०२१ हनुमता तारासान्त्वनम्

वाचनम्
ಭಾಗಸೂಚನಾ

ಹನುಮಂತನು ತಾರೆಯನ್ನು ಸಮಾಧಾನಪಡಿಸಿದುದು, ತಾರೆಯು ಪತಿಯೊಂದಿಗೆ ಸಹಗಮನ ಮಾಡಲು ನಿಶ್ಚಯಿಸಿದುದು

ಮೂಲಮ್ - 1

ತತೋ ನಿಪತಿತಾಂ ತಾರಾಂ ಚ್ಯುತಾಂ ತಾರಾಮಿವಾಂಬರಾತ್ ।
ಶನೈರಾಶ್ವಾಸಯಾಮಾಸ ಹನೂಮಾನ್ ಹರಿಯೂಥಪಃ ॥

ಅನುವಾದ

ಆಕಾಶದಿಂದ ಕಳಚಿಬಿದ್ದ ನಕ್ಷತ್ರದಂತೆ ನೆಲದಲ್ಲಿ ಬಿದ್ದ ತಾರೆಯನ್ನು ನೋಡಿ ವಾನರಯೂಥಪತಿ ಹನುಮಂತನು ನಿಧಾನವಾಗಿ ಸಮಜಾಯಿಸತೊಡಗಿದನು.॥1॥

ಮೂಲಮ್ - 2

ಗುಣದೋಷಕೃತಂ ಜಂತುಃ ಸ್ವಕರ್ಮಫಲಹೇತುಕಮ್ ।
ಅವ್ಯಗ್ರಸ್ಯದವಾಪ್ನೋತಿ ಸರ್ವಂ ಪ್ರೇತ್ಯ ಶುಭಾಶುಭಮ್ ॥

ಅನುವಾದ

ದೇವಿ! ಗುಣಬುದ್ಧಿಯಿಂದ ಅಥವಾ ದೋಷಬುದ್ಧಿಯಿಂದ ಜೀವಿಯು ಮಾಡಿದ ಕರ್ಮಗಳೇ ಸುಖ-ದುಃಖ ರೂಪವಾದ ಫಲವನ್ನು ಕೊಡುವವು. ಪರಲೋಕಕ್ಕೆ ಹೋಗಿ ಪ್ರತಿಯೊಬ್ಬ ಜೀವಿಯು ಶಾಂತಭಾವದಿಂದ ಇದ್ದು ತನ್ನ ಶುಭಾಶುಭ ಎಲ್ಲ ಕರ್ಮಗಳ ಫಲಗಳನ್ನು ಅನುಭವಿಸುತ್ತಾನೆ.॥2॥

ಮೂಲಮ್ - 3

ಶೋಚ್ಯಾ ಶೋಚಸಿ ಕಂ ಶೋಚ್ಯಂ ದೀನಂ ದೀನಾನುಕಂಪಸೇ ।
ಕಸ್ಯ ಕೋ ವಾ ನು ಶೋಚ್ಯೋಽಸ್ತಿ ದೇಹೇಽಸ್ಮಿನ್ ಬುದ್ಬುದೋಪಮೇ ॥

ಅನುವಾದ

ನೀನು ಸ್ವತಃ ಶೋಚನೀಯಳಾಗಿರುವೆ, ಮತ್ತೆ ಬೇರೆ ಯಾರನ್ನು ಶೋಚನೀಯನೆಂದು ತಿಳಿದು ಶೋಕಿಸುತ್ತಿರುವೆ? ಸ್ವತಃ ದೀನಳಾಗಿ ಬೇರೆ ಯಾವ ದೀನನ ಮೇಲೆ ದಯೆ ಮಾಡುತ್ತಿರುವೆ? ನೀರಗುಳ್ಳೆಯಂತಿರುವ ಈ ಶರೀರದಲ್ಲಿ ಇದ್ದ ಜೀವಿಯು ಯಾವ ಜೀವಿಗಾಗಿ ಶೋಚನೀಯನಾಗಿದ್ದಾನೆ.॥3॥

ಮೂಲಮ್ - 4

ಅಂಗದಸ್ತು ಕುಮಾರೋಽಯಂ ದ್ರಷ್ಟವ್ಯೋ ಜೀವಪುತ್ರಯಾ ।
ಆಯತ್ಯಾಂ ಚ ವಿಧೇಯಾನಿ ಸಮರ್ಥಾನ್ಯಸ್ಯ ಚಿಂತಯ ॥

ಅನುವಾದ

ನಿನ್ನ ಪುತ್ರ ಅಂಗದ ಜೀವಂತನಾಗಿದ್ದಾನೆ. ಈಗ ನೀನು ಅವನ ಕಡೆಗೆ ನೋಡಬೇಕು ಮತ್ತು ಅವನಿಗಾಗಿ ಭವಿಷ್ಯದಲ್ಲಿ ಉನ್ನತಿಗೆ ಸಾಧಕ ಶ್ರೇಷ್ಠಕಾರ್ಯದ ಕುರಿತು ವಿಚಾರ ಮಾಡಬೇಕು.॥4॥

ಮೂಲಮ್ - 5

ಜಾನಾಸ್ಯನಿಯತಾಮೇವಂ ಭೂತಾನಾಮಾಗತಿಂ ಗತಿಮ್ ।
ತಸ್ಮಾಚ್ಛುಭಂ ಹಿ ಕರ್ತವ್ಯಂ ಪಂಡಿತೇನೇಹ ಲೌಕಿಕಮ್ ॥

ಅನುವಾದ

ದೇವಿ! ನೀನು ವಿದುಷಿಯಾಗಿರುವೆ, ಆದ್ದರಿಂದ ಯಾವುದೇ ಪ್ರಾಣಿಗಳ ಜನ್ಮಮೃತ್ಯುವನ್ನು ಯಾರೂ ನಿಶ್ಚಯಿಸಲಾರರು. ಅದಕ್ಕಾಗಿ ಶುಭ (ಪರಲೋಕಕ್ಕೆ ಸುಖಮಯ) ಕರ್ಮವನ್ನೇ ಮಾಡಬೇಕು. ಹೆಚ್ಚು ಅಳುವುದು ಮುಂತಾದ ಲೌಕಿಕ ಕರ್ಮ (ವ್ಯವಹಾರ) ಮಾಡಬಾರದು.॥5॥

ಮೂಲಮ್ - 6

ಯಸ್ಮಿನ್ ಹರಿಸಹಸ್ರಾಣಿ ಶತಾನಿ ನಿಯುತಾನಿ ಚ ।
ವರ್ತಯಂತಿ ಕೃತಾಶಾನಿ ಸೋಽಯಂ ದಿಷ್ಟಾಂತಮಾಗತಃ ॥

ಅನುವಾದ

ನೂರಾರು, ಸಾವಿರಾರು, ಲಕ್ಷಗಟ್ಟಲೆ ವಾನರರು ಯಾರ ಮೇಲಿನ ಆಸೆಯಿಂದ ಜೀವನ ನಿರ್ವಾಹಮಾಡುತ್ತಿದ್ದರೋ, ಆ ವಾನರರಾಜನು ಇಂದು ತನ್ನ ಪ್ರಾರಬ್ಧ ನಿರ್ಮಿತ ಆಯುಸ್ಸಿನ ಅವಧಿಯನ್ನು ಪೂರ್ಣ ಗೊಳಿಸಿರುವನು.॥6॥

ಮೂಲಮ್ - 7

ಯದಯಂ ನ್ಯಾಯದೃಷ್ಟಾರ್ಥಃ ಸಾಮದಾನ ಕ್ಷಮಾಪರಃ ।
ಗತೋ ಧರ್ಮಜಿತಾಂ ಭೂಮಿಂ ನೈನಂ ಶೋಚಿತುಮರ್ಹಸಿ ॥

ಅನುವಾದ

ಇವನು ನೀತಿಶಾಸ್ತ್ರಕ್ಕಗನುಗುಣವಾಗಿ ರಾಜ್ಯಕಾರ್ಯವನ್ನು ನಡೆಸಿರುವನು. ಇವನು ಸಮಯಕ್ಕೆ ಸರಿಯಾಗಿ ಸಾಮ, ದಾನ ಮತ್ತು ಕ್ಷಮೆ ಮಾಡುತ್ತಾ ಬಂದಿರುವನು. ಆದ್ದರಿಂದ ಧರ್ಮಾನುಸಾರ ಪ್ರಾಪ್ತವಾಗುವ ಲೋಕಕ್ಕೆ ಹೋಗಿರುವನು. ಇವನಿಗಾಗಿ ನೀನು ಶೋಕಿಸಬಾರದು.॥7॥

ಮೂಲಮ್ - 8

ಸರ್ವೇ ಚ ಹರಿಶಾರ್ದೂಲಾಃ ಪುತ್ರಶ್ಚಾಯಂ ತವಾಂಗದಃ ।
ಹರ್ಯೃಕ್ಷಪತಿರಾಜ್ಯಂ ಚ ತ್ವತ್ಸನಾಥಮನಿಂದಿತೇ ॥

ಅನುವಾದ

ಸತೀ ಸಾಧ್ವೀ ದೇವಿ! ಇವೆಲ್ಲ ವಾನರರು, ಈ ನಿನ್ನ ಪುತ್ರ ಅಂಗದ, ವಾನರ ಮತ್ತು ಕರಡಿಗಳ ಈ ರಾಜ್ಯವು ನಿನ್ನಿಂದಲೇ ಸನಾಥವಾಗಿದೆ. ನೀನೇ ಇವರೆಲ್ಲರ ಸ್ವಾಮಿನಿಯಾಗಿರುವೆ.॥8॥

ಮೂಲಮ್ - 9

ತಾವಿಮೌ ಶೋಕಸಂತಪ್ತೌ ಶನೈಃ ಪ್ರೇರಯ ಭಾಮಿನಿ ।
ತ್ವಯಾ ಪರಿಗೃಹೀತೋಽಯಮಂಗದಃ ಶಾಸ್ತು ಮೇದಿನೀಮ್ ॥

ಅನುವಾದ

ಭಾಮಿನಿ! ಈ ಅಂಗದ ಮತ್ತು ಸುಗ್ರೀವರೂ ಶೋಕದಿಂದ ಸಂತಪ್ತರಾಗಿದ್ದಾರೆ. ನೀನು ಇವರಿಗೆ ಮುಂದಿನ ಕಾರ್ಯಕ್ಕಾಗಿ ಪ್ರೇರೇಪಿಸಬೇಕು. ನಿನ್ನ ಅಧೀನದಲ್ಲಿದ್ದು ಅಂಗದನು ಈ ಪೃಥ್ವಿಯನ್ನು ಆಳಲಿ.॥9॥

ಮೂಲಮ್ - 10

ಸಂತತಿಶ್ಚ ಯಥಾ ದೃಷ್ಟಾ ಕೃತ್ಯಂ ಯಚ್ಚಾಪಿ ಸಾಂಪ್ರತಮ್ ।
ರಾಜ್ಞಸ್ತತ್ಕ್ರಿಯತಾಂ ಸರ್ವಮೇಷ ಕಾಲಸ್ಯ ನಿಶ್ಚಯಃ ॥

ಅನುವಾದ

ಸಂತಾನ ಹುಟ್ಟುವ ಪ್ರಯೋಜನ ಶಾಸ್ತ್ರದಲ್ಲಿ ಹೇಳಿದಂತೆ, ಈಗ ರಾಜಾ ವಾಲಿಯು ಪಾರಲೌಕಿಕ ಶ್ರೇಯಸ್ಸಿಗಾಗಿ ಇರುವ ಕರ್ತವ್ಯವನ್ನೇ ಮಾಡು, ಇದೇ ಸಮಯದ ನಿಶ್ಚಿತ ಪ್ರೇರಣೆಯಾಗಿದೆ.॥10॥

ಮೂಲಮ್ - 11

ಸಂಸ್ಕಾರ್ಯೋ ಹರಿರಾಜಸ್ತು ಅಂಗದಶ್ಚಾಭಿಷಿಚ್ಯತಾಮ್ ।
ಸಿಂಹಾಸನಗತಂ ಪುತ್ರಂ ಪಶ್ಯಂತೀ ಶಾಂತಿಮೇಷ್ಯಸಿ ॥

ಅನುವಾದ

ವಾನರ ರಾಜನ ಅಂತ್ಯೇಷ್ಠಿ ಸಂಸ್ಕಾರ ಮತ್ತು ಅಂಗದ ಕುಮಾರನ ಪಟ್ಟಾಭಿಷೇಕ ಮಾಡಲಾಗುವುದು. ರಾಜಸಿಂಹಾಸನದಲ್ಲಿ ಕುಳಿತಿರುವ ಮಗನನ್ನು ನೋಡಿ ನಿನಗೆ ಶಾಂತಿ ಸಿಗಬಹುದು.॥11॥

ಮೂಲಮ್ - 12

ಸಾ ತಸ್ಯ ವಚನಂ ಶ್ರುತ್ವಾ ಭರ್ತೃವ್ಯಸನಪೀಡಿತಾ ।
ಅಬ್ರವೀದುತ್ತರಂ ತಾರಾ ಹನುಮಂತಮವಸ್ಥಿತಮ್ ॥

ಅನುವಾದ

ತಾರೆಯು ತನ್ನ ಸ್ವಾಮಿಯ ವಿರಹ ಶೋಕದಿಂದ ಪೀಡಿತಳಾಗಿದ್ದಳು. ಈ ಮೇಲಿನ ಮಾತನ್ನು ಕೇಳಿ ಎದುರಿಗೆ ನಿಂತಿರುವ ಹನುಮಂತನಲ್ಲಿ ಹೇಳಿದಳು.॥12॥

ಮೂಲಮ್ - 13

ಅಂಗದಪ್ರತಿರೂಪಾಣಾಂ ಪುತ್ರಾಣಾಮೇಕತಃ ಶತಮ್ ।
ಹತಸ್ಯಾಪ್ಯಸ್ಯ ವೀರಸ್ಯ ಗಾತ್ರಸಂಶ್ಲೇಷಣಂ ವರಮ್ ॥

ಅನುವಾದ

ಅಂಗದನಂತಹ ನೂರು ಪುತ್ರರು ಒಂದೆಡೆ ಹಾಗೂ ಸತ್ತಿರುವ ಈ ವೀರವರ ಸ್ವಾಮಿಯನ್ನು ಆಲಿಂಗಿಸುತ್ತಾ ಸತಿಹೋಗುವುದು ಇನ್ನೊಂದೆಡೆ; ಇವೆರಡರಲ್ಲಿ ವೀರಪತಿಯೊಂದಿಗೆ ಸಹಗಮನ ಮಾಡುವುದೇ ನನಗೆ ಶ್ರೇಷ್ಠವೆಂದು ತೋರುತ್ತದೆ.॥13॥

ಮೂಲಮ್ - 14

ನ ಚಾಹಂ ಹರಿರಾಜಸ್ಯ ಪ್ರಭವಾಮ್ಯಂಗದಸ್ಯ ವಾ ।
ಪಿತೃವ್ಯಸ್ತಸ್ಯ ಸುಗ್ರೀವಃ ಸರ್ವಕಾರ್ಯೇಷ್ವನಂತರಃ ॥

ಅನುವಾದ

ನಾನಾದರೋ ವಾನರ ರಾಜ್ಯದ ಒಡತಿಯಾಗಿಲ್ಲ ಮತ್ತು ಅಂಗದನಿಗಾಗಿ ಏನಾದರೂ ಮಾಡುವ ಅಧಿಕಾರ ನನಗಿಲ್ಲ. ಇವನ ಚಿಕ್ಕಪ್ಪ ಸುಗ್ರೀವನೇ ಸಮಸ್ತ ಕಾರ್ಯಗಳಿಗೆ ಸಮರ್ಥನಾಗಿದ್ದಾನೆ. ಅವನೇ ನನಗಿಂತ ಇವನಿಗೆ ನಿಕಟವರ್ತಿಯಾಗಿದ್ದಾನೆ.॥14॥

ಮೂಲಮ್ - 15

ನ ಹ್ಯೇಷಾ ಬುದ್ಧಿರಾಸ್ಥೇಯಾ ಹನುಮನ್ನಂಗದಂ ಪ್ರತಿ ।
ಪಿತಾ ಹಿ ಬಂಧುಃ ಪುತ್ರಸ್ಯ ನ ಮಾತಾ ಹರಿಸತ್ತಮ ॥

ಅನುವಾದ

ಕಪಿಶ್ರೇಷ್ಠ ಹನುಮಂತನೇ! ಅಂಗದನ ವಿಷಯದಲ್ಲಿ ನಿನ್ನ ಈ ಸಲಹೆ ನನಗೆ ಕಾರ್ಯಗತ ಮಾಡಲು ಯೋಗ್ಯವಲ್ಲ. ಪುತ್ರನ ನಿಜವಾದ ಬಂಧು (ಸಹಾಯಕ) ತಂದೆ ಮತ್ತು ಚಿಕ್ಕಪ್ಪನೇ ಆಗಿದ್ದಾನೆ, ತಾಯಿ ಅಲ್ಲ ಎಂಬುದು ನೀನು ತಿಳಿಯಬೇಕು.॥15॥

ಮೂಲಮ್ - 16

ನ ಹಿ ಮಮ ಹರಿರಾಜಸಂಶ್ರಯಾತ್
ಕ್ಷತ್ಕ್ಷಮತರಮಸ್ತಿ ಪರತ್ರ ಚೇಹ ವಾ ।
ಅಭಿಮುಖಹತವೀರಸೇವಿತಂ
ಶಯನಮಿದಂ ಮಮ ಸೇವಿತುಂ ಕ್ಷಮಮ್ ॥

ಅನುವಾದ

ನನಗೆ ವಾನರರಾಜ ವಾಲಿಯನ್ನು ಅನುಗಮನ ಮಾಡುವುದಕ್ಕಿಂತ ಮಿಗಿಲಾದ ಕಾರ್ಯ ಈ ಲೋಕದಲ್ಲಿ ಅಥವಾ ಪರಲೋಕದಲ್ಲಿ ಯಾವುದೂ ಉಚಿತವಾಗಿಲ್ಲ. ಯುದ್ಧದಲ್ಲಿ ಶತ್ರುವಿನೊಡನೆ ಹೋರಾಡುತ್ತಾ ಸತ್ತಿರುವ ನನ್ನ ವೀರ ಸ್ವಾಮಿಯ ಚಿತೆ ಏರುವುದೇ ನನಗೆ ಸರ್ವಥಾ ಯೋಗ್ಯವಾಗಿದೆ.॥16॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತೊಂದನೆಯ ಸರ್ಗ ಸಂಪೂರ್ಣವಾಯಿತು.॥21॥