०२९ हनुमत्-सुग्रीवसंवादः

वाचनम्
ಭಾಗಸೂಚನಾ

ಹನುಮಂತನು ಸಮಜಾಯಿಸಿದಾಗ ಸುಗ್ರೀವನು ವಾನರ ಸೈನಿಕರನ್ನು ಒಂದುಗೂಡಿಸುವಂತೆ ನೀಲನಿಗೆ ಆದೇಶಿಸಿದುದು

ಮೂಲಮ್ - 1

ಸಮೀಕ್ಷ್ಯ ವಿಮಲಂ ವ್ಯೋಮ ಗತವಿದ್ಯುದ್ಬಲಾಹಕಮ್ ।
ಸಾರಸಾರವಸಂಘುಷ್ಟಂ ರಮ್ಯಜೋತ್ಸ್ನಾನುಲೇಪನಮ್ ॥

ಮೂಲಮ್ - 2

ಸಮೃದ್ಧಾರ್ಥಂ ಚ ಸುಗ್ರೀವಂ ಮಂದಧರ್ಮಾರ್ಥ ಸಂಗ್ರಹಮ್ ।
ಅತ್ಯರ್ಥಚಾಸತಾಂ ಮಾರ್ಗಮೇಕಾಂತಗತಮಾನಸಮ್ ॥

ಮೂಲಮ್ - 3

ನಿವೃತ್ತಕಾರ್ಯಂ ಸಿದ್ಧಾರ್ಥಂ ಪ್ರಮದಾಭಿರತಂ ಸದಾ ।
ಪ್ರಾಪ್ತವಂತಮಭಿಪ್ರೇತಾನ್ ಸರ್ವಾನೇವ ಮನೋರಥಾನ್ ॥

ಮೂಲಮ್ - 4

ಸ್ವಾಂ ಚ ಪತ್ನೀಮಭಿಪ್ರೇತಾಂ ತಾರಾಂ ಚಾಪಿ ಸಮೀಪ್ಸಿತಾಮ್।
ವಿಹರಂತ ಮಹೋರಾತ್ರಂ ಕೃತಾರ್ಥಂ ವಿಗತಜ್ವರಮ್ ॥

ಮೂಲಮ್ - 5

ಕ್ರೀಡಂತಮಿವ ದೇವೇಶಂ ಗಂಧರ್ವಾಪ್ಸರಸಾಂ ಗಣೈಃ ।
ಮಂತ್ರಿಷು ನ್ಯಸ್ತಕಾರ್ಯಂ ಚ ಮಂತ್ರಿಣಾಮನವೇಕ್ಷಕಮ್ ॥

ಮೂಲಮ್ - 6

ಉಚ್ಛಿನ್ನರಾಜ್ಯಸಂದೇಹಂ ಕಾಮವೃತ್ತಮಿವ ಸ್ಥಿತಮ್ ।
ನಿಶ್ಚಿತಾರ್ಥೋಽರ್ಥತತ್ತ್ವಜ್ಞಃ ಕಾಲಧರ್ಮವಿಶೇಷವಿತ್ ॥

ಮೂಲಮ್ - 7

ಪ್ರಸಾದ್ಯ ವಾಕ್ಯೈರ್ವಿವಿಧೈರ್ಹೇತುಮದ್ಭಿರ್ಮನೋರಮೈಃ ।
ವಾಕ್ಯವಿದ್ವಾಕ್ಯತತ್ತ್ವಜ್ಞಂ ಹರೀಶಂ ಮಾರುತಾತ್ಮಜಃ ॥

ಮೂಲಮ್ - 8½

ಹಿತಂ ತಥ್ಯಂ ಚ ಪಥ್ಯಂ ಚ ಸಾಮಧರ್ಮಾರ್ಥನೀತಿಮತ್ ।
ಪ್ರಣಯಪ್ರೀತಿ ಸಂಯುಕ್ತಂ ವಿಶ್ವಾಸ ಕೃತನಿಶ್ಚಯಮ್ ॥
ಹರೀಶ್ವರಮುಪಾಗಮ್ಯ ಹನೂಮಾನ್ವಾಕ್ಯಮಬ್ರವೀತ್ ।

ಅನುವಾದ

ಪವನಕುಮಾರ ಹನುಮಂತನು ಶಾಸ್ತ್ರದ ನಿಶ್ಚಿತ ಸಿದ್ಧಾಂತವನ್ನು ಬಲ್ಲವನಾಗಿದ್ದನು. ಏನು ಮಾಡಬೇಕು, ಏನು ಮಾಡಬಾರದು ಇದರ ಯಥಾರ್ಥಜ್ಞಾನ ಅವನಿಗೆ ಇತ್ತು. ಯಾವ ಸಮಯದಲ್ಲಿ, ಯಾವ ವಿಶೇಷ ಧರ್ಮವನ್ನು ಪಾಲಿಸಬೇಕೆಂಬುದೂ ಅವನಿಗೆ ಚೆನ್ನಾಗಿ ತಿಳಿದಿತ್ತು. ಮಾತಿನ ಕಲೆಯ ಜ್ಞಾನವೂ ಅವನಿಗೆ ಚೆನ್ನಾಗಿತ್ತು. ಆಕಾಶ ನಿರ್ಮಲವಾದುದನ್ನು ಅವನು ನೋಡಿದನು. ಈಗ ಅದರಲ್ಲಿ ಮೋಡಗಳಾಗಲೀ, ವಿದ್ಯುತ್ತಾಗಲೀ ಕಾಣುತ್ತಿರಲಿಲ್ಲ. ಅಂತರಿಕ್ಷದಲ್ಲಿ ಎಲ್ಲೆಡೆ ಸಾರಸ ಪಕ್ಷಿಗಳು ಹಾರಾಡುತ್ತಿದ್ದವು ಮತ್ತು ಅವುಗಳ ಕೂಗು ಕೇಳಿಸುತ್ತಿತ್ತು. (ಚಂದ್ರೋದಯವಾದಾಗ) ಶ್ವೇತ ಚಂದನ ದಂತಹ ರಮಣೀಯ ಬೆಳದಿಂಗಳ ಲೇಪ ಹಚ್ಚಿದಂತೆ ಆಕಾಶವು ಕಂಡು ಬರುತ್ತಿತ್ತು. ಸುಗ್ರೀವನ ಪ್ರಯೋಜನ ಸಿದ್ಧವಾದ್ದರಿಂದ ಅವನು ಧರ್ಮ ಮತ್ತು ಅರ್ಥದ ಸಂಗ್ರಹದಲ್ಲಿ ಶಿಥಿಲತೆ ತೋರುತ್ತಿರುವನು. ಅಸಾಧು ಪುರುಷರ ಮಾರ್ಗ (ಕಾಮಸೇವನ)ವನ್ನೇ ಹೆಚ್ಚು ಆಶ್ರಯಿಸಿರುವನು. ಏಕಾಂತದಲ್ಲೇ (ಅಲ್ಲಿ ಸ್ತ್ರೀಯರ ಸಂಗದಲ್ಲಿ ಯಾವುದೇ ಬಾಧೆ ಇಲ್ಲದ್ದರಿಂದ) ಅವನ ಮನಸ್ಸುತೊಡಗಿದೆ. ಅವನ ಕಾರ್ಯಪೂರ್ಣಗೊಂಡಿದೆ. ಅವನ ಅಭೀಷ್ಟ ಪ್ರಯೋಜನ ಸಿದ್ಧವಾಗಿದೆ. ಈಗ ಅವನು ಸಹಾ ಯುವತೀ ಸ್ತ್ರೀಯರೊಂದಿಗೆ ಕ್ರೀಡಾವಿಲಾಸದಲ್ಲೇ ತೊಡಗಿರುತ್ತಾನೆ. ಅವನು ತನ್ನ ಎಲ್ಲ ಬೇಕಾದ ಮನೋರಥಗಳನ್ನು ಪಡೆದು ಕೊಂಡಿರುವನು. ತನ್ನ ಮನೋವಾಂಛಿತ ಪತ್ನೀ ರಮೆಯನ್ನು ಹಾಗೂ ಅಭೀಷ್ಟ ಸುಂದರೀ ತಾರೆಯನ್ನು ಪಡೆದುಕೊಂಡು ಈಗ ಅವನು ಕೃತಕೃತ್ಯನಾಗಿ ನಿಶ್ಚಿಂತನಾಗಿರುವನು. ಹಗಲು-ರಾತ್ರೆ ಭೋಗವಿಲಾಸದಲ್ಲೇ ತೊಡಗಿರುತ್ತಾನೆ. ದೇವೇಂದ್ರನು ಗಂಧರ್ವರೊಂದಿಗೆ, ಅಪ್ಸರೆಯರೊಂದಿಗೆ ಕ್ರೀಡೆಯಲ್ಲಿ ತತ್ಪರ ನಾಗಿರುವಂತೆಯೇ, ಸುಗ್ರೀವನೂ ಕೂಡ ತನ್ನ ಮಂತ್ರಿಗಳ ಮೇಲೆ ರಾಜ್ಯಭಾರದ ಹೊಣೆಯನ್ನು ಒಪ್ಪಿಸಿ ಕ್ರೀಡಾ ವಿಹಾರದಲ್ಲೇ ತತ್ಪರನಾಗಿದ್ದಾನೆ. ಮಂತ್ರಿಗಳ ಕಾರ್ಯವನ್ನು ಎಂದೂ ನೋಡುವುದಿಲ್ಲ. ಮಂತ್ರಿಗಳ ಸಜ್ಜನಿಕೆಯಿಂದಾಗಿ ರಾಜ್ಯಕ್ಕೆ ಯಾವುದೇ ರೀತಿಯ ಹಾನಿಯುಂಟಾಗುವ ಸಂಭವ ಇಲ್ಲದಿದ್ದರೂ ಸ್ವತಃ ಸುಗ್ರೀವನು ಸ್ವೇಚ್ಛಾಚಾರಿಯಾಗಿದ್ದಾನೆ. ಇದೆಲ್ಲವನ್ನು ವಿಚಾರ ಮಾಡಿ ಹನುಮಂತನು ವಾನರರಾಜ ಸುಗ್ರೀವನ ಬಳಿಗೆ ಹೋಗಿ, ಅವನಿಗೆ ಯುಕ್ತಿಯುಕ್ತವಾಗಿ ಹಾಗೂ ಮನೋರಮ ಮಾತಿನಿಂದ ಪ್ರಸನ್ನಗೊಳಿಸಿ, ಮಾತಿನ ಮರ್ಮವನ್ನು ಬಲ್ಲ ಸುಗ್ರೀವನಲ್ಲಿ ಹಿತಕರ, ಸತ್ಯವಾದ, ಲಾಭದಾಯಕವಾದ, ಸಾಮ, ಧರ್ಮ, ಅರ್ಥನೀತಿಯಿಂದ ಯುಕ್ತ, ಶಾಸ್ತ್ರವಿಶ್ವಾಸೀ ಪುರುಷರ ನಿಶ್ಚಯ ಸಂಪನ್ನ ಹಾಗೂ ಪ್ರೇಮ, ಪ್ರಸನ್ನತೆ ತುಂಬಿದ ಮಾತನ್ನು ಹೇಳಿದನು.॥1-8½॥

ಮೂಲಮ್ - 9½

ರಾಜ್ಯಂ ಪ್ರಾಪ್ತಂ ಯಶಶ್ಚೈವ ಕೌಲೀ ಶ್ರೀರಭಿ ವರ್ಧಿತಾ॥
ಮಿತ್ರಾಣಾಂ ಸಂಗ್ರಹಃ ಶೇಷಸ್ತದ್ ಭವಾನ್ಕರ್ತುಮರ್ಹತಿ ।

ಅನುವಾದ

ರಾಜನೇ! ನೀನು ರಾಜ್ಯವನ್ನು, ಯಶಸ್ಸನ್ನು ಪಡೆದುಕೊಂಡೆ ಹಾಗೂ ಕುಲಪರಂಪರೆಯಿಂದ ಬಂದಿರುವ ಲಕ್ಷ್ಮಿಯನ್ನು ಹೆಚ್ಚಿಸಿರುವೆ. ಆದರೆ ಈಗ ಮಿತ್ರರನ್ನು ತನ್ನವರಾಗಿಸಿಕೊಳ್ಳುವ ಕಾರ್ಯವೊಂದು ಬಾಕಿ ಉಳಿದಿದೆ. ಅದನ್ನು ನೀನು ಈಗ ಪೂರ್ಣಗೊಳಿಸಬೇಕಾಗಿದೆ.॥9½॥

ಮೂಲಮ್ - 10½

ಯೋ ಹಿ ಮಿತ್ರೇಷು ಕಾಲಜ್ಞಃ ಸತತಂ ಸಾಧು ವರ್ತತೇ ॥
ತಸ್ಯ ರಾಜ್ಯಂ ಚ ಕೀರ್ತಿಶ್ಚ ಪ್ರತಾಪಶ್ಚಾಪಿವರ್ಧತೇ ।

ಅನುವಾದ

‘ಯಾವಾಗ ಪ್ರತ್ಯುಪಕಾರ ಮಾಡಬೇಕು’ ಎಂಬ ಮಾತನ್ನು ತಿಳಿದು, ಮಿತ್ರರ ಕುರಿತು ಸದಾ ಒಳ್ಳೆಯವನಾಗಿ ವರ್ತಿಸುವ ರಾಜನ ರಾಜ್ಯ, ಯಶ, ಪ್ರತಾಪದ ವೃದ್ಧಿಯಾಗುತ್ತದೆ.॥10½॥

ಮೂಲಮ್ - 11

ಯಸ್ಯ ಕೋಶಶ್ಚ ದಂಡಶ್ಚ ಮಿತ್ರಾಣ್ಯಾತ್ಮಾ ಚ ಭೂಮಿಪ ।
ಸಮವೇತಾನಿ ಸರ್ವಾಣಿ ಸ ರಾಜ್ಯಂ ಮಹದಶ್ನುತೇ ॥

ಅನುವಾದ

ಪೃಥಿವೀಪತೇ! ಯಾವ ರಾಜನ ಕೋಶ, ದಂಡ (ಸೈನ್ಯ),ಮಿತ್ರ ಮತ್ತು ತನ್ನ ಶರೀರ ಇವೆಲ್ಲ ಸಮವಾಗಿ ತನ್ನ ವಶದಲ್ಲಿ ಇರುತ್ತದೋ, ಅವನು ವಿಶಾಲ ರಾಜ್ಯವನ್ನು ಪಾಲಿಸುತ್ತಾ ಅನುಭವಿಸುತ್ತಾನೆ.॥11॥

ಮೂಲಮ್ - 12

ತದ್ಭವಾನ್ ವೃತ್ತಸಂಪನ್ನಃ ಸ್ಥಿತಃಪಥಿ ನಿರತ್ಯಯೇ ।
ಮಿತ್ರಾರ್ಥಮಭಿನೀತಾರ್ಥಂ ಯಥಾವತ್ ಕರ್ತುಮರ್ಹತಿ ॥

ಅನುವಾದ

ನೀನು ಸದಾಚಾರ ಸಂಪನ್ನನಾಗಿದ್ದು, ನಿತ್ಯ ಸನಾತನಧರ್ಮ ಮಾರ್ಗದಲ್ಲಿ ಸ್ಥಿತನಾಗಿರುವೆ. ಆದ್ದರಿಂದ ಮಿತ್ರನ ಕಾರ್ಯವನ್ನು ಸಫಲಗೊಳಿಸಲು ಮಾಡಿದ ಪ್ರತಿಜ್ಞೆಯನ್ನು ಯಥೋಚಿತವಾಗಿ ಪೂರ್ಣಗೊಳಿಸು.॥12॥

ಮೂಲಮ್ - 13

ಸಂತ್ಯಜ್ಯ ಸರ್ವಕರ್ಮಾಣಿ ಮಿತ್ರಾರ್ಥೇ ಯೋ ನ ವರ್ತತೇ ।
ಸಂಭ್ರಮಾದ್ ವಿಕೃತೋತ್ಸಾಹಃ ಸೋಽರ್ಥೇನಾವರುಧ್ಯತೇ ॥

ಅನುವಾದ

ತನ್ನ ಎಲ್ಲ ಕಾರ್ಯವನ್ನು ಬಿಟ್ಟು ಮಿತ್ರನ ಕಾರ್ಯವನ್ನು ಸಿದ್ಧಗೊಳಿಸಿಲು ವಿಶೇಷ ಉತ್ಸಾಹದಿಂದ ಶೀಘ್ರವಾಗಿ ತೊಡಗದೆ ಇರುವವನು ಅನರ್ಥಕ್ಕೆ ಭಾಗಿಯಾಗಬೇಕಾಗುತ್ತದೆ.॥13॥

ಮೂಲಮ್ - 14

ಯೋ ಹಿ ಕಾಲವ್ಯತೀತೇಷು ಮಿತ್ರಕಾರ್ಯೇಷು ವರ್ತತೇ ।
ಸ ಕೃತ್ವಾ ಮಹತೋಽಪ್ಯರ್ಥಾನ್ನ ಮಿತ್ರಾರ್ಥೇನ ಯುಜ್ಯತೇ ॥

ಅನುವಾದ

ಕಾರ್ಯಸಾಧನೆಯ ಉಪಯುಕ್ತ ಸಂದರ್ಭ ಕಳೆದು ಹೋದ ಮೇಲೆ ಮಿತ್ರನ ಕಾರ್ಯದಲ್ಲಿ ತೊಡಗುವವನು ಹಿರಿದಾದ ಕಾರ್ಯಗಳನ್ನು ಸಿದ್ಧಗೊಳಿಸಿದರೂ ಮಿತ್ರನ ಪ್ರಯೋಜನವನ್ನು ಸಿದ್ಧಪಡಿಸದವನೆಂದೇ ತಿಳಿಯಲಾಗುತ್ತದೆ.॥14॥

ಮೂಲಮ್ - 15

ತದಿದಂ ಮಿತ್ರ ಕಾರ್ಯಂ ನಃ ಕಾಲಾತೀತಮರಿಂದಮ ।
ಕ್ರಿಯತಾಂ ರಾಘವಸ್ಯೈತದ್ ವೈದೇಹ್ಯಾಃ ಪರಿಮಾರ್ಗಣಮ್ ॥

ಅನುವಾದ

ಶತ್ರುದಮನನೇ! ಭಗವಾನ್ ಶ್ರೀರಾಮನು ನಮಗೆ ಪರಮ ಸುಹೃದನಾಗಿದ್ದಾನೆ. ಅವನ ಈ ಕಾರ್ಯದ ಸಮಯ ಕಳೆದುಹೋಗುತ್ತಾ ಇದೆ. ಆದ್ದರಿಂದ ವೈದೇಹಿ ಸೀತೆಯನ್ನು ಹುಡುಕಲು ಪ್ರಾರಂಭಿಸಬೇಕು.॥15॥

ಮೂಲಮ್ - 16

ನ ಚ ಕಾಲಮತೀತಂ ತೇ ನಿವೇದಯತಿ ಕಾಲವಿತ್ ।
ತ್ವರಮಾಣೋಽಪಿ ಸ ಪ್ರಾಜ್ಞಸ್ತವ ರಾಜನ್ವಶಾನುಗಃ ॥

ಅನುವಾದ

ರಾಜನೇ! ಪರಮಬುದ್ಧಿವಂತ ಶ್ರೀರಾಮನು ಸಮಯದ ಜ್ಞಾನ ಉಳ್ಳವನು ಮತ್ತು ಅವನಿಗೆ ತನ್ನ ಕಾರ್ಯದ ಸಿದ್ಧಿಗಾಗಿ ಅವಸರ ಉಂಟಾಗಿದೆ. ಹೀಗಿದ್ದರೂ ಅವನು ನಿನ್ನ ಅಧೀನದಲ್ಲೇ ಇದ್ದಾನೆ. ಸಂಕೋಚದಿಂದ ತನ್ನ ಕಾರ್ಯದ ಸಮಯ ಕಳೆದುಹೋಗುತ್ತಿದೆ ಎಂದು ನಿನ್ನಲ್ಲಿ ಹೇಳುತ್ತಿಲ್ಲ.॥16॥

ಮೂಲಮ್ - 17

ಕುಲಸ್ಯ ಹೇತುಃ ಸ್ಫೀತಸ್ಯ ದೀರ್ಘಬಂಧುಶ್ಚ ರಾಘವಃ ।
ಅಪ್ರಮೇಯಪ್ರಭಾವಶ್ಚ ಸ್ವಯಂ ಚಾಪ್ರತಿಮೋ ಗುಣೈಃ ॥

ಮೂಲಮ್ - 18

ತಸ್ಯ ತ್ವಂ ಕುರು ವೈ ಕಾರ್ಯಂ ಪೂರ್ವಂ ತೇನ ಕೃತಂ ತವ ।
ಹರೀಶ್ವರ ಕಪಿಶ್ರೇಷ್ಠಾನಾಜ್ಞಾಪಯಿತುಮರ್ಹಸಿ ॥

ಅನುವಾದ

ವಾನರರಾಜನೇ! ಭಗವಾನ್ ಶ್ರೀರಾಮನು ಚಿರಕಾಲ ಮಿತ್ರತ್ವವನ್ನು ಇರಿಸುವವನಾಗಿದ್ದಾನೆ. ಅವನು ನಿನ್ನ ಸಮೃದ್ಧಶಾಲಿ ಕುಲದ ಅಭ್ಯುದಯಕ್ಕೆ ಕಾರಣನಾಗಿದ್ದಾನೆ. ಅವನ ಪ್ರಭಾವ ಅತುಲವಾಗಿದೆ, ಗುಣಗಳಲ್ಲಿಯೂ ಅಪ್ರತಿಮನಾಗಿದ್ದಾನೆ. ಈಗ ನೀನು ಅವನ ಕಾರ್ಯವನ್ನು ಮಾಡು; ಏಕೆಂದರೆ ಅವನು ನಿನ್ನ ಕಾರ್ಯವನ್ನು ಮೊದಲೇ ಮಾಡಿಬಿಟ್ಟಿರುವನು. ನೀನು ಮುಖ್ಯ-ಮುಖ್ಯ ವಾನರರನ್ನು ಈ ಕಾರ್ಯಕ್ಕಾಗಿ ನೇಮಿಸು.॥17-18॥

ಮೂಲಮ್ - 19

ನಹಿ ತಾವದ್ ಭವೇತ್ಕಾಲೋ ವ್ಯತೀತಶ್ಚೋದನಾದೃತೇ ।
ಚೋದಿತಸ್ಯ ಹಿ ಕಾರ್ಯಸ್ಯ ಭವೇತ್ಕಾಲವ್ಯತಿಕ್ರಮಃ ॥

ಅನುವಾದ

ಶ್ರೀರಾಮಚಂದ್ರನು ಹೇಳುವ ಮೊದಲೇ ನಾವು ಕಾರ್ಯ ಪ್ರಾರಂಭಿಸಿದರೆ ಸಮಯ ಕಳೆದುಹೋದುದು ತಿಳಿಯಲಾಗುವುದಿಲ್ಲ. ಆದರೆ ಅವನು ಇದಕ್ಕಾಗಿ ಪ್ರೇರೇಪಿಸಬೇಕಾದಾಗ ನಾವು ಸಮಯ ಕಳೆಯುತ್ತಿದ್ದೇವೆ ಎಂದು ತಿಳಿಯಲಾಗುವುದು.॥19॥

ಮೂಲಮ್ - 20

ಅಕರ್ತುರಪಿ ಕಾರ್ಯಸ್ಯ ಭವಾನ್ಕರ್ತಾ ಹರೀಶ್ವರ ।
ಕಿಂಪುನಃ ಪ್ರತಿಕರ್ತುಸ್ತೇ ರಾಜ್ಯೇನ ಚ ಧನೇನ ಚ ॥

ಅನುವಾದ

ವಾನರರಾಜನೇ! ಯಾರು ನಿನ್ನ ಯಾವುದೇ ಉಪಕಾರ ಮಾಡದಿದ್ದರೂ ಅವನ ಕಾರ್ಯವನ್ನು ನೀನು ಸಿದ್ಧಗೊಳಿಸ ಬೇಕು ಮತ್ತೆ ರಾಮನು ವಾಲಿಯ ವಧೆ ಮತ್ತು ರಾಜ್ಯಪ್ರದಾನ ಮಾಡಿ ನಿನ್ನ ಉಪಕಾರ ಮಾಡಿರುವನು. ಅವನ ಕಾರ್ಯವನ್ನು ನೀನು ಬೇಗನೇ ಮಾಡು, ಇದಕ್ಕಾಗಿ ಹೇಳುವುದೇನಿದೆ.॥20॥

ಮೂಲಮ್ - 21

ಶಕ್ತಿಮಾನಪಿ ವಿಕ್ರಾಂತೋ ವಾನರರ್ಕ್ಷಗಣೇಶ್ವರ ।
ಕರ್ತುಂ ದಾಶರಥೇಃ ಪ್ರೀತಿಮಾಜ್ಞಾಯಾಂ ಕಿಂ ನ ಸಜ್ಜಸೇ ॥

ಅನುವಾದ

ವಾನರ ಮತ್ತು ಕರಡಿಗಳ ಒಡೆಯನಾದ ಸುಗ್ರೀವನೇ! ನೀನು ಶಕ್ತಿವಂತ ಮತ್ತು ಅತ್ಯಂತ ಪರಾಕ್ರಮಿಯಾಗಿರುವೆ. ಹೀಗಿದ್ದರೂ ದಶರಥನಂದನ ಶ್ರೀರಾಮನ ಪ್ರಿಯ ಕಾರ್ಯ ಮಾಡಲು ವಾನರರಿಗೆ ಅಪ್ಪಣೆ ಮಾಡುವುದರಲ್ಲಿ ಏಕೆ ವಿಳಂಬ ಮಾಡುತ್ತಿರುವೆ.॥21॥

ಮೂಲಮ್ - 22

ಕಾಮಂ ಖಲು ಶರೈಃ ಶಕ್ತಃ ಸುರಾಸುರಮಹೋರಗಾನ್ ।
ವಶೇ ದಾಶರಥಿಃ ಕರ್ತುಂ ತ್ವತ್ಪ್ರತಿಜ್ಞಾಮವೇಕ್ಷತೇ ॥

ಅನುವಾದ

ದಶರಥಕುಮಾರ ಭಗವಾನ್ ಶ್ರೀರಾಮನು ತನ್ನ ಬಾಣಗಳಿಂದ ಸಮಸ್ತ ದೇವತೆಗಳನ್ನು, ಅಸುರರನ್ನು, ದೊಡ್ಡ-ದೊಡ್ಡ ನಾಗಗಳನ್ನು ಕೂಡ ವಶಪಡಿಸಿ ಕೊಳ್ಳಬಲ್ಲನು, ಇದರಲ್ಲಿ ಸಂದೇಹವೇ ಇಲ್ಲ. ಆದೆ ನೀನು ಅವನ ಕಾರ್ಯವನ್ನು ಮಾಡಲು ಪ್ರತಿಜ್ಞೆ ಮಾಡಿರುವೆ; ಅದರ ದಾರಿ ನೋಡುತ್ತಿದ್ದಾನೆ ಅವನು.॥22॥

ಮೂಲಮ್ - 23

ಪ್ರಾಣತ್ಯಾಗಾವಿಶಂಕೇನ ಕೃತಂ ತೇನ ಮಹತ್ ಪ್ರಿಯಮ್ ।
ತಸ್ಯ ಮಾರ್ಗಾಮ ವೈದೇಹೀಂ ಪೃಥಿವ್ಯಾಮಪಿ ಚಾಂಬರೇ ॥

ಅನುವಾದ

ಅವನು ನಿನಗಾಗಿ ವಾಲಿಯ ಪ್ರಾಣಗಳನ್ನು ಕಳೆಯಲೂ ಕೂಡ ಹಿಂಜರಿಯಲಿಲ್ಲ. ಅವನು ನಿನ್ನ ದೊಡ್ಡ ಪ್ರಿಯಕಾರ್ಯವನ್ನು ಮಾಡಿಬಿಟ್ಟಿರುವನು; ಆದ್ದರಿಂದ ಈಗ ನಾವು ಅವನ ಪತ್ನೀ ವಿದೇಹಕುಮಾರಿ ಸೀತೆಯು ಭೂತಳದಲ್ಲಾಗಲಿ, ಆಕಾಶದಲ್ಲಾಗಲೀ ಎಲ್ಲೇ ಇದ್ದರೂ ಹುಡುಕಬೇಕು.॥23॥

ಮೂಲಮ್ - 24

ದೇವಾದಾನವ ಗಂಧರ್ವಾ ಅಸುರಾಃ ಸಮರುದ್ಗಣಾಃ ।
ನ ಚ ಯಕ್ಷಾ ಭಯಂ ತಸ್ಯ ಕುರ್ಯುಃ ಕಿಮಿವ ರಾಕ್ಷಸಾಃ ॥

ಅನುವಾದ

ದೇವತೆಗಳು, ದಾನವರು, ಗಂಧರ್ವರು, ಅಸುರರು, ಮರುದ್ಗಣರು, ಯಕ್ಷರೂ ಯಾರೂ ಶ್ರೀರಾಮನನ್ನು ಭಯಪಡಿಸಲಾರರು. ಹೀಗಿರುವಾಗ ರಾಕ್ಷಸರ ಮಾತಾದರೂ ಏನಿದೆ.॥24॥

ಮೂಲಮ್ - 25

ತದೇವಂ ಶಕ್ತಿಯುಕ್ತಸ್ಯ ಪೂರ್ವಂ ಪ್ರತಿಕೃತಸ್ತಥಾ ।
ರಾಮಸ್ಯಾರ್ಹಸಿ ಪಿಂಗೇಶ ಕರ್ತುಂ ಸರ್ವಾತ್ಮನಾ ಪ್ರಿಯಮ್ ॥

ಅನುವಾದ

ವಾನರರಾಜನೇ! ಇಂತಹ ಶಕ್ತಿಶಾಲಿ ಹಾಗೂ ಮೊದಲೇ ಉಪಕಾರ ಮಾಡುವ ಭಗವಾನ್ ಶ್ರೀರಾಮನ ಪ್ರಿಯ ಕಾರ್ಯವನ್ನು ನೀನು ನಿನ್ನ ಎಲ್ಲ ಶಕ್ತಿಗಳನ್ನೂ ತೊಡಗಿಸಿ ಮಾಡಬೇಕು.॥25॥

ಮೂಲಮ್ - 26

ನಾಧಸ್ತಾದವನೌ ನಾಪ್ಸು ಗತಿರ್ನೋಪರಿ ಚಾಂಬರೇ ।
ಕಸ್ಯಚಿತ್ಸಜ್ಜತೇಽಸ್ಮಾಕಂ ಕಪೀಶ್ವರ ತವಾಜ್ಞಯಾ ॥

ಅನುವಾದ

ಕಪೀಶ್ವರನೇ! ನೀನು ಆಜ್ಞಾಪಿಸಿದರೆ ನೀರಿನಲ್ಲಿ, ನೆಲದಲ್ಲಿ, ಪಾತಾಳದಲ್ಲಿ, ಆಕಾಶದಲ್ಲಿ ಎಲ್ಲೇಯಾದರೂ ನಮ್ಮಗಳ ಗತಿ ಕುಂಠಿತವಾಗಲಾರದು.॥26॥

ಮೂಲಮ್ - 27

ತದಾಜ್ಞಾಪಯ ಕಃ ಕಿಂ ತೇ ಕುತೋ ವಾಪಿ ವ್ಯವಸ್ಯತು ।
ಹರಯೋ ಹ್ಯಪ್ರಧೃಷ್ಯಾಸ್ತೇ ಸಂತಿ ಕೋಟ್ಯಗ್ರತೋಽನಘಃ ॥

ಅನುವಾದ

ನಿಷ್ಪಾಪ ಕಪಿರಾಜನೇ! ಯಾರು ಎಲ್ಲಿಂದ ಹೇಗೆ ನಿನ್ನ ಅಪ್ಪಣೆಯನ್ನು ಪಾಲಿಸಲು ಉದ್ಯೋಗಮಾಡಬೇಕೆಂದು ಆಜ್ಞಾಪಿಸು. ನಿನ್ನ ಅಧೀನದಲ್ಲಿ ಯಾರೂ ಸೋಲಿಸಲಾರದ ಕೋಟ್ಯಾವಧಿ ವಾನರರು ಇದ್ದಾರೆ.॥27॥

ಮೂಲಮ್ - 28

ತಸ್ಯ ತದ್ವಚನಂ ಶ್ರುತ್ವಾ ಕಾಲೇ ಸಾಧು ನಿರೂಪಿತಮ್ ।
ಸುಗ್ರೀವಃ ಸತ್ತ್ವಸಂಪನ್ನಶ್ಚಕಾರ ಮತಿಮುತ್ತಮಾಮ್ ॥

ಅನುವಾದ

ಸುಗ್ರೀವನು ಸತ್ತ್ವಗುಣ ಸಂಪನ್ನನಾಗಿದ್ದನು. ಹನುಮಂತನು ಸರಿಯಾದ ಸಮಯದಲ್ಲಿ ಚೆನ್ನಾಗಿ ಹೇಳಿದ ಮಾತನ್ನು ಕೇಳಿ ಭಗವಾನ್ ಶ್ರೀರಾಮನ ಉತ್ತಮ ಕಾರ್ಯವನ್ನು ಮಾಡಲು ನಿಶ್ಚಯಿಸಿದನು.॥28॥

ಮೂಲಮ್ - 29

ಸಂ ಸದಿದೇಶಾತಿಮತಿಮಾನ್ ನೀಲಂ ನಿತ್ಯಕೃತೋದ್ಯಮಮ್ ।
ದಿಕ್ಷು ಸರ್ವಾಸು ಸರ್ವೇಷಾಂ ಸೈನ್ಯಾನಾಮುಪಸಂಗ್ರಹೇ ॥

ಮೂಲಮ್ - 30

ಯಥಾ ಸೇನಾ ಸಮಗ್ರಾ ಮೇ ಯೂಥಪಾಲಾಶ್ಚ ಸರ್ವರ್ಶಃ ।
ಸಮಾಗಚ್ಛಂತ್ಯಸಂಗೇನ ಸೇನಾಗ್ರ್ಯೇಯೇಣ ತಥಾ ಕುರು ॥

ಅನುವಾದ

ಅವನು ಪರಮ ಬುದ್ಧಿವಂತನಾಗಿದ್ದನು. ಆದ್ದರಿಂದ ನಿತ್ಯ ಉದ್ಯಮಶೀಲನಾದ ನೀಲ ಎಂಬ ವಾನರನಿಗೆ ಸಮಸ್ತ ದಿಕ್ಕುಗಳಿಂದ ಎಲ್ಲ ವಾನರ ಸೈನ್ಯವನ್ನು ಒಟ್ಟುಗೂಡಿಸುವಂತೆ ಆಜ್ಞಾಪಿಸಿ ‘ನನ್ನ ಎಲ್ಲ ಸೈನ್ಯವು ಇಲ್ಲಿಗೆ ಬಂದು ನೆರೆಯಲು ಮತ್ತು ಎಲ್ಲ ಯೂಥಪತಿಗಳು ತಮ್ಮ ಸೈನ್ಯ ಮತ್ತು ಸೇನಾಪತಿಗಳೊಂದಿಗೆ ತಡಮಾಡದೆ ಇಲ್ಲಿ ಉಪಸ್ಥಿತವಾಗುವಂತೆ ಪ್ರಯತ್ನಿಸು’ ಎಂದು ಹೇಳಿದನು.॥29-30॥

ಮೂಲಮ್ - 31

ಯೇ ತ್ವಂತಪಾಲಾಃ ಪ್ಲವಗಾಃ ಶೀಘ್ರಗಾ ವ್ಯವಸಾಯಿನಃ ।
ಸಮಾನಯಂತುತೇ ಶೀಘ್ರಂ ತ್ವರಿತಾಃ ಶಾಸನಾನ್ಮಮ ।
ಸ್ವಯಂ ಚಾನಂತರಂ ಕಾರ್ಯಂ ಭವಾನೇವಾನುಪಶ್ಯತು ॥

ಅನುವಾದ

ರಾಜ್ಯದ ಸೀಮಾರಕ್ಷಕರಾದ ಶೀಘ್ರಗಾಮಿ ವಾನರರೆಲ್ಲರೂ ನನ್ನ ಆಜ್ಞೆಯಂತೆ ಬೇಗನೆ ಇಲ್ಲಿಗೆ ಬರಲಿ. ಇದಲ್ಲದೆ ಬೇರೆ ಅಗತ್ಯವಾದ ಕರ್ತವ್ಯವಿದ್ದರೆ ನೀನು ಅದರ ಕುರಿತು ವಿಚಾರ ಮಾಡು.॥31॥

ಮೂಲಮ್ - 32

ತ್ರಿಪಂಚರಾತ್ರಾದೂರ್ಧ್ವಂ ಯಃ ಪ್ರಾಪ್ನುಯಾದಿಹ ವಾನರಃ ।
ತಸ್ಯ ಪ್ರಾಣಾಂತಿಕೋ ದಂಡೋ ನಾತ್ರ ಕಾರ್ಯಾವಿಚಾರಣಾ ॥

ಅನುವಾದ

ಹದಿನೈದು ದಿನಗಳೊಳಗೆ ಇಲ್ಲಿಗೆ ಬಾರದಿರುವ ವಾನರರಿಗೆ ದೇಹಾಂತ ಶಿಕ್ಷೆ ಕೊಡಲಾಗುವುದು, ಇದರಲ್ಲಿ ಬೇರೇನೂ ವಿಚಾರಮಾಡಬಾರದು.॥32॥

ಮೂಲಮ್ - 33

ಹರೀಂಶ್ಚ ವೃದ್ಧಾನುಪಯಾತು ಸಾಂಗದೋ
ಭವಾನ್ಮಮಾಜ್ಞಾಮಧಿಕೃತ್ಯ ನಿಶ್ಚಿತಮ್ ।
ಇತಿ ವ್ಯವಸ್ಥಾಂ ಹರಿಪುಂಗವೇಶ್ವರೋ
ವಿಧಾಯ ವೇಶ್ಮ ಪ್ರವಿವೇಶ ವೀರ್ಯವಾನ್ ॥

ಅನುವಾದ

ಇದು ನನ್ನ ನಿಶ್ಚಿತವಾದ ಅಪ್ಪಣೆಯಾಗಿದೆ. ಇದಕ್ಕನುಸಾರ ಈ ವ್ಯವಸ್ಥೆಯ ಅಧಿಕಾರ ಪಡೆದು ಅಂಗದನೊಂದಿಗೆ ನೀನು ಸ್ವತಃ ಹಿರಿಯ ವೃದ್ಧ ವಾನರರ ಬಳಿಗೆ ಹೋಗು. ಹೀಗೆ ವ್ಯವಸ್ಥೆಮಾಡಿ ಮಹಾಬಲಿ ವಾನರರಾಜ ಸುಗ್ರೀವನು ತನ್ನ ಅರಮನೆಗೆ ನಡೆದನು.॥33॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥29॥