०६२ रामविलापः

वाचनम्
ಭಾಗಸೂಚನಾ

ಶ್ರೀರಾಮನ ವಿಲಾಪ

ಮೂಲಮ್ - 1

ಸೀತಾಮಪಶ್ಯನ್ಧರ್ಮಾತ್ಮಾ ಶೋಕೋಪಹತಚೇತನಃ ।
ವಿಲಲಾಪ ಮಹಾಬಾಹೂ ರಾಮಃ ಕಮಲಲೋಚನಃ ॥

ಅನುವಾದ

ಸೀತೆಯನ್ನು ಕಾಣದೆ ಶೋಕದಿಂದ ವ್ಯಾಕುಲಚಿತ್ತನಾದ ಧರ್ಮಾತ್ಮಾ, ಮಹಾತ್ಮಾ, ಮಹಾಬಹು ಶ್ರೀರಾಮನು ವಿಲಾಪಿಸ ತೊಡಗಿದನು.॥1॥

ಮೂಲಮ್ - 2

ಪಶ್ಯನ್ನಿವ ಚ ತಾಂ ಸೀತಾಮಪಶ್ಯನ್ಮನ್ಮಥಾರ್ದಿತಃ ।
ಉವಾಚ ರಾಘವೋ ವಾಕ್ಯಂ ವಿಲಾಪಾಶ್ರಯದುರ್ವಚಮ್ ॥

ಅನುವಾದ

ರಘುನಾಥನು ಸೀತೆಯ ಕುರಿತು ಹೆಚ್ಚಾದ ಪ್ರೇಮದಿಂದ ವಿಯೋಗದ ಕಷ್ಟಪಡುತ್ತಿದ್ದನು. ಅವನು ಸೀತೆಯನ್ನು ನೋಡದೇ ಇದ್ದರೂ ನೋಡಿದವನಂತೆ ವಿಲಾಪದ ಕಾರಣ ಗದ್ಗದಿತನಾಗಿ ಕಷ್ಟದಿಂದ ಹೀಗೆ ಹೇಳ ತೊಡಗಿದನು.॥2॥

ಮೂಲಮ್ - 3

ತ್ವಮಶೋಕಸ್ಯ ಶಾಖಾಭಿಃ ಪುಷ್ಪಪ್ರಿಯತರಾ ಪ್ರಿಯೇ ।
ಆವೃಣೋಷಿ ಶರೀರಂ ತೇ ಮಮ ಶೋಕವಿವರ್ಧನೀ ॥

ಅನುವಾದ

ಪ್ರಿಯೆ! ನಿನಗೆ ಹೂವುಗಳು ಹೆಚ್ಚು ಪ್ರಿಯವಾದ್ದರಿಂದ ಅರಳಿದ ಹೂವುಗಳಿದ್ದ ಅಶೋಕದ ರೆಂಬೆಗಳಿಂದ ತನ್ನ ಶರೀರವನ್ನು ಮುಚ್ಚಿಕೊಂಡು, ನನ್ನ ಶೋಕವನ್ನು ಹೆಚ್ಚಿಸುತ್ತಿರುವೆ.॥3॥

ಮೂಲಮ್ - 4

ಕದಲೀಕಾಂಡಸದೃಶೌ ಕದಲ್ಯಾ ಸಂವೃತಾವುಭೌ ।
ಊರೂ ಪಶ್ಯಾಮಿ ತೇ ದೇವಿ ನಾಸಿ ಶಕ್ತಾ ನಿಗೂಹಿತುಮ್ ॥

ಅನುವಾದ

ದೇವಿ! ಬಾಳೆಯಂತಿರುವ ನಿನ್ನ ತೊಡೆಗಳನ್ನು ಬಾಳೆಯ ಎಲೆಗಳಿಂದ ಮರೆಮಾಡಿಕೊಂಡಿದ್ದರೂ ನಾನು ಅವನ್ನು ನೋಡುತ್ತಿದ್ದೇನೆ. ನೀನು ಅವನ್ನು ಮರೆಮಾಚಲಾರೆ.॥4॥

ಮೂಲಮ್ - 5

ಕರ್ಣಿಕಾರವನಂ ಭದ್ರೇ ಹಸಂತೀ ದೇವಿ ಸೇವಸೇ ।
ಅಲಂ ತೇ ಪರಿಹಾಸೇನ ಮಮ ಬಾಧಾವಹೇನ ವೈ ॥

ಅನುವಾದ

ಮಂಗಳಾಂಗಿ ದೇವಿ! ನೀನು ನಗುತ್ತಾ ಕಣಗಿಲೆ ಪುಷ್ಪ ವಾಟಿಕೆಯನ್ನು ಸೇವಿಸುತ್ತಿರುವೆ. ಈ ಪರಿಹಾಸವನ್ನು ನಿಲ್ಲಿಸು ಇದರಿಂದ ನನಗೆ ಬಹಳ ಕಷ್ಟವಾಗುತ್ತಿದೆ.॥5॥

ಮೂಲಮ್ - 6½

ವಿಶೇಷೇಣಾಶ್ರಮಸ್ಥಾನೇ ಹಾಸೋಽಯಂ ನ ಪ್ರಶಸ್ಯತೇ ।
ಅವಗಚ್ಛಾಮಿ ತೇ ಶೀಲಂ ಪರಿಹಾಸಪ್ರಿಯಂ ಪ್ರಿಯೇ ॥
ಆಗಚ್ಛ ತ್ವಂ ವಿಶಾಲಾಕ್ಷಿ ಶೂನ್ಯೋಽಯಮುಟಜಸ್ತವ ।

ಅನುವಾದ

ಸಾಮಾನ್ಯವಾಗಿ ಆಶ್ರಮದಸ್ಥಾನದಲ್ಲಿ ಈ ಪರಿಹಾಸವು ಚೆನ್ನಾಗಿರುವುದಿಲ್ಲ. ಪ್ರಿಯೆ! ನಿನ್ನ ಸ್ವಭಾವ ಪರಿಹಾಸ ಪ್ರಿಯವಾಗಿರುವುದನ್ನು ನಾನು ಬಲ್ಲೆನು. ವಿಶಾಲಾಕ್ಷಿ! ನೋಡು ನಿನ್ನ ಪರ್ಣಶಾಲೆ ಬರಿದಾಗಿದೆ, ಬಂದುಬಿಡ.॥6½॥

ಮೂಲಮ್ - 7½

ಸುವ್ಯಕ್ತಂ ರಾಕ್ಷಸೈಃ ಸೀತಾ ಭಕ್ಷಿತಾ ವಾ ಹೃತಾಪಿ ವಾ ॥
ನ ಹಿ ಸಾ ವಿಲಪಂತಂ ಮಾಮುಪಸಂಪ್ರೈತಿ ಲಕ್ಷ್ಮಣ ।

ಅನುವಾದ

(ಮತ್ತೆ ಭ್ರಮೆಯು ದೂರವಾದಾಗ ಸುಮಿತ್ರಾ ಕುವಾರ ನಲ್ಲಿ ಹೇಳಿದನು.) ಲಕ್ಷ್ಮಣ! ಸೀತೆಯನ್ನು ರಾಕ್ಷಸರು ತಿಂದು ಬಿಟ್ಟಿರುವರು ಅಥವಾ ಕದ್ದುಕೊಂಡು ಹೋಗಿರುವರು ಎಂಬುದು ಈಗ ಸ್ಪಷ್ಟವಾಯಿತು. ಏಕೆಂದರೆ ನಾನು ವಿಲಾಪ ಮಾಡುತ್ತಿದ್ದರೂ ಅವಳು ಬಳಿಗೆ ಬರುತ್ತಿಲ್ಲ..॥7½॥

ಮೂಲಮ್ - 8½

ಏತಾನಿ ಮೃಗಯೂಥಾನಿ ಸಾಶ್ರುನೇತ್ರಾಣಿ ಲಕ್ಷ್ಮಣ ॥
ಶಂಸಂತೀವ ಹಿ ಮೇ ದೇವೀಂ ಭಕ್ಷಿತಾಂ ರಜನೀಚರೈಃ ।

ಅನುವಾದ

ಲಕ್ಷ್ಮಣ! ಈ ಜಿಂಕೆಗಳ ಗುಂಪು ತಮ್ಮ ಕಣ್ಣುಗಳಿಂದ ಕಂಬನಿ ಸುರಿಸುತ್ತಾ ‘ದೇವೀಸೀತೆಯನ್ನು ರಾಕ್ಷಸರು ತಿಂದು ಹಾಕಿರುವರು’ ಎಂದು ನನ್ನಲ್ಲಿ ಹೇಳುತ್ತಿವೆಯೋ ಎಂಬಂತಿದೆ.॥8½॥

ಮೂಲಮ್ - 9½

ಹಾ ಮಯಾರ್ಯೇ ಕ್ವ ಯಾತಾಸಿ ಹಾ ಸಾಧ್ವಿ ವರವರ್ಣಿನಿ ॥
ಹಾ ಸಕಮಾದ್ಯಕೈಕೇಯೀ ದೇವಿ ಮೇಽದ್ಯ ಭವಿಷ್ಯತಿ ।

ಅನುವಾದ

ಹಾ ನನ್ನ ಆದರಣೀಯ ಆರ್ಯೆ! ನೀನು ಎಲ್ಲಿಗೆ ಹೋಗಿ ಬಿಟ್ಟೆ? ಎಲೈ ಸಾಧ್ವಿಯೇ! ವರರ್ವಣಿನಿಯೇ! ನೀನು ಎಲ್ಲಿಗೆ ಹೋದೆ? ಅಯ್ಯೋ! ದೇವಿ! ಇಂದು ಕೈಕೇಯಿಯು ಸಫಲ ಮನೋರಥಳಾದಳು.॥9½॥

ಮೂಲಮ್ - 10½

ಸೀತಯಾ ಸಹ ನಿರ್ಯಾತೋ ವಿನಾ ಸೀತಾಮುಪಾಗತಃ ॥
ಕಥಂ ನಾಮ ಪ್ರವೇಕ್ಷ್ಯಾಮಿ ಶೂನ್ಯಮಂತಃಪುರಂ ಮಮ ।

ಅನುವಾದ

ಸೀತೆಯೊಂದಿಗೆ ಅಯೋಧ್ಯೆಯಿಂದ ಹೊರಟಿದ್ದೆ. ಸೀತೆಯ ಹೊರತು ಮರಳಿ ಹೋದರೆ ನನ್ನ ಬರಿದಾದ ಅಂತಃಪುರವನ್ನು ಹೇಗೆ ಪ್ರವೇಶಿಸಲಿ.॥10½॥

ಮೂಲಮ್ - 11½

ನಿರ್ವೀರ್ಯ ಇತಿ ಲೋಕೋ ಮಾಂ ನಿರ್ದಯಶ್ಚೇತಿ ವಕ್ಷ್ಯತಿ ॥
ಕಾತರತ್ವಂ ಪ್ರಕಾಶಂ ಹಿ ಸೀತಾಪನಯನೇನ ಮೇ ।

ಅನುವಾದ

ಇಡೀ ಜಗತ್ತೇ ನನ್ನನ್ನು ಪರಾಕ್ರಮ ಹೀನ, ನಿರ್ದಯಿ ಎಂದು ಹೇಳೀತು. ಸೀತೆಯ ಅಪಹರಣದಿಂದಾಗಿ ನನ್ನ ಹೇಡಿತನ ಪ್ರಕಟವಾದೀತು.॥11½॥

ಮೂಲಮ್ - 12½

ನಿವೃತ್ತವನವಾಸಶ್ಚ ಜನಕಂ ಮಿಥಿಲಾಧಿಪಮ್ ॥
ಕುಶಲಂ ಪರಿಪೃಚ್ಛಂತಂ ಕಥಂ ಶಕ್ಷ್ಯೇ ನಿರೀಕ್ಷಿತುಮ್ ।

ಅನುವಾದ

ವನವಾಸದಿಂದ ಮರಳಿದಾಗ ಮಿಥಿಲೇಶ ಜನಕನು ಸೀತೆ ಎಲ್ಲಿ? ಎಂದು ನನ್ನ ಬಳಿ ಕೇಳಿದಾಗ ನಾನು ಅವನ ಮುಖ ಹೇಗೆ ನೋಡುವೆ.॥12½॥

ಮೂಲಮ್ - 13½

ವಿದೇಹರಾಜೋ ನೂನಂ ಮಾಂ ದೃಷ್ಟ್ವಾ ವಿರಹಿತಂತಯಾ ॥
ಸುತಾವಿನಾಶಸಂತಪ್ತೋ ಮೋಹಸ್ಯ ವಶಮೇಷ್ಯತಿ ।

ಅನುವಾದ

ಸೀತಾರಹಿತನಾದ ನನ್ನನ್ನು ನೋಡಿದ ವಿದೇಹರಾಜ ಜನಕನು ತನ್ನ ಪುತ್ರಿಯ ವಿನಾಶದಿಂದ ಸಂತಪ್ತನಾಗಿ ಖಂಡಿತವಾಗಿ ಮೂರ್ಛಿತನಾಗುವನು.॥13½॥

ಮೂಲಮ್ - 14½

ಅಥವಾ ನ ಗಮಿಷ್ಯಾಮಿಪುರೀಂ ಭರತಪಾಲಿತಾಮ್ ॥
ಸ್ವರ್ಗೋಽಪಿ ಹಿತಯಾ ಹೀನಃ ಶೂನ್ಯ ಏವ ಮತೋ ಮಮ ।

ಅನುವಾದ

ಇನ್ನೂ ನಾನು ಭರತನಿಂದ ಪಾಲಿತ ಅಯೋಧ್ಯೆಗೆ ಹೋಗುವುದಿಲ್ಲ. ಸೀತೆಯಿಲ್ಲದೆ ನನಗೆ ಸ್ವರ್ಗವೂ ಶೂನ್ಯವಾಗಿಯೇ ಕಂಡೀತು.॥14½॥

ಮೂಲಮ್ - 15½

ತನ್ಮಾಮುತ್ಸೃಜ್ಯ ಹಿ ವನೇ ಗಚ್ಛಾಯೋಧ್ಯಾಪುರೀಂ ಶುಭಾಮ್ ॥
ನ ತ್ವಹಂ ತಾಂ ವಿನಾ ಸೀತಾಂ ಜೀವೇಯಂ ಹಿ ಕಥಂಚನ ।

ಅನುವಾದ

ಅದಕ್ಕಾಗಿ ಈಗ ನೀನು ನನ್ನನ್ನು ಕಾಡಿನಲ್ಲೇ ಬಿಟ್ಟು ಸುಂದರ ಅಯೋಧ್ಯೆಗೆ ಮರಳಿ ಹೋಗು. ನಾನಾದರೋ ಈಗ ಸೀತೆಯಿಲ್ಲದೆ ಯಾವ ರೀತಿಯಿಂದಲೂ ಬದುಕಿರಲಾರೆನು.॥15½॥

ಮೂಲಮ್ - 16½

ಗಾಢಮಾಶ್ಲಿಷ್ಯ ಭರತೋ ವಾಚ್ಯೋ ಮದ್ವಚನಾತ್ತ್ವಯಾ ॥
ಅನುಜ್ಞಾತೋಽಸಿ ರಾಮೇಣ ಪಾಲಯೇತಿ ವಸುಂಧರಾಮ್ ।

ಅನುವಾದ

ನೀನು ಭರತನನ್ನು ಗಾಢವಾಗಿ ಆಲಂಗಿಸಿ ‘ಕೈಕೇಯಿ ನಂದನ! ನೀನು ಇಡೀ ಪಥ್ವಿಯನ್ನು ಪಾಲಿಸು ಅದಕ್ಕಾಗಿ ರಾಮನು ನಿನಗೆ ಆಜ್ಞೆ ಕೊಟ್ಟಿರುವನು’ ಎಂಬ ನನ್ನ ಸಂದೇಶವನ್ನು ತಿಳಿಸು.॥16½॥

ಮೂಲಮ್ - 17

ಅಂಬಾ ಚ ಮಮ ಕೈಕೇಯೀ ಸುಮಿತ್ರಾ ಚ ತ್ವಯಾ ವಿಭೋ ॥

ಮೂಲಮ್ - 18

ಕೌಸಲ್ಯಾ ಚ ಯಥಾನ್ಯಾಯಮಭಿವಾದ್ಯಾ ಮಮಾಜ್ಞಯಾ ।
ರಕ್ಷಣೀಯಾ ಪ್ರಯತ್ನೇನ ಭವತಾ ಸೂಕ್ತಚಾರಿಣಾ ॥

ಅನುವಾದ

ವಿಭೋ! ನನ್ನ ತಾಯಿ ಕೌಸಲ್ಯೆ, ಕೈಕೇಯಿ ಹಾಗೂ ಸುಮಿತ್ರೆಯರನ್ನು ಪ್ರತಿದಿನ ಯಥೋಚಿತವಾಗಿ ವಂದಿಸಿ ಅವರೆಲ್ಲರನ್ನು ರಕ್ಷಿಸು. ಸದಾ ಅವರ ಆಜ್ಞೆಯಂತೆ ನಡೆ. ಇದು ನನ್ನ ಆಜ್ಞೆಯಾಗಿದೆ ಎಂದು ನೀನು ಅವನಲ್ಲಿ ಹೇಳ.॥17-18॥

ಮೂಲಮ್ - 19

ಸೀತಾಯಾಶ್ಚ ವಿನಾಶೋಽಯಂ ಮಮ ಚಾಮಿತ್ರಸೂದನ ।
ವಿಸ್ತರೇಣ ಜನನ್ಯಾ ಮೇ ವಿನಿವೇದ್ಯಸ್ತ್ವಯಾ ಭವೇತ್ ॥

ಅನುವಾದ

ಶತ್ರುಸೂದನ! ನನ್ನ ತಾಯಿಯ ಮುಂದೆ ಸೀತೆಯ ವಿನಾಶದ ಈ ಸಮಾಚಾರವನ್ನು ವಿಸ್ತಾರವಾಗಿ ತಿಳಿಸು.॥19॥

ಮೂಲಮ್ - 20

ಇತಿ ವಿಲಪತಿ ರಾಘವೇ ತು ದೀನೇ
ವನಮುಪಗಮ್ಯತಯಾ ವಿನಾ ಸುಕೇಶ್ಯಾ ।
ಭಯವಿಕಲಮುಖಸ್ತು ಲಕ್ಷ್ಮಣೋಽಪಿ
ವ್ಯಥಿತಮನಾಭೃಶಮಾತುರೋ ಬಭೂವ ॥

ಅನುವಾದ

ಸುಂದರ ಕೂದಲುಳ್ಳ ಸೀತೆಯ ವಿರಹದಲ್ಲಿ ಭಗವಾನ್ ಶ್ರೀರಾಮನು ಕಾಡಿನೊಳಗೆ ಹೋಗಿ ಹೀಗೆ ದೀನಭಾವದಿಂದ ವಿಲಾಪಿಸತೊಡಗಿದಾಗ ಲಕ್ಷ್ಮಣನ ಮುಖದಲ್ಲಿಯೂ ಭಯದ ವ್ಯಾಕುಲತೆಯ ಚಿಹ್ನೆಗಳು ಕಂಡು ಬಂದವು. ಅವನ ಮನಸ್ಸು ವ್ಯಥಿತವಾಗಿ ಅತ್ಯಂತ ಗಾಬರಿ ಗೊಂಡನು.॥20॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಅರವತ್ತೆರಡನೆಯ ಸರ್ಗ ಸಂಪೂರ್ಣವಾಯಿತು. ॥62॥