०१८ रामेण वालिवधसमर्थनम्

वाचनम्
ಭಾಗಸೂಚನಾ

ಶ್ರೀರಾಮನು ವಾಲಿಗೆ ತನ್ನ ಕಾರ್ಯದ ಔಚಿತ್ಯವನ್ನು ವಿವರಿಸಿ ಹೇಳಿದುದು, ವಾಲಿಯು ನಿರುತ್ತರನಾಗಿ ತನ್ನ ಅಪರಾಧಕ್ಕೆ ಕ್ಷಮೆ ಬೇಡಿದುದು, ಅಂಗದನ ರಕ್ಷಣೆಗಾಗಿ ಶ್ರೀರಾಮನನ್ನು ಪ್ರಾರ್ಥಿಸಿದುದು, ಶ್ರೀರಾಮನು ಆಶ್ವಾಸನೆಯನ್ನಿತ್ತುದು

ಮೂಲಮ್ - 1

ಇತ್ಯುಕ್ತಃ ಪ್ರಶ್ರಿತಂ ವಾಕ್ಯಂ ಧರ್ಮಾರ್ಥಸಹಿತಂ ಹಿತಮ್ ।
ಪರುಷಂ ವಾಲಿನಾ ರಾಮೋ ನಿಹತೇನ ವಿಚೇತಸಾ ॥

ಮೂಲಮ್ - 2

ತಂ ನಿಷ್ಪ್ರಭಮಿವಾದಿತ್ಯಂ ಮುಕ್ತತೋಯಮಿವಾಂಬುದಮ್ ।
ಉಕ್ತವಾಕ್ಯಂ ಹರಿಶ್ರೇಷ್ಠಮುಪಶಾಂತಮಿವಾನಲಮ್ ॥

ಮೂಲಮ್ - 3

ಧರ್ಮಾರ್ಥಗುಣಸಂಪನ್ನಂ ಹರೀಶ್ವರಮನುತ್ತಮಮ್ ।
ಅಧಿಕ್ಷಿಪ್ತಸ್ತದಾ ರಾಮಃ ಪಶ್ಚಾದ್ ವಾಲಿನಮಬ್ರವೀತ್ ॥

ಅನುವಾದ

ಹೀಗೆ ಶ್ರೀರಾಮನ ಬಾಣದಿಂದ ಹತಪ್ರಾಯನಾಗಿ ಬಿದ್ದಿದ್ದ ಬುದ್ಧಿಗೆಟ್ಟಿದ್ದ ವಾಲಿಯು ವಿನಯಾಭಾಸ, ಧರ್ಮಾ ಭಾಸ, ಅರ್ಥಾಭಾಸ, ಹಿತಾಭಾಸದಿಂದ ಕೂಡಿದ ಹೀಗೆ ಕಠೋರ ಮಾತುಗಳನ್ನು ಹೇಳಿ, ಆಕ್ಷೇಪಿಸಿ ಮೌನವಾದಾಗ ವಾನರ ಶ್ರೇಷ್ಠ ವಾಲಿಯಲ್ಲಿ ಶ್ರೀರಾಮಚಂದ್ರನು ಧರ್ಮ, ಅರ್ಥ ಮತ್ತು ಶ್ರೇಷ್ಠ ಗುಣಗಳಿಂದ ಕೂಡಿದ ಪರಮೋತ್ತಮ ಮಾತನ್ನು ಹೇಳಿದನು. ಆಗ ವಾಲಿಯು ಪ್ರಭಾವಹೀನ ಸೂರ್ಯನಂತೆ, ಜಲಹೀನ ಮೋಡಗಳಂತೆ, ಆರಿಹೋದ ಬೆಂಕಿಯಂತೆ, ಶ್ರೀಹೀನನಾಗಿ ಕಾಣುತ್ತಿದ್ದನು.॥1-3॥

ಮೂಲಮ್ - 4

ಧರ್ಮಮರ್ಥಂ ಚ ಕಾಮಂ ಚ ಸಮಯಂ ಚಾಪಿ ಲೌಕಿಕಮ್ ।
ಅವಿಜ್ಞಾಯ ಕಥಂ ಬಾಲ್ಯಾನ್ಮಾಮಿಹಾದ್ಯ ವಿಗರ್ಹಸೇ ॥

ಅನುವಾದ

(ಶ್ರೀರಾಮನು ಹೇಳಿದನು) ವಾನರನೇ! ಧರ್ಮ, ಅರ್ಥ, ಕಾಮ ಮತ್ತು ಲೌಕಿಕ ಸದಾಚಾರವನ್ನು ನೀನು ತಿಳಿಯುತ್ತಿಲ್ಲ, ಹಾಗಿರುವಾಗ ಬಾಲಕರಂತೆ ಅವಿವೇಕದಿಂದ ಇಂದು ಇಲ್ಲಿ ನನ್ನನ್ನು ಏಕೆ ನಿಂದಿಸುತ್ತಿರುವೆ.॥4॥

ಮೂಲಮ್ - 5

ಅಪೃಷ್ಟ್ವಾ ಬುದ್ಧಿಸಂಪನ್ನಾನ್ ವೃದ್ಧಾನಾಚಾರ್ಯಸಮ್ಮತಾನ್ ।
ಸೌಮ್ಯ ವಾನರಚಾಪಲ್ಯಾತ್ ತ್ವಂ ಮಾಂ ವಕ್ತುಮಿಹೇಚ್ಛಸಿ ॥

ಅನುವಾದ

ಸೌಮ್ಯನೇ! ನೀನು ಆಚಾರ್ಯರಿಂದ ಸಮ್ಮಾನಿತ ಬುದ್ಧಿವಂತ ವೃದ್ಧ ಪುರುಷರಲ್ಲಿ ಕೇಳದೆಯೇ - ಅವರಿಂದ ಧರ್ಮದ ಸ್ವರೂಪವನ್ನು ತಿಳಿಯದೆಯೇ ವಾನರೋಚಿತ ಚಪಲತೆಯಿಂದ ನನಗೆ ಇಲ್ಲಿ ಉಪದೇಶ ಮಾಡಲು ಬಯಸುತ್ತಿರುವೆ ಅಥವಾ ನನ್ನನ್ನು ಆಕ್ಷೇಪಿಸುತ್ತಿರುವೆ.॥5॥

ಮೂಲಮ್ - 6

ಇಕ್ಷ್ವಾಕೂಣಾಮಿಯಂ ಭೂಮಿಃ ಸಶೈಲವನಕಾನನಾ ।
ಮೃಗಪಕ್ಷಿಮನುಷ್ಯಾಣಾಂ ನಿಗ್ರಹಾನುಗ್ರಹೇಷ್ಪಪಿ ॥

ಅನುವಾದ

ವನ, ಪರ್ವತ, ಕಾನನಗಳಿಂದ ಕೂಡಿದ ಈ ಇಡೀ ಪೃಥಿವಿಯು ಇಕ್ಷ್ವಾಕುವಂಶೀ ರಾಜರದ್ದಾಗಿದೆ. ಆದ್ದರಿಂದ ಅವರು ಇಲ್ಲಿಯ ಪಶು-ಪಕ್ಷಿ ಮತ್ತು ಮನುಷ್ಯರ ಮೇಲೆ ದಯೆ ಮಾಡುವುದು ಅಥವಾ ದಂಡಿಸಲು ಅಧಿಕಾರಿಯಾಗಿದ್ದಾರೆ.॥6॥

ಮೂಲಮ್ - 7

ತಾಂ ಪಾಲಯತಿ ಧರ್ಮಾತ್ಮಾ ಭರತಃ ಸತ್ಯವಾನೃಜುಃ ।
ಧರ್ಮಕಾಮಾರ್ಥತತ್ತ್ವಜ್ಞೋ ನಿಗ್ರಹಾನುಗ್ರಹೇ ರತಃ ॥

ಅನುವಾದ

ಧರ್ಮಾತ್ಮಾ ರಾಜಾ ಭರತನು ಈ ಪೃಥಿವಿಯನ್ನು ಪಾಲಿಸುತ್ತಿದ್ದಾನೆ. ಅವನು ಸತ್ಯವಾದೀ, ಸರಳ ಮತ್ತು ಧರ್ಮ, ಅರ್ಥ, ಕಾಮಗಳ ತತ್ತ್ವವನ್ನು ತಿಳಿದವನಾಗಿದ್ದಾನೆ; ಆದ್ದರಿಂದ ದುಷ್ಟರ ನಿಗ್ರಹ ಮತ್ತು ಸಾಧು ಪುರುಷರನ್ನು ಅನುಗ್ರಹಿಸಲು ತತ್ಪರನಾಗಿದ್ದಾನೆ.॥7॥

ಮೂಲಮ್ - 8

ನಯಶ್ಚ ವಿಷಯಶ್ಚೋಭೌ ಯಸ್ಮಿನ್ಸತ್ಯಂ ಚ ಸುಸ್ಥಿತಮ್ ।
ವಿಕ್ರಮಶ್ಚ ಯಥಾದೃಷ್ಟಃ ಸ ರಾಜಾ ದೇಶಕಾಲವಿತ್ ॥

ಅನುವಾದ

ನೀತಿ, ವಿನಯ, ಸತ್ಯ, ಪರಾಕ್ರಮ ಮೊದಲಾದ ರಾಜೋಚಿತ ಎಲ್ಲ ಗುಣಗಳು ಯಥಾವತ್ತಾಗಿ ಇರುವ, ದೇಶ ಕಾಲ, ತತ್ತ್ವವನ್ನು ತಿಳಿದವನೇ ರಾಜನಾಗುತ್ತಾನೆ. (ಭರತನಲ್ಲಿ ಇವೆಲ್ಲ ಗುಣಗಳು ತುಂಬಿಕೊಂಡಿವೆ..॥8॥

ಮೂಲಮ್ - 9

ತಸ್ಯ ಧರ್ಮಕೃತಾದೇಶಾ ವಯಮನ್ಯೇ ಚ ಪಾರ್ಥಿವಾಃ ।
ಚರಾಮೋ ವಸುಧಾಂ ಕೃತ್ಸ್ನಾಂ ಧರ್ಮಸಂತಾನಮಿಚ್ಛವಃ ॥

ಅನುವಾದ

ಭರತನ ಕಡೆಯಿಂದ ನಮಗೆ ಹಾಗೂ ಇತರ ರಾಜರಿಗೆ ಜಗತ್ತಿನಲ್ಲಿ ಧರ್ಮದ ಪಾಲನೆ ಮತ್ತು ಪ್ರಸಾರ ಮಾಡಲು ಪ್ರಯತ್ನಿಸಬೇಕೆಂಬ ಆದೇಶ ದೊರೆತಿದೆ. ಅದಕ್ಕಾಗಿ ನಾವು ಧರ್ಮ ಪ್ರಚಾರದ ಇಚ್ಛೆಯಿಂದ ಇಡೀ ಪೃಥಿವಿಯಲ್ಲಿ ಸಂಚರಿಸುತ್ತಿದ್ದೇವೆ.॥9॥

ಮೂಲಮ್ - 10

ತಸ್ಮಿನ್ ನೃಪತಿ ಶಾರ್ದೂಲೇ ಭರತೇ ಧರ್ಮವತ್ಸಲೇ ।
ಪಾಲಯತ್ಯಖಿಲಾಂ ಪೃಥ್ವೀಂ ಕಶ್ಚರೇದ್ಧರ್ಮವಿಪ್ರಯ ॥

ಅನುವಾದ

ರಾಜರಲ್ಲಿ ಶ್ರೇಷ್ಠನಾದ ಭರತನು ಧರ್ಮದಲ್ಲಿ ಅನುರಾಗ ಉಳ್ಳವನು. ಅವನು ಇಡೀ ಪೃಥಿವಿಯನ್ನು ಪಾಲಿಸುತ್ತಿದ್ದಾನೆ. ಅವನು ಇರುವಾಗ ಈ ಪೃಥಿವಿಯಲ್ಲಿ ಯಾವ ಪ್ರಾಣಿ ತಾನೇ ಧರ್ಮಕ್ಕೆ ವಿರುದ್ಧವಾಗಿ ಆಚರಣ ಮಾಡಬಲ್ಲನು.॥10॥

ಮೂಲಮ್ - 11

ತೇ ವಯಂ ಮಾಗರ್ರ್ವಿಭ್ರಷ್ಟಂಸ್ವಧರ್ಮೇ ಪರಮೇ ಸ್ಥಿತಾಃ ।
ಭರತಾಜ್ಞಾಂ ಪುರಸ್ಕೃತ್ಯ ನಿಗೃಹ್ಣೀಮೋ ಯಥಾವಿಧಿ ॥

ಅನುವಾದ

ನಾವೆಲ್ಲರೂ ನಮ್ಮ ಶ್ರೇಷ್ಠಧರ್ಮದಲ್ಲಿ ದೃಢತೆಯಿಂದ ಇದ್ದು, ಭರತನ ಆಜ್ಞೆಯನ್ನು ಮನ್ನಿಸಿ ಧರ್ಮಮಾರ್ಗದಿಂದ ಭ್ರಷ್ಟರಾದ ಪುರುಷರನ್ನು ವಿಧಿವತ್ತಾಗಿ ದಂಡವನ್ನು ವಿಧಿಸುತ್ತೇವೆ.॥11॥

ಮೂಲಮ್ - 12

ತ್ವಂ ತು ಸಂಕ್ಲಿಷ್ಟಧರ್ಮಾಶ್ಚ ಕರ್ಮಣಾ ಚ ವಿಗರ್ಹಿತಃ ।
ಕಾಮತಂತ್ರಪ್ರಧಾನಶ್ಚ ನ ಸ್ಥಿತೋ ರಾಜವರ್ತ್ಮನಿ ॥

ಅನುವಾದ

ನೀನು ನಿನ್ನ ಜೀವನದಲ್ಲಿ ಕಾಮಕ್ಕೆ ಪ್ರಧಾನತೆ ಕೊಟ್ಟಿರುವೆ. ರಾಜೋಚಿತ ಮಾರ್ಗದಲ್ಲಿ ನೀನು ಎಂದೂ ಸ್ಥಿರನಾಗಿರಲಿಲ್ಲ. ನೀನು ಸದಾ ಧರ್ಮವನ್ನು ಬಾಧಿಸುತ್ತಿದ್ದೆ ಹಾಗೂ ಕೆಟ್ಟ ಕರ್ಮಗಳಿಂದಾಗಿ ಸತ್ಪುರುಷರಿಂದ ನಿಂದಿತನಾದೆ.॥12॥

ಮೂಲಮ್ - 13

ಜ್ಯೇಷ್ಠೋ ಭ್ರಾತಾ ಪಿತಾ ವಾಪಿ ಯಶ್ಚ ವಿದ್ಯಾಂ ಪ್ರಯಚ್ಛತಿ ।
ತ್ರಯಸ್ತೇ ಪಿತರೋ ಜ್ಞೇಯಾ ಧರ್ಮೇ ಚ ಪಥಿ ವರ್ತಿನಃ ॥

ಅನುವಾದ

ಹಿರಿಯಣ್ಣ, ತಂದೆ ಮತ್ತು ವಿದ್ಯಾಧಾತೃವಾದ ಗುರು - ಇವರು ಮೂವರು ಧರ್ಮಮಾರ್ಗದಲ್ಲಿ ಸ್ಥಿತನಾದ ಮನುಷ್ಯನಿಗೆ ತಂದೆಯಂತೆ ಮಾನನೀಯರಾಗಿದ್ದಾರೆ ಎಂದು ತಿಳಿಯಬೇಕು.॥13॥

ಮೂಲಮ್ - 14

ಯವೀಯಾನಾತ್ಮನಃ ಪುತ್ರಃ ಶಿಷ್ಯಶ್ಚಾಪಿ ಗುಣೋದಿತಃ ।
ಪುತ್ರವತ್ತೇ ತ್ರಯಶ್ಚಿಂತ್ಯಾ ಧರ್ಮಶ್ಚೈವಾತ್ರ ಕಾರಣಮ್ ॥

ಅನುವಾದ

ಹೀಗೆಯೇ ಅನುಜ್ಞ, ಪುತ್ರ, ಗುಣವಂತ ಶಿಷ್ಯ - ಇವರು ಮೂವರು ಮಗನಂತೆ ತಿಳಿಯಲು ಯೋಗ್ಯರಾಗಿದ್ದಾರೆ. ಅವರ ಕುರಿತು ಇಂತಹ ಭಾವವಿಡುವುದರಲ್ಲಿ ಧರ್ಮವೇ ಕಾರಣವಾಗಿದೆ.॥14॥

ಮೂಲಮ್ - 15

ಸೂಕ್ಷ್ಮಃ ಪರಮದುರ್ಜ್ಞೇಯಃ ಸತಾಂ ಧರ್ಮಃ ಪ್ಲವಂಗಮ ।
ಹೃದಿಸ್ಥಃ ಸರ್ವಭೂತಾನಾಮಾತ್ಮಾ ವೇದ ಶುಭಾಶುಭಮ್ ॥

ಅನುವಾದ

ವಾನರನೇ! ಸಜ್ಜನಧರ್ಮವು, ಸೂಕ್ಷ್ಮವೂ, ಪರಮ ದುರ್ಜ್ಞೇಯವೂ, ತಿಳಿಯಲು ಕಠಿಣವೂ ಆಗಿದೆ. ಸಮಸ್ತ ಪ್ರಾಣಿಗಳ ಅಂತಃಕರಣದಲ್ಲಿ ವಿರಾಜಿಸುವ ಪರಮಾತ್ಮನೇ ಎಲ್ಲರ ಶುಭಾಶುಭಗಳನ್ನು ತಿಳಿಯುತ್ತಾನೆ.॥15॥

ಮೂಲಮ್ - 16

ಚಪಲಶ್ಚಪಲೈಃ ಸಾರ್ಧಂ ವಾನರೈರಕೃತಾತ್ಮಭಿಃ ।
ಜಾತ್ಯಂಧ ಇವ ಜಾತ್ಯಂಧೈರ್ಮಂತ್ರಯನ್ ಪ್ರೇಕ್ಷಸೇ ನು ಕಿಮ್ ॥

ಅನುವಾದ

ನೀನು ಸ್ವತಃ ಚಂಚಲನಾಗಿದ್ದು, ಚಪಲಚಿತ್ತರಾದ ಅಜಿತಾತ್ಮಾ ವಾನರರೊಂದಿಗೆ ಇರುತ್ತಿಯೆ; ಆದ್ದರಿಂದ ಜನ್ಮಾಂಧನಾದವನು ಕಣ್ಣಿಲ್ಲದವನಲ್ಲಿ ದಾರಿಕೇಳಿದಂತೆ ನೀನು ಚಂಚಲವಾನರರೊಂದಿಗೆ ವಿಚಾರ ವಿಮರ್ಶೆಮಾಡುತ್ತಿರುವೆ. ನೀನು ಧರ್ಮದ ಕುರಿತು ಏನು ವಿಚಾರ ಮಾಡಬಲ್ಲೆ? ಅದರ ಸ್ವರೂಪವನ್ನು ಹೇಗೆ ತಿಳಿಯಬಲ್ಲೆ.॥16॥

ಮೂಲಮ್ - 17

ಅಹಂ ತು ವ್ಯಕ್ತತಾಮಸ್ಯ ವಚನಸ್ಯ ಬ್ರವೀಮಿ ತೇ ।
ನ ಹಿ ಮಾಂ ಕೇವಲಂ ರೋಷಾತ್ ತ್ವಂ ನಿಗರ್ಹಿತುಮರ್ಹಸಿ ॥

ಅನುವಾದ

ನಾನು ಇಲ್ಲಿ ಏನೆಲ್ಲ ಹೇಳಿರುವೆನೋ ಅದರ ಅಭಿಪ್ರಾಯ ನಿನಗೆ ಸ್ಪಷ್ಟಪಡಿಸುತ್ತಿದ್ದೇನೆ. ನೀನು ಕೇವಲ ರೋಷಾವೇಶದಿಂದ ನನ್ನನ್ನು ನಿಂದಿಸಬಾರದು.॥17॥

ಮೂಲಮ್ - 18

ತದೇತತ್ಕಾರಣಂ ಪಶ್ಯ ಯದರ್ಥಂ ತ್ವಂ ಮಯಾ ಹತಃ ।
ಭ್ರಾತುರ್ವರ್ತಸಿ ಭಾರ್ಯಾಯಾಂ ತ್ಯಕ್ತ್ವಾ ಧರ್ಮಂ ಸನಾತನಮ್ ॥

ಅನುವಾದ

ನಾನು ನಿನ್ನನ್ನು ಏಕೆ ಕೊಂದೆ? ಅದರ ಕಾರಣವನ್ನು ಕೇಳಿ ತಿಳಿ. ನೀನು ಸನಾತನ ಧರ್ಮವನ್ನು ತ್ಯಾಗಮಾಡಿದ್ದರಿಂದ ತನ್ನ ತಮ್ಮನ ಪತ್ನಿಯ ಸಹವಾಸ ಮಾಡುತ್ತಿರುವೆ.॥18॥

ಮೂಲಮ್ - 19

ಅಸ್ಯ ತ್ವಂ ಧರಮಾಣಸ್ಯ ಸುಗ್ರೀವಸ್ಯ ಮಹಾತ್ಮನಃ ।
ರುಮಾಯಾಂ ವರ್ತಸೇ ಕಾಮಾತ್ಸ್ನುಷಾಯಾಂ ಪಾಪಕರ್ಮಕೃತ್ ॥

ಅನುವಾದ

ಈ ಮಹಾಮನಾ ಸುಗ್ರೀವನು ಬದುಕಿರುವಾಗಲೇ ನಿನಗೆ ಸೊಸೆಯಂತಿರುವ ಅವನ ಪತ್ನೀ ರುಮೆಯನ್ನು ಕಾಮವಶ ಉಪಭೋಗಿಸುತ್ತಿದ್ದೆ; ಆದ್ದರಿಂದ ಪಾಪಾಚಾರಿಯಾಗಿರುವೆ.॥19॥

ಮೂಲಮ್ - 20

ತದ್ವ್ಯತೀತಸ್ಯ ತೇ ಧರ್ಮಾತ್ ಕಾಮವೃತ್ತಸ್ಯ ವಾನರ ।
ಭ್ರಾತೃಭಾರ್ಯಾಭಿಮರ್ಶೇಽಸ್ಮಿನ್ ದಂಡೋಽಯಂ ಪ್ರತಿಪಾದಿತಃ ॥

ಅನುವಾದ

ವಾನರನೇ! ಹೀಗೆ ನೀನು ಧರ್ಮಭ್ರಷ್ಟನಾಗಿ, ಸ್ವೇಚ್ಛಾಚಾರಿಯಾಗಿ ನಿನ್ನ ತಮ್ಮನ ಪತ್ನಿಯನ್ನು ಆಲಿಂಗಿಸಿ ಭೋಗಿಸಿದೆ. ನಿನ್ನ ಇದೇ ಅಪರಾಧದಿಂದಾಗಿ ನಿನಗೆ ಈ ದಂಡವನ್ನು ವಿಧಿಸಲಾಗಿದೆ.॥20॥

ಮೂಲಮ್ - 21

ನ ಹಿ ಧರ್ಮವಿರುದ್ಧಸ್ಯ ಲೋಕವೃತ್ತಾದಪೇಯುಷಃ ।
ದಂಡಾದನ್ಯತ್ರ ಪಶ್ಯಾಮಿ ನಿಗ್ರಹಂ ಹರಿಯೂಥಪ ॥

ಅನುವಾದ

ವಾನರರಾಜನೇ! ಲೋಕಾಚಾರದಿಂದ ಭ್ರಷ್ಟನಾಗಿ ಲೋಕವಿರುದ್ಧ ಆಚರಣ ಮಾಡುವವನನ್ನು ತಡೆಯುವುದು ಅಥವಾ ದಾರಿಗೆ ತರಲು ದಂಡವಲ್ಲದೆ ಬೇರೆ ಯಾವುದೇ ಉಪಾಯ ನಾನು ನೋಡುವುದಿಲ್ಲ.॥21॥

ಮೂಲಮ್ - 22½

ನ ಚ ತೇ ಮರ್ಷಯೇ ಪಾಪಂ ಕ್ಷತ್ರಿಯೋಽಹಂ ಕುಲೋದ್ಗತಃ ।
ಔರಸೀಂ ಭಗಿನೀಂ ವಾಪಿ ಭಾರ್ಯಾಂ ವಾಪ್ಯನುಜಸ್ಯ ಯಃ ॥
ಪ್ರಚರೇತ ನರಃ ಕಾಮಾತ್ತಸ್ಯ ದಂಡೋ ವಧಃ ಸ್ಮೃತಃ ।

ಅನುವಾದ

ನಾನು ಉತ್ತಮ ಕುಲದಲ್ಲಿ ಹುಟ್ಟಿದ ಕ್ಷತ್ರಿಯನಾಗಿದ್ದೇನೆ; ಆದ್ದರಿಂದ ನಾನು ನಿನ್ನ ಪಾಪವನ್ನು ಕ್ಷಮಿಸಲಾರೆ. ತನ್ನ ಮಗಳು, ತಂಗಿ ಅಥವಾ ತಮ್ಮನ ಹೆಂಡತಿ ಇವರ ಬಳಿಗೆ ಕಾಮಬುದ್ಧಿಯಿಂದ ಹೋಗುವವನನ್ನು ವಧಿಸುವುದೇ ಅವನಿಗಾಗಿ ಉಪಯುಕ್ತ ದಂಡವೆಂದು ತಿಳಿಯಲಾಗಿದೆ.॥22॥

ಮೂಲಮ್ - 23½

ಭರತಸ್ತು ಮಹೀಪಾಲೋ ವಯಂ ತ್ವಾದೇಶವರ್ತಿನಃ ॥
ತ್ವಂ ಚ ಧರ್ಮಾದತಿಕ್ರಾಂತ್ತಃ ಕಥಂ ಶಕ್ಯಮುಪೇಕ್ಷಿತುಮ್ ।

ಅನುವಾದ

ನಮ್ಮ ರಾಜನು ಭರತನಾಗಿದ್ದಾನೆ. ನಾವಾದರೋ ಕೇವಲ ಅವನ ಆದೇಶವನ್ನು ಪಾಲಿಸುವವರು. ನೀನು ಧರ್ಮದಿಂದ ಪತನನಾಗಿರುವೆ, ಆದ್ದರಿಂದ ನಿನ್ನನ್ನು ಹೇಗೆ ಉಪೇಕ್ಷಿಸಬಹುದು.॥23॥

ಮೂಲಮ್ - 24½

ಗುರುಧರ್ಮವ್ಯತಿಕ್ರಾಂತಂ ಪ್ರಾಜ್ಞೋ ಧರ್ಮೇಣ ಪಾಲಯನ್ ॥
ಭರತಃ ಕಾಮಯುಕ್ತಾನಾಂ ನಿಗ್ರಹೇ ಪರ್ಯವಸ್ಥಿತಃ ।

ಅನುವಾದ

ವಿದ್ವಾಂಸನಾದ ಭರತರಾಜನು ಮಹಾನ್ ಧರ್ಮದಿಂದ ಭ್ರಷ್ಟನಾದವನನ್ನು ದಂಡಿಸುತ್ತಾನೆ ಮತ್ತು ಧರ್ಮತ್ಮನಾದವನನ್ನು ಧರ್ಮಪೂರ್ವಕ ಪಾಲಿಸುತ್ತಾ, ಕಾಮಾಸಕ್ತ ಸ್ವೇಚ್ಛಾಚಾರೀ ಪುರುಷರ ನಿಗ್ರಹದಲ್ಲಿ ತತ್ಪರನಾಗಿರುತ್ತಾನೆ.॥24॥

ಮೂಲಮ್ - 25

ವಯಂ ತು ಭರತಾದೇಶವಧಿಂ ಕೃತ್ವಾ ಹರೀಶ್ವರ ।
ತ್ವದ್ವಿಧಾನ್ಭಿನ್ನಮರ್ಯಾದಾನ್ ನಿಗ್ರಹೀತುಂ ವ್ಯವಸ್ಥಿತಾಃ ॥

ಅನುವಾದ

ಹರೀಶ್ವರನೇ! ನಾವಾದರೋ ಭರತನ ಆಜ್ಞೆಯನ್ನೇ ಪ್ರಮಾಣವೆಂದು ತಿಳಿದು, ಧರ್ಮದ ಮೇರೆಮೀರಿದ ನಿನ್ನಂತಹ ಜನರನ್ನು ದಂಡಿಸಲು ಸದಾ ಉದ್ಯುಕ್ತನಾಗಿರುತ್ತೇವೆ.॥25॥

ಮೂಲಮ್ - 26

ಸುಗ್ರೀವೇಣ ಚ ಮೇ ಸಖ್ಯಂ ಲಕ್ಷ್ಮಣೇನ ಯಥಾ ತಥಾ ।
ದಾರರಾಜ್ಯನಿಮಿತ್ತಂ ಚ ನಿಃಶ್ರೇಯಸ್ಕರಃ ಸ ಮೇ ॥

ಮೂಲಮ್ - 27

ಪ್ರತಿಜ್ಞಾ ಚ ಮಯಾ ದತ್ತಾ ತದಾ ವಾನರಸಂನಿಧೌ ।
ಪ್ರತಿಜ್ಞಾ ಚ ಕಥಂ ಶಕ್ಯಾ ಮದ್ವಿಧೇನಾನವೇಕ್ಷಿತುಮ್ ॥

ಅನುವಾದ

ಸುಗ್ರೀವನೊಂದಿಗೆ ನನ್ನ ಮಿತ್ರತೆ ಆಗಿಹೋಗಿದೆ. ನನಗೆ ಲಕ್ಷ್ಮಣನ ಕುರಿತು ಇರುವ ಭಾವದಂತೆಯೇ ಅವನ ಕುರಿತೂ ಇದೆ. ಅವನು ತನ್ನ ಪತ್ನೀ ಮತ್ತು ರಾಜ್ಯದ ಪ್ರಾಪ್ತಿಗಾಗಿ ನನ್ನ ಒಳಿತನ್ನು ಮಾಡಲು ಕಟಿಬದ್ಧನಾಗಿದ್ದಾನೆ. ನಾನು ವಾನರರ ಮುಂದೆ ಅವನಿಗೆ ಪತ್ನೀ ಮತ್ತು ರಾಜ್ಯವನ್ನು ಕೊಡಿಸುವೆನಾಗಿ ಪ್ರತಿಜ್ಞೆ ಮಾಡಿರುವೆ. ಇಂತಹ ಸ್ಥಿತಿಯಲ್ಲಿ ನನ್ನಂತಹ ಮನುಷ್ಯನು ತನ್ನ ಪ್ರತಿಜ್ಞೆಯಿಂದ ಹೇಗೆ ಹಿಂದೆಗೆಯಬಲ್ಲನು.॥26-27॥

ಮೂಲಮ್ - 28

ತದೇಭಿಃ ಕಾರಣೈಃ ಸರ್ವೈರ್ಮಹದ್ಭಿರ್ಧರ್ಮಸಂಶ್ರಿತೈಃ ।
ಶಾಸನಂ ತವ ಯದ್ಯುಕ್ತಂ ತದ್ಭವಾನನುಮನ್ಯತಾಮ್ ॥

ಅನುವಾದ

ಇವೆಲ್ಲವೂ ಧರ್ಮಾನುಕೂಲ ಮಹಾಕಾರಣಗಳು ಒಟ್ಟಿಗೆ ಉಪಸ್ಥಿತವಾಗಿವೆ. ಅದರಿಂದ ವಿವಶನಾಗಿ ನಿನಗೆ ಉಚಿತವಾದ ದಂಡವನ್ನು ಕೊಡಬೇಕಾಯಿತು. ನೀನೂ ಇದನ್ನು ಅನುಮೋದಿಸಬೇಕು.॥28॥

ಮೂಲಮ್ - 29

ಸರ್ವಥಾ ಧರ್ಮ ಇತ್ಯೇವ ದ್ರಷ್ಟವ್ಯಸ್ತವ ನಿಗ್ರಹಃ ।
ವಯಸ್ಯಸ್ಯೋಪಕರ್ತವ್ಯಂ ಧರ್ಮಮೇವಾನುಪಶ್ಯತಾ ॥

ಅನುವಾದ

ಧರ್ಮದಲ್ಲಿ ದೃಷ್ಟಿ ಇರುವ ಮನುಷ್ಯನಿಗೆ ಮಿತ್ರನು ಉಪಕಾರಮಾಡುವುದು ಧರ್ಮವೆಂದೇ ತಿಳಿಯಲಾಗಿದೆ; ಆದ್ದರಿಂದ ನಿನಗೆ ಕೊಟ್ಟಿರುವ ಶಿಕ್ಷೆಯು ಧರ್ಮಕ್ಕೆ ಅನುಕೂಲವಾಗಿಯೇ ಇದೆ ಎಂದೇ ನೀನು ತಿಳಿದುಕೊಳ್ಳಬೇಕು.॥29॥

ಮೂಲಮ್ - 30

ಶಕ್ಯಂ ತ್ವಯಾಪಿ ತತ್ಕಾರ್ಯಂ ಧರ್ಮಮೇವಾನುವರ್ತತಾ ।
ಶ್ರೂಯತೇ ಮನುನಾ ಗೀತೌ ಶ್ಲೋಕೌ ಚಾರಿತ್ರವತ್ಸಲೌ ।
ಗೃಹೀತೌ ಧರ್ಮಕುಶಲೈಸ್ತಥಾ ತಚ್ಚರಿತಂ ಮಯಾ ॥

ಅನುವಾದ

ರಾಜನಾಗಿ ನೀನು ಧರ್ಮವನ್ನು ಅನುಸರಿಸುತ್ತಿದ್ದರೆ ನೀನೂ ಕೂಡ ನಾನು ಮಾಡಿದುದೇ ಕೆಲಸ ಮಾಡಬೇಕಾಗಿತ್ತು. ಮನುವು ರಾಜೋಚಿತ ಸದಾಚಾರವನ್ನು ಪ್ರತಿಪಾದಿಸುವ ಎರಡು ಶ್ಲೋಕಗಳನ್ನು ಹೇಳಿರುವನು. ಅವು ಸ್ಮೃತಿಗಳಲ್ಲಿ ಕೇಳಿ ಬರುತ್ತದೆ ಹಾಗೂ ಅವನ್ನು ಧರ್ಮಪಾಲನೆಯಲ್ಲಿ ಕುಶಲರಾದವರು ಆದರದಿಂದ ಸ್ವೀಕರಿಸಿರುವರು. ಅದಕ್ಕನುಸಾರವೇ ಈಗ ನಾನು ವರ್ತಿಸಿರುವೆನು. (ಆ ಶ್ಲೋಕಗಳು ಇಂತಿವೆ.॥30॥

ಮೂಲಮ್ - 31

ರಾಜಭಿರ್ಧೃತದಂಡಾಶ್ಚ ಕೃತ್ವಾ ಪಾಪಾನಿ ಮಾನವಾಃ ।
ನಿರ್ಮಲಾಃ ಸ್ವರ್ಗಮಾಯಾಂತಿ ಸಂತಃ ಸುಕೃತಿನೋ ಯಥಾ ॥

ಮೂಲಮ್ - 32

ಶಾಸನಾದ್ ವಾಪಿಮೋಕ್ಷಾದ್ವಾ ಸ್ತೇನಃ ಪಾಪಾತ್ ಪ್ರಮುಚ್ಯತೇ ।
ರಾಜಾ ತ್ವಶಾಸನ್ ಪಾಪಸ್ಯ ತದವಾಪ್ನೋತಿ ಕಿಲ್ಬಿಷಮ್ ॥

ಅನುವಾದ

ಮನುಷ್ಯನು ಪಾಪ ಮಾಡಿ ರಾಜನು ವಿಧಿಸಿದ ಶಿಕ್ಷೆಯನ್ನು ಅನುಭವಿಸಿ ಶುದ್ಧನಾಗಿ ಪುಣ್ಯಾತ್ಮಾ ಸಾಧುಪುರುಷರಂತೆ ಸ್ವರ್ಗಲೋಕಕ್ಕೆ ಹೋಗುತ್ತಾನೆ. (ಕಳ್ಳರೇ ಆದಿ ಪಾಪಿಗಳು ರಾಜನ ಎದುರಿಗೆ ಉಪಸ್ಥಿತರಾದಾಗ) ರಾಜನು ಶಿಕ್ಷೆ ಕೊಡಬಹುದು ಅಥವಾ ದಯೆಮಾಡಿ ಬಿಟ್ಟುಬಿಡಬಹುದು. ಕಳ್ಳರೇ ಆದಿ ಪಾಪಿಪುರುಷನು ತನ್ನ ಪಾಪದಿಂದ ಮುಕ್ತರಾಗುತ್ತಾರೆ; ಆದರೆ ರಾಜನು ಪಾಪಿಗೆ ಉಚಿತವಾದ ಶಿಕ್ಷೆ ಕೊಡದಿದ್ದರೆ ಅವನು ಆ ಪಾಪದ ಫಲ ಭೋಗಿಸಬೇಕಾಗುತ್ತದೆ.॥31-32॥*

ಟಿಪ್ಪನೀ
  • ಮನುಸ್ಮೃತಿಯಲ್ಲಿ ಇವೆರಡು ಶ್ಲೋಕಗಳು ಕೊಂಚ ಪಾಠಾಂತರದೊಂದಿಗೆ ಈ ಪ್ರಕಾರ ದೊರೆಯುತ್ತವೆ-
    ರಾಜಭಿಃ ಕೃತದಂಡಾಸ್ತು ಕೃತ್ವಾ ಪಾಪಾನಿ ಮಾನವಾಃ । ನಿರ್ಮಲಾಃ ಸ್ವರ್ಗಮಾಯಾಂತಿ ಸಂತಃ ಸುಕೃನೋ ಯಥಾ ॥
    ಶಾಸನಾದ್ ವಾ ವಿಮೋಕ್ಷಾದ್ ವಾ ಸ್ತೇನಃ ಸ್ತೆಯಾದ್ ವಿಮುಚ್ಯತೇ । ಅಶಾಸಿತ್ವಾ ತು ತಂ ರಾಜಾ ಸ್ತೇನಸ್ಯಾಪ್ನೋತಿ ಕಿಲ್ಬಿಷಮ್ ॥
Misc Detail

(8/318, 316)

ಮೂಲಮ್ - 33

ಆರ್ಯೇಣ ಮಮ ಮಾಂಧಾತ್ರಾ ವ್ಯಸನಂ ಘೋರಮೀಪ್ಸಿತಮ್ ।
ಶ್ರಮಣೇನ ಕೃತೇ ಪಾಪೇ ಯಥಾ ಪಾಪಂ ಕೃತಂ ತ್ವಯಾ ॥

ಅನುವಾದ

ನೀನು ಮಾಡಿದಂತಹ ಪಾಪವನ್ನೇ ಹಿಂದೆ ಒಬ್ಬ ಶ್ರಮಣನು ಮಾಡಿದ್ದನು. ಅವನಿಗೆ ನನ್ನ ಪೂರ್ವಜ ಮಾಂಧಾತ ಮಹಾರಾಜರು ಬಹಳ ಕಠೋರವಾದ ಶಾಸ್ತ್ರಕ್ಕನುಸಾರ ಶಿಕ್ಷೆಯನ್ನು ಕೊಟ್ಟಿದ್ದನು.॥33॥

ಮೂಲಮ್ - 34

ಅನ್ಯೈರಪಿ ಕೃತಂ ಪಾಪಂ ಪ್ರಮತ್ತೈರ್ವಸುಧಾಧಿಪೈಃ ।
ಪ್ರಾಯಶ್ಚಿತ್ತಂ ಚ ಕುರ್ವಂತಿ ತೇನ ತಚ್ಛಾಮ್ಯತೇ ರಜಃ ॥

ಅನುವಾದ

ರಾಜನು ಶಿಕ್ಷೆ ಕೊಡುವುದರಲ್ಲಿ ಪ್ರಮಾದ ಮಾಡಿದರೆ, ಅವನಿಗೆ ಇತರರು ಮಾಡಿದ ಪಾಪವನ್ನು ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಅವನು ಪ್ರಾಯಶ್ಚಿತ್ತಮಾಡಿಕೊಂಡಾಗಲೇ ಅವನ ದೋಷ ಶಾಂತವಾಗುತ್ತದೆ.॥34॥

ಮೂಲಮ್ - 35

ತದಲಂ ಪರಿತಾಪೇನ ಧರ್ಮತಃ ಪರಿಕಲ್ಪಿತಃ ।
ವಧೋ ವಾನರಶಾರ್ದೂಲ ನ ವಯಂ ಸ್ವವಶೇ ಸ್ಥಿತಾಃ ॥

ಅನುವಾದ

ಆದ್ದರಿಂದ ವಾನರಶ್ರೇಷ್ಠನೇ! ಪಶ್ಚಾತ್ತಾಪಪಡುವುದರಿಂದ ಯಾವ ಲಾಭವೂ ಇಲ್ಲ. ಸರ್ವಥಾ ಧರ್ಮಕ್ಕನುಸಾರವೇ ನಿನ್ನನ್ನು ವಧಿಸಲಾಗಿದೆ; ಏಕೆಂದರೆ ನಾವು ನಮ್ಮ ವಶದಲ್ಲಿ ಇಲ್ಲ. (ಶಾಸ್ತ್ರದ ಅಧೀನರಾಗಿದ್ದೇವೆ).॥35॥

ಮೂಲಮ್ - 36

ಶೃಣು ಚಾಪ್ಯಪರಂ ಭೂಯಃ ಕಾರಣಂ ಹರಿಪುಂಗವ ।
ತಚ್ಛ್ರುತ್ವಾ ಹಿ ಮಹದ್ ವೀರ ನ ಮನ್ಯುಂ ಕರ್ತುಮರ್ಹಸಿ ॥

ಅನುವಾದ

ವಾನರ ಶಿರೋಮಣಿಯೇ! ನಿನ್ನ ವಧೆಯ ಇನ್ನೊಂದು ಕಾರಣವನ್ನು ಕೇಳು. ವೀರನೇ! ಆ ಮಹಾಕಾರಣವನ್ನು ಕೇಳಿ ನೀನು ನನ್ನ ಕುರಿತು ಕ್ರೋಧಮಾಡಬಾರದು.॥36॥

ಮೂಲಮ್ - 37

ನ ಮೇ ತತ್ರ ಮನಸ್ತಾಪೋ ನ ಮನ್ಯುರ್ಹರಿಪುಂಗವ ।
ವಾಗುರಾಭಿಶ್ಚ ಪಾಶೈಶ್ಚ ಕೂಟೈಶ್ಚ ವಿವಿಧೈರ್ನರಾಃ ॥

ಮೂಲಮ್ - 38

ಪ್ರತಿಚ್ಛನ್ನಾಶ್ಚ ದೃಶ್ಯಾಶ್ಚ ಗೃಹ್ಣಂತಿ ಸುಬಹೂನ್ ಮೃಗಾನ್ ।
ಪ್ರಧಾವಿತಾನ್ ವಾ ವಿತ್ರಸ್ತಾನ್ ವಿಸ್ರಬ್ಧಾನತಿವಿಷ್ಠಿತಾನ್ ॥

ಅನುವಾದ

ವಾನರಶ್ರೇಷ್ಠನೇ! ಈ ಕಾರ್ಯಕ್ಕಾಗಿ ನನ್ನ ಮನಸ್ಸಿನಲ್ಲಿ ಸಂತಾಪವಾಗಲೀ, ಖೇದವಾಗಲೀ ಇಲ್ಲ. ಮನುಷ್ಯನು (ರಾಜನು) ದೊಡ್ಡ-ದೊಡ್ಡ ಬಲೆಯನ್ನು ಹರಡಿ, ನಾನಾ ಪ್ರಕಾರದ ಕೂಟ ಉಪಾಯ (ಗುಪ್ತವಾದ ಹೊಂಡಗಳನ್ನು ನಿರ್ಮಿಸಿ) ಮಾಡಿ ಅಡಗಿಕೊಂಡು ಆ ಮೃಗಗಳು ಭಯದಿಂದ ಓಡುತ್ತಿರಲಿ ಅಥವಾ ವಿಶ್ವಾಸದಿಂದ ಅತ್ಯಂತ ಹತ್ತಿರ ಕುಳಿತಿರಲಿ, ಮುಂದೆ ಬಂದು ಅನೇಕ ಮೃಗಗಳನ್ನು ಹಿಡಿಯುತ್ತಾನೆ.॥37-38॥

ಮೂಲಮ್ - 39

ಪ್ರಮತ್ತಾನಪ್ರಮತ್ತಾನ್ ವಾ ನರಾ ಮಾಂಸಾಶಿನೋ ಭೃಶಮ್ ।
ವಿಧ್ಯಂತಿ ವಿಮುಖಾಂಶ್ಚಾಪಿ ನ ಚ ದೋಷೋಽತ್ರ ವಿದ್ಯತೇ ॥

ಅನುವಾದ

ಮಾಂಸಾಹಾರೀ ಮನುಷ್ಯನು (ಕ್ಷತ್ರಿಯರು) ಜಾಗರೂಕರಾಗಿರಲೀ, ಅಜಾಗರೂಕರಾಗಿರಲಿ ಅಥವಾ ವಿಮುಖರಾಗಿ ಓಡುತ್ತಿರಲೀ ಪಶುಗಳನ್ನು ಅತ್ಯಂತ ಗಾಯಗೊಳಿಸುತ್ತಾರೆ; ಆದರೆ ಅವರಿಗೆ ಈ ಬೇಟೆಯಲ್ಲಿ ದೋಷ ಇರುವುದಿಲ್ಲ.॥39॥

ಮೂಲಮ್ - 40

ಯಾನ್ತಿ ರಾಜರ್ಷಯಶ್ಚಾತ್ರ ಮೃಗಯಾಂಧರ್ಮಕೋವಿದಾಃ ।
ತಸ್ಮಾತ್ತ್ವಂ ನಿಹತೋ ಯುದ್ಧೇ ಮಯಾ ಬಾಣೇನ ವಾನರ ।
ಆಯುಧ್ಯನ್ ಪ್ರತಿಯುಧ್ಯನ್ ವಾ ಯಸ್ಮಾಚ್ಛಾಖಾಮೃಗೋ ಹ್ಯಸಿ ॥

ಅನುವಾದ

ವಾನರನೇ! ಧರ್ಮಜ್ಞ ರಾಜರ್ಷಿಗಳೂ ಈ ಜಗತ್ತಿನಲ್ಲಿ ಬೇಟೆಗೆ ಹೋಗುತ್ತಾರೆ ಮತ್ತು ವಿವಿಧ ಪ್ರಾಣಿಗಳನ್ನು ಕೊಲ್ಲುತ್ತಾರೆ. ಅದಕ್ಕಾಗಿ ನಾನು ನಿನ್ನನ್ನು ಯುದ್ಧದಲ್ಲಿ ಬಾಣಕ್ಕೆ ಗುರಿಯಾಗಿಸಿದೆ. ನೀನು ನನ್ನೊಂದಿಗೆ ಯುದ್ಧ ಮಾಡುತ್ತಿದ್ದೆಯೋ, ಇಲ್ಲವೋ ನಿನ್ನನ್ನು ಕೊಲ್ಲುವುದರಲ್ಲಿ ಯಾವುದೇ ಅಂತರ ಬೀಳುವುದಿಲ್ಲ; ಏಕೆಂದರೆ ನೀನು ಶಾಖಾಮೃಗನಾಗಿರುವೆ. (ಬೇಟೆಯಾಡುವುದು ಕ್ಷತ್ರಿಯರಿಗೆ ಅಧಿಕಾರವಿದೆ).॥40॥

ಮೂಲಮ್ - 41

ದುರ್ಲಭಸ್ಯ ಚ ಧರ್ಮಸ್ಯ ಜೀವಿತಸ್ಯ ಶುಭಸ್ಯ ಚ ।
ರಾಜಾನೋ ವಾನರಶ್ರೇಷ್ಠ ಪ್ರದಾತಾರೋ ನ ಸಂಶಯಃ ॥

ಅನುವಾದ

ವಾನರ ಶ್ರೇಷ್ಠನೇ! ರಾಜರು ದುರ್ಲಭ ಧರ್ಮ, ಜೀವನ ಮತ್ತು ಲೌಕಿಕ ಅಭ್ಯುದಯ ಕೊಡುವವರಾಗಿದ್ದಾರೆ; ಇದರಲ್ಲಿ ಸಂಶಯವೇ ಇಲ್ಲ.॥41॥

ಮೂಲಮ್ - 42

ತಾನ್ನ ಹಿಂಸ್ಯಾನ್ನ ಚಾಕ್ರೋಶೇನ್ನಾಕ್ಷಿಪೇನ್ನಾಪ್ರಿಯಂ ವದೇತ್ ।
ದೇವಾ ಮನುಷ್ಯರೂಪೇಣ ಚರಂತ್ಯೇತೇ ಮಹೀತಲೇ ॥

ಅನುವಾದ

ಆದ್ದರಿಂದ ಅವರನ್ನು ಹಿಂಸಿಸಬಾರದು, ನಿಂದಿಸಬಾರದು, ಅವರ ಕುರಿತು ಆಕ್ಷೇಪಿಸಲೂ ಬಾರದು. ಅವರಲ್ಲಿ ಪ್ರಿಯವಾಗಿಯೇ ಮಾತನಾಡಬೇಕು; ಏಕೆಂದರೆ ಅವರು ವಾಸ್ತವವಾಗಿ ದೇವತೆ ಯಾಗಿದ್ದಾರೆ. ಅವರು ಮನುಷ್ಯ ರೂಪದಿಂದ ಈ ಪೃಥಿವಿಯಲ್ಲಿ ಸಂಚರಿಸುತ್ತಾ ಇರುತ್ತಾರೆ.॥42॥

ಮೂಲಮ್ - 43

ತ್ವಂ ತು ಧರ್ಮಮವಿಜ್ಞಾಯ ಕೇವಲಂ ರೋಷಮಾಸ್ಥಿತಃ ।
ಪ್ರದೂಷಯಸಿ ಮಾಂ ಧರ್ಮೇ ಪಿತೃಪೈತಾಮಹೇ ಸ್ಥಿತಮ್ ॥

ಅನುವಾದ

ನೀನಾದರೋ ಧರ್ಮದ ಸ್ವರೂಪವನ್ನು ತಿಳಿಯದೆ ಕೇವಲ ರೋಷಕ್ಕೆ ವಶನಾಗಿರುವೆ, ಅದಕ್ಕಾಗಿ ಪಿತೃ-ಪಿತಾಮಹರ ಧರ್ಮದಲ್ಲಿ ಸ್ಥಿತನಾದ ನನ್ನನ್ನು ನಿಂದಿಸುತ್ತಿರುವೆ.॥43॥

ಮೂಲಮ್ - 44

ಏವಮುಕ್ತಸ್ತು ರಾಮೇಣ ವಾಲೀ ಪ್ರವ್ಯಥಿತೋ ಭೃಶಮ್ ।
ನ ದೋಷಂ ರಾಘವೇ ದಧ್ಯೌ ಧರ್ಮೇಽಧಿಗತನಿಶ್ಚಯಃ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ವಾಲಿಯ ಮನಸ್ಸಿನಲ್ಲಿ ಬಹಳ ವ್ಯಥೆ ಉಂಟಾಯಿತು. ಅವನಿಗೆ ಧರ್ಮತತ್ತ್ವದ ನಿಶ್ಚಯವಾಯಿತು. ಅವನು ಶ್ರೀರಾಮಚಂದ್ರನಲ್ಲಿನ ದೋಷದ ಚಿಂತನೆ ಬಿಟ್ಟುಬಿಟ್ಟನು.॥44॥

ಮೂಲಮ್ - 45

ಪ್ರತ್ಯುವಾಚ ತತೋ ರಾಮಂ ಪ್ರಾಂಜಲಿರ್ವಾನರೇಶ್ವರಃ ।
ಯತ್ತ್ವಮಾತ್ಥ ನರಶ್ರೇಷ್ಠ ತತ್ತಥೈವ ನ ಸಂಶಯಃ ॥

ಅನುವಾದ

ಅನಂತರ ವಾನರರಾಜ ವಾಲಿಯು ಶ್ರೀರಾಮನಿಗೆ ಕೈಮುಗಿದುಕೊಂಡು ಹೇಳಿದನು- ನರಶ್ರೇಷ್ಠನೇ! ನೀನು ಹೇಳಿದುದು ಖಂಡಿತವಾಗಿ ಸತ್ಯವಾಗಿದೆ; ಇದರಲ್ಲಿ ಸಂಶಯವೇ ಇಲ್ಲ.॥45॥

ಮೂಲಮ್ - 46

ಪ್ರತಿವಕ್ತುಂ ಪ್ರಕೃಷ್ಟೇಽಹಿ ನಾಪಕೃಷ್ಟಸ್ತು ಶಕ್ನುಯಾತ್ ।
ಯದಯುಕ್ತಂ ಮಯಾ ಪೂರ್ವಂ ಪ್ರಮಾದಾದ್ವಾಕ್ಯ ಮಪ್ರಿಯಮ್ ॥

ಮೂಲಮ್ - 47

ತತ್ರಾಪಿ ಖಲು ಮಾಂ ದೋಷಂ ಕರ್ತುಂ ನಾರ್ಹಸಿ ರಾಘವ ।
ತ್ವಂ ಹಿ ದೃಷ್ಟಾರ್ಥತತ್ತ್ವಜ್ಞಃ ಪ್ರಜಾನಾಂ ಚ ಹಿತೇ ರತಃ ।
ಕಾರ್ಯಕಾರಣಸಿದ್ಧೌ ಚ ಪ್ರಸನ್ನಾ ಬುದ್ಧಿರವ್ಯಯಾ ॥

ಅನುವಾದ

ನಿನ್ನಂತಹ ಶ್ರೇಷ್ಠ ಪುರುಷನಿಗೆ ನನ್ನಂತಹ ನಿಮ್ನಶ್ರೇಣಿಯ ಪ್ರಾಣಿ ಉಚಿತವಾಗಿ ಉತ್ತರಿಸಲಾರನು; ಆದ್ದರಿಂದ ನಾನು ಪ್ರಮಾದವಶ ಮೊದಲು ಆಡಿದ ಅನುಚಿತ ಮಾತಿನಲ್ಲಿ ನನ್ನ ಅಪರಾಧವನ್ನು ತಿಳಿಯಬಾರದು. ರಘುನಂದನ! ನೀನು ಪರಮಾರ್ಥ ತತ್ತ್ವದ ಯಥಾರ್ಥ ಜ್ಞಾನಿಯಾಗಿರುವೆ, ಪ್ರಜಾಜನರ ಹಿತದಲ್ಲಿ ತತ್ಪರನಾಗಿರುವೆ. ನಿನ್ನ ಬುದ್ಧಿ ಕಾರ್ಯ-ಕಾರಣದ ನಿಶ್ಚಯದಲ್ಲಿ ನಿರ್ಭ್ರಾಂತ ಹಾಗೂ ನಿರ್ಮಲವಾಗಿದೆ.॥46-47॥

ಮೂಲಮ್ - 48

ಮಾಮಪ್ಯವಗತಂ ಧರ್ಮಾದ್ ವ್ಯತಿಕ್ರಾಂತ ಪುರಸ್ಕೃತಮ್ ।
ಧರ್ಮಸಂಹಿತಯಾ ವಾಚಾ ಧರ್ಮಜ್ಞ ಪರಿಪಾಲಯ ॥

ಅನುವಾದ

ಧರ್ಮಜ್ಞನೇ! ನಾನು ಧರ್ಮಭ್ರಷ್ಟ ಪ್ರಾಣಿಗಳಲ್ಲಿ ಅಗ್ರಗಣ್ಯನಾಗಿರುವೆ ಮತ್ತು ಇದೇ ರೂಪದಲ್ಲಿ ಎಲ್ಲೆಡೆ ನನ್ನ ಪ್ರಸಿದ್ಧಿ ಆಗಿದ್ದರೂ ಇಂದು ನನಗೆ ಶರಣು ಬಂದಿರುವೆ. ನಿನ್ನ ಧರ್ಮತತ್ತ್ವದ ವಾಣಿಯಿಂದ ಇಂದು ನನ್ನನ್ನು ರಕ್ಷಿಸು.॥48॥

ಮೂಲಮ್ - 49

ಬಾಷ್ಪಸಂರುದ್ಧಕಂಠಸ್ತು ವಾಲೀ ಸಾರ್ತರವಃ ಶನೈಃ ।
ಉವಾಚ ರಾಮಂ ಸಂಪ್ರೇಕ್ಷ್ಯಪಂಕಲಗ್ನ ಇವ ದ್ವಿಪಃ ॥

ಅನುವಾದ

ಇಷ್ಟು ಹೇಳುತ್ತಾ-ಹೇಳುತ್ತಾ ವಾಲಿಯ ಗಂಟಲು ಉಮ್ಮಳಿಸಿ ಬಂತು ಹಾಗೂ ಅವನು ಕೆಸರಿನಲ್ಲಿ ಸಿಕ್ಕಿಕೊಂಡ ಆನೆಯಂತೆ ಆರ್ತನಾದ ಮಾಡುತ್ತಾ ಶ್ರೀರಾಮನ ಕಡೆಗೆ ನೋಡುತ್ತಾ ನಿಧಾನವಾಗಿ ಮಾತನಾಡಿದನು.॥49॥

ಮೂಲಮ್ - 50

ನ ಚಾತ್ಮಾನಮಹಂ ಶೋಚೇ ನ ತಾರಾಂ ನಾಪಿ ಬಾಂಧವಾನ್ ।
ಯಥಾ ಪುತ್ರಂ ಗುಣಜ್ಯೇಷ್ಠಮಂಗದಂ ಕನಕಾಂಗದಮ್ ॥

ಅನುವಾದ

ಭಗವಂತನೇ! ನನಗಾಗಲೀ, ತಾರೆಗಾಗಲಿ, ಬಂಧು-ಬಾಂಧವರಿಗಾಗಲೀ ನಾನು ಶೋಕಿಸುವುದಿಲ್ಲ, ಆದರೆ ಸುವರ್ಣದ ಅಂಗದವನ್ನು ಧರಿಸುವ ಶ್ರೇಷ್ಠ ಗುಣಸಂಪನ್ನ ಪುತ್ರನಾದ ಅಂಗದನ ಕುರಿತು ಹೆಚ್ಚು ಶೋಕಿಸುತ್ತಿದ್ದೇನೆ.॥50॥

ಮೂಲಮ್ - 51

ಸ ಮಮಾದರ್ಶನಾದ್ದೀನೋ ಬಾಲ್ಯಾತ್ ಪ್ರಭೃತಿ ಲಾಲಿತಃ ।
ತಟಾಕ ಇವ ಪೀತಾಂಬುರುಪಶೋಷಂ ಗಮಿಷ್ಯತಿ ॥

ಅನುವಾದ

ನಾನು ಅವನನ್ನು ಬಾಲ್ಯದಿಂದಲೂ ಹೆಚ್ಚು ಮುದ್ದಿಸುತ್ತಿದ್ದೆ; ಈಗ ನನ್ನನ್ನು ನೋಡದೆ ಅವನು ಬಹಳ ದುಃಖಿತನಾಗುವನು ಮತ್ತು ನೀರು ಆರಿದ ಕೆರೆಯಂತೆ ಒಣಗಿಹೋಗುವನು.॥51॥

ಮೂಲಮ್ - 52

ಬಾಲಶ್ಚಾಕೃತಬುದ್ಧಿಶ್ಚ ಏಕಪುತ್ರಶ್ಚ ಮೇ ಪ್ರಿಯಃ ।
ತಾರೇಯೋ ರಾಮ ಭವತಾ ರಕ್ಷಣೀಯೋ ಮಹಾಬಲಃ ॥

ಅನುವಾದ

ಶ್ರೀರಾಮಾ! ಅವನು ಇನ್ನೂ ಬಾಲಕನಾಗಿದ್ದಾನೆ. ಅವನ ಬುದ್ಧಿ ಇನ್ನೂ ಬಲಿತಿಲ್ಲ. ನನ್ನ ಒಬ್ಬನೇ ಮಗನಾದ್ದರಿಂದ ತಾರಾಕುಮಾರ ಅಂಗದನು ನನಗೆ ಬಹಳ ಪ್ರಿಯನಾಗಿದ್ದಾನೆ. ನೀನು ನನ್ನ ಆ ಮಹಾಬಲಿ ಪುತ್ರನನ್ನು ರಕ್ಷಿಸು.॥52॥

ಮೂಲಮ್ - 53

ಸುಗ್ರೀವೇ ಚಾಂಗದೇ ಚೈವ ವಿಧತ್ಸ್ವಮತಿಮುತ್ತಮಾಮ್ ।
ತ್ವಂ ಹಿ ಗೋಪ್ತಾ ಚ ಶಾಸ್ತಾ ಚ ಕಾರ್ಯಾಕಾರ್ಯವಿಧೌ ಸ್ಥಿತಃ ॥

ಅನುವಾದ

ಸುಗ್ರೀವ ಮತ್ತು ಅಂಗದ ಇಬ್ಬರ ಕುರಿತೂ ನೀನು ಸದ್ಭಾವವನ್ನಿಡು. ಈಗ ನೀನೇ ಇವರ ರಕ್ಷಕನಾಗಿರುವೆ ಹಾಗೂ ಇವರಿಗೆ ಕರ್ತವ್ಯ ಅಕರ್ತವ್ಯದ ಶಿಕ್ಷಣ ಕೊಡುವವನಾಗಿರುವೆ.॥53॥

ಮೂಲಮ್ - 54

ಯಾ ತೇ ನರಪತೇ ವೃತ್ತಿರ್ಭರತೇ ಲಕ್ಷ್ಮಣೇ ಚ ಯಾ ।
ಸುಗ್ರೀವೇ ಚಾಂಗದೇ ರಾಜಂಸ್ತಾಂ ಚಿಂತಯಿತುಮರ್ಹಸಿ ॥

ಅನುವಾದ

ರಾಜನ್! ನರೇಶ್ವರನೇ! ಭರತ ಮತ್ತು ಲಕ್ಷ್ಮಣರ ಕುರಿತು ನಿನ್ನ ವರ್ತನೆ ಇರುವಂತೆಯೇ ಸುಗ್ರೀವ ಹಾಗೂ ಅಂಗದನ ಕುರಿತೂ ಇರಬೇಕು. ನೀನು ಅದೇ ಭಾವದಿಂದ ಇವರಿಬ್ಬರನ್ನೂ ನಡೆಸಿಕೊಳ್ಳಬೇಕು.॥54॥

ಮೂಲಮ್ - 55

ಮದ್ದೋಷಕೃತದೋಷಾಂ ತಾಂ ಯಥಾ ತಾರಾಂ ತಪಸ್ವಿನೀಮ್ ।
ಸುಗ್ರೀವೋ ನಾವಮನ್ಯೇತ ತಥಾವಸ್ಥಾತುಮರ್ಹಸಿ ॥

ಅನುವಾದ

ಬಡಪಾಯಿ ತಾರೆಯ ಸ್ಥಿತಿ ಶೋಚನೀಯವಾಗಬಹುದು. ನನ್ನ ಅಪರಾಧದಿಂದಲೇ ಆಕೆಗೂ ಅಪರಾಧಿನೀ ಎಂದು ತಿಳಿದು ಸುಗ್ರೀವನು ಆಕೆಯನ್ನು ತಿರಸ್ಕರಿಸದಿರಲಿ. ಇದನ್ನು ನೀನು ವ್ಯವಸ್ಥೆ ಮಾಡು.॥55॥

ಮೂಲಮ್ - 56½

ತ್ವಯಾ ಹ್ಯನುಗೃಹೀತೇನ ಶಕ್ಯಂ ರಾಜ್ಯಮುಪಾಸಿತುಮ್ ।
ತ್ವದ್ವಶೇ ವರ್ತಮಾನೇನ ತವ ಚಿತ್ತಾನುವರ್ತಿನಾ ॥
ಶಕ್ಯಂ ದಿವಂ ಚಾರ್ಜಯಿತುಂ ವಸುಧಾಂ ಚಾಪಿ ಶಾಸಿತುಮ್ ।

ಅನುವಾದ

ಸುಗ್ರೀವನು ನಿನ್ನ ಕೃಪಾಪಾತ್ರನಾಗಿಯೇ ಈ ರಾಜ್ಯವನ್ನು ಯಥಾರ್ಥವಾಗಿ ಪಾಲಿಸಬಲ್ಲನು. ನಿನಗೆ ಅಧೀನನಾಗಿ ನಿನ್ನ ಚಿತ್ತವನ್ನು ಅನುಸರಿಸುವವನು ಸ್ವರ್ಗ ಮತ್ತು ಪೃಥಿವಿಯ ರಾಜ್ಯವನ್ನೂ ಪಡೆಯಬಲ್ಲನು ಹಾಗೂ ಅದನ್ನು ಚೆನ್ನಾಗಿ ಪಾಲಿಸಲೂ ಬಲ್ಲನು.॥56॥

ಮೂಲಮ್ - 57½

ತ್ವತ್ತೋಽಹಂ ವಧಮಾಕಾಂಕ್ಷನ್ ವಾರ್ಯಮಾಣೋಽಪಿ ತಾರಯಾ ॥
ಸುಗ್ರೀವೇಣ ಸಹ ಭ್ರಾತ್ರಾ ದ್ವಂದ್ವ ಯುದ್ಧಮುಪಾಗತಃ ।

ಅನುವಾದ

ನಿನ್ನ ಕೈಯಿಂದಲೇ ನನ್ನ ಸಾವು ಆಗಲೆಂದೇ ನಾನು ಬಯಸುತ್ತಿದ್ದೆ. ಅದಕ್ಕಾಗಿ ತಾರೆಯು ತಡೆದರೂ ನಾನು ನನ್ನ ತಮ್ಮ ಸುಗ್ರೀವನೊಡನೆ ದ್ವಂದ್ವಯುದ್ಧ ಮಾಡಲು ಹೊರಟುಬಂದೆ.॥57½॥

ಮೂಲಮ್ - 58

ಇತ್ಯುಕ್ತ್ವಾ ವಾನರೋ ರಾಮಂ ವಿರರಾಮ ಹರೀಶ್ವರಃ ॥

ಮೂಲಮ್ - 59

ಸ ತಮಾಶ್ವಾಸಯದ್ ರಾಮೋ ವಾಲಿನಂ ವ್ಯಕ್ತದರ್ಶನಮ್ ।
ಸಾಧುಸಮ್ಮತಯಾ ವಾಚಾ ಧರ್ಮತತ್ತ್ವಾರ್ಥಯುಕ್ತಯಾ ॥

ಮೂಲಮ್ - 60

ನ ಸಂತಾಪಸ್ತ್ವಯಾ ಕಾರ್ಯ ಏತದರ್ಥಂ ಪ್ಲವಂಗಮ ।
ನ ವಯಂ ಭವತಾ ಚಿಂತ್ಯಾನಾಪ್ಯಾತ್ಮಾ ಹರಿಸತ್ತಮ ।
ವಯಂ ಭವದ್ವಿಶೇಷೇಣ ಧರ್ಮತಃ ಕೃತನಿಶ್ಚಯಾಃ ॥

ಅನುವಾದ

ಶ್ರೀರಾಮಚಂದ್ರನಲ್ಲಿ ಹೀಗೆ ಹೇಳಿ ವಾನರರಾಜ ವಾಲಿಯು ಸುಮ್ಮನಾದನು. ಆಗ ಅವನ ಜ್ಞಾನಶಕ್ತಿಯ ವಿಕಾಸವಾಗಿತ್ತು. ಶ್ರೀರಾಮನು ಧರ್ಮದ ಯಥಾರ್ಥ ಸ್ವರೂಪವನ್ನು ಪ್ರಕಟಪಡಿಸುವಂತಹ ಸಾಧು ಪುರುಷರಿಂದ ಪ್ರಶಂಸಿತವಾದ ಮಾತಿನಲ್ಲಿ ಅವನಲ್ಲಿ ಹೇಳಿದನು-ವಾನರೇಶ್ವರನೇ! ನೀನು ಇದಕ್ಕಾಗಿ ಸಂತಾಪಪಡಬಾರದು. ಕಪಿಪ್ರವರ! ನೀನು ನಮ್ಮ ಕುರಿತು ಹಾಗೂ ನಿನ್ನ ಕುರಿತು ಚಿಂತಿಸುವ ಆವಶ್ಯಕತೆ ಇಲ್ಲ; ಏಕೆಂದರೆ ನಾವು ನಿನಗಿಂತ ವಿಶೇಷಜ್ಞರಾಗಿದ್ದೇವೆ, ಅದಕ್ಕಾಗಿ ನಾವು ಧರ್ಮಾನುಕೂಲ ಕಾರ್ಯಮಾಡುವುದನ್ನೇ ನಿಶ್ಚಯಿಸಿರುವೆವು.॥58-60॥

ಮೂಲಮ್ - 61

ದಂಡ್ಯೋ ಯಃ ಪಾತಯೇದ್ದಂಡಂ ದಂಡ್ಯೋ ಯಶ್ಚಾಪಿ ದಂಡ್ಯತೇ ।
ಕಾರ್ಯಕಾರಣಸಿದ್ಧಾರ್ಥಾವುಭೌ ತೌ ನಾವಸೀದತಃ ॥

ಅನುವಾದ

ಯಾರು ಶಿಕ್ಷಾರ್ಹ ವ್ಯಕ್ತಿಗೆ ದಂಡವಿಧಿಸುವನೋ, ಹಾಗೂ ದಂಡನೆಗೆ ಅಧಿಕಾರಿಯಾಗಿ ಶಿಕ್ಷೆ ಅನುಭವಿಸುತ್ತಾನೋ, ಅವರಲ್ಲಿ ದಂಡನೀಯ ವ್ಯಕ್ತಿಯು ತನ್ನ ಅಪರಾಧದ ಫಲವಾಗಿ ಶಾಸಕನು ಕೊಟ್ಟಿರುವ ಶಿಕ್ಷೆಯನ್ನು ಅನುಭವಿಸಿ, ಮತ್ತು ದಂಡವಿಧಿಸುವ ಶಾಸಕನು ಅವನ ಫಲಭೋಗಕ್ಕೆ ನಿಮಿತ್ತನಾಗಿ ಕೃತಾರ್ಥರಾಗುತ್ತಾರೆ. ತಮ್ಮ-ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸಿದ್ದರಿಂದ ಕರ್ಮರೂಪೀ ಋಣದಿಂದ ಮುಕ್ತರಾಗುತ್ತಾರೆ, ದುಃಖಿಗಳಾಗುವುದಿಲ್ಲ.॥61॥

ಮೂಲಮ್ - 62

ತದ್ಭವಾನ್ ದಂಡಸಂಯೋಗಾದಸ್ಮಾದ್ ವಿಗತಕಿಲ್ಬಿಷಃ ।
ಗತಃ ಸ್ವಾಂ ಪ್ರಕೃತಿಂ ಧರ್ಮ್ಯಾಂ ಧರ್ಮದೃಷ್ಟೇನ ವರ್ತ್ಮನಾ ॥

ಅನುವಾದ

ನೀನು ಈ ಶಿಕ್ಷೆಯನ್ನು ಪಡೆದು ಪಾಪರಹಿತನಾದೆ. ನೀನು ಧರ್ಮಶಾಸ್ತ್ರ ದೃಷ್ಟವಾದ ಮಾರ್ಗದಿಂದ ಧರ್ಮಪ್ರಧಾನವಾದ ನಿನ್ನ ಸ್ವರೂಪವನ್ನು ಹೊಂದಿರುವೆ.॥62॥

ಮೂಲಮ್ - 63

ತ್ಯಜ ಶೋಕಂ ಚ ಮೋಹಂ ಚ ಭಯಂ ಚ ಹೃದಯೇ ಸ್ಥಿತಮ್ ।
ತ್ವಯಾ ವಿಧಾನಂ ಹರ್ಯಗ್ರ್ಯ ನ ಶಕ್ಯಮತಿವರ್ತಿತುಮ್ ॥

ಅನುವಾದ

ಈಗ ನೀನು ನಿನ್ನ ಹೃದಯದಲ್ಲಿರುವ ಶೋಕ, ಮೋಹ, ಭಯವನ್ನು ತ್ಯಜಿಸಿಬಿಡು. ವಾನರಶ್ರೇಷ್ಠನೇ! ನೀನು ದೈವದ ವಿಧಾನವನ್ನು ಮೀರಲಾರೆ.॥63॥

ಮೂಲಮ್ - 64

ಯಥಾ ತ್ವಯ್ಯಂಗದೋ ನಿತ್ಯಂ ವರ್ತತೇ ವಾನರೇಶ್ವರ ।
ತಥಾ ವರ್ತೇತ ಸುಗ್ರೀವೇ ಮಯಿ ಚಾಪಿ ನ ಸಂಶಯಃ ॥

ಅನುವಾದ

ವಾನರೇಶ್ವರನೇ! ಕುಮಾರ ಅಂಗದನು ನೀನು ಜೀವಿಸಿರುವಾಗ ಇರುವಂತೆಯೇ ಸುಗ್ರೀವನ ಮತ್ತು ನನ್ನ ಬಳಿಯೂ ಸುಖವಾಗಿ ಇರುವನು, ಇದರಲ್ಲಿ ಸಂಶಯವೇ ಬೇಡ.॥64॥

ಮೂಲಮ್ - 65

ಸ ತಸ್ಯ ವಾಕ್ಯಂ ಮಧುರಂ ಮಹಾತ್ಮನಃ
ಸಮಾಹಿತಂ ಧರ್ಮಪಥಾನುವರ್ತಿತಮ್ ।
ನಿಶಮ್ಯ ರಾಮಸ್ಯ ರಣಾವಮರ್ದಿನೋ
ವಚಃ ಸಯುಕ್ತಂ ನಿಜಗಾದ ವಾನರಃ ॥

ಅನುವಾದ

ಯುದ್ಧದಲ್ಲಿ ಶತ್ರುವನ್ನು ಮರ್ದಿಸುವ ಮಹಾತ್ಮಾ ಶ್ರೀರಾಮಚಂದ್ರನ ಧರ್ಮಮಾರ್ಗಾನುಕೂಲ ಹಾಗೂ ಮಾನಸಿಕ ಶಂಕೆಗಳನ್ನು ಸಮಾಧಾನಗೊಳಿಸುವ ಮಧುರ ವಚನಗಳನ್ನು ಕೇಳಿ ವಾನರ ವಾಲಿಯು ಹೀಗೆ ಸುಂದರ ಯುಕ್ತಿ-ಯುಕ್ತ ಮಾತನ್ನು ಹೇಳಿದನು.॥65॥

ಮೂಲಮ್ - 66

ಶರಾಭಿತಪ್ತೇನ ವಿಚೇತಸಾ ಮಯಾ
ಪ್ರಭಾಷಿತಸ್ತ್ವಂ ಯದಜಾನತಾ ವಿಭೋ ।
ಇದಂ ಮಹೇಂದ್ರೋಪಮ ಭೀಮವಿಕ್ರಮ
ಪ್ರಸಾದಿತಸ್ತ್ವಂ ಕ್ಷಮ ಮೇ ನರೇಶ್ವರ ॥

ಅನುವಾದ

ಪ್ರಭೋ! ದೇವೇಂದ್ರನಂತೆ ಭಯಂಕರ ಪರಾಕ್ರಮ ಪ್ರಕಟಿಸುವ ನರೇಶ್ವರನೇ! ನಾನು ನಿನ್ನ ಬಾಣದಿಂದ ಪೀಡಿತನಾದ್ದರಿಂದ ನಿಶ್ಚೇಷ್ಠಿತನಂತಾಗಿದ್ದೆ, ಅದರಿಂದ ತಿಳಿಯದೆ ನಾನು ನಿನ್ನ ಕುರಿತು ಕಠೋರವಾದ ಮಾತನ್ನು ಆಡಿದೆ. ಅದನ್ನು ನೀನು ಕ್ಷಮಿಸೆಂದು ನಿನ್ನಲ್ಲಿ ಪ್ರಾರ್ಥಿಸುತ್ತಿದ್ದೇನೆ, ನಿನ್ನನ್ನು ಪ್ರಸನ್ನಗೊಳಿಸಲು ಬಯಸುತ್ತೇನೆ.॥66॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಹದಿನೆಂಟನೆಯ ಸರ್ಗ ಸಂಪೂರ್ಣವಾಯಿತು. ॥18॥