०३६ सुग्रीवकृतं लक्ष्मणसमाश्वासनम्

वाचनम्
ಭಾಗಸೂಚನಾ

ಸುಗ್ರೀವನು ತನ್ನ ಅಲ್ಪತನವನ್ನು ಶ್ರೀರಾಮನ ಮಹತ್ವವನ್ನು ಲಕ್ಷ್ಮಣನಿಗೆ ಹೇಳಿ ಕ್ಷಮೆ ಬೇಡಿದುದು, ಲಕ್ಷ್ಮಣನು ಸುಗ್ರೀವನನ್ನು ಪ್ರಶಂಸಿಸಿ ತನ್ನ ಜೊತೆಯಲ್ಲಿ ಬರುವಂತೆ ಹೇಳಿದುದು

ಮೂಲಮ್ - 1

ಇತ್ಯುಕ್ತಸ್ತಾರಯಾ ವಾಕ್ಯಂ ಪ್ರಶ್ರಿತಂ ಧರ್ಮಸಂಹಿತಮ್ ।
ಮೃದುಸ್ವಭಾವಃ ಸೌಮಿತ್ರಿಃ ಪ್ರತಿಜಗ್ರಾಹ ತದ್ವಚಃ ॥

ಅನುವಾದ

ತಾರೆಯು ಹೇಳಿದ ವಿನಯಯುಕ್ತ ಮತ್ತು ಧರ್ಮಸಮ್ಮತವಾದ ಮಾತುಗಳನ್ನು ಕೇಳಿ ಕೋಮಲ ಸ್ವಭಾವದ ಲಕ್ಷ್ಮಣನು ಅವನ್ನು ಅಂಗೀಕರಿಸಿ, ಕೋಪವನ್ನು ಪರಿತ್ಯಜಿಸಿದನು.॥1॥

ಮೂಲಮ್ - 2

ತಸ್ಮಿನ್ ಪ್ರತಿಗೃಹೀತೇ ತು ವಾಕ್ಯೇ ಹರಿಗಣೇಶ್ವರಃ ।
ಲಕ್ಷ್ಮಣಾತ್ಸುಮಹತಾಸ್ತ್ರಂ ವಸ್ತ್ರಂ ಕ್ಲಿನ್ನಮಿವಾತ್ಯಜತ್ ॥

ಅನುವಾದ

ಅವನು ತಾರೆಯ ಮಾತನ್ನು ಒಪ್ಪಿಕೊಂಡಾಗ ವಾನರ ಯೂಧಪತಿ ಸುಗ್ರೀವನು ಲಕ್ಷ್ಮಣನಿಂದ ಉಂಟಾಗುವ ಮಹಾಭಯವನ್ನು ಒದ್ದೆಬಟ್ಟೆಯಂತೆ ತ್ಯಜಿಸಿಬಿಟ್ಟನು.॥2॥

ಮೂಲಮ್ - 3

ತತಃ ಕಂಠಗತಂ ಮಾಲ್ಯಂ ಚಿತ್ರಂ ಬಹುಗುಣಂ ಮಹತ್ ।
ಚಿಚ್ಛೇದ ವಿಮದಶ್ಚಾಸೀತ್ ಸುಗ್ರೀವೋ ವಾನರೇಶ್ವರಃ ॥

ಅನುವಾದ

ಅನಂತರ ಸುಗ್ರೀವನು ತನ್ನ ಕಂಠದಲ್ಲಿದ್ದ ಹೂವಿನ ವಿಚಿತ್ರ, ವಿಶಾಲ ಮತ್ತು ಬಹುಗುಣಸಂಪನ್ನ ಮಾಲೆಯನ್ನು ಹರಿದು ಬಿಸಾಡಿ ಮದರಹಿತನಾದನು.॥3॥

ಮೂಲಮ್ - 4

ಸ ಲಕ್ಷ್ಮಣಂ ಭೀಮಬಲಂ ಸರ್ವವಾನರಸತ್ತಮಃ ।
ಅಬ್ರವೀತ್ಪ್ರಶ್ರಿತಂ ವಾಕ್ಯಂ ಸುಗ್ರೀವಃ ಸಂಪ್ರಹರ್ಷಯನ್ ॥

ಅನುವಾದ

ಮತ್ತೆ ಸಮಸ್ತ ವಾನರರಲ್ಲಿ ಶ್ರೇಷ್ಠನಾದ ಸುಗ್ರೀವನು ಭಯಂಕರ ಬಲಶಾಲಿ ಲಕ್ಷ್ಮಣನನ್ನು ಹರ್ಷಗೊಳಿಸುತ್ತಾ ಅವನಲ್ಲಿ ವಿನಯಯುಕ್ತ ಮಾತನ್ನಾಡಿದನು.॥4॥

ಮೂಲಮ್ - 5

ಪ್ರಣಷ್ಟಾ ಶ್ರೀಶ್ಚಕೀರ್ತಿಶ್ಚ ಕಪಿರಾಜ್ಯಂ ಚ ಶಾಶ್ವತಮ್ ।
ರಾಮಪ್ರಸಾದಾತ್ ಸೌಮಿತ್ರೇ ಪುನಶ್ಚಾಪ್ತಮಿದಂ ಮಯಾ ॥

ಅನುವಾದ

ಸುಮಿತ್ರಾಕುಮಾರ! ನನ್ನ ಸಂಪತ್ತು, ಕೀರ್ತಿ, ಹಿಂದಿನಿಂದ ಬಂದಿರುವ ವಾನರರಾಜ್ಯ ಇವೆಲ್ಲವೂ ನಾಶವಾಗಿ ಹೋಗಿತ್ತು. ಭಗವಾನ್ ಶ್ರೀರಾಮನ ಕೃಪೆಯಿಂದಲೇ ನನಗೆ ಪುನಃ ಇದೆಲ್ಲವೂ ಪ್ರಾಪ್ತವಾಯಿತು.॥5॥

ಮೂಲಮ್ - 6

ಕಃ ಶಕ್ತಸ್ತಸ್ಯ ದೇವಸ್ಯ ಖ್ಯಾತಸ್ಯ ಸ್ವೇನ ಕರ್ಮಣಾ ।
ತಾದೃಶಂ ಪ್ರತಿಕುರ್ವೀತ ಅಂಶೇನಾಪಿ ನೃಪಾತ್ಮಜ ॥

ಅನುವಾದ

ರಾಜಕುಮಾರ! ಆ ಭಗವಾನ್ ಶ್ರೀರಾಮನು ತನ್ನ ಕರ್ಮಗಳಿಂದಲೇ ಎಲ್ಲೆಡೆ ವಿಖ್ಯಾತನಾಗಿದ್ದಾನೆ. ಅವನು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು ಅಂಶಮಾತ್ರದಲ್ಲಿಯೂ ಯಾರು ತಾನೇ ಮಾಡಬಲ್ಲನು.॥6॥

ಮೂಲಮ್ - 7

ಸೀತಾಂ ಪ್ರಾಪ್ಸ್ಯತಿ ಧರ್ಮಾತ್ಮಾ ವಧಿಷ್ಯತಿ ಚ ರಾವಣಮ್ ।
ಸಹಾಯಮಾತ್ರೇಣ ಮಯಾ ರಾಘವಃ ಸ್ವೇನ ತೇಜಸಾ ॥

ಅನುವಾದ

ಧರ್ಮಾತ್ಮಾ ಶ್ರೀರಾಮನು ತನ್ನ ತೇಜಸ್ಸಿನಿಂದಲೇ ರಾವಣನ ವಧೆ ಮಾಡುವನು ಹಾಗೂ ಸೀತೆಯನ್ನು ಪಡೆದುಕೊಳ್ಳುವನು. ನಾನಾದರೋ ಅವನ ಒಬ್ಬ ತುಚ್ಛ ಸಹಾಯಕ ಮಾತ್ರವಾಗಿದ್ದೇನೆ.॥7॥

ಮೂಲಮ್ - 8

ಸಹಾಯಕೃತ್ಯಂ ಕಿಂ ತಸ್ಯ ಯೇನ ಸಪ್ತ ಮಹಾದ್ರುಮಾಃ ।
ಗಿರಿಶ್ಚ ವಸುಧಾ ಚೈವ ಬಾಣೇನೈಕೇನ ದಾರಿತಾಃ ॥

ಅನುವಾದ

ಯಾರು ಒಂದೇ ಬಾಣದಿಂದ ಏಳು ದೊಡ್ಡ-ದೊಡ್ಡ ತಾಲವೃಕ್ಷ, ಪರ್ವತ, ಪೃಥಿವಿ, ಪಾತಾಳ ಮತ್ತು ಅಲ್ಲಿ ಇರುವ ದೈತ್ಯರನ್ನು ವಿದೀರ್ಣಗೊಳಿಸಿದ್ದನೋ, ಅವನಿಗೆ ಬೇರೆ ಯಾವನೇ ಸಹಾಯಕನ ಆವಶ್ಯಕತೆ ಏನಿದೆ.॥8॥

ಮೂಲಮ್ - 9

ಧನುರ್ವಿಸ್ಫಾರಮಾಣಸ್ಯ ಯಸ್ಯ ಶಬ್ದೇನ ಲಕ್ಷ್ಮಣ ।
ಸಶೈಲಾ ಕಂಪಿತಾ ಭೂಮಿಃ ಸಹಾಯೈಃ ಕಿಂ ನು ತಸ್ಯ ವೈ ॥

ಅನುವಾದ

ಲಕ್ಷ್ಮಣ! ಶ್ರೀರಾಮನು ಧನುಸ್ಸನ್ನು ಸೆಳೆವಾಗ ಅದರ ಟೇಂಕಾರದಿಂದ ಪರ್ವತಸಹಿತ ಪೃಥಿವಿಯು ನಡುಗಿ ಹೋಗಿತ್ತು. ಅಂತಹವನಿಗೆ ಸಹಾಯಕರಿಂದ ಏನಾಗಬೇಕಾಗಿದೆ.॥9॥

ಮೂಲಮ್ - 10

ಅನುಯಾತ್ರಾಂ ನರೇಂದ್ರಸ್ಯ ಕರಿಷ್ಯೇಽಹಂ ನರರ್ಷಭ ।
ಗಚ್ಛತೋ ರಾವಣಂ ಹಂತುಂ ವೈರಿಣಂ ಸಪುರಸ್ಸರಮ್ ॥

ಅನುವಾದ

ನರಶ್ರೇಷ್ಠನೇ! ನಾನಾದರೋ ವೈರಿ ರಾವಣನ ವಧೆಗಾಗಿ ಅಗ್ರಗಾಮಿ ಸೈನಿಕರ ಸಹಿತ ಯಾತ್ರೆ ಮಾಡುವ ಮಹಾರಾಜ ಶ್ರೀರಾಮನ ಹಿಂದೆ-ಹಿಂದೆ ನಡೆಯುವೆನು.॥10॥

ಮೂಲಮ್ - 11

ಯದಿ ಕಿಂಚಿದತಿಕ್ರಾಂತಂ ವಿಶ್ವಾಸಾತ್ ಪ್ರಣಯೇನ ವಾ ।
ಪ್ರೇಷ್ಯಸ್ಯ ಕ್ಷಮಿತವ್ಯಂ ಮೇ ನ ಕಶ್ಚಿನ್ನಾಪರಾಧ್ಯತಿ ॥

ಅನುವಾದ

ವಿಶ್ವಾಸ ಅಥವಾ ಪ್ರೇಮದಿಂದಾಗಿ ಯಾವುದಾದರೂ ಅಪರಾಧ ವಾಗಿದ್ದರೆ ದಾಸನಾದ ನನ್ನ ಆ ಅಪರಾಧವನ್ನು ಕ್ಷಮಿಸಬೇಕು; ಏಕೆಂದರೆ ಎಂದಿಗೂ ಯಾವುದೇ ಅಪರಾಧ ಮಾಡದ ಯಾವ ಸೇವಕನೂ ಇರಲಾರನು.॥11॥

ಮೂಲಮ್ - 12

ಇತಿ ತಸ್ಯ ಬ್ರುವಾಣಸ್ಯ ಸುಗ್ರೀವಸ್ಯ ಮಹಾತ್ಮನಃ ।
ಅಭವಲ್ಲಕ್ಷ್ಮಣಃ ಪ್ರೀತಃ ಪ್ರೇಮ್ಣಾ ಚೇದಮುವಾಚ ಹ ॥

ಅನುವಾದ

ಮಹಾತ್ಮಾ ಸುಗ್ರೀವನು ಹೀಗೆ ಹೇಳಿದಾಗ ಲಕ್ಷ್ಮಣನು ಸಂತೋಷಗೊಂಡು ತುಂಬುಪ್ರೇಮದಿಂದ ಇಂತೆಂದನು.॥12॥

ಮೂಲಮ್ - 13

ಸರ್ವಥಾ ಹಿ ಮಮ ಭ್ರಾತಾ ಸನಾಥೋ ವಾನರೇಶ್ವರ ।
ತ್ವಯಾ ನಾಥೇನ ಸುಗ್ರೀವ ಪ್ರಶ್ರಿತೇನ ವಿಶೇಷತಃ ॥

ಅನುವಾದ

ವಾನರರಾಜಾ ಸುಗ್ರೀವನೇ! ವಿಶೇಷವಾಗಿ ನಿನ್ನಂತಹ ವಿನಯಶೀಲ ಸಹಾಯಕನನ್ನು ಪಡೆದು ನನ್ನ ಅಣ್ಣ ಶ್ರೀರಾಮನು ಸರ್ವಥಾ ಸನಾಥನಾಗಿದ್ದಾನೆ.॥13॥

ಮೂಲಮ್ - 14

ಯಸ್ತೇ ಪ್ರಭಾವಃ ಸುಗ್ರೀವ ಯಚ್ಚ ತೇ ಶೌಚವೀದೃಶಮ್ ।
ಅರ್ಹಸ್ತ್ವಂ ಕಪಿರಾಜ್ಯಸ್ಯ ಶ್ರಿಯಂ ಭೋಕ್ತುಮನುತ್ತಮಾಮ್ ॥

ಅನುವಾದ

ಸುಗ್ರೀವನೇ! ನಿನ್ನ ಪ್ರಭಾವ ಮತ್ತು ಹೃದಯದಲ್ಲಿ ಇರುವ ಶುದ್ಧಭಾವದಿಂದ ನೀನು ವಾನರರಾಜ್ಯದ ಪರಮೋತ್ತಮ ಲಕ್ಷ್ಮಿಯನ್ನು ಸದಾ ಅನುಭವಿಸಲು ಅಧಿಕಾರಿಯಾಗಿರುವೆ.॥14॥

ಮೂಲಮ್ - 15

ಸಹಾಯೇನ ಚ ಸುಗ್ರೀವ ತ್ವಯಾ ರಾಮಃ ಪ್ರತಾಪವಾನ್ ।
ವಧಿಷ್ಯತಿ ರಣೇ ಶತ್ರೂನಚಿರಾನ್ನಾತ್ರ ಸಂಶಯಃ ॥

ಅನುವಾದ

ಸುಗ್ರೀವನೇ! ನಿನ್ನನ್ನು ಸಹಾಯಕನನ್ನಾಗಿ ಪಡೆದ ಪ್ರತಾಪಿ ಶ್ರೀರಾಮನು ರಣರಂಗದಲ್ಲಿ ತನ್ನ ಶತ್ರುಗಳನ್ನು ಬೇಗನೇ ವಧಿಸಿಬಿಡುವನು, ಇದರಲ್ಲಿ ಸಂಶಯವೇ ಇಲ್ಲ.॥15॥

ಮೂಲಮ್ - 16

ಧರ್ಮಜ್ಞಸ್ಯ ಕೃತಜ್ಞಸ್ಯ ಸಂಗ್ರಾಮೇಷ್ವನಿವರ್ತಿನಃ ।
ಉಪಪನ್ನಂ ಚ ಯುಕ್ತಂ ಚ ಸುಗ್ರೀವ ತವ ಭಾಷಿತಮ್ ॥

ಅನುವಾದ

ಸುಗ್ರೀವ! ನೀನು ಧರ್ಮಜ್ಞನೂ, ಕೃತಜ್ಞನೂ, ಯುದ್ಧದಲ್ಲಿ ಎಂದೂ ಬೆನ್ನು ತೋರಿಸದವನೂ ಆಗಿರುವೆ. ನಿನ್ನ ಈ ಮಾತು ಸರ್ವಥಾ ಯುಕ್ತಿಸಂಗತ ಹಾಗೂ ಉಚಿತವಾಗಿದೆ.॥16॥

ಮೂಲಮ್ - 17

ದೋಷಜ್ಞಃ ಸತಿ ಸಾಮರ್ಥ್ಯೇ ಕೋಽನ್ಯೋ ಭಾಷಿತುಮರ್ಹತಿ ।
ವರ್ಜಯಿತ್ವಾ ಮಮ ಜ್ಯೇಷ್ಠಂ ತ್ವಾಂ ಚ ವಾನರಸತ್ತಮ ॥

ಅನುವಾದ

ವಾನರಶ್ರೇಷ್ಠನೇ! ನಿನ್ನನ್ನು ಮತ್ತು ನಮ್ಮಣ್ಣನನ್ನು ಬಿಟ್ಟು ಬೇರೆ ಯಾವ ವಿದ್ವಾಂಸನು ತಾನೇ ತನ್ನಲ್ಲಿ ಸಾಮರ್ಥ್ಯವಿದ್ದರೂ ಇಂತಹ ನಮ್ರತಾಪೂರ್ಣ ಮಾತನ್ನು ಹೇಳಬಲ್ಲನು.॥17॥

ಮೂಲಮ್ - 18

ಸದೃಶಶ್ಚಾಸಿ ರಾಮೇಣ ವಿಕ್ರಮೇಣ ಬಲೇನ ಚ ।
ಸಹಾಯೋ ದೈವತೈರ್ದತ್ತಶ್ಚಿರಾಯ ಹರಿಪುಂಗವ ॥

ಅನುವಾದ

ಕಪಿರಾಜನೇ! ನೀನು ಬಲ ಮತ್ತು ಪರಾಕ್ರಮದಲ್ಲಿ ಭಗವಾನ್ ಶ್ರೀರಾಮನಿಗೆ ಸಮಾನನಾಗಿರುವೆ. ದೇವತೆಗಳೇ ನಮಗೆ ದೀರ್ಘಕಾಲಕ್ಕಾಗಿ ನಿನ್ನಂತಹ ಸಹಾಯಕನನ್ನು ಕರುಣಿಸಿರುವರು.॥18॥

ಮೂಲಮ್ - 19

ಕಿಂ ತು ಶೀಘ್ರಮಿತೋ ವೀರ ನಿಷ್ಕ್ರಾಮ ತ್ವಂ ಮಯಾ ಸಹ ।
ಸಾಂತ್ವಯಸ್ವ ವಯಸ್ಯಂ ಚ ಭಾರ್ಯಾಹರಣ ದುಃಖಿತಮ್ ॥

ಅನುವಾದ

ಆದರೆ ವೀರನೇ! ಈಗ ನೀನು ಬೇಗನೇ ನನ್ನೊಂದಿಗೆ ಪುರಿಯಿಂದ ಹೊರಗೆ ಹೊರಟು, ತನ್ನ ಪತ್ನಿಯ ಅಪಹರಣದಿಂದ ಬಹಳ ದುಃಖಿತನಾದ ನಿನ್ನ ಮಿತ್ರನ ಬಳಿಗೆ ಹೋಗಿ ಅವನನ್ನು ಸಾಂತ್ವನಗೊಳಿಸು.॥19॥

ಮೂಲಮ್ - 20

ಯಚ್ಚ ಶೋಕಾಭಿಭೂತಸ್ಯ ಶ್ರುತ್ವಾ ರಾಮಸ್ಯ ಭಾಷಿತಮ್ ।
ಮಯಾ ತ್ವಂ ಪರುಷಾಣ್ಯುಕ್ತಸ್ತತ್ ಕ್ಷಮಸ್ವ ಸಖೇ ಮಮ ॥

ಅನುವಾದ

ಸಖನೇ! ಶೋಕಮಗ್ನನಾದ ಶ್ರೀರಾಮನ ವಚನಗಳನ್ನು ಕೇಳಿ, ನಾನು ನಿನ್ನ ಕುರಿತು ಆಡಿದ ಕಠೋರ ಮಾತಿನ ಕುರಿತು ನನ್ನನ್ನು ಕ್ಷಮಿಸು.॥20॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತಾರನೆಯ ಸರ್ಗ ಸಂಪೂರ್ಣವಾಯಿತು.॥36॥