०४६ दुन्दुभिवृत्तान्तः

वाचनम्
ಭಾಗಸೂಚನಾ

ಸುಗ್ರೀವನು ಶ್ರೀರಾಮನಿಗೆ ತಾನು ಮಾಡಿದ ಭೂಮಂಡಲ ಪ್ರದಕ್ಷಿಣೆಯ ವೃತ್ತಾಂತವನ್ನು ತಿಳಿಸಿದುದು

ಮೂಲಮ್ - 1

ಗತೇಷು ವಾನರೇಂದ್ರೇಷು ರಾಮಃ ಸುಗ್ರೀವಮಬ್ರವೀತ್ ।
ಕಥಂ ಭವಾನ್ವಿಜಾನೀತೇ ಸರ್ವಂ ವೈ ಮಂಡುಲಂ ಭುವಃ ॥

ಅನುವಾದ

ಆ ಸಮಸ್ತ ವಾನರಯೂಥಪತಿಗಳು ಹೊರಟುಹೋದ ಬಳಿಕ ಶ್ರೀರಾಮಚಂದ್ರನು ಸುಗ್ರೀವನ ಬಳಿ ಕೇಳಿದನು-ಸಖನೇ! ನೀನು ಸಮಸ್ತ ಭೂಮಂಡಲದ ಸ್ಥಾನಗಳನ್ನು ಹೇಗೆ ತಿಳಿದಿರುವಿ.॥1॥

ಮೂಲಮ್ - 2

ಸುಗ್ರೀವಶ್ಚ ತತೋ ರಾಮಮುವಾಚ ಪ್ರಣತಾತ್ಮವಾನ್ ।
ಶ್ರೂಯತಾಂ ಸರ್ವಮಾಖ್ಯಾಸ್ಯೇ ವಿಸ್ತರೇಣ ವಚೋ ಮಮ ॥

ಅನುವಾದ

ಆಗ ಸುಗ್ರೀವನು ವಿನೀತನಾಗಿ ಶ್ರೀರಾಮಚಂದ್ರನಲ್ಲಿ ಹೇಳಿದನು - ಭಗವಂತನೇ! ನಾನು ಎಲ್ಲವನ್ನು ವಿಸ್ತಾರದೊಂದಿಗೆ ಹೇಳುತ್ತೇನೆ. ನನ್ನ ಮಾತನ್ನು ಕೇಳು.॥2॥

ಮೂಲಮ್ - 3

ಯದಾ ತು ದುಂದುಭಿಂ ನಾಮ ದಾನವಂ ಮಹಿಷಾಕೃತಿಮ್ ।
ಪ್ರತಿಕಾಲಯತೇ ವಾಲೀ ಮಲಯಂ ಪ್ರತಿ ಪರ್ವತಮ್ ॥

ಮೂಲಮ್ - 4

ತದಾ ವಿವೇಶ ಮಹಿಷೋ ಮಲಯಸ್ಯ ಗುಹಾಂ ಪ್ರತಿ ।
ವಿವೇಶ ವಾಲೀ ತತ್ರಾಪಿ ಮಲಯಂ ತಜ್ಜಿಘಾಂಸಯಾ ॥

ಅನುವಾದ

ವಾಲಿಯು ಮಹಿಷರೂಪಧಾರೀ ದಾನವ ದುಂದುಬಿ* (ಅವನ ಪುತ್ರ ಮಾಯಾವಿ)ಯನ್ನು ಹಿಂಬಾಲಿಸಿದಾಗ ಆ ಮಹಿಷಪರ್ವತದ ಕಡೆಗೆ ಓಡಿದ ಮತ್ತು ಪರ್ವತದ ಗುಹೆಯನ್ನು ಹೊಕ್ಕನು. ಇದನ್ನು ನೋಡಿ ವಾಲಿಯು ಅವನನ್ನು ವಧಿಸಲು ಆ ಗುಹೆಯೊಳಗೆ ಪ್ರವೇಶಿಸಿದನು.॥3-4॥

ಟಿಪ್ಪನೀ
  • ಇಲ್ಲಿ ದುಂದುಭಿ ಮತ್ತು ಮಹಿಷ ಶಬ್ದದಿಂದ ಅವನ ಪುತ್ರ ಮಾಯಾವೀ ಎಂಬ ದಾನವನ ವರ್ಣನೆಯೇ ಇದೆ ಎಂದು ತಿಳಿಯಬೇಕು ; ಏಕೆಂದರೆ ಮುಂದೆ ಹೇಳಿದ ಎಲ್ಲ ವೃತ್ತಾಂತವು ಅವನ ಸಂಬಂಧಿತವೇ ಆಗಿದೆ. ತಂದೆ ಕೋಣನ ರೂಪವನ್ನು ಧರಿಸುತ್ತಿದ್ದನು. ಇದೇ ಗುಣ ಅವನ ಪುತ್ರ ಮಾಯಾವಿಯಲ್ಲಿಯೂ ಇತ್ತು. ಅದಕ್ಕಾಗಿ ಅವನನ್ನು ಮಹಿಷ ಅಥವಾ ಮಹಿಷಾಕೃತಿ ಎಂದಿರುವುದು ಅಸಂಗತವಾಗುವುದಿಲ್ಲ.
ಮೂಲಮ್ - 5

ತತೋಽಹಂ ತತ್ರ ನಿಕ್ಷಿಪ್ತೋ ಗುಹಾದ್ವಾರಿ ವಿನೀತವತ್ ।
ನ ಚ ನಿಷ್ಕ್ರಾಮತೇ ವಾಲೀ ತದಾ ಸಂವತ್ಸರೇ ಗತೇ ॥

ಅನುವಾದ

ಆಗ ನಾನು ವಿನೀತಭಾವದಿಂದ ಆ ಗುಹೆಯ ದ್ವಾರದಲ್ಲಿ ನಿಂತಿದ್ದೆ; ಏಕೆಂದರೆ ವಾಲಿಯು ನನ್ನನ್ನು ಅಲ್ಲೇ ಬಿಟ್ಟಿದ್ದನು. ಆದರೆ ಒಂದು ವರ್ಷ ಕಳೆದು ಹೋದರೂ ವಾಲಿಯು ಗುಹೆಯಿಂದ ಹೊರಗೆ ಬಂದಿಲ್ಲ.॥5॥

ಮೂಲಮ್ - 6

ತತಃ ಕ್ಷತಜವೇಗೇನ ಆಪುಪೂರೇ ತದಾ ಬಿಲಮ್ ।
ತದಹಂ ವಿಸ್ಮಿತೋ ದೃಷ್ಟ್ವಾ ಭ್ರಾತುಃ ಶೋಕವಿಷಾರ್ದಿತಃ ॥

ಅನುವಾದ

ಅನಂತರ ವೇಗವಾಗಿ ಹರಿಯುತ್ತಿದ್ದ ರಕ್ತದ ಧಾರೆಯಿಂದ ಆ ಗುಹೆಯೆಲ್ಲ ತುಂಬಿಹೋಯಿತು. ಇದನ್ನು ನೋಡಿ ನನಗೆ ಬಹಳ ವಿಸ್ಮಯವಾಯಿತು ಹಾಗೂ ನಾನು ಅಣ್ಣನ ಶೋಕದಿಂದ ವ್ಯಥಿತನಾದೆ.॥6॥

ಮೂಲಮ್ - 7

ಅಥಾಹಂಗತಬುದ್ಧಿಸ್ತು ಸುವ್ಯಕ್ತಂ ನಿಹತೋ ಗುರುಃ ।
ಶಿಲಾ ಪರ್ವತಸಂಕಾಶಾ ಬಿಲದ್ವಾರಿ ಮಯಾ ಕೃತಾ ॥

ಅನುವಾದ

ಈಗ ನನ್ನ ಅಣ್ಣನು ನಿಶ್ಚಯವಾಗಿ ಸತ್ತುಹೋದನು ಎಂದು ನನ್ನ ಬುದ್ಧಿಗೆ ಅನಿಸಿತು. ವಿಚಾರ ಬರುತ್ತಲೇ ನಾನು ಆ ಗುಹೆಯ ಬಾಗಿಲಲ್ಲಿ ದೊಡ್ಡದೊಂದು ಬಂಡೆಯನ್ನಿಟ್ಟೆ.॥7॥

ಮೂಲಮ್ - 8

ಅಶಕ್ನುವನ್ನಿಷ್ಕ್ರಮಿತುಂ ಮಹಿಷೋ ವಿನಶಿಷ್ಯತಿ ।
ತತೋಽಹಮಾಗಾಂ ಕಿಷ್ಕಿಂಧಾಂ ನಿರಾಶಸ್ತಸ್ಯ ಜೀವಿತೇ ॥

ಅನುವಾದ

ಈ ಬಂಡೆಯಿಂದ ಬಾಗಿಲು ಮುಚ್ಚಿದ್ದರಿಂದ ವಾಯಾವಿ ಹೊರಗೆ ಬರಲಾರನು, ಒಳಗೆ ಉಸಿರುಕಟ್ಟಿ ಸಾಯುವನು ಎಂದು ಯೋಚಿಸಿದೆ. ಬಳಿಕ ಅಣ್ಣನು ಮಡಿದಿರಬಹುದೆಂದು ಯೋಜಿಸಿ ನಿರಾಶನಾಗಿ ನಾನು ಕಿಷ್ಕಿಂಧೆಗೆ ಮರಳಿ ಬಂದೆ.॥8॥

ಮೂಲಮ್ - 9

ರಾಜ್ಯಂ ಚ ಸುಮಹತ್ ಪ್ರಾಪ್ಯ ತಾರಾಂ ಚ ರುಮಯಾ ಸಹ ।
ಮಿತ್ರೈಶ್ಚ ಸಹಿತಸ್ತತ್ರ ವಸಾಮಿ ವಿಗತಜ್ವರಃ ॥

ಅನುವಾದ

ಇಲ್ಲಿ ವಿಶಾಲರಾಜ್ಯವನ್ನು ಹಾಗೂ ರುಮಾ ಸಹಿತ ತಾರೆಯನ್ನು ಪಡೆದು ಮಿತ್ರರೊಂದಿಗೆ ನಾನು ನಿಶ್ಚಿಂತನಾಗಿ ಉಳಿದೆ.॥9॥

ಮೂಲಮ್ - 10

ಆಜಗಾಮ ತತೋ ವಾಲೀ ಹತ್ವಾ ತಂ ವಾನರರ್ಷಭಃ ।
ತತೋಽಹಮದದಾಂ ರಾಜ್ಯಂ ಗೌರವಾದ್ಭಯಯಂತ್ರಿತಃ ॥

ಅನುವಾದ

ಅನಂತರ ವಾನರಶ್ರೇಷ್ಠ ವಾಲಿಯು ಆ ದಾನವನನ್ನು ಕೊಂದು ಬಂದುಬಿಟ್ಟನು. ಅವನು ಬರುತ್ತಲೇ ನಾನು ಅಣ್ಣನ ಗೌರವದಿಂದ ಭಯಗೊಂಡು ಆ ರಾಜ್ಯವನ್ನು ಅವನಿಗೆ ಹಿಂದಕ್ಕೆ ಒಪ್ಪಿಸಿದೆ.॥10॥

ಮೂಲಮ್ - 11

ಸ ಮಾಂ ಜಿಘಾಂಸುರ್ದುಷ್ಟಾತ್ಮಾ ವಾಲೀ ಪ್ರವ್ಯಥಿತೇಂದ್ರಿಯಃ ।
ಪರಿಕಾಲಯತೇ ವಾಲೀ ಧಾವಂತಂ ಸಚಿವೈಃ ಸಹ ॥

ಅನುವಾದ

ಆದರೆ ದುಷ್ಟಾತ್ಮಾ ವಾಲಿಯು ನನ್ನನ್ನು ಕೊಂದುಹಾಕಲು ಬಯಸುತ್ತಿದ್ದನು, ಅವನು ‘ಇವನು ನನ್ನನ್ನು ಕೊಲ್ಲಲೆಂದೇ ಗುಹೆಯ ಬಾಗಿಲನ್ನು ಮುಚ್ಚಿ ಓಡಿ ಬಂದಿರುವನು’ ಎಂದು ನನ್ನನ್ನು ಕೊಲ್ಲಲು ಸಂಕಲ್ಪಿಸಿದನು. ಇದರಿಂದ ನನ್ನ ಎಲ್ಲ ಇಂದ್ರಿಯಗಳು ದುಃಖಿತವಾದುವು. ನಾನು ಪ್ರಾಣರಕ್ಷಣೆಗಾಗಿ ಮಂತ್ರಿಗಳೊಂದಿಗೆ ಓಡಿದೆ; ವಾಲಿಯು ನನ್ನನ್ನು ಬೆನ್ನಟ್ಟಿದನು.॥11॥

ಮೂಲಮ್ - 12

ತತೋಽಹಂ ವಾಲಿನಾ ತೇನ ಸೋಽಮಬದ್ಧಃ ಪ್ರಧಾವಿತಃ ।
ನದೀಶ್ಚ ವಿವಿಧಾಃ ಪಶ್ಯನ್ವಾನಾನಿ ನಗರಾಣಿ ಚ ॥

ಮೂಲಮ್ - 13

ಆದರ್ಶತಲಸಂಕಾಶಾ ತತೋ ವೈ ಪೃಥವೀಮಯಾ ।
ಅಲಾತಚಕ್ರಪ್ರತಿಮಾ ದೃಷ್ಟಾ ಗೋಷ್ಪದವತ್ ಕೃತಾ ॥

ಅನುವಾದ

ವಾಲಿಯು ನನ್ನನ್ನು ಅಟ್ಟಿಸಿಕೊಂಡು ಬಂದಾಗ ನಾನು ಜೋರಾಗಿ ಓಡಿದೆ. ಆಗಲೇ ನಾನು ಬೇರೆ-ಬೇರೆ ನದಿಗಳನ್ನು, ವನಗಳನ್ನು, ನಗರಗಳನ್ನು ನೋಡುತ್ತಾ ಇಡೀ ಪೃಥಿವಿಯನ್ನು ಹಸುವಿನ ಗೊರಸಿನಂತೆ ತಿಳಿದು ಅದರ ಪ್ರದಕ್ಷಿಣೆ ಮಾಡಿದೆ. ಓಡುವಾಗ ನನಗೆ ಈ ಭೂಮಿಯು ದರ್ಪಣದಂತೆ, ಬೆಂಕಿಯ ಚಕ್ರದಂತೆ ಕಂಡಿತು.॥12-13॥

ಮೂಲಮ್ - 14

ಪೂರ್ವಾಂ ದಿಶಂ ತತೋ ಗತ್ವಾ ಪಶ್ಯಾಮಿ ವಿವಿಧಾನ್ ಧ್ರುಮಾನ್ ।
ಪರ್ವತಾನ್ ಸದರೀನ್ ರಮ್ಯಾನ್ ಸರಾಂಸಿ ವಿವಿಧಾನಿ ಚ ॥

ಅನುವಾದ

ಅನಂತರ ಪೂರ್ವದಿಕ್ಕಿಗೆ ಹೋಗಿ ನಾನು ನಾನಾ ಪ್ರಕಾರದ ಕಂದಕಗಳ ಸಹಿತ ರಮಣೀಯ ಪರ್ವತಗಳನ್ನು ಮತ್ತು ಬಗೆ-ಬಗೆಯ ಸರೋವರಗಳನ್ನು ನೋಡಿದೆ.॥14॥

ಮೂಲಮ್ - 15

ಉದಯಂ ತತ್ರ ಪಶ್ಯಾಮಿ ಪರ್ವತಂ ಧಾತುಮಂಡಿತಮ್ ।
ಕ್ಷೀರೋದಂ ಸಾಗರಂ ಚೈವ ನಿತ್ಯಮಪ್ಸರಸಾಲಯಮ್ ॥

ಅನುವಾದ

ಅಲ್ಲಿ ನಾನಾ ಪ್ರಕಾರದ ಧಾತುಗಳಿಂದ ಕೂಡಿದ ಉದಯಾಚಲ ಹಾಗೂ ಅಪ್ಸರೆಯರ ನಿತ್ಯ ನಿವಾಸಸ್ಥಾನ ಕ್ಷಿರೋದ ಸಾಗರ ವನ್ನು ದರ್ಶಿಸಿದೆ.॥15॥

ಮೂಲಮ್ - 16

ಪರಿಕಾಲ್ಯಮಾನಸ್ತದಾ ವಾಲಿನಾಭಿದ್ರುತೋ ಹ್ಯಹಮ್ ।
ಪುನರಾವೃತ್ಯ ಸಹಸಾ ಪ್ರಸ್ಥಿತೋಽಹಂ ತದಾ ವಿಭೋ ॥

ಅನುವಾದ

ಆಗ ವಾಲಿಯು ಬೆನ್ನಟ್ಟುತ್ತಲೇ ಇದ್ದ ಮತ್ತು ನಾನು ಓಡುತ್ತಲೇ ಇದ್ದೆ. ಪ್ರಭೋ! ನಾನು ಇಲ್ಲಿಗೆ ಮರಳಿ ಬಂದಾಗ ವಾಲಿಯ ಭಯದಿಂದ ಪುನಃ ಕೂಡಲೇ ನನಗೆ ಓಡಬೇಕಾಯಿತು.॥16॥

ಮೂಲಮ್ - 17

ದಿಶಸ್ತಸ್ಯಾಸ್ತತೋ ಭೂಯಃ ಪ್ರಸ್ಥಿತೋ ದಕ್ಷಿಣಾಂ ದಿಶಮ್ ।
ವಿಂಧ್ಯ ಪಾದಪಸಂಕೀರ್ಣಾಂ ಚಂದನದ್ರುಮಶೋಭಿತಾಮ್ ॥

ಅನುವಾದ

ಆ ದಿಕ್ಕನ್ನು ಬಿಟ್ಟು ನಾನು ಮತ್ತೆ ದಕ್ಷಿಣ ದಿಕ್ಕಿಗೆ ಹೊರಟೆ. ಅಲ್ಲಿ ವಿಂದ್ಯಪರ್ವತ ಮತ್ತು ನಾನಾ ಪ್ರಕರಾದ ವೃಕ್ಷಗಳು ತುಂಬಿದ ಗಂಧದ ಮರಗಳಿಂದ ಸುಶೋಭಿತವಾದುದನ್ನು ನೋಡಿದೆ.॥17॥

ಮೂಲಮ್ - 18

ದ್ರುಮಶೈಲಾಂತರೇ ಪಶ್ಯನ್ಭೂಯೋ ದಕ್ಷಿಣತೋಽಪರಾನ್ ।
ಪಶ್ಚಿಮಾಂ ಚ ದಿಶಂ ಪ್ರಾಪ್ತೋ ವಾಲಿನಾ ಸಮಭಿದ್ರುತಃ ॥

ಅನುವಾದ

ವೃಕ್ಷಗಳು ಮತ್ತು ಪರ್ವತ ತಪ್ಪಲುಗಳಲ್ಲಿ ಪದೇ-ಪದೇ ವಾಲಿಯನ್ನು ನೋಡಿ ನಾನು ದಕ್ಷಿಣದಿಕ್ಕನ್ನು ಬಿಟ್ಟು, ವಾಲಿಯು ಅಟ್ಟಿಸಿಕೊಂಡು ಬಂದಿದ್ದರಿಂದ ಪಶ್ಚಿಮ ದಿಕ್ಕನ್ನು ಆಶ್ರಯಿಸಿದೆ.॥18॥

ಮೂಲಮ್ - 19

ಸಪಶ್ಯನ್ ವಿವಿಧಾನ್ ದೇಶಾನಸ್ತಂ ಚ ಗಿರಿಸತ್ತಮಮ್ ।
ಪ್ರಾಪ್ಯ ಚಾಸ್ತಂ ಗಿರಿಶ್ರೇಷ್ಠಮುತ್ತರಂ ಸಂಪ್ರಧಾವಿತಃ ॥

ಅನುವಾದ

ಅಲ್ಲಿ ನಾನಾ ಪ್ರಕಾರದ ದೇಶಗಳನ್ನು ನೋಡುತ್ತಾ ನಾನು ಗಿರಿಶ್ರೇಷ್ಠ ಅಸ್ತಾಚಲವನ್ನು ಸೇರಿದೆ. ಅಲ್ಲಿಗೆ ತಲುಪಿ ನಾನು ಪುನಃ ಉತ್ತರ ದಿಕ್ಕಿಗೆ ಓಡಿದೆ.॥19॥

ಮೂಲಮ್ - 20½

ಹಿಮವಂತಂ ಚ ಮೇರುಂ ಚ ಸಮುದ್ರಂ ಚ ತಥೋತ್ತಮ್ ।
ಯದಾ ನ ವಿಂದೇ ಶರಣಂ ವಾಲಿನಾ ಸಮಭಿದ್ರುತಃ ॥
ತತೋ ಮಾಂ ಬುದ್ಧಿಸಂಪನ್ನೋ ಹನುಮಾನ್ ವಾಕ್ಯಮಬ್ರವೀತ್ ।

ಅನುವಾದ

ಹಿಮಾಲಯ, ಮೇರು ಮತ್ತು ಉತ್ತರ ಸಮುದ್ರದವರೆಗೆ ಹೋದರೂ ವಾಲಿಯು ಬೆನ್ನತ್ತಿದ್ದರಿಂದ ನನಗೆ ಎಲ್ಲಿಯೂ ಆಶ್ರಯ ಸಿಗದಿದ್ದಾಗ ಪರಮ ಬುದ್ಧಿವಂತ ಹನುಮಂತನು ನನಗೆ ಈ ಮಾತನ್ನು ಹೇಳಿದನು.॥20½॥

ಮೂಲಮ್ - 21

ಇದಾನೀಂ ಮೇ ಸ್ಮೃತಂ ರಾಜನ್ಯಥಾ ವಾಲೀ ಹರೀಶ್ವರಃ ॥

ಮೂಲಮ್ - 22

ಮತಂಗೇನ ತದಾ ಶಪ್ತೋ ಹ್ಯಸ್ಮಿನ್ನಾಶ್ರಮಮಂಡಲೇ ।
ಪ್ರವಿಶೇದ್ಯದಿ ವೈ ವಾಲೀ ಮೂರ್ಧಾಸ್ಯ ಶತಧಾ ಭವೇತ್ ॥

ಅನುವಾದ

ರಾಜನೇ! ಈಗ ನನಗೆ ಜ್ಞಾಪಕವಾಯಿತು-ಮತಂಗ ಮಹಾಮುನಿಗಳು ‘ವಾಲಿಯು ಈ ಆಶ್ರಮಮಂಡಲದಲ್ಲಿ ಪ್ರವೇಶಿಸಿದರೆ ಅವನ ಮಸ್ತಕವು ನೂರಾರು ಹೋಳುಗಳಾಗಲಿ’ ಎಂದು ವಾಲಿಯನ್ನು ಶಪಿಸಿದ್ದರು.॥21-22॥

ಮೂಲಮ್ - 23½

ತತ್ರ ವಾಸಃ ಸುಖೋಽಸ್ಮಾಕಂ ನಿರುದ್ವಿಗ್ನೋ ಭವಿಷ್ಯತಿ ।
ತತಃ ಪರ್ವತಮಾಸಾದ್ಯ ಋಷ್ಯಮೂಕಂ ನೃಪಾತ್ಮಜ ॥
ನ ವಿವೇಕ ತದಾ ವಾಲೀ ಮತಂಗಸ್ಯ ಭಯಾತ್ತದಾ ।

ಅನುವಾದ

ಆದ್ದರಿಂದ ಅಲ್ಲಿ ನೆಲೆಸುವುದು ನಮಗೆ ಸುಖಮಯ ಮತ್ತು ನಿರ್ಭಯವಾಗುವುದು. ರಾಜಕುಮಾರ! ಈ ನಿಶ್ಚಯಕ್ಕೆ ಅನುಸಾರ ನಾವು ಋಷ್ಯಮೂಕ ಪರ್ವತದ ಮೇಲೆ ಬಂದು ಇರತೊಡಗಿದೆವು. ಆಗ ಮತಂಗ ಋಷಿಯ ಭಯದಿಂದ ವಾಲಿಯು ಅಲ್ಲಿ ಪ್ರವೇಶಿಸಲಿಲ್ಲ.॥23½॥

ಮೂಲಮ್ - 24

ಏವಂ ಮಯಾ ತದಾ ರಾಜನ್ ಪ್ರತ್ಯಕ್ಷಮುಪಲಕ್ಷಿತಮ್ ।
ಪೃಥಿವೀಮಂಡಲಂ ಸರ್ವಂ ಗುಹಾಮಸ್ಮ್ಯಾಗತಸ್ತತಃ ॥

ಅನುವಾದ

ಶ್ರೀರಾಮನೇ! ಹೀಗೆ ನಾನು ಆ ದಿನಗಳಲ್ಲಿ ಸಮಸ್ತ ಭೂಮಂಡಲವನ್ನು ಪ್ರತ್ಯಕ್ಷವಾಗಿ ನೋಡಿದ್ದೆ. ಬಳಿಕ ಋಷ್ಯಮೂಕದ ಗುಹೆಗೆ ಬಂದಿದ್ದೆ.॥24॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಲವತ್ತಾರನೆಯ ಸರ್ಗ ಸಂಪೂರ್ಣವಾಯಿತು.॥46॥