०२९ रावणेन शुक-सारणयोरुच्चाटनम्

वाचनम्
ಭಾಗಸೂಚನಾ

ರಾವಣನು ಶುಕ-ಸಾರಣರನ್ನು ಗದರಿಸಿ ಹೊರಕ್ಕೆ ಅಟ್ಟಿದುದು, ರಾವಣನು ಕಳಿಸಿದ ಇತರ ಗುಪ್ತಚರರೂ ಶ್ರೀರಾಮನ ದಯೆಯಿಂದ ವಾನರರ ಹಿಡಿತದಿಂದ ತಪ್ಪಿಸಿಕೊಂಡು ಲಂಕೆಗೆ ಹಿಂದಿರುಗಿದುದು

ಮೂಲಮ್ - 1

ಶುಕೇನ ತು ಸಮಾದಿಷ್ಟಾನ್ ದೃಷ್ಟ್ವಾ ಸ ಹರಿಯೂಥಪಾನ್ ।
ಲಕ್ಷ್ಮಣಂ ಚ ಮಹಾವೀರ್ಯಂ ಭುಜಂ ರಾಮಸ್ಯ ದಕ್ಷಿಣಮ್ ॥

ಮೂಲಮ್ - 2

ಸಮೀಪಸ್ಥಂ ಚ ರಾಮಸ್ಯ ಭ್ರಾತರಂ ಚ ವಿಭೀಷಣಮ್ ।
ಸರ್ವ ವಾನರರಾಜಂ ಚ ಸುಗ್ರೀವಂ ಭೀಮವಿಕ್ರಮಮ್ ॥

ಮೂಲಮ್ - 3

ಅಂಗದಂ ಚಾಪಿ ಬಲಿನಂ ವಜ್ರಹಸ್ತಾತ್ಮಜಾತ್ಮಜಮ್ ।
ಹನೂಮಂತಂ ಚ ವಿಕ್ರಾಂತಂ ಜಾಂಬವಂತಂ ಚ ದುರ್ಜಯಮ್ ॥

ಮೂಲಮ್ - 4

ಸುಷೇಣಂ ಕುಮುದಂ ನೀಲಂ ನಲಂ ಚ ಪ್ಲವಗರ್ಷಭಮ್ ।
ಗಜಂ ಗವಾಕ್ಷಂ ಶರಭಂ ಮೈಂದಂ ಚ ದ್ವಿವಿದಂತಥಾ ॥

ಅನುವಾದ

ಶುಕನು ಹೇಳುತ್ತಿದ್ದಂತೆ ರಾವಣನು ಸಮಸ್ತ ಸೇನಾಪತಿಗಳನ್ನೂ, ಶ್ರೀರಾಮನ ಬಲಗೈಯಂತಿದ್ದ ಮಹಾಪರಾಕ್ರಮಿ ಲಕ್ಷ್ಮಣನನ್ನು, ಶ್ರೀರಾಮನ ಬಳಿಯಲ್ಲಿ ಕುಳಿತಿರುವ ತನ್ನ ತಮ್ಮ ವಿಭೀಷಣನನ್ನೂ, ವಾನರರ ರಾಜನಾದ ಭಯಂಕರ ಪರಾಕ್ರಮಿ ಸುಗ್ರೀವನೂ, ಇಂದ್ರಪುತ್ರ ವಾಲಿಯ ಪುತ್ರ ಬಲವಂತ ಅಂಗದನನ್ನು, ಬಲ-ವಿಕ್ರಮಶಾಲೀ ಹನುಮಂತನನ್ನೂ, ದುರ್ಜಯವೀರ ಜಾಂಬವಂತನನ್ನೂ, ಸುಷೇಣ, ಕುಮುದ, ನೀಲ, ವಾನರ ಶ್ರೇಷ್ಠ ನಳನನ್ನೂ, ಗಜ, ಗವಾಕ್ಷ, ಶರಭ, ಮೈಂದ-ದ್ವಿವಿದರನ್ನು ನೋಡಿದನು.॥1-4॥

ಮೂಲಮ್ - 5

ಕಿಂಚಿದಾವಿಗ್ನ ಹೃದಯೋ ಜಾತಕ್ರೋಧಶ್ಚ ರಾವಣಃ ।
ಭರ್ತ್ಸಯಾಮಾಸ ತೌ ವೀರೌ ಕಥಾಂತೇ ಶುಕಸಾರಣೌ ॥

ಅನುವಾದ

ಅವರೆಲ್ಲರನ್ನು ನೋಡಿ ರಾವಣನ ಮನಸ್ಸು ಉದ್ವಿಗ್ನಗೊಂಡಿತು. ಅವನಿಗೆ ಕ್ರೋಧ ಉಂಟಾಗಿ ಮಾತು ಮುಗಿದಾಗ ವೀರ ಶುಕ ಮತ್ತು ಸಾರಣರನ್ನು ಗದರಿಸಿದನು.॥5॥

ಮೂಲಮ್ - 6

ಅಧೋಮುಖೌ ತೌ ಪ್ರಣತಾವಬ್ರವೀಚ್ಛುಕಸಾರಣೌ ।
ರೋಷಗದ್ಗ ದಯಾ ವಾಚಾ ಸಂರಬ್ಧಂ ಪರುಷಂ ತಥಾ ॥

ಅನುವಾದ

ಬಡಪಾಯಿ ಶುಕ-ಸಾರಣರು ವಿನೀತರಾಗಿ ತಲೆ ತಗ್ಗಿಸಿ ನಿಂತುಕೊಂಡಿದ್ದರು. ರಾವಣನು ರೋಷಗದ್ಗದ ವಾಣಿಯಿಂದ ಕ್ರೋಧಪೂರ್ವಕ ಕಠೋರವಾಗಿ ನುಡಿದನು.॥6॥

ಮೂಲಮ್ - 7

ನ ತಾವತ್ಸದೃಶಂ ನಾಮ ಸಚಿವೈರುಪಜೀವಿಭಿಃ ।
ವಿಪ್ರಿಯಂ ನೃಪತೇರ್ವಕ್ತುಂ ನಿಗ್ರಹೇ ಪ್ರಗ್ರಹೇ ಪ್ರಭೋಃ ॥

ಅನುವಾದ

ರಾಜನು ನಿಗ್ರಹ ಮತ್ತು ಅನುಗ್ರಹ ಮಾಡಲು ಸಮರ್ಥನಿರುತ್ತಾನೆ. ಅವನ ಆಶ್ರಯದಲ್ಲಿರುವ ಮಂತ್ರಿಗಳು ರಾಜನಿಗೆ ಅಪ್ರಿಯವಾದ ಯಾವ ಮಾತನ್ನು ಆಡಬಾರದು.॥7॥

ಮೂಲಮ್ - 8

ರಿಪೂಣಾಂ ಪ್ರತಿಕೂಲಾನಾಂ ಯುದ್ಧಾರ್ಥಮಭಿವರ್ತತಾಮ್ ।
ಉಭಾಭ್ಯಾಂ ಸದೃಶಂ ನಾಮ ವಕ್ತುಮಪ್ರಸ್ತವೇ ಸ್ತವಮ್ ॥

ಅನುವಾದ

ನನ್ನ ವಿರೋಧಿ ಶತ್ರುವು ಯುದ್ಧಕ್ಕಾಗಿಯೇ ಇಲ್ಲಿಗೆ ಬಂದಿರುವನು. ಯಾವುದೇ ಪ್ರಸ್ತಾಪವಿಲ್ಲದೆ ಶತ್ರುವನ್ನು ಸ್ತುತಿಸುವುದು ನಿಮ್ಮಿಬ್ಬರಿಗೆ ಉಚಿತವಾಗಿತ್ತೇ.॥8॥

ಮೂಲಮ್ - 9

ಆಚಾರ್ಯಾ ಗುರುವೋ ವೃದ್ಧಾ ವೃಥಾ ವಾಂ ಪರ್ಯುಪಾಸಿತಾಃ ।
ಸಾರಂ ಯದ್ರಾಜಶಾಸ್ತ್ರಾಣಾಮನುಜೀವ್ಯಂ ನ ಗೃಹ್ಯತೇ ॥

ಅನುವಾದ

ನೀವುಗಳು ಮಾಡಿದ ಆಚಾರ್ಯ, ಗುರುಗಳ ಮತ್ತು ವೃದ್ಧರ ಸೇವೆ ವ್ಯರ್ಥವಾಯಿತು; ಏಕೆಂದರೆ ಅದು ರಾಜನೀತಿಯ ಸಂಗ್ರಹಣೆಯ ಸಾರವಾಗಿದೆ, ಅದನ್ನು ನೀವು ಗ್ರಹಿಸಲಿಲ್ಲ.॥9॥

ಮೂಲಮ್ - 10

ಗೃಹೀತೋ ವಾ ನ ವಿಜ್ಞಾತೋ ಭಾರೋಽಜ್ಞಾನಸ್ಯ ವಾಹ್ಯತೇ ।
ಈದೃಶೈಃ ಸಚಿವೈರ್ಯುಕ್ತೋ ಮೂರ್ಖೈರ್ದಿಷ್ಟ್ಯಧರಾಮ್ಯಹಮ್ ॥

ಅನುವಾದ

ನೀವು ಅದನ್ನು ಗ್ರಹಿಸಿದ್ದರೂ ಈಗ ನಿಮಗೆ ಅದು ಜ್ಞಾಪಕವಿರಲಿಲ್ಲ. ನೀವು ಕೇವಲ ಅಜ್ಞಾನದ ಹೊರೆಯನ್ನೇ ಹೊತ್ತಿರುವಿರಿ. ನಿಮ್ಮಂತಹ ಮೂರ್ಖ ಮಂತ್ರಿಗಳ ಸಂಪರ್ಕದಲ್ಲಿರುವ ನಾನು ನನ್ನ ರಾಜ್ಯವನ್ನು ಸುರಕ್ಷಿತವಾಗಿ ಇರಿಸಿಕೊಂಡಿರುವುದು ಸೌಭಾಗ್ಯದ ಮಾತಾಗಿದೆ.॥10॥

ಮೂಲಮ್ - 11

ಕಿಂ ನು ಮೃತ್ಯೋರ್ಭಯಂ ನಾಸ್ತಿ ಮಾಂ ವಕ್ತುಂ ಪರುಷಂ ವಚಃ ।
ಯಸ್ಯ ಮೇ ಶಾಸತೋ ಜಿಹ್ವಾ ಪ್ರಯಚ್ಛತಿ ಶುಭಾಶುಭಮ್ ॥

ಅನುವಾದ

ನಾನು ಈ ರಾಜ್ಯದ ಶಾಸಕನಾಗಿದ್ದೇನೆ. ನನ್ನ ಮಾತೇ ನಿಮಗೆ ಶುಭ ಅಥವಾ ಅಶುಭ ಮಾಡಬಲ್ಲದು. ನಾನು ಕೇವಲ ಮಾತಿನಿಂದಲೇ ನಿಮ್ಮ ನಿಗ್ರಹ ಮತ್ತು ಅನುಗ್ರಹ ಮಾಡಬಲ್ಲೆನು; ಹೀಗಿದ್ದರೂ ನೀವಿಬ್ಬರು ನನ್ನ ಮುಂದೆ ಕಠೋರ ಮಾತನ್ನು ಆಡುವ ಸಾಹಸ ಮಾಡಿದಿರಿ. ನಿಮಗೆ ಸಾವಿನ ಭಯವೇ ಇಲ್ಲವೇ.॥11॥

ಮೂಲಮ್ - 12

ಆಪ್ಯೇವ ದಹನಂ ಸ್ಪಷ್ಟ್ವಾ ವನೇ ತಿಷ್ಠಂತಿ ಪಾದಪಾಃ ।
ರಾಜದಂಡ ಪರಾಮೃಷ್ಟಾಸ್ತಿಷ್ಠಂತೇ ನಾಪರಾಧಿನಃ ॥

ಅನುವಾದ

ದಾವಾನಲದಲ್ಲಿ ಬೆಂದು ಹೋದ ಮರಗಳೂ ಜೀವಂತವಾಗಿರಬಲ್ಲವು, ಆದರೆ ರಾಜ ದಂಡಕ್ಕೆ ಒಳಪಟ್ಟ ಅಪರಾಧಿಗಳು ಖಂಡಿತವಾಗಿ ಉಳಿಯಲಾರರು. ಅವರು ಸರ್ವಥಾ ನಾಶವಾಗಿ ಹೋಗುವರು.॥12॥

ಮೂಲಮ್ - 13

ಹನ್ಯಾಮಹಂ ತ್ವಿಮೌ ಪಾಪೌ ಶತ್ರುಪಕ್ಷ ಪ್ರಶಂಸಿನೌ ।
ಯದಿ ಪೂರ್ವೋಪಕಾರೈರ್ಮೇ ಕ್ರೋಧೋ ನ ಮೃದುತಾಂ ವ್ರಜೇತ್ ॥

ಅನುವಾದ

ಹಿಂದೆ ನೀವು ಮಾಡಿದ ಉಪಕಾರದ ಸ್ಮರಣೆಯಿಂದ ನನ್ನ ಕೋಪವು ಸ್ವಲ್ಪಮಟ್ಟಿಗೆ ಶಾಂತವಾಗಿದೆ; ಇಲ್ಲದಿದ್ದರೆ ಶತ್ರುಪಕ್ಷವನ್ನು ಪ್ರಶಂಸಿಸುತ್ತಿರುವ ನಿಮ್ಮಿಬ್ಬರನ್ನು ಈಗಾಗಲೇ ಕೊಂದುಬಿಡುತ್ತಿದೆ.॥13॥

ಮೂಲಮ್ - 14

ಅಪಧ್ವಂಸತ ನಶ್ಯಧ್ವಂ ಸಂನಿಕರ್ಷಾದಿತೋ ಮಮ ।
ನಹಿ ವಾಂ ಹಂತು ಮಿಚ್ಛಾಮಿ ಸ್ಮರಾಮ್ಯುಪಕೃತಾನಿ ವಾಮ್ ।
ಹತಾವೇವ ಕೃತಘ್ನೌ ದ್ವೌ ಮಯಿ ಸ್ನೇಹಪರಾಙ್ಮುಖೌ ॥

ಅನುವಾದ

ಕೃತಘ್ನರೇ! ಈಗಲೇ ನೀವು ಇಲ್ಲಿಂದ ಹೊರಟುಹೋಗಿರಿ, ಮುಂದೆ ಎಂದೂ ನಿಮ್ಮ ಮುಖ ತೋರಿಸಬೇಡಿ. ನಾನು ನಿಮ್ಮಿಬ್ಬರನ್ನು ವಧಿಸಲು ಬಯಸು ವುದಿಲ್ಲ. ಏಕೆಂದರೆ ನೀವಿಬ್ಬರೂ ಮಾಡಿದ ಉಪಕಾರವನ್ನು ನಾನು ಸದಾ ಸ್ಮರಿಸುತ್ತಿದ್ದೇನೆ. ನನ್ನ ಸ್ನೇಹದಿಂದ ವಿಮುಖರಾದ ನೀವು ಸತ್ತುಹೋದರೆಂದೇ ಭಾವಿಸುತ್ತೇನೆ.॥14॥

ಮೂಲಮ್ - 15

ಏವಮುಕ್ತೌ ತು ಸವ್ರೀಡೌ ತೌ ದೃಷ್ಟ್ವಾಶುಕಸಾರಣೌ ।
ರಾವಣಂ ಜಯಶಬ್ದೇನ ಪ್ರತಿನಂದ್ಯಾಭಿನಿಃ ಸೃತೌ ॥

ಅನುವಾದ

ರಾವಣನು ಹೀಗೆ ಹೇಳಿದಾಗ ಶುಕ-ಸಾರಣರು ತುಂಬಾ ನಾಚಿಕೊಂಡು ರಾವಣೇಶ್ವರನಿಗೆ ಜಯಜಯಕಾರ ಮಾಡಿ ಅಭಿನಂದಿಸಿ ಅಲ್ಲಿಂದ ಹೊರಟು ಹೋದರು.॥15॥

ಮೂಲಮ್ - 16

ಅಬ್ರವೀಚ್ಚ ದಶಗ್ರೀವಃ ಸಮೀಪಸ್ಥಂ ಮಹೋದರಮ್ ।
ಉಪಸ್ಥಾಪಯ ಮೇ ಶೀಘ್ರಂ ಚಾರಾನೀತಿ ನಿಶಾಚರಃ ।
ಮಹೋದರಸ್ತಥೋಕ್ತಸ್ತು ಶೀಘ್ರಮಾಜ್ಞಾಪಯಚ್ಚರಾನ್ ॥

ಅನುವಾದ

ಬಳಿಕ ತನ್ನ ಬಳಿ ಕುಳಿತಿರುವ ಮಹೋದರನಲ್ಲಿ ರಾವಣನು ಹೇಳಿದನು- ನನ್ನ ಎದುರಿಗೆ ಬೇಗನೇ ಗುಪ್ತಚರರು ಬರುವಂತೆ ಆಜ್ಞಾಪಿಸು. ರಾವಣನ ಈ ಆದೇಶದಂತೆ ಮಹೋದರನು ಗುಪ್ತಚರರನ್ನು ಕರೆಸಿದನು.॥16॥

ಮೂಲಮ್ - 17

ತತಶ್ಚಾರಾಃ ಸಂತ್ವರಿತಾಃ ಪ್ರಾಪ್ತಾಃ ಪಾರ್ಥಿವ ಶಾಸನಾತ್ ।
ಉಪಸ್ಥಿತಾಃ ಪ್ರಾಂಜಲಯೋ ವರ್ಧಯಿತ್ವಾ ಜಯಾಶಿಷಃ ॥

ಅನುವಾದ

ರಾಜನ ಅಪ್ಪಣೆ ಪಡೆದು ಗುಪ್ತಚರರು ಆಗಲೇ ವಿಜಯಸೂಚಕ ಆಶೀರ್ವಾದ ಕೊಡುತ್ತಾ ಕೈಮುಗಿದು ಸೇವೆಯಲ್ಲಿ ಉಪಸ್ಥಿತರಾದರು.॥17॥

ಮೂಲಮ್ - 18

ತಾನಬ್ರವೀತ್ತತೋ ವಾಕ್ಯಂ ರಾವಣೋ ರಾಕ್ಷಸಾಧಿಪಃ ।
ಚಾರಾನ್ ಪ್ರತ್ಯಾಯಿಕಾನ್ ಶೂರಾನ್ ಧೀರಾನ್ ವಿಗತಸಾಧ್ವಸಾನ್ ॥

ಅನುವಾದ

ಆ ಎಲ್ಲ ಗುಪ್ತಚರರು ವಿಶ್ವಾಸಿಗಳೂ, ಶೂರ-ಧೀರ, ನಿರ್ಭಯರೂ ಆಗಿದ್ದು. ರಾಕ್ಷಸ ರಾಜ ರಾವಣನು ಅವರಲ್ಲಿ ಹೀಗೆ ಹೇಳಿದನು.॥18॥

ಮೂಲಮ್ - 19

ಇತೋ ಗಚ್ಛತ ರಾಮಸ್ಯ ವ್ಯವಸಾಯಂ ಪರೀಕ್ಷಿತುಮ್ ।
ಮಂತ್ರೇಷ್ವಭ್ಯಂತರಾ ಯೇಽಸ್ಯ ಪ್ರೀತ್ಯಾ ತೇನ ಸಮಾಗತಾಃ ॥

ಅನುವಾದ

ನೀವು ಈಗಲೇ ಹೋಗಿ ವಾನರ ಸೈನ್ಯದಲ್ಲಿ ರಾಮನ ನಿಶ್ಚಯ ವೇನಿದೆ? ಇದನ್ನು ತಿಳಿಯಲು, ಗುಪ್ತಸಮಾಲೋಚನೆಯಲ್ಲಿ ಭಾಗವಹಿಸುವ ಅಂತರಂಗ ಮಂತ್ರಿಗಳ ಹಾಗೂ ಅವನಿಗೆ ಭೇಟಿಯಾಗುವ ಮಿತ್ರರ ಹೀಗೆ ಎಲ್ಲರ ನಿಶ್ಚಿತ ವಿಚಾರವೇನು? ಎಂಬುದನ್ನು ತಿಳಿಯಲು ಅಲ್ಲಿಗೆ ಹೋಗಿರಿ.॥19॥

ಮೂಲಮ್ - 20

ಕಥಂ ಸ್ವಪಿತಿ ಜಾಗರ್ತಿ ಕಿಮದ್ಯ ಚ ಕರಿಷ್ಯತಿ ।
ವಿಜ್ಞಾಯ ನಿಪುಣಂ ಸರ್ವಮಾಗಂತವ್ಯಮಶೇಷತಃ ॥

ಅನುವಾದ

ಅವರು ಹೇಗೆ ಮಲಗುತ್ತಾರೆ? ಹೇಗೆ ಎಚ್ಚರವಾಗಿರುತ್ತಾರೆ? ಇಂದು ಏನು ಮಾಡುವರು? ಇದೆಲ್ಲವನ್ನೂ ಸರಿಯಾಗಿ ತಿಳಿದು ಮರಳಿ ಬನ್ನಿರಿ.॥20॥

ಮೂಲಮ್ - 21

ಚಾರೇಣವಿದಿತಃ ಶತ್ರುಃ ಪಂಡಿತೈರ್ವಸುಧಾಧಿಪೈಃ ।
ಯುದ್ಧೇ ಸ್ವಲ್ಪೇನ ಯತ್ನೇನ ಸಮಾಸಾದ್ಯ ನಿರಸ್ಯತೇ ॥

ಅನುವಾದ

ಗುಪ್ತಚರರ ಮೂಲಕ ಶತ್ರುವಿನ ಗತಿ-ವಿಧಾನವನ್ನು ತಿಳಿದುಕೊಂಡರೆ ಬುದ್ಧಿವಂತ ರಾಜನು ಅಲ್ಪಪ್ರಯತ್ನದಿಂದಲೇ ಯುದ್ಧದಲ್ಲಿ ಅವರನ್ನು ಹೊಡೆದೋಡಿಸಿ ಬಿಡುವನು.॥21॥

ಮೂಲಮ್ - 22

ಚಾರಾಸ್ತು ತೇ ತಥೇತ್ಯುಕ್ತ್ವಾ ಪ್ರಹೃಷ್ಟಾ ರಾಕ್ಷಸೇಶ್ವರಮ್ ।
ಶಾರ್ದೂಲಮಗ್ರತಃ ಕೃತ್ವಾ ತತಶ್ಚಕ್ರುಃ ಪ್ರದಕ್ಷಿಣಮ್ ॥

ಅನುವಾದ

‘ಹಾಗೆಯೇ ಆಗಲೀ’ ಎಂದು ಹೇಳಿ ಹರ್ಷಗೊಂಡ ಗುಪ್ತಚರರು ಶಾರ್ದೂಲನನ್ನು ಮುಂದುಮಾಡಿ ರಾವಣನಿಗೆ ಪ್ರದಕ್ಷಿಣೆ ಮಾಡಿದರು.॥22॥

ಮೂಲಮ್ - 23

ತತಸ್ತಂ ತು ಮಹಾತ್ಮಾನಂ ಚಾರಾ ರಾಕ್ಷಸ ಸತ್ತಮಮ್ ।
ಕೃತ್ವಾ ಪ್ರದಕ್ಷಿಣಂ ಜಗ್ಮುರ್ಯತ್ರ ರಾಮಃ ಸಲಕ್ಷ್ಮಣಃ ॥

ಅನುವಾದ

ಹೀಗೆ ರಾವಣೇಶ್ವರನಿಗೆ ಪ್ರದಕ್ಷಿಣೆ ಮಾಡಿ ಆ ಗುಪ್ತಚರರು ಲಕ್ಷ್ಮಣ ಸಹಿತ ಶ್ರೀರಾಮನು ವಿರಾಜಿಸುತ್ತಿದ್ದಲ್ಲಿಗೆ ಹೋದರು.॥23॥

ಮೂಲಮ್ - 24

ತೇ ಸುವೇಲಸ್ಯ ಶೈಲಸ್ಯ ಸಮೀಪೇ ರಾಮಲಕ್ಷ್ಮಣೌ ।
ಪ್ರಚ್ಛನ್ನಾ ದದೃಶುರ್ಗತ್ವಾ ಸಸುಗ್ರೀವ ವಿಭೀಷಣೌ ॥

ಅನುವಾದ

ಸುವೇಲ ಪರ್ವತದ ಬಳಿಗೆ ಹೋಗಿ ಆ ಗುಪ್ತಚರರು ಅಡಗಿದ್ದು ಶ್ರೀರಾಮ, ಲಕ್ಷ್ಮಣ, ಸುಗ್ರೀವ ಮತ್ತು ವಿಭೀಷಣರನ್ನು ನೋಡಿದರ.॥24॥

ಮೂಲಮ್ - 25

ಪ್ರೇಕ್ಷಮಾಣಾಶ್ಚಮೂಂ ತಾಂ ಚ ಬಭೂವುರ್ಭಯವಿಹ್ವಲಾಃ ।
ತೇ ತು ಧರ್ಮಾತ್ಮನಾ ದೃಷ್ಟಾ ರಾಕ್ಷಸೇಂದ್ರೇಣ ರಾಕ್ಷಸಾಃ ॥

ಅನುವಾದ

ವಾನರರ ಆ ಸೈನ್ಯವನ್ನು ನೋಡಿ ಭಯದಿಂದ ವ್ಯಾಕುಲರಾದರು. ಅಷ್ಟರಲ್ಲಿ ಧರ್ಮಾತ್ಮಾ ರಾಕ್ಷಸರಾಜ ವಿಭೀಷಣನು ಆ ಗುಪ್ತಚರ ರಾಕ್ಷಸರನ್ನು ನೋಡಿದನು.॥25॥

ಮೂಲಮ್ - 26

ವಿಭೀಷಣೇನ ತತ್ರಸ್ಥಾ ನಿಗೃಹೀತಾ ಯದೃಚ್ಛಯಾ ।
ಶಾರ್ದೂಲೋ ಗ್ರಾಹಿತಸ್ತ್ವೇಕಃ ಪಾಪೋಽಯಮಿತಿ ರಾಕ್ಷಸಃ ॥

ಅನುವಾದ

ಆಗ ಅವನು ಅಕಸ್ಮಾತ್ ಅಲ್ಲಿಗೆ ಬಂದಿರುವ ರಾಕ್ಷಸರನ್ನು ಗದರಿಸಿ, ಶಾರ್ದೂಲನೊಬ್ಬನನ್ನು ಇವನು ಪಾಪಿ ಎಂದು ತಿಳಿದು ಬಂಧಿಸಿದನು.॥26॥

ಮೂಲಮ್ - 27

ಮೋಚಿತಃ ಸೋಽಪಿ ರಾಮೇಣ ವಧ್ಯಮಾನಃ ಪ್ಲವಂಗಮೈಃ ।
ಆನೃಶಂಸ್ಯೇನ ರಾಮೇಣ ಮೋಚಿತಾ ರಾಕ್ಷಸಾಃ ಪರೇ ॥

ಅನುವಾದ

ಮತ್ತೆ ವಾನರರು ಅವನನ್ನು ಬಡಿಯತೊಡಗಿದರು. ಆಗ ಶ್ರೀರಾಮನು ದಯೆದೋರಿ ಅವನನ್ನು ಹಾಗೂ ಇತರ ರಾಕ್ಷಸರನ್ನು ಬಿಡುಗಡೆಗೊಳಿಸಿದನು.॥27॥

ಮೂಲಮ್ - 28

ವಾನರೈ ರರ್ದಿತಾಸ್ತೇ ತು ವಿಕ್ರಾಂತೈರ್ಲಘುವಿಕ್ರಮೈಃ ।
ಪುನರ್ಲಂಕಾಮನುಪ್ರಾಪ್ತಾಃ ಶ್ವಸಂತೋ ನಷ್ಟಚೇತಸಃ ॥

ಅನುವಾದ

ಬಲವಿಕ್ರಮ ಸಂಪನ್ನ ಶೀಘ್ರ ಪರಾಕ್ರಮಿ ವಾನರರಿಂದ ಏಟು ತಿಂದು ಆ ರಾಕ್ಷಸರ ಜಂಘಾಬಲ ಉಡುಗಿಹೋಯಿತು. ಅವರು ಏದುಸಿರು ಬಿಡುತ್ತಾ ಲಂಕೆಗೆ ತೆರಳಿದರು.॥28॥

ಮೂಲಮ್ - 29

ತತೋ ದಶಗ್ರೀವ ಮುಪಸ್ಥಿತಾಸ್ತೇ
ಚಾರಾ ಬಹಿರ್ನಿತ್ಯಚರಾ ನಿಶಾಚರಾಃ ।
ಗಿರೇಃ ಸುವೇಲಸ್ಯ ಸಮೀಪವಾಸಿನಂ
ನ್ಯವೇದಯನ್ ರಾಮಬಲಂ ಮಹಾಬಲಾಃ ॥

ಅನುವಾದ

ರಾವಣನ ಸೇವೆಯಲ್ಲಿ ಉಪಸ್ಥಿತರಾದ ಗುಪ್ತಚರರು ಸದಾ ಹೊರಗೆ ಸಂಚರಿಸುವ ಆ ಮಹಾಬಲೀ ನಿಶಾಚರರು-ಶ್ರೀರಾಮಚಂದ್ರನ ಸೈನ್ಯವು ಸುವೇಲಾ ಪರ್ವತದ ಬಳಿಯಲ್ಲಿ ಬೀಡುಬಿಟ್ಟಿದೆ ಎಂದು ಸೂಚಿಸಿದರು.॥29॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥29॥