०६९ अयोमुख्याः कर्णादिछेदः

वाचनम्
ಭಾಗಸೂಚನಾ

ಲಕ್ಷ್ಮಣನು ಅಯೋಮುಖಿಯನ್ನು ದಂಡಿಸಿದುದು, ರಾಮ-ಲಕ್ಷ್ಮಣರು ಕಬಂಧನ ಪಾಶದಲ್ಲಿ ಸಿಲುಕಿ ದುಃಖಿಸಿದುದು

ಮೂಲಮ್ - 1

ಕೃತ್ವೈವಮುದಕಂ ತಸ್ಮೈ ಪ್ರಸ್ಥಿತೌ ರಾಘವೋ ತದಾ ।
ಅವೇಕ್ಷಂತೌ ವನೇ ಸೀತಾಂ ಜಗ್ಮತುಃ ಪಶ್ಚಿಮಾಂ ದಿಶಮ್ ॥

ಅನುವಾದ

ಈ ಪ್ರಕಾರ ಜಟಾಯುವಿಗೆ ಜಲಾಂಜಲಿಯನಿತ್ತು ಆ ಇಬ್ಬರು ರಘುವಂಶಿ ಸೋದರರು ಆಗ ಅಲ್ಲಿಂದ ಹೊರಟು ವನದಲ್ಲಿ ಸೀತೆಯನ್ನು ಹುಡುಕುತ್ತಾ ಪಶ್ಚಿಮ ದಿಕ್ಕಿನೆಡೆಗೆ ನಡೆದರು.॥1॥

ಮೂಲಮ್ - 2

ತಾಂ ದಿಶಂ ದಕ್ಷಿಣಾಂ ಗತ್ವಾ ಶರಚಾಪಾಸಿಧಾರಿಣೌ ।
ಅವಿಪ್ರಹತಮೈಕ್ಷ್ವಾಕೌ ಪಂಥಾನಂ ಪ್ರತಿಪೇದತುಃ ॥

ಅನುವಾದ

ಧನುರ್ಬಾಣ, ಖಡ್ಗ ಧರಿಸಿದ ಆ ಇಬ್ಬರು ಇಕ್ವಾಕುವಂಶೀ ವೀರರು ದಕ್ಷಿಣ-ಪಶ್ಚಿಮ ದಿಕ್ಕಿನತ್ತ ಮುಂದುವರಿಯುತ್ತಾ, ಯಾವ ಜನರೂ ಓಡಾಡದ ಒಂದು ನಿರ್ಜನ ಮಾರ್ಗಕ್ಕೆ ತಲುಪಿದರು.॥2॥

ಮೂಲಮ್ - 3

ಗುಲ್ಮೈರ್ವೃಕ್ಷೈಶ್ಚ ಬಹುಭಿರ್ಲತಾಭಿಶ್ಚ ಪ್ರವೇಷ್ಟಿತಮ್ ।
ಆವೃತಂ ಸರ್ವತೋ ದುರ್ಗಂ ಗಹನಂ ಘೋರದರ್ಶನಮ್ ॥

ಅನುವಾದ

ಆ ದಾರಿಯು ಅನೇಕ ವೃಕ್ಷಗಳಿಂದ, ಗಿಡ-ಲತೆಗಳಿಂದ ಎಲ್ಲೆಡೆ ಆರಿಸಿತ್ತು. ಅದು ಬಹಳ ದುರ್ಗಮ, ಗಹನ ಮತ್ತು ನೋಡಲು ಭಯಂಕರವಾಗಿತ್ತು.॥3॥

ಮೂಲಮ್ - 4

ವ್ಯತಿಕ್ರಮ್ಯ ತು ವೇಗೇನ ಗೃಹೀತ್ವಾ ದಕ್ಷಿಣಾಂ ದಿಶಮ್ ।
ಸುಭೀಮಂ ತನ್ಮಹಾರಣ್ಯಂ ವ್ಯತಿಯಾತೌ ಮಹಾಬಲೌ ॥

ಅನುವಾದ

ಅದನ್ನು ವೇಗವಾಗಿ ದಾಟಿ ಆ ಇಬ್ಬರು ರಾಜಕುಮಾರರು ದಕ್ಷಿಣ ದಿಕ್ಕನ್ನು ಆಶ್ರಯಿಸಿ ಆ ಅತ್ಯಂತ ಭಯಾನಕ ಮತ್ತು ವಿಶಾಲ ವನದಿಂದ ಮುಂದೆ ಹೊರಟರು.॥4॥

ಮೂಲಮ್ - 5

ತತಃ ಪರಂ ಜನಸ್ಥಾನಾತ್ತ್ರಿಕೋಶಂ ಗಮ್ಯ ರಾಘವೌ ।
ಕ್ರೌಂಚಾರಣ್ಯಂ ವಿವಿಶತುರ್ಗಹನಂ ತೌ ಮಹೌಜಸೌ ॥

ಅನುವಾದ

ಅನಂತರ ಜನಸ್ಥಾನದಿಂದ ಮೂರು ರಹದಾರಿಯಷ್ಟು ದೂರ ಹೋಗಿ ಆ ಮಹಾಬಲಿ ಶ್ರೀರಾಮಲಕ್ಷ್ಮಣರು ಕ್ರೌಂಚಾರಣ್ಯ ಎಂಬ ಪ್ರಸಿದ್ಧ ಗಹನವನವನ್ನು ಹೊಕ್ಕರು.॥5॥

ಮೂಲಮ್ - 6

ನಾನಾಮೇಘಘನಪ್ರಖ್ಯಂ ಪ್ರಹೃಷ್ಟಮಿವ ಸರ್ವತಃ ।
ನಾನಾವರ್ಣೈಃ ಶುಭೈಃ ಪುಷ್ಪೈರ್ಮೃಗಪಕ್ಷಿಗಣೈರ್ಯುತಮ್ ॥

ಅನುವಾದ

ಆ ವನವು ಮೇಘ ಸಮೂಹಗಳಂತೆ ಶ್ಯಾಮಲವಾಗಿ ಕಾಣುತ್ತಿತ್ತು. ವಿವಿಧ ಬಣ್ಣಗಳ ಹೂವುಗಳಿಂದ ಸುಶೋಭಿತವಾದ್ದರಿಂದ ಅದು ಎಲ್ಲೆಡೆ ಹರ್ಷೋಲ್ಲಾಸದಂತೆ ಅನಿಸುತ್ತಿತ್ತು. ಅದರೊಳಗೆ ಅನೇಕ ಪಶು-ಪಕ್ಷಿಗಳು ವಾಸಿಸುತ್ತಿದ್ದವು.॥6॥

ಮೂಲಮ್ - 7

ದಿದೃಕ್ಷಮಾಣೌ ವೈದೇಹೀಂ ತದ್ವನಂ ತೌ ವಿಚಿಕ್ಯತುಃ ।
ತತ್ರ ತತ್ರಾವತಿಷ್ಠಂತೌ ಸೀತಾಹರಣದುಃಖಿತೌ ॥

ಅನುವಾದ

ಸೀತೆಯನ್ನು ಹುಡುಕುವ ಇಚ್ಛೆಯಿಂದ ಅವರಿಬ್ಬರೂ ಆ ವನದಲ್ಲಿ ಅರಸತೊಡಗಿದರು. ಬಳಲಿದಾಗ ಅಲ್ಲಲ್ಲಿ ವಿಶ್ರಾಂತಿಗಾಗಿ ನಿಲ್ಲುತ್ತಿದ್ದರು. ವೈದೇಹಿಯ ಅಪಹರಣದಿಂದ ಅವರಿಗೆ ಬಹಳ ದುಃಖವಾಗುತ್ತಿತ್ತು.॥7॥

ಮೂಲಮ್ - 8

ತತಃ ಪೂರ್ವೇಣ ತೌ ಗತ್ವಾ ತ್ರಿಕೋಶಂ ಭ್ರಾತರೌ ತದಾ ।
ಕ್ರೌಂಚಾರಣ್ಯಮತಿಕ್ರಮ್ಯ ಮತಂಗಾಶ್ರಮಮಂತರೇ ॥

ಅನುವಾದ

ಅನಂತರ ಅವರಿಬ್ಬರು ಸೋದರರು ಮೂರು ರಹದಾರಿ ಪೂರ್ವಕ್ಕೆ ಹೋಗಿ ಕ್ರೌಂಚಾರಣ್ಯವನ್ನು ದಾಟಿ ಮತಂಗ ಮುನಿಯ ಆಶ್ರಮದ ಬಳಿಗೆ ಬಂದರು.॥8॥

ಮೂಲಮ್ - 9

ದೃಷ್ಟ್ವಾ ತು ತದ್ವನಂ ಘೋರಂ ಬಹುಭೀಮಮೃಗದ್ವಿಜಮ್ ।
ನಾನಾವೃಕ್ಷ ಸಮಾಕೀರ್ಣಂ ಸರ್ವಂ ಗಹನಪಾದಪಮ್ ॥

ಅನುವಾದ

ಆ ವನವು ಭಾರೀ ಭಯಂಕರವಾಗಿತ್ತು. ಅದರಲ್ಲಿ ಅನೇಕ ಭಯಾನಕ ಪಶು-ಪಕ್ಷಿ ವಾಸಿಸುತ್ತಿದ್ದವು. ಅನೇಕ ವೃಕ್ಷಗಳಿಂದ ವ್ಯಾಪ್ತವಾದ ಆ ವನವೆಲ್ಲ ದಟ್ಟವಾದ ಕಾಡಿನಿಂದ ಕೂಡಿತ್ತು.॥9॥

ಮೂಲಮ್ - 10

ದದೃಶಾತೇ ಗಿರೌ ತತ್ರ ದರೀಂ ದಶರಥಾತ್ಮಜೌ ।
ಪಾತಾಲಸಮಗಂಭೀರಾಂ ತಮಸಾ ನಿತ್ಯಸಂವೃತಾಮ್ ॥

ಅನುವಾದ

ಅಲ್ಲಿಗೆ ಹೋಗಿ ಆ ದಶರಥ ರಾಜಕುಮಾರರು ಅಲ್ಲಿಯ ಪರ್ವತ ಮೇಲೆ ಪಾತಾಳದಂತೆ ಆಳವಾಗಿದ್ದ, ಅಂಧಕಾರದಿಂದ ತುಂಬಿದ ಒಂದು ಗುಹೆಯನ್ನು ನೋಡಿದರು.॥10॥

ಮೂಲಮ್ - 11

ಆಸಾದ್ಯ ಚ ನರವ್ಯಾಘ್ರೌ ದರ್ಯಾಸ್ತಸ್ಯಾವಿದೂರತಃ ।
ದದರ್ಶತುರ್ಮಹಾರೂಪಾಂ ರಕ್ಷಸೀಂ ವಿಕೃತಾನನಾಮ್ ॥

ಅನುವಾದ

ಅದರ ಸಮೀಪಕ್ಕೆ ಹೋಗಿ ಆ ಇಬ್ಬರೂ ನರಶ್ರೇಷ್ಠ ವೀರರು ಬಹಳ ವಿಕರಾಳ ಮುಖವುಳ್ಳ ವಿಶಾಲಕಾಯದ ಓರ್ವ ರಾಕ್ಷಸಿಯನ್ನು ನೋಡಿದರು.॥11॥

ಮೂಲಮ್ - 12

ಭಯದಾಮಲ್ಪಸತ್ತ್ವಾನಾಂ ಬೀಭತ್ಸಾಂ ರೌದ್ರದರ್ಶನಾಮ್ ।
ಲಂಬೋದರೀಂ ತೀಕ್ಷ್ಣದಂಷ್ಟ್ರಾಂ ಕರಾಲೀಂ ಪರುಷತ್ವಚಮ್ ॥

ಅನುವಾದ

ಅವಳು ಸಣ್ಣ-ಸಣ್ಣ ಪ್ರಾಣಿಗಳನ್ನು ಭಯಪಡಿಸುತ್ತಾ ಅತಿಭಯಂಕರವಾಗಿದ್ದಳು. ಆಕೆಯ ಉದ್ದವಾದ ಹೊಟ್ಟೆ, ಚೂಪಾದ ಕೋರೆ ದಾಡಿಗಳು, ಬಿರುಸಾದ ಚರ್ಮ ಇಂತಹ ಆಕೆಯ ರೂಪ ಘೃಣಾಸ್ಪದವಾಗಿದ್ದು ಬೀಭತ್ಸವಾಗಿ ಕಾಣುತ್ತಿತ್ತು.॥12॥

ಮೂಲಮ್ - 13

ಭಕ್ಷಯಂತೀಂ ಮೃಗಾನ್ಭೀಮಾನ್ವಿಕಟಾಂ ಮುಕ್ತಮೂರ್ಧಜಾಮ್ ।
ಅವೈಕ್ಷತಾಂತು ತೌ ತತ್ರ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಭಯಾನಕ ಪಶುಗಳನ್ನೂ ಹಿಡಿದು ತಿಂದುಬಿಡುತ್ತಿದ್ದಳು. ವಿಕಟಾಕಾರಳಾದ ಆಕೆಯ ಕೂದಲು ಕೆದರಿಕೊಂಡಿದ್ದವು. ಆ ಕಂದರದ ಬಳಿ ಶ್ರೀರಾಮ-ಲಕ್ಷ್ಮಣರನ್ನು ಅವಳು ನೋಡಿದಳು.॥13॥

ಮೂಲಮ್ - 14

ಸಾ ಸಮಾಸಾದ್ಯ ತೌ ವೀರೌ ವ್ರಜಂತಂ ಭ್ರಾತುರಗ್ರತಃ ।
ಏಹಿ ರಂಸ್ಯಾವಹೇತ್ಯುಕ್ತ್ವಾ ಸಮಾಲಂಭತ ಲಕ್ಷ್ಮಣಮ್ ॥

ಅನುವಾದ

ಆ ರಾಕ್ಷಸಿಯು ಆ ವೀರರ ಬಳಿಗೆ ಬಂದು ಅಣ್ಣನ ಹಿಂದೆ-ಹಿಂದೆ ನಡೆಯುತ್ತಿದ್ದ ಲಕ್ಷ್ಮಣನ ಕಡೆಗೆ ನೋಡಿ ‘ಬಾ ನಾವಿಬ್ಬರು ರಮಿಸೋಣ’ ಎಂದು ಹೇಳುತ್ತಾ ಲಕ್ಷ್ಮಣನ ಕೈ ಹಿಡಿದೆಳೆದಳು.॥14॥

ಮೂಲಮ್ - 15

ಉವಾಚ ಚೈನಂ ವಚನಂ ಸೌಮಿತ್ರಿಮುಪಗೃಹ್ಯ ಚ ।
ಅಹಂ ತ್ವಯೋಮುಖೀ ನಾಮ ಲಾಭಸ್ತೇ ತ್ವಮಸಿ ಪ್ರಿಯಃ ॥

ಅನುವಾದ

ಇಷ್ಟೇ ಅಲ್ಲದೆ ಅವಳು ಸೌಮಿತ್ರಿಯನ್ನು ಬಾಹುಗಳಿಂದ ಬಿಗಿದಪ್ಪಿಕೊಂಡು ಹೇಳಿದಳು-ನನ್ನ ಹೆಸರು ಅಯೋಮುಖಿ ಎಂದು. ನಾನು ನಿನಗೆ ಭಾರ್ಯೆಯಾಗಿ ದೊರಕಿದರೆ ದೊಡ್ಡ ಲಾಭವೆಂದು ತಿಳಿ. ನೀನು ನನ್ನ ಪ್ರಿಯ ಪತಿಯಾಗಿರುವೆ.॥15॥

ಮೂಲಮ್ - 16

ನಾಥ ಪರ್ವತದುರ್ಗೇಷು ನದೀನಾಂ ಪುಲಿನೇಷು ಚ ।
ಆಯುಃಶ್ಚಿರಮಿದಂ ವೀರ ತ್ವಂ ಮಯಾ ಸಹ ರಂಸ್ಯಸೇ ॥

ಅನುವಾದ

ಪ್ರಾಣನಾಥ! ವೀರನೇ! ದೀರ್ಘ ಕಾಲ ಉಳಿಯುವ ಈ ಆಯುಸ್ಸನ್ನು ಪಡೆದು ನೀನು ಪರ್ವತದ ದುರ್ಗದ ಕಂದರಗಳಲ್ಲಿ ನದಿಗಳ ತೀರಗಳಲ್ಲಿ ನನ್ನೊಂದಿಗೆ ರಮಣ ಮಾಡು.॥16॥

ಮೂಲಮ್ - 17

ಏವಮುಕ್ತಸ್ತು ಕುಪಿತಃ ಖಡ್ಗಮುದ್ಧೃತ್ಯ ಲಕ್ಷ್ಮಣಃ ।
ಕರ್ಣನಾಸೌ ಸ್ತನೌ ತಸ್ಯಾ ನಿಚಕರ್ತಾರಿಸೂದನಃ ॥

ಅನುವಾದ

ರಾಕ್ಷಸಿಯು ಹೀಗೆ ಹೇಳಿದಾಗ ಶತ್ರುಸೂದನ ಲಕ್ಷ್ಮಣನು ಕ್ರೋಧದಿಂದ ಉರಿದೆದ್ದನು. ಅವನು ಕಡ್ಗವನ್ನು ಹಿಡಿದು ಅವಳ ಕಿವಿ, ಮೂಗು, ಸ್ತನಗಳನ್ನು ಕತ್ತರಿಸಿ ಹಾಕಿದನು.॥17॥

ಮೂಲಮ್ - 18

ಕರ್ಣನಾಸೇ ನಿಕೃತ್ತೇ ತು ವಿಸ್ವರಂ ವಿನನಾದ ಸಾ ।
ಯಥಾಗತಂ ಪ್ರದುದ್ರಾವ ರಾಕ್ಷಸೀ ಘೋರದರ್ಶನಾ ॥

ಅನುವಾದ

ಮೂಗು, ಕಿವಿಗಳು ತುಂಡಾದ ಆ ಭಯಂಕರ ರಾಕ್ಷಸಿಯು ಜೋರಾಗಿ ಕೂಗುತ್ತಾ ಬಂದ ಹಾಗೆ ಹೊರಟು ಹೋದಳು.॥18॥

ಮೂಲಮ್ - 19

ತಸ್ಯಾಂ ಗತಾಯಾಂ ಗಹನಂ ವ್ರಜಂತೌ ವನಮೋಜಸಾ ।
ಆಸೇದತುರಮಿತ್ರಘ್ನೌ ಭ್ರಾತರೌ ರಾಮಲಕ್ಷ್ಮಣೌ ॥

ಅನುವಾದ

ಅವಳು ಹೊರಟು ಹೋದ ಬಳಿಕ ಆ ಇಬ್ಬರು ಶಕ್ತಿಶಾಲಿ ಶ್ರೀರಾಮ-ಲಕ್ಷ್ಮಣರು ವೇಗವಾಗಿ ನಡೆಯುತ್ತಾ ಒಂದು ಗಹನವಾದ ಅರಣ್ಯವನ್ನು ಸೇರಿದರು.॥19॥

ಮೂಲಮ್ - 20

ಲಕ್ಷ್ಮಣಸ್ತು ಮಹಾತೇಜಾಃ ಸತ್ತ್ವವಾನ್ ಶೀಲವಾನ್ ಶುಚಿಃ ।
ಅಬ್ರವೀತ್ಪ್ರಾಂಜಲಿರ್ವಾಕ್ಯಂ ಭ್ರಾತರಂ ದೀಪ್ತತೇಜಸಮ್ ॥

ಅನುವಾದ

ಆಗ ಮಹಾತೇಜಸ್ವೀ, ಧೈರ್ಯವಂತ, ಸುಶೀಲ, ಪವಿತ್ರ ಆಚಾರ - ವಿಚಾರವುಳ್ಳ ಲಕ್ಷ್ಮಣನು ಕೈಮುಗಿದುಕೊಂಡು ತೇಜಸ್ವೀ ತನ್ನಣ್ಣ ಶ್ರೀರಾಮಚಂದ್ರನಲ್ಲಿ ಹೇಳಿದನು.॥20॥

ಮೂಲಮ್ - 21

ಸ್ಪಂದತೇ ಮೇ ದೃಢಂ ಬಾಹುರುದ್ವಿಗ್ನಮಿವ ಮೇ ಮನಃ ।
ಪ್ರಾಯಶಶ್ಚಾಪ್ಯನಿಷ್ಟಾನಿ ನಿಮಿತ್ತಾನ್ಯುಪಲಕ್ಷಯೇ ॥

ಮೂಲಮ್ - 22

ತಸ್ಮಾತ್ಸಜ್ಜೀಭವಾರ್ಯ ತ್ವಂ ಕುರುಷ್ವ ವಚನಂ ಮಮ ।
ಮಮೈವ ಹಿ ನಿಮಿತ್ತಾನಿ ಸದ್ಯಃ ಶಂಸಂತಿ ಸಂಭ್ರಮಮ್ ॥

ಅನುವಾದ

ಆರ್ಯ! ನನ್ನ ಎಡಭುಜವು ಜೋರಾಗಿ ಅದುರುತ್ತಿದೆ, ಮನಸ್ಸು ಉದ್ವಿಗ್ನದಂತಾಗಿದೆ. ನನಗೆ ಪದೇ ಪದೇ ಕೆಟ್ಟ ಶಕುನಗಳು ಕಂಡು ಬರುತ್ತಿವೆ. ಇದರಿಂದ ನೀನು ಭಯವನ್ನು ಎದುರಿಸಲು ಸಿದ್ಧನಾಗು. ನನ್ನ ಮಾತನ್ನು ಮನ್ನಿಸು ಈ ಕೆಟ್ಟ ಶಕುನಗಳು ಕೇವಲ ನನಗೆ ತತ್ಕಾಲ ಪ್ರಾಪ್ತವಾಗುವ ಭಯವನ್ನು ಸೂಚಿಸುತ್ತದೆ.॥21-22॥

ಮೂಲಮ್ - 23

ಏಷ ವಂಜುಲಕೋ ನಾಮ ಪಕ್ಷೀ ಪರಮದಾರುಣಃ ।
ಆವಯೋರ್ವಿಜಯಂ ಯುದ್ಧೇ ಶಂಸನ್ನಿವ ವಿನರ್ದತಿ ॥

ಅನುವಾದ

(ಇದರೊಂದಿಗೆ ಇನ್ನೊಂದು ಶುಭಶಕುನವೂ ಆಗುತ್ತಿದೆ.) ಈ ವಂಚುಲ ಎಂಬ ಅತ್ಯಂತ ದಾರುಣ ಪಕ್ಷಿಯು ಯುದ್ಧದಲ್ಲಿ ನಮ್ಮಿಬ್ಬರ ವಿಜಯವನ್ನು ಸೂಚಿಸುತ್ತಾ ಜೋರು - ಜೋರಾಗಿ ಕೂಗುತ್ತಿದೆ.॥23॥

ಮೂಲಮ್ - 24

ತಯೋರನ್ವೇಷತೋರೇವಂ ಸರ್ವಂ ತದ್ವನಮೋಜಸಾ ।
ಸಂಜಜ್ಞೇ ವಿಪುಲಃ ಶಬ್ದಃ ಪ್ರಭಂಜನ್ನಿವ ತದ್ವನಮ್ ॥

ಅನುವಾದ

ಹೀಗೆ ಇಡೀ ವನದಲ್ಲಿ ವೀರರಿಬ್ಬರು ಸೋದರರು ಸೀತೆಯನ್ನು ಹುಡುಕುತ್ತಿರುವಾಗ ಅಲ್ಲಿ ಜೋರಾದ ಶಬ್ಧವಾಯಿತು, ಅದು ಆ ವನವನ್ನೇ ವಿಧ್ವಂಸಗೊಳಿಸುವಂತಿತ್ತು.॥24॥

ಮೂಲಮ್ - 25

ಸಂವೇಷ್ಟಿತಮಿವಾತ್ಯರ್ಥಂ ಗಹನಂ ಮಾತರಿಶ್ವನಾ ।
ವನಸ್ಯ ತಸ್ಯ ಶಬ್ದೋಽಭೂದ್ವನಮಾಪೂರಯನ್ನಿವ ॥

ಅನುವಾದ

ಆ ವನದಲ್ಲಿ ಜೋರಾಗಿ ಬಿರುಗಾಳಿ ಬೀಸತೊಡಗಿತು. ಅದು ಇಡೀ ವನವನ್ನೇ ವ್ಯಾಪಿಸಿತು. ಕಾಡಿನಲ್ಲಿನ ಆ ಘೋರ ಶಬ್ಧದಿಂದ ಇಡೀ ವನಪ್ರಾಂತವು ಪ್ರತಿಧ್ವನಿಸಿತು.॥25॥

ಮೂಲಮ್ - 26

ತಂ ಶಬ್ದಂ ಕಾಂಕ್ಷಮಾಣಸ್ತು ರಾಮಃ ಖಡ್ಗೀ ಸಹಾನುಜಃ ।
ದದರ್ಶ ಸುಮಹಾಕಾಯಂ ರಾಕ್ಷಸಂ ವಿಪುಲೋರಸಮ್ ॥

ಅನುವಾದ

ತಮ್ಮನೊಡನೆ ಕೈಯಲ್ಲಿ ಖಡ್ಗವನ್ನು ಧರಿಸಿದ ಶ್ರೀರಾಮನು ಆ ಶಬ್ದದ ಸುಳಿವನ್ನು ತಿಳಿಯಬೇಕೆನ್ನುವಷ್ಟರಲ್ಲಿ ಒಂದು ಅಗಲವಾದ ಎದೆಯುಳ್ಳ ವಿಶಾಲಕಾಯ ರಾಕ್ಷಸನು ಕಣ್ಣಿಗೆ ಬಿದ್ದನು.॥26॥

ಮೂಲಮ್ - 27

ಆಸೇದತುಶ್ಚ ತದ್ರಕ್ಷಸ್ತಾವುಭೌ ಪ್ರಮುಖೇ ಸ್ಥಿತಮ್ ।
ವಿವೃದ್ಧಮಶಿರೋಗ್ರೀವಂ ಕಬಂಧಮುದರೇಮುಖಮ್ ॥

ಅನುವಾದ

ಅವರಿಬ್ಬರು ಸಹೋದರರು ಆ ರಾಕ್ಷಸನು ತಮ್ಮೆದುರಿಗೆ ನಿಂತಿರುವುದನ್ನು ನೋಡಿದರು. ಅವನು ನೋಡಲು ಬಹಳ ದೊಡ್ಡದಾಗಿದ್ದನು, ಆದರೆ ತಲೆಯಾಗಲೀ ಕತ್ತಾಗಲೀ ಇರಲಿಲ್ಲ. ಅವನಿಗೆ ಕಬಂಧ (ರುಂಡಮಾತ್ರ) ರೂಪವಾಗಿತ್ತು. ಅವನ ಹೊಟ್ಟೆಯೊಳಗೆ ಬಾಯಿ ಇತ್ತು.॥27॥

ಮೂಲಮ್ - 28

ರೋಮಭಿರ್ನಿಶಿತೈಸ್ತೀಕ್ಷ್ಣೈರ್ಮಹಾಗಿರಿಮಿವೋಚ್ಛ್ರಿತಮ್ ।
ನೀಲಮೇಘನಿಭಂ ರೌದ್ರಂ ಮೇಘಸ್ತನಿತನಿಃಸ್ವನಮ್ ॥

ಅನುವಾದ

ಅವನ ಶರೀರದಲ್ಲಿ ಚೂಪಾದ ನಿಮಿರಿ ನಿಂತ ಕೂದಲುಗಳಿದ್ದು, ಮಹಾ ಪರ್ವತದಂತೆ ಎತ್ತರವಾಗಿದ್ದನು. ಭಯಂಕರ ಆಕತಿಯುಳ್ಳ ಅವನು ನೀಲಮೇಘದಂತೆ ಕಪ್ಪಾಗಿದ್ದನು ಮತ್ತು ಮೇದಂತೆ ರ್ಜಿಸುತ್ತಿದ್ದನು.॥28॥

ಮೂಲಮ್ - 29

ಅಗ್ನಿಜ್ವಾಲಾನಿಕಾಶೇನ ಲಲಾಟಸ್ಥೇನ ದೀಪ್ಯತಾ ।
ಮಹಾಪಕ್ಷ್ಯೇಣ ಪಿಂಗೇನ ವಿಪುಲೇನಾಯತೇನ ಚ ॥

ಮೂಲಮ್ - 30

ಏಕೇನೋರಸಿ ಘೋರೇಣ ನಯನೇನಸುದರ್ಶಿನಾ ।
ಮಹಾದಂಷ್ಟ್ರೋಪಪನ್ನಂ ತಂ ಲೇಲಿಹಾನಂ ಮಹಾಮುಖಮ್ ॥

ಅನುವಾದ

ಅವನ ಎದೆಯಲ್ಲಿ ಹಣೆ ಇದ್ದು, ಹಣೆಯಲ್ಲಿ ತುಂಬಾ ಉದ್ದ-ಅಗಲದ ಬೆಂಕಿಯಂತೆ ಉರಿಯುತ್ತಿರುವ ಭಯಂಕರವಾದ ಒಂದು ಕಣ್ಣು ಇದ್ದು, ಅದು ಚೆನ್ನಾಗಿ ನೋಡುತ್ತಿತ್ತು. ರೆಪ್ಪೆಗಳು ವಿಶಾಲವಾಗಿದ್ದು, ಕಣ್ಣು ಬೂದು ಬಣ್ಣದಾಗಿತ್ತು. ಆ ರಾಕ್ಷಸನ ದಾಡೆಗಳು ಬಹಳ ದೊಡ್ಡದಾಗಿದ್ದು, ಚಾಚಿದ ನಾಲಿಗೆಯಿಂದ ವಿಶಾಲಮುಖವನ್ನು ಪದೇ ಪದೇ ನೆಕ್ಕಿಕೊಳ್ಳುತ್ತಿದ್ದನು.॥29-30॥

ಮೂಲಮ್ - 31

ಭಕ್ಷಯಂತಂ ಮಹಾಘೋರಾನೃಕ್ಷಸಿಂಹಮೃಗದ್ವಿಜಾನ್ ।
ಘೋರೌ ಭುಜೌ ವಿಕುರ್ವಾಣಮುಭೌ ಯೋಜನಮಾಯತೌ ॥

ಮೂಲಮ್ - 32

ಕರಾಭ್ಯಾಂ ವಿವಿಧಾನ್ಗೃಹ್ಯ ಋಕ್ಷಾನ್ಪಕ್ಷಿಗಣಾನ್ಮೃಗಾನ್ ।
ಆಕರ್ಷಂತಂ ವಿಕರ್ಷಂತಮನೇಕಾನ್ಮೃಗಯೂಥಪಾನ್ ॥

ಅನುವಾದ

ಅತ್ಯಂತ ಭಯಂಕರ ಕರಡಿ, ಸಿಂಹ, ಮೊದಲಾದ ಹಿಂಸಕ ಪಶುಪಕ್ಷಿಗಳೇ ಅವನ ಆಹಾರ ವಾಗಿತ್ತು. ಅವನು ತನ್ನ ಒಂದೊಂದು ಯೋಜನ ಉದ್ದವಾದ ಎರಡು ಭಯಾನಕ ಭುಜಗಳನ್ನು ದೂರದವರೆಗೆ ಬಾಚಿ, ಆ ಎರಡೂ ಕೈಗಳಿಂದ ನಾನಾ ರೀತಿಯ ಕರಡಿ, ಪಶು-ಪಕ್ಷಿ, ಜಿಂಕೆಗಳ ಹಿಂಡನ್ನೇ ಹಿಡಿದು ಸೆಳೆದುಕೊಳ್ಳುತ್ತಿದ್ದನು.॥31-32॥

ಮೂಲಮ್ - 33

ಸ್ಥಿತಮಾವೃತ್ಯ ಪಂಥಾನಂ ತಯೋರ್ಭ್ರಾತ್ರೋಃ ಪ್ರಪನ್ನಯೋಃ ।
ಅಥ ತಂ ಸಮತಿಕ್ರಮ್ಯ ಕ್ರೋಶಮಾತ್ರಾ ದದರ್ಶತುಃ ॥

ಮೂಲಮ್ - 34

ಮಹಾಂತಂ ದಾರುಣಂ ಭೀಮಂ ಕಬಂಧಂ ಭುಜಸಂವೃತಮ್ ।
ಕಬಂಧಮಿವ ಸಂಸ್ಥಾನಾದತಿಘೋರಪ್ರದರ್ಶನಮ್ ॥

ಅನುವಾದ

ಶ್ರೀರಾಮಲಕ್ಷ್ಮಣರು ಅವನ ಬಳಿಗೆ ತಲುಪಿದಾಗ ಅವನು ಅವರ ದಾರಿಗಡ್ಡಗಟ್ಟಿ ಎದ್ದುನಿಂತನು. ಆಗ ಅವರಿಬ್ಬರು ಸಹೋದರರು ಅವನಿಂದ ದೂರಾಗಿ ನಿಂತು ದಿಟ್ಟಿಸಿ ನೋಡಿದರು. ಅವನು ಒಂದು ರಹದಾರಿ ಉದ್ದವಾಗಿದ್ದನು. ಆ ರಾಕ್ಷಸನ ಆಕೃತಿಯು ಕೇವಲ ತಲೆಯಿಲ್ಲದ ಕಬಂಧದಂತೆ ಇತ್ತು. ಆ ವಿಶಾಲ ಹಿಂಸಾ ಪರಾಯಣ, ಭಯಂಕರ ಹಾಗೂ ಎರಡು ಉದ್ದವಾದ ಭುಜಗಳಿಂದ ಕೂಡಿದ್ದು ನೋಡಲು ಅತ್ಯಂತ ಘೋರವಾಗಿ ಕಾಣುತ್ತಿದ್ದನು.॥33-34॥

ಮೂಲಮ್ - 35

ಸ ಮಹಾಬಾಹುರತ್ಯರ್ಥಂ ಪ್ರಸಾರ್ಯ ವಿಪುಲೌ ಭುಜೌ ।
ಜಗ್ರಾಹ ಸಹಿತಾವೇವ ರಾಘವೌ ಪೀಡಯನ್ ಬಲಾತ್ ॥

ಅನುವಾದ

ಆ ಮಹಾಬಾಹು ರಾಕ್ಷಸನು ತನ್ನ ಎರಡು ವಿಶಾಲ ಭುಜಗಳನ್ನು ಚಾಚಿ ಆ ಇಬ್ಬರೂ ರಘುವಂಶೀ ರಾಜಕುಮಾರರನ್ನು ಬಲವಂತವಾಗಿ ಪೀಡಿಸುತ್ತಾ ಒಟ್ಟಿಗೆ ಹಿಡಿದುಕೊಂಡನು.॥35॥

ಮೂಲಮ್ - 36

ಖಡ್ಗಿನೌ ದೃಢಧನ್ವಾನೌ ತಿಗ್ಮತೇಜೌ ಮಹಾಭುಜೌ ।
ಭ್ರಾತರೌ ವಿವಸಂ ಪ್ರಾಪ್ತೌ ಕೃಷ್ಯಮಾಣೌ ಮಹಾಬಲೌ ॥

ಅನುವಾದ

ಇಬ್ಬರ ಕೈಗಳಲ್ಲಿಯೂ ಖಡ್ಗಗಳಿದ್ದು, ಗಟ್ಟಿಮುಟ್ಟಾದ ಧನುಸ್ಸುಗಳಿದ್ದವು. ಇಬ್ಬರೂ ಪ್ರಚಂಡ ತೇಜಸ್ವಿಗಳೂ, ವಿಶಾಲ ಭುಜಗಳಿಂದ ಕೂಡಿದ್ದು ಮಹಾಬಲವಂತರಾಗಿದ್ದರೂ ಆ ರಾಕ್ಷಸನಿಂದ ಸೆಳೆಯಲ್ಪಟ್ಟಾಗ ವಿವಶರಾದರು.॥36॥

ಮೂಲಮ್ - 37

ತತ್ರ ಧೈರ್ಯಾಚ್ಚ ಶೂರಸ್ತು ರಾಘವೌ ನೈವ ವಿವ್ಯಥೇ ।
ಬಾಲ್ಯಾದನಾಶ್ರಯಚ್ಚೈವ ಲಕ್ಷ್ಮಣಸ್ತ್ವಭಿವಿವ್ಯಥೇ ॥

ಅನುವಾದ

ಆಗ ಶೂರ ವೀರನಾದ ರಘುನಂದನ ರಾಮನು ಧೈರ್ಯದಿಂದಾಗಿ ದುಃಖಿತನಾಗಲಿಲ್ಲ, ಆದರೆ ಬಾಲಬುದ್ಧಿಯುಳ್ಳ ಮತ್ತು ಧೈರ್ಯವನ್ನು ಆಶ್ರಯಿಸದೆ ಇದ್ದುದ್ದರಿಂದ ಲಕ್ಷ್ಮಣನ ಮನಸ್ಸಿನಲ್ಲಿ ಬಹಳ ವ್ಯಥೆಯುಂಟಾಯಿತು.॥37॥

ಮೂಲಮ್ - 38

ಉವಾಚ ಚ ವಿಷಣ್ಣಃ ಸನ್ರಾಘವಂ ರಾಘವಾನುಜಃ ।
ಪಶ್ಯ ಮಾಂ ವಿವಶಂ ವೀರ ರಾಕ್ಷಸಸ್ಯ ವಶಂಗತಮ್ ॥

ಅನುವಾದ

ಶ್ರೀರಾಮನ ತಮ್ಮನಾದ ಲಕ್ಷ್ಮಣನು ವಿಷಾದಗ್ರಸ್ಥನಾಗಿ ಅಣ್ಣನಲ್ಲಿ ಹೇಳಿದನು - ವೀರವರನೇ! ನೋಡು ನಾನು ರಾಕ್ಷಸನ ವಶನಾಗಿ ವಿವಶನಾಗಿದ್ದೇನೆ.॥38॥

ಮೂಲಮ್ - 39

ಮಯೈಕೇನ ತು ವಿನಿರ್ಯುಕ್ತಃ ಪರಿಮುಚ್ಯಸ್ವ ರಾಘವ ।
ಮಾಂ ಹಿ ಭೂತಬಲಿಂ ದತ್ತ್ವಾಪಲಾಯಸ್ವ ಯಥಾಸುಖಮ್ ॥

ಅನುವಾದ

ರಘುನಂದನ! ನನ್ನೊಬ್ಬನನ್ನೇ ಈ ರಾಕ್ಷಸನಿಗೆ ಕಾಣಿಕೆಯಾಗಿ ಕೊಟ್ಟು ನೀನು ಸ್ವತಃ ಇವನ ಬಾಹುಬಂಧನದಿಂದ ಮುಕ್ತನಾಗು. ಈ ಭೂತಕ್ಕೆ ನನ್ನನ್ನೇ ಬಲಿಕೊಟ್ಟು ನೀನು ಸುಖವಾಗಿ ಇಲ್ಲಿಂದ ಹೊರಟು ಹೋಗ.॥39॥

ಮೂಲಮ್ - 40½

ಅಧಿಗಂತಾಸಿ ವೈದೇಹೀಮಚಿರೇಣೇತಿ ಮೇ ಮತಿಃ ।
ಪ್ರತಿಲಭ್ಯ ಚ ಕಾಕುತ್ಸ್ಥ ಪಿತೃಪೈತಾಮಹೀಂ ಮಹೀಮ್ ॥
ತತ್ರ ಮಾಂ ರಾಮ ರಾಜ್ಯಸ್ಥಃ ಸ್ಮರ್ತುಮರ್ಹಸಿ ಸರ್ವದಾ ।

ಅನುವಾದ

ನೀನು ಬೇಗನೇ ವೈದೇಹಿಯನ್ನು ಪಡೆಯುವೆ ಎಂಬ ವಿಶ್ವಾಸ ನನಗಿದೆ. ಕಾಕುತ್ಸ್ಥರಾಮ! ವನವಾಸದಿಂದ ಮರಳಿದ ಮೇಲೆ ತಂದೆ ತಾತಂದಿರ ಭೂಮಿಯನ್ನು ಅಧಿಕಾರದಲ್ಲಿ ಪಡೆದು ನೀನು ರಾಜಸಿಂಹಾಸನದ ಮೇಲೆ ವಿರಾಜಿಸುತ್ತಿರುವಾಗ ನನ್ನನ್ನು ಸ್ಮರಿಸುತ್ತಾ ಇರು.॥40½॥

ಮೂಲಮ್ - 41½

ಲಕ್ಷ್ಮಣೇನೈವಮುಕ್ತಸ್ತು ರಾಮಃ ಸೌಮಿತ್ರಿಮಬ್ರವೀತ್ ॥
ಮಾ ಸ್ಮ ತ್ರಾಸಂ ವೃಥಾ ವೀರ ನಹಿ ತ್ವಾದೃಗ್ವಿಷೀದತಿ ।

ಅನುವಾದ

ಲಕ್ಷ್ಮಣನು ಹೀಗೆ ಹೇಳಿದಾಗ ಶ್ರೀರಾಮನು ಆ ಸೌಮಿತ್ರಿಯಲ್ಲಿ ಹೇಳಿದನು ವೀರನೇ! ನೀನು ಭಯಪಡಬೇಡ. ನಿನ್ನಂತಹ ವೀರರು ಈ ರೀತಿ ವಿಷಾದಪಡಬಾರದು.॥41½॥

ಮೂಲಮ್ - 42½

ಏತಸ್ಮಿನ್ನಂತರೇ ಕ್ರೂರೋ ಭ್ರಾತರೌ ರಾಮಲಕ್ಷ್ಮಣೌ ॥
ತಮುವಾಚ ಮಹಾಬಾಹುಃ ಕಬಂಧೋ ದಾನವೋತ್ತಮಃ ।

ಅನುವಾದ

ಅಷ್ಟರಲ್ಲಿ ಕ್ರೂರ ಹೃದಯವುಳ್ಳ ದಾನವ ಶಿರೋಮಣಿ ಮಹಾಬಾಹು ಕಬಂಧನು ಆ ಇಬ್ಬರು ರಾಮಲಕ್ಷ್ಮಣರಲ್ಲಿ ಹೇಳಿದನು.॥42½॥

ಮೂಲಮ್ - 43

ಕೌ ಯುವಾಂ ವೃಷಭಸ್ಕಂಧೌ ಮಹಾಖಡ್ಗಧನುರ್ಧರೌ ॥

ಮೂಲಮ್ - 44

ಘೋರಂ ದೇಶಮಿಮಂ ಪ್ರಾಪ್ತೌ ದೈವೇನ ಮಮ ಚಾಕ್ಷುಷೌ ।
ವದತಂ ಕಾರ್ಯಮಿಹ ವಾಂ ಕಿಮರ್ಥಂ ಚಾಗತೌ ಯುವಾಮ್ ॥

ಅನುವಾದ

ನೀವಿಬ್ಬರು ಯಾರು? ನಿಮ್ಮ ಹೆಗಲು ಎತ್ತಿನಂತೆ ಎತ್ತರವಾಗಿದೆ. ನೀವು ದೊಡ್ಡ ದೊಡ್ಡ ಖಡ್ಗಗಳನ್ನು ಮತ್ತು ಧನುಸ್ಸನ್ನು ಧರಿಸಿರುವಿರಿ. ಈ ಭಯಂಕರ ದೇಶದಲ್ಲಿ ನೀವಿಬ್ಬರೂ ಯಾತಕ್ಕಾಗಿ ಬಂದಿರುವಿರಿ? ಇಲ್ಲಿ ನಿಮ್ಮ ಕಾರ್ಯವೇನಿದೆ? ತಿಳಿಸಿರಿ, ನನ್ನ ಭಾಗ್ಯದಿಂದಲೇ ನೀವಿಬ್ಬರು ನನ್ನ ಕಣ್ಣ ಎದುರಿಗೆ ಬಂದಿರುವಿರಿ.॥43-44॥

ಮೂಲಮ್ - 45½

ಇಮ ದೇಶಮನುಪ್ರಾಪ್ತೌ ಕ್ಷುಧಾರ್ತಸ್ಯೇಹ ತಿಷ್ಠತಃ ।
ಸಬಾಣಚಾಪಖಡ್ಗೌ ಚ ತೀಕ್ಷ್ಣಶೃಂಗಾವಿವರ್ಷಭೌ ॥
ಮಾಂ ತೂರ್ಣ ಮನುಸಂಪ್ರಾಪ್ತೌ ದುರ್ಲಭಂ ಜೀವಿತಂ ಹಿ ವಾಮ್ ।

ಅನುವಾದ

ನಾನು ಇಲ್ಲಿ ಹಸಿವಿನಿಂದ ಬಳಲಿ ನಿಂತಿರುವೆನು. ನೀವು ಸ್ವತಃ ಧನುರ್ಬಾಣ, ಖಡ್ಗವನ್ನು ಹಿಡಿದು ಚೂಪಾದ ಕೋಡುಗಳುಳ್ಳ ಎರಡು ಎತ್ತುಗಳಂತೆ ಇಲ್ಲಿ ನನ್ನ ಬಳಿಗೆ ಬಂದಿರುವಿರಿ; ಆದ್ದರಿಂದ ಈಗ ನೀವಿಬ್ಬರು ಬದುಕುಳಿಯುವುದು ಕಠಿಣವಾಗಿದೆ.॥45½॥

ಮೂಲಮ್ - 46

ತಸ್ಯ ತದ್ವಚನಂ ಶ್ರುತ್ವಾ ಕಬಂಧಸ್ಯ ದುರಾತ್ಮನಃ ॥
ಉವಾಚ ಲಕ್ಷ್ಮಣಂ ರಾಮೋ ಮುಖೇನ ಪರಿಶುಷ್ಯತಾ ।

ಮೂಲಮ್ - 47½

ಕೃಚ್ಛ್ರಾತ್ಕೃಚ್ಛ್ರತರಂ ಪ್ರಾಪ್ಯ ದಾರುಣಂ ಸತ್ಯವಿಕ್ರಮ ॥
ವ್ಯಸನಂ ಜೀವಿತಾಂತಾಯ ಪ್ರಾಪ್ತಮಪ್ರಾಪ್ಯ ತಾಂ ಪ್ರಿಯಾಮ್ ।

ಅನುವಾದ

ದುರಾತ್ಮಾ ಕಬಂಧನ ಈ ಮಾತನ್ನು ಕೇಳಿ ಶ್ರೀರಾಮನು ಬಾಡಿದ ಮುಖವುಳ್ಳ ಲಕ್ಷ್ಮಣನಲ್ಲಿ ಹೇಳಿದನು - ಸತ್ಯ- ಪರಾಕ್ರಮಿವೀರನೇ! ಅತಿ ಕಠಿಣವಾದ ಅಸಹ್ಯ ದುಃಖವನ್ನು ಹೊಂದಿ ನಾವು ದುಃಖಿತರಾಗಿದ್ದೆವು, ಅಷ್ಟರಲ್ಲಿ ಪುನಃ ಪ್ರಿಯತಮೆ ಸೀತೆಯು ಸಿಗುವ ಮೊದಲೇ ನಮ್ಮಿಬ್ಬರ ಮೇಲೆ ಜೀವನದ ಅಂತ್ಯಗೊಳಿಸುವಂತಹ ಈ ಮಹಾಸಂಕಟ ಬಂದು ಬಿತ್ತು.॥46-47½॥

ಮೂಲಮ್ - 48

ಕಾಲಸ್ಯ ಸುಮಹದ್ವೀರ್ಯಂ ಸರ್ವಭೂತೇಷು ಲಕ್ಷ್ಮಣ ॥

ಮೂಲಮ್ - 49

ತ್ವಾಂ ಚ ಮಾಂ ಚ ನರವ್ಯಾಘ್ರ ವ್ಯಸನೈಃ ಪಶ್ಯ ಮೋಹಿತೌ ।
ನಾತಿಭಾರೋಽಸ್ತಿ ದೈವಸ್ಯ ಸರ್ವಭೂತೇಷು ಲಕ್ಷ್ಮಣ ॥

ಅನುವಾದ

ನರಶ್ರೇಷ್ಠ ಲಕ್ಷ್ಮಣನೇ! ಕಾಲನು ತನ್ನ ಮಹಾಬಲದ ಪ್ರಭಾವವನ್ನು ಎಲ್ಲ ಪ್ರಾಣಿಗಳ ಮೇಲೆ ಬೀರುತ್ತಾನೆ. ನೋಡು, ನೀನು ಮತ್ತು ನಾನು ಇಬ್ಬರೇ ಕಾಲನು ತಂದಿತ್ತ ಅನೇಕಾನೇಕ ಸಂಕಟಗಳಿಂದ ಮೋಹಿತರಾಗಿದ್ದೇವೆ. ಸುಮಿತ್ರಾನಂದನ! ದೈವ ಅಥವಾ ಕಾಲನಿಗೆ ಸಮಸ್ತ ಪ್ರಾಣಿಗಳ ಮೇಲೆ ಶಾಸನ ಮಾಡಲು ಕಠಿಣವಿಲ್.॥48-49॥

ಮೂಲಮ್ - 50

ಶೂರಾಶ್ಚ ಬಲವಂತಶ್ಚ ಕೃತಾಸ್ತ್ರಾಶ್ಚ ರಣಾಜಿರೇ ।
ಕಾಲಾಭಿಪನ್ನಾಃ ಸೀದಂತಿ ಯಥಾ ವಾಲುಕಸೇತವಃ ॥

ಅನುವಾದ

ಮಳಲಿನಿಂದ ನಿರ್ಮಿಸಿದ ಸೇತುವೆಯು ನೀರಿನ ಆಘಾತದಿಂದ ಕೊಚ್ಚಿಕೊಂಡು ಹೋಗುವಂತೆಯೇ ದೊಡ್ಡ ದೊಡ್ಡ ಶೂರವೀರರ, ಬಲವಂತರು ಹಾಗೂ ಅಸವೇತ್ತರಾದ ಪುರುಷನೂ ಕೂಡ ಸಮರಾಂಗಣದಲ್ಲಿ ಕಾಲಕ್ಕೆ ವಶರಾಗಿ ಕಷ್ಟದಲ್ಲಿ ಬೀಳುತ್ತಾರೆ.॥50॥

ಮೂಲಮ್ - 51

ಇತಿ ಬ್ರುವಾಣೋ ದೃಢಸತ್ಯವಿಕ್ರಮೋ
ಮಹಾಯಶಾ ದಾಶರಥಿಃ ಪ್ರತಾಪವಾನ್ ।
ಅವೇಕ್ಷ್ಯ ಸೌಮಿತ್ರಿಮುದಗ್ರವಿಕ್ರಮಃ
ಸ್ಥಿರಾಂ ತದಾ ಸ್ವಾಂ ಮತಿಮಾತ್ಮನಾಕರೋತ್ ॥

ಅನುವಾದ

ಹೀಗೆ ಹೇಳಿ ಸುದೃಢ ಹಾಗೂ ಸತ್ಯಪರಾಕ್ರಮವುಳ್ಳ, ಮಹಾಬಲ-ವಿಕ್ರಮದಿಂದ ಸಂಪನ್ನ, ಮಹಾಯಶಸ್ವೀ ದಶರಥನಂದನ ಶ್ರೀರಾಮನು ಲಕ್ಷ್ಮಣನ ಕಡೆಗೆ ನೋಡಿ, ಆಗ ತನ್ನ ಬುದ್ಧಿಯನ್ನು ಸುಸ್ಥಿರಮಾಡಿಕೊಂಡನು.॥51॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಅವರತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥69॥