वाचनम्
ಭಾಗಸೂಚನಾ
ಶ್ರೀರಾಮನು ಲಕ್ಷ್ಮಣನಲ್ಲಿ ಉತ್ಪಾತಸೂಚಕ ಲಕ್ಷಣಗಳನ್ನು ವರ್ಣಿಸಿದುದು, ಲಂಕೆಯ ಮೇಲೆ ಆಕ್ರಮಣ
ಮೂಲಮ್ - 1
ನಿಮಿತ್ತಾನಿ ನಿಮಿತ್ತಜ್ಞೋ ದೃಷ್ಟ್ವಾ ಲಕ್ಷ್ಮಣ ಪೂರ್ವಜಃ ।
ಸೌಮಿತ್ರಿಂ ಸಂಪರಿಷ್ವಜ್ಯ ಇದಂ ವಚನಮಬ್ರವೀತ್ ॥
ಅನುವಾದ
ಉತ್ಪಾತ ಸೂಚಕವಾದ ಲಕ್ಷಣಗಳನ್ನು ತಿಳಿದಿದ್ದ ಲಕ್ಷ್ಮಣಾಗ್ರಜ ಶ್ರೀರಾಮನು ತಮ್ಮನಾದ ಲಕ್ಷ್ಮಣನನ್ನು ಆಲಿಂಗಿಸಿ ಕೊಂಡು ಹೀಗೆ ಹೇಳಿದನು.॥1॥
ಮೂಲಮ್ - 2
ಪರಿಗೃಹ್ಯೋದಕಂ ಶೀತಂ ವನಾನಿ ಫಲವಂತಿ ಚ ।
ಬಲೌಘಂ ಸಂವಿಭಜ್ಯೇಮಂ ವ್ಯೂಹ್ಯ ತಿಷ್ಠೇಮ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ಶೀತಲವಾದ ನೀರು ಮತ್ತು ಕಂದ ಮೂಲ-ಫಲಗಳಿರುವ ಅರಣ್ಯವನ್ನು ವಾಸಕ್ಕಾಗಿ ಆಶ್ರಯಿಸಿ ಆ ಸೈನ್ಯ ಸಮೂಹವನ್ನು ಕೆಲವು ಭಾಗಗಳಲ್ಲಿ ವಿಂಗಡಿಸಿ ಅವನ್ನೂ ವ್ಯೆಹಕ್ರಮದಲ್ಲಿ ನಿಲ್ಲಿಸಿ ಅಗ್ರಭಾಗದಲ್ಲಿ ನಾವು ನಿಲ್ಲೋಣ.॥2॥
ಮೂಲಮ್ - 3
ಲೋಕಕ್ಷಯಕರಂ ಭೀಮಂ ಭಯಂ ಪಶ್ಯಾಮ್ಯುಪಸ್ಥಿತಮ್ ।
ನಿಬರ್ಹಣಂ ಪ್ರವೀರಾಣಾಮೃಕ್ಷವಾನರಕ್ಷಸಾಮ್ ॥
ಅನುವಾದ
ಸಮಸ್ತಲೋಕಗಳನ್ನು ವಿನಾಶಗೊಳಿಸುವ ಭೀಷಣವಾದ ಭಯವು ಸನ್ನಿಹಿತ ವಾಗಿರುವಂತೆ ನಾನು ನೋಡುತ್ತಿದ್ದೇನೆ. ಇದು ಋಕ್ಷ್ಮ-ವಾನರ-ರಾಕ್ಷಸ ವೀರರ ವಿನಾಶದ ಸೂಚಕವಾಗಿದೆ.॥3॥
ಮೂಲಮ್ - 4
ವಾತಾಶ್ಚ ಕಲುಷಾ ವಾಂತಿ ಕಂಪತೇ ಚ ವಸುಂಧರಾ ।
ಪರ್ವತಾಗ್ರಾಣಿ ವೇಪಂತೇ ಪತಂತಿ ಚ ಮಹೀರುಹಾಃ ॥
ಅನುವಾದ
ಧೂಳಿನಿಂದ ಕೂಡಿದ ಚಂಡಮಾರುತ ಬೀಸುತ್ತಿದೆ. ನೆಲ ನಡುಗುತ್ತಿದೆ. ಪರ್ವತ ಶಿಖರಗಳು ಅಲ್ಲಾಡುತ್ತಾ ಮರಗಳು ಉರುಳಿ ಬೀಳುತ್ತಿವೆ.॥4॥
ಮೂಲಮ್ - 5
ಮೇಘಾಃ ಕ್ರವ್ಯಾದ ಸಂಕಾಶಾಃ ಪರುಷಾಃ ಪರುಷಸ್ವನಾಃ ।
ಕ್ರೂರಾಃ ಕ್ರೂರಂ ಪ್ರವರ್ಷಂತಿ ಮಿಶ್ರಂ ಶೋಣಿತಬಿಂದುಭಿ ॥
ಅನುವಾದ
ಮಾಂಸಭಕ್ಷಿ ರಾಕ್ಷಸರಂತಹ ದಟ್ಟವಾದ ಮೋಡಗಳು ಆವರಿಸಿವೆ. ನೋಡಲು ಕ್ರೂರ ವಾಗಿರುವ ಅವು ಕಠೋರವಾಗಿ ಗರ್ಜಿಸುತ್ತಾ, ಕ್ರೂರವಾದ ರಕ್ತದಿಂದ ಕೂಡಿದ ಮಳೆಯನ್ನು ಸುರಿಸುತ್ತಿವೆ.॥5॥
ಮೂಲಮ್ - 6
ರಕ್ತಚಂದನಸಂಕಾಶಾ ಸಂಧ್ಯಾ ಪರಮದಾರುಣಾ ।
ಜ್ವಲತಃ ಪ್ರಪತತ್ಯೇತದಾದಿತ್ಯಾದಗ್ನಿ ಮಂಡಲಮ್ ॥
ಅನುವಾದ
ಈ ಸಂಧ್ಯೆಯು ಕೆಂಪು ಚಂದನದಂತೆ ಕಾಂತಿಯುಕ್ತವಾಗಿ ಬಹಳ ಭಯಂಕರವಾಗಿ ಕಾಣುತ್ತಿದೆ. ಉರಿಯುತ್ತಿರುವ ಸೂರ್ಯ ನಿಂದ ಬೆಂಕಿಯ ಜ್ವಾಲೆಗಳು ಕಳಚಿಬೀಳುತ್ತಿವೆ.॥6॥
ಮೂಲಮ್ - 7
ದೀನಾ ದೀನಸ್ವರಾಃ ಕ್ರೂರಾಃ ಸರ್ವತೋ ಮೃಗಪಕ್ಷಿಣಃ ।
ಪ್ರತ್ಯಾದಿತ್ಯಂ ವಿನರ್ದಂತಿ ಜನಯಂತೋ ಮಹದ್ಭಯಮ್ ॥
ಅನುವಾದ
ಕ್ರೂರ ಪಶು-ಪಕ್ಷಿಗಳು ದೀನರಾಗಿ ಸೂರ್ಯನ ಕಡೆಗೆ ನೋಡುತ್ತಾ ದೀನ ಸ್ವರದಲ್ಲಿ ಕೂಗುತ್ತಾ ಮಹಾಭಯವನ್ನು ಉಂಟುಮಾಡುತ್ತಿವೆ.॥7॥
ಮೂಲಮ್ - 8
ರಜನ್ಯಾಮಪ್ರಕಾಶಸ್ತು ಸಂತಾಪಯತಿ ಚಂದ್ರಮಾಃ ।
ಕೃಷ್ಣರಕ್ತಾಂಶುಪರ್ಯಂತೋ ಲೋಕಕ್ಷಯ ಇವೋದಿತಃ ॥
ಅನುವಾದ
ರಾತ್ರೆಯಲ್ಲಿಯೂ ಚಂದ್ರನು ಪೂರ್ಣವಾಗಿ ಪ್ರಕಾಶಿಸುವುದಿಲ್ಲ ಹಾಗೂ ತನ್ನ ಸ್ವಭಾವಕ್ಕೆ ವಿಪರೀತವಾಗಿ ಉರಿಯುತ್ತಾ ಇದೆ. ಇವನು ಕಪ್ಪು ಮತ್ತು ಕೆಂಪಾದ ಕಿರಣಗಳಿಂದ ಕೂಡಿಯೇ ಉದಯಿಸಿದ್ದಾನೆ. ಜಗತ್ತಿನ ಪ್ರಳಯದ ಕಾಲವೇ ಸನ್ನಿಹಿತವಾದಂತೆ ಇದೆ.॥8॥
ಮೂಲಮ್ - 9
ಹ್ರಸ್ವೋ ರೂಕ್ಷೋಽಪ್ರಶಸ್ತಶ್ಚ ಪರಿವೇಷಸ್ತು ಲೋಹಿತಃ ।
ಆದಿತ್ಯೇ ವಿಮಲೇ ನೀಲಂ ಲಕ್ಷ್ಮ ಲಕ್ಷ್ಮಣ ದೃಶ್ಯತೇ ॥
ಅನುವಾದ
ಲಕ್ಷ್ಮಣ! ನಿರ್ಮಲ ಸೂರ್ಯಮಂಡಲದಲ್ಲಿ ನೀಲಿಚಿಹ್ನೆ ಕಂಡುಬರುತ್ತಿದೆ. ಸೂರ್ಯನ ಸುತ್ತಲೂ ಸಣ್ಣದಾದ, ರುಕ್ಷ ಅಶುಭ ಕೆಂಪಾದ ವರ್ತುಲ ಉಂಟಾಗಿದೆ.॥9॥
ಮೂಲಮ್ - 10
ರಜಸಾ ಮಹತಾ ಚಾಪಿ ನಕ್ಷತ್ರಾಣಿ ಹತಾನಿ ಚ ।
ಯುಗಾಂತಮಿವ ಲೋಕಾನಾಂ ಪಶ್ಯ ಶಂಸಂತಿ ಲಕ್ಷ್ಮಣ ॥
ಅನುವಾದ
ಸುಮಿತ್ರಾ ನಂದನ! ನೋಡು, ಈ ನಕ್ಷತ್ರಗಳು ಭಾರೀ ಧೂಳಿನಿಂದಾಗಿ ಮುಚ್ಚಿಹೋಗಿ ಪ್ರಭೆಯನ್ನು ಕಳೆದುಕೊಂಡಿವೆ; ಅದರಿಂದ ಜಗತ್ತಿನ ಭಾವೀ ಸಂಹಾರದ ಸೂಚನೆ ಕೊಡುತ್ತಿವೆ.॥10॥
ಮೂಲಮ್ - 11
ಕಾಕಾಃ ಶ್ಯೇನಾಸ್ತಥಾನೀಚಾಗೃಧ್ರಾಃ ನೀಚಾಃ ಪರಿಪತಂತಿ ಚ ।
ಶಿವಾಶ್ಚಾಪ್ಯಶುಭಾನ್ ನಾದಾನ್ ನದಂತಿ ಸುಮಹಾಭಯಾನ್ ॥
ಅನುವಾದ
ಕಾಗೆಗಳು, ಗಿಡುಗಗಳು, ಅಧಮ ಗೃಧ್ರಗಳು ಎಲ್ಲೆಡೆ ಹಾರಾಡುತ್ತಿವೆ. ಹೆಣ್ಣು ನರಿಗಳು ಅಶುಭಸೂಚಕ ಕೆಟ್ಟದಾಗಿ ಕೂಗುತ್ತಿವೆ.॥11॥
ಮೂಲಮ್ - 12
ಶೈಲೈಃ ಶೂಲೈಶ್ಚ ಖಡ್ಗೈಶ್ಚ ವಿಮುಕ್ತೈಃ ಕಪಿರಾಕ್ಷಸೈಃ ।
ಭವಿಷ್ಯತ್ಯಾವೃತಾ ಭೂಮಿರ್ಮಾಂಸಶೋಣಿತಕರ್ದಮಾ ॥
ಅನುವಾದ
ವಾನರರು ಮತ್ತು ರಾಕ್ಷಸರು ಎಸೆದಿರುವ ಬಂಡೆಗಳಿಂದ, ಶೂಲಗಳಿಂದ, ಖಡ್ಗಗಳಿಂದ ಇಡೀ ಭೂಮಿ ತುಂಬಿ ಹೋದೀತು ಹಾಗೂ ಇಲ್ಲಿ ರಕ್ತ- ಮಾಂಸದ ಕೆಸರು ತುಂಬಿಹೋದೀತು ಎಂದು ತೋರುತ್ತದೆ.॥12॥
ಮೂಲಮ್ - 13
ಕ್ಷಿಪ್ರಮದ್ಯೈವ ದುರ್ಧರ್ಷಾಂ ಪುರೀಂ ರಾವಣ ಪಾಲಿತಾಮ್ ।
ಅಭಿಯಾಮ ಜವೇನೈವ ಸರ್ವೈರ್ಹರಿಭಿರಾವೃತಾಃ ॥
ಅನುವಾದ
ನಾವು ಇಂದೇ ಆದಷ್ಟು ಬೇಗ ಈ ರಾವಣನಿಂದ ರಕ್ಷಿತ ಲಂಕೆಯನ್ನು ವಾನರರೊಂದಿಗೆ ಆಕ್ರಮಣ ಮಾಡಬೇಕು.॥13॥
ಮೂಲಮ್ - 14
ಇತ್ಯೇವಮುಕ್ತ್ವಾ ಧನ್ವೀ ಸ ರಾಮಃ ಸಂಗ್ರಾಮಧರ್ಷಣಃ ।
ಪ್ರತಸ್ಥೇ ಪುರತೋ ರಾಮೋ ಲಂಕಾ ಮಭಿಮುಖೋ ವಿಭುಃ ॥
ಅನುವಾದ
ಹೀಗೆ ಹೇಳಿ ಸಂಗ್ರಾಮ ವಿಜಯೀ ಭಗವಾನ್ ಶ್ರೀರಾಮನು ಕೈಯಲ್ಲಿ ಧನುಸ್ಸನ್ನೆತ್ತಿಕೊಂಡು ಎಲ್ಲರಿಗಿಂತ ಮುಂದೆ ಲಂಕೆಯ ಕಡೆಗೆ ಹೊರಟನು.॥14॥
ಮೂಲಮ್ - 15
ಸವಿಭೀಷಣ ಸುಗ್ರೀವಾಃ ಸರ್ವೇ ತೇ ವಾನರರ್ಷಭಾಃ ।
ಪ್ರತಸ್ಥಿರೇ ವಿನರ್ದಂತೋ ಧೃತಾನಾಂ ದ್ವಿಷತಾಂ ವಧೇ ॥
ಅನುವಾದ
ಮತ್ತೆ ವಿಭೀಷಣ ಮತ್ತು ಸುಗ್ರೀವನೊಂದಿಗೆ ಯುದ್ಧದ ನಿಶ್ಚಯವುಳ್ಳ ಆ ಎಲ್ಲ ಶ್ರೇಷ್ಠ ವಾನರರು ಗರ್ಜಿಸುತ್ತಾ ಶತ್ರುಗಳನ್ನು ವಧಿಸಲಿಕ್ಕಾಗಿ ಮುಂದುವರಿದರು.॥15॥
ಮೂಲಮ್ - 16
ರಾಘವಸ್ಯ ಪ್ರಿಯಾರ್ಥಂ ತು ಸುತರಾಂ ವೀರ್ಯಶಾಲಿನಾಮ್ ।
ಹರೀಣಾಂ ಕರ್ಮಚೇಷ್ಟಾಭಿಸ್ತುತೋಷ ರಘುನಂದನಃ ॥
ಅನುವಾದ
ಅವರೆಲ್ಲರೂ ರಘುನಾಥನ ಪ್ರಿಯವನ್ನು ಮಾಡಲು ಬಯಸುತ್ತಿದ್ದರು. ಆ ಬಲಶಾಲೀ ವಾನರರ ಕರ್ಮ ಮತ್ತು ಚೇಷ್ಟೆಗಳಿಂದ ರಘುನಂದನ ಶ್ರೀರಾಮನಿಗೆ ಬಹಳ ಸಂತೋಷವಾಯಿತು.॥16॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಇಪ್ಪತ್ತಮೂರನೆಯ ಸರ್ಗ ಪೂರ್ಣವಾಯಿತು.॥23॥