वाचनम्
ಭಾಗಸೂಚನಾ
ರಾವಣನು ವಿಭೀಷಣನನ್ನು ತಿರಸ್ಕರಿಸಿದುದು, ವಿಭೀಷಣನೂ ಅವನನ್ನು ಗದರಿಸಿ ಹೊರಟುಹೋದುದು
ಮೂಲಮ್ - 1
ಸುನಿವಿಷ್ಟಂ ಹಿತಂ ವಾಕ್ಯಮುಕ್ತವಂತಂ ವಿಭೀಷಣಮ್ ।
ಅಬ್ರವೀತ್ ಪರುಷಂ ವಾಕ್ಯಂ ರಾವಣಃ ಕಾಲಚೋದಿತಃ ॥
ಅನುವಾದ
ರಾವಣನ ತಲೆಯ ಮೇಲೆ ಕಾಲನು ಕುಣಿಯುತ್ತಿದ್ದನು, ಅದಕ್ಕಾಗಿ ಅವನು ಸುಂದರ ಅರ್ಥದಿಂದ ಕೂಡಿದ ಹಾಗೂ ಹಿತಕರ ಮಾತನ್ನು ಹೇಳಿದರೂ ವಿಭೀಷಣನಲ್ಲಿ ಕಠೋರವಾಗಿ ನುಡಿದನು.॥1॥
ಮೂಲಮ್ - 2
ವಸೇತ್ ಸಹ ಸಪತ್ನೇನ ಕ್ರುದ್ಧೇನಾಶೀವಿಷೇಣ ಚ ।
ನ ತು ಮಿತ್ರಪ್ರವಾದೇನ ಸಂವಸೇಚ್ಛತ್ರುಸೇವಿನಾ ॥
ಅನುವಾದ
ತಮ್ಮನೇ! ಶತ್ರು ಮತ್ತು ವಿಷಧರ ಸರ್ಪದೊಂದಿಗೆ ವಾಸಿಸಲು ಬಿದ್ದರೆ ಇರಬಹುದು; ಆದರೆ ಮಿತ್ರನೆಂದು ಹೇಳಿಸಿಕೊಂಡು ಶತ್ರುವಿನ ಸೇವೆ ಮಾಡುವವ ನೊಂದಿಗೆ ಎಂದಿಗೂ ಇರಬಾರದು.॥2॥
ಮೂಲಮ್ - 3
ಜಾನಾಮಿ ಶೀಲಂ ಜ್ಞಾತೀನಾಂ ಸರ್ವಲೋಕೇಷು ರಾಕ್ಷಸ ।
ಹೃಷಂತಿ ವ್ಯಸನೇಶ್ವೇತೇ ಜ್ಞಾತೀನಾಂ ಜ್ಞಾತಯಃ ಸದಾ ॥
ಅನುವಾದ
ರಾಕ್ಷಸನೇ! ಸಮಸ್ತ ಲೋಕಗಳಲ್ಲಿ ಸಜಾತಿಯ ಬಂಧುಗಳ ಸ್ವಭಾವವನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಜಾತಿಯವರು ಸದಾ ತನ್ನ ಬೇರೆ ಸಜಾತಿಯವರ ಆಪತ್ತುಗಳಲ್ಲಿ ಹರ್ಷಪಡುತ್ತಾರೆ.॥3॥
ಮೂಲಮ್ - 4
ಪ್ರಧಾನಂ ಸಾಧಕಂ ವೈದ್ಯಂ ಧರ್ಮಶೀಲಂ ಚ ರಾಕ್ಷಸ ।
ಜ್ಞಾತಯೋಽಪ್ಯವಮನ್ಯಂತೇ ಶೂರಂ ಪರಿಭವಂತಿ ಚ ॥
ಅನುವಾದ
ನಿಶಾಚರನೇ ! ಯಾರು ಹಿರಿಯನಾದ ಕಾರಣ ರಾಜ್ಯವನ್ನು ಪಡೆದು ಎಲ್ಲರಲ್ಲಿ ಮುಖ್ಯನಾದವನೋ, ರಾಜಕಾರ್ಯವನ್ನು ಚೆನ್ನಾಗಿ ನಡೆಸುತ್ತಿರುವನೋ, ವಿದ್ವಾಂಸ, ವಿನಯಶೀಲ, ಶೂರನಾಗಿರುವನೋ, ಅವನನ್ನು ಕೂಡ ಕುಟುಂಬದವರು ಅಪಮಾನಿತಗೊಳಿಸುತ್ತಾರೆ. ಮತ್ತು ಅವಕಾಶ ಸಿಕ್ಕಿದಾಗ ಅವನನ್ನು ಕೀಳಾಗಿಸಲು ಪ್ರಯತ್ನಿಸುತ್ತಾರೆ.॥4॥
ಮೂಲಮ್ - 5
ನಿತ್ಯಮನ್ಯೋನ್ಯ ಸಂಹೃಷ್ಟಾ ವ್ಯಸನೇಷ್ವಾತತಾಯಿನಃ ।
ಪ್ರಚ್ಛನ್ನಹೃದಯಾ ಘೋರಾ ಜ್ಞಾತಯಸ್ತು ಭಯಾವಹಾಃ ॥
ಅನುವಾದ
ಸಜಾತಿಯವರು ಸದಾ ತನ್ನವರ ಮೇಲೆ ಸಂಕಟ ಬಂದಾಗ ಹರ್ಷಪಡುತ್ತಾರೆ. ಅವರು ಬಹಳ ಆತತಾಯಿಗಳಾಗಿರುತ್ತಾರೆ. ಸಂದರ್ಭ ಬಂದಾಗ ಬೆಂಕಿ ಹಚ್ಚುವುದು, ವಿಷಕೊಡುವುದು, ಧನ ಎತ್ತಿಹಾಕುವುದು, ಕ್ಷೇತ್ರ ಮತ್ತು ಸ್ತ್ರೀಯ ಅಪಹರಣ ಮಾಡಲೂ ಕೂಡ ಹಿಂಜರಿಯುವುದಿಲ್ಲ. ತಮ್ಮ ಮನೋಭಾವ ಅಡಗಿಸಿಡುತ್ತಾರೆ. ಆದ್ದರಿಂದ ಕ್ರೂರರು ಮತ್ತೂ ಭಯಂಕರ ವಾಗಿರುತ್ತಾರೆ.॥5॥
ಮೂಲಮ್ - 6
ಶ್ರೂಯಂತೇ ಹಸ್ತಿರ್ಭಿರ್ಗೀತಾಃ ಶ್ಲೋಕಾಃ ಪದ್ಮವನೇ ಪುರಾ ।
ಪಾಶಹಸ್ತಾನ್ ನರಾನ್ ದೃಷ್ಟ್ವಾ ಶೃಣುಷ್ವ ಗದತೋ ಮಮ ॥
ಅನುವಾದ
ಹಿಂದೊಮ್ಮೆ ಪದ್ಮವನದಲ್ಲಿ ಆನೆಗಳು ತಮ್ಮ ಹೃದಯದ ಉದ್ಗಾರವನ್ನು ಪ್ರಕಟಿಸಿದ್ದವು. ಅದು ಈಗಲೂ ಶ್ಲೋಕ ರೂಪ ದಲ್ಲಿ ಹಾಡಲಾಗುತ್ತದೆ, ಕೇಳಲಾಗುತ್ತದೆ. ಒಮ್ಮೆ ಕೆಲವರು ಕೈಯಲ್ಲಿ ಹಗ್ಗದ ಉರುಳು ಎತ್ತಿಕೊಂಡು ಬರುತ್ತಿರು ವುದನ್ನು ನೋಡಿ ಆನೆಗಳು ಹೇಳಿದ ಮಾತನ್ನು ತಿಳಿಸುತ್ತಿದ್ದೇನೆ; ಅದನ್ನು ನನ್ನಿಂದ ಕೇಳು.॥6॥
ಮೂಲಮ್ - 7
ನಾಗ್ನಿರ್ನಾನ್ಯಾನಿ ಶಸ್ತ್ರಾಣಿ ನ ನಃ ಪಾಶಾ ಭಯಾವಹಾಃ ।
ಘೋರಾಃ ಸ್ವಾರ್ಥಪ್ರಯುಕ್ತೋಸ್ತು ಜ್ಞಾತಯೋ ನೋ ಭ0ಯಾವಹಾಃ ॥
ಅನುವಾದ
ನಮಗೆ ಬೆಂಕಿ, ಬೇರೆ ಬೇರೆ ಶಸ ಹಾಗೂ ಪಾಶಗಳು ಭಯ ಉಂಟುಮಾಡಲಾರವು. ನಮಗಾದರೋ ತನ್ನ ಸ್ವಾರ್ಥಿ ಜಾತಿಬಾಂಧವರೇ ಭಯಾನಕರಾಗಿ ಮತ್ತು ಆಪತ್ತಿನ ವಸ್ತು ಎಂದು ಕಾಣುತ್ತದೆ.॥7॥
ಮೂಲಮ್ - 8
ಉಪಾಯಮೇತೇ ವಕ್ಷಂತಿ ಗ್ರಹಣೇ ನಾತ್ರ ಸಂಶಯಃ ।
ಕೃತ್ಸ್ನಾದ್ ಭಾಯಾಜ್ಞಾತಿಭಯಂ ಕುಕಷ್ಟಂ ವಿಹಿತಂ ಚ ನಃ ॥
ಅನುವಾದ
ಇವರೇ ನಮ್ಮನ್ನು ಹಿಡಿಯುವ ಉಪಾಯವನ್ನು ತಿಳಿಸುವರು, ಇದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಎಲ್ಲ ಭಯಗಳಿಗಿಂತ, ನಮಗೆ ಸ್ವಜಾತಿ ಬಂಧುಗಳಿಂದ ಉಂಟಾಗುವ ಭಯವೇ ಹೆಚ್ಚು ಕಷ್ಟದಾಯಕವೆಂದು ತಿಳಿಯುತ್ತದೆ.॥8॥
ಮೂಲಮ್ - 9
ವಿದ್ಯತೇ ಗೋಷು ಸಂಪನ್ನಂ ವಿತ್ಯತೇ ಜ್ಞಾತಿತೋ ಭಯಮ್ ।
ವಿದ್ಯತೇ ಸ್ತ್ರೀಷು ಚಾಪಲ್ಯಂ ವಿದ್ಯತೇ ಬ್ರಾಹ್ಮಣೇ ತಪಃ ॥
ಅನುವಾದ
ಗೋವುಗಳಲ್ಲಿ ಹವ್ಯ-ಕವ್ಯದ ಸಂಪತ್ತಾದ ಹಾಲು ಇರುತ್ತದೆ, ಸ್ತ್ರೀಯರಲ್ಲಿ ಚಪಲತೆ ಇರುತ್ತದೆ ಹಾಗೂ ಬ್ರಾಹ್ಮಣನಲ್ಲಿ ತಪಸ್ಸು ಇರುವಂತೆಯೇ ಜಾತಿ ಬಂಧುಗಳಿಂದ ಭಯವು ಅವಶ್ಯವಾಗಿ ಪ್ರಾಪ್ತವಾಗುತ್ತದೆ.॥9॥
ಮೂಲಮ್ - 10
ತತೋ ನೇಷ್ಟಮಿದಂ ಸೌಮ್ಯ ಯದಹಂ ಲೋಕಸತ್ಕೃತಃ ।
ಐಶ್ವರ್ಯಮಭಿಜಾತಶ್ಚ ರಿಪೂಣಾಂ ಮೂರ್ಧ್ನಿ ಚ ಸ್ಥಿತಃ ॥
ಅನುವಾದ
ಆದ್ದರಿಂದ ಸೌಮ್ಯನೇ! ಇಂದು ಇಡೀ ಜಗತ್ತು ನನ್ನನ್ನು ಸಮ್ಮಾನಿಸುತ್ತಿರುವುದು ಮತ್ತು ನಾನು ಐಶ್ವರ್ಯವಂತ, ಕುಲೀನ, ಶತ್ರುಗಳ ತಲೆಯ ಮೇಲೆ ಸ್ಥಿತನಾಗಿರುವುದೆಲ್ಲ ನಿನಗೆ ಅಭೀಷ್ಟವಿಲ್ಲ.॥10॥
ಮೂಲಮ್ - 11
ಯಥಾ ಪುಷ್ಕರಪತ್ರೇಷು ಪತಿತಾಸ್ತೋಯಬಿಂದವಃ ।
ನ ಶ್ಲೇಷಮಭಿಗಚ್ಛಂತಿ ತಥಾನಾರ್ಯೇಷು ಸೌಹೃದಮ್ ॥
ಅನುವಾದ
ಕಮಲದ ಎಲೆಯ ಮೇಲೆ ಬಿದ್ದ ನೀರಿನ ಹನಿಗಳು ಅದರಲ್ಲಿ ಇರಲಾರವೋ ಹಾಗೆಯೇ ಅನಾರ್ಯರ ಹೃದಯದಲ್ಲಿ ಸೌಹಾರ್ದವು ನಿಲ್ಲಲಾರದು.॥11॥
ಮೂಲಮ್ - 12
ಯಥಾ ಶರದಿ ಮೇಘಾನಾಂ ಸಿಂಚತಾಮಪಿ ಗರ್ಜತಾಮ್ ।
ನ ಭವತ್ಯಂಬುಸಂಕ್ಲೇದಸ್ತಥಾನಾರ್ಯೇಷು ಸೌಹೃದಮ್ ॥
ಅನುವಾದ
ಶರದ್ ಋತುವಿನಲ್ಲಿ ಗರ್ಜಿಸುವ ಮೋಡಗಳ ಮಳೆಯಿಂದ ನೆಲವು ಒದ್ದೆಯಾಗುವುದಿಲ್ಲವೋ, ಹಾಗೆಯೇ ಅನಾರ್ಯರ ಹೃದಯದಲ್ಲಿ ಸ್ನೇಹಜನಿತ ಆರ್ದ್ರತೆ ಇರುವುದಿಲ್ಲ.॥12॥
ಮೂಲಮ್ - 13
ಯಥಾ ಮಧುಕರಸ್ತರ್ಷಾದ್ ರಸಂ ವಿಂದನ್ನ ತಿಷ್ಠತಿ ।
ತಥಾ ತ್ವಮಪಿ ತತ್ರೈವ ತಥಾನಾರ್ಯೇಷು ಸೌಹೃದಮ್ ॥
ಅನುವಾದ
ಭೃಂಗವು ಬಹಳ ಅಕ್ಕರೆಯಿಂದ ಹೂವುಗಳ ಮಧುವನ್ನು ಕುಡಿಯುತ್ತಿದ್ದರೂ ಅಲ್ಲಿ ನಿಲ್ಲುವುದಿಲ್ಲ. ಹಾಗೆಯೇ ಅನಾರ್ಯರಲ್ಲಿ ಸುಹೃಜ್ಜನೋಚಿತ ಸ್ನೇಹ ನಿಲ್ಲಲಾರದು. ನೀನೂ ಹಾಗೆಯೇ ಅನಿವಾರ್ಯವಾಗಿರುವೆ.॥13॥
ಮೂಲಮ್ - 14
ಯಥಾ ಮಧುಕರಸ್ತರ್ಷಾತ್ ಕಾಶಪುಷ್ಪಂ ಪಿಬನ್ನಪಿ ।
ರಸಮತ್ರ ನ ವಿಂದೇತ ತಥಾನಾರ್ಯೇಷು ಸೌಹೃದಮ್ ॥
ಅನುವಾದ
ಭ್ರಮರವು ರಸದ ಇಚ್ಛೆಯಿಂದ ದರ್ಭೆಯ ಹೂವುಗಳಲ್ಲಿ ಕುಳಿತುಕೊಂಡರೆ ರಸವು ಸಿಗಲಾರನೋ ಹಾಗೆಯೇ ಅನಾರ್ಯರಲ್ಲಿರುವ ಸ್ನೇಹವು ಯಾರಿಗೂ ಲಾಭದಾಯಕವಾಗುವುದಿಲ್ಲ.॥14॥
ಮೂಲಮ್ - 15
ಯಥಾ ಪೂರ್ವಂ ಗಜಃ ಸ್ನಾತ್ವಾ ಗೃಹ್ಯ ಹಸ್ತೇನ ವೈ ರಜಃ ।
ದೂಷಯತ್ಯಾತ್ಮನೋ ದೇಹಂ ತಥಾನಾರ್ಯೇಷು ಸೌಹೃದಮ್ ॥
ಅನುವಾದ
ಆನೆಯು ಮೊದಲು ಸ್ನಾನ ಮಾಡಿ ಮತ್ತೆ ಸೊಂಡಿನಿಂದ ಮಣ್ಣನ್ನು ಎತ್ತಿ ಶರೀರದ ಮೇಲೆ ಹಾಕಿಕೊಳ್ಳುವಂತೆ ದುರ್ಜನರ ಮೈತ್ರಿಯು ದೂಷಿತವಾಗಿರುತ್ತದೆ.॥15॥
ಮೂಲಮ್ - 16
ಯೋಽನ್ಯಸ್ತ್ವೇವಂವಿಧಂ ಬ್ರೂಯಾದ್ ವಾಕ್ಯಮೇತನ್ನಿಶಾಚರ ।
ಅಸ್ಮಿನ್ ಮುಹೂರ್ತೇ ನ ಭವೇತ್ ತ್ವಾಂ ತು ಧಿಕ್ ಕುಲಪಾಂಸನ ॥
ಅನುವಾದ
ಕುಲಕಲಂಕ ನಿಶಾಚರನೇ! ನಿನಗೆ ಧಿಕ್ಕಾರವಿರಲಿ. ನೀನಲ್ಲದೆ ಬೇರೆ ಯಾರಾದರೂ ಈ ಮಾತನ್ನು ಹೇಳಿದ್ದರೆ ಅವನು ಇದೇ ಮುಹೂರ್ತದಲ್ಲಿ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದ.॥16॥
ಮೂಲಮ್ - 17
ಇತ್ಯುಕ್ತಃ ಪರುಷಂ ವಾಕ್ಯಂ ನ್ಯಾಯವಾದೀ ವಿಭೀಷಣಃ ।
ಉತ್ಪಪಾತ ಗದಾಪಾಣಿಶ್ಚತುರ್ಭಿಃ ಸಹ ರಾಕ್ಷಸೈಃ ॥
ಅನುವಾದ
ವಿಭೀಷಣನು ನ್ಯಾಯಾನುಕೂಲ ಮಾತುಗಳನ್ನು ಹೇಳುತ್ತಿದ್ದರೂ ರಾವಣನು ಅವನಲ್ಲಿ ಇಂತಹ ಕಠೋರ ಮಾತುಗಳನ್ನು ಹೇಳಿದಾಗ ಅವನು ಕೈಯಲ್ಲಿ ಗದೆಯನ್ನೆತ್ತಿಕೊಂಡು ಇತರ ನಾಲ್ಕು ರಾಕ್ಷಸರೊಂದಿಗೆ ಆಗಲೇ ಆಕಾಶಕ್ಕೆ ಹಾರಿ ಹೋದನು.॥17॥
ಮೂಲಮ್ - 18
ಅಬ್ರವೀಚ್ಚ ತದಾ ವಾಕ್ಯಂ ಜಾತಕ್ರೋಧೋ ವಿಭೀಷಣಃ ।
ಅಂತರಿಕ್ಷಗತಃ ಶ್ರೀಮಾನ್ ಭ್ರಾತಾ ವೈ ರಾಕ್ಷಸಾಧಿಪಮ್ ॥
ಅನುವಾದ
ಆಗ ಅಂತರಿಕ್ಷದಲ್ಲಿ ನಿಂತಿರುವ ತೇಜಸ್ವೀ ಸಹೋದರ ವಿಭೀಷಣನು ಕುಪಿತನಾಗಿ ರಾಕ್ಷಸರಾಜ ರಾವಣನಲ್ಲಿ ಹೇಳಿದನು.॥18॥
ಮೂಲಮ್ - 19
ಸ ತ್ವಂ ಭ್ರಾಂತೋಽಸಿ ಮೇ ರಾಜನ್ ಬ್ರೂಹಿ ಮಾಂ ಯದ್ ಯದಿಚ್ಛಸಿ ।
ಜ್ಯೇಷ್ಠೋ ಮಾನ್ಯಃ ಪಿತೃಸಮೋ ನ ಚ ಧರ್ಮಪಥೇ ಸ್ಥಿತಃ ।
ಇದಂ ಹಿ ಪರುಷಂ ವಾಕ್ಯಂ ನ ಕ್ಷಮಾಮ್ಯಗ್ರಜಸ್ಯ ತೇ ॥
ಅನುವಾದ
ರಾಜನೇ! ನಿನ್ನ ಬುದ್ಧಿಗೆ ಭ್ರಮೆಯುಂಟಾಗಿದೆ. ನೀನು ಧರ್ಮಮಾರ್ಗವನ್ನು ಬಿಟ್ಟಿರುವೆ. ನೀನು ಅಣ್ಣನಾದ ಕಾರಣ ತಂದೆಗೆ ಸಮಾನ ಆದರಣೀಯನಾಗಿರುವೆ. ಅದಕ್ಕಾಗಿ ನಿನಗೆ ಏನು ಅನಿಸುತ್ತದೋ ಅದನ್ನು ನನಗೆ ಹೇಳು, ಆದರೆ ಅಗ್ರಜನಾದರೂ ನಿನ್ನ ಈ ಕಠೋರ ವಚನಗಳನ್ನು ಎಂದಿಗೂ ಸಹಿಸಲಾರೆನು.॥19॥
ಮೂಲಮ್ - 20
ಸುನೀತಂ ಹಿತಕಾಮೇನ ವಾಕ್ಯಮುಕ್ತಂ ದಶಾನನ ।
ನ ಗೃಹ್ಣಂತ್ಯಕೃತಾತ್ಮಾನಃ ಕಾಲಸ್ಯ ವಶಮಾಗತಾಃ ॥
ಅನುವಾದ
ದಶಾನನೇ! ಕಾಲಕ್ಕೆ ವಶೀಭೂತನಾದ ಅಜಿತೇಂದ್ರಿಯನು ಹಿತದ ಕಾಮನೆಯಿಂದ ಹೇಳಿದ ಸುಂದರ ನೀತಿಯುಕ್ತ ಮಾತುಗಳನ್ನೂ ಗ್ರಹಿಸುವುದಿಲ್ಲ.॥20॥
ಮೂಲಮ್ - 21
ಸುಲಭಾಃ ಪುರುಷಾ ರಾಜನ್ ಸತತಂ ಪ್ರಿಯವಾದಿನಃ ।
ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ॥
ಅನುವಾದ
ರಾಜನೇ! ಸದಾ ಪ್ರಿಯವಾಗುವ ಮಧುರ ಮಾತುಗಳನ್ನು ಹೇಳುವವರು ಸುಲಭವಾಗಿ ಸಿಗುತ್ತಾರೆ; ಆದರೆ ಕೇಳಲು ಅಪ್ರಿಯವಾದರೂ ಪರಿಣಾಮದಲ್ಲಿ ಹಿತಕರವಾದ ಮಾತುಗಳನ್ನು ಹೇಳುವವರು, ಕೇಳುವವರು ದುರ್ಲಭರಾಗಿದ್ದಾರೆ.॥21॥
ಮೂಲಮ್ - 22
ಬದ್ಧಂ ಕಾಲಸ್ಯ ಪಾಶೇನ ಸರ್ವಭೂತಾಪಹಾರಿಣಃ ।
ನ ನಶ್ಯಂತಮುಪೇಕ್ಷೇ ತ್ವಾಂ ಪ್ರದೀಪ್ತಂ ಶರಣಂ ಯಥಾ ॥
ಅನುವಾದ
ನೀನು ಸಮಸ್ತ ಪ್ರಾಣಿಗಳ ಸಂಹಾರಮಾಡುವ ಕಾಲಪಾಶದಲ್ಲಿ ಬಂಧಿತನಾಗಿರುವೆ. ಬೆಂಕಿ ಹತ್ತಿದ ಮನೆಯಂತೆ ನಾಶವಾಗುತ್ತಿದ್ದಿಯೇ. ಇಂತಹ ಸ್ಥಿತಿಯಲ್ಲಿ ನಾನು ನಿನ್ನನ್ನು ಉಪೇಕ್ಷಿಸುತ್ತಿರಲಿಲ್ಲ. ಆದ್ದರಿಂದ ನಿನಗೆ ಹಿತದ ಮಾತನ್ನು ನೆನಪು ಮಾಡಿಕೊಟ್ಟೆ.॥22॥
ಮೂಲಮ್ - 23
ದೀಪ್ತಪಾವಕಸಂಕಾಶೈಃ ಶೀತೈಃ ಕಾಂಚನಭೂಷಣೈಃ ।
ನ ತ್ವಾಮಿಚ್ಛಾಮ್ಯಹಂ ದ್ರಷ್ಟಂ ರಾಮೇಣ ನಿಹತಂ ಶರೈಃ ॥
ಅನುವಾದ
ಶ್ರೀರಾಮನು ಸುವರ್ಣಭೂಷಿತ ಬಾಣಗಳು ಪ್ರಜ್ವಲಿತ ಅಗ್ನಿಯಂತೆ ತೇಜಸ್ವೀ ಮತ್ತು ತೀಕ್ಷ್ಣಗಳಾಗಿವೆ. ಶ್ರೀರಾಮ ಆ ಬಾಣಗಳಿಂದ ನಿನ್ನ ಮೃತ್ಯುವನ್ನು ನಾನು ನೋಡಲು ಬಯಸುತ್ತಿರಲಿಲ್ಲ. ಅದಕ್ಕಾಗಿ ನಿನಗೆ ಸಮಜಾಯಿಸಲು ಪ್ರಯತ್ನಿಸಿದ್ದೆ.॥23॥
ಮೂಲಮ್ - 24
ಶೂರಾಶ್ಚ ಬಲವಂತಶ್ಚ ಕೃತಾಸ್ತ್ರಾಶ್ಚ ನರಾ ರಣೇ ।
ಕಾಲಾಭಿಪನ್ನಾಃ ಸ್ವೀದಂತಿ ಯಥಾ ವಾಲುಕಸೇತವಃ ॥
ಅನುವಾದ
ಕಾಲಕ್ಕೆ ವಶೀಭೂತರಾದಾಗ ದೊಡ್ಡ ದೊಡ್ಡ ಶೂರ-ವೀರ, ಬಲಿಷ್ಠರು, ಅಸ್ತ್ರವೇತ್ತರೂ ಕೂಡ ಮಳಲಿನ ತಡೆಯಂತೆ ನಾಶವಾಗಿ ಹೋಗುತ್ತಾರೆ.॥24॥
ಮೂಲಮ್ - 25
ತನ್ಮರ್ಷಯತು ಯಚ್ಚೋಕ್ತಂ ಗುರುತ್ವಾದ್ಧಿತಮಿಚ್ಛತಾ ।
ಆತ್ಮಾನಂ ಸರ್ವಥಾ ರಕ್ಷ ಪುರೀಂ ಚೇಮಾಂ ಸ ರಾಕ್ಷಸಾಮ್ ।
ಸ್ವಸ್ತಿತೇಽಸ್ತು ಗಮಿಷ್ಯಾಮಿ ಸುಖೀ ಭವ ಮಯಾ ವಿನಾ ॥
ಅನುವಾದ
ರಾಕ್ಷಸರಾಜನೇ! ನಾನು ನಿನ್ನ ಹಿತವನ್ನು ಬಯಸುತ್ತೇನೆ. ಅದಕ್ಕಾಗಿ ನಾನು ಹೇಳಿದುದು ನಿನಗೆ ಸರಿಕಾಣದಿದ್ದರೆ ಅದಕ್ಕಾಗಿ ನನ್ನನ್ನು ಕ್ಷಮಿಸಿಬಿಡು; ಏಕೆಂದರೆ ನೀನು ನನಗೆ ಅಣ್ಣನಾಗಿರುವೆ. ಈಗ ನೀನು ರಾಕ್ಷಸರ ಸಹಿತ ಲಂಕೆಯನ್ನು ಮತ್ತು ತನ್ನನ್ನು ರಕ್ಷಿಸಿಕೋ. ನಿನಗೆ ಮಂಗಳವಾಗಲಿ. ಈಗ ನಾನು ಇಲ್ಲಿಂದ ಹೊರಟು ಹೋಗುವೆನು. ನೀನು ನಾನಿಲ್ಲದೆ ಸುಖಿಯಾಗು.॥25॥
ಮೂಲಮ್ - 26
ನಿವಾರ್ಯಮಾಣಸ್ಯ ಮಯಾ ಹಿತೈಷಿಣಾ
ನ ರೋಚತೇ ತೇ ವಚನಂ ನಿಶಾಚರ ।
ಪರಾಂತಕಾಲೇ ಹಿ ಗತಾಯುಷೋ ನರಾ
ಹಿತಂ ನ ಗೃಹ್ಣಂತಿ ಸುಹೃದ್ಭಿರೀರಿತಮ್ ॥
ಅನುವಾದ
ನಿಶಾಚರ ರಾಜನೇ! ನಾನು ನಿನ್ನ ಹಿತೈಷಿಯಾಗಿದ್ದೇನೆ. ಅದರಿಂದ ನಾನು ನಿನ್ನನ್ನು ಪದೇ ಪದೇ ಅನುಚಿತ ಮಾರ್ಗದಿಂದ ತಡೆದೆ. ಆದರೆ ನಿನಗೆ ನನ್ನ ಮಾತು ಸರಿ ಕಾಣುವುದಿಲ್ಲ. ವಾಸ್ತವವಾಗಿ ಆಯುಸ್ಸು ಮುಗಿದುಹೋದ ಜನರು ಜೀವನದ ಅಂತ್ಯಕಾಲದಲ್ಲಿ ತನ್ನ ಸುಹೃದರು ಹಿತಕರವಾಗಿ ಹೇಳಿದ ಮಾತನ್ನು ಒಪ್ಪಿಕೊಳ್ಳುವುದಿಲ್ಲ.॥26॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹದಿನಾರನೆಯ ಸರ್ಗ ಪೂರ್ಣವಾಯಿತು.॥16॥