०४८ विन्ध्यपर्वते सीतान्वेषणम्

वाचनम्
ಭಾಗಸೂಚನಾ

ದಕ್ಷಿಣ ದಿಕ್ಕಿಗೆ ಹೋದ ವಾನರರು ಸೀತೆಯನ್ನು ಹುಡುಕಲು ಪ್ರಾರಂಭಿಸಿದುದು

ಮೂಲಮ್ - 1

ಸಹ ತಾರಾಂಗದಾಭ್ಯಾಂ ತು ಸಹಸಾ ಹನುಮಾನ್ಕಪಿಃ ।
ಸುಗ್ರೀವೇಣ ಯಥೋದ್ದಿಷ್ಟಂ ತಂ ದೇಶಂಪ್ರಚಕ್ರಮೇ ॥

ಅನುವಾದ

ತಾರ ಮತ್ತು ಅಂಗದರೊಂದಿಗೆ ಹನುಮಂತನು, ಸುಗ್ರೀವನು ತಿಳಿಸಿದ ದಕ್ಷಿಣ ದಿಕ್ಕಿಗೆ ಕೂಡಲೇ ಹೊರಟನು.॥1॥

ಮೂಲಮ್ - 2

ಸ ತು ದೂರಮುಷಾಗಮ್ಯ ಸರ್ವೈಸ್ತೈಃ ಕಪಿಸತ್ತಮೈಃ ।
ತತೋ ವಿಚಿಂತ್ಯ ವಿಂಧ್ಯಸ್ಯ ಗುಹಾಶ್ಚ ಗಹನಾನಿ ಚ ॥

ಮೂಲಮ್ - 3

ಪರ್ವತಾಗ್ರನದೀದುರ್ಗಾನ್ ಸರಾಂಸಿ ವಿಪುಲದ್ರುಮಾನ್ ।
ವೃಕ್ಷಷಂಡಾಂಶ್ಚ ವಿವಿಧಾನ್ ಪರ್ವತಾನ್ ವನಪಾದಪಾನ್ ॥

ಮೂಲಮ್ - 4

ಅನ್ವೇಷಮಾಣಾಸ್ತೇ ಸರ್ವೇ ವಾನರಾಃ ಸರ್ವತೋ ದಿಶಮ್ ।
ನ ಸೀತಾಂ ದದೃಶುರ್ವೀರಾ ಮೈಥಿಲೀಂ ಜನಕಾತ್ಮಜಾಮ್ ॥

ಅನುವಾದ

ಆ ಎಲ್ಲ ಕಪಿಶ್ರೇಷ್ಠರೊಂದಿಗೆ ಬಹಳ ದೂರ ದಾರಿ ಸಾಗಿ ಅವನು ವಿಂಧ್ಯಾಚಲಕ್ಕೆ ಬಂದು, ಅಲ್ಲಿಯ ಗುಹೆಗಳಲ್ಲಿ, ಅರಣ್ಯಗಳಲ್ಲಿ, ಪರ್ವತಶಿಖರಗಳಲ್ಲಿ, ನದಿಗಳಲ್ಲಿ, ದುರ್ಗಮ ಸ್ಥಾನಗಳಲ್ಲಿ, ಸರೋವರಗಳಲ್ಲಿ, ದೊಡ್ಡ-ದೊಡ್ಡ ವೃಕ್ಷಗಳಲ್ಲಿ, ಎಲ್ಲೆಡೆ ಹುಡುಕುತ್ತಾ ತಿರುಗಾಡಿದರು; ಆದರೆ ಅಲ್ಲಿ ಆ ವಾನರ ವೀರರೆಲ್ಲರಿಗೆ ಮಿಥಿಲೇಶಕುಮಾರಿ ಜನಕನಂದಿನೀ ಸೀತೆಯು ಎಲ್ಲಿಯೂ ಕಂಡು ಬಂದಿಲ್ಲ.॥2-4॥

ಮೂಲಮ್ - 5

ತೇ ಭಕ್ಷಯಂತೋ ಮೂಲಾನಿ ಫಲಾನಿ ವಿವಿಧಾನ್ಯಪಿ ।
ಅನ್ವೇಷಮಾಣಾ ದುರ್ಧರ್ಷಾ ನ್ಯವಸಂಸ್ತತ್ರ ತತ್ರ ಹ ॥

ಅನುವಾದ

ಆ ಎಲ್ಲ ದುರ್ಧರ್ಷ ವಾನರ ವೀರರು ನಾನಾ ಪ್ರಕಾರದ ಫಲ-ಮೂಲಗಳನ್ನು ತಿನ್ನುತ್ತಾ, ಸೀತೆಯನ್ನು ಹುಡುಕುತ್ತಾ ಅಲ್ಲಲ್ಲಿ ನಿಂತುಬಿಡುತ್ತಿದ್ದರು.॥5॥

ಮೂಲಮ್ - 6

ಸ ತು ದೇಶೋ ದುರನ್ವೇಷೋ ಗುಹಾಗಹನವಾನ್ಮಹಾನ್ ।
ನಿರ್ಜಲಂ ನಿರ್ಜನಂ ಶೂನ್ಯಂ ಗಹನಂ ಘೋರದರ್ಶನಮ್ ॥

ಅನುವಾದ

ವಿಂಧ್ಯಪರ್ವತದ ಸುತ್ತಲ-ಮುತ್ತಲ ಪ್ರದೇಶವು ಅನೇಕ ಗುಹೆಗಳಿಂದ, ದಟ್ಟವಾದ ಅರಣ್ಯದಿಂದ ಕೂಡಿತ್ತು. ಇದರಿಂದ ಅಲ್ಲಿ ಜಾನಕಿಯನ್ನು ಹುಡುಕಲು ಬಹಳ ಕಷ್ಟವಾಗುತ್ತಿತ್ತು. ಭಯಂಕರವಾಗಿ ಕಾಣುವ ಅಲ್ಲಿಯ ನಿರ್ಜನ ಕಾಡಿನಲ್ಲಿ ನೀರು ಸಿಗುತ್ತಿರಲಿಲ್ಲ, ಯಾವ ಮನುಷ್ಯನು ಕಂಡುಬರುತ್ತಿರಲಿಲ್ಲ.॥6॥

ಮೂಲಮ್ - 7

ತಾದೃಶಾನ್ಯಪ್ಯರಣ್ಯಾನಿ ವಿಚಿತ್ಯ ಭೃಶಪೀಡಿತಾಃ ।
ದೇಶಶ್ಚ ದುರನ್ವೇಷ್ಯೋ ಗುಹಾಗಹನವಾನ್ ಮಹಾನ್ ॥

ಅನುವಾದ

ಅಂತಹ ಅರಣ್ಯಗಳಲ್ಲಿಯೂ ಹುಡುಕುತ್ತಿರುವಾಗ ಆ ವಾನರರು ಅತ್ಯಂತ ಕಷ್ಟಗಳನ್ನು ಸಹಿಸಬೇಕಾಯಿತು. ಆ ವಿಶಾಲ ಪ್ರದೇಶವು ಗುಹೆಗಳಿಂದ ಮತ್ತು ದಟ್ಟವಾದ ಕಾಡಿನಿಂದ ಕೂಡಿತ್ತು. ಆದ್ದರಿಂದ ಅಲ್ಲಿ ಅನ್ವೇಷಣೆಯ ಕಾರ್ಯ ಬಹಳ ಕಠಿಣವಾಗಿ ತೋರುತ್ತಿತ್ತು.॥7॥

ಮೂಲಮ್ - 8

ತ್ಯಕ್ತ್ವಾ ತು ತಂ ತದಾ ದೇಶಂ ಸರ್ವೇ ವೈ ಹರಿಯೂಥಪಾಃ ।
ದೇಶಮನ್ಯಂ ದುರಾಧರ್ಷಂ ವಿವಿಶುಶ್ಚಾಕುಶೋಭಯಾಃ ॥

ಅನುವಾದ

ಅನಂತರ ಆ ಸಮಸ್ತ ವಾನರ ಯೂಧಪತಿಗಳು ಆ ಪ್ರದೇಶವನ್ನು ಬಿಟ್ಟು ಇನ್ನೊಂದು ಪ್ರದೇಶಕ್ಕೆ ನುಗ್ಗಿದರು. ಅಲ್ಲಿಗೆ ಹೋಗಲು ಇನ್ನೂ ಕಠಿಣವಾಗಿದ್ದರೂ ಅವರಿಗೆ ಎಲ್ಲಿಯೂ ಯಾರಿಂದಲೂ ಭಯ ವಾಗುತ್ತಿರಲಿಲ್ಲ.॥8॥

ಮೂಲಮ್ - 9

ಯತ್ರ ವಂಧ್ಯಲಾ ವೃಕ್ಷಾ ವಿಪುಷ್ಪಾಃ ಪರ್ಣವರ್ಜಿತಾಃ ।
ನಿಸ್ತೋಯಾಃ ಸರಿತೋ ಯತ್ರ ಮೂಲಂ ಯತ್ರ ಸುದುರ್ಲಭಮ್ ॥

ಅನುವಾದ

ಅಲ್ಲಿಯ ವೃಕ್ಷಗಳಲ್ಲಿ ಫಲಗಳಿರಲಿಲ್ಲ, ಹೂವೂ ಬಿಡುತ್ತಿರಲಿಲ್ಲ, ರೆಂಬೆಗಳಲ್ಲಿ ಎಲೆಗಳೂ ಇರಲಿಲ್ಲ. ಅಲ್ಲಿಯ ನದಿಗಳಲ್ಲಿ ನೀರಿನ ಹೆಸರೇ ಇರಲಿಲ್ಲ. ಕಂದ-ಮೂಲಗಳಾದರೋ ಅಲ್ಲಿ ದುರ್ಲಭವೇ ಆಗಿತ್ತು.॥9॥

ಮೂಲಮ್ - 10

ನ ಸಂತಿ ಮಹಿಷಾಯತ್ರ ನ ಮೃಗಾ ನ ಚ ಹಸ್ತಿನಃ ।
ಶಾರ್ದೂಲಾಃ ಪಕ್ಷಿಣೋ ವಾಪಿ ಯೇ ಚಾನ್ಯೇ ವನಗೋಚರಾಃ ॥

ಅನುವಾದ

ಆ ಪ್ರದೇಶದಲ್ಲಿ ಕೋಣಗಳಾಗಲೀ, ಆನೆಗಳಾಗಲೀ, ಹುಲಿಗಳಾಗಲೀ, ಪಕ್ಷಿಗಳಾಗಲೀ, ಕಾಡಿನಲ್ಲಿ ಸಂಚರಿಸುವ ಇತರ ಪ್ರಾಣಿಗಳಾಗಲೀ ಇರಲಿಲ್ಲ.॥10॥

ಮೂಲಮ್ - 11½

ನ ಚಾತ್ರ ವೃಕ್ಷಾ ನೌಷಧ್ಯೋ ನ ವಲ್ಲ್ಯೋನಾಪಿ ವೀರುಧಃ ।
ಸ್ನಿಗ್ಧಪತ್ರಾಃ ಸ್ಥಲೇ ಯತ್ರ ಪದ್ಮಿನ್ಯಃ ಫುಲ್ಲಪಂಕಜಾಃ ॥
ಪ್ರೇಕ್ಷಣೀಯಾಃ ಸುಗಂಧಾಶ್ಚ ಭ್ರಮರೈಶ್ಚ ವಿವರ್ಜಿತಾಃ ।

ಅನುವಾದ

ಅಲ್ಲಿ ಮರ-ಗಿಡಗಳು, ಔಷಧಿಗಳು, ಬಳ್ಳಿಗಳೂ ಇರಲಿಲ್ಲ. ಆ ದೇಶದ ಕೆರೆಗಳಲ್ಲಿ ನುಣುಪಾದ ಎಲೆಗಳು ಹಾಗೂ ಅರಳಿದ ಕಮಲಗಳೂ ಇರಲಿಲ್ಲ. ಆದ್ದರಿಂದ ಅವನ್ನು ನೋಡಲು ಯೋಗ್ಯವಾಗಿರಲಿಲ್ಲ, ಸುಗಂಧ ಹರಡಿರಲಿಲ್ಲ, ಅಲ್ಲಿ ದುಂಬಿಗಳೂ ಗುಂಜಾರವ ಮಾಡುತ್ತಿರಲಿಲ್ಲ.॥11½॥

ಮೂಲಮ್ - 12½

ಕಂಡುರ್ನಾಮ ಮಹಾಭಾಗಃ ಸತ್ಯವಾದೀ ತಪೋಧನಃ ॥
ಮಹಿರ್ಷಿಃ ಪರಮಾಮರ್ಷೀ ನಿಯಮೈರ್ದುಷ್ಪ್ರಧರ್ಷಣಃ ।

ಅನುವಾದ

ಮೊದಲು ಅಲ್ಲಿ ಕಂಡು ಎಂಬ ಪ್ರಸಿದ್ಧ ಓರ್ವ ಮಹಾಭಾಗ ಸತ್ಯವಾದೀ ಮತ್ತು ತಪಸ್ಸಿನ ಧನೀ ಮಹರ್ಷಿಗಳು ಇರುತ್ತಿದ್ದರು. ಅವರು ಕ್ರೋಧವರ್ಜಿತರಾಗಿದ್ದು ತನ್ನ ಕುರಿತು ಮಾಡಿದ ಅಪರಾಧಗಳನ್ನು ಸಹಿಸುತ್ತಿದ್ದರು. ಶೌಚ-ಸಂತೋಷಾದಿ ನಿಯಮಗಳನ್ನು ಪಾಲಿಸುತ್ತಿದ್ದುದರಿಂದ ಆ ಮಹರ್ಷಿಯನ್ನು ಯಾರೂ ತಿರಸ್ಕರಿಸುತ್ತಿರಲಿಲ್ಲ, ನಿಂದಿಸುತ್ತಿರಲಿಲ್ಲ.॥12½॥

ಮೂಲಮ್ - 13½

ತಸ್ಯ ತಸ್ಮಿನ್ವನೇ ಪುತ್ರೋ ಬಾಲಕೋ ದಶವಾರ್ಷಿಕಃ ॥
ಪ್ರಣಷ್ಟೋ ಜೀವಿತಾಂತಾಯ ಕ್ರುದ್ಧಸ್ತೇನ ಮಹಾಮುನಿಃ ।

ಅನುವಾದ

ಆ ವನದಲ್ಲಿ ಅವರ ಹತ್ತುವರ್ಷದ ಒಬ್ಬ ಬಾಲಕನು ಯಾವುದೋ ಕಾರಣದಿಂದ ಸತ್ತುಹೋಗಿದ್ದನು. ಇದರಿಂದ ಕುಪಿತರಾದ ಆ ಮಹಾಮುನಿಯು ಆ ವನದ ಬಾಳನ್ನು ಮುಗಿಸಿಬಿಡಲು ಮುಂದಾದರು.॥13½॥

ಮೂಲಮ್ - 14½

ತೇನ ಧರ್ಮಾತ್ಮನಾ ಶಪ್ತಂ ಕೃತ್ಸ್ನಂ ತತ್ರ ಮಹದ್ವನಮ್ ॥
ಅಶರಣ್ಯಂ ದುರಾಧರ್ಷಂ ಮೃಗಪಕ್ಷಿವಿವರ್ಜಿತಮ್ ।

ಅನುವಾದ

ಆ ಧರ್ಮಾತ್ಮಾ ಮಹರ್ಷಿಯು ಆ ಇಡೀ ವಿಶಾಲ ವನಕ್ಕೆ ಶಾಪಕೊಟ್ಟರು. ಅದರಿಂದ ಅದು ಆಶ್ರಯಹೀನ, ದುರ್ಗಮ ಹಾಗೂ ಪಶು-ಪಕ್ಷಿಗಳಿಂದ ಶೂನ್ಯವಾಯಿತು.॥14½॥

ಮೂಲಮ್ - 15

ತಸ್ಯ ತೇ ಕಾನನಾಂತಾಂಸ್ತು ಗಿರೀಣಾಂ ಕಂದರಾಣಿ ಚ ॥

ಮೂಲಮ್ - 16½

ಪ್ರಭವಾಣಿ ನದೀನಾಂ ಚ ವಿಚಿನ್ವಂತಿ ಸಮಾಹಿತಾಃ ।
ತತ್ರ ಚಾಪಿ ಮಹಾತ್ಮಾನೋ ನಾಪಶ್ಯನ್ ಜನಕಾತ್ಮಜಾಮ್ ॥
ಹರ್ತಾರಂ ರಾವಣಂ ವಾಪಿ ಸುಗ್ರೀವಪ್ರಿಯಕಾರಿಣಃ ।

ಅನುವಾದ

ಅಲ್ಲಿ ಸುಗ್ರೀವನ ಪ್ರಿಯವನ್ನು ಮಾಡುವ ಆ ಮಹಾಮನಸ್ವೀ ವಾನರರು ಆ ವನದ ಎಲ್ಲ ಪ್ರದೇಶಗಳಲ್ಲಿ, ಪರ್ವತದ ತಪ್ಪಲುಗಳಲ್ಲಿ, ನದಿಗಳ ಉಗಮ ಸ್ಥಾನಗಳಲ್ಲಿ ಏಕಾಗ್ರಚಿತ್ತರಾಗಿ ಅನುಸಂಧಾನ ಮಾಡಿದರು; ಆದರೂ ಅಲ್ಲಿಯೂ ಅವರಿಗೆ ಜಾನಕಿಯಾಗಲೀ ಅಥವಾ ಆಕೆಯನ್ನು ಅಪಹರಿಸಿದ ರಾವಣನು ಕಂಡು ಬಂದಿಲ್ಲ.॥15-16½॥

ಮೂಲಮ್ - 17½

ತೇ ಪ್ರವಿಶ್ಯಾಶು ತಂ ಭೀಮಂ ಲತಾಗುಲ್ಮಸಮಾವೃತಮ್ ॥
ದದೃಶುರ್ಭೀಮಕರ್ಮಾಣಮಸುರಂ ಸುರನಿರ್ಭಯಮ್ ।

ಅನುವಾದ

ಅನಂತರ ಬಳ್ಳಿಗಳಿಂದ, ಗಿಡ ಪೊದೆಗಳಿಂದ ಕೂಡಿದ ಇನ್ನೊಂದು ಯಾವುದೋ ಭಯಂಕರ ವನವನ್ನು ಪ್ರವೇಶಿಸಿ ಆ ಹನುಮಂತನೇ ಆದಿ ವಾನರರು ಭಯಾನಕ ಕರ್ಮಮಾಡುವ ದೇವತೆಗಳಿಗೂ ಹೆದರದೇ ಇರುವ ಒಬ್ಬ ಅಸುರನನ್ನು ನೋಡಿದರು.॥17½॥

ಮೂಲಮ್ - 18½

ತಂ ದೃಷ್ಟ್ವಾ ವಾನರಾ ಘೋರಂ ಸ್ಥಿತಂ ಶೈಲಮಿವಾಸುರಮ್ ॥
ಗಾಢಂ ಪರಿಹಿತಾಃ ಸರ್ವೇ ದೃಷ್ಟ್ವಾ ತಂ ಪರ್ವತೋಪಮಮ್ ।

ಅನುವಾದ

ಆ ಘೋರ ಪರ್ವತದಂತೆ ಇರುವ ನಿಶಾಚರನು ಮುಂದೆ ನಿಂತಿರುವುದನ್ನು ನೋಡಿ, ಎಲ್ಲ ವಾನರರು ಸಡಿಲವಾದ ತಮ್ಮ ಬಟ್ಟೆಗಳನ್ನು ಬಿಗಿದುಕೊಂಡು ಆ ಪರ್ವತಾಕಾರ ಅಸುರನನ್ನು ಎದುರಿಸಲು ಸಿದ್ಧರಾದರು.॥18½॥

ಮೂಲಮ್ - 19½

ಸೋಽಪಿ ತಾನ್ವಾನರಾನ್ ಸರ್ವಾನ್ನಷ್ಟಾಃ ಸ್ಥೇತ್ಯಬ್ರವೀದ್ಬಲೀ ॥
ಅಭ್ಯಧಾವತ ಸಂಕ್ರುದ್ಧೋ ಮುಷ್ಟಿ ಮುದ್ಯಮ್ಯ ಸಂಗತಮ್ ।

ಅನುವಾದ

ಆ ಬಲಿಷ್ಠನಾದ ಅಸುರನೂ ಕೂಡ ಆ ಎಲ್ಲ ವಾನರರನ್ನು ನೋಡಿ ನುಡಿದನು - ಆಹಾ! ಇಂದು ನೀವೆಲ್ಲರೂ ಸತ್ತು ಹೋದಿರಿ. ಇಷ್ಟು ಹೇಳಿ ಅವನು ಅತ್ಯಂತ ಕುಪಿತನಾಗಿ ಮುಷ್ಠಿಯನ್ನು ಬಿಗಿದುಕೊಂಡು ಅವರ ಕಡೆಗೆ ಓಡಿದನು.॥19½॥

ಮೂಲಮ್ - 20½

ತಮಾಪತಂತಂ ಸಹಸಾ ವಾಲಿಪುತ್ರೋಂಽಗದಸ್ತದಾ ॥
ರಾವಣೋಽಯಮಿತಿ ಜ್ಞಾತ್ವಾ ತಲೇನಾಭಿಜಘಾನ ಹ ।

ಅನುವಾದ

ಅವನು ಸಟ್ಟನೆ ಆಕ್ರಮಣ ಮಾಡುವುದನ್ನು ನೋಡಿ ವಾಲಿಪುತ್ರ ಅಂಗದನು - ಇವನೇ ರಾವಣನೆಂದು ತಿಳಿದು, ಮುಂದಕ್ಕೆ ಹೋಗಿ ಅವನಿಗೆ ಒಂದು ಏಟನ್ನು ಕೊಟ್ಟನು.॥20½॥

ಮೂಲಮ್ - 21

ಸ ವಾಲಿಪುತ್ರಾಭಿಹತೋ ವಕ್ತ್ರಾಚ್ಚೋಣಿತಮುದ್ವಮನ್ ॥

ಮೂಲಮ್ - 22½

ಅಸುರೋ ನ್ಯಪತದ್ಭೂಮೌ ಪರ್ಯಸ್ತ ಇವ ಪರ್ವತಃ ।
ತೇ ತು ತಸ್ಮಿನ್ನಿರುಚ್ಛ್ವಾಸೇ ವಾನರಾ ಜಿತಕಾಶಿನಃ ॥
ವ್ಯಚಿನ್ವನ್ಪ್ರಾಯಶಸ್ತತ್ರ ಸರ್ವಂ ತೇ ಗಿರಿ ಹ್ವರಮ್ ।

ಅನುವಾದ

ವಾಲಿಪುತ್ರನು ಹೊಡೆದಾಗ ಆ ಅಸುರನು ಬಾಯಿಯಿಂದ ರಕ್ತವನ್ನು ಕಾರುತ್ತಾ ಕುಸಿದು ಬಿದ್ದ ಪರ್ವತದಂತೆ ನೆಲಕ್ಕೆ ಉರುಳಿದನು ಹಾಗೂ ಅವನ ಪ್ರಾಣಪಕ್ಷಿಯು ಹಾರಿಹೋಯಿತು. ಅನಂತರ ವಿಜಯೋಲ್ಲಾಸದಿಂದ ಸುಶೋಭಿತ ವಾನರರೆಲ್ಲರೂ ಅಲ್ಲಿಯ ಎಲ್ಲ ಪರ್ವತೀಯ ಗುಹೆಗಳಲ್ಲಿ ಸೀತೆಯನ್ನು ಹುಡುಕಿದರು.॥21-22½॥

ಮೂಲಮ್ - 23½

ವಿಚಿತಂ ತು ತತಃ ಸರ್ವಂ ಸರ್ವೇ ತೇ ಕಾನನೌಕಸಃ ॥
ಅನ್ಯದೇವಾಪರಂ ಘೋರಂ ವಿವಿಶುರ್ಗಿರಿಗಹ್ವರಮ್ ।

ಅನುವಾದ

ಅಲ್ಲಿಯ ಎಲ್ಲ ಪ್ರದೇಶದಲ್ಲಿ ಹುಡುಕಿದ ಬಳಿಕ ಆ ಸಮಸ್ತ ವನವಾಸೀ ವಾನರರು ಯಾವುದೋ ಇನ್ನೊಂದು ಪರ್ವತೀಯ ತಪ್ಪಲನ್ನು ಪ್ರವೇಶಿಸಿದರು. ಅದು ಮೊದಲಿಗಿಂತಲೂ ಹೆಚ್ಚು ಭಯಾನಕವಾಗಿತ್ತು.॥23½॥

ಮೂಲಮ್ - 24

ತೇ ವಿಚಿತ್ಯ ಪುನಃ ಖಿನ್ನಾ ವಿನಿಷ್ಪತ್ಯ ಸಮಾಗತಾಃ ।
ಏಕಾಂತೇ ವೃಕ್ಷಮೂಲೇ ತು ನಿಷೇದುರ್ದೀನಮಾನಸಾಃ ॥

ಅನುವಾದ

ಅದರಲ್ಲಿಯೂ ಹುಡುಕಿ-ಹುಡುಕಿ ಅವರು ಬಳಲಿ ಹೋದರು ಹಾಗೂ ನಿರಾಶರಾಗಿ ಎಲ್ಲರೂ ಏಕಾಂತ ಸ್ಥಾನದಲ್ಲಿ ಒಂದು ಮರದ ಕೆಳಗೆ ಖಿನ್ನಚಿತ್ತರಾಗಿ ಕುಳಿತುಬಿಟ್ಟರು.॥24॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಲವತ್ತೆಂಟನೆಯ ಸರ್ಗ ಪೂರ್ಣವಾಯಿತು.॥48॥