०३८ रामेण सुवेलपर्वतनिवासनिश्चयः

वाचनम्
ಭಾಗಸೂಚನಾ

ಶ್ರೀರಾಮನು ಪ್ರಮುಖವಾನರರೊಂದಿಗೆ ಸುವೇಲ ಪರ್ವತವನ್ನು ಹತ್ತಿ ಅಲ್ಲೇ ರಾತ್ರೆಯಲ್ಲಿ ತಂಗಿದುದು

ಮೂಲಮ್ - 1

ಸ ತುಕೃತ್ವಾಸುವೇಲಸ್ಯ ಮತಿಮಾರೋಹಣಂ ಪ್ರತಿ ।
ಲಕ್ಷ್ಮಣಾನುಗತೋ ರಾಮಃ ಸುಗ್ರೀವಮಿದಮಬ್ರವೀತ್ ॥

ಮೂಲಮ್ - 2

ವಿಭೀಷಣಂ ಚ ಧರ್ಮಜ್ಞಮನುರಕ್ತಂ ನಿಶಾಚರಮ್ ।
ಮಂತ್ರಜ್ಞಂ ಚ ವಿಧಿಜ್ಞಂ ಚ ಶ್ಲಕ್ಷ್ಣ ಯಾ ಪರಯಾ ಗಿರಾ ॥

ಮೂಲಮ್ - 3

ಸುವೇಲಂ ಸಾಧುಶೈಲೇಂದ್ರಮಿಮಂ ಧಾತು ಶತೈಶ್ಚಿತಮ್ ।
ಅಧ್ಯಾರೋಹಾಮಹೇ ಸರ್ವೇ ವತ್ಸ್ಯಾಮೋಽತ್ರ ನಿಶಾಮಿಮಾಮ್ ॥

ಅನುವಾದ

ಸುವೇಲ ಪರ್ವತವನ್ನು ಹತ್ತಬೇಕೆಂದು ಯೋಚಿಸಿದ, ಲಕ್ಷ್ಮಣನೊಂದಿಗೆ ನಡೆಯುತ್ತಿದ್ದ ಶ್ರೀರಾಮನು ಸುಗ್ರೀವ ನಲ್ಲಿ ಮತ್ತು ಧರ್ಮಜ್ಞ, ಮಂತ್ರವೇತ್ತಾ, ವಿಧಿಜ್ಞ, ಅನುರಾಗಿಯಾದ ನಿಶಾಚರ ವಿಭೀಷಣನಲ್ಲಿ ಹೀಗೆ ಮಧುರ ವಾಗಿ ನುಡಿದನು. ಮಿತ್ರನೇ! ಈ ಸುವೇಲ ಪರ್ವತವು ನೂರಾರು ಧಾತುಗಳಿಂದ ಚೆನ್ನಾಗಿ ತುಂಬಿದೆ. ನಾವೆಲ್ಲರೂ ಇದನ್ನು ಹತ್ತಿ ಇಂದಿನ ಇರುಳನ್ನು ಇಲ್ಲೇ ಕಳೆಯುವಾ.॥1-3॥

ಮೂಲಮ್ - 4

ಲಂಕಾಂ ಚಾಲೋಕಯಿಷ್ಯಾಮೋ ನಿಲಯಂ ತಸ್ಯ ರಕ್ಷಸಃ ।
ಯೇನ ಮೇ ಮರಣಾಂತಾಯ ಹೃತಾ ಭಾರ್ಯಾ ದುರಾತ್ಮನಾ ॥

ಅನುವಾದ

ನಾವು ಇಲ್ಲಿಂದ ನನ್ನ ಪತ್ನಿಯನ್ನು ಕದ್ದು ತಂದು ಮೃತ್ಯು ಮುಖನಾದ ಆ ದುರಾತ್ಮನಾದ ರಾವಣನ ನಿವಾಸವಾದ ಲಂಕೆಯನ್ನೂ ಅವಲೋಕಿಸಬಹುದು.॥4॥

ಮೂಲಮ್ - 5

ಯೇನ ಧರ್ಮೋ ನ ವಿಜ್ಞಾತೋ ನ ವೃತ್ತಂನ ಕುಲಂ ತಥಾ ।
ರಾಕ್ಷಸ್ಯಾ ನೀಚಯಾ ಬುದ್ಧ್ಯಾ ಯೇನ ತದ್ಗರ್ಹಿತಂ ಕೃತಮ್ ॥

ಅನುವಾದ

ಅವನು ಧರ್ಮವನ್ನು ತಿಳಿದಿಲ್ಲ, ಸದಾಚಾರದ ಅರಿವೇ ಇಲ್ಲ, ಕುಲದ ವಿಚಾರವನ್ನು ಮಾಡದೆ ಕೇವಲ ರಾಕ್ಷಸೋಚಿತ ನೀಚ ಬುದ್ಧಿಯಿಂದಾಗಿ ಇಂತಹ ನಿಂದಿತ ಕರ್ಮವನ್ನು ಮಾಡಿರುವನು.॥5॥

ಮೂಲಮ್ - 6

ತಸ್ಮಿನ್ ಮೇ ವರ್ತತೇ ರೋಷಃ ಕೀರ್ತಿತೇ ರಾಕ್ಷಸಾಧಮೇ ।
ಯಸ್ಯಾಪರಾಧಾನ್ನೀಚಸ್ಯ ವಧಂ ದ್ರಕ್ಷ್ಯಾಮಿ ರಕ್ಷಸಾಮ್ ॥

ಅನುವಾದ

ಆ ನೀಚ ರಾಕ್ಷಸನ ಹೆಸರೆತ್ತಿದರೆ ಅವನ ಮೇಲೆ ನನ್ನ ರೋಷ ಉರಿದೇಳುತ್ತದೆ. ಕೇವಲ ಆ ಅಧಮ ನಿಶಾಚರನ ಅಪರಾಧದಿಂದಲೇ ಸಮಸ್ತ ರಾಕ್ಷಸರ ವಧೆಯನ್ನು ನಾನು ನೋಡುವೆನು.॥6॥

ಮೂಲಮ್ - 7

ಏಕೋ ಹಿ ಕುರುತೇ ಪಾಪಂ ಕಾಲಪಾಶವಶಂ ಗತಃ ।
ನೀಚೇನಾತ್ಮಾಪಚಾರೇಣ ಕುಲಂ ತೇನ ವಿನಶ್ಯತಿ ॥

ಅನುವಾದ

ಕಾಲಪಾಶದಿಂದ ಬಂಧಿತನಾದ ಒಬ್ಬ ಮನುಷ್ಯನೇ ಪಾಪಮಾಡುತ್ತಾನೆ, ಆದರೆ ಆ ನೀಚನ ದೋಷದಿಂದ ಇಡೀ ಕುಲವೇ ನಾಶವಾಗುತ್ತದೆ.॥7॥

ಮೂಲಮ್ - 8

ಏವಂ ಸಮ್ಮಂತ್ರಯನ್ನೇವ ಸಕ್ರೋಧೋ ರಾವಣಂ ಪ್ರತಿ ।
ರಾಮಃ ಸುವೇಲಂ ವಾಸಾಯ ಚಿತ್ರ ಸಾನುಮುಪಾರುಹತ್ ॥

ಅನುವಾದ

ಹೀಗೆ ಮಂತ್ರಾಲೋಚನೆ ಮಾಡುತ್ತಾ ಶ್ರೀರಾಮನು ರಾವಣನ ಕುರಿತು ಕುಪಿತನಾಗಿ ವಿಚಿತ್ರ ಶಿಖರವುಳ್ಳ ಸುವೇಲ ಪರ್ವತದ ಮೇಲೆ ವಾಸಿಸಲು ಏರಿದನು.॥8॥

ಮೂಲಮ್ - 9

ಪೃಷ್ಠತೋ ಲಕ್ಷ್ಮಣಶ್ಚೈನಮನ್ವಗಚ್ಛತ್ ಸಮಾಹಿತಃ ।
ಸಶರಂ ಚಾಪಮುದ್ಯಮ್ಯ ಸುಮಹದ್ವಿಕ್ರಮೇ ರತಃ ॥

ಅನುವಾದ

ಅವನ ಹಿಂದೆಯೇ ಮಹಾಪರಾಕ್ರಮದಲ್ಲಿ ತತ್ಪರ ಹಾಗೂ ಏಕಾಗ್ರ ಚಿತ್ತನಾಗಿ ಧನುರ್ಬಾಣಗಳನ್ನು ಎತ್ತಿಕೊಂಡು ಆ ಪರ್ವತದಲ್ಲಿ ಆರೂಢನಾದನು.॥9॥

ಮೂಲಮ್ - 10

ತಮನ್ವಾರೋಹತ್ಸುಗ್ರೀವಃ ಸಾಮಾತ್ಯಃ ಸವಿಭೀಷಣಃ ।
ಹನುಮಾನಂಗದೋ ನೀಲೋ ಮೈಂದೋ ದ್ವಿವಿದ ಏವಚ ॥

ಮೂಲಮ್ - 11

ಗಜೋ ಗವಾಕ್ಷೋ ಗವಯಃ ಶರಭೋ ಗಂಧಮಾದನಃ ।
ಪನಸಃ ಕುಮುದಶ್ಚೈವ ಹರೋ ರಂಭಶ್ಚ ಯೂಥಪಃ ॥

ಮೂಲಮ್ - 12

ಜಾಂಬವಾಂಶ್ಚ ಸುಷೇಣಶ್ಚ ಋಷಭಶ್ಚ ಮಹಾಮತಿಃ ।
ದುರ್ಮುಖಶ್ಚ ಮಹಾತೇಜಾಸ್ತಥಾ ಶತಬಲಿಃ ಕಪಿಃ ॥

ಮೂಲಮ್ - 13

ಏತೇ ಚಾನ್ಯೇ ಚ ಬಹವೋ ವಾನರಾಃ ಶ್ರೀಘ್ರಗಾಮಿನಃ ।
ತೇ ವಾಯುವೇಗ ಪ್ರವಣಾಸ್ತಂ ಗಿರಿಂ ಗಿರಿಚಾರಿಣಃ ॥

ಅನುವಾದ

ಬಳಿಕ ಸುಗ್ರೀವ, ಮಂತ್ರಿಗಳ ಸಹಿತ ವಿಭೀಷಣ, ಹನುಮಂತ, ಅಂಗದ, ನೀಲ, ಮೈಂದ, ದ್ವಿವಿದ, ಗಜ, ಗವಾಕ್ಷ, ಗವಯ, ಶರಭ, ಗಂಧಮಾದನ, ಪನಸ, ಕುಮುದ, ಹರ, ಸೇನಾಪತಿ ರಂಭ, ಜಾಂಬವಂತ, ಸುಷೇಣ, ಮಹಾಮತಿ, ಋಷಭ, ಮಹಾತೇಜಸ್ವಿ ದುರ್ಮುಖ ಹಾಗೂ ಕಪಿವರ ಶತಬಲಿ ಹೀಗೆ ಇವರಲ್ಲದೆ ಇತರ ಶೀಘ್ರಗಾಮಿ, ವಾಯುವೇಗದಂತೆ ಪಡೆಯುವ, ಪರ್ವತಗಳಲ್ಲೇ ಸಂಚರಿಸುವ ವಾನರರು ಆ ಸುವೇಲಗಿರಿಯ ಮೇಲೆ ಹತ್ತಿದರು.॥10-13॥

ಮೂಲಮ್ - 14

ಅಧ್ಯಾರೋಹಂತ ಶತಶಃ ಸುವೇಲಂ ಯತ್ರ ರಾಘವಃ ।
ತೇ ತ್ವದೀರ್ಘೇಣ ಕಾಲೇನ ಗಿರಿಮಾರುಹ್ಯ ಸರ್ವತಃ ॥

ಅನುವಾದ

ಸುವೇಲ ಪರ್ವದಲ್ಲಿ ವಿರಾಜಿಸುತ್ತಿದ್ದ ಶ್ರೀರಘು ನಾಥನ ಬಳಿಗೆ ಸಾವಿರಾರು ವಾನರು ಹತ್ತಿ ಹೋದರು ಹಾಗೂ ಎಲ್ಲೆಡೆ ಸಂಚರಿಸತೊಡಗಿದರು.॥14॥

ಮೂಲಮ್ - 15½

ದದೃಶುಃ ಶಿಖರೇ ತಸ್ಯವಿಷಕ್ತಾಮಿವ ಖೇ ಪುರೀಮ್ ।
ತಾಂ ಶುಭಾಂ ಪ್ರವರ ದ್ವಾರಾಂ ಪ್ರಾಕಾರವರಶೋಭಿತಾಮ್ ॥
ಲಂಕಾಂ ರಾಕ್ಷಸ ಸಂಪೂರ್ಣಾಂ ದದೃಶುರ್ಹರಿಯೂಥಪಾಃ ॥

ಅನುವಾದ

ಆ ವಾನರ ಸೇನಾಪತಿಗಳು ಸುವೇಲ ಪರ್ವತದ ಶಿಖರದಲ್ಲಿ ನಿಂತು ಆಕಾಶದಲ್ಲೆ ನಿರ್ಮಿಸಿದಂತೆ ಕಂಡುಬರುವ ಸುಂದರ ಲಂಕಾಪುರಿಯನ್ನು ನಿರೀಕ್ಷಿಸಿದರು. ಉತ್ತಮ ಪ್ರಾಕಾರಗಳಿಂದ ಆ ನಗರಿಯು ಹೆಚ್ಚು ಶೋಭಿಸುತ್ತಿದ್ದ, ಅದರಲ್ಲಿ ರಾಕ್ಷಸರು ತುಂಬಿಕೊಂಡಿದ್ದರು.॥15॥

ಮೂಲಮ್ - 16

ಪ್ರಾಕಾರವರಸಂಸ್ಥೈಶ್ಚ ತಥಾ ನೀಲೈಶ್ಚ ರಾಕ್ಷಸೈಃ ॥

ಮೂಲಮ್ - 17

ದದೃಶುಸ್ತೇ ಹರಿಶ್ರೇಷ್ಠಾಃ ಪ್ರಾಕಾರಮಪರಂ ಕೃತಮ್ ॥

ಅನುವಾದ

ಉತ್ತಮ ಪ್ರಾಕಾರಗಳಲ್ಲಿ ನಿಂತಿರುವ ನೀಲಿವರ್ಣದ ರಾಕ್ಷಸರು ಇನ್ನೊಂದು ಪ್ರಾರವನ್ನೇ ನಿರ್ಮಿಸಿದಂತೆ ಅನಿಸುತ್ತಿದ್ದರು. ಆ ಶ್ರೇಷ್ಠ ವಾನರರು ಅದೆಲ್ಲವನ್ನು ನೋಡಿದರು.॥16-17॥

ಮೂಲಮ್ - 18

ತೇ ದೃಷ್ಟ್ವಾವಾನರಾಃ ಸರ್ವೇ ರಾಕ್ಷಸಾನ್ ಯುದ್ಧಕಾಂಕ್ಷಿಣಃ ।
ಮುಮುಚುರ್ವಿವಿಧಾನ್ ನಾದಾಂಸ್ತಸ್ಯ ರಾಮಸ್ಯ ಪಶ್ಯತಃ ॥

ಅನುವಾದ

ಯುದ್ಧದ ಇಚ್ಛೆಯುಳ್ಳ ರಾಕ್ಷಸರನ್ನು ನೋಡಿ ಆ ಎಲ್ಲ ವಾನರರು ಶ್ರೀರಾಮನನ್ನು ನೋಡು ನೋಡುತ್ತಾ ನಾನಾ ಪ್ರಕಾರದಿಂದ ಸಿಂಹನಾದ ಮಾಡತೊಡಗಿದರು.॥18॥

ಮೂಲಮ್ - 19

ತತೋಽಸ್ತ ಮಗಮತ್ ಸೂರ್ಯಃ ಸಂಧ್ಯಯಾ ಪ್ರತಿರಂಜಿತಃ ।
ಪೂರ್ಣಚಂದ್ರಪ್ರದೀಪ್ತಾ ಚ ಕ್ಷಪಾ ಸಮಭಿವರ್ತತ ॥

ಅನುವಾದ

ಬಳಿಕ ಸಂಧ್ಯಾಕಾಲದಲ್ಲಿ ಕೆಂಪಾದ ಸೂರ್ಯನು ಅಸ್ತಾಚಲವನ್ನು ಸೇರಿದನು ಹಾಗೂ ಪೂರ್ಣಚಂದ್ರನಿಂದ ಬೆಳಗುವ ರಾತ್ರಿಯು ಎಲ್ಲೆಡೆ ಆವರಿಸಿತು.॥19॥

ಮೂಲಮ್ - 20

ತತಃ ಸ ರಾಮೋ ಹರಿವಾಹಿನೀಪತಿ
ರ್ವಿಭೀಷಣೇನ ಪ್ರತಿನಂದ್ಯ ಸತ್ಕೃತಃ ।
ಸಲಕ್ಷ್ಮಣೋ ಯೂಥಪಯೂಥಸಂಯುತಃ
ಸುವೇಲಪೃಷ್ಠೇ ನ್ಯವಸದ್ ಯಥಾಸುಖಮ್ ॥

ಅನುವಾದ

ಅನಂತರ ವಿಭೀಷಣನಿಂದ ಆದರದಿಂದ ಸಮ್ಮಾನಿತರಾದ ವಾನರ ಸೈನ್ಯದ ಒಡೆಯ ಶ್ರೀರಾಮನು ತಮ್ಮನಾದ ಲಕ್ಷ್ಮಣ ಮತ್ತು ಸೇನಾಪತಿಗಳ ಸಮುದಾಯದೊಂದಿಗೆ ಸುವೇಲ ಪರ್ವತದ ತುದಿಯಲ್ಲಿ ಸುಖವಾಗಿ ವಾಸಿಸಿದನು.॥20॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತೆಂಟನೆಯ ಸರ್ಗ ಪೂರ್ಣವಾಯಿತು.॥38॥