वाचनम्
ಭಾಗಸೂಚನಾ
ಅಂಗದ ಮತ್ತು ಗಂಧಮಾದನನು ಆಶ್ವಾಸನೆ ಕೊಟ್ಟಾಗ ವಾನರರು ಪುನಃ ಉತ್ಸಾಹಪೂರ್ವಕ ಅನ್ವೇಷಣ ಕಾರ್ಯದಲ್ಲಿ ಪ್ರವೃತ್ತರಾದುದು
ಮೂಲಮ್ - 1
ಅಥಾಂಗದಸ್ತದಾ ಸರ್ವಾನ್ ವಾನರಾನಿದಮಬ್ರವೀತ್ ।
ಪರಿಶ್ರಾಂತೋ ಮಹಾಪ್ರಾಜ್ಞಃ ಸಮಾಶ್ವಾಸ್ಯ ಶನೈರ್ವಚಃ ॥
ಅನುವಾದ
ಅನಂತರ ಪರಿಶ್ರಮದಿಂದ ಬಳಲಿದ ಮಹಾಬುದ್ಧಿವಂತ ಅಂಗದನು ಸಮಸ್ತ ವಾನರರಿಗೆ ಆಶ್ವಾಸನೆ ಕೊಡುತ್ತಾ ನಿಧಾನವಾಗಿ ಈ ಪ್ರಕಾರ ಹೇಳತೊಡಗಿದನು.॥1॥
ಮೂಲಮ್ - 2
ವನಾನಿ ಗಿರಯೋ ನದ್ಯೋ ದುರ್ಗಾಣಿ ಗಹನಾನಿ ಚ ।
ದರೀ ಗಿರಿಗುಹಾಶ್ಚೈವ ವಿಚಿತಾಃ ಸರ್ವಮಂತತಃ ॥
ಮೂಲಮ್ - 3
ತತ್ರ ತತ್ರ ಸಹಾಸ್ಮಾಭಿರ್ಜಾನಕೀ ನ ಚ ದೃಶ್ಯತೇ ।
ತಥಾ ರಕ್ಷೋಪಹರ್ತಾ ಚ ಸೀತಾಯಾಶ್ಚೈವ ದುಷ್ಕೃತೀ ॥
ಅನುವಾದ
ನಾವು ವನ, ಪರ್ವತ, ನದಿಗಳು, ದುರ್ಗಮಸ್ಥಾನ, ದಟ್ಟಅರಣ್ಯ, ಕಂದಕ, ಗುಹೆ ಹೀಗೆ ಎಲ್ಲೆಡೆ ಪ್ರವೇಶಿಸಿ ಚೆನ್ನಾಗಿ ನೋಡಿಬಿಟ್ಟೆವು. ಆದರೆ ಆ ಸ್ಥಾನಗಳಲ್ಲಿ ನಮಗೆ ಜಾನಕಿಯ ದರ್ಶನವಾಗಲಿಲ್ಲ ಮತ್ತು ಅವಳನ್ನು ಅಪಹರಣ ಮಾಡಿದ ಆ ಪಾಪೀ ರಾಕ್ಷಸನೂ ಸಿಗಲಿಲ್ಲ.॥2-3॥
ಮೂಲಮ್ - 4
ಕಾಲಶ್ಚ ನೋ ಮಹಾನ್ ಯಾತಃ ಸುಗ್ರೀವಶ್ಚೋಗ್ರಶಾಸನಃ ।
ತಸ್ಮಾದ್ಭವಂತಃ ಸಹಿತಾ ವಿಚಿನ್ವಂತು ಸಮಂತತಃ ॥
ಅನುವಾದ
ನಮ್ಮ ಹೆಚ್ಚು ಸಮಯವೂ ಕಳೆದುಹೋಯಿತು. ರಾಜಾ ಸುಗ್ರೀವನ ಶಾಸನವೂ ಬಹಳ ಭಯಂಕರವಾಗಿದೆ. ಆದ್ದರಿಂದ ನಾವೆಲ್ಲರೂ ಸೇರಿ ಪುನಃ ಎಲ್ಲೆಡೆ ಸೀತೆಯನ್ನು ಹುಡುಕಲು ಪ್ರಾರಂಭಿಸುವಾ.॥4॥
ಮೂಲಮ್ - 5
ವಿಹಾಯ ತಂದ್ರೀಂ ಶೋಕಂ ಚ ನಿದ್ರಾಂ ಚೈವ ಸಮುತ್ಥಿತಾಮ್ ।
ವಿಚಿನುಧ್ವಂ ತಥಾ ಸೀತಾಂ ಪಶ್ಯಾಮೋ ಜನಕಾತ್ಮಜಾಮ್ ॥
ಅನುವಾದ
ಆಲಸ್ಯ, ಶೋಕ ಮತ್ತು ಬಂದಿರುವ ನಿದ್ದೆಯನ್ನು ಪರಿತ್ಯಜಿಸಿ ನಮಗೆ ಜನಕ ಕುಮಾರೀ ಸೀತೆಯ ದರ್ಶನವಾಗುವಂತೆ ಹುಡುಕುವಾ.॥5॥
ಮೂಲಮ್ - 6
ಅನಿರ್ವೇದಂ ಚ ದಾಕ್ಷ್ಯಂ ಚ ಮನಸಶ್ಚಾಪರಾಜಯಮ್ ।
ಕಾರ್ಯಸಿದ್ಧಿ ಕರಾಣ್ಯಾಹುಸ್ತಸ್ಮಾದೇತದ್ ಬ್ರವೀಮ್ಯಹಮ್ ॥
ಅನುವಾದ
ಉತ್ಸಾಹ, ಸಾಮರ್ಥ್ಯ ಮತ್ತು ಮನಸ್ಸಿನ ಉತ್ಸಾಹವನ್ನು ಬಿಡಬಾರದು- ಇದೇ ಕಾರ್ಯವನ್ನು ಸಿದ್ಧಿಗೊಳಿಸುವಂತಹ ಸದ್ಗುಣಗಳೆಂದು ಹೇಳಲಾಗಿದೆ ; ಏಕೆಂದರೆ ನಾನು ನಿಮ್ಮಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ.॥6॥
ಮೂಲಮ್ - 7
ಅದ್ಯಾಪೀದಂ ವನಂ ದುರ್ಗಂ ವಿಚಿನ್ವಂತು ವನೌಕಸಃ ।
ಖೇದಂ ತ್ಯಕ್ತ್ವಾಪುನಃ ಸರ್ವಂ ವನಮೇವವಿಚೀನ್ವತಾಮ್ ॥
ಅನುವಾದ
ಇಂದೇ ಎಲ್ಲ ವಾನರರು ಖೇದವನ್ನು ಬಿಟ್ಟು ಈ ದುರ್ಗಮ ವನದಲ್ಲಿ ಹುಡುಕಲು ಪ್ರಾರಂಭಿಸುವಾ ಹಾಗೂ ಇಡೀ ವನವನ್ನು ಜಾಲಾಡಿಸಿಬಿಡಬೇಕು.॥7॥
ಮೂಲಮ್ - 8
ಅವಶ್ಯಂ ಕುರ್ವತಾಂ ತಸ್ಯ ದೃಶ್ಯತೇ ಕರ್ಮಣಃ ಫಲಮ್ ।
ಪರಂ ನಿರ್ವೇದಮಾಗಮ್ಯ ನಹಿ ನೋನ್ಮೀಲನಂ ಕ್ಷಮಮ್ ॥
ಅನುವಾದ
ಕರ್ಮದಲ್ಲಿ ತೊಡಗಿರುವ ಜನರಿಗೆ ಆ ಕರ್ಮದ ಲ ಅವಶ್ಯವಾಗಿ ಸಿಗುವುದು ನೋಡಲಾಗುತ್ತದೆ; ಆದ್ದರಿಂದ ಅತ್ಯಂತ ಖಿನ್ನರಾಗಿ ಉದ್ಯೋಗವನ್ನು ಬಿಟ್ಟು ಕುಳಿತು ಕೊಳ್ಳುವುದು ಎಂದಿಗೂ ಉಚಿತವಲ್ಲ.॥8॥
ಮೂಲಮ್ - 9
ಸುಗ್ರೀವಃ ಕ್ರೋಧನೋ ರಾಜಾ ತೀಕ್ಷ್ಣದಂಡಶ್ಚ ವಾನರಾಃ ।
ಭೇತವ್ಯಂ ತಸ್ಯ ಸತತಂ ರಾಮಸ್ಯ ಚ ಮಹಾತ್ಮನಃ ॥
ಅನುವಾದ
ಸುಗ್ರೀವನು ಕ್ರೋಧಿರಾಜನಾಗಿದ್ದಾನೆ. ಅವನ ಶಿಕ್ಷೆಯೂ ಬಹಳ ಕಠೋರವಾಗಿದೆ. ವಾನರರೇ! ಅವನಿಗೆ ಹಾಗೂ ಮಹಾತ್ಮಾ ಶ್ರೀರಾಮನಿಗೆ ನೀವು ಸದಾ ಹೆದರಿಕೊಂಡೇ ಇರಬೇಕು.॥9॥
ಮೂಲಮ್ - 10
ಹಿತಾರ್ಥಮೇತದುಕ್ತಂ ವಃ ಕ್ರಿಯತಾಂ ಯದಿ ರೋಚತೇ ।
ಉಚ್ಯತಾಂ ಹಿ ಕ್ಷಮಂ ಯತ್ ಯತ್ ಸರ್ವೇಷಾಮೇವ ವಾನರಾಃ ॥
ಅನುವಾದ
ನಿಮ್ಮೆಲ್ಲರ ಒಳಿತಿಗಾಗಿಯೇ ನಾನು ಈ ಮಾತುಗಳನ್ನು ಹೇಳಿರುವೆನು. ನಿಮಗೆ ಸರಿಕಂಡರೆ ಇದನ್ನು ಸ್ವೀಕರಿಸಿರಿ ಅಥವಾ ವಾನರರೇ! ಎಲ್ಲರಿಗೆ ಉಚಿತವಾದ ಕಾರ್ಯವನ್ನು ನೀವೇ ತಿಳಿಸಿರಿ.॥10॥
ಮೂಲಮ್ - 11
ಅಂಗದಸ್ಯ ವಚಃ ಶ್ರುತ್ವಾ ವಚನಂ ಗಂಧಮಾದನಃ ।
ಉವಾಚವ್ಯಕ್ತಯಾ ವಾಚಾ ಪಿಪಾಸಾಶ್ರಮಖಿನ್ನಯಾ ॥
ಅನುವಾದ
ಅಂಗದನ ಮಾತನ್ನು ಕೇಳಿ ಗಂಧಮಾದನನು ಬಾಯಾರಿಕೆ ಮತ್ತು ಬಳಲಿಕೆಯಿಂದ ಶಿಥಿಲವಾದ ವಾಣಿಯಿಂದ ಹೇಳಿದನು.॥11॥
ಮೂಲಮ್ - 12
ಸದೃಶಂ ಖಲು ವೋ ವಾಕ್ಯಮಂಗದೋ ಯದುವಾಚ ಹ ।
ಹಿತಂ ಚೈವಾನುಕೂಲಂ ಚ ಕ್ರಿಯತಾಮಸ್ಯ ಭಾಷಿತಮ್ ॥
ಅನುವಾದ
ವಾನರರೇ! ಯುವರಾಜ ಅಂಗದನು ಹೇಳಿದ ಮಾತು ನಿಮಗೆ ಯೋಗ್ಯ, ಹಿತಕರ ಮತ್ತು ಅನುಕೂಲವಾಗಿದೆ. ಆದ್ದರಿಂದ ನೀವೆಲ್ಲರೂ ಇವನ ಮಾತಿನಂತೆ ಕಾರ್ಯ ಮಾಡಬೇಕು.॥12॥
ಮೂಲಮ್ - 13
ಪುನರ್ಮಾರ್ಗಾಮಹೇ ಶೈಲಾನ್ ಕಂದರಾಂಶ್ಚ ಶಿಲಾಂಸ್ತಥಾ ।
ಕಾನನಾನಿ ಚ ಶೂನ್ಯಾನಿ ಗಿರಿಪ್ರಸ್ರವಣಾನಿ ಚ ॥
ಅನುವಾದ
ನಾವು ಪುನಃ ಪರ್ವತಗಳಲ್ಲಿ, ಕಂದಕಗಳಲ್ಲಿ, ಬಂಡೆಗಳಲ್ಲಿ, ನಿರ್ಜನ ವನಗಳಲ್ಲಿ ಮತ್ತು ಪರ್ವತೀಯ ಜಲಪಾತಗಳಲ್ಲಿ ಹುಡುಕುವಾ.॥13॥
ಮೂಲಮ್ - 14
ಯಥೋದ್ದಿಷ್ಟಾನಿ ಸರ್ವಾಣಿ ಸುಗ್ರೀವೇಣ ಮಹಾತ್ಮನಾ ।
ವಿಚಿನ್ವಂತು ವನಂ ಸರ್ವೇ ಗಿರಿದುರ್ಗಾಣಿ ಸಂಗತಾಃ ॥
ಅನುವಾದ
ಮಹಾತ್ಮಾ ಸುಗ್ರೀವನು ನಿರ್ದಿಷ್ಟ ಮಾಡಿದ ಎಲ್ಲ ಸ್ಥಾನಗಳಲ್ಲಿ,ವನ, ಪರ್ವತೀಯ ದುರ್ಗಮ ಪ್ರದೇಶಗಳಲ್ಲಿ ಎಲ್ಲ ವಾನರರು ಒಂದಾಗಿ ಹುಡುಕಲು ಪ್ರಾರಂಭಿಸುವಾ.॥14॥
ಮೂಲಮ್ - 15
ತತಃ ಸಮುತ್ಥಾಯ ಪುನರ್ವಾನರಾಸ್ತೇ ಮಹಾಬಲಾಃ ।
ವಿಂಧ್ಯಕಾನನಸಂಕೀರ್ಣಾಂ ವಿಚೇರುರ್ದಕ್ಷಿಣಾಂ ದಿಶಮ್ ॥
ಅನುವಾದ
ಇದನ್ನು ಕೇಳಿ ಆ ಮಹಾಬಲಿ ವಾನರರು ಎದ್ದು ನಿಂತು, ವಿಂಧ್ಯಪರ್ವತದ ಕಾನನಗಳಿಂದ ವ್ಯಾಪ್ತವಾದ ದಕ್ಷಿಣ ದಿಕ್ಕಿನಲ್ಲಿ ಸಂಚರಿಸತೊಡಗಿದರು.॥15॥
ಮೂಲಮ್ - 16
ತೇಶಾರದಾಭ್ರ ಪ್ರತಿಮಂ ಶ್ರೀಮದ್ರಜತಪರ್ವತಮ್ ।
ಶೃಂಗವಂತಂ ದರೀವಂತಮಧಿರುಹ್ಯ ಚ ವಾನರಾಃ ॥
ಅನುವಾದ
ಎದುರಿಗೆ ಶರದ್ ಋತುವಿನ ಮೋಡಗಳಂತಹ ಶೋಭಾಶಾಲೀ ರಜತ ಪರ್ವತ ಕಂಡುಬಂತು. ಅದರಲ್ಲಿ ಅನೇಕ ಶಿಖರಗಳು ಮತ್ತು ಕಂದಕಗಳಿದ್ದವು. ಆ ವಾನರರೆಲ್ಲರೂ ಅದನ್ನು ಹತ್ತಿ ಹುಡುಕಲು ತೊಡಗಿದರು.॥16॥
ಮೂಲಮ್ - 17
ತತ್ರ ಲೋಧ್ರವನಂ ರಮ್ಯಂ ಸಪ್ತಪರ್ಣವನಾನಿ ಚ ।
ವ್ಯಚಿನ್ವಂತೋ ಹರಿವರಾಃ ಸೀತಾದರ್ಶನಕಾಂಕ್ಷಿಣಃ ॥
ಅನುವಾದ
ಸೀತೆಯ ದರ್ಶನದ ಇಚ್ಛೆಯುಳ್ಳ ಆ ಎಲ್ಲ ವಾನರಶ್ರೇಷ್ಠರು ಅಲ್ಲಿಯ ರಮಣೀಯ ಲೋಧ್ರವನದಲ್ಲಿ ಮತ್ತು ಏಳೆಲೆಯ ಬಾಳೆಯ ಕಾಡಿನಲ್ಲಿ ಸೀತೆಯನ್ನು ಹುಡುಕತೊಡಗಿದರು.॥17॥
ಮೂಲಮ್ - 18
ತಸ್ಯಾಗ್ರಮಧಿರೂಢಾಸ್ತೇ ಶ್ರಾಂತಾ ವಿಪುಲವಿಕ್ರಮಾಃ ।
ನ ಪಶ್ಯಂತಿ ಸ್ಮ ವೈದೇಹೀಂ ರಾಮಸ್ಯ ಮಹಿಷೀಂ ಪ್ರಿಯಾಮ್ ॥
ಅನುವಾದ
ಆ ಪರ್ವತವನ್ನು ಹತ್ತಿದ ಆ ಮಹಾಪರಾಕ್ರಮಿ ವಾನರರು ಹುಡುಕುತ್ತಾ - ಹುಡುಕುತ್ತಾ ಬಳಲಿ ಹೋದರು; ಆದರೂ ಶ್ರೀರಾಮಚಂದ್ರನ ಪ್ರಿಯರಾಣೀ ಸೀತೆಯ ದರ್ಶನವಾಗಲಿಲ್ಲ.॥18॥
ಮೂಲಮ್ - 19
ತೇ ತು ದೃಷ್ಟಿಗತಂ ಕೃತ್ವಾ ತಂ ಶೈಲಂ ಬಹುಕಂದರಮ್ ।
ಅಧ್ಯಾರೋಹಂತ ಹರಯೋ ವೀಕ್ಷಮಾಣಾಃ ಸಮಂತತಃ ॥
ಅನುವಾದ
ಅನೇಕ ಕಂದಕಗಳುಳ್ಳ ಆ ಪರ್ವತವನ್ನು ಚೆನ್ನಾಗಿ ನಿರೀಕ್ಷಣ ಮಾಡಿ, ಎಲ್ಲೆಡೆ ದೃಷ್ಟಿ ಹರಿಸಿದ ಆ ವಾನರರು ಅದರಿಂದ ಕೆಳಗೆ ಇಳಿದರು.॥19॥
ಮೂಲಮ್ - 20
ಅವರುಹ್ಯ ತತೋ ಭೂಮಿಂ ಶ್ರಾಂತಾ ವಿಗತಚೇತಸಃ ।
ಸ್ಥಿ ತ್ವಾ ಮುಹೂರ್ತಂ ತತ್ರಾಥ ವೃಕ್ಷಮೂಲಮುಪಾಶ್ರಿತಾಃ ॥
ಅನುವಾದ
ಭೂಮಿಗೆ ಇಳಿದು ಹೆಚ್ಚು ಬಳಲಿದ್ದುದರಿಂದ ನಿಶ್ಚೇಷ್ಟಿತರಂತಾಗಿ ಎಲ್ಲ ವಾನರರು ಅಲ್ಲಿ ಒಂದು ವೃಕ್ಷದ ಬುಡಕ್ಕೆ ಹೋಗಿ ಮುಹೂರ್ತಕಾಲ ಕುಳಿತೇ ಇದ್ದರು.॥20॥
ಮೂಲಮ್ - 21
ತೇ ಮುಹೂರ್ತಂ ಸಮಾಶ್ವಸ್ತಾಃ ಕಿಂಚಿದ್ಭಗ್ನಪರಿಶ್ರಮಾಃ ।
ಪುನರೇವೋದ್ಯತಾಃ ಕೃತ್ಸ್ನಾಂ ಮಾರ್ಗಿತುಂ ದಕ್ಷಿಣಾಂ ದಿಶಮ್ ॥
ಅನುವಾದ
ಎರಡು ಗಳಿಗೆ ಸುಧಾರಿಸಿಕೊಂಡು ಅವರ ಬಳಲಿಕೆ ದೂರವಾದಾಗ ಅವರು ಪುನಃ ಸಂಪೂರ್ಣ ದಕ್ಷಿಣ ದಿಕ್ಕಿನಲ್ಲಿ ಹುಡುಕಲು ಮುಂದಾದರು.॥21॥
ಮೂಲಮ್ - 22
ಹನುಮತ್ಪ್ರಮುಖಾಸ್ತಾವತ್ ಪ್ರಸ್ಥಿತಾಃ ಪ್ಲವಗರ್ಷಭಾಃ ।
ವಿಂಧ್ಯಮೇವಾದಿತಃ ಕೃತ್ವಾ ವಿಚೇರುಶ್ಚ ಸಮಂತತಃ ॥
ಅನುವಾದ
ಹನುಮಂತನೇ ಮೊದಲಾದ ವಾನರಶ್ರೇಷ್ಠರ ಸೀತಾನ್ವೇಷಣಕ್ಕೆ ಹೊರಡುವ ಮೊದಲು ವಿಂಧ್ಯಪರ್ವತದ ಸುತ್ತಲೂ ಸಂಚರಿಸತೊಡಗಿದರು.॥22॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಲವತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥49॥