०४५ वानरसेनाप्रस्थानम्

वाचनम्
ಭಾಗಸೂಚನಾ

ನಾನಾ ದಿಕ್ಕುಗಳಿಗೆ ಹೋಗಲು ಸುಗ್ರೀವನಿಂದ ಆಜ್ಞಪ್ತರಾದ ವಾನರರ ಉತ್ಸಾಹಪೂರ್ಣವಾದ ವಿರೋಕ್ತಿಗಳು

ಮೂಲಮ್ - 1

ಸರ್ವಾಂಶ್ಚಾಹೂಯ ಸುಗ್ರೀವಃ ಪ್ಲವಗಾನ್ ಪ್ಲವಗರ್ಷಭಃ ।
ಸಮಸ್ತಾಂಶ್ಚಾಬ್ರವೀದ್ ರಾಜಾ ರಾಮಕಾರ್ಯಾರ್ಥಸಿದ್ಧಯೇ ॥

ಅನುವಾದ

ಕಪಿಶ್ರೇಷ್ಠನಾದ ವಾನರಶಿರೋಮಣಿ ರಾಜಾ ಸುಗ್ರೀವನು ಎಲ್ಲ ಕಪಿನಾಯಕರನ್ನು ಕರೆಸಿ, ಶ್ರೀರಾಮನ ಕಾರ್ಯ ಸಿದ್ಧಿಗಾಗಿ ಅವರೆಲ್ಲರಲ್ಲಿ ಹೇಳಿದನು .॥1॥

ಮೂಲಮ್ - 2½

ಏವಮೇತದ್ವಿಚೇತವ್ಯಂ ಭವದ್ಭಿರ್ವಾನರೋತ್ತಮೈಃ ।
ತದುಗ್ರಶಾಸನಂ ಭರ್ತುರ್ವಿಜ್ಞಾಯ ಹರಿಪುಂಗವಾಃ ॥
ಶಲಭಾ ಇವ ಸಂಛಾದ್ಯ ಮೇದಿನೀಂ ಸಂಪ್ರತಸ್ಥಿರೇ ।

ಅನುವಾದ

ಕಪಿವರರೇ! ನಾನು ತಿಳಿಸಿದಂತೆ ನೀವೆಲ್ಲ ಶ್ರೇಷ್ಠ ವಾನರರು ಈ ಜಗತ್ತಿನಲ್ಲಿ ಸೀತೆಯನ್ನು ಹುಡುಕಬೇಕು. ಒಡೆಯನ ಆ ಕಠೋರ ಆಜ್ಞೆಯನ್ನು ಚೆನ್ನಾಗಿ ತಿಳಿದು ಆ ಶ್ರೇಷ್ಠ ವಾನರರು ಮಿಡತೆ ಹುಳುಗಳಂತೆ ಭೂಮಂಡಲವನ್ನು ಮುಚ್ಚುತ್ತಾ ಸೀತಾನ್ವೇಷಣೆಗಾಗಿ ಹೊರಟರು.॥2½॥

ಮೂಲಮ್ - 3½

ರಾಮಃ ಪ್ರಸ್ರವಣೇ ತಸ್ಮಿನ್ ನ್ಯವಸತ್ಸಹಲಕ್ಷ್ಮಣಃ ॥
ಪ್ರತೀಕ್ಷಮಾಣಸ್ತಂ ಮಾಸಂ ಸೀತಾಧಿಗಮೇ ಕೃತಃ ।

ಅನುವಾದ

ಶ್ರೀರಾಮಚಂದ್ರನು ಲಕ್ಷ್ಮಣನೊಂದಿಗೆ ಆ ಪ್ರಸ್ರವಣಗಿರಿಯಲ್ಲೇ ಇದ್ದು, ಸೀತೆಯ ಸಮಾಚಾರ ತರಲು ನಿಶ್ಚಿತಪಡಿಸಿದ ಒಂದು ತಿಂಗಳು ಅವಧಿಯನ್ನು ಪ್ರತೀಕ್ಷೆ ಮಾಡತೊಡಗಿದನು.॥3½॥

ಮೂಲಮ್ - 4½

ಉತ್ತರಾಂ ತು ದಿಶಂ ರಮ್ಯಾಂ ಗಿರಿರಾಜ ಸಮಾವೃತಾಮ್ ॥
ಪ್ರತಸ್ಥೇ ಸಹಸಾ ವೀರೋ ಹರಿಃ ಶತಬಲಿಸ್ತದಾ ।

ಅನುವಾದ

ಆಗ ವೀರ ವಾನರ ಶತಬಲಿಯು ಗಿರಿರಾಜ ಹಿಮಾಲಯದಿಂದ ಆವೃತವಾದ ರಮಣೀಯ ಉತ್ತರ ದಿಕ್ಕಿನ ಕಡೆಗೆ ಶೀಘ್ರವಾಗಿ ಪ್ರಯಾಣ ಮಾಡಿದನು.॥4½॥

ಮೂಲಮ್ - 5

ಪೂರ್ವಾಂ ದಿಶಂ ಪ್ರತಿಯಯೌ ವಿನತೋ ಹರಿಯೂಥಪಃ ॥

ಮೂಲಮ್ - 6

ತಾರಾಂಗದಾದಿಸಹಿತಃ ಪ್ಲವಗಃ ಪವನಾತ್ಮಜಃ ।
ಅಗಸ್ತ್ಯಾಚರಿತಾಮಾಶಾಂ ದಕ್ಷಿಣಾಂ ಹರಿಯೂಥಪಃ ॥

ಮೂಲಮ್ - 7

ಪಶ್ಚಿಮಾಂ ಚ ದಿಶಂ ಘೋರಾಂ ಸುಷೇಣಃ ಪ್ಲವಗೇಶ್ವರಃ ।
ಪ್ರತಸ್ಥೇ ಹರಿಶಾರ್ದೂಲೋ ದಿಶಂ ವರುಣಪಾಲಿತಾಮ್ ॥

ಅನುವಾದ

ವಾನರ ಯೂಥಪತಿ ವಿನತನು ಪೂರ್ವದಿಕ್ಕಿನ ಕಡೆಗೆ ಹೋದನು. ಕಪಿಗಳ ಅಧಿಪತಿ ಪವನಕುಮಾರ ವಾನರ ಹನುಮಂತನು ತಾರ ಮತ್ತು ಅಂಗದಾದಿಗಳೊಂದಿಗೆ ಅಗಸ್ತ್ಯ ಸೇವಿತ ದಕ್ಷಿಣದಿಕ್ಕಿನ ಕಡೆಗೆ ಹೊರಟನು. ವಾನರೇಶ್ವರ ಕಪಿಶ್ರೇಷ್ಠ ಸುಷೇಣನು ವರುಣನಿಂದ ಸುರಕ್ಷಿತ ಘೋರ ಪಶ್ಚಿಮದಿಕ್ಕಿಗೆ ಪ್ರಯಾಣ ಮಾಡಿದನು.॥5-7॥

ಮೂಲಮ್ - 8

ತತಃ ಸರ್ವಾ ದಿಶೋ ರಾಜಾ ಚೋದಯಿತ್ವಾ ಯಥಾತಥಮ್ ।
ಕಪಿಸೇನಾಪತೀರ್ವೀರೋ ಮುಮೋದ ಸುಖಿತಃ ಸುಖಮ್ ॥

ಅನುವಾದ

ವಾನರ ಸೈನ್ಯದ ಸ್ವಾಮಿ ವೀರ ರಾಜಾ ಸುಗ್ರೀವನು ಸಮಸ್ತ ದಿಕ್ಕುಗಳಿಗೆ ಯಥಾಯೋಗ್ಯ ವಾನರರನ್ನು ಕಳಿಸಿ ಬಹಳ ಸುಖೀಯಾದನು ಹಾಗೂ ಮನಸ್ಸಿನಲ್ಲೇ ಹರ್ಷಗೊಂಡನು.॥8॥

ಮೂಲಮ್ - 9

ಏವಂ ಸಂಚೋದಿತಾಃ ಸರ್ವೇ ರಾಜ್ಞಾ ವಾನರಯೂಥಪಾಃ ।
ಸ್ವಾಂ ಸ್ವಾಂ ದಿಶಮಭಿಪ್ರೇತ್ಯ ತ್ವರಿತಾಃ ಸಂಪ್ರತಸ್ಥಿರೇ ॥

ಅನುವಾದ

ಹೀಗೆ ರಾಜನ ಆಜ್ಞೆಯನ್ನು ಪಡೆದು ಸಮಸ್ತ ವಾನರ ಯೂಥಪತಿ ಬಹಳ ಅವಸರದಿಂದ ತಮ್ಮ-ತಮ್ಮ ದಿಕ್ಕುಗಳಿಗೆ ಹೊರಟು ಬಿಟ್ಟರು.॥9॥

ಮೂಲಮ್ - 10

ನದಂತಶ್ಚೋನ್ನದಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ।
ಕ್ಷ್ವೇಡಂತೋ ಧಾವಮಾನಾಶ್ಚ ವಿನದಂತೋ ಮಹಾಬಲಾಃ ॥

ಮೂಲಮ್ - 11

ಏವಂ ಸಂಚೋದಿತಾಃ ಸರ್ವೇ ರಾಜ್ಞಾ ವಾನರಯೂಥಪಾಃ ।
ಆನಯಿಷ್ಯಾಮಹೇ ಸೀತಾಂ ಹನಿಷ್ಯಾಮಶ್ಚ ರಾವಣಮ್ ॥

ಮೂಲಮ್ - 12

ಅಹಮೇಕೋ ವಧಿಷ್ಯಾಮಿ ಪ್ರಾಪ್ತಂ ರಾವಣಮಾಹವೇ ।
ತತಶ್ಚೋನ್ಮಥ್ಯ ಸಹಸಾ ಹರಿಷ್ಯೇ ಜನಕಾತ್ಮಜಾಮ್ ॥

ಮೂಲಮ್ - 13

ವೇಪಮಾನಾಂ ಶ್ರಮೇಣಾದ್ಯ ಭವದ್ಬಿಃ ಸ್ಥೀಯತಾಮಿತಿ ।
ಏಕ ಏವಾಹರಿಷ್ಯಾಮಿ ಪಾತಾಲಾದಪಿ ಜಾನಕೀಮ್ ॥

ಮೂಲಮ್ - 14

ವಿಧಮಿಷ್ಯಾಮ್ಯಹಂ ವೃಕ್ಷಾನ್ ದಾರಯಿಷ್ಯಾಮ್ಯಹಂ ಗಿರೀನ್ ।
ಧರಣೀಂ ದಾರಯಿಷ್ಯಾಮಿ ಕ್ಷೋಭಯಿಷ್ಯಾಮಿ ಸಾಗರಾನ್ ॥

ಮೂಲಮ್ - 15

ಅಹಂ ಯೋಜನಸಂಖ್ಯಾಯಾಃ ಪ್ಲಮೇಯಂ ನಾತ್ರ ಸಂಶಯಃ ।
ಶತಯೋಜನಸಂಖ್ಯಾಯಾಃ ಶತಂ ಸಮಧಿಕಂ ಹ್ಯಹಮ್ ॥

ಮೂಲಮ್ - 16

ಭೂತಲೇ ಸಾಗರೇ ವಾಪಿ ಶೈಲೇಷು ಚ ವನೇಷು ಚ ।
ಪಾತಾಲಸ್ಯಾಪಿ ವಾ ಮಧ್ಯೇ ನ ಮಮಾಚ್ಛಿದ್ಯತೇ ಗತಿಃ ॥

ಅನುವಾದ

ಆ ಸಮಸ್ತ ಮಹಾಬಲಿ ವಾನರರು ಮತ್ತು ಅವರ ಯೂಥಪತಿಗಳು ತಮ್ಮ ರಾಜನಿಂದ ಪ್ರೇರಿತರಾಗಿ ಬಗೆ-ಬಗೆಯಾದ ಶಬ್ದಗಳಿಂದ ಗಟ್ಟಿಯಾಗಿ ಗರ್ಜಿಸುತ್ತಾ, ಕಿರುಚುತ್ತಾ, ಓಡುತ್ತಾ, ಕೋಲಾಹಲ ಮಾಡುತ್ತಾ ಹೇಳುತ್ತಾರೆ - ರಾಜನೇ! ನಾವು ಸೀತೆಯನ್ನು ಜೊತೆಗೆ ಕರೆದುಕೊಂಡು ಬರುವೆವು ಮತ್ತು ರಾವಣನನ್ನು ವಧಿಸುವೆವು. ಯುದ್ಧದಲ್ಲಿ ರಾವಣನು ನನ್ನ ಎದುರಿಗೆ ಬಂದರೆ ನಾನೊಬ್ಬನೇ ಅವನನ್ನು ಕೊಂದುಹಾಕುವೆನು. ಅನಂತರ ಅವನ ಎಲ್ಲ ಸೈನ್ಯವನ್ನು ನಾಶಮಾಡಿ, ಕಷ್ಟ ಹಾಗೂ ಭಯದಿಂದ ನಡುಗುತ್ತಿರುವ ಜಾನಕಿಯನ್ನು ಕೂಡಲೇ ನೀವು ಇದ್ದಲ್ಲಿಗೆ ಕರೆತರುವೆವು. ನಾನೊಬ್ಬನೇ ಪಾತಾಳದಿಂದಲಾದರೂ ಜಾನಕಿಯನ್ನು ಕರೆತರುವೆನು. ವೃಕ್ಷಗಳನ್ನು ಕಿತ್ತು ಎಸೆಯುವೆನು. ಪರ್ವತಗಳನ್ನು ಪುಡಿ-ಪುಡಿ ಮಾಡಿ ಬಿಡುವೆನು. ಭೂಮಿಯನ್ನು ವಿದೀರ್ಣಗೊಳಿಸುವೆನು. ಸಮುದ್ರಗಳನ್ನು ಕ್ಷುಬ್ಧಗೊಳಿಸುವೆನು. ನಾನು ನೂರು ಯೋಜನದವರೆಗೆ ಹಾರಬಲ್ಲೆನು, ಇದರಲ್ಲಿ ಸಂದೇಹವೇ ಇಲ್ಲ. ನಾನು ನೂರು ಯೋಜನಗಳಿಗಿಂತಲೂ ದೂರ ಹೋಗಬಲ್ಲೆ. ಪೃಥಿವೀ, ಸಮುದ್ರ, ಪರ್ವತ, ವನ, ಪಾತಾಳದಲ್ಲಿಯೂ ಕೂಡ ನನ್ನ ಗತಿಗೆ, ವೇಗಕ್ಕೆ ಯಾವುದೇ ತಡೆಯಿಲ್ಲ.॥10-16॥

ಮೂಲಮ್ - 17

ಇತ್ಯೇಕೈಕಸ್ತದಾ ತತ್ರ ವಾನರಾ ಬಲದರ್ಪಿತಾಃ ।
ಊಚುಶ್ಚ ವಚನಂ ತಸ್ಯ ಹರಿರಾಜಸ್ಯ ಸಂನಿಧೌ ॥

ಅನುವಾದ

ಈ ಪ್ರಕಾರ ಅಲ್ಲಿ ವಾನರರಾಜ ಸುಗ್ರೀವನ ಬಳಿಗೆ ಬಲದರ್ಪಿತರಾದ ವಾನರರು ಒಬ್ಬೊಬ್ಬರಾಗಿ ಬಂದು ಮೇಲಿನಂತೆ ಮಾತುಗಳನ್ನು ಆಡುತ್ತಿದ್ದರು.॥17॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾ ಕಾಂಡದ ನಲವತ್ತೈದನೆಯ ಸರ್ಗ ಸಂಪೂರ್ಣವಾಯಿತು.॥45॥