वाचनम्
ಭಾಗಸೂಚನಾ
ಇಂದ್ರಜಿತ್ತು ವಿಭೀಷಣನನ್ನು ಅಪಹಾಸ್ಯ ಮಾಡಿದುದು, ವಿಭೀಷಣನು ಅವನನ್ನು ಗದರಿಸಿ ಸಭೆಯಲ್ಲಿ ತನ್ನ ಉಚಿತವಾದ ಸಲಹೆ ನೀಡಿದುದು
ಮೂಲಮ್ - 1
ಬೃಹಸ್ಪತೇಸ್ತುಲ್ಯಮತೇರ್ವಚಸ್ತ-
ನ್ನಿಶಮ್ಯ ಯತ್ನೇನ ವಿಭೀಷಣಸ್ಯ ।
ತತೋ ಮಹಾತ್ಮಾ ವಚನಂ ಬಭಾಷೇ
ತತ್ರೇಂದ್ರಿಜಿನ್ನೈರ್ಋತಯೂಥಮುಖ್ಯಃ ॥
ಅನುವಾದ
ವಿಭೀಷಣನು ಬೃಹಸ್ಪತಿಯಂತೆ ಬುದ್ಧಿವಂತನಾಗಿದ್ದನು. ಅವನ ಮಾತನ್ನು ಹೇಗೋ ಕಷ್ಟದಿಂದ ಕೇಳಿ ರಾಕ್ಷಸಯೂಥ ಪತಿಗಳಲ್ಲಿ ಮುಖ್ಯಸ್ಥ ಮಹಾಕಾಯ ಇಂದ್ರಜಿತನು ಅಲ್ಲಿ ಹೀಗೆ ಹೇಳಿದನು.॥1॥
ಮೂಲಮ್ - 2
ಕಿಂ ನಾಮ ತೇ ತತಾ ಕನಿಷ್ಠ ವಾಕ್ಯ-
ಮನರ್ಥಕಂ ವೈ ಬಹುಭೀತವಚ್ಚ ।
ಅಸ್ಮಿನ್ ಕುಲೇ ಯೋಽಪಿ ಭವೇನ್ನ ಜಾತಃ
ಸೋಽಪೀದೃಶಂ ನೈವ ವದೇನ್ನಕುರ್ಯಾತ್ ॥
ಅನುವಾದ
ಚಿಕ್ಕಪ್ಪನವರೇ! ನೀವು ಬಹಳ ಹೆದರಿದವರಂತೆ ಇಂತಹ ನಿರರ್ಥಕ ಮಾತನ್ನು ಹೇಳುತ್ತಿದ್ದೀರಲ್ಲ? ಈ ಕುಲದಲ್ಲಿ ಹುಟ್ಟದಿರುವನೂ ಕೂಡ ಇಂತಹ ಮಾತನ್ನು ಹೇಳಲಾರ ಮತ್ತು ಇಂತಹ ಕಾರ್ಯವನ್ನು ಮಾಡಲಾರನು.॥2॥
ಮೂಲಮ್ - 3
ಸತ್ತ್ವೇನ ವೀರ್ಯೇಣ ಪರಾಕ್ರಮೇಣ
ಧೈರ್ಯೇಣ ಶೌರ್ಯೇಣ ಚ ತೇಜಸಾ ಚ ।
ಏಕಃ ಕುಲೇಽಸ್ಮಿನ್ ಪುರುಷೋವಿಮುಕ್ತೋ
ವಿಭೀಷಣಸ್ತಾತ ಕನಿಷ್ಠ ಏಷಃ ॥
ಅನುವಾದ
ಅಪ್ಪಾ! ನಮ್ಮ ಈ ರಾಕ್ಷಸಕುಲದಲ್ಲಿ ಏಕಮಾತ್ರ ಈ ಚಿಕ್ಕಪ್ಪ ವಿಭೀಷಣನೇ ಬಲ, ವೀರ್ಯ, ಪರಾಕ್ರಮ, ಧೈರ್ಯ, ಶೌರ್ಯ ಮತ್ತು ತೇಜದಿಂದ ರಹಿತನಾಗದ್ದಾನೆ.॥3॥
ಮೂಲಮ್ - 4
ಕಿಂ ನಾಮ ತೌ ಮಾನುಷರಾಜಪುತ್ರಾ-
ವಸ್ಮಾಕಮೇಕೇನ ಹಿ ರಾಕ್ಷಸೇನ ।
ಸುಪ್ರಾಕೃತೇನಾಪಿ ನಿಹಂತುಮೇತೌ
ಶಕ್ಯೌ ಕುತೋ ಭೀಷಯಸೇ ಸ್ಮ ಭೀರೋ ॥
ಅನುವಾದ
ಆ ಇಬ್ಬರು ಮಾನವರಾದ ರಾಜಕುಮಾರರು ಏನು ಮಹಾ? ಅವರನ್ನು ನಮ್ಮ ಒಬ್ಬ ಸಾಧಾರಣನಾದ ರಾಕ್ಷಸನೂ ಕೊಲ್ಲಬಲ್ಲನು; ಹಾಗಿರುವಾಗ ನನ್ನ ಹೇಡಿ ಚಿಕ್ಕಪ್ಪಾ! ನಮ್ಮನ್ನು ಏಕೆ ಹೆದರಿಸುತ್ತಿರುವೆ.॥4॥
ಮೂಲಮ್ - 5
ತ್ರಿಲೋಕನಾಥೋ ನನು ದೇವರಾಜಃ
ಶಕ್ರೋ ಮಯಾ ಭೂಮಿತಲೇ ನಿವಿಷ್ಟಃ ।
ಭಯಾರ್ಪಿತಾಶ್ಚಾಪಿ ದಿಶಃ ಪ್ರಪನ್ನಾಃ
ಸರ್ವೇ ತದಾ ದೇವಗಣಾಃ ಸಮಗ್ರಾಃ ॥
ಅನುವಾದ
ನಾನು ಮೂರು ಲೋಕಗಳ ಒಡೆಯ ದೇವೇಂದ್ರನನ್ನು ಸ್ವರ್ಗದಿಂದ ತೊಡೆದು ಭೂತಳದಲ್ಲಿ ಕುಳ್ಳಿರಿಸಿದ್ದೆ. ಆಗ ಎಲ್ಲ ದೇವತೆಗಳು ಭಯಗೊಂಡು ಓಡಿಹೋಗಿ ಎಲ್ಲ ದಿಕ್ಕುಗಳಲ್ಲಿ ಆಶ್ರಯಪಡೆದಿದ್ದರು.॥5॥
ಮೂಲಮ್ - 6
ಐರಾವತೋ ನಿಃಸ್ವನಮುನ್ನದನ್ ಸ
ನಿಪಾತಿತೋ ಭೂಮಿತಲೇ ಮಯಾ ತು ।
ವಿಕೃಷ್ಯ ದಂತೌ ತು ಮಯಾ ಪ್ರಸಹ್ಯ
ವಿತ್ರಾಸಿತಾ ದೇವಗಣಾಃ ಸಮಗ್ರಾಃ ॥
ಅನುವಾದ
ನಾನು ಹಟದಿಂದ ಐರಾವತದ ಎರಡೂ ದಂತಗಳನ್ನು ಕಿತ್ತು ಅದನ್ನು ಸ್ವರ್ಗದಿಂದ ಪೃಥಿವಿಗೆ ಬೀಳಿಸಿಬಿಟ್ಟಿದ್ದೆ. ಆಗ ಅದು ಜೋರಾಗಿ ಘೀಳಿಡುತ್ತಿತ್ತು. ನನ್ನ ಈ ಪರಾಕ್ರಮದಿಂದ ಸಮಸ್ತ ದೇವತೆಗಳನ್ನು ಆತಂಕದಲ್ಲಿ ಕೆಡಹಿದ್ದೆ.॥6॥
ಮೂಲಮ್ - 7
ಸೋಽಹಂ ಸುರಾಣಾಮಪಿ ದರ್ಪಹಂತಾ
ದೈತ್ಯೋತ್ತಮಾನಾಮಪಿ ಶೋಕಕರ್ತಾ ।
ಕಥಂ ನರೇಂದ್ರಾತ್ಮಜಯೋರ್ನ ಶಕ್ತೋ
ಮನುಷ್ಯಯೋಃ ಪ್ರಾಕೃತಯೋಃ ಸುವೀರ್ಯಃ ॥
ಅನುವಾದ
ಯಾರು ದೇವತೆಗಳ ದರ್ಪವನ್ನು ಹತ್ತಿಕ್ಕ ಬಲ್ಲನೋ, ದೊಡ್ಡ ದೊಡ್ಡ ದೈತ್ಯರನ್ನು ಶೋಕಮಗ್ನರಾಗಿಸಬಲ್ಲನೋ, ಯಾರು ಉತ್ತಮ ಬಲ-ಪರಾಕ್ರಮದಿಂದ ಸಂಪನ್ನನೋ, ಆ ನನ್ನಂತಹ ವೀರನು ಮನುಷ್ಯಜಾತಿಯ ಸಾಧಾರಣ ಇಬ್ಬರು ರಾಜಕುಮಾರರನ್ನು ಹೇಗೆ ಇದಿರಿಸಲಾರನು.॥7॥
ಮೂಲಮ್ - 8
ಅಥೇಂದ್ರಕಲ್ಪಸ್ಯ ದುರಾಸದಸ್ಯ
ಮಹೌಜಗಸ್ತದ್ ವಚನಂ ನಿಶಮ್ಯ ।
ತತೋ ಮಹಾರ್ಥಂ ವಚನಂ ಬಭಾಷೇ
ವಿಭೀಷಣಃ ಶಸ್ತ್ರಭೃತಾಂ ವರಿಷ್ಠಃ ॥
ಅನುವಾದ
ಇಂದ್ರತುಲ್ಯ ತೇಜಸ್ವೀ ಮಹಾಪರಾಕ್ರಮಿ ದುರ್ಜಯ ವೀರ ಇಂದ್ರಜಿತುವಿನ ಈ ಮಾತನ್ನು ಕೇಳಿ ಶಸಧಾರಿಗಳಲ್ಲಿ ಶ್ರೇಷ್ಠನಾದ ವಿಭೀಷಣನು ಮಹಾನ್ ಅರ್ಥದಿಂದ ಕೂಡಿದ ಈ ಮಾತನ್ನು ಹೇಳಿದನು.॥8॥
ಮೂಲಮ್ - 9
ನ ತಾತ ಮಂತ್ರೇ ತವ ನಿಶ್ಚಯೋಽಸ್ತಿ
ಬಾಲಸ್ತ್ವಮದ್ಯಾಪ್ಯವಿಪಕ್ವಬುದ್ಧಿಃ ।
ತಸ್ಮಾತ್ ತ್ವಯಾಪ್ಯಾತ್ಮವಿನಾಶನಾಯ
ವಚೋಽರ್ಥಹೀನಂ ಬಹು ವಿಪ್ರಲಪ್ತಮ್ ॥
ಅನುವಾದ
ಅಯ್ಯಾ! ಇನ್ನು ನೀನು ಬಾಲಕನಾಗಿರುವೆ. ನಿನ್ನ ಬುದ್ಧಿ ಅಪಕ್ವವಾಗಿವೆ. ನಿನ್ನ ಮನಸ್ಸಿನಲ್ಲಿ ಕರ್ತವ್ಯ ಮತ್ತು ಅಕರ್ತವ್ಯದ ಯಥಾರ್ಥ ನಿಶ್ಚಯವಾಗಲಿಲ್ಲ; ಅದಕ್ಕಾಗಿಯೇ ನೀನು ತನ್ನ ವಿನಾಶಕ್ಕಾಗಿ ತುಂಬಾ ನಿರರ್ಥಕ ಮಾತನ್ನು ಬೊಗಳುತ್ತಿರುವೆ.॥9॥
ಮೂಲಮ್ - 10
ಪುತ್ರಪ್ರವಾದೇನ ತು ರಾವಣಸ್ಯ
ತ್ವಮಿಂದ್ರಜಿನ್ಮಿತ್ರಮುಖೋಽಸಿ ಶತ್ರುಃ ।
ಯಸ್ಯೇದೃಶಂ ರಾಘವತೋ ವಿನಾಶಂ
ನಿಶಮ್ಯ ಮೋಹಾದನುಮನ್ಯಸೇ ತ್ವಮ್ ॥
ಅನುವಾದ
ಇಂದ್ರಜಿತನೇ! ನೀನು ರಾವಣನ ಪುತ್ರನೆನಿಸಿದರೂ ಮೇಲಿನಿಂದ ಅವನ ಮಿತ್ರನಾಗಿರುವೆ. ಒಳಗಿನಿಂದ ನೀನು ತಂದೆಯ ಶತ್ರುವೆಂದೇ ಅನಿಸುತ್ತದೆ. ನೀನು ಶ್ರೀರಘುನಾಥನಿಂದ ರಾಕ್ಷಸರಾಜನ ವಿನಾಶದ ಮಾತನ್ನು ಕೇಳಿಯೂ ಮೋಹ ದಿಂದ ಅವನ ಮಾತಿನಂತೆ ನಡೆಯುತ್ತಿರುವೆ.॥10॥
ಮೂಲಮ್ - 11
ತ್ವಮೇವ ವಧ್ಯಶ್ಚ ಸುಧರ್ಮತಿಶ್ಚ
ಸ ಚಾಪಿ ವಧ್ಯೋ ಯ ಇಹಾನಯತ್ ತ್ವಾಮ್ ।
ಬಾಲಂ ದೃಢಂ ಸಾಹಸಿಕಂ ಚ ಯೋದ್ಯ
ಪ್ರಾವೇಶಯನ್ಮಂತ್ರಕೃತಾಂ ಸಮೀಪಮ್ ॥
ಅನುವಾದ
ನಿನ್ನ ಬುದ್ಧಿಯು ಬಹಳ ಅಲ್ಪವಾಗಿದೆ. ನೀನು ಸ್ವತಃ ಸಾವಿಗೆ ಯೋಗ್ಯನೇ ಆಗಿರುವೆ. ನಿನ್ನನ್ನು ಇಲ್ಲಿಗೆ ಕರೆಸಿದವನೂ ವಧೆಗೆ ಯೋಗ್ಯನಾಗಿದ್ದಾನೆ. ಯಾರು ಇಂದು ನಿನ್ನಂತಹ ಅತ್ಯಂತ ದುಸ್ಸಾಹಸಿ ಬಾಲಕನನ್ನು ಈ ಸಲಹೆಕಾರರ ಹತ್ತಿರ ಬರಲು ಬಿಟ್ಟಿರುವೆನೋ ಅವನೂ ಪ್ರಾಣದಂಡನೆಯ ಅಧಿಕಾರಿಯಾಗಿದ್ದಾನೆ.॥11॥
ಮೂಲಮ್ - 12
ಮೂಢೋಽಪ್ರಗಲ್ಭೋಽವಿನಯೋಪಪನ್ನ
ಸ್ತೀಕ್ಷಸ್ವಭಾವೋಽಲ್ಪಮತಿರ್ದುರಾತ್ಮಾ।
ಮೂರ್ಖಸ್ತ್ವಮತ್ಯಂತಸುದುರ್ಮತಿಶ್ಚ
ತಮಿಂದ್ರಜಿದ್ಬಾಲತಯಾ ಬ್ರವೀಷಿ ॥
ಅನುವಾದ
ಇಂದ್ರಜಿತನೇ! ನೀನು ಅವಿವೇಕಿಯಾಗಿರುವೆ. ನಿನ್ನ ಬುದ್ಧಿ ಇನ್ನೂ ಪರಿಪಕ್ವವಾಗಿಲ್ಲ. ವಿನಯವಾದರೋ ನಿನ್ನನ್ನು ಸ್ಪರ್ಶಿಸಲೇ ಇಲ್ಲ. ನಿನ್ನ ಸ್ವಭಾವ ಬಹಳ ತೀಕ್ಷ್ಣ ಮತ್ತು ಬುದ್ಧಿ ಬಹಳ ಸ್ವಲ್ಪವಾಗಿದೆ. ನೀನು ಅತ್ಯಂತ ದುರ್ಬುದ್ಧಿ, ದುರಾತ್ಮಾ ಮತ್ತು ಮೂರ್ಖನಾಗಿದ್ದೀಯೆ. ಅದಕ್ಕೆ ಮಕ್ಕಳಂತೆ ತಲೆ-ಬುಡವಿಲ್ಲದ ಮಾತನ್ನು ಹೇಳುತ್ತಿರುವೆ.॥12॥
ಮೂಲಮ್ - 13
ಕೋ ಬ್ರಹ್ಮದಂಡಪ್ರತಿಮಪ್ರಕಾಶಾ-
ನರ್ಚಿಷ್ಮತಃ ಕಾಲ ನಿಕಾಶರೂಪಾನ್ ।
ಸಹೇತ ಬಾಣಾನ್ ಯಮದಂಡಕಲ್ಪಾನ್
ಸಮಕ್ಷಮುಕ್ತಾನ್ ಯುಧಿ ರಾಘವೇಣ ॥
ಅನುವಾದ
ಭಗವಾನ್ ಶ್ರೀರಾಮನು ಯುದ್ಧದ ಸಂದರ್ಭದಲ್ಲಿ ಶತ್ರುಗಳಿಗೆ ಬಿಟ್ಟ ತೇಜಸ್ವೀ ಬಾಣಗಳು ಸಾಕ್ಷಾತ್ ಬ್ರಹ್ಮದಂಡದಂತೆ ಪ್ರಕಾಶಿಸುತ್ತವೆ, ಕಾಲದಂತೆ ಅನಿಸುತ್ತವೆ ಹಾಗೂ ಯಮದಂಡದಂತೆ ಭಯಂಕರವಾಗಿರುತ್ತವೆ. ಅವನ್ನು ಯಾರು ತಾನೇ ಸಹಿಸಬಲ್ಲನು.॥13॥
ಮೂಲಮ್ - 14
ಧನಾನಿ ರತ್ನಾನಿ ಸುಭೂಷಣಾನಿ
ವಾಸಾಂಸಿ ದಿವ್ಯಾನಿ ಮಣೀಂಶ್ಚ ಚಿತ್ರಾನ್ ।
ಸೀತಾಂ ಚ ರಾಮಾಯ ನಿವೇದ್ಯ ದೇವೀಂ
ವಸೇಮ ರಾಜನ್ನಿಹ ವೀತಾಶೋಕಾಃ ॥
ಅನುವಾದ
ಆದ್ದರಿಂದ ರಾಜನೇ! ನಾವು ಧನ, ರತ್ನ ಸುಂದರ ಆಭೂಷಣ, ದಿವ್ಯವಸ್ತ್ರಗಳು, ವಿಚಿತ್ರಮಣಿಗಳ ಸಹಿತ ದೇವೀ ಸೀತೆಯನ್ನು ಶ್ರೀರಾಮನ ಸೇವೆಯಲ್ಲಿ ಸಮರ್ಪಿಸಿ ಶೋಕರಹಿತರಾಗಿ ಈ ನಗರದಲ್ಲಿ ವಾಸಿಸಬಲ್ಲೆವು.॥14॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಹದಿನೈದನೆಯ ಸರ್ಗ ಪೂರ್ಣವಾಯಿತು.॥14॥