०२८ शुकेन शत्रुसङ्ख्यागणनम्

वाचनम्
ಭಾಗಸೂಚನಾ

ಸುಗ್ರೀವನ ಮಂತ್ರಿಗಳ, ಮೈಂದ-ದ್ವಿವಿದ, ಹನುಮಂತ, ಶ್ರೀರಾಮ-ಲಕ್ಷ್ಮಣ, ವಿಭೀಷಣ, ಸುಗ್ರೀವ ಇವರ ಪರಿಚಯಮಾಡಿಸುತ್ತಾ ಶುಕನು ವಾನರ ಸೈನ್ಯದ ಸಂಖ್ಯೆಯನ್ನು ನಿರೂಪಿಸಿದುದು

ಮೂಲಮ್ - 1

ಸಾರಣಸ್ಯ ವಚಃ ಶ್ರುತ್ವಾ ರಾವಣಂ ರಾಕ್ಷಸಾಧಿಪಮ್ ।
ಬಲಮಾದಿಶ್ಯ ತತ್ಸರ್ವಂ ಶುಕೋ ವಾಕ್ಯಮಥಾಬ್ರವೀತ್ ॥

ಅನುವಾದ

ಆ ಇಡೀ ವಾನರ ಸೈನ್ಯದ ಪರಿಚಯವನ್ನು ಕೊಟ್ಟು ಸಾರಣನು ಸುಮ್ಮನಾದಾಗ, ಅವನ ಮಾತನ್ನು ಕೇಳಿ ಶುಕನು ರಾಕ್ಷಸರಾಜ ರಾವಣನಲ್ಲಿ ಇಂತೆಂದನು.॥1॥

ಮೂಲಮ್ - 2

ಸ್ಥಿತಾನ್ಪಶ್ಯಸಿ ಯಾನೇತಾನ್ ಮತ್ತಾನಿವ ಮಹಾದ್ವಿಪಾನ್ ।
ನ್ಯಗ್ರೋಧಾನಿವಗಾಂಗೇಯಾನ್ ಸಲಾ ನ್ಹೈಮವತಾನಿವ ॥

ಮೂಲಮ್ - 3

ಏತೇದುಷ್ಟ್ರಸಹಾ ರಾಜನ್ ಬಲಿನಃ ಕಾಮರೂಪಿಣಃ ।
ದೈತ್ಯದಾನವಸಂಕಾಶಾ ಯುದ್ಧೇ ದೇವಪರಾಕ್ರಮಾಃ ॥

ಅನುವಾದ

ರಾಜನೇ ! ನೀವು ಇಲ್ಲಿ ಮತ್ತ ಮಹಾಗಜರಂತೆ ನಿಂತಿರುವ ವಾನರರನ್ನು ನೋಡುತ್ತಿರುವರಲ್ಲ? ಅವರು ಗಂಗಾತೀರದ ವಟವೃಕ್ಷಗಳಂತೆ, ಹಿಮಾಲಯದ ಸಾಲವೃಕ್ಷಗಳಂತೆ ಕಂಡು ಬರುತ್ತಿದ್ದಾರೆ. ಇವರ ವೇಗ ದುಸ್ಸಹವಾಗಿದ್ದು, ಇಚ್ಛಾನುಸಾರ ರೂಪಗಳನ್ನು ಧರಿಸುವವರಾಗಿದ್ದಾರೆ. ದೈತ್ಯ-ದಾನವರಂತೆ ಶಕ್ತಿಶಾಲಿ, ಬಲಿಷ್ಠರಾದ ಇವರು ಯುದ್ಧದಲ್ಲಿ ದೇವತೆಗಳಂತೆ ಪರಾಕ್ರಮವನ್ನು ಪ್ರಕಟಿಸುವವರಾಗಿದ್ದಾರೆ.॥2-3॥

ಮೂಲಮ್ - 4

ಏಷಾಂ ಕೋಟಿಸಹಸ್ರಾಣಿ ನವ ಪಂಚ ಚ ಸಪ್ತ ಚ ।
ತಥಾ ಶಂಕು ಸಹಸ್ರಾಣಿ ತಥಾ ವೃಂದ ಶತಾನಿ ಚ ॥

ಮೂಲಮ್ - 5

ಏತೇ ಸುಗ್ರೀವ ಸಚಿವಾಃ ಕಿಷ್ಕಿಂಧಾನಿಲಯಾಃ ಸದಾ ।
ಹರಯೋದೇವಗಂಧರ್ವೈರುತ್ಪನ್ನಾಃ ಕಾಮರೂಪಿಣಃ ॥

ಅನುವಾದ

ಇವರ ಸಂಖ್ಯೆ ಇಪ್ಪತ್ತೊಂದು ಕೋಟಿ ಸಾವಿರ, ಸಾವಿರ ಶಂಕು ಮತ್ತು ನೂರು ವೃಂದವಾಗಿದೆ. ಇವರೆಲ್ಲ ವಾನರರು ಕಿಷ್ಕಿಂಧೆಯಲ್ಲಿರುವ ಸುಗ್ರೀವನ ಮಂತ್ರಿಗಳಾಗಿದ್ದಾರೆ. ಇವರು ದೇವತೆಗಳಿಂದ, ಗಂಧರ್ವರಿಂದ ಉತ್ಪನ್ನರಾದವರು ಇವರೆಲ್ಲರೂ ಇಚ್ಛಾನುಸಾರ ರೂಪ ಧರಿಸಲು ಸಮರ್ಥರಾಗಿದ್ದಾರೆ.॥4-5॥

ಮೂಲಮ್ - 6

ಯೌ ತೌ ಪಶ್ಯಸಿ ತಿಷ್ಠಂತೌ ಕುಮಾರೌ ದೇವರೂಪಿಣೌ ।
ಮೈಂದಶ್ಚ ದ್ವಿವಿದಶ್ಚೈವ ತಾಭ್ಯಾಂ ನಾಸ್ತಿ ಸಮೋ ಯುಧಿ ॥

ಮೂಲಮ್ - 7

ಬ್ರಹ್ಮಣಾ ಸಮನುಜ್ಞಾತಾವಮೃತಪ್ರಾಶಿನಾವುಭೌ ।
ಆಶಂಸೇತೇ ಯಥಾ ಲಂಕಾಮೇತೌ ಮರ್ದಿತುಮೋಜಸಾ ॥

ಅನುವಾದ

ರಾಜನೇ! ಈ ವಾನರರೊಳಗೆ ದೇವತೆಗಳಂತೆ ರೂಪವುಳ್ಳ ಎರಡು ವಾನರರು ನಿಂತಿರುವುದನ್ನು ನೋಡುತ್ತಿರುವಿರಲ್ಲ, ಅವರ ಹೆಸರು ಮೈಂದ ಮತ್ತು ದ್ವಿವಿದ ಎಂದಾಗಿದೆ. ಯುದ್ಧದಲ್ಲಿ ಇವರಿಗೆ ಸಮಾನರು ಯಾರೂ ಇಲ್ಲ. ಬ್ರಹ್ಮದೇವರ ಅಪ್ಪಣೆಯಂತೆ ಇವರಿಬ್ಬರೂ ಅಮೃತಪಾನ ಮಾಡಿರುವರು. ಈ ವೀರರಿಬ್ಬರೂ ತಮ್ಮ ಪರಾಕ್ರಮದಿಂದ ಲಂಕೆಯನ್ನು ಹೊಸಕಿಹಾಕಲು ಬಯಸುತ್ತಿರುವರು.॥6-7॥

ಮೂಲಮ್ - 8

ಯಂ ತು ಪಶ್ಯಸಿ ತಿಷ್ಠಂತಂ ಪ್ರಭಿನ್ನಮಿವ ಕುಂಜರಮ್ ।
ಯೋ ಬಲಾತ್ ಕ್ಷೋಭಯೇತ್ ಕ್ರುದ್ಧಃ ಸಮುದ್ರಮಪಿ ವಾನರಃ ॥

ಮೂಲಮ್ - 9

ಏಷೋಽಭಿಗಂತಾ ಲಂಕಾಯಾಂ ವೈದೇಹ್ಯಾಸ್ತವ ಚ ಪ್ರಭೋ ।
ಏನಂ ಪಶ್ಯ ಪುರಾ ದೃಷ್ಟಂ ವಾನರಂ ಪುನರಾಗತಮ್ ॥

ಮೂಲಮ್ - 10

ಜ್ಯೇಷ್ಠಃ ಕೇಸರಿಣಃ ಪುತ್ರೋ ವಾತಾತ್ಮಜ ಇತಿ ಶ್ರುತಃ ।
ಹನೂಮಾನಿತಿ ವಿಖ್ಯಾತೋ ಲಂಘಿತೋ ಯೇನ ಸಾಗರಃ ॥

ಅನುವಾದ

ಮದೋದಕವನ್ನು ಹರಿಸುವ ಮತ್ತಗಜದಂತೆ ನಿಂತಿರುವ ವಾನರನನ್ನು ನೋಡುತ್ತಿರುವಿರಲ್ಲ, ಅವನು ಕೇಸರಿಯ ಹಿರಿಯ ಪುತ್ರನನ್ನು ಹನುಮಂತನೆಂದು ಹೇಳುತ್ತಾರೆ. ಪವನಪುತ್ರನೆಂದೂ ಇವನಿಗೆ ಹೆಸರಿದೆ. ಇವನು ಮೊದಲು ಸಮುದ್ರವನ್ನು ದಾಟಿ, ನಿಮ್ಮ ಬಳಿಗೆ ಬಂದು ವಿದೇಹ ನಂದಿನೀ ಸೀತೆಯನ್ನು ಕಂಡುಹೋಗಿದ್ದನು. ಈ ವಾನರನು ಕುಪಿತನಾದರೆ ಸಮುದ್ರವನ್ನು ಪ್ರಕ್ಷುಬ್ಧವಾಗಿ ಮಾಡಬಲ್ಲನು.॥8-10॥

ಮೂಲಮ್ - 11

ಕಾಮರೂಪೋ ಹರಿಶ್ರೇಷ್ಠೋ ಬಲರೂಪ ಸಮನ್ವಿತಃ ।
ಅನಿವಾರ್ಯಗತಿಶ್ಚೈವ ಯಥಾ ಸತತಗಃ ಪ್ರಭುಃ ॥

ಅನುವಾದ

ಬಲ-ರೂಪ ಸಂಪನ್ನನಾದ ಈ ವಾನರಶ್ರೇಷ್ಠನು ತನ್ನಿಚ್ಛೆಗನುಸಾರ ರೂಪವನ್ನು ಧರಿಸಬಲ್ಲನು. ಇವನ ಗತಿಯು ಎಲ್ಲಿಯೂ ಕುಂಠಿತವಾಗದೆ, ವಾಯುವಿನಂತೆ ಎಲ್ಲೆಡೆ ಹೋಗಬಲ್ಲನು.॥11॥

ಮೂಲಮ್ - 12

ಉದ್ಯಂತಂ ಭಾಸ್ಕರಂ ದೃಷ್ಟ್ವಾ ಬಾಲಃ ಕಿಲ ಬುಭುಕ್ಷಿತಃ ।
ತ್ರಿಯೋಜನ ಸಹಸ್ರಂ ತು ಅಧ್ವಾನಮವತೀರ್ಯ ಹಿ ॥

ಮೂಲಮ್ - 13

ಆದಿತ್ಯ ಮಾಹರಿಷ್ಯಾಮಿ ನ ಮೇ ಕ್ಷುತ್ಪ್ರತಿಯಾಸ್ಯತಿ ।
ಇತಿ ನಿಶ್ಚಿತ್ಯ ಮನಸಾ ಪುಪ್ಲುವೇ ಬಲದರ್ಪಿತಃ ॥

ಅನುವಾದ

ಇವನು ಬಾಲಕನಾಗಿದ್ದಾಗ ಒಂದುದಿನ ಇವನಿಗೆ ವಿಪರೀತ ಹಸಿವಾಯಿತು. ಆಗ ಉದಯಿಸುತ್ತಿರುವ ಸೂರ್ಯನನ್ನು ನೋಡಿ, ಇಲ್ಲಿಯ ಫಲಗಳಿಂದ ನನ್ನ ಹಸಿವು ಇಂಗದು, ಈ ಆಕಾಶದ ದಿವ್ಯ ಫಲವನ್ನೇ ತಿನ್ನುವೆನೆಂದ ಮನಸ್ಸಿನಲ್ಲಿ ಎಣಿಸಿ ಈ ಬಲಾಭಿಮಾನೀ ವಾನರನು ಮೂರುಸಾವಿರ ಯೋಜನ ಎತ್ತರಕ್ಕೆ ನೆಗೆದಿದ್ದನು.॥12-13॥

ಮೂಲಮ್ - 14

ಅನಾಧೃಷ್ಯತಮಂ ದೇವಮಪಿ ವರ್ಷಿರಾಕ್ಷಸೈಃ ।
ಅನಾಸಾದ್ಯೈವ ಪತಿತೋ ಭಾಸ್ಕರೋದಯನೇ ಗಿರೌ ॥

ಅನುವಾದ

ದೇವರ್ಷಿ ಮತ್ತು ರಾಕ್ಷಸರಿಂದಲೂ ಸೋಲದಿರುವ ಅವನು ಸೂರ್ಯ ನವರೆಗೆ ತಲುಪದೆ ಉದಯಗಿರಿಯ ಮೇಲೆ ಬಿದ್ದುಬಿಟ್ಟನು.॥1.॥

ಮೂಲಮ್ - 15

ಪತಿತಸ್ಯ ಕಪೇರಸ್ಯ ಹನುರೇಕಾ ಶಿಲಾತಲೇ ।
ಕಿಂಚಿದ್ಭಿನ್ನಾ ದೃಢಹನುರ್ಹನೂಮಾನೇಷ ತೇನ ವೈ ॥

ಅನುವಾದ

ಆ ಪರ್ವತದ ಶಿಲಾಖಂಡದಲ್ಲಿ ಬಿದ್ದಾಗ, ಇವನ ಗದ್ದಕ್ಕೆ ಏಟುಬಿದ್ದು, ಅತ್ಯಂತ ದೃಢವಾಯಿತು. ಅದಕ್ಕಾಗಿ ಇವನು ‘ಹನುಮಂತ’ ಎಂಬ ಹೆಸರಿನಿಂದ ಪ್ರಖ್ಯಾತನಾದನು.॥15॥

ಮೂಲಮ್ - 16

ಸತ್ಯಮಾಗಮಯೋಗೇನ ಮಮೈಷ ವಿದಿತೋ ಹರಿಃ ।
ನಾಸ್ಯ ಶಕ್ಯಂ ಬಲಂ ರೂಪಂ ಪ್ರಭಾವೋ ವಾನುಭಾಷಿತುಮ್ ॥

ಮೂಲಮ್ - 17½

ಏಷ ಆಶಂಸತೇ ಲಂಕಾಮೇಕೋ ಮಥಿತುಮೋಜಸಾ ।
ಯೇನ ಜಾಜ್ವಲ್ಯತೇಽಸೌ ವೈ ಧೂಮಕೇತುಸ್ತವಾದ್ಯ ವೈ ।
ಲಂಕಾಯಾಂ ನಿಹಿತಶ್ಚಾಪಿ ಕಥಂ ವಿಸ್ಮರಸೇ ಕಪಿಮ್ ॥

ಅನುವಾದ

ವಿಶ್ವಾಸಾರ್ಹ ವ್ಯಕ್ತಿಗಳ ಸಂಪರ್ಕದಿಂದ ನಾನು ಈ ವಾನರನ ವೃತ್ತಾಂತವನ್ನು ಸರಿಯಾಗಿ ತಿಳಿದಿರುವೆನು. ಇವನ ಬಲ, ರೂಪ, ಪ್ರಭಾವಗಳನ್ನು ಪೂರ್ಣವಾಗಿ ಯಾರೂ ವರ್ಣಿಸಲಾರರು. ಇವನೊಬ್ಬನೇ ಇಡೀ ಲಂಕೆಯನ್ನು ಮರ್ದಿಸಿಬಿಡಲು ಬಯಸುತ್ತಿರುವನು. ನೀವು ಲಂಕೆಯಲ್ಲಿ ಬಂಧಿಸಿಟ್ಟಿದ್ದ ಅಗ್ನಿಯನ್ನು ಇವನು ಬಾಲದ ಮೂಲಕ ಪ್ರಜ್ವಲಿತಗೊಳಿಸಿ ಇಡೀ ಲಂಕೆಯನ್ನು ಸುಟ್ಟುಬಿಟ್ಟಿದ್ದನು, ಇವನನ್ನು ನೀವು ಹೇಗೆ ಮರೆಯಬಲ್ಲಿರಿ.॥16-17॥

ಮೂಲಮ್ - 18

ಯಶ್ಚೈಷೋಽನಂತರಃ ಶೂರಃ ಶ್ಯಾಮಃ ಪದ್ಮನಿಭೇಕ್ಷಣಃ ।
ಇಕ್ಷ್ವಾ ಕೂಣಾಮತಿರಥೋ ಲೋಕೇ ವಿಶ್ರುತಪೌರುಷಃ ॥

ಅನುವಾದ

ಹನುಮಂತನ ಬಳಿಯಲ್ಲಿರುವವನು ಕಮಲಾಕ್ಷನಾದ, ಶ್ಯಾಮಲಾಂಗನೂ, ಶೂರವೀರನೂ, ಇಕ್ಷ್ವಾಕು ವಂಶದ ಅತಿರಥ ನಾದ, ಮಹಾಪೌರುಷದಿಂದ ಕೂಡಿರುವ, ಮೂರು ಲೋಕಗಳಲ್ಲಿ ಪ್ರಸಿದ್ಧನಾದ ಶ್ರೀರಾಮನು.॥18॥

ಮೂಲಮ್ - 19

ಯಸ್ಮಿನ್ನ ಚಲತೇ ಧರ್ಮೋ ಯೋ ಧರ್ಮಂ ನಾತಿರ್ತತೇ ।
ಯೋ ಬ್ರಾಹ್ಮಮಸ್ತ್ರಂ ವೇದಾಂಶ್ಚ ವೇದ ವೇದವಿದಾಂ ವರಃ ॥

ಅನುವಾದ

ಧರ್ಮವು ಅವನಿಂದ ಅಗಲುವುದಿಲ್ಲ, ಅವನು ಧರ್ಮವನ್ನು ಎಂದೂ ಉಲ್ಲಂಘಿಸುವುದಿಲ್ಲ. ವೇದವಿದರಲ್ಲಿ ಶ್ರೇಷ್ಠನಾದ; ಬ್ರಹ್ಮಾಸ್ತ್ರವನ್ನೂ, ವೇದಗಳನ್ನು, ತಿಳಿದಿರುವವನೇ ಶ್ರೀರಾಮನು.॥19॥

ಮೂಲಮ್ - 20

ಯೋ ಭಿಂದ್ಯಾದ್ ಗಗನಂ ಬಾಣೈರ್ಮೇದಿನೀಂ ವಾಪಿ ದಾರಯೇತ್ ।
ಯಸ್ಯ ಮೃತ್ಯೋರಿವ ಕ್ರೋಧಃ ಶಕ್ರಸ್ಯೇವ ಪರಾಕ್ರಮಃ ॥

ಅನುವಾದ

ಶ್ರೀರಾಮನು ಬಾಣಗಳಿಂದ ಆಕಾಶವನ್ನೇ ಭೇದಿಸಬಲ್ಲನು, ಪೃಥಿವಿಯನ್ನು ಸೀಳಿಹಾಕಬಲ್ಲನು, ಅವನ ಕೋಪವು ಮೃತ್ಯುವಿನಂತೆ ಇದ್ದು, ಪರಾಕ್ರಮವು ಇಂದ್ರನಂತೆಯೇ ಇದೆ.॥20॥

ಮೂಲಮ್ - 21

ಯಸ್ಯ ಭಾರ್ಯಾ ಜನಸ್ಥಾನಾತ್ಸೀತಾ ಚಾಪಿಹೃತಾ ತ್ವಯಾ ।
ಸ ಏಷ ರಾಮಸ್ತ್ವಾಂ ರಾಜನ್ಯೋದ್ಧುಂ ಸಮಭಿವರ್ತತೇ ॥

ಅನುವಾದ

ರಾಜನೇ! ಯಾರ ಭಾರ್ಯೆಯನ್ನು ನೀನು ಜನಸ್ಥಾನದಿಂದ ಕದ್ದು ತಂದಿರುವೆಯೋ ಆ ಶ್ರೀರಾಮನೇ ನಿನ್ನೊಡನೆ ಯುದ್ಧ ಮಾಡಲು ನಿನ್ನ ಮುಂದೆ ಬಂದು ನಿಂತಿರುವನು.॥21॥

ಮೂಲಮ್ - 22

ಯಸ್ಯೈಷ ದಕ್ಷಿಣೇ ಪಾರ್ಶ್ವೇ ಶುದ್ಧ ಜಾಂಬೂನದ ಪ್ರಭಃ ।
ವಿಶಾಲವಕ್ಷಾಸ್ತಾಮ್ರಾಕ್ಷೋ ನೀಲಕುಂಚಿತಮೂರ್ಧಜಃ ॥

ಮೂಲಮ್ - 23

ಏಷೋಹಿ ಲಕ್ಷ್ಮಣೋ ನಾಮ ಭ್ರಾತುಃ ಪ್ರಿಯಹಿತೇ ರತಃ ।
ನಯೇ ಯುದ್ಧೇ ಚ ಕುಶಲಃ ಸರ್ವಶಸ್ತ್ರಭೃತಾಂ ವರಃ ॥

ಅನುವಾದ

ಶ್ರೀರಾಮನ ಬಲಭಾಗದಲ್ಲಿ ಶುದ್ಧವಾದ ಚಿನ್ನದ ಪ್ರಭೆಯಂತೆ ಕಾಂತಿಯುಳ್ಳ, ವಿಶಾಲವಕ್ಷಃಸ್ಥಳವುಳ್ಳ, ಕೆಂಪಾದ ಕಣ್ಣುಗಳುಳ್ಳ, ಕಪ್ಪಾದ ಗುಂಗುರು ಕೂದಲುಗಳಿಂದ ಕೂಡಿದ, ಅಣ್ಣನ ಹಿತದಲ್ಲೇ ಸದಾ ಆಸಕ್ತನಾಗಿರುವ ಲಕ್ಷ್ಮಣನು ಕಂಗೊಳಿಸುತ್ತಿರುವನು. ಅವನು ಸಮಸ್ತ ಶಸ್ತ್ರಧಾರಿಗಳಲ್ಲಿ ಶ್ರೇಷ್ಠನೂ, ನೀತಿಶಾಸ್ತ್ರದಲ್ಲಿಯೂ, ಯುದ್ಧದಲ್ಲಿಯೂ ಮಹಾ ಕುಶಲನಾಗಿದ್ದಾನೆ.॥22-23॥

ಮೂಲಮ್ - 24

ಅಮರ್ಷೀ ದುರ್ಜಯೋ ಜೇತಾ ವಿಕ್ರಾಂತಶ್ಚ ಜಯೀ ಬಲೀ ।
ರಾಮಸ್ಯ ದಕ್ಷಿಣೋ ಬಾಹುರ್ನಿತ್ಯಂ ಪ್ರಾಣೋ ಬಹಿಶ್ಚರಃ ॥

ಅನುವಾದ

ಇವನು ಶೀಘ್ರಕೋಪಿಯೂ, ದುರ್ಜಯವೀರನೂ, ಪರಾಕ್ರಮಿಯೂ, ಶತ್ರುಗಳನ್ನು ಸೋಲಿಸುವವನೂ, ಬಲವಂತನೂ ಆಗಿದ್ದಾನೆ. ಲಕ್ಷ್ಮಣನು ಶ್ರೀರಾಮನಿಗೆ ಬಲಗೈಯಂತೆಯೂ, ಹೊರಗೆ ಸಂಚರಿಸುವ ಪ್ರಾಣಗಳಂತೆಯೂ ಆಗಿರುವನು.॥24॥

ಮೂಲಮ್ - 25

ನಹ್ಯೇಷ ರಾಘವಸ್ಯಾರ್ಥೇ ಜೀವಿತಂ ಪರಿರಕ್ಷತಿ ।
ಏಷೈವಾಶಂಸತೇ ಯುದ್ಧೇ ನಿಹಂತುಂ ಸರ್ವರಾಕ್ಷಸಾನ್ ॥

ಅನುವಾದ

ರಾಘವನಿಗಾಗಿ ತನ್ನ ಜೀವನವನ್ನೇ ತೊರೆಯಲು ಇವನು ಸಿದ್ಧನಿರುವನು. ಇವನೊಬ್ಬನೇ ಯುದ್ಧದಲ್ಲಿ ಸಮಸ್ತ ರಾಕ್ಷಸರನ್ನು ಸಂಹರಿಸಲು ಬಯಸುತ್ತಿರುವನು.॥25॥

ಮೂಲಮ್ - 26

ಯಸ್ತು ಸವ್ಯಮಸೌ ಪಕ್ಷಂ ರಾಮಸ್ಯಾಶ್ರಿತ್ಯ ತಿಷ್ಠತಿ ।
ರಕ್ಷೋಗಣಪರಿಕ್ಷಿಪ್ತೋ ರಾಜಾ ಹ್ಯೇಷ ವಿಭೀಷಣಃ ॥

ಮೂಲಮ್ - 27

ಶ್ರೀಮತಾ ರಾಜರಾಜೇನ ಲಂಕಾಯಾಮಭಿಷೇಚಿತಃ ।
ತ್ವಾಮಸೌ ಪ್ರತಿಸಂರಬ್ಧೋಯುದ್ಧಾಯೈಷೋಽಭಿವರ್ತತೇ ॥

ಅನುವಾದ

ಶ್ರೀರಾಮಚಂದ್ರನ ಎಡಭಾಗದಲ್ಲಿ ರಾಕ್ಷಸರಿಂದ ಸುತ್ತುವರಿದು ನಿಂತಿರುವನೇ ರಾಜಾ ವಿಭೀಷಣನು. ರಾಜಾಧಿರಾಜ ನಾದ ಶ್ರೀರಾಮನು ಇವನಿಗೆ ಲಂಕೆಯ ಪಟ್ಟಗಟ್ಟಿರುವನು. ಈಗ ಈ ವಿಭೀಷಣನೂ ಕೂಡ ನಿನ್ನ ವಿಷಯದಲ್ಲಿ ಕುಪಿತ ನಾಗಿ ಯುದ್ಧಕ್ಕಾಗಿ ಮುಂದೆ ಬರುತ್ತಿದ್ದಾನೆ.॥26-27॥

(ಶ್ಲೋಕ 28)

ಮೂಲಮ್

ಯಂ ತು ಪಶ್ಯಸಿ ತಿಷ್ಠಂತಂ ಮಧ್ಯೇ ಗಿರಿಮಿವಾಚಲಮ್ ।
ಸರ್ವಶಾಖಾಮೃಗೇಂದ್ರಾಣಾಂ ಭರ್ತಾರಮಮಿತೌಜಸಮ್ ॥

ಅನುವಾದ

ಎಲ್ಲ ವಾನರರ ಮಧ್ಯದಲ್ಲಿ ಪರ್ವತೋಪಮವಾಗಿ, ಪರ್ವತದಂತೆ ಅಚಲವಾಗಿ ನಿಂತಿರುವ ವಾನರರನ್ನು ನೋಡುತ್ತಿರು ವೆಯಲ್ಲವೇ? ಅವನು ಸಮಸ್ತ ವಾನರರಿಗೆ ಒಡೆಯನಾದ ಮಹಾತೇಜಸ್ವೀ ಸುಗ್ರೀವನು.॥28॥

ಮೂಲಮ್ - 29

ತೇಜಸಾ ಯಶಸಾ ಬುದ್ಧ್ಯಾಬಲೇನಾಭಿಜನೇನ ಚ ।
ಯಃ ಕಪೀನತಿ ಬಭ್ರಾಜ ಹಿಮವಾನಿವ ಪರ್ವತಃ ॥

ಅನುವಾದ

ಹಿಮವಂತನು ಎಲ್ಲ ಪರ್ವತಗಳಲ್ಲಿ ಶ್ರೇಷ್ಠನಾಗಿರುವಂತೆಯೇ, ತೇಜಸ್ಸು, ಯಶಸ್ಸು, ಬಲ, ಬುದ್ಧಿ, ಸತ್ಕುಲ ಪ್ರಸೂತಿ-ಇವೆಲ್ಲವುಗಳಿಂದಾಗಿ ಸುಗ್ರೀವನು ವಾನರರಲ್ಲಿ ಸರ್ವಶ್ರೇಷ್ಠನಾಗಿದ್ದಾನೆ.॥29॥

ಮೂಲಮ್ - 30

ಕಿಷ್ಕಿಂಧಾಂ ಯಃ ಸಮಧ್ಯಾಸ್ತೇ ಗುಹಾಂ ಸಗಹನದ್ರುಮಾಮ್ ।
ದುರ್ಗಾಂ ಪರ್ವತದುರ್ಗಮ್ಯಾಂ ಪ್ರಧಾನೈಃ ಸಹ ಯೂಥಪೈಃ ॥

ಅನುವಾದ

ಇವನು ಗಹನ ವೃಕ್ಷಗಳಿಂದ ಕೂಡಿದ ಕಿಷ್ಕಿಂಧಾ ಎಂಬ ದುರ್ಗಮವಾದ ಗುಹೆಯಲ್ಲಿ ವಾಸಿಸುತ್ತಿರುವನು. ಪರ್ವತಗಳಿಂದಾಗಿ ಅದನ್ನು ಪ್ರವೇಶಿಸುವುದು ಅತ್ಯಂತ ಕಠಿಣವಾಗಿದೆ. ಇವನೊಂದಗೆ ಅಲ್ಲಿ ಮುಖ್ಯ ಮುಖ್ಯ ಸೇನಾಪತಿಗಳೂ ಇರುತ್ತಾರೆ.॥30॥

ಮೂಲಮ್ - 31

ಯಸ್ಯೈಷಾ ಕಾಂಚನೀ ಮಾಲಾ ಶೋಭತೇ ಶತಪುಷ್ಕರಾ ।
ಕಾಂತಾ ದೇವಮನುಷ್ಯಾಣಾಂ ಯಸ್ಯಾಂ ಲಕ್ಷ್ಮೀಃ ಪ್ರತಿಷ್ಠಿತಾ ॥

ಅನುವಾದ

ಅವನ ಕೊರಳಿನಲ್ಲಿ ನೂರು ಕಮಲಗಳ ಸುವರ್ಣಮಯ ಮಾಲೆ ಶೋಭಿಸುತ್ತದೆ. ಅದರಲ್ಲಿ ಸದಾ ಲಕ್ಷ್ಮೀದೇವಿಯ ಸನ್ನಿಧಾನ ಇರುತ್ತದೆ. ಅದನ್ನು ದೇವ-ಮಾನವರೆಲ್ಲರೂ ಪಡೆಯಲು ಬಯಸುತ್ತಾರೆ.॥31॥

ಮೂಲಮ್ - 32

ಏತಾಂ ಮಾಲಾಂ ಚ ತಾರಾಂ ಚ ಕಪಿರಾಜ್ಯಂ ಚ ಶಾಶ್ವತಮ್ ।
ಸುಗ್ರೀವೋ ವಾಲಿನಂ ಹತ್ವಾ ರಾಮೇಣ ಪ್ರತಿಪಾದಿತಃ ॥

ಅನುವಾದ

ಭಗವಾನ್ ಶ್ರೀರಾಮನು ವಾಲಿಯನ್ನು ಕೊಂದು ಈ ಮಾಲೆ, ತಾರೆ ಮತ್ತು ವಾನರರ ರಾಜ್ಯವನ್ನು ಸುಗ್ರೀವನಿಗೆ ಒಪ್ಪಿಸಿ ಕೊಟ್ಟಿದ್ದನು.॥32॥

ಮೂಲಮ್ - 33

ಶತಂ ಶತ ಸಹಸ್ರಾಣಾಂ ಕೋಟಿ ಮಾಹುರ್ಮನೀಷಿಣಃ ।
ಶತಂ ಕೋಟಿ ಸಹಸ್ರಾಣಾಂ ಶಂಕುರಿತ್ಯಭಿಧೀಯತೇ ॥

ಮೂಲಮ್ - 34

ಶತಂ ಶಂಕು ಸಹಸ್ರಾಣಾಂ ಮಹಾಶಂಕುರಿತಿ ಸ್ಮತಃ ।
ಮಹಾಶಂಕು ಸಹಸ್ರಾಣಾಂ ಶತಂ ವೃಂದಮಿಹೋಚ್ಯತೇ ॥

ಅನುವಾದ

ನೂರು ಲಕ್ಷಗಳನ್ನು ವಿದ್ವಾಂಸರು ಕೋಟಿ ಎಂದು ಹೇಳುತ್ತಾರೆ. ಅಂತಹ ನೂರು ಸಾವಿರ ಕೋಟಿಗಳನ್ನು ಶಂಖವೆಂದು ಹೇಳುತ್ತಾರೆ.॥33-34॥

ಮೂಲಮ್ - 35

ಶತಂ ವೃಂದ ಸಹಸ್ರಾಣಾಂ ಮಹಾವೃಂದಮಿತಿ ಸ್ಮತಮ್ ।
ಮಹಾವೃಂದ ಸಹಸ್ರಾಣಾಂ ಶತಂ ಪದ್ಮಮಿಹೋಚ್ಯತೇ ॥

ಅನುವಾದ

ಒಂದು ಲಕ್ಷ ವೃಂದದ ಹೆಸರು ಮಹಾವೃಂದವಾಗಿದೆ. ಒಂದು ಲಕ್ಷ ಮಹಾವೃಂದವನ್ನು ಪದ್ಮವೆಂದು ಹೇಳುತ್ತಾರೆ.॥35॥

ಮೂಲಮ್ - 36

ಶತಂ ಪದ್ಮಸಹಸ್ರಾಣಾಂ ಮಹಾಪದ್ಮಮಿತಿ ಸ್ಮತಮ್ ।
ಮಹಾಪದ್ಮ ಸಹಸ್ರಾಣಾಂ ಶತಂ ಖರ್ವಮಿಹೋಚ್ಯತೇ ॥

ಅನುವಾದ

ನೂರು ಸಾವಿರ ಪದ್ಮಗಳಿಗೆ ಮಹಾಪದ್ಮವೆಂದು ಹೆಸರು. ನೂರು ಸಾವಿರ ಮಹಾಪದ್ಮ ಗಳನ್ನು ಖರ್ವವೆಂದು ಹೇಳುತ್ತಾರೆ.॥36॥

ಮೂಲಮ್ - 37½

ಶತಂ ಖರ್ವ ಸಹಸ್ರಾಣಾಂ ಮಹಾಖರ್ವಮಿತಿ ಸ್ಮತಮ್ ।
ಮಹಾಖರ್ವ ಸಹಸ್ರಾಣಾಂ ಸಮುದ್ರಮಭಿಧೀಯತೇ ।
ಶತಂ ಸಮುದ್ರಸಾಹಸ್ರಮೋಘ ಇತ್ಯಭಿಧೀಯತೇ ॥
ಶತಮೋಘ ಸಹಸ್ರಾಣಾಂ ಮಹೌಘಾ ಇತಿ ವಿಶ್ರುತಃ ।

ಅನುವಾದ

ಒಂದು ಲಕ್ಷ ಖರ್ವಗಳನ್ನು ಮಹಾಖರ್ವವಾಗುತ್ತದೆ. ಒಂದು ಸಾವಿರ ಮಹಾ ಖರ್ವಗಳನ್ನು ಸಮುದ್ರವೆಂದು ಹೇಳುತ್ತಾರೆ. ಒಂದು ಲಕ್ಷ ಸಮುದ್ರಗಳನ್ನು ಓಘವೆಂದೂ, ಒಂದು ಲಕ್ಷ ಓಘಕ್ಕೆ ಮಹೌಘ ಎಂಬ ಸಂಜ್ಞೆ ಇದೆ.॥37॥

ಮೂಲಮ್ - 38

ಏವಂ ಕೋಟಿ ಸಹಸ್ರೇಣ ಶಂಕೂನಾಂ ಚ ಶತೇನ ಚ ।
ಮಹಾಶಂಕು ಸಹಸ್ರೇಣ ತಥಾ ವೃಂದಶತೇನ ಚ ॥

ಮೂಲಮ್ - 39

ಮಹಾವೃಂದ ಸಹಸ್ರೇಣ ತಥಾ ಪದ್ಮಶತೇನ ಚ ।
ಮಹಾಪದ್ಮ ಸಹಸ್ರೇಣ ತಥಾ ಖರ್ವಶತೇನ ಚ ॥

ಮೂಲಮ್ - 40

ಸಮುದ್ರೇಣ ಚ ತೇನೈವ ಮಹೌಘೇನ ತಥೈವ ಚ ।
ಏಷ ಕೋಟಿ ಮಹೌಘೇನ ಸಮುದ್ರಸದೃಶೇನ ಚ ॥

ಮೂಲಮ್ - 41

ವೀರ ಭೀಷಣೇನ ವೀರೇಣ ಸಚಿವೈಃ ಪರಿವಾರಿತಃ ।
ಸುಗ್ರೀವೋ ವಾನರೇಂದ್ರಸ್ತ್ವಾಂ ಯುದ್ಧಾರ್ಥಮನುವರ್ತತೇ ।
ಮಹಾಬಲವೃತೋ ನಿತ್ಯಂ ಮಹಾಬಲ ಪರಾಕ್ರಮಃ ॥

ಅನುವಾದ

ಈ ಪ್ರಕಾರ ಸಾವಿರ ಕೋಟಿ, ನೂರು ಶಂಕು ಸಾವಿರ ಮಹಾಶಂಕು; ನೂರ ವೃಂದ, ಸಾವಿರ ಮಹಾವೃಂದ, ನೂರು ಪದ್ಮ, ಸಾವಿರ ಮಹಾಪದ್ಮ, ನೂರು ಖರ್ವ, ನೂರು ಸಮುದ್ರ, ನೂರು ಮಹೌಘ ಹಾಗೂ ಸಮುದ್ರದಂತಹ ನೂರು ಕೋಟಿ ಮಹೌಘ ಸೈನಿಕರಿಂದ ವೀರ ಭೀಷಣರಿಂದ, ತನ್ನ ಸಚಿವರಿಂದ ಸುತ್ತುವರೆದ ವಾನರ ರಾಜ ಸುಗ್ರೀವನು ನಿಮ್ಮನ್ನು ಯುದ್ಧಕ್ಕಾಗಿ ಆಹ್ವಾನಿಸುತ್ತಾ ಮುಂದಕ್ಕೆ ಬರುತ್ತಿದ್ದಾನೆ. ವಿಶಾಲ ಸೈನ್ಯದಿಂದ ಕೂಡಿಕೊಂಡ ಸುಗ್ರೀವನು ಮಹಾಬಲ ಮತ್ತು ಪರಾಕ್ರಮದಿಂದ ಸಂಪನ್ನನಾಗಿದ್ದಾನೆ.॥38-41॥

ಮೂಲಮ್ - 42

ಇಮಾಂ ಮಹಾರಾಜ ಸಮೀಕ್ಷ್ಯ ವಾಹಿನೀ-
ಮುಪಸ್ಥಿಥಾಂ ಪ್ರಜ್ವಲಿತ ಗ್ರಹೋಪಮಾಮ್ ।
ತತಃ ಪ್ರಯತ್ನಃ ಪರಮೋ ವಿಧೀಯತಾಂ
ಯಥಾ ಜಯಃ ಸ್ಯಾನ್ನಪರೈಃ ಪರಾಭವಃ ॥

ಅನುವಾದ

ಮಹಾರಾಜಾ! ಈ ಸೈನ್ಯವು ಒಂದು ಪ್ರಕಾಶಮಾನ ಗ್ರಹದಂತೆ ಇದೆ. ಉಪಸ್ಥಿತವಾದ ಇದನ್ನು ನೋಡಿ ತಮ್ಮ ವಿಜಯವಾಗುವಂತಹ, ಶತ್ರುಗಳ ಮುಂದೆ ಕೀಳಾಗದಂತೆ ಯಾವುದಾದರೂ ಉಪಾಯ ಮಾಡಿರಿ.॥42॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತೆಂಟನೆಯ ಸರ್ಗಃ ಪೂರ್ಣವಾಯಿತು.॥28॥