - 18

ನ ಹಿ ದೃಷ್ಟಿ ಪಥಂ ಪ್ರಾಪ್ಯ ರಾಘವಸ್ಯ ರಣೇ ರಿಪುಃ ।
ಜೀವನ್ಪ್ರತಿನಿವರ್ತೇತ ಯದ್ಯಪಿ ಸ್ಯಾನ್ಮನೋಜವಃ ॥

ಅನುವಾದ

ರಾಘವನ ಕಣ್ಣಿಗೆ ಬಿದ್ದ ಶತ್ರುವು ಮನೋವೇಗಕ್ಕೆ ಸಮಾನ ವೇಗಶಾಲಿ ಆಗಿದ್ದರೂ ಯುದ್ಧದಲ್ಲಿ ಬದುಕಿ ಮರಳಿ ಹೋಗಲು ಸಾಧ್ಯವಿರಲಿಲ್ಲ.॥18॥

ಮೂಲಮ್ - 19

ನ ಕಾಲಸ್ಯಾತಿಭಾರೋಽಸ್ತಿ ಕೃತಾಂತಶ್ಚ ಸುದುರ್ಜಯಃ ।
ಯತ್ರ ರಾಮಃ ಸಹ ಭ್ರಾತ್ರಾ ಶೇತೇ ಯುಧಿ ನಿಪಾತಿತಃ ॥

ಅನುವಾದ

ಕಾಲಪುರುಷನಿಗೆ ಯಾವ ಕಾರ್ಯವೂ ಭಾರವಲ್ಲ. ಕಾಲನನ್ನು ಯಾರೂ ಗೆಲ್ಲಲಾರರು; ಏಕೆಂದರೆ ರಾಮನೂ ಕೂಡ ಕಾಲನಿಗೆ ವಶನಾಗಿ ಸಹೋದರನೊಡನೆ ಹತನಾಗಿ ರಣರಂಗದಲ್ಲಿ ಬಿದ್ದಿರುವನಲ್ಲ.॥19॥

ಮೂಲಮ್ - 20

ನ ಶೋಚಾಮಿ ತಥಾ ರಾಮಂ ಲಕ್ಷ್ಮಣಂ ಚ ಮಹಾರಥಮ್ ।
ನಾತ್ಮಾನಂ ಜನನೀಂ ಚಾಪಿ ಯಥಾಶ್ವಶ್ರೂಂ ತಪಸ್ವಿನೀಮ್ ॥

ಮೂಲಮ್ - 21

ಸಾನುಚಿಂತಯತೇ ನಿತ್ಯಂ ಸಮಾಪ್ತವ್ರತಮಾಗತಮ್ ।
ಕದಾ ದ್ರಕ್ಷ್ಯಾಮಿ ಸೀತಾಂ ಚ ಲಕ್ಷ್ಮಣಂ ಚ ಸರಾಘವಮ್ ॥

ಅನುವಾದ

ಈಗ ನಾನು ಶ್ರೀರಾಮನ ಕುರಿತು, ಮಹಾರಥೀ ಲಕ್ಷ್ಮಣನ ಕುರಿತು, ನನ್ನ ತಾಯಿಯ ಕುರಿತು, ಇಲ್ಲವೇ ನನ್ನ ಕುರಿತೂ ಶೋಕಪಡುವುದಿಲ್ಲ. ಆದರೆ ನಾನು ತಪಸ್ವಿನೀ ಕೌಸಲ್ಯೆಯ ಕುರಿತು ಹೆಚ್ಚು ಶೋಕಿಸುತ್ತಿದ್ದೇನೆ; ಏಕೆಂದರೆ ಅವಳು ಯಾವಾಗಲೂ ‘ನನ್ನ ಪುತ್ರನಾದ ಶ್ರೀರಾಮನು ವನವಾಸವನ್ನು ಮುಗಿಸಿ ಸೀತಾ-ಲಕ್ಷ್ಮಣರೊಡನೆ ಎಂದು ಮರಳುವನು? ನಾನು ಅವರನ್ನು ಯಾವಾಗ ನೋಡಿಯೇನು? ಎಂದು ಚಿಂತಿಸುತ್ತಾ ಇದ್ದಾಳೆ.॥20-21॥

ಮೂಲಮ್ - 22

ಪರಿದೇವಯಮಾನಾಂ ತಾಂ ರಾಕ್ಷಸೀ ತ್ರಿಜಟಾಬ್ರವೀತ್ ।
ಮಾ ವಿಷಾದಂ ಕೃಥಾ ದೇವಿ ಭರ್ತಾಯಂ ತವ ಜೀವತಿ ॥

ಅನುವಾದ

ಹೀಗೆ ವಿಲಾಪಿಸುತ್ತಿರುವ ಸೀತಾದೇವಿಗೆ ರಾಕ್ಷಸೀ ತ್ರಿಜಟೆಯು ಹೇಳಿದನು - ‘ದೇವಿ! ದುಃಖಿಸಬೇಡ. ನಿನ್ನ ಪತಿಯು ಜೀವಿಸಿದ್ದಾನೆ.॥22॥

ಮೂಲಮ್ - 23

ಕಾರಣಾನಿ ಚ ವಕ್ಷ್ಯಾಮಿ ಮಹಾಂತಿ ಸದೃಶಾನಿ ಚ ।
ಯಥೇಮೌ ಜೀವತೋ ದೇವಿ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಶ್ರೀರಾಮ-ಲಕ್ಷ್ಮಣರಿಬ್ಬರೂ ಜೀವಂತರಾಗಿರುವರೆಂಬುದಕ್ಕೆ ನಾನು ಮಹತ್ತರ ಮತ್ತು ಉಚಿತವಾದ ಕಾರಣಗಳನ್ನು ತಿಳಿಸುತ್ತೇನೆ.॥23॥

ಮೂಲಮ್ - 24

ನಹಿ ಕೋಪಪರೀತಾನಿ ಹರ್ಷಪರ್ಯುತ್ಸುಕಾನಿ ಚ ।
ಭವಂತಿ ಯುಧಿ ಯೋಧಾನಾಂ ಮುಖಾನಿ ನಿಹತೇ ಪತೌ ॥

ಅನುವಾದ

ಯುದ್ಧದಲ್ಲಿ ಪ್ರಭುವು ಹತನಾದನೆಂದರೆ ಯೋಧನ ಮುಖವು ಕ್ರೋಧ, ಹರ್ಷಗಳಿಂದ ಕೂಡಿರುವುದಿಲ್ಲ. ಅವರು ದೀನರಾಗಿ ಅಳುತ್ತಿರುತ್ತಾರೆ. ಆದರೆ ಈಗ ಇಲ್ಲಿ ಹಾಗಿಲ್ಲವಲ್ಲ.॥24॥

ಮೂಲಮ್ - 25

ಇದಂ ವಿಮಾನಂ ವೈದೇಹಿ ಪುಷ್ಪಕಂ ನಾಮ ನಾಮತಃ ।
ದಿವ್ಯಂ ತ್ವಾಂ ಧಾರಯೇನ್ನೇದಂ ಯದ್ಯೇತೌ ಗತಜೀವಿತೌ ॥

ಅನುವಾದ

ವಿದೇಹನಂದಿನಿ! ಈ ಪುಷ್ಪಕ ವಿಮಾನವು ದಿವ್ಯವಾದುದು. ಇವರಿಬ್ಬರೂ ಪ್ರಾಣಗಳನ್ನು ತೊರೆದಿದ್ದರೆ, ವೈಧವ್ಯದ ಸ್ಥಿತಿಯಲ್ಲಿ ನಿನ್ನನ್ನು ಕರೆತರುತ್ತಿರಲಿಲ್ಲ. ಇದೂ ಶ್ರೀರಾಮ-ಲಕ್ಷ್ಮಣರು ಬದುಕಿರುವರೆಂಬುದಕ್ಕೆ ಕಾರಣ.॥25॥

ಮೂಲಮ್ - 26

ಹತವೀರಪ್ರಧಾನಾ ಹಿ ಗತೋತ್ಸಾಹಾ ನಿರುದ್ಯಮಾ ।
ಸೇನಾ ಭ್ರಮತಿ ಸಂಖ್ಯೇಷು ಹತಕರ್ಣೀವ ನೌರ್ಜಲೇ ॥

ಮೂಲಮ್ - 27

ಇಯಂ ಪುನರಸಂಭ್ರಾಂತಾ ನಿರುದ್ವಿಗ್ನಾ ತರಸ್ವಿನಿ ।
ಸೇನಾ ರಕ್ಷತಿ ಕಾಕುತ್ಸ್ಥೌ ಮಯಾ ಪ್ರೀತ್ಯಾ ನಿವೇದಿತೌ ॥

ಅನುವಾದ

ಇದಲ್ಲದೆ ಪ್ರಧಾನವೀರನು ಮರಣ ಹೊಂದಿದಾಗ ಅವನ ಸೈನ್ಯ ಉತ್ಸಾಹ, ಉದ್ಯೋಗವಿಲ್ಲದೆ ನಾವಿಕನನ್ನು ಕಳಕೊಂಡ ನಾವೆಯು ಯದ್ವಾ-ತದ್ವಾ ಹರಿದುಹೋಗುವಂತೆ ಚೆಲ್ಲಾಪಿಲ್ಲಿ ಯಾಗುತ್ತದೆ. ಆದರೆ ಇಲ್ಲಿ ಹಾಗಿರದೆ ವಾನರ ಸೈನ್ಯವು ಉದ್ವೇಗ-ಭಯವಿಲ್ಲದೆ ರಾಜಕುಮಾರರನ್ನು ರಕ್ಷಿಸುತ್ತಿದ್ದಾರೆ. ಹೀಗೆ ನಾನು ಪ್ರೇಮಪೂರ್ವಕ ದೃಢವಾಗಿ ಅವರಿಬ್ಬರು ಜೀವಂತರಾಗಿದ್ದಾರೆ ಎಂದು ನಾನು ತಿಳಿಸುತ್ತಿದ್ದೇನೆ.॥26-27॥

ಮೂಲಮ್ - 28

ಸಾ ತ್ವಂ ಭವ ಸುವಿಸ್ರಬ್ಧಾ ಅನುಮಾನೈಃ ಸುಖೋದಯೈಃ ।
ಅಹರೌ ಪಶ್ಯ ಕಾಕುತ್ಸ್ಥೌ ಸ್ನೇಹಾದೇತದ್ಬ್ರವೀಮಿ ತೇ ॥

ಅನುವಾದ

ಈಗ ನೀನು ಮುಂದಿನ ಸುಖವನ್ನು ಸೂಚಿಸುವ ಕಾರಣಗಳಿಂದ ನಿಶ್ಚಿಂತಳಾಗು, ಇವರು ಬದುಕಿದ್ದಾರೆ ಎಂದು ವಿಶ್ವಾಸವಿಡು. ರಾಜಕುಮಾರರು ಹತರಾಗಿಲ್ಲ ಎಂದು ನಾನು ಸ್ನೇಹಪೂರ್ವಕವಾಗಿ ಹೇಳುತ್ತಿದ್ದೇನೆ.॥28॥

ಮೂಲಮ್ - 29

ಅನೃತಂ ನೋಕ್ತಪೂರ್ವಂ ಮೇ ನ ಚ ವಕ್ಷ್ಯಾಮಿ ಮೈಥಿಲಿ ।
ಚಾರಿತ್ರಸುಖಶೀಲತ್ವಾತ್ ಪ್ರವಿಷ್ಟಾಸಿ ಮನೋ ಮಮ ॥

ಅನುವಾದ

ಮಿಥಿಲೇಶಕುಮಾರಿ! ನಾನು ಹಿಂದೆಂದೂ ಸುಳ್ಳು ಹೇಳಿಲ್ಲ, ಮುಂದೆಯೂ ಹೇಳುವುದಿಲ್ಲ. ನಿನ್ನ ಸಚ್ಚಾರಿತ್ರ್ಯದ, ನಿರ್ಮಲ ಚಾರಿತ್ರ್ಯದಿಂದ ಸುಖವೆಂದು ಭಾವಿಸುವ ಸ್ವಭಾವವುಳ್ಳ ನೀನು ನನ್ನ ಮನಸ್ಸಿನಲ್ಲಿ ನೆಲೆಸಿರುವೆ.॥29॥

ಮೂಲಮ್ - 30

ನೇವೌ ಶಕ್ಯೌ ರಣೇ ಜೇತುಂ ಸೇಂದ್ರೈರಪಿ ಸುರಾಸುರೈಃ ।
ತಾದೃಶಂ ದರ್ಶನಂ ದೃಷ್ಟ್ವಾ ಮಯಾ ಚೋದೀರಿತಂ ತವ ॥

ಅನುವಾದ

ಯುದ್ಧದಲ್ಲಿ ಇಂದ್ರಸಹಿತ ಸಮಸ್ತ ದೇವತೆಗಳೂ, ಅಸುರರೂ ರಾಮ-ಲಕ್ಷ್ಮಣರನ್ನು ಜಯಿಸಲಾರರು. ಅಂತಹ ಲಕ್ಷಣಗಳನ್ನು ನೋಡಿಯೇ ನಾನು ನಿನ್ನಲ್ಲಿ ಇವೆಲ್ಲ ಹೇಳಿದ್ದೇನೆ.॥30॥

ಮೂಲಮ್ - 31

ಇದಂ ತು ಸುಮಹಚ್ಚಿತ್ರಂ ಶರೈಃ ಪಶ್ಯಸ್ವ ಮೈಥಿಲಿ ।
ವಿಸಂಜ್ಞೌಪತಿತಾವೇತೌ ನೈವ ಲಕ್ಷ್ಮೀರ್ವಿಮುಂಚತಿ ॥

ಅನುವಾದ

ಮೈಥಿಲಿ! ಇವರು ಬದುಕಿರುವರೆಂಬುದಕ್ಕೆ ಇನ್ನೊಂದು ಹೆಗ್ಗುರುತು ಸೂಕ್ಷ್ಮವಾಗಿ ನೋಡು, ಇವರು ಮೂರ್ಛಿತ ರಾಗಿ ಬಿದ್ದಿದ್ದರೂ ಮುಖದ ತೇಜಸ್ಸು ಕೊಂಚವೂ ಕುಗ್ಗಿಲ್ಲ.॥31॥

ಮೂಲಮ್ - 32

ಪ್ರಾಯೇಣ ಗತಸತ್ತ್ವಾನಾಂ ಪುರುಷಾಣಾಂ ಗತಾಯುಷಾಮ್ ।
ದೃಶ್ಯಮಾನೇಷು ವಕ್ತ್ರೇಷು ಪರಂ ಭವತಿ ವೈಕೃತಮ್ ॥

ಅನುವಾದ

ಆಯುಷ್ಯವು ಮುಗಿದಿರುವ, ಪ್ರಾಣಗಳು ಹೊರಟು ಹೋದವರ ಮುಖದ ಕಡೆ ದೃಷ್ಟಿಹರಿಸಿದರೆ ಪ್ರಾಯಶಃ ಅಂತಹವರ ಮುಖ ವಿಕಾರಗೊಂಡಿರುವುದನ್ನು ನಾವು ಕಾಣಬಹುದು. ಆದರೆ ಇಲ್ಲಿ ಹಾಗೆ ಕಾಣುವುದಿಲ್ಲ.॥32॥

ಮೂಲಮ್ - 33

ತ್ಯಜ ಶೋಕಂ ಚ ದುಃಖಂ ಚ ಮೋಹಂ ಚ ಜನಕಾತ್ಮಜೇ ।
ರಾಮಲಕ್ಷ್ಮಣಯೋರರ್ಥೇ ನಾದ್ಯ ಶಕ್ಯಮಜೀವಿತುಮ್ ॥

ಅನುವಾದ

ಜಾನಕಿ! ನೀನು ರಾಮ-ಲಕ್ಷ್ಮಣರಿಗಾಗಿ ಶೋಕ-ದುಃಖ ಮೋಹವನ್ನು ತ್ಯಜಿಸು. ಅವರೀಗ ಬದುಕಿ ಉಳಿಯದಿರಲು ಸಾಧ್ಯವೇ ಇಲ್ಲ. (ಬದುಕಿದ್ದಾರೆ.॥33॥

ಮೂಲಮ್ - 34

ಶ್ರುತ್ವಾ ತು ವಚನಂ ತಸ್ಯಾಃ ಸೀತಾ ಸುರಸುತೋಪಮಾ ।
ಕೃತಾಂಜಲಿರುವಾಚೇಮಾಮೇವಮಸ್ತ್ವಿತಿ ಮೈಥಿಲೀ ॥

ಅನುವಾದ

ದೇವಕನ್ಯೆಯಂತಿದ್ದ ಸುಂದರೀ ಸೀತೆಯ ತ್ರಿಜಟೆಯ ಮಾತನ್ನು ಕೇಳಿ ಕೈಜೋಡಿಸಿಕೊಂಡು ನೀನು ಹೇಳಿದ ಹಾಗೆಯೇ ಆಗಲಿ ಎಂದು ನುಡಿದಳು.॥34॥

ಮೂಲಮ್ - 35

ವಿಮಾನಂ ಪುಷ್ಪಕಂ ತತ್ತು ಸಂವಿವರ್ತ್ಯ ಮನೋಜವಮ್ ।
ದೀನಾ ತ್ರಿಜಟಯಾ ಸೀತಾ ಲಂಕಾಮೇವ ಪ್ರವೇಶಿತಾ ॥

ಅನುವಾದ

ಮನೋ ವೇಗವುಳ್ಳ ಪುಷ್ಪಕವಿಮಾನವನ್ನು ಹಿಂದಿರುಗಿಸಿ ತ್ರಿಜಟೆಯು ದುಃಖಿತೆ ಯಾದ ಸೀತೆಯನ್ನು ಲಂಕೆಗೆ ಕರೆತಂದಳು.॥35॥

ಮೂಲಮ್ - 36

ತತಸ್ತ್ರಿಜಟಯಾ ಸಾರ್ಧಂ ಪುಷ್ಪಕಾದವರುಹ್ಯ ಸಾ ।
ಅಶೋಕವನಿಕಾಮೇವ ರಾಕ್ಷಸೀಭಿಃ ಪ್ರವೇಶಿತಾ ॥

ಅನುವಾದ

ಬಳಿಕ ತ್ರಿಜಟೆಯೊಂದಿಗೆ ವಿಮಾನದಿಂದ ಸೀತೆಯನ್ನು ಇಳಿಸಿ ರಾಕ್ಷಸರು ಅಶೋಕವನಕ್ಕೆ ಕರೆದೊಯ್ದರು.॥36॥

ಮೂಲಮ್ - 37

ಪ್ರವಿಶ್ಯ ಸೀತಾ ಬಹುವೃಕ್ಷಷಂಡಾಂ
ತಾಂ ರಾಕ್ಷಸೇಂದ್ರಸ್ಯ ವಿಹಾರಭೂಮಿಮ್ ।
ಸಂಪ್ರೇಕ್ಷ್ಯ ಸಂಚಿನ್ತ್ಯ ಚ ರಾಜಪುತ್ರೌ
ಪರಂ ವಿಷಾದಂ ಸಮುಪಾಜಗಾಮ ॥

ಅನುವಾದ

ಅನೇಕ ವೃಕ್ಷಗಳಿಂದ ಸುಶೋಭಿತವಾದ ರಾಕ್ಷಸರಾಜನ ಆ ವಿಹಾರ ಭೂಮಿ ಅಶೋಕವನವನ್ನು ತಲುಪಿ ಸೀತೆಯು ಅದನ್ನು ನೋಡಿ, ಇಬ್ಬರೂ ರಾಜಕುಮಾರರ ಕುರಿತಾದ ಚಿಂತೆ ಶೋಕದಲ್ಲಿ ಮುಳುಗಿಹೋದಳು.॥37॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನಲವತ್ತೆಂಟನೆಯ ಸರ್ಗ ಪೂರ್ಣವಾಯಿತು.॥48॥