वाचनम्
ಭಾಗಸೂಚನಾ
ಪೂರ್ವವೇ ಮೊದಲಾದ ಮೂರು ದಿಕ್ಕುಗಳಿಗೆ ಹೋಗಿರುವ ವಾನರರು ನಿರಾಶರಾಗಿ ಮರಳಿದುದು
ಮೂಲಮ್ - 1
ದರ್ಶನಾರ್ಥಂ ತು ವೈದೇಹ್ಯಾಃ ಸರ್ವತಃ ಕಪಿಕುಂಜರಾಃ ।
ವ್ಯಾದಿಷ್ಟಾಃ ಕಪಿರಾಜೇನ ಯಥೋಕ್ತಂ ಜಗ್ಮುರಂಜಸಾ ॥
ಅನುವಾದ
ವಾನರರಾಜನಿಂದ ಎಲ್ಲ ದಿಕ್ಕುಗಳಿಗೆ ಹೋಗಲು ಅಪ್ಪಣೆ ಪಡೆದು ಆ ಎಲ್ಲ ಶ್ರೇಷ್ಠ ವಾನರರು ಅವರಿಗೆ ದೊರೆತ ಆದೇಶದಂತೆ ಅದೇ ದಿಕ್ಕಿಗೆ ವಿದೇಹಕುಮಾರೀ ಸೀತೆಯನ್ನು ಹುಡುಕಲು ಉತ್ಸಾಹದಿಂದ ಹೊರಟರು.॥1॥
ಮೂಲಮ್ - 2
ತೇ ಸರಾಂಸಿ ಸರಿತ್ಕಕ್ಷಾನಾಕಾಶಂ ನಗರಾಣಿ ಚ ।
ನದೀದುರ್ಗಾಂಸ್ತಥಾ ಶೈಲಾನ್ವಿಚಿನ್ವಂತಿ ಸಮಂತತಃ ॥
ಅನುವಾದ
ಅವರು ಸರೋವರ, ನದಿಗಳನ್ನು, ಲತಾ ಕುಂಜಗಳನ್ನು, ಬಯಲುಸ್ಥಳ, ಹಾಗೂ ನಗರಗಳಲ್ಲಿ, ನದಿಗಳ ದುರ್ಗಮ ಪ್ರದೇಶಗಳಲ್ಲಿ ಎಲ್ಲೆಡೆ ತಿರುಗಾಡಿ ಸೀತೆಯನ್ನು ಹುಡುಕತೊಡಗಿದರು.॥2॥
ಮೂಲಮ್ - 3
ಸುಗ್ರೀವೇಣ ಸಮಾಖ್ಯಾತಾಃ ಸರ್ವೇ ವಾನರಯೂಥಪಾಃ ।
ಕತ್ರದೇಶಾನ್ವಿಚಿನ್ವಂತಿ ಸಶೈಲವನಕಾನನಾನ್ ॥
ಅನುವಾದ
ಸುಗ್ರೀವನಿಂದ ಆಜ್ಞಪ್ತರಾದ ಆ ಎಲ್ಲ ವಾನರ ಯೂಧ ಪತಿಗಳು ತಮ್ಮ-ತಮ್ಮ ದಿಕ್ಕುಗಳ ಪರ್ವತ, ವನ, ಅರಣ್ಯಗಳ ಸಹಿತ ಎಲ್ಲ ದೇಶಗಳನ್ನು ಜಾಲಾಡಿಬಿಟ್ಟರು.॥3॥
ಮೂಲಮ್ - 4
ವಿಚಿತ್ಯ ದಿವಸಂ ಸರ್ವೇ ಸೀತಾಧಿಗಮನೇ ಧೃತಾಃ ।
ಸಮಾಯಂತಿ ಸ್ಮ ಮೇದಿನ್ಯಾಂ ನಿಶಾಕಾಲೇಷು ವಾನರಾಃ ॥
ಅನುವಾದ
ಸೀತೆಯನ್ನು ಹುಡುಕಲು ನಿಶ್ಚಿತ ಇಚ್ಛೆಯಿಂದ ಆ ಎಲ್ಲ ವಾನರರು ದಿನವಿಡೀ ಅತ್ತ-ಇತ್ತ ಅನ್ವೇಷಣೆ ಮಾಡುತ್ತಾ ರಾತ್ರಿಯಲ್ಲಿ ಯಾವುದಾದರೂ ನಿಯತ ಸ್ಥಾನದಲ್ಲಿ ಏಕತ್ರಿತರಾಗುತ್ತಿದ್ದರು.॥4॥
ಮೂಲಮ್ - 5
ಸರ್ವರ್ತುಕಾಂಶ್ಚ ದೇಶೇಷು ವಾನರಾಃ ಸಫಲದ್ರುಮಾನ್ ।
ಆಸಾದ್ಯ ರಜನೀಂ ಶಯ್ಯಾಂ ಚಕ್ರುಃ ಸರ್ವೆಷ್ವಹಃಸು ತೇ ॥
ಅನುವಾದ
ಇಡೀ ದಿನ ಬೇರೆ-ಬೇರೆ ದೇಶಗಳಲ್ಲಿ ಅಲೆದು ಆ ವಾನರರು ಎಲ್ಲ ಋತುಗಳಲ್ಲಿ ಹಣ್ಣನ್ನು ಕೊಡುವ ವೃಕ್ಷಗಳ ಬಳಿಗೆ ಹೋಗಿ ರಾತ್ರೆಯಲ್ಲಿ ಅಲ್ಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು.॥5॥
ಮೂಲಮ್ - 6
ತದಹಃ ಪ್ರಥಮಂ ಕೃತ್ವಾ ಮಾಸೇ ಪ್ರಸ್ರವಣಂ ಗತಾಃ ।
ಕಪಿರಾಜೇನ ಸಂಗಮ್ಯ ನಿರಾಶಾಃ ಕಪಿಕುಂಜರಾಃ ॥
ಅನುವಾದ
ಹೊರಟ ದಿನವನ್ನು ಮೊದಲ ದಿನವೆಂದು ತಿಳಿದು ಒಂದು ತಿಂಗಳು ಪೂರ್ತಿಯಾಗುವವರೆಗೆ ಆ ಶ್ರೇಷ್ಠ ವಾನರರು ನಿರಾಶರಾಗಿ ಮರಳಿ ಬಂದು, ಕಪಿರಾಜ ಸುಗ್ರೀವನಿಗೆ ಭೆಟ್ಟಿಯಾಗಿ ಪ್ರಸ್ರವಣಗಿರಿಯಲ್ಲಿ ಉಳಿದುಕೊಂಡರು.॥6॥
ಮೂಲಮ್ - 7
ವಿಚಿತ್ಯ ತು ದಿಶಂ ಪೂರ್ವಾಂ ಯಥೋಕ್ತಾಂ ಸಚಿವೈಃ ಸಹ ।
ಅದೃಷ್ಟ್ವಾ ವಿನತಃ ಸೀತಾಮಾಜಗಾಮ ಮಹಾಬಲಃ ॥
ಅನುವಾದ
ಮಹಾಬಲೀ ವಿನತನು ತನ್ನ ಮಂತ್ರಿಗಳೊಂದಿಗೆ ಮೊದಲು ಹೇಳಿದಂತೆ ಪೂರ್ವದಿಕ್ಕಿನಲ್ಲಿ ಹುಡುಕಿ, ಅಲ್ಲಿ ಸೀತೆಯು ದೊರೆಯದೇ ಕಿಷ್ಕಿಂಧೆಗೆ ಮರಳಿ ಬಂದನು.॥7॥
ಮೂಲಮ್ - 8
ದಿಶಮಪ್ಯುತ್ತರಾಂ ಸರ್ವಾಂ ವಿವಿಚ್ಯ ಚ ಮಹಾಕಪಿಃ ।
ಆಗತಃ ಸಹ ಸೈನ್ಯೇನ ಭೀತಃ ಶತಬಲಿಸ್ತದಾ ॥
ಅನುವಾದ
ಮಹಾಕಪಿ ಶತಬಲಿಯು ಎಲ್ಲ ಉತ್ತರ ದಿಕ್ಕನ್ನು ಜಾಲಾಡಿ ಭಯಗೊಂಡು ಕೂಡಲೇ ಸೈನ್ಯಸಹಿತ ಕಿಷ್ಕಿಂಧೆಗೆ ಮರಳಿದನು.॥8॥
ಮೂಲಮ್ - 9
ಸುಷೇಣಃ ಪಶ್ಚಿಮಾಮಾಶಾಂ ವಿವಿಚ್ಯ ಸಹ ವಾನರೈಃ ।
ಸಮೇತ್ಯ ಮಾಸೇ ಪೂರ್ಣೇ ತು ಸುಗ್ರೀವಮುಪಚಕ್ರಮೇ ॥
ಅನುವಾದ
ವಾನರರ ಸಹಿತ ಸುಷೇಣನು ಪಶ್ಚಿಮದಿಕ್ಕಿನ ಅನುಸಂಧಾನಗೈದು ಅಲ್ಲಿ ಸೀತೆಯು ದೊರೆಯದೆ ಒಂದು ತಿಂಗಳು ಪೂರ್ಣವಾದಾಗ ಸುಗ್ರೀವನ ಬಳಿಗೆ ಬಂದನು.॥9॥
ಮೂಲಮ್ - 10
ತಂ ಪ್ರಸ್ರವಣಪೃಷ್ಠಸ್ಥಂ ಸಮಾಸಾದ್ಯಾಭಿವಾದ್ಯ ಚ ।
ಆಸೀನಂ ಸಹ ರಾವೇಣ ಸುಗ್ರೀವಮಿದಮಬ್ರುವನ್ ॥
ಅನುವಾದ
ಪ್ರಸ್ರವಣ ಗಿರಿಯಮೇಲೆ ಶ್ರೀರಾಮನೊಂದಿಗೆ ಕುಳಿತಿರುವ ಸುಗ್ರೀವನ ಬಳಿಗೆ ಬಂದು ವಾನರರು ಅವನಿಗೆ ನಮಸ್ಕರಿಸಿ, ಈ ಪ್ರಕಾರ ಹೇಳಿದರು .॥10॥
ಮೂಲಮ್ - 11
ವಿಚಿತಾಃ ಪರ್ವತಾಃ ಸರ್ವೇ ವನಾನಿ ಗಹನಾನಿ ಚ ।
ನಿಮ್ನಗಾಂ ಸಾಗರಾಂತಾಶ್ಚ ಸರ್ವೇ ಜನಪದಾಶ್ಚ ಯೇ ॥
ಮೂಲಮ್ - 12
ಗುಹಾಶ್ಚ ವಿಚಿತಾಃ ಸರ್ವಾಯಾಶ್ಚ ತೇ ಪರಿಕೀರ್ತಿತಾಃ ।
ವಿಚಿತಾಶ್ಚ ಮಹಾಗುಲ್ಮಾ ಲತಾವಿತತಸಂತತಾಃ ॥
ಅನುವಾದ
ರಾಜನೇ! ನಾವು ಸಮಸ್ತ ಪರ್ವತಗಳಲ್ಲಿ ನಿಬಿಡ ಅರಣ್ಯಗಳಲ್ಲಿ, ಸಮುದ್ರದವರೇಗಿನ ನದಿಗಳಲ್ಲಿ, ಎಲ್ಲ ದೇಶಗಳಲ್ಲಿ, ನೀನು ತಿಳಿಸಿದಂತೆ ಎಲ್ಲ ಗುಹೆಗಳಲ್ಲಿ, ಲತಾ ಮಂಟಪದಿಂದ ಕೂಡಿದ ಪೊದೆಗಳಲ್ಲಿಯೂ ಹುಡುಕಿದೆವು.॥11-12॥
ಮೂಲಮ್ - 13
ಗಹನೇಷು ಚ ದೇಶೇಷು ದುರ್ಗೇಷು ವಿಷಮೇಷು ಚ ।
ಸತ್ತ್ವಾನ್ಯತಿಪ್ರಮಾಣಾನಿ ವಿಚಿತಾನಿ ಹತಾನಿ ಚ ।
ಯೇ ಚೈವ ಗಹನಾ ದೇಶಾ ವಿಚಾತಾಸ್ತೇ ಪುನಃ ಪುನಃ ॥
ಅನುವಾದ
ಘನವಾದ ವನಗಳಲ್ಲಿ, ಬೇರೆ-ಬೇರೆ ದೇಶಗಳಲ್ಲಿ, ದುರ್ಗಮಸ್ಥಾನಗಳಲ್ಲಿ, ಎತ್ತರ-ತಗ್ಗಾದ ಭೂಪ್ರದೇಶಗಳಲ್ಲಿ ಹುಡುಕಿದೆವು. ದೊಡ್ಡ-ದೊಡ್ಡ ಪ್ರಾಣಿಗಳನ್ನೂ ಪರೀಕ್ಷಿಸಿದೆವು ಹಾಗೂ ಅವುಗಳನ್ನು ಕೊಂದುಹಾಕಿದೆವು. ಕಂಡು ಬಂದ ಪ್ರದೇಶಗಳಲ್ಲಿ, ದಟ್ಟವಾದ ಕಾಡುಗಳಲ್ಲಿ, ದುರ್ಗಮವೆಂದು ತೋರುವಲ್ಲಿ ಪದೇ-ಪದೇ ಹುಡುಕಿದೆವು. (ಆದರೆ ಸೀತೆಯು ಕಂಡುಬಂದಿಲ್ಲ..॥13॥
ಮೂಲಮ್ - 14
ಉದಾರಸತ್ತ್ವಾಭಿಜನೋ ಹನೂಮಾನ್
ಸ ಮೈಥಿಲೀಂ ಜ್ಞಾಸ್ಯತಿ ವಾನರೇಂದ್ರ ।
ದಿಶಂ ತು ಯಾಮೇವ ಗತಾ ತು ಸೀತಾ
ತಾಮಾಸ್ಥಿತೋ ವಾಯುಸುತೋ ಹನುಮಾನ್ ॥
ಅನುವಾದ
ವಾನರರಾಜನೇ! ವಾಯುಪುತ್ರ ಹನುಮಂತನು ಪರಮ ಶಕ್ತಿವಂತ ಮತ್ತು ಕುಲೀನನಾಗಿದ್ದಾನೆ ಅವನೇ ಮಿಥಿಲೇಶ ಕುಮಾರಿಯನ್ನು ಹುಡುಕಬಲ್ಲನು; ಏಕೆಂದರೆ ಅವನು ಸೀತೆಯು ಹೋದ ದಿಕ್ಕಿನ ಕಡೆಗೆ ಹೋಗಿರುವನು.॥14॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಲವತ್ತೇಳನೆಯ ಸರ್ಗ ಸಂಪೂರ್ಣವಾಯಿತು.॥47॥