०६१ सम्पातिना स्वकथानिरूपणम्

वाचनम्
ಭಾಗಸೂಚನಾ

ಸಂಪಾತಿಯು ನಿಶಾಕರ ಮುನಿಗೆ ತನ್ನ ರೆಕ್ಕೆಗಳು ಸುಟ್ಟುಹೋದ ಕಾರಣ ತಿಳಿಸಿದುದು

ಮೂಲಮ್ - 1

ತತಸ್ತದ್ದಾರುಣಂ ಕರ್ಮ ದುಷ್ಕರಂ ಸಾಹಸಾಕೃತಮ್ ।
ಆಚಚಕ್ಷೇ ಮುನೇಃ ಸರ್ವಂ ಸೂರ್ಯಾನುಗಮನಂ ತಥಾ ॥

ಅನುವಾದ

ಋಷಿಗಳು ಹೀಗೆ ಕೇಳಿದಾಗ ನಾನು ದುಷ್ಕರವಾದ, ದಾರುಣವಾದ, ದುಡುಕಿ ಮಾಡಿದ ಎಲ್ಲ ಕಾರ್ಯವನ್ನು ಮುನಿಗಳಿಗೆ ತಿಳಿಸಿದೆ.॥1॥

ಮೂಲಮ್ - 2

ಭಗವನ್ವ್ರಣಯುಕ್ತತ್ವಾಲ್ಲಜ್ಜಯಾ ಚಾಕುಲೇಂದ್ರಿಯಃ ।
ಪರಿಶ್ರಾಂತೋ ನ ಶಕ್ನೋಮಿ ವಚನಂ ಪರಿಭಾಷಿತುಮ್ ॥

ಅನುವಾದ

ನಾನು ಹೇಳಿದೆ - ಪೂಜ್ಯರೇ! ನನ್ನ ಶರೀರದಲ್ಲಿ ಗಾಯಗಳಾಗಿದ್ದು, ಇಂದ್ರಿಯಗಳು ನಾಚಿಕೆ ಯಿಂದ ವ್ಯಾಕುಲವಾಗಿವೆ. ಹೆಚ್ಚು ಕಷ್ಟ ಪಡುತ್ತಿರುವುದರಿಂದ ಚೆನ್ನಾಗಿ ಮಾತನಾಡಲೂ ನನ್ನಿಂದಾಗುವುದಿಲ್ಲ.॥2॥

ಮೂಲಮ್ - 3

ಅಹಂ ಚೈವ ಜಟಾಯುಶ್ಚ ಸಂಘರ್ಷಾದ್ ಗರ್ವಮೋಹಿತೌ ।
ಆಕಾಶಂ ಪತಿತೌ ದೂರಾಜ್ಜಿಜ್ಞಾಸಂತೌ ಪರಾಕ್ರಮಮ್ ॥

ಅನುವಾದ

ನಾನು ಮತ್ತು ಜಟಾಯು ಇಬ್ಬರೂ ಗರ್ವದಿಂದ ಮೋಹಿತರಾಗಿದ್ದೆವು, ಆದ್ದರಿಂದ ತಮ್ಮ ಪರಾಕ್ರಮವನ್ನು ಪರೀಕ್ಷಿಸಿಕೊಳ್ಳಲು ನಾವಿಬ್ಬರೂ ಬಹಳ ದೂರ ಹೋಗಲು ಹಾರಿದೆವು.॥3॥

ಮೂಲಮ್ - 4

ಕೈಲಾಸಶಿಖರೇ ಬದ್ಧ್ವಾಮುನೀನಾಮಗ್ರತಃ ಪಣಮ್ ।
ರವಿಃ ಸ್ಯಾದನುಯಾತವ್ಯೋ ಯಾವದಸ್ತಂ ಮಹಾಗಿರಿಮ್ ॥

ಅನುವಾದ

ಕೈಲಾಸ ಪರ್ವತದ ಶಿಖರದಲ್ಲಿದ್ದ ಮುನಿಗಳ ಎದುರಿಗೆ ನಾವಿಬ್ಬರೂ ಸೂರ್ಯನು ಅಸ್ತಾಚಲಕ್ಕೆ ಹೋಗುವುದರೊಳಗೆ ನಾವು ಅವನ ಬಳಿಗೆ ಹೋಗುತ್ತೇವೆ ಎಂದು ಪಣತೊಟ್ಟೆವು.॥4॥

ಮೂಲಮ್ - 5

ಅಪ್ಯಾವಾಂ ಯುಗಪತ್ಪ್ರಾಪ್ತಾವಪಶ್ಯಾವ ಮಹೀತಲೇ ।
ರಥಚಕ್ರಪ್ರಮಾಣಾನಿ ನಗರಾಣಿ ಪೃಥಕ್ ಪ್ರಥಕ್ ॥

ಅನುವಾದ

ಹೀಗೆ ನಿಶ್ಚಯಿಸಿ ನಾವಿಬ್ಬರು ಒಟ್ಟಿಗೆ ಆಕಾಶಕ್ಕೆ ನೆಗೆದೆವು. ಅಲ್ಲಿಂದ ಪೃಥಿವಿಯ ಬೇರೆ-ಬೇರೆ ನಗರಗಳು ರಥಚಕ್ರಗಳಷ್ಟು ಚಿಕ್ಕದಾಗಿ ಕಾಣುತ್ತಿದ್ದವು.॥5॥

ಮೂಲಮ್ - 6

ಕ್ವಚಿದ್ವಾದಿತ್ರಘೋಷಶ್ಚ ಕ್ವಚಿದ್ ಭೂಷಣನಿಃ ಸ್ವನಃ ।
ಗಾಯಂತೀಃ ಸ್ಮಾಂಗನಾ ಬಹ್ವೀಃ ಪಶ್ಯಾವೋ ರಕ್ತವಾಸಸಃ ॥

ಅನುವಾದ

ಮೇಲಿನ ಲೋಕಗಳಲ್ಲಿ ಕೆಲವೆಡೆ ಮಧುರವಾದ ವಾದ್ಯಘೋಷ ನಡೆಯುತ್ತಿತ್ತು. ಕೆಲವೆಡೆ ಒಡವೆಗಳ ಝಣತ್ಕಾರಗಳು ಕೇಳಿಬಂದರೆ, ಕೆಲವೆಡೆ ಕೆಂಪು ಸೀರೆಗಳನ್ನುಟ್ಟಿದ್ದ ಸುಂದರಿಯರು ಹಾಡುತ್ತಿರುವುದನ್ನು ನಾವು ನೋಡಿದೆವು.॥6॥

ಮೂಲಮ್ - 7

ತೂರ್ಣಮುತ್ಪತ್ಯ ಚಾಕಾಶಮಾದಿತ್ಯಪಥಮಾಶ್ರಿತೌ ।
ಆವಾಮಾಲೋಕಯಾವಸ್ತದ್ ವನಂ ಶಾದ್ವಲ ಸಂಸ್ಥಿತಮ್ ॥

ಅನುವಾದ

ಅದಕ್ಕಿಂತಲೂ ಎತ್ತರಕ್ಕೆ ಹಾರಿ ನಾವು ಕೂಡಲೇ ಸೂರ್ಯ ಪಥವನ್ನು ಸೇರಿದೆವು. ಅಲ್ಲಿಂದ ಕೆಳಗೆ ನೋಡಿದಾಗ ಇಲ್ಲಿಯ ಕಾಡುಗಳೆಲ್ಲ ಹಸಿರು ಹುಲ್ಲಿನ ರಾಶಿಯಂತೆ ಕಂಡುಬರುತ್ತಿತ್ತ.॥7॥

ಮೂಲಮ್ - 8

ಉಪಲೈರಿವ ಸಂಛನ್ನಾ ದೃಶ್ಯತೇ ಭೂಃ ಶಿಲೋಚ್ಚಯೈಃ ।
ಆಪಗಾಭಿಶ್ಚ ಸಂವಿತಾ ಸೂತ್ರೈರಿವ ವಸುಂಧರಾ ॥

ಅನುವಾದ

ಪರ್ವತಗಳಿಂದಾಗಿ ಈ ಭೂಮಿಯಲ್ಲಿ ಕಲ್ಲುಗಳನ್ನು ಹಾಸಿದಂತೆ ಕಂಡುಬರುತ್ತಿತ್ತು. ಹರಿಯುವ ನದಿಗಳಿಂದಾಗಿ ಭೂಮಿಗೆ ದಾರಗಳು ಸುತ್ತಿವೆಯೋ ಎಂಬಂತೆ ಕಾಣುತ್ತಿತ್ತು.॥8॥

ಮೂಲಮ್ - 9

ಹಿಮವಾಂಶ್ಚೈವ ವಿಂಧ್ಯಶ್ಚ ಮೇರುಶ್ಚ ಸುಮಹಾಗಿರಿಃ ।
ಭೂತಲೇ ಸಂಪ್ರಕಾಶಂತೇ ನಾಗಾ ಇವ ಜಲಾಶಯೇ ॥

ಮೂಲಮ್ - 10

ತೀವ್ರಃ ಸ್ವೇದಶ್ಚ ಖೇದಶ್ಚ ಭಯಂ ಚಾಸೀತ್ತದಾವಯೋಃ ।
ಸಮಾವಿಶತ ಮೋಹಶ್ಚ ತಮೋ ಮೂರ್ಛಾ ಚ ದಾರುಣಾ ॥

ಅನುವಾದ

ಭೂತಳದಲ್ಲಿ ಇದ್ದ ಹಿಮಾಲಯ, ಮೇರು, ವಿಂಧ್ಯ ಮೊದಲಾದ ದೊಡ್ಡ ದೊಡ್ಡ ಪರ್ವತಗಳು ಸರೋವರದಲ್ಲಿ ನಿಂತಿರುವ ಆನೆಗಳಂತೆ ಕಂಡುಬರುತ್ತಿದ್ದವು. ಆಗ ನಮ್ಮಿಬ್ಬರ ಶರೀರಗಳಿಂದ ಬಹಳ ಬೆವರು ಸುರಿಯತೊಡಗಿತು. ನಮಗೆ ಬಹಳ ಬಳಲಿಕೆಯಾಯಿತು. ಮತ್ತೆ ಭಯ, ಮೋಹ, ಭಯಾನಕ ಮೂರ್ಛೆ ನಮ್ಮ ಮೇಲೆ ಅಧಿಕರಸ್ಥಾಪಿಸಿತು.॥9-10॥

ಮೂಲಮ್ - 11

ನಚ ದಿಗ್ಜ್ಞಾಯತೇ ಯಾಮ್ಯಾ ನ ಚಾಗ್ನೇಯೀ ನ ವಾರುಣೀ ।
ಯುಗಾಂತೇ ನಿಯತೋ ಲೋಕೋ ಹತೋ ದಗ್ಧ ಇವಾಗ್ನಿನಾ ॥

ಅನುವಾದ

ಆಗ ಪೂರ್ವ-ಪಶ್ಚಿಮಾದಿ ಯಾವುದೇ ದಿಕ್ಕಿನ ಜ್ಞಾನ-ಆಗುತ್ತಿರಲಿಲ್ಲ. ಈ ಜಗತ್ತು ನಿಯಮಿತವಾಗಿ ಸ್ಥಿತವಾಗಿದ್ದರೂ ಆಗ ಯುಗಾಂತದ ಅಗ್ನಿಯಿಂದ ಸುಡುತ್ತಿರುವಂತೆ ಕಂಡು ಬರುತ್ತಿತ್ತು.॥11॥

ಮೂಲಮ್ - 12

ಮನಶ್ಚ ಮೇ ಹತಂ ಭೂಯಶ್ಚಕ್ಷುಃ ಪ್ರಾಪ್ಯ ತು ಸಂಶ್ರಯಮ್ ।
ಯತ್ನೇನ ಮಹತಾ ಹ್ಯಸ್ಮಿನ್ಮನಃ ಸಂಧಾಯ ಚಕ್ಷುಷೀ ॥

ಮೂಲಮ್ - 13

ಯತ್ನೇನ ಮಹತಾ ಭೂಯೋ ಭಾಸ್ಕರಃ ಪ್ರತಿಲೋಕಿತಃ ।
ತುಲ್ಯಪೃಥ್ವೀಪ್ರಮಾಣೇನ ಭಾಸ್ಕರಃ ಪ್ರತಿಭಾತಿ ನೌ ॥

ಅನುವಾದ

ನನ್ನ ಮನಸ್ಸು ಕಣ್ಣಿನ ಆಶ್ರಯಪಡೆದು, ಕಣ್ತೆರೆದು ನೋಡಲು ಮನಸ್ಸು ಪ್ರಯತ್ನಿಸಿದರೂ ಶೈಥಿಲ್ಯವನ್ನು ಹೊಂದಿ ಸಾಧ್ಯವಾಗಲಿಲ್ಲ. ಬಳಿಕ ಮಹಾಪ್ರಯತ್ನದಿಂದ ಪುನಃ ಮನಸ್ಸನ್ನು ಕಣ್ಣಿನಲ್ಲಿ ಏಕಾಗ್ರಗೊಳಿಸಿ ಸೂರ್ಯನನ್ನು ದರ್ಶಿಸಿದೆವು. ಆಗ ಅವನು ನಮಗೆ ಪೃಥಿವಿಯಷ್ಟೇ ಗಾತ್ರ ಕಂಡುಬಂದನು.॥12-13॥

ಮೂಲಮ್ - 14

ಜಟಾಯುರ್ಮಾಮನಾಪೃಚ್ಛ್ಯ ನಿಪಪಾತ ಮಹೀಂ ತತಃ ।
ತಂ ದೃಷ್ಟ್ವಾ ತೂರ್ಣಮಾಕಾಶಾದಾತ್ಮಾನಂ ಮುಕ್ತವಾನಹಮ್ ॥

ಅನುವಾದ

ಜಟಾಯು ನನ್ನಲ್ಲಿ ಕೇಳದೆಯೇ ಪೃಥಿಯ ಕಡೆಗೆ ಇಳಿಯುತ್ತಿದ್ದನು. ಅವನು ಕೆಳಗೆ ಹೋಗುವುದನ್ನು ನೋಡಿ ನಾನೂ ಕೂಡ ಕೂಡಲೇ ಆಕಾಶದಿಂದ ಕೆಳಗೆ ಹೊರಟೆ.॥14॥

ಮೂಲಮ್ - 15

ಪಕ್ಷಾಭ್ಯಾಂ ಚ ಮಯಾ ಗುಪ್ತೋಜಟಾಯುರ್ನ ಪ್ರದಹ್ಯತ ।
ಪ್ರಮಾದಾತ್ತತ್ರ ನಿರ್ದಗ್ಧಃ ಪತನ್ ವಾಯು ಪಥಾದಹಮ್ ॥

ಮೂಲಮ್ - 16

ಆಶಂಕೇ ತಂ ನಿಪತಿತಂ ಜನಸ್ಥಾನೇ ಜಟಾಯುಷಮ್ ।
ಅಹಂ ತು ಪತಿತೋ ವಿಂಧ್ಯೇ ದಗ್ಧಪಕ್ಷೋ ಜಡೀಕೃತಃ ॥

ಅನುವಾದ

ನಾನು ನನ್ನ ಎರಡು ರೆಕ್ಕೆಗಳಿಂದ ಜಟಾಯುವನ್ನು ಮುಚ್ಚಿಬಿಟ್ಟಿದ್ದೆ. ಅದರಿಂದ ಅವನು ಸುಡಲಿಲ್ಲ ನಾನು ದುಡುಕಿದ್ದರಿಂದ ಅಲ್ಲಿ ಸುಟ್ಟು ಹೋದೆ. ವಾಯುಪಥದಿಂದ ಕೆಳಗೆ ಬೀಳುವಾಗ ಜಟಾಯು ಜನಸ್ಥಾನದಲ್ಲಿ ಬಿದ್ದಿರುವನು ಎಂಬ ಸಂದೇಹ ನನಗೆ ಉಂಟಾಯಿತು. ಆದರೆ ನಾನು ಈ ವಿಂಧ್ಯಗಿರಿಯ ಮೇಲೆ ಬಿದ್ದಿದ್ದೆ. ನನ್ನ ಎರಡೂ ರೆಕ್ಕೆಗಳು ಸುಟ್ಟುಹೋಗಿದ್ದವು. ಅದರಿಂದ ಇಲ್ಲಿ ಜಡದಂತೆ ಆಗಿರುವೆನು.॥15-16॥

ಮೂಲಮ್ - 17

ರಾಜ್ಯಾಚ್ಚ ಹೀನೋ ಭ್ರಾತ್ರಾ ಚ ಪಕ್ಷಾಭ್ಯಾಂ ವಿಕ್ರಮೇಣ ಚ ।
ಸರ್ವಥಾ ಮರ್ತುಮೇವೇಚ್ಛನ್ ಪತಿಷ್ಯೇ ಶಿಖರಾದ್ಗಿರೇಃ ॥

ಅನುವಾದ

ರಾಜ್ಯಭ್ರಷ್ಟನಾಗಿ, ತಮ್ಮನಿಂದ ಅಗಲಿ, ರೆಕ್ಕೆ ಮತ್ತು ಪರಾಕ್ರಮದಿಂದ ರಹಿತನಾದ ನಾನು ಈಗ ಸಾಯುವ ಇಚ್ಛೆಯಿಂದ ಈ ಪರ್ವತದಿಂದ ಕೆಳಗೆ ಬೀಳುವೆನು.॥17॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಅರವತ್ತೊಂದನೆಯ ಸರ್ಗ ಸಂಪೂರ್ಣವಾಯಿತು.॥61॥