वाचनम्
ಭಾಗಸೂಚನಾ
ರಾವಣನು ಮಾಡಿದ ಲಂಕೆಯ ರಕ್ಷಣೆಯ ವ್ಯವಸ್ಥೆಯನ್ನು ವಿಭೀಷಣನು ಶ್ರೀರಾಮನಲ್ಲಿ ವರ್ಣಿಸಿದುದು, ಶ್ರೀರಾಮನಿಂದ ಲಂಕೆಯ ಬೇರೆ ಬೇರೆ ದ್ವಾರಗಳ ಮೇಲೆ ಆಕ್ರಮಣ ಮಾಡಲು ತನ್ನ ಸೇನಾಪತಿಗಳ ನಿಯುಕ್ತಿ
ಮೂಲಮ್ - 1
ನರವಾನರರಾಜಾನೌ ಸ ತು ವಾಯುಸುತಃ ಕಪಿಃ ।
ಜಾಂಬವಾನೃಕ್ಷರಾಜಶ್ಚ ರಾಕ್ಷಸಶ್ಚ ವಿಭೀಷಣಃ ॥
ಮೂಲಮ್ - 2
ಅಂಗದೋ ವಾಲಿಪುತ್ರಶ್ಚ ಸೌಮಿತ್ರಿಃ ಶರಭಃ ಕಪಿಃ ।
ಸುಷೇಣಃ ಸಹದಾಯಾದೋ ಮೈಂದೋ ದ್ವಿವಿದ ಏವ ಚ ॥
ಮೂಲಮ್ - 3
ಗಜೋ ಗವಾಕ್ಷಃ ಕುಮುದೋ ನಲೋಽಥ ಪನಸಸ್ತಥಾ ।
ಅಮಿತ್ರವಿಷಯಂ ಪ್ರಾಪ್ತಾಃ ಸಮವೇತಾಃ ಸಮರ್ಥಯನ್ ॥
ಅನುವಾದ
ಶತ್ರುಗಳ ದೇಶವನ್ನು ತಲುಪಿತ ನರರಾಜ ಶ್ರೀರಾಮ, ಸಮಿತ್ರಾಕುಮಾರ ಲಕ್ಷ್ಮಣ, ವಾನರರಾಜ ಸುಗ್ರೀವ, ವಾಯುಪುತ್ರ ಹನುಮಂತ, ಋಕ್ಷರಾಜ ಜಾಂಬವಂತ, ರಾಕ್ಷಸ ವಿಭೀಷಣ, ವಾಲೀಪುತ್ರ ಅಂಗದ, ಶರಭ, ಬಂಧು-ಬಾಂಧವರೊಂದಿಗೆ ಸುಷೇಣ, ಮೈಂದ, ದ್ವಿವಿದ, ಗಜ, ಗವಾಕ್ಷ, ಕುಮುದ, ನಳ, ಪನಸ ಹೀಗೆ ಎಲ್ಲರೂ ಸೇರಿ ಪರಸ್ಪರ ವಿಚಾರವಿನಿಮಯ ಮಾಡಿದನು.॥1-.॥
ಮೂಲಮ್ - 4
ಇಯಂ ಸಾ ಲಕ್ಷ್ಯತೇ ಲಂಕಾಪುರೀ ರಾವಣಪಾಲಿತಾ ।
ಸಾಸುರೋಗಗಂಧರ್ವೈರಮರೈರಪಿ ದುರ್ಜಯಾ ॥
ಅನುವಾದ
ರಾವಣನು ಪಾಲಿಸುವ ಲಂಕೆಯು ಅದೋ ಕಾಣುತ್ತಿದೆ. ಅಸುರ, ನಾಗ, ಗಂಧರ್ವರ ಸಹಿತ ಸಮಸ್ತ ದೇವತೆಗಳಿಗೂ ಇದನ್ನು ಜಯಿಸುವುದು ಅತ್ಯಂತ ಕಠಿಣವಾಗಿದೆ.॥.॥
ಮೂಲಮ್ - 5
ಕಾರ್ಯಸಿದ್ಧಿಂ ಪುರಸ್ಕೃತ್ಯ ಮಂತ್ರಯಧ್ವಂ ವಿನಿರ್ಣಯೇ ।
ನಿತ್ಯಂ ಸಂನಿಹಿತೋ ಯತ್ರ ರಾವಣೋ ರಾಕ್ಷಸಾಧಿಪಃ ॥
ಅನುವಾದ
ರಾಕ್ಷಸರಾಜ ರಾವಣನು ಈ ಪುರಿಯಲ್ಲಿ ಸದಾ ವಾಸಿಸುತ್ತಾನೆ. ಈಗ ಅವನನ್ನು ಗೆಲ್ಲುವ ಉಪಾಯಗಳನ್ನು ನಿರ್ಣಯಿಸಲು ಪರಸ್ಪರ ವಿಚಾರ ಮಾಡಿರಿ.॥.॥
ಮೂಲಮ್ - 6
ಅಥ ತೇಷುಬ್ರುವಾಣೇಷು ರಾವಣಾವರಜೋಽಬ್ರವೀತ್ ।
ವಾಕ್ಯಮಗ್ರಾಮ್ಯಪದವತ್ ಪುಷ್ಕಲಾರ್ಥಂ ವಿಭೀಷಣಃ ॥
ಅನುವಾದ
ಅವರೆಲ್ಲರೂ ಹೀಗೆ ಹೇಳಿದಾಗ ರಾವಣನ ತಮ್ಮ ವಿಭೀಷಣನು ಸಂಸ್ಕಾರಯುಕ್ತ ಪದ ಮತ್ತು ಅರ್ಥವತ್ತಾದ ವಾಣಿಯಿಂದ ಹೀಗೆ ಹೇಳಿದನು.॥.॥
ಮೂಲಮ್ - 7
ಅನಲಃ ಪನಸಶ್ಚೈವ ಸಂಪಾತಿಃ ಪ್ರಮತಿಸ್ತಥಾ ।
ಗತ್ವಾ ಲಂಕಾಂ ಮಮಾಮಾತ್ಯಾಃ ಪುರೀಂ ಪುನರಿಹಾಗತಾಃ ॥
ಅನುವಾದ
ನನ್ನ ಮಂತ್ರಿಗಳಾದ ಅನಲ, ಪನಸ, ಸಂಪಾತಿ ಮತ್ತು ಪ್ರಮತಿ ಇವರು ನಾಲ್ವರು ಲಂಕಾಪುರಿಗೆ ಹೋಗಿ ಬಂದಿರುವರು.॥7॥
ಮೂಲಮ್ - 8
ಭೂತ್ವಾ ಶಕುನಯಃ ಸರ್ವೇ ಪ್ರವಿಷ್ಟಾಶ್ಚ ರಿಪೋರ್ಬಲಮ್ ।
ವಿಧಾನಂ ವಿಹಿತಂ ಯಚ್ಚ ತದ್ದೃಷ್ಟ್ವಾ ಸಮುಪಸ್ಥಿತಾಃ ॥
ಅನುವಾದ
ಇವರೆಲ್ಲರೂ ಪಕ್ಷಿಗಳ ರೂಪಧರಿಸಿ ಶತ್ರು ಸೈನ್ಯದೊಳಗೆ ಹೋಗಿ, ಅಲ್ಲಿ ಮಾಡಿದ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಇಲ್ಲಿಗೆ ಅಗಮಿಸಿರುವರು.॥.॥
ಮೂಲಮ್ - 9
ಸಂವಿಧಾನಂ ಯದಾಹುಸ್ತೇ ರಾವಣಸ್ಯ ದುರಾತ್ಮನಃ ।
ರಾಮ ತದ್ಬ್ರುವತಃ ಸರ್ವಂ ಯಥಾ ತಥ್ಯೇನ ಮೇ ಶೃಣು ॥
ಅನುವಾದ
ಶ್ರೀರಾಮಾ! ದುರಾತ್ಮಾ ರಾವಣನು ಮಾಡಿದ ನಗರ ರಕ್ಷಣೆಯ ವ್ಯವಸ್ಥೆಯನ್ನು ಇವರು ವರ್ಣಿಸಿದಂತೆ ನಾನು ಸರಿಯಾಗಿ ತಿಳಿಸುತ್ತೇನೆ, ನೀವೆಲ್ಲರೂ ಕೇಳಿರಿ.॥.॥
ಮೂಲಮ್ - 10
ಪೂರ್ವಂ ಪ್ರಹಸ್ತಃ ಸಬಲೋ ದ್ವಾರಮಾಸಾದ್ಯ ತಿಷ್ಠತಿ ।
ದಕ್ಷಿಣಂ ಚ ಮಹಾವೀರ್ಯೌ ಮಹಾಪಾರ್ಶ್ವ ಮಹೋದರೌ ॥
ಅನುವಾದ
ಸೈನ್ಯ ಸಹಿತ ಪ್ರಹಸ್ತನು ನಗರದ ಪೂರ್ವದ್ವಾರದಲ್ಲಿ ನಿಂತಿರುವನು. ಮಹಾಪರಾಕ್ರಮಿ ಮಹಾಪಾರ್ಶ್ವ ಮತ್ತು ಮಹೋದರರು ದಕ್ಷಿಣ ದ್ವಾರವನ್ನು ರಕ್ಷಿಸುತ್ತಿದ್ದಾರೆ.॥1.॥
ಮೂಲಮ್ - 11½
ಇಂದ್ರಜಿತ್ಪಶ್ಚಿಮ ದ್ವಾರಂ ರಾಕ್ಷಸೈರ್ಬಹುಭಿರ್ವೃತಃ ।
ಪಟ್ಟಿಶಾಸಿಧನುಷ್ಮದ್ಭಿಃ ಶೂಲಮುದ್ಗರಪಾಣಿಭಿಃ ॥
ನಾನಾ ಪ್ರಹರಣೈಃ ಶೂರೈರಾವೃತೋ ರಾವಣಾತ್ಮಜಃ ।
ಅನುವಾದ
ಅಸಂಖ್ಯ ರಾಕ್ಷಸರಿಂದ ಕೂಡಿ ಕೊಂಡು ಇಂದ್ರಜಿತನು ನಗರದ ಪಶ್ಚಿಮ ದ್ವಾರದಲ್ಲಿ ನಿಂತಿರುವನು. ಅವನ ಅನುಚರ ರಾಕ್ಷಸರು ಪಟ್ಟಿಶ, ಖಡ್ಗ, ಧನುರ್ಬಾಣ, ಶುಲ, ಮುದ್ಗರ ಮುಂತಾದ ಅಸ್ತ್ರ-ಶಸ್ತ್ರಗಳನ್ನು ಧರಿಸಿರುವರು. ನಾನಾ ಪ್ರಕಾರದ ಆಯುಧಗಳಿಂದ ಸಜ್ಜಾದ ಶೂರವೀರರು ಅವನನ್ನು ಸುತ್ತುವರಿ ದಿರುವ ಆ ರಾವಣ ಕುಮಾರನು ಪಶ್ಚಿಮದ ಬಾಗಿಲನ್ನು ಕಾಯುತ್ತಿದ್ದಾನೆ.॥1.॥
ಮೂಲಮ್ - 12
ರಾಕ್ಷಸಾನಾಂ ಸಹಸ್ರೈಸ್ತು ಬಹುಭಿಃ ಶಸ್ತ್ರಪಾಣಿಭಿಃ ॥
ಮೂಲಮ್ - 13
ಯುಕ್ತಃ ಪರಮ ಸಂವಿಗ್ನೋ ರಾಕ್ಷಸೈಃ ಸಹ ಮಂತ್ರವಿತ್ ।
ಉತ್ತರಂ ನಗರದ್ವಾರಂ ರಾವಣಃ ಸ್ವಯಮಾಸ್ಥಿತಃ ॥
ಅನುವಾದ
ಮಂತ್ರವೇತ್ತನಾದ ರಾವಣನು ಸ್ವತಃ ಶುಕ-ಸಾರಣಾದಿ ಅನೇಕ ಸಾವಿರ ಶಸ್ತ್ರಧಾರಿ ರಾಕ್ಷಸರೊಂದಿಗೆ ನಗರದ ಉತ್ತರದ ದ್ವಾರದಲ್ಲಿ ನಿಂತಿರುವನು. ಅವನು ಮನಸ್ಸಿನಲ್ಲಿ ಉದ್ವಿಗ್ನನಂತೆ ಕಾಣುತ್ತಿದ್ದಾನೆ.॥12-13॥
ಮೂಲಮ್ - 14
ವಿರೂಪಾಕ್ಷಸ್ತು ಮಹತಾ ಶೂಲಖಡ್ಗ ಧನುಷ್ಮತಾ ।
ಬಲೇನ ರಾಕ್ಷಸೈಃ ಸಾರ್ಧಂ ಮಧ್ಯಮಂ ಗುಲ್ಮಮಾಸ್ಥಿತಃ ॥
ಅನುವಾದ
ವಿರೂಪಾಕ್ಷನು ಶುಲ, ಖಡ್ಗ, ಧನುಸ್ಸು ಧರಿಸಿರುವ ವಿಶಾಲ ರಾಕ್ಷಸ ಸೈನ್ಯದೊಂದಿಗೆ ನಗರದ ನಡುವೆ ಸೈನ್ಯ ಶಿಬಿರವನ್ನು ಕಾಯುತ್ತಾ ನಿಂತಿರುವನು.॥14॥
ಮೂಲಮ್ - 15
ಏತಾನೇವಂ ವಿಧಾನ್ಗುಲ್ಮಾನ್ಲ್ಲಂಕಾಯಾಂ ಸಮುದೀಕ್ಷ್ಯತೇ ।
ಮಾಮಕಾಃ ಮಂತ್ರಿಣಃ ಸರ್ವೇ ಶೀಘ್ರಂ ಪುನರಿಹಾಗತಾಃ ॥
ಅನುವಾದ
ಈ ಪ್ರಕಾರ ನನ್ನ ಎಲ್ಲ ಮಂತ್ರಿಗಳು ಲಂಕೆಯ ಬೇರೆ ಬೇರೆ ಸ್ಥಾನಗಳಲ್ಲಿ ನಿಯುಕ್ತಗೊಳಿಸಿದ ಸೈನ್ಯವನ್ನು ನಿರೀಕ್ಷಿಸಿ ಶೀಘ್ರವಾಗಿ ಇಲ್ಲಿಗೆ ಬಂದಿರುವರು.॥1.॥
ಮೂಲಮ್ - 16
ಗಜಾನಾಂ ದಶಸಾಹಸ್ರಂ ರಥಾನಾಮಯುತಂ ತಥಾ ।
ಹಯಾನಾಮಯುತೇ ದ್ವೇ ಚ ಸಾಗ್ರಕೋಟಿಶ್ಚ ರಕ್ಷಸಾಮ್ ॥
ಅನುವಾದ
ರಾವಣನ ಸೈನ್ಯದಲ್ಲಿ ಹತ್ತುಸಾವಿರ ಆನೆಗಳು, ಹತ್ತು ಸಾವಿರ ರಥ, ಇಪ್ಪತ್ತು ಸಾವಿರ ಕುದುರೆಗಳು, ಒಂದು ಕೋಟಿಗೂ ಹೆಚ್ಚಾದ ಕಾಲಾಳು ರಾಕ್ಷಸರಿದ್ದಾರೆ.॥1.॥
ಮೂಲಮ್ - 17
ವಿಕ್ರಾಂತಾ ಬಲವಂತಶ್ಚ ಸಂಯುಗೇಷ್ವಾತತಾಯಿನಃ ।
ಇಷ್ಟಾ ರಾಕ್ಷಸರಾಜಸ್ಯ ನಿತ್ಯಮೇತೇ ನಿಶಾಚರಾಃ ॥
ಅನುವಾದ
ಅವರೆಲ್ಲರೂ ಬಹಳ ವೀರ ಬಲ-ಪರಾಕ್ರಮ ಸಂಪನ್ನರಾಗಿ, ಆತತಾಯಿಗಳಾಗಿದ್ದಾರೆ. ಈ ಎಲ್ಲ ನಿಶಾಚರರು ರಾವಣನಿಗೆ ಸದಾ ಪ್ರಿಯರಾಗಿದ್ದಾರೆ.॥17॥
ಮೂಲಮ್ - 18
ಏಕೈಕಸ್ಯಾತ್ರ ಯುದ್ಧಾರ್ಥೇ ರಾಕ್ಷಸಸ್ಯ ವಿಶಾಂಪತೇ ।
ಪರಿವಾರಃ ಸಹಸ್ರಾಣಾಂ ಸಹಸ್ರ ಮುಪತಿಷ್ಠತೇ ॥
ಅನುವಾದ
ಪ್ರಜಾನಾಥನೇ! ಇವರಲ್ಲಿ ಒಬ್ಬೊಬ್ಬ ರಾಕ್ಷಸನ ಬಳಿ ಯುದ್ಧಕ್ಕಾಗಿ ಹತ್ತತ್ತು ಲಕ್ಷದ ಪರಿವಾರವಿದೆ.॥18॥
ಮೂಲಮ್ - 19½
ಏತಾಂ ಪ್ರವೃತ್ತಿಂ ಲಂಕಾಯಾಂ ಮಂತ್ರಿಪ್ರೋಕ್ತಾಂ ವಿಭೀಷಣಃ ।
ಏವಮುಕ್ತ್ವಾ ಮಹಾಬಾಹೂ ರಾಕ್ಷಸಾಂಸ್ತಾನ ದರ್ಶಯತ್ ॥
ಲಂಕಾಯಾಂ ಸಚಿವೈಃ ಸರ್ವಂ ರಾಮಾಯ ಪ್ರತ್ಯವೇದಯತ್ ॥
ಅನುವಾದ
ಮಹಾಬಾಹು ವಿಭೀಷಣನು ಮಂತ್ರಿಗಳು ತಿಳಿಸಿದ ಲಂಕೆಯ ಸಮಾಚಾರವನ್ನು ಈ ಪ್ರಕಾರ ಹೇಳಿ, ಆ ಮಂತ್ರಿಗಳಾದ ರಾಕ್ಷಸರನ್ನು ಶ್ರೀರಾಮನಿಗೆ ಭೆಟ್ಟಿಯಾಗಿಸಿ, ಅವರಿಂದ ಲಂಕೆಯ ಎಲ್ಲ ವೃತ್ತಾಂತವನ್ನು ಪುನಃ ಹೇಳಿಸಿದನು.॥19½॥
ಮೂಲಮ್ - 20½
ರಾಮಂ ಕಮಲಪತ್ರಾಕ್ಷಮಿದಮುತ್ತರಮಬ್ರವೀತ್ ॥
ರಾವಣಾವರಜಃ ಶ್ರೀಮಾನ್ ರಾಮಪ್ರಿಯಚಿಕೀರ್ಷಯಾ ।
ಅನುವಾದ
ಬಳಿಕ ರಾವಣನ ತಮ್ಮ ಶ್ರೀಮಾನ್ ವಿಭೀಷಣನು ಕಮಲನಯನ ಶ್ರೀರಾಮನಲ್ಲಿ ಅವನ ಪ್ರಿಯವನ್ನು ಮಾಡಲಿಕ್ಕಾಗಿ ಸ್ವತಃ ಹೀಗೆ ಉತ್ತಮ ಮಾತನ್ನು ಹೇಳಿದನು.॥20½॥
ಮೂಲಮ್ - 21
ಕುಬೇರಂ ತು ಯದಾ ರಾಮ ರಾವಣಃ ಪ್ರತಿಯುಧ್ಯತಿ ॥
ಮೂಲಮ್ - 22
ಷಷ್ಟಿಃ ಶತಸಹಸ್ರಾಣಿ ತದಾ ನಿರ್ಯಾಂತಿ ರಾಕ್ಷಸಾಃ ।
ಪರಾಕ್ರಮೇಣ ವೀರ್ಯೇಣ ತೇಜಸಾ ಸತ್ತ್ವ ಗೌರವಾತ್ ।
ಸದೃಶಾ ಹ್ಯತ್ರ ದರ್ಪೇಣ ರಾವಣಸ್ಯ ದುರಾತ್ಮನಃ ॥
ಅನುವಾದ
ಶ್ರೀರಾಮಾ! ರಾವಣನು ಕುಬೇರನೊಂದಿಗೆ ಯುದ್ಧಮಾಡುವಾಗ ಅವನೊಂದಿಗೆ ಅರವತ್ತು ಲಕ್ಷ ರಾಕ್ಷಸರು ಹೋಗಿದ್ದರು. ಅವರೆಲ್ಲರಲ್ಲಿ ಬಲ-ಪರಾಕ್ರಮ, ತೇಜ, ಧೈರ್ಯವು ಹೆಚ್ಚಾಗಿದ್ದು ದರ್ಪದ ದೃಷ್ಟಿಯಿಂದ ದುರಾತ್ಮಾ ರಾವಣ ನಂತೆಯೇ ಇದ್ದರು.॥21-22॥
ಮೂಲಮ್ - 23
ಅತ್ರ ಮನ್ಯುರ್ನ ಕರ್ತವ್ಯಃ ಕೋಪಯೇ ತ್ವಾಂ ನ ಭೀಷಯೇ ।
ಸಮರ್ಥೋ ಹ್ಯಸಿ ವೀರ್ಯೇಣ ಸುರಾಣಾಮಪಿ ನಿಗ್ರಹೇ ॥
ಅನುವಾದ
ರಾವಣನ ಶಕ್ತಿಯನ್ನು ನಾನು ವರ್ಣಿಸಿದ್ದರಿಂದ ನಿನ್ನ ಮನಸ್ಸಿಗೆ ದೀನತೆ ಬರಬಾರದು ಮತ್ತು ನನ್ನ ಮೇಲೆ ಕೋಪಗೊಳ್ಳಬಾರದು. ನಾನು ನಿನಗೆ ಹೆದರುವುದಿಲ್ಲ, ಆದರೆ ಶತ್ರುವಿನ ಕುರಿತು ನಿನಗಿರುವ ಕ್ರೋಧಕ್ಕೆ ಅಂಜುತ್ತಿದ್ದೇನೆ; ಏಕೆಂದರೆ ನೀನು ನಿನ್ನ ಬಲ-ಪರಾಕ್ರಮದಿಂದ ದೇವತೆಗಳನ್ನು ದಮನ ಮಾಡಲು ಸಮರ್ಥನಾಗಿರುವೆ.॥23॥
ಮೂಲಮ್ - 24
ತದ್ಭವಾಂಶ್ಚತುರಂಗೇಣ ಬಲೇನ ಮಹತಾ ವೃತಮ್ ।
ವ್ಯೆಹ್ಯೇದಂ ವಾನರಾನೀಕಂ ನಿರ್ಮಥಿಷ್ಯಸಿ ರಾವಣಮ್ ॥
ಅನುವಾದ
ಅದಕ್ಕಾಗಿ ನೀನು ವಾನರಸೈನ್ಯದ ವ್ಯೆಹರಚಿಸಿಕೊಂಡು ವಿಶಾಲ ಚತುರಂಗಿಣಿ ಸೈನ್ಯದಿಂದ ಕೂಡಿದ ರಾವಣನನ್ನು ವಿನಾಶ ಮಾಡಬಲ್ಲೆ.॥24॥
ಮೂಲಮ್ - 25
ರಾವಣಾವರಜೇ ವಾಕ್ಯಮೇವಂ ಬ್ರುವತಿ ರಾಘವಃ ।
ಶತ್ರೂಣಾಂ ಪ್ರತಿಘಾತಾರ್ಥಮಿದಂ ವಚನಮಬ್ರವೀತ್ ॥
ಅನುವಾದ
ವಿಭೀಷಣನು ಇಂತಹ ಮಾತನ್ನು ಹೇಳಿದಾಗ ಭಗವಾನ್ ಶ್ರೀರಾಮನು ಶತ್ರುಗಳನ್ನು ಸೋಲಿಸಲಿಕ್ಕಾಗಿ ಈ ಪ್ರಕಾರ ಹೇಳಿದನು.॥25॥
ಮೂಲಮ್ - 26
ಪೂರ್ವದ್ವಾರಂ ತು ಲಂಕಾಯಾ ನೀಲೋ ವಾನರಪುಂಗವಃ ।
ಪ್ರಹಸ್ತ ಪ್ರತಿಯೋದ್ಧಾ ಸ್ಯಾದ್ ವಾನರೈರ್ಬಹುಭಿರ್ವೃತಃ ॥
ಅನುವಾದ
ಅಸಂಖ್ಯ ವಾನರರಿಂದ ಕೂಡಿಕೊಂಡು ಕಪಿಶ್ರೇಷ್ಠ ನೀಲನು ಪೂರ್ವದ್ವಾರಕ್ಕೆ ಹೋಗಿ ಪ್ರಹಸ್ತನನ್ನು ಎದುರಿಸಲಿ.॥26॥
ಮೂಲಮ್ - 27
ಅಂಗದೋ ವಾಲಿಪುತ್ರಸ್ತು ಬಲೇನ ಮಹತಾ ವೃತಃ ।
ದಕ್ಷಿಣೇ ಬಾಧತಾಂ ದ್ವಾರೇ ಮಹಾಪಾರ್ಶ್ವ ಮಹೋದರೌ ॥
ಅನುವಾದ
ವಿಶಾಲವಾಹಿನಿಯನ್ನು ವೆರೆಸಿಕೊಂಡು ವಾಲಿ ಕುಮಾರ ಅಂಗದನು ದಕ್ಷಿಣದ ಭಾಗಿಲಲ್ಲಿ ನಿಂತಿರುವ ಮಹಾಪಾರ್ಶ್ವ ಮತ್ತು ಮಹೋದರನ ಕಾರ್ಯದಲ್ಲಿ ವಿಘ್ನವನ್ನು ತಂದೊಡ್ಡಲಿ.॥27॥
ಮೂಲಮ್ - 28
ಹನೂಮಾನ್ ಪಶ್ಚಿಮದ್ವಾರೇ ನಿಷ್ಪೀಡ್ಯ ಪವನಾತ್ಮಜಃ ।
ಪ್ರವಿಶತ್ವಪ್ರಮೇಯಾತ್ಮಾ ಬಹುಭಿಃ ಕಪಿಭಿರ್ವೃತಃ ॥
ಅನುವಾದ
ಪವನ ಕುಮಾರ ಹನುಮಂತನು ಅಪ್ರಮೇಯ ಆತ್ಮಬಲದಿಂದ ಸಂಪನ್ನನಾಗಿದ್ದಾನೆ. ಈ ಅಸಂಖ್ಯ ವಾನರರೊಂದಿಗೆ ಲಂಕೆಯ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಲಿ.॥28॥
ಮೂಲಮ್ - 29
ದೈತ್ಯದಾನವ ಸಂಘಾನಾಮೃಷೀಣಾಂ ಚ ಮಹಾತ್ಮನಾಮ್ ।
ವಿಪ್ರಕಾರಪ್ರಿಯಃ ಕ್ಷುದ್ರೋ ವರದಾನ ಬಲಾನ್ವಿತಃ ॥
ಮೂಲಮ್ - 30
ಪರಿಕ್ರಮತಿ ಯಃ ಸರ್ವಾನ್ಲ್ಲೋಕಾನ್ ಸಂತಾಪಯನ್ಪ್ರಜಾಃ ।
ತಸ್ಯಾಹಂ ರಾಕ್ಷಸೇಂದ್ರಸ್ಯ ಸ್ವಯಮೇವ ವಧೇ ಧೃತಃ ॥
ಮೂಲಮ್ - 31
ಉತ್ತರಂ ನಗರದ್ವಾರಮಹಂ ಸೌಮಿತ್ರಿಣಾ ಸಹ ।
ನಿಪೀಡ್ಯಾಭಿಪ್ರವೇಕ್ಷ್ಯಾಮಿ ಸಬಲೋ ಯತ್ರ ರಾವಣಃ ॥
ಅನುವಾದ
ದೈತ್ಯರಿಗೆ, ದಾನವರಿಗೆ, ಮಹಾತ್ಮಾ ಋಷಿಗಳಿಗೆ ಅಪಕಾರ ಮಾಡುವುದೇ ಪ್ರಿಯವಾಗಿ ತೋರುವ, ಕ್ಷುದ್ರ ಸ್ವಭಾವದ, ವರದಾನದ ಶಕ್ತಿಯಿಂದ ಸಂಪನ್ನನಾದ, ಪ್ರಜೆಗಳಿಗೆ ಸಂತಾಪವನ್ನು ಕೊಡುತ್ತಾ ಎಲ್ಲ ಲೋಕಗಳಲ್ಲಿ ಅಲೆಯುತ್ತಿರುವ ರಾಕ್ಷಸರಾಜ ರಾವಣನನ್ನು ವಧಿಸಲು ನಿಶ್ಚಯಿಸಿ, ನಾನು ಸ್ವತಃ ಸುಮಿತ್ರಾಕುಮಾರ ಲಕ್ಷ್ಮಣನೊಂದಿಗೆ ಸೈನ್ಯಸಹಿತವಾಗಿ ರಾವಣನು ಇರುವ ನಗರದ ಉತ್ತರ ದ್ವಾರದಲ್ಲಿ ಆಕ್ರಮಣ ಮಾಡಿ ಒಳಗೆ ಪ್ರವೇಶಿಸುವೆನು.॥29-31॥
ಮೂಲಮ್ - 32
ವಾನರೇಂದ್ರಶ್ಚ ಬಲವಾನೃಕ್ಷರಾಜಶ್ಚ ವೀರ್ಯವಾನ್ ।
ರಾಕ್ಷಸೇಂದ್ರಾನುಜಶ್ಚೈವ ಗುಲ್ಮೇ ಭವತು ಮಧ್ಯಮೇ ॥
ಅನುವಾದ
ಬಲವಂತ ವಾನರರಾಜಾ ಸುಗ್ರೀವನು, ಕರಡಿಗಳ ಅರಸ ಜಾಂಬವಂತನು, ರಾವಣನ ತಮ್ಮ ವಿಭೀಷಣನು, ಇವರು ಲಂಕೆಯ ನಡುವಿನ ಸೈನ್ಯದಮೇಲೆ ಆಕ್ರಮಣ ಮಾಡಲಿ.॥32॥
ಮೂಲಮ್ - 33
ನ ಚೈವ ಮಾನುಷಂ ರೂಪಂ ಕಾರ್ಯಂ ಹರಿಭಿರಾಹವೇ ।
ಏಷಾ ಭವತು ನಃ ಸಂಜ್ಞಾ ಯುದ್ಧೇಽಸ್ಮಿನ್ವಾನರೇ ಬಲೇ ॥
ಅನುವಾದ
ವಾನರರು ಯುದ್ಧದಲ್ಲಿ ಮನುಷ್ಯ ರೂಪವನ್ನು ಧರಿಸಬಾರದು. ಈ ಯುದ್ಧದಲ್ಲಿ ನಮಗೆ ವಾನರ ಸೈನ್ಯದ ಇದೇ ಸಂಕೇತ ಅಥವಾ ಚಿಹ್ನೆ ಆಗಿರುವುದು.॥33॥
ಮೂಲಮ್ - 34
ವಾನರಾ ಏವ ನಶ್ಚಿಹ್ನಂ ಸ್ವಜನೇಽಸ್ಮಿನ್ ಭವಿಷ್ಯತಿ ।
ವಯಂ ತು ಮಾನುಷೇಣೈವ ಸಪ್ತ ಯೋತ್ಸ್ಯಾಮಹೇ ಪರಾನ್ ॥
ಅನುವಾದ
ಈ ಸ್ವಜನ ವರ್ಗದಲ್ಲಿ ವಾನರರೇ ನಮ್ಮ ಚಿಹ್ನೆಯಾಗಿರುವುದು. ಕೇವಲ ನಾವು ಏಳು ಮಂದಿಗಳೇ ಮನುಷ್ಯರೂಪದಿಂದ ಇದ್ದು ಶತ್ರುಗಳೊಂದಿಗೆ ಯುದ್ಧ ಮಾಡುವೆವು.॥34॥
ಮೂಲಮ್ - 35
ಅಹಮೇವ ಸಹ ಭ್ರಾತ್ರಾ ಲಕ್ಷ್ಯಣೇನ ಮಹೌಜಸಾ ।
ಆತ್ಮನಾ ಪಂಚಮಶ್ಚಾಯಂ ಸಖಾ ಮಮ ವಿಭೀಷಣಃ ॥
ಅನುವಾದ
ನಾನು ಮಹಾತೇಜಸ್ವೀ ನನ್ನ ಸಹೋದರ ಲಕ್ಷ್ಮಣನೊಂದಿಗೆ ಇರುವೆನು. ಈ ನನ್ನ ಮಿತ್ರ ವಿಭೀಷಣನು ತನ್ನ ನಾಲ್ಕು ಮಂತ್ರಿಗಳೊಂದಿಗೆ ಐದು ವ್ಯಕ್ತಿಗಳಾಗಿರುವರು. (ಹೀಗೆ ನಾವು ಏಳು ವ್ಯಕ್ತಿಗಳು ಮನುಷ್ಯ ರೂಪದಲ್ಲಿ ಇದ್ದು ಯುದ್ಧ ಮಾಡುವೆವು.॥35॥
ಮೂಲಮ್ - 36
ಸ ರಾಮಃ ಕೃತ್ಯಸಿದ್ಧ್ಯರ್ಥಮೇವಮುಕ್ತ್ವಾ ವಿಭೀಷಣಮ್ ।
ಸುವೇಲಾರೋಹಣೇ ಬುದ್ಧಿಂ ಚಕಾರ ಮತಿಮಾನ್ ಪ್ರಭುಃ ।
ರಮಣೀಯ ತರಂದೃಷ್ಟ್ವಾ ಸುವೇಲಸ್ಯ ಗಿರೇಸ್ತಟಮ್ ॥
ಅನುವಾದ
ತನ್ನ ವಿಜಯರೂಪೀ ಪ್ರಯೋಜನ ಸಿದ್ಧಿಗಾಗಿ ವಿಭೀಷಣ ನಲ್ಲಿ ಹೀಗೆ ಹೇಳಿ ಬುದ್ಧಿವಂತ ಭಗವಾನ್ ಶ್ರೀರಾಮನು ಸುವೇಲ ಪರ್ವತವನ್ನು ಹತ್ತುವ ವಿಚಾರಮಾಡಿದನು. ಸುವೇಲ ಪರ್ವತದ ತಪ್ಪಲು ಬಹಳ ರಮಣೀಯವಾಗಿತ್ತು. ಅದನ್ನು ನೋಡಿ ಅವನಿಗೆ ತುಂಬಾ ಸಂತೋಷವಾಯಿತು.॥36॥
ಮೂಲಮ್ - 37
ತತಸ್ತು ರಾಮೋ ಮಹತಾ ಬಲೇನ
ಪ್ರಚ್ಛಾದ್ಯ ಸರ್ವಾಂ ಪೃಥಿವೀಂ ಮಹಾತ್ಮಾ ।
ಪ್ರಹೃಷ್ಟ ರೂಪೋಽಭಿಜಗಾಮ ಲಂಕಾಂ
ಕೃತ್ವಾ ಮತಿಂ ಸೋಽರಿವಧೇ ಮಹಾತ್ಮಾ ॥
ಅನುವಾದ
ಬಳಿಕ ಮಹಾಮನಾ ಮಹಾತ್ಮಾ ಶ್ರೀರಾಮನು ತನ್ನ ವಿಶಾಲ ಸೈನ್ಯದ ಮೂಲಕ ಅಲ್ಲಿಯ ಎಲ್ಲ ಭೂಮಿಯನ್ನು ಆವರಿಸಿ ಶತ್ರುವಧೆಯನ್ನು ನಿಶ್ಚಯಿಸಿ ಬಹಳ ಹರ್ಷ ಮತ್ತು ಉತ್ಸಾಹದಿಂದ ಲಂಕೆಯ ಕಡೆಗೆ ನಡೆದನು.॥37॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂವತ್ತೇಳನೆಯ ಸರ್ಗ ಪೂರ್ಣವಾಯಿತು. ॥37॥