००८ राक्षसैः स्वबलप्रशंसनम्

वाचनम्
ಭಾಗಸೂಚನಾ

ಪ್ರಹಸ್ತ, ದುರ್ಮುಖ, ವಜ್ರದಂಷ್ಟ್ರ, ನಿಕುಂಭ ಮತ್ತು ವಜ್ರಹನು ಇವರು ರಾವಣನ ಎದುರಿಗೆ ಶತ್ರು ಸೈನ್ಯವನ್ನು ಕೊಂದು ಹಾಕುವ ಉತ್ಸಾಹ ತೋರುವುದು

ಮೂಲಮ್ - 1

ತತೋ ನೀಲಾಂಬುದಪ್ರಖ್ಯಃ ಪ್ರಹಸ್ತೋ ನಾಮ ರಾಕ್ಷಸಃ ।
ಅಬ್ರವೀತ್ ಪ್ರಾಂಜಲೀರ್ವಾಕ್ಯಂ ಶೂರಃ ಸೇನಾಪತಿಸ್ತದಾ ॥

ಅನುವಾದ

ಅನಂತರ ನೀಲಮೇಘದಂತೆ ಕಪ್ಪುಬಣ್ಣದ ಶೂರ ಸೇನಾಪತಿ ಪ್ರಹಸ್ತ ಎಂಬ ರಾಕ್ಷಸನು ಕೈಮುಗಿದು ಹೇಳಿದನು.॥1॥

ಮೂಲಮ್ - 2

ದೇವದಾನವಗಂಧರ್ವಾಃ ಪಿಶಾಚಪತಿಗೋರಗಾಃ ।
ಸರ್ವೇ ಧರ್ಷಯಿತುಂ ಶಕ್ಯಾಃ ಕಿಂ ಪುನರ್ಮಾನವೌ ರಣೇ ॥

ಅನುವಾದ

ಮಹಾರಾಜಾ! ನಾವು ದೇವತೆಗಳು, ದಾನವರು, ಗಂಧರ್ವ, ಪಿಶಾಚ, ಪಕ್ಷಿ ಮತ್ತು ಸರ್ಪ ಎಲ್ಲರನ್ನೂ ಪರಾಜಿತರಾಗಿಸ ಬಲ್ಲೆವು; ಹಾಗಿರುವ ಆ ಇಬ್ಬರೂ ಮನುಷ್ಯರನ್ನು ರಣರಂಗದಲ್ಲಿ ಸೋಲಿಸುವುದು ಯಾವ ದೊಡ್ಡ ಮಾತು ?.॥2॥

ಮೂಲಮ್ - 3

ಸರ್ವೇ ಪ್ರಮತ್ತಾ ವಿಶ್ವಸ್ತಾ ವಂಚಿತಾಃ ಸ್ಮ ಹನೂಮತಾ ।
ನಹಿ ಮೇ ಜೀವತೋ ಗಚ್ಛೇ ಜ್ಜೀವನ್ ಸ ವನಗೋಚರಃ ॥

ಅನುವಾದ

ಮೊದಲು ನಮಗೆ ಎಚ್ಚರವಿರಲಿಲ್ಲ. ನಮ್ಮ ಮನಸ್ಸಿನಲ್ಲಿ ಶತ್ರುಗಳ ಕಡೆಯಿಂದ ಯಾವುದೇ ಆತಂಕ ಇರಲಿಲ್ಲ. ಅದಕ್ಕಾಗಿ ನಾವು ನಿಶ್ಚಿಂತರಾಗಿ ಕುಳಿತಿದ್ದೆವು. ಹನುಮಂತನು ನಮಗೆ ಮೋಸ ಮಾಡಿ ಹೋದ ಕಾರಣ ಇದೇ ಆಗಿದೆ. ಇಲ್ಲದಿದ್ದರೆ ನಾನು ಜೀವಂತನಾಗಿರುವಾಗ ಆ ವಾನರ ಇಲ್ಲಿಂದ ಬದುಕಿ ಹೋಗುತ್ತಿರಲಿಲ್ಲ.॥3॥

ಮೂಲಮ್ - 4

ಸರ್ವಾಂ ಸಾಗರಪರ್ಯಂತಾಂ ಸಶೈಲವನಕಾನನಾಮ್ ।
ಕರೋಮ್ಯವಾನರಾಂ ಭೂಮಿಮಾಜ್ಞಾಪಯತು ಮಾಂ ಭವಾನ್ ॥

ಅನುವಾದ

ನಿಮ್ಮ ಆಜ್ಞೆಯಾದರೆ ಪರ್ವತ, ವನ, ಕಾನನ ಸಹಿತ ಸಮುದ್ರಾಂಕಿತ ಇಡೀ ಭೂಮಿಯನ್ನು ನಾನು ವಾನರರಿಂದ ಬರಿದಾಗಿಸುವೆನು.॥4॥

ಮೂಲಮ್ - 5

ರಕ್ಷಾಂ ಚೈವ ವಿಧಾಸ್ಯಾಮಿ ವಾನರಾದ್ ರಜನೀಚರ ।
ನಾಗಮಿಷ್ಯತಿ ತೇ ದುಃಖಂ ಕಿಂಚಿದಾತ್ಮಾಪರಾಧಜಮ್ ॥

ಅನುವಾದ

ರಾಕ್ಷಸರಾಜಾ! ನಾನು ಎಲ್ಲ ವಾನರರಿಂದ ನಿಮ್ಮನ್ನು ರಕ್ಷಿಸುವೆನು, ಆದ್ದರಿಂದ ನೀವು ಮಾಡಿದ ಸೀತಾಪಹರಣರೂಪೀ ಅಪರಾಧದಿಂದ ಯಾವುದೇ ದುಃಖವು ನಿಮ್ಮ ಮೇಲೆ ಬರಬಾರದು.॥5॥

ಮೂಲಮ್ - 6

ಅಬ್ರವೀತ್ ತು ಸುಸಂಕ್ರುದ್ಧೋ ದುರ್ಮುಖೋನಾಮ ರಾಕ್ಷಸಃ ।
ಇದಂ ನ ಕ್ಷಮಣೀಯಂ ಹಿ ಸರ್ವೇಷಾಂ ನಃ ಪ್ರಧರ್ಷಣಮ್ ॥

ಅನುವಾದ

ಬಳಿಕ ದುರ್ಮುಖನೆಂಬ ರಾಕ್ಷಸನು ಅತ್ಯಂತ ಕುಪಿತನಾಗಿ ಹೇಳಿದನು - ಈ ಕಪಿಯು ಮಾಡಿದ ಅಪರಾಧವು ಕ್ಷಮಿಸುವುದು ಯೋಗ್ಯವಲ್ಲ; ಏಕೆಂದರೆ ಇದರಿಂದ ನಮ್ಮೆಲ್ಲರ ಅಪಮಾನವಾಗಿದೆ.॥6॥

ಮೂಲಮ್ - 7

ಅಯಂ ಪರಿಭವೋ ಭೂಯಃ ಪುರಸ್ಯಾಂತಃ ಪುರಸ್ಯ ಚ ।
ಶ್ರೀಮತೋ ರಾಕ್ಷಸೇಂದ್ರಸ್ಯ ವಾನರೇಣ ಪ್ರಧರ್ಷಣಮ್ ॥

ಅನುವಾದ

ವಾನರನಿಂದ ನಮ್ಮ ಮೇಲೆ ಆದ ಆಕ್ರಮಣವು ಸಮಸ್ತ ಲಂಕಾಪುರಿಯ, ಮಹಾರಾಜರ ಅಂತಃಪುರದ ಮತ್ತು ಶ್ರೀಮಾನ್ ರಾಕ್ಷಸರಾಜ ರಾವಣನ ಕೂಡ ಭಾರೀ ಪರಾಭವವಾಗಿದೆ.॥7॥

ಮೂಲಮ್ - 8

ಅಸ್ಮಿನ್ ಮುಹೂರ್ತೇ ಗತ್ವೈಕೋ ನಿವರ್ತಿಷ್ಯಾಮಿ ವಾನರಾನ್ ।
ಪ್ರವಿಷ್ಟಾನ್ ಸಾಗರಂ ಭೀಮಮಂಬರಂ ವಾ ರಸಾತಲಮ್ ॥

ಅನುವಾದ

ನಾನು ಈಗಲೇ ಇದೇ ಮುಹೂರ್ತದಲ್ಲಿ ಒಬ್ಬಂಟಿಗನಾಗಿ ಹೋಗಿ ವಾನರರು ಭಯಂಕರ ಸಮುದ್ರದಲ್ಲಿ, ಆಕಾಶದಲ್ಲಿ ಅಥವಾ ರಸಾತಳದಲ್ಲಿ ಹೊಕ್ಕಿ ಕುಳಿತರೂ ಎಲ್ಲ ವಾನರರನ್ನು ಹೊಡೆದು ಓಡಿಸುವೆನು.॥8॥

ಮೂಲಮ್ - 9

ತತೋಽಬ್ರವೀತ್ ಸುಸಂಕೃದ್ಧೋ ವಜ್ರದಂಷ್ಟ್ರೋ ಮಹಾಬಲಃ ।
ಪ್ರಗೃಹ್ಯ ಪರಿಘಂ ಘೋರಂ ಮಾಂಸ ಶೋಣಿತರೂಷಿತಮ್ ॥

ಅನುವಾದ

ಇಷ್ಟರಲ್ಲಿ ಮಹಾಬಲಿ ವಜ್ರದಂಷ್ಟ್ರನು ಅತ್ಯಂತ ಕ್ರೋಧಿತನಾಗಿ ರಕ್ತ-ಮಾಂಸಗಳು ಮೆತ್ತಿಕೊಂಡ ಭಯಾನಕ ಪರಿಘವನ್ನು ಕೈಯಲ್ಲೆತ್ತಿಕೊಂಡು ಹೇಳಿದನು .॥.॥

ಮೂಲಮ್ - 10

ಕಿಂ ನೋ ಹನೂಮತಾ ಕಾರ್ಯಂ ಕೃಪಣೇನ ತಪಸ್ವಿನಾ ।
ರಾಮೇ ತಿಷ್ಠತಿ ದುರ್ಧರ್ಷೇ ಸುಗ್ರೀವೇಽಪಿ ಸಲಕ್ಷ್ಮಣೇ ॥

ಅನುವಾದ

ದುರ್ಜಯ ವೀರ ರಾಮ, ಸುಗ್ರೀವ ಮತ್ತು ಲಕ್ಷ್ಮಣ ಇವರು ಇರುವಾಗ ನಮಗೆ ಆ ಬಡಪಾಯಿ ತಪಸ್ವೀ ಹನುಮಂತನಲ್ಲಿ ಏನು ಕೆಲಸ.॥10॥

ಮೂಲಮ್ - 11

ಅದ್ಯ ರಾಮಂ ಸಸುಗ್ರೀವಂ ಪರಿಘೇಣ ಸಲಕ್ಷ್ಮಣಮ್ ।
ಆಗಮಿಷ್ಯಾಮಿ ಹತ್ಯೈಕೋ ವಿಕ್ಷೋಭ್ಯ ಹರಿವಾಹಿನೀಮ್ ॥

ಅನುವಾದ

ಇಂದು ನಾನು ಒಬ್ಬನೇ ವಾನರ ಸೈನ್ಯದಲ್ಲಿ ವಿಕ್ಷೋಭ ಉಂಟುಮಾಡಿ, ಈ ಪರಿಘದಿಂದ ಸುಗ್ರೀವ ಹಾಗೂ ಲಕ್ಷ್ಮಣ ಸಹಿತ ರಾಮನನ್ನೂ ಮುಗಿಸಿ ಮರಳಿ ಬರುವೆನು.॥11॥

ಮೂಲಮ್ - 12

ಇದಂ ಮಮಾಪರಂ ವಾಕ್ಯಂ ಶೃಣು ರಾಜನ್ ಯದಿಚ್ಛಸಿ ।
ಉಪಾಯಕುಶಲೋ ಹ್ಯೇವ ಜಯೇಚ್ಛತ್ರೂನತಂದ್ರಿತಃ ॥

ಅನುವಾದ

ರಾಜನೇ! ನಿಮಗೆ ಇಚ್ಛೆ ಇದ್ದರೆ ನನ್ನ ಇನ್ನೊಂದು ಮಾತನ್ನು ಕೇಳಿರಿ. ಉಪಾಯ ಕುಶಲ ಪುರುಷನು ಆಲಸ್ಯ ಬಿಟ್ಟು ಪ್ರಯತ್ನಿಸಿದರೆ ಶತ್ರುಗಳ ಮೇಲೆ ವಿಜಯ ಸಾಧಿಸಬಲ್ಲನು.॥12॥

ಮೂಲಮ್ - 13

ಕಾಮರೂಪಧರಾಃ ಶೂರಾಃ ಸುಭೀಮಾ ಭೀಮದರ್ಶನಾಃ ।
ರಾಕ್ಷಸಾ ವಾ ಸಹಸ್ರಾಣಿ ರಾಕ್ಷಸಾಧಿಪ ನಿಶ್ಚಿತಾಃ ॥

ಮೂಲಮ್ - 14

ಕಾಕುತ್ಸ್ಥ ಮುಪಸಂಗಮ್ಯ ಬಿಭ್ರತೋ ಮಾನುಷಂ ವಪುಃ ।
ಸರ್ವೇ ಹ್ಯಸಂಭ್ರಮಾ ಭೂತ್ವಾ ಬ್ರುವಂತು ರಘುಸತ್ತಮಮ್ ॥

ಮೂಲಮ್ - 15

ಪ್ರೇಷಿತಾ ಭರತೇನೈವ ಭ್ರಾತ್ರಾ ತವ ಯವೀಯಸಾ ।
ಸ ಹಿ ಸೇನಾಂ ಸಮುತ್ಥಾಪ್ಯ ಕ್ಷಿಪ್ರಮೇವೋಪಯಾಸ್ಯತಿ ॥

ಅನುವಾದ

ಆದ್ದರಿಂದ ರಾಕ್ಷಸರಾಜನೇ! ನನ್ನ ಇನ್ನೊಂದು ಅಭಿಪ್ರಾಯವು - ಇಚ್ಛಾನುಸಾರ ರೂಪ ಧರಿಸಬಲ್ಲ, ಅತ್ಯಂತ ಭಯಾನಕ, ಭಯಂಕರ ದೃಷ್ಟಿಯುಳ್ಳ ಸಾವಿರಾರು ಶೂರ-ವೀರ ರಾಕ್ಷಸರು ಒಂದು ನಿಶ್ಚಿತ ವಿಚಾರ ಮಾಡಿ ಮನುಷ್ಯರೂಪ ಧರಿಸಿ ಶ್ರೀರಾಮನ ಬಳಿಗೆ ಹೋಗುವುದು. ಎಲ್ಲರೂ ಯಾವುದೋ ಗಾಬರಿಯಿಂದ ಆ ರಘುವಂಶ ಶಿರೋಮಣಿಯಲ್ಲಿ ನಾವು ನಿಮ್ಮ ಸೈನಿಕರಾಗಿದ್ದೇವೆ, ನಿಮ್ಮ ತಮ್ಮ ಭರತನು ನಮ್ಮನ್ನು ಕಳಿಸಿರುವನು ಎಂದು ಹೇಳುವುದು. ಇಷ್ಟು ಕೇಳುತ್ತಲೇ ಅವರು ವಾನರ ಸೈನ್ಯದೊಂದಿಗೆ ಕೂಡಲೇ ಲಂಕೆಯ ಮೇಲೆ ಆಕ್ರಮಣ ಮಾಡಲು ಅಲ್ಲಿಂದ ಹೊರಡುವರು.॥13-1.॥

ಮೂಲಮ್ - 16

ತತೋ ವಯಮಿತಸ್ತೂರ್ಣಂ ಶೂಲಶಕ್ತಿಗದಾಧರಾಃ ।
ಚಾಪಬಾಣಾಸಿಹಸ್ತಾಶ್ಚ ತ್ವರಿತಾಸ್ತತ್ರ ಯಾಮಹೇ ॥

ಅನುವಾದ

ಅನಂತರ ನಾವು ಇಲ್ಲಿಂದ ಶೂಲ, ಶಕ್ತಿ, ಗದೆ, ಧನುಷ್ಯ, ಬಾಣ, ಖಡ್ಗ ಧರಿಸಿಕೊಂಡು ಶೀಘ್ರವಾಗಿ ದಾರಿಯಲ್ಲೇ ಅವನ ಬಳಿಗೆ ಹೋಗುವೆವು.॥16॥

ಮೂಲಮ್ - 17

ಆಕಾಶೇ ಗಣಶಃ ಸ್ಥಿತ್ವಾ ಹತ್ವಾ ತಾಂ ಹರಿವಾಹಿನೀಮ್ ।
ಅಶ್ಮಶಸ್ತ್ರಮಹಾವೃಷ್ಟ್ಯಾ ಪ್ರಾಪಯಾಮ ಯಮಕ್ಷಯಮ್ ॥

ಅನುವಾದ

ಮತ್ತೆ ಅನೇಕ ತುಕಡಿಗಳಾಸಿ ಆಕಾಶದಲ್ಲೇ ನಿಂತು ಕಲ್ಲುಗಳ ಮತ್ತು ಶಸ್ತ್ರಾಸ್ತ್ರಗಳ ಭಾರೀ ಮಳೆಗರೆದು ಆ ವಾನರ ಸೈನ್ಯವನ್ನು ಯಮಲೋಕಕ್ಕೆ ಅಟ್ಟುವೆವು.॥17॥

ಮೂಲಮ್ - 18

ಏವಂ ಚೇದುಪಸರ್ಪೇತಾಮನಯಂ ರಾಮಲಕ್ಷ್ಮಣೌ ।
ಅವಶ್ಯಮಪನೀತೇನ ಜಹತಾಮೇವ ಜೀವಿತಮ್ ॥

ಅನುವಾದ

ಈ ಪ್ರಕಾರ ನಮ್ಮ ಮಾತನ್ನು ಕೇಳಿ ಆ ಇಬ್ಬರೂ ಸಹೋದರ ಶ್ರೀರಾಮ-ಲಕ್ಷ್ಮಣರು ಸೈನ್ಯವನ್ನು ಹೊರಡಲು ಆಜ್ಞೆಕೊಟ್ಟು, ಅಲ್ಲಿಂದ ಹೊರಟರೆ, ಅವರು ನಮ್ಮ ಅನೀತಿಗೆ ಗುರಿಯಾಗುವರು. ನಮ್ಮ ಕಪಟ ಏಟುಗಳಿಂದ ಪೀಡಿತರಾಗಿ ತಮ್ಮ ಪ್ರಾಣಗಳನ್ನು ಬಿಡಬೇಕಾದೀತು.॥1.॥

ಮೂಲಮ್ - 19

ಕೌಂಭಕರ್ಣಿಸ್ತತೋ ವೀರೋ ನಿಕುಂಭೋ ನಾಮ ವೀರ್ಯವಾನ್ ।
ಅಬ್ರವೀತ್ ಪರಮಕ್ರುದ್ಧೋ ರಾವಣಂ ಲೋಕ ರಾವಣಮ್ ॥

ಅನುವಾದ

ಅನಂತರ ಪರಾಕ್ರಮಿ ವೀರ ಕುಂಭಕರ್ಣಕುಮಾರ ನಿಕುಂಭನು ಅತ್ಯಂತ ಕುಪಿತನಾಗಿ ಸಮಸ್ತ ಲೋಕಗಳನ್ನು ಅಳಿಸುವ ರಾವಣನಲ್ಲಿ ಹೇಳಿದನು .॥19॥

ಮೂಲಮ್ - 20½

ಸರ್ವೇ ಭವಂತಸ್ತಿಷ್ಠಂತು ಮಹಾರಾಜೇನ ಸಂಗತಾಃ ।
ಅಹಮೇಕೋ ಹನಿಷ್ಯಾಮಿ ರಾಘವಂ ಸಹಲಕ್ಷ್ಮಣಮ್ ॥
ಸುಗ್ರೀವಂ ಸಹನೂಮಂತಂ ಸರ್ವಾಂಶ್ಚೈವಾತ್ರ ವಾನರಾನ್ ।

ಅನುವಾದ

ನೀವೆಲ್ಲರೂ ಇಲ್ಲಿ ಮಹಾರಾಜರೊಂದಿಗೆ ಸುಮ್ಮನೇ ಕುಳಿತಿರಿ. ನಾನೊಬ್ಬನೇ ರಾಮ, ಲಕ್ಷ್ಮಣ, ಸುಗ್ರೀವ, ಹನುಮಂತ ಹಾಗೂ ಇತರ ಎಲ್ಲ ವಾನರರನ್ನೂ ಮೃತ್ಯು ಮುಖವಾಗಿಸುವೆನು.॥20॥

ಮೂಲಮ್ - 21½

ತತೋ ವಜ್ರಹನುರ್ನಾಮ ರಾಕ್ಷಸಃ ಪರರ್ವತೋಪಮಃ ॥
ಕ್ರುದ್ಧಃ ಪರಿಲಿಹನ್ ಸೃಕ್ಕಾಂ ಜಿಹ್ವಯಾ ವಾಕ್ಯಮಬ್ರವೀತ್ ।

ಅನುವಾದ

ಆ ಪರ್ವತದಂತಹ ವಿಶಾಲಕಾಯ ವಜ್ರಹನು ಎಂಬ ರಾಕ್ಷಸನು ಸಿಟ್ಟುಗೊಂಡು ನಾಲಿಗೆಯಿಂದ ತುಟಿಗಳನ್ನು ಸವರುತ್ತಾ ಹೇಳಿದನು .॥21॥

ಮೂಲಮ್ - 22½

ಸ್ವೈರಂ ಕುರ್ವಂತು ಕಾರ್ಯಾಣಿ ಭವಂತೋ ವಿಗತಜ್ವರಾಃ ॥
ಏಕೋಽಹಂ ಭಕ್ಷಯಿಷ್ಯಾಮಿ ತಾಂ ಸರ್ವಾಂ ಹರಿವಾಹಿನೀಮ್ ।

ಅನುವಾದ

ನೀವೆಲ್ಲರೂ ನಿಶ್ಚಿಂತರಾಗಿ ಸ್ವೇಚ್ಛೆಯಿಂದ ನಿಮ್ಮ-ನಿಮ್ಮ ಕೆಲಸ ಮಾಡುತ್ತಾ ಇರಿ. ನಾನೊಬ್ಬನೇ ಎಲ್ಲ ವಾನರ ಸೈನ್ಯವನ್ನು ತಿಂದುಬಿಡುವೆನು.॥22॥

ಮೂಲಮ್ - 23

ಸ್ವಸ್ಥಾಃ ಕ್ರೀಡಂತು ನಿಶ್ಚಿಂತಾಃ ಪಿಬಂತು ಮಧುವಾರುಣೀಮ್ ॥

ಮೂಲಮ್ - 24

ಅಹಮೇಕೋ ವಧಿಷ್ಯಾಮಿ ಸುಗ್ರೀವಂ ಸಹ ಲಕ್ಷ್ಮಣಮ್ ।
ಸಾಂಗದಂ ಚ ಹನೂಮಂತಂ ಸರ್ವಾಂಶ್ಚೈವಾತ್ರ ವಾನರಾನ್ ॥

ಅನುವಾದ

ನೀವು ಸ್ವಸ್ಥರಾಗಿದ್ದು ಕ್ರೀಡಿಸುತ್ತಾ ಇರಿ, ನಿಶ್ಚಿಂತ ರಾಗಿ ಮಧ್ಯವನ್ನು ಕುಡಿಯಿರಿ. ನಾನೊಬ್ಬನೇ ಸುಗ್ರೀವ, ಲಕ್ಷ್ಮಣ, ಅಂಗದ, ಹನುಮಂತ ಹಾಗೂ ಇತರ ಎಲ್ಲ ವಾನರರನ್ನು ವಧಿಸಿ ಬಿಡುವೆನು.॥23-24॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎಂಟನೆಯ ಸರ್ಗ ಪೂರ್ಣವಾಯಿತು.॥8॥