०२० ताराविलापः

वाचनम्
ಭಾಗಸೂಚನಾ

ತಾರಾದೇವಿಯ ವಿಲಾಪ

ಮೂಲಮ್ - 1

ರಾಮಚಾಪವಿಸೃಷ್ಟೇನ ಶರೇಣಾಂತಕರೇಣ ತಮ್ ।
ದೃಷ್ಟ್ವಾ ವಿನಿಹತಂ ಭೂಮೌ ತಾರಾ ತಾರಾಧಿಪಾನನಾ ॥

ಮೂಲಮ್ - 2

ಸಾ ಸಮಾಸಾದ್ಯ ಭರ್ತಾರಂ ಪರ್ಯಷ್ವಜತ ಭಾಮಿನೀ ।
ಇಷುಣಾಭಿಹತಂ ದೃಷ್ಟ್ವಾ ವಾಲಿನಂ ಕುಂಜರೋಪಮಮ್ ॥

ಮೂಲಮ್ - 3

ವಾನರಂ ಪರ್ವತೇಂದ್ರಾಭಂ ಶೋಕಸಂತಪ್ತಮಾನಸಾ ।
ತಾರಾ ತರುಮಿವೋನ್ಮೂಲಂ ಪರ್ಯದೇವಯತಾತುರಾ ॥

ಅನುವಾದ

ಚಂದ್ರಮುಖಿ ತಾರೆಯು ನೋಡಿದಳು - ತನ್ನ ಸ್ವಾಮಿ ವಾನರರಾಜ ವಾಲಿಯು ಶ್ರೀರಾಮನ ಧನುಸ್ಸಿನಿಂದ ಬಿಟ್ಟ ಪ್ರಾಣಾಂತಕಾರಿ ಬಾಣದಿಂದ ಗಾಯಗೊಂಡು ನೆಲದಲ್ಲಿ ಬಿದ್ದಿರುವನು. ಆ ಸ್ಥಿತಿಯಲ್ಲಿ ಅವನ ಬಳಿಗೆ ಹೋಗಿ ಆ ಭಾಮಿನಿಯು ಅವನ ಶರೀರವನ್ನು ಅಪ್ಪಿಕೊಂಡಳು. ತನ್ನ ಶರೀರದಿಂದ ಗಜರಾಜ ಮತ್ತು ಗಿರಿರಾಜನನ್ನು ಸೋಲಿಸುವ ಆ ವಾನರ ರಾಜನು ಬಾಣದಿಂದ ಆಹತನಾಗಿ ಬೇರುಕಿತ್ತ ಮರದಂತೆ ಧರಾಶಾಯಿಯಾದವನನ್ನು ನೋಡಿ ತಾರೆಯ ಹೃದಯ ಶೋಕದಿಂದ ಸಂತಪ್ತವಾಗಿ ಆತುರಳಾಗಿ ವಿಲಾಪಿಸತೊಡಗಿದಳು.॥1-3॥

ಮೂಲಮ್ - 4

ರಣೇ ದಾರುಣವಿಕ್ರಾಂಕ ಪ್ರವೀರ ಪ್ಲವತಾಂ ವರ ।
ಕಿಮಿದಾನೀಂ ಪುರೋಭಾಗಾಮದ್ಯ ತ್ವಂ ನಾಭಿಭಾಷಸೇ ॥

ಅನುವಾದ

ರಣದಲ್ಲಿ ಭಯಾನಕ ಪರಾಕ್ರಮ ಪ್ರಕಟಪಡಿಸುವ ಮಹಾವೀರ ವಾನರರಾಜಾ! ಇಂದು ಈಗ ತನ್ನ ಎದುರಿಗೆ ನನ್ನನ್ನು ನೋಡಿಯೂ ಏಕೆ ಮಾತನಾಡುವುದಿಲ್ಲ.॥4॥

ಮೂಲಮ್ - 5

ಉತ್ತಿಷ್ಠ ಹರಿಶಾರ್ದೂಲ ಭಜಸ್ಯ ಶಯನೋತ್ತಮಮ್ ।
ನೈವಂವಿಧಾಃ ಶೇರತೇ ಹಿ ಭೂಮೌ ನೃಪತಿಸತ್ತಮಾಃ ॥

ಅನುವಾದ

ಕಪಿಶ್ರೇಷ್ಠನೇ! ಏಳು, ಉತ್ತಮ ಶಯ್ಯೆಯನ್ನು ಆಶ್ರಯಿಸು ನಿನ್ನಂತಹ ಭೂಪಾಲನು ನೆಲದಲ್ಲಿ ಮಲಗುವುದಿಲ್ಲ.॥5॥

ಮೂಲಮ್ - 6

ಅತೀವ ಖಲು ತೇ ಕಾಂತಾ ವಸುಧಾ ವಸುಧಾಧಿಪ ।
ಗತಾಸುರಪಿ ತಾಂ ಗಾತ್ರೈರ್ಮಾಂ ವಿಹಾಯ ನಿಷೇವಸೇ ॥

ಅನುವಾದ

ಪೃಥಿವೀನಾಥ! ಖಂಡಿತವಾಗಿ ಈ ಪೃಥಿವಿಯು ನಿಮಗೆ ಅತ್ಯಂತ ಪ್ರಿಯವಾಗಿದೆ. ಅದಕ್ಕೆಂದೇ ನಿಷ್ಪ್ರಾಣನಾಗಿದ್ದರೂ ನೀವು ಇಂದು ನನ್ನನ್ನು ಬಿಟ್ಟು ತನ್ನ ಶರೀರದಿಂದ ಈ ವಸುಧೆಯನ್ನು ಅಪ್ಪಿಕೊಂಡು ಮಲಗಿರುವಿರಿ.॥6॥

ಮೂಲಮ್ - 7

ವ್ಯಕ್ತಮದ್ಯ ತ್ವಯಾ ವೀರ ಧರ್ಮತಃ ಸಂಪ್ರವರ್ತತಾ ।
ಕಿಷ್ಕಿಂಧೇವ ಪುರೀ ರಮ್ಯಾ ಸ್ವರ್ಗಮಾರ್ಗೇ ವಿನಿರ್ಮಿತಾ ॥

ಅನುವಾದ

ವೀರವರನೇ! ನೀವು ಧರ್ಮಯುಕ್ತ ಯುದ್ಧಮಾಡಿ ಸ್ವರ್ಗಮಾರ್ಗದಲ್ಲಿಯೂ ಕಿಷ್ಕಿಂಧೆಯಂತಹ ರಮಣೀಯ ಪುರಿಯನ್ನು ನಿರ್ಮಿಸಿಕೊಂಡಿರುವಿರಿ, ಈ ಮಾತು ಇಂದಿಗೆ ಸ್ಪಷ್ಟವಾಯಿತು. (ಇಲ್ಲದಿದ್ದರೆ ನೀವು ಕಿಷ್ಕಿಂಧೆಯನ್ನು ಬಿಟ್ಟು ಇಲ್ಲಿ ಏಕೆ ಮಲಗುತ್ತಿದ್ದೆ?.॥7॥

ಮೂಲಮ್ - 8

ಯಾನ್ಯಸ್ಮಾಭಿಸ್ತ್ವಯಾ ಸಾರ್ಧಂ ವನೇಷು ಮಧುಗಂಧಿಷು ।
ವಿಹೃತಾನಿತ್ವಯಾ ಕಾಲೇ ತೇಷಾಮುಪರಮಃ ಕೃತಃ ॥

ಅನುವಾದ

ನಿಮ್ಮೊಂದಿಗೆ ಮಧುರ ಸುಗಂಧಯುಕ್ತ ವನಗಳಲ್ಲಿ ನಾವು ಮಾಡಿದ ವಿಹಾರವೆಲ್ಲ ಈಗ ನೀವು ಎಂದೆಂದಿಗೂ ಸಮಾಪ್ತಗೊಳಿಸಿದಿರಿ.॥8॥

ಮೂಲಮ್ - 9

ನಿರಾನಂದಾ ನಿರಾಶಾಹಂ ನಿಮಗ್ನಾ ಶೋಕಸಾಗರೇ ।
ತ್ವಯಿ ಪಂಚತ್ವಮಾಪನ್ನೇ ಮಹಾಯೂಥಪಯೂಥಪೇ ॥

ಅನುವಾದ

ನಾಥ! ನೀವು ದೊಡ್ಡ-ದೊಡ್ಡ ಯೂಥಪತಿಗಳಿಗೂ ಒಡೆಯರಾಗಿದ್ದೀರಿ. ಇಂದು ನೀವು ಸತ್ತುಹೋಗುವುದರಿಂದ ನನ್ನ ಎಲ್ಲ ಆನಂದ ಸೂರೆಹೋಯಿತು. ನಾನು ಎಲ್ಲ ರೀತಿಯಿಂದ ನಿರಾಶಳಾಗಿ ಶೋಕ ಸಮುದ್ರದಲ್ಲಿ ಮುಳುಗಿ ರುವೆನು.॥9॥

ಮೂಲಮ್ - 10

ಹೃದಯಂ ಸುಸ್ಥಿರಂ ಮಹ್ಯಂ ದೃಷ್ಟ್ವಾನಿಪತಿತಂ ಭುವಿ ।
ಯನ್ನ ಶೋಕಾಭಿಸಂತಪ್ತಂ ಸ್ಫುಟತೇಽದ್ಯ ಸಹಸ್ರಧಾ ॥

ಅನುವಾದ

ನಿಶ್ಚಯವಾಗಿಯೂ ನನ್ನ ಹೃದಯ ಬಹಳ ಕಠೋರವಾಗಿದೆ, ಇಂದು ನಿಮ್ಮನ್ನು ಪೃಥಿವಿಯಲ್ಲಿ ಬಿದ್ದಿರುವುದನ್ನು ನೋಡಿಯೂ ಶೋಕದಿಂದ ಸಂತಪ್ತವಾಗಿ ಒಡೆದುಹೋಗಿಲ್ಲವಲ್ಲ! ಇದು ಸಾವಿರ ಹೋಳಾಗಿ ಹೋಗುವುದಿಲ್ಲವಲ್ಲ.॥10॥

ಮೂಲಮ್ - 11

ಸುಗ್ರೀವಸ್ಯ ತ್ವಯಾ ಭಾರ್ಯಾ ಹೃತಾ ಸ ಚ ವಿವಾಸಿತಃ ।
ಯತ್ತತ್ ತಸ್ಯ ತ್ವಯಾ ವ್ಯಷ್ಟಿಃ ಪ್ರಾಪ್ತೇಯಂ ಪ್ಲವಗಾಧಿಪ ॥

ಅನುವಾದ

ವಾನರರಾಜನೇ! ನೀವು ಸುಗ್ರೀವನ ಪತ್ನಿಯನ್ನು ಕಿತ್ತುಕೊಂಡು, ಅವನನ್ನು ಮನೆಯಿಂದ ಹೊರಗೆ ಹಾಕಿದಿರಿ. ಅದರ ಫಲವೇ ಹೀಗೆ ನಿಮಗೆ ಪ್ರಾಪ್ತವಾಗಿದೆ.॥11॥

ಮೂಲಮ್ - 12

ನಿಃಶ್ರೇಯಸಪರಾ ಮೋಹಾತ್ತ್ವಯಾ ಚಾಹಂ ವಿಗರ್ಹಿತಾ ।
ಯೈಷಾಬ್ರುವಂ ಹಿತಂ ವಾಕ್ಯಂ ವಾನರೇಂದ್ರ ಹಿತೈಷಿಣೀ ॥

ಅನುವಾದ

ವಾನರೇಂದ್ರನೇ! ನಾನು ನಿಮ್ಮ ಹಿತವನ್ನು ಬಯಸುತ್ತಿದ್ದೆ. ನಿಮ್ಮ ಶ್ರೇಯಸ್ಸಿನ ಸಾಧನೆಯಲ್ಲೇ ತೊಡಗಿದ್ದೆ; ಹೀಗಿದ್ದರೂ ನಾನು ನಿಮ್ಮಲ್ಲಿ ಹೇಳಿದ ಹಿತಕರ ಮಾತನ್ನು ಮೋಹವಶ ಒಪ್ಪಿಕೊಳ್ಳಲಿಲ್ಲ ಮತ್ತು ಬದಲಿಗೆ ನನ್ನ ನಿಂದೆಯನ್ನೇ ಮಾಡಿದಿರಿ.॥12॥

ಮೂಲಮ್ - 13

ರೂಪಯೌವನದೃಪ್ತಾನಾಂ ದಕ್ಷಿಣಾನಾಂ ಚ ಮಾನದ ।
ನೂನಮಪ್ಸರಸಾಮಾರ್ಯ ಚಿತ್ತಾನಿ ಪ್ರಮಥಿಷ್ಯಸಿ ॥

ಅನುವಾದ

ಇತರರಿಗೆ ಮಾನಕೊಡುವ ಆರ್ಯಪುತ್ರ! ನಿಶ್ಚಯವಾಗಿ ನೀವು ಸ್ವರ್ಗಕ್ಕೆ ಹೋಗಿ ರೂಪ-ಯೌವನದ ಅಭಿಮಾನದಿಂದ ಮತ್ತರಾದ, ಕೇಳಿಕಲೆಯಲ್ಲಿ ನಿಪುಣರಾದ ಅಪ್ಸರೆಯರ ಮನಸ್ಸನ್ನು ತನ್ನ ದಿವ್ಯಸೌಂದರ್ಯದಿಂದ ಕದಡಿಬಿಡುವಿರಿ.॥13॥

ಮೂಲಮ್ - 14

ಕಾಲೋ ನಿಃಸಂಶಯೋ ನೂನಂ ಜೀವಿತಾಂತಕರಸ್ತವ ।
ಬಲಾದ್ಯೇನಾವಪನ್ನೋಽಸಿ ಸುಗ್ರೀವಸ್ಯಾವಶೋ ವಶಮ್ ॥

ಅನುವಾದ

ಖಂಡಿತವಾಗಿ ಇಂದು ನಿಮ್ಮ ಜೀವನವನ್ನು ಅಂತ್ಯಗೊಳಿಸುವ ಸಂಶಯರಹಿತ ಕಾಲನು ಇಲ್ಲಿಗೆ ಬಂದಿದ್ದನು, ಅವನು ಯಾರ ವಶನಾಗದಿರುವ ನಿಮ್ಮನ್ನು ಬಲವಂತವಾಗಿ ಸುಗ್ರೀವನ ವಶದಲ್ಲಿ ಹಾಕಿಬಿಟ್ಟಿರುವೆನು.॥14॥

ಮೂಲಮ್ - 15

ಅಸ್ಥಾನೇ ವಾಲಿನಂ ಹತ್ವಾ ಯುಧ್ಯಮಾನಂ ಪರೇಣ ಚ ।
ನ ಸಂತಪ್ಯತಿ ಕಾಕುತ್ಸ್ಥಃ ಕೃತ್ವಾ ಕರ್ಮ ಸುಗರ್ಹಿತಮ್ ॥

ಅನುವಾದ

(ಈಗ ಶ್ರೀರಾಮನು ಕೇಳುವಂತೆ ಹೇಳಿದಳು-) ಕಕುತ್ಸ್ಥ ಕುಲದಲ್ಲಿ ಅವತರಿಸಿದ ಶ್ರೀರಾಮಚಂದ್ರನು ಬೇರೆಯವರೊಂದಿಗೆ ಯುದ್ಧ ಮಾಡುತ್ತಿರುವ ವಾಲಿಯನ್ನು ಕೊಂದು ಅತ್ಯಂತ ನಿಂದಿತ ಕರ್ಮಮಾಡಿದನು. ಈ ಕುತ್ಸಿತ ಕರ್ಮಮಾಡಿಯೂ ಸಂತಪ್ತನಾಗದಿರುವುದು ಸರ್ವಥಾ ಅನುಚಿತವಾಗಿದೆ.॥15॥

ಮೂಲಮ್ - 16

ವೈಧವ್ಯಂ ಶೋಕಸಂತಾಪಂ ಕೃಪಣಾಕೃಪಣಾ ಸತೀ ।
ಅದುಃಖೋಪಚಿತಾಪೂರ್ವಂ ವರ್ತಯಿಷ್ಯಾಮ್ಯನಾಥವತ್ ॥

ಅನುವಾದ

(ಮತ್ತೆ ವಾಲಿಯಲ್ಲಿ ಹೇಳಿದಳು) ನಾನು ಎಂದೂ ದೈನ್ಯ ಪೂರ್ಣ ಜೀವನ ನಡೆಸಿಲ್ಲ. ಇಂತಹ ಮಹಾದುಃಖವನ್ನು ಎದುರಿಸಲಿಲ್ಲ; ಆದರೆ ಇಂದು ನೀವಿಲ್ಲದೆ ನಾನು ದೀನಳಾಗಿದ್ದೇನೆ. ಈಗ ನನಗೆ ಅನಾಥಳಂತೆ ಶೋಕ ಸಂತಾಪಪೂರ್ಣ ವೈಧವ್ಯ ಜೀವನ ಕಳೆಯಬೇಕಾಗುವುದು.॥16॥

ಮೂಲಮ್ - 17

ಲಾಲಿತಶ್ಚಾಂಗದೋ ವೀರಃ ಸುಕುಮಾರಃ ಸುಖೋಚಿತಃ ।
ವತ್ಸ್ಯತೇ ಕಾಮವಸ್ಥಾಂ ಮೇ ಪಿತೃವ್ಯೇ ಕ್ರೋಧಮೂರ್ಛಿತೇ ॥

ಅನುವಾದ

ನಾಥ! ಸುಖಭೋಗಿಸಲು ಯೋಗ್ಯನಾದ, ಸುಕುಮಾರ ನಿಮ್ಮ ವೀರಪುತ್ರ ಅಂಗದನನ್ನು ನೀವು ಬಹಳ ಮುದ್ದಿನಿಂದ ಬೆಳೆಸಿದ್ದೀರಿ. ಈಗ ಕ್ರೋಧದಿಂದ ಹುಚ್ಚಾದ ಚಿಕ್ಕಪ್ಪನ ವಶದಲ್ಲಿ ಮಗನ ಸ್ಥಿತಿ ಏನಾಗುವುದು.॥17॥

ಮೂಲಮ್ - 18

ಕುರುಷ್ಯ ಪಿತರಂ ಪುತ್ರಂ ಸುದೃಷ್ಟಂ ಧರ್ಮವತ್ಸಲಮ್ ।
ದುರ್ಲಭಂ ದರ್ಶನಂ ತಸ್ಯ ತವ ವತ್ಸ ಭವಿಷ್ಯತಿ ॥

ಅನುವಾದ

ಮಗು ಅಂಗದ! ಧರ್ಮಪ್ರೇಮಿ ನಿನ್ನ ತಂದೆಯನ್ನು ಈಗ ಚೆನ್ನಾಗಿ ನೋಡಿಕೋ. ಇನ್ನು ನಿನಗೆ ಅವರ ದರ್ಶನ ದುರ್ಲಭವಾಗಬಹುದು.॥18॥

ಮೂಲಮ್ - 19

ಸಮಾಶ್ವಾಸಯ ಪುತ್ರಂ ತ್ವಂ ಸಂದೇಶಂ ಸಂದಿಶಸ್ವ ಮೇ ।
ಮೂರ್ಧ್ನಿ ಚೈನಂ ಸಮಾಘ್ರಾಯ ಪ್ರವಾಸಂ ಪ್ರಸ್ಥಿತೋ ಹ್ಯಸಿ ॥

ಅನುವಾದ

ಪ್ರಾಣನಾಥ! ನೀವು ಪರಲೋಕಕ್ಕೆ ಹೋಗುತ್ತಿರುವಿರಿ. ತನ್ನ ಮಗನ ಮಸ್ತಕವನ್ನು ಆಘ್ರಾಣಿಸಿ ಅವನಲ್ಲಿ ಧೈರ್ಯ ತುಂಬಿರಿ ಹಾಗೂ ನನಗೂ ಏನಾದರೂ ಸಂದೇಶ ತಿಳಿಸಿರಿ.॥19॥

ಮೂಲಮ್ - 20

ರಾಮೇಣ ಹಿ ಮಹತ್ಕರ್ಮ ಕೃತಂ ತ್ವಾಮಭಿನಿಘ್ನತಾ ।
ಆನೃಣ್ಯಂ ಚ ಗತಂ ತಸ್ಯ ಸುಗ್ರೀವಸ್ಯ ಪ್ರತಿಶ್ರವೇ ॥

ಅನುವಾದ

ಶ್ರೀರಾಮನು ನಿಮ್ಮನ್ನು ಕೊಂದು ಬಹಳ ದೊಡ್ಡ ಕಾರ್ಯಮಾಡಿದನು. ಅವನು ಸುಗ್ರೀವನ ಬಳಿ ಮಾಡಿದ್ದ ಪ್ರತಿಜ್ಞೆಯ ಋಣವನ್ನು ತೀರಿಸಿದನು.॥20॥

ಮೂಲಮ್ - 21

ಸಕಾಮೋ ಭವ ಸುಗ್ರೀವ ರುಮಾಂ ತ್ವಂ ಪ್ರತಿಪತ್ಸ್ಯಸೇ ।
ಭುಂಕ್ಷ್ವ ರಾಜ್ಯಮನುದ್ವಿಗ್ನಃ ಶಸ್ತೋ ಭ್ರಾತಾ ರಿಪುಸ್ತವ ॥

ಅನುವಾದ

(ಈಗ ಸುಗ್ರೀವ ಕೇಳುವಂತೆ ಹೇಳಿದಳು-) ಸುಗ್ರೀವ! ನಿನ್ನ ಮನೋರಥವು ಸಫಲವಾಗಲಿ. ನೀನು ಶತ್ರುವೆಂದು ತಿಳಿದ ನಿನ್ನ ಅಣ್ಣನು ಹತನಾದನು. ಇನ್ನು ನಿಷ್ಕಂಟಕ ರಾಜ್ಯವನ್ನು ಭೋಗಿಸು. ರುಮೆಯನ್ನು ಪಡೆದುಕೋ.॥21॥

ಮೂಲಮ್ - 22

ಕಿಂ ಮಾಮೇವಂ ಪ್ರಲಪತೀಂ ಪ್ರಿಯಾಂ ತ್ವಂ ನಾಭಿಭಾಷಸೇ ।
ಇಮಾಃ ಪಶ್ಯ ವರಾ ಬಹ್ವ್ಯೋಭಾರ್ಯಾಸ್ತೇ ವಾನರೇಶ್ವರ ॥

ಅನುವಾದ

(ಮತ್ತೆ ವಾಲಿಯಲ್ಲಿ ಹೇಳಿದಳು) ವಾನರೇಶ್ವರ! ನಿಮ್ಮ ಪ್ರಿಯಪತ್ನಿಯಾದ ನಾನು ಈ ರೀತಿ ಅಳುತ್ತಾ ಮರುಗುತ್ತಿರುವೆನು; ಹೀಗಿದ್ದರೂ ನೀವು ನನ್ನೊಂದಿಗೆ ಏಕೆ ಮಾನಾಡುವುದಿಲ್ಲ? ನೋಡಿ, ನಿಮ್ಮ ಸುಂದರಿಯರಾದ ಅನೇಕ ಭಾರ್ಯೆಯರು ಇಲ್ಲಿ ಇರುವರು.॥22॥

ಮೂಲಮ್ - 23

ತಸ್ಯಾ ವಿಲಪಿತಂ ಶ್ರುತ್ವಾ ವಾನರ್ಯಃ ಸರ್ವತಶ್ಚತಾಃ ।
ಪರಗೃಹ್ಯಾಂಗದಂ ದೀನಂ ದುಃಖಾರ್ತಾಃ ಪರಿಚುಕ್ರುಶುಃ ॥

ಅನುವಾದ

ತಾರೆಯ ವಿಲಾಪ ಕೇಳಿ ಇತರ ವಾನರ ಪತ್ನಿಯರೂ ಅಂಗದನನ್ನು ಸುತ್ತುಗಟ್ಟಿ ದೀನರಾಗಿ, ದುಃಖದಿಂದ ವ್ಯಾಕುಲರಾಗಿ ಜೋರಾಗಿ ಅಳ ತೊಡಗಿದರು.॥23॥

ಮೂಲಮ್ - 24

ಕಿಮಂಗದಂ ಸಾಂಗದವೀರಬಾಹೋ
ವಿಹಾಯ ಯಾತೋಽಸಿ ಚಿರಂ ಪ್ರವಾಸಮ್ ।
ನ ಯುಕ್ತಮೇವಂ ಗುಣಸಂನಿಕೃಷ್ಟಂ
ವಿಹಾಯ ಪುತ್ರಂ ಪ್ರಿಯಚಾರುವೇಷಮ್ ॥

ಅನುವಾದ

(ಅನಂತರ ತಾರೆಯು ಪುನಃ ಹೇಳಿದಳು) ತೋಳ್ಬಂದಿಗಳಿಂದ ವಿಭೂಷಿತ ವೀರ ಭುಜಗಳುಳ್ಳ ವಾನರರಾಜನೇ! ನೀವು ಅಂಗದನನ್ನು ಬಿಟ್ಟು ದೀರ್ಘಕಾಲಕ್ಕಾಗಿ ಬೇರೆ ದೇಶಕ್ಕೆ ಏಕೆ ಹೋಗುತ್ತಿರುವಿರಿ? ಅವನು ಗುಣಗಳಲ್ಲಿ ನಿಮ್ಮ ಸಮೀಪವಿದ್ದಾನೆ-ಅವನು ನಿಮ್ಮಂತೆ ಗುಣವಂತನಾಗಿದ್ದಾನೆ. ಪ್ರಿಯ ಹಾಗೂ ಮನೋಹರ ವೇಷವುಳ್ಳ ಪ್ರಿಯಪುತ್ರನನ್ನು ತ್ಯಜಿಸಿ ಈ ಪ್ರಕಾರ ಹೊರಟು ಹೋಗುವುದು ನಿಮಗೆ ಎಂದಿಗೂ ಉಚಿತವಲ್ಲ.॥24॥

ಮೂಲಮ್ - 25

ಯದ್ಯಪ್ರಿಯಂ ಕಿಂಚಿದಸಂಪ್ರಧಾರ್ಯ
ಕೃತಂ ಮಯಾ ಸ್ಯಾತ್ತವ ದೀರ್ಘಬಾಹೋ ।
ಕ್ಷಮಸ್ವ ಮೇ ತದ್ಧರಿವಂಶನಾಥ
ವ್ರಜಾಮಿ ಮೂರ್ಧ್ನಾ ತವ ವೀರ ಪಾದೌ ॥

ಅನುವಾದ

ಮಹಾಬಾಹೋ! ಅರಿಯದೆ ನಾನು ನಿಮಗೆ ಏನಾದರೂ ಅಪರಾಧ ಮಾಡಿದ್ದರೆ ಅದನ್ನು ನೀವು ಕ್ಷಮಿಸಿರಿ. ವಾನರವಂಶದ ಸ್ವಾಮೀ! ವೀರ ಆರ್ಯಪುತ್ರ! ನಾನು ನಿಮ್ಮ ಚರಣಗಳಲ್ಲಿ ತಲೆಯನ್ನಿಟ್ಟು ಹೀಗೆ ಪ್ರಾರ್ಥಿಸುತ್ತಿದ್ದೇನೆ.॥25॥

ಮೂಲಮ್ - 26

ತಥಾ ತು ತಾರಾ ಕರುಣಂ ರುದಂತೀ
ಭರ್ತುಃಸಮೀಪೇ ಸಹ ವಾನರೀಭಿಃ ।
ವ್ಯವಸ್ಯತ ಪ್ರಾಯಮನಿಂದ್ಯವರ್ಣಾ-
ಉಪೋಪವೇಷ್ಟುಂ ಭುವಿಯತ್ರ ವಾಲೀ ॥

ಅನುವಾದ

ಈ ಪ್ರಕಾರ ಇತರ ವಾನರ ಪತ್ನಿಯರೊಂದಿಗೆ ಪತಿಯ ಬಳಿಯಲ್ಲಿ ಕರುಣಕ್ರಂಧನ ಮಾಡುತ್ತಿರುವ ಅನಿಂದ್ಯ ಸುಂದರೀ ತಾರೆಯು ವಾಲಿಯು ಪೃಥಿವಿಯಲ್ಲಿ ಬಿದ್ದಲ್ಲಿಯೇ ಬಳಿಯಲ್ಲಿ ಕುಳಿತು ಆಮರಣ ಉಪವಾಸಮಾಡಲು ನಿಶ್ಚಯಿಸಿದಳು.॥26॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತನೆಯ ಸರ್ಗ ಸಂಪೂರ್ಣವಾಯಿತು. ॥ 20 ॥