वाचनम्
ಭಾಗಸೂಚನಾ
ವಿಭೀಷಣನು ರಾವಣನಲ್ಲಿ ಶ್ರೀರಾಮನ ಅಜೇಯತ್ವವನ್ನು ತಿಳಿಸಿ, ಸೀತೆಯನ್ನು ಹಿಂದಿರುಗಿಸುವಂತೆ ಒತ್ತಾಯಿಸುವುದು
ಮೂಲಮ್ - 1
ತತೋ ನಿಕುಂಭೋ ರಭಸಃ ಸೂರ್ಯಶತ್ರುರ್ಮಹಾಬಲಃ ।
ಸುಪ್ತಘ್ನೋ ಯಜ್ಞಕೋಪಶ್ಚ ಮಹಾಪಾರ್ಶ್ವ ಮಹೋದರೌ ॥
ಮೂಲಮ್ - 2
ಅಗ್ನಿಕೇತುಶ್ಚ ದುರ್ಧರ್ಷೋ ರಶ್ಮಿಮಕೇತುಶ್ಚ ರಾಕ್ಷಸಃ ।
ಇಂದ್ರಜಿಚ್ಚ ಮಹಾತೇಜಾ ಬಲವಾನ್ ರಾವಣಾತ್ಮಜಃ ॥
ಮೂಲಮ್ - 3
ಪ್ರಹಸ್ತೋಽಥ ವಿರೂಪಾಕ್ಷೋ ವಜ್ರದಂಷ್ಟ್ರೋ ಮಹಾಬಲಃ ।
ಧೂಮ್ರಾಕ್ಷಶ್ಚಾತಿಕಾಯಶ್ಚ ದುರ್ಮುಖಶ್ಚೈವ ರಾಕ್ಷಸಃ ॥
ಮೂಲಮ್ - 4
ಪರಿಘಾನ್ ಪಟ್ಟಿಶಾ ನ್ಶೂಲಾನ್ ಪ್ರಾಸಾಂ ಶಕ್ತಿಪರಶ್ವಧಾನ್ ।
ಚಾಪಾನಿ ಚ ಸುಬಾಣಾನಿ ಖಡ್ಗಾಂಶ್ಚ ವಿಪುಲಾಂಬುಭಾನ್ ॥
ಮೂಲಮ್ - 5
ಪ್ರಗೃಹ್ಯ ಪರಮಕ್ರುದ್ಧಾಃ ಸಮುತ್ಪತ್ಯ ಚ ರಾಕ್ಷಸಾಃ ।
ಅಬ್ರುವನ್ ರಾವಣಂ ಸರ್ವೇ ಪ್ರದೀಪ್ತಾ ಇವ ತೇಜಸಾ ॥
ಅನುವಾದ
ಅನಂತರ ನಿಕುಂಭ, ರಭಸ, ಮಹಾಬಲೀ ಸೂರ್ಯ ಶತ್ರು, ಸುಪ್ತಘ್ನ, ಯಜ್ಞಕೋಪ, ಮಹಾಪಾರ್ಶ್ವ, ಮಹೋದರ,ದುರ್ಜಯ, ಅಗ್ನಿಕೇತು, ರಾಕ್ಷಸ ರಶ್ಮಿಕೇತು, ಮಹಾತೇಜಸ್ವೀ ಬಲವಂತ ರಾವಣಕುಮಾರ ಇಂದ್ರಜಿತು, ಪ್ರಹಸ್ತ, ವಿರೂಪಾಕ್ಷ, ಮಹಾಬಲಿ ವಜ್ರದಂಷ್ಟ್ರ, ಧೂಮ್ರಾಕ್ಷ, ಅತಿಕಾಯ ಮತ್ತು ನಿಶಾಚರ ದುರ್ಮುಖ - ಇವರೆಲ್ಲ ರಾಕ್ಷಸರು ಅತ್ಯಂತ ಕುಪಿತರಾಗಿ ಕೈಗಳಲ್ಲಿ ಪರಿಘ, ಪಟ್ಟಿಶ, ಶೂಲ, ಪ್ರಾಸ, ಶಕ್ತಿ, ಕೊಡಲಿ, ಧನುರ್ಬಾಣ ಹಾಗೂ ಹರಿತವಾದ ದೊಡ್ಡ-ದೊಡ್ಡ ಖಡ್ಗಗಳನ್ನೆತ್ತಿಕೊಂಡು ಕುಣಿಯುತ್ತಾ ರಾವಣನ ಎದುರಿಗೆ ಬಂದು, ತಮ್ಮ ತೇಜದಿಂದ ಉರಿಯುತ್ತಾ ಎಲ್ಲರೂ ಅವನಲ್ಲಿ ಹೇಳಿದರ.॥1-5॥
ಮೂಲಮ್ - 6
ಅದ್ಯ ರಾಮಂ ವಧಿಷ್ಯಾಮಃ ಸುಗ್ರೀವಂ ಚ ಸಲಕ್ಷ್ಮಣಮ್ ।
ಕೃಪಣಂ ಚ ಹನೂಮಂತಂ ಲಂಕಾ ಯೇನ ಪ್ರಧರ್ಷಿತಾ ॥
ಅನುವಾದ
ನಾವು ಇಂದೇ ರಾಮ, ಸುಗ್ರೀವ, ಲಕ್ಷ್ಮಣ ಮತ್ತು ಲಂಕೆಯನ್ನು ಸುಟ್ಟ ಹೇಡಿಯಾದ ಹನುಮಂತನನ್ನೂ ಕೊಂದುಹಾಕುವೆವು.॥6॥
ಮೂಲಮ್ - 7
ತಾನ್ ಗೃಹೀತಾಯುಧಾನ್ ಸರ್ವಾನ್ ವಾರಾಯಿತ್ವಾ ವಿಭೀಷಣಃ ।
ಅಬ್ರವೀತ್ ಪ್ರಾಂಜಲಿರ್ವಾಕ್ಯಂ ಪುನಃ ಪ್ರತ್ಯುಪವೇಶ್ಯ ತಾನ್ ॥
ಅನುವಾದ
ಕೈಗಳಲ್ಲಿ ಅಸ್ತ್ರ-ಶಸ್ತ್ರಗಳನ್ನು ಹಿಡಿದು ನಿಂತು ಆ ಎಲ್ಲ ರಾಕ್ಷಸರು ಹೊರಟಿರುವುದನ್ನು ನೋಡಿ ವಿಭೀಷಣನು ಅವರೆಲ್ಲರನ್ನು ತಡೆದು ಕುಳ್ಳಿರಿಸಿ, ಕೈಮುಗಿದುಕೊಂಡು ರಾವಣನಲ್ಲಿ ಹೇಳಿದನು .॥7॥
ಮೂಲಮ್ - 8
ಅಪ್ಯುಪಾಯೈಸ್ತ್ರಿಭಿಸ್ತಾತ ಯೋಽರ್ಥಃ ಪ್ರಾಪ್ತುಂ ನ ಶಕ್ಯತೇ ।
ತಸ್ಯ ವಿಕ್ರಮಕಾಲಾಂಸ್ತಾನ್ ಯುಕ್ತಾನಾಹುರ್ಮನೀಷಿಣಃ ॥
ಅನುವಾದ
ಅಣ್ಣ! ಯಾವ ಮನೋರಥವು ಸಾಮ ದಾನ ಮತ್ತು ಭೇದ - ಈ ಮೂರು ಉಪಾಯಗಳಿಂದ ಈಡೇರಿಸದಿದ್ದರೆ, ಅದರ ಪ್ರಾಪ್ತಿಗಾಗಿ ಪರಾಕ್ರಮ ತೋರುವುದು ಯೋಗ್ಯವೆಂದು ನೀತಿಶಾಸ್ತ್ರಜ್ಞ ವಿದ್ವಾಂಸರು ತಿಳಿಸಿರುವರು.॥8॥
ಮೂಲಮ್ - 9
ಪ್ರಮತ್ತೇಷ್ವಭಿಯುಕ್ತೇಷು ದೈವೇನ ಪ್ರಹತೇಷು ಚ ।
ವಿಕ್ರಮಾಸ್ತಾತ ಸಿದ್ಧ್ಯಂತಿ ಪರೀಕ್ಷ್ಯ ವಿಧಿನಾ ಕೃತಾಃ ॥
ಅನುವಾದ
ಅಯ್ಯಾ! ಯಾವ ಶತ್ರುವು ಪ್ರಮತ್ತನಾಗಿರುವನೋ, ಬೇರೆ ಶತ್ರುಗಳು ಆಕ್ರಮಣ ಮಾಡಿರುವರೋ, ಮಹಾರೋಗಾದಿಗಳಿಂದ ಗ್ರಸ್ತನಾದ್ದರಿಂದ ದೈವದಿಂದ ವಂಚಿತನಾಗಿರುವನೋ, ಅವನ ಮೇಲೆ ಚೆನ್ನಾಗಿ ಪರೀಕ್ಷಿಸಿ ವಿಧಿಪೂರ್ವಕ ಮಾಡಿದ ಪರಾಕ್ರಮವೇ ಸಲವಾಗುತ್ತದೆ.॥9॥
ಮೂಲಮ್ - 10
ಅಪ್ರಮತ್ತಂ ಕಥಂ ತಂ ತು ವಿಜಿಗೀಷುಂ ಬಲೇ ಸ್ಥಿತಮ್ ।
ಜಿತರೋಷಂ ದುರಾಧರ್ಷಂ ತಂ ದರ್ಷಯಿತುಮಿಚ್ಛಥ ॥
ಅನುವಾದ
ಶ್ರೀರಾಮಚಂದ್ರನು ತಿಳಿವಳಿಕೆ ಇಲ್ಲದವನಲ್ಲ. ಅವನು ವಿಜಯದ ಇಚ್ಛೆಯಿಂದ ಬರುತ್ತಿರುವನು ಮತ್ತು ಅವನ ಜೊತೆಗೆ ಸೈನ್ಯವೂ ಇದೆ. ಅವನು ಕ್ರೋಧವನ್ನು ಸರ್ವಥಾ ಗೆದ್ದುಕೊಂಡಿರುವನು. ಆದ್ದರಿಂದ ಅವನು ಸರ್ವಥಾ ದುರ್ಜಯನಾಗಿದ್ದಾನೆ. ಇಂತಹ ಅಜೇಯ ವೀರನನ್ನು ನೀವು ಸೋಲಿಸಲು ಬಯಸುತ್ತಿರುವಿರಿ.॥10॥
ಮೂಲಮ್ - 11
ಸಮುದ್ರಂ ಲಂಘಯಿತ್ವಾ ತು ಘೋರಂ ನದನದೀಪತಿಮ್ ।
ಗತಿಂ ಹನೂಮತೋ ಲೋಕೇ ಕೋ ವಿದ್ಯಾತ್ ತರ್ಕಯೇತ ವಾ ॥
ಮೂಲಮ್ - 12
ಬಲಾನ್ಯಪರಿಮೇಯಾನಿ ವೀರ್ಯಾಣಿ ಚ ನಿಶಾಚರಾಃ ।
ಪರೇಷಾಂ ಸಹಸಾವಜ್ಞಾ ನ ಕರ್ತವ್ಯಾ ಕಥಂಚನ ॥
ಅನುವಾದ
ನಿಶಾಚರರೇ! ನದ-ನದಿಗಳ ಸ್ವಾಮಿ ಭಯಂಕರ ಮಹಾಸಮುದ್ರವನ್ನು ಒಂದೇ ನೆಗೆತಕ್ಕೆ ಹಾರಿ ಇಲ್ಲಿಗೆ ಬಂದಿದ್ದ ಹನುಮಂತನ ಗತಿಯನ್ನು ಯಾರು ತಾನೇ ಬಲ್ಲರು? ಅಥವಾ ಯಾರು ತಾನೇ ಅನುಮಾನ ಮಾಡಬಲ್ಲನು? ಶತ್ರುಗಳ ಬಳಿ ಅಸಂಖ್ಯ ಸೈನ್ಯವಿದೆ, ಅವರಲ್ಲಿ ಅಸೀಮ ಬಲ ಮತ್ತು ಪರಾಕ್ರಮವಿದೆ. ಇದನ್ನು ನೀವು ಚೆನ್ನಾಗಿ ತಿಳಿದುಕೊಳ್ಳಿ. ಬೇರೆಯವರ ಶಕ್ತಿಯನ್ನು ಮರೆತು ಯಾವ ರೀತಿಯಿಂದಲೂ ತತ್ಕ್ಷಣ ಅವರ ಅವಹೇಳನ ಮಾಡಬಾರದು.॥11-1.॥
ಮೂಲಮ್ - 13
ಕಿಂ ಚ ರಾಕ್ಷಸರಾಜಸ್ಯ ರಾಮೇಣಾಪಕೃತಂ ಪುರಾ ।
ಆಜಹಾರ ಜನಸ್ಥಾನಾದ್ ಯಸ್ಯ ಭಾರ್ಯಾಂ ಯಶಸ್ವಿನಃ ॥
ಅನುವಾದ
ಆ ಯಶಸ್ವೀ ಮಹಾತ್ಮನ ಪತ್ನಿಯನ್ನು ಜನಸ್ಥಾನದಿಂದ ಕದ್ದುತರಲು ಶ್ರೀರಾಮ ಚಂದ್ರನು ಮೊದಲು ಯಾವ ಅಪರಾಧವನ್ನು ಮಾಡಿದ್ದನು.॥1.॥
ಮೂಲಮ್ - 14
ಖರೋ ಯದ್ಯತಿವೃತ್ತಸ್ತು ಸಾ ರಾಮೇಣ ಹತೋ ರಣೇ ।
ಅವಶ್ಯಂ ಪ್ರಾಣಿನಾಂ ಪ್ರಾಣಾ ರಕ್ಷಿತವ್ಯಾ ಯಥಾಬಲಮ್ ॥
ಅನುವಾದ
ಅವನು ಖರನನ್ನು ಕೊಂದಿದ್ದನು ಎಂದು ಹೇಳಿದರೂ ಇದು ಸರಿಯಲ್ಲ; ಏಕೆಂದರೆ ಖರನು ಅತ್ಯಾಚಾರಿಯಾಗಿದ್ದನು. ಅವನು ಸ್ವತಃ ರಾಮನನ್ನು ಕೊಲ್ಲಲು ಅವನ ಮೇಲೆ ಆಕ್ರಮಣ ಮಾಡಿದ್ದನು. ಅದಕ್ಕಾಗಿ ಶ್ರೀರಾಮನು ರಣರಂಗದಲ್ಲಿ ಅವನನ್ನು ವಧಿಸಿದನು; ಏಕೆಂದರೆ ಪ್ರತಿಯೊಂದು ಪ್ರಾಣಿಗೂ ಯಥಾಶಕ್ತಿ ತನ್ನ ಪ್ರಾಣಗಳನ್ನು ರಕ್ಷಿಸುವುದು ಅವಶ್ಯವಾಗಿದೆ.॥1.॥
ಮೂಲಮ್ - 15
ಏತನ್ನಿಮಿತ್ತಂ ವೈದೇಹೀ ಭಯಂ ನ ಸುಮಹದ್ ಭವೇತ್ ।
ಆಹೃತಾ ಸಾ ಪರಿತ್ಯಾಜ್ಯಾ ಕಲಹಾರ್ಥೇ ಕೃತೇ ನು ಕಿಮ್ ॥
ಅನುವಾದ
ಇದೇ ಕಾರಣದಿಂದ ಸೀತೆಯನ್ನು ಕದ್ದು ತಂದಿದ್ದರೆ ಆಕೆಯನ್ನು ಬೇಗನೇ ಹಿಂದಿರುಗಿಸಬೇಕು. ಇಲ್ಲದಿದ್ದರೆ ನಮ್ಮ ಮೇಲೆ ಮಹಾಭಯ ಎರಗಲಿದೆ. ಕೇವಲ ಕಲಹವೇ ಕರ್ಮದ ಫಲವಾಗಿದ್ದರೆ ಅದನ್ನು ಮಾಡುವುದರಿಂದ ಏನು ಲಾಭ .॥1.॥
ಮೂಲಮ್ - 16
ನ ತು ಕ್ಷಮಂ ವೀರ್ಯವತಾ ತೇನಧರ್ಮಾನುವರ್ತಿನಾ ।
ವೈರಂ ನಿರರ್ಥಕಂ ಕರ್ತುಂ ದೀಯತಾಮಸ್ಯ ಮೈಥಿಲೀ ॥
ಅನುವಾದ
ಶ್ರೀರಾಮನು ಬಹಳ ಧರ್ಮಾತ್ಮಾ ಮತ್ತು ಪರಾಕ್ರಮಿಯಾಗಿದ್ದಾನೆ. ಅವನೊಂದಿಗೆ ವ್ಯರ್ಥವಾಗಿ ವೈರಮಾಡುವುದು ಉಚಿತವಲ್ಲ. ಮಿಥಿಲೇಶಕುಮಾರಿ ಸೀತೆಯನ್ನು ಅವನ ಬಳಿ ಹಿಂದಿರುಗಿಸಬೇಕು.॥1.॥
ಮೂಲಮ್ - 17
ಯಾವನ್ನ ಸಗಜಾಂ ಸಾಶ್ವಾಂ ಬಹುರತ್ನಸಮಾಕುಲಾಮ್ ।
ಪುರೀಂ ದಾರಯತೋ ಬಾಣೈರ್ದಿಯತಾಮಸ್ಯ ಮೈಥಿಲೀ ॥
ಅನುವಾದ
ಆನೆ, ಕುದುರೆ ಮತ್ತು ಅನೇಕ ರತ್ನಗಳಿಂದ ತುಂಬಿದ ಲಂಕೆಯನ್ನು ಶ್ರೀರಾಮನು ತನ್ನ ಬಾಣಗಳಿಂದ ವಿಧ್ವಸ್ಥ ಮಾಡಿಬಿಡುವ ಮೊದಲೇ ಮೈಥಿಲಿಯನ್ನು ಮರಳಿ ಕಳಿಸಿಕೊಡಬೇಕು.॥1.॥
ಮೂಲಮ್ - 18
ಯಾವತ್ ಸುಘೋರಾ ಮಹತೀ ದುರ್ಧರ್ಷಾ ಹರಿವಾಹಿನೀ ।
ನಾವಸ್ಕಂದತಿ ನೋ ಲಂಕಾಂ ತಾವತ್ ಸೀತಾ ಪ್ರದೀಯತಾಮ್ ॥
ಅನುವಾದ
ಅತ್ಯಂತ ಭಯಂಕರ ವಿಶಾಲ ಮತ್ತು ದುರ್ಜಯ ವಾನರ ಸೈನ್ಯವು ನಮ್ಮ ಲಂಕೆಯನ್ನು ಗೆದ್ದುಕೊಳ್ಳುವ ಮೊದಲೇ ಸೀತೆಯನ್ನು ಹಿಂದಕ್ಕೆ ಕಳಿಸಿಕೊಡಬೇಕು.॥18॥
ಮೂಲಮ್ - 19
ವಿನಶ್ಯೇದ್ಧಿ ಪುರೀ ಲಂಕಾ ಶೂರಾಃ ಸರ್ವೇ ಚ ರಾಕ್ಷಸಾಃ ।
ರಾಮಸ್ಯ ದಯಿತಾ ಪತ್ನೀ ನ ಸ್ವಯಂ ಯದಿ ದೀಯತೇ ॥
ಅನುವಾದ
ಶ್ರೀರಾಮನ ಪ್ರಾಣವಲ್ಲಭೆ ಸೀತೆಯನ್ನು ನಾವಾಗಿಯೇ ಹಿಂದಿರುಗಿಸದಿದ್ದರೆ ಈ ಲಂಕಾಪುರಿಯು ನಾಶವಾಗಿ, ಸಮಸ್ತ ಶೂರವೀರ ರಾಕ್ಷಸರು ಸತ್ತುಹೋದಾರು.॥1.॥
ಮೂಲಮ್ - 20
ಪ್ರಸಾದಯೇ ತ್ವಾಂ ಬಂಧುತ್ವಾತ್ ಕುರುಷ್ವ ವಚನಂ ಮಮ ।
ಹಿತಂ ತಥ್ಯಂ ತ್ವಹಂ ಬ್ರೂಮಿ ದೀಯತಾಮಸ್ಯ ಮೈಥಿಲೀ ॥
ಅನುವಾದ
ನೀವು ನನ್ನ ಅಣ್ಣನಾಗಿರುವಿರಿ. ಆದ್ದರಿಂದ ನಾನು ನಿಮ್ಮನ್ನು ವಿನಯಪೂರ್ವಕ ಸಂತೋಷಗೊಳಿಸಲು ಬಯಸುತ್ತಿರುವೆನು. ನೀವು ನನ್ನ ಮಾತನ್ನು ಒಪ್ಪಿಕೊಳ್ಳಿ. ನಾನು ನಿಮ್ಮ ಹಿತಕ್ಕಾಗಿ ನಿಜವಾದ ಮಾತನ್ನು ಹೇಳುವೆನು. ನೀವು ಶ್ರೀರಾಮನಿಗೆ ಅವನ ಸೀತೆಯನ್ನು ಹಿಂದಿರುಗಿಸಿರಿ.॥2.॥
ಮೂಲಮ್ - 21
ಪುರಾ ಶೂರತ್ಸೂರ್ಯಮರೀಚಿ ಸಂನ್ನಿಭಾನ್
ನವಾಗ್ರರಪುಂಖಾನ್ ಸುದೃಢಾನ್ ನೃಪಾತ್ಮಜಃ ।
ಸೃಜತ್ಯಮೋಘಾನ್ ವಿಶಿಖಾನ್ ವಧಾಯ ತೇ
ಪ್ರದೀಯತಾಂ ದಾಶರಥಾಯ ಮೈಥಿಲೀ ॥
ಅನುವಾದ
ರಾಜಕುಮಾರ ಶ್ರೀರಾಮನು ನಿಮ್ಮ ವಧೆಗಾಗಿ ಶರತ್ಕಾಲದ ಸೂರ್ಯಕಿರಣಗಳಂತೆ ತೇಜಸ್ವೀ, ಉಜ್ವಲ ಅಗ್ರಭಾಗವುಳ್ಳ, ಗರಿಗಳಿಂದ ಸುಶೋಭಿತ, ಸುದೃಢ, ಅಮೋಘ ಬಾಣಗಳ ಮಳೆಗರೆಯುವ ಮೊದಲೇ ನೀವು ಆ ದಶರಥನಂದನನ ಸೇವೆಯಲ್ಲಿ ಮಿಥಿಲೇಶಕುಮಾರಿ ಸೀತೆಯನ್ನು ಒಪ್ಪಿಸಿಬಿಡಿರಿ.॥21॥
ಮೂಲಮ್ - 22
ತ್ಯಜಾಶು ಕೋಪಂ ಸುಖಧರ್ಮನಾಶನಂ
ಭಜಸ್ವ ಧರ್ಮಂ ರತಿಕೀರ್ತಿವರ್ಧನಮ್ ।
ಪ್ರಸೀದ ಜೀವೇಮ ಸಪುತ್ರಬಾಂಧವಾಃ
ಪ್ರದೀಯತಾಂ ದಾಶರಥಾಯ ಮೈಥಿಲೀ ॥
ಅನುವಾದ
ಅಣ್ಣಾ! ನೀವು ಕ್ರೋಧವನ್ನು ಬಿಡಿರಿ; ಏಕೆಂದರೆ ಅದು ಸುಖ ಮತ್ತು ಧರ್ಮದ ನಾಶ ಮಾಡುವಂತಹುದು. ಧರ್ಮವನ್ನು ಸೇವಿಸು, ಏಕೆಂದರೆ ಅದು ಸುಖ ಮತ್ತು ಯಶವನ್ನು ಹೆಚ್ಚಿಸುತ್ತದೆ. ನಮ್ಮ ಮೇಲೆ ಪ್ರಸನ್ನನಾಗು, ಅದರಿಂದ ನಾವು ಮಕ್ಕಳು, ಬಂಧುಬಾಂಧವರೊಂದಿಗೆ ಸುಖವಾಗಿ ಜೀವಿಸಿ ಇರಬಲ್ಲೆವು. ಇದೇ ದೃಷ್ಟಿಯಿಂದ ನೀವು ದಶರಥನಂದನ ಶ್ರೀರಾಮನ ಕೈಗೆ ಮೈಥಿಲಿಯನ್ನು ಒಪ್ಪಿಸಿ ಬಿಡಿ, ಇದೇ ನನ್ನ ಪ್ರಾರ್ಥನೆಯಾಗಿದೆ.॥2.॥
ಮೂಲಮ್ - 23
ವಿಭೀಷಣವಚಃ ಶೃತ್ವಾ ರಾವಣೋ ರಾಕ್ಷಸೇಶ್ವರಃ ।
ವಿಸರ್ಜಯಿತ್ವಾ ತಾನ್ ಸರ್ವಾನ್ ಪ್ರವಿವೇಶ ಸ್ವಕಂ ಗೃಹಮ್ ॥
ಅನುವಾದ
ವಿಭೀಷಣನ ಈ ಮಾತನ್ನು ಕೇಳಿ ರಾಕ್ಷಸರಾಜ ರಾವಣನು ಆ ಎಲ್ಲ ಸಭಾಸದರನ್ನು ಬೀಳ್ಕೊಟ್ಟು ತನ್ನ ಭವನಕ್ಕೆ ನಡೆದನು.॥2.॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಒಂಭತ್ತನೆಯ ಸರ್ಗ ಪೂರ್ಣವಾಯಿತು.॥9॥