०४८ रावणेन सीतानिर्भर्त्सनम्

वाचनम्
ಭಾಗಸೂಚನಾ

ರಾವಣನ ಆತ್ಮ ಪ್ರಶಂಸೆ, ಸೀತೆಯ ಧಿಕ್ಕಾರ

ಮೂಲಮ್ - 1

ಏವಂ ಬ್ರುವಂತ್ಯಾಂ ಸೀತಾಯಾಂ ಸಂರಬ್ಧಃ ಪರುಷಂ ವಚಃ ।
ಲಲಾಟೇ ಭ್ರುಕುಟೀಂ ಕೃತ್ವಾ ರಾವಣಃ ಪ್ರತ್ಯವಾಚ ಹ ॥

ಅನುವಾದ

ಸೀತೆಯು ಹೀಗೆ ಹೇಳಿದಾಗ ರಾವಣನು ರೋಷಗೊಂಡು ಹುಬ್ಬುಗಂಟಿಕ್ಕಿಕೊಂಡು ಕಠೋರವಾಗಿ ಇಂತೆಂದನು.॥1॥

ಮೂಲಮ್ - 2

ಭ್ರಾತಾ ವೈಶ್ರವಣಸ್ಯಾಹಂ ಸಾಪತ್ನ್ಯೋ ವರವರ್ಣಿನಿ ।
ರಾವಣೋ ನಾಮ ಭದ್ರಂ ತೇ ದಶಗ್ರೀವಃ ಪ್ರತಾಪವಾನ್ ॥

ಅನುವಾದ

ಸುಂದರೀ! ನಿನಗೆ ಮಂಗಳವಾಗಲಿ, ನಾನು ಕುಬೇರನ ಬಲತಾಯಿಯ ಮಗ, ಪರಮಪ್ರತಾಪಿ ದಶಗ್ರೀವ ರಾವಣನಾಗಿದ್ದೇನೆ.॥2॥

ಮೂಲಮ್ - 3

ಯಸ್ಯ ದೇವಾಃ ಸಗಂಧರ್ವಾಃ ಪಿಶಾಚಪತಗೋರಗಾಃ ।
ವಿದ್ರವಂತಿ ಸದಾ ಭೀತಾ ಮೃತ್ಯೋರಿವ ಸದಾ ಪ್ರಜಾಃ ॥

ಮೂಲಮ್ - 4

ಯೇನ ವೈಶ್ರವಣೋ ಭ್ರಾತಾ ವೈಮಾಂತ್ರಾಃ ಕಾರಣಾಂತರೇ ।
ದ್ವಂದ್ವಮಾಸಾದಿತಃ ಕ್ರೊಧಾದ್ರಣೇ ವಿಕ್ರಮ್ಯ ನಿರ್ಜಿತಃ ॥

ಅನುವಾದ

ಮೃತ್ಯುವಿಗೆ ಪ್ರಜೆಗಳು ಸದಾಕಾಲ ಹೆದರುತ್ತಿರುವಂತೆಯೇ ನನ್ನನ್ನು ಕಂಡೊಡನೆಯೇ ಭಯಗೊಂಡು ದೇವತೆಗಳು, ಗಂಧರ್ವರು, ಪಿಶಾಚ, ಪಕ್ಷಿ, ನಾಗ ಹೀಗೆ ಎಲ್ಲರೂ ಓಡಿಹೋಗುವರು. ಯಾವುದೋ ಕಾರಣದಿಂದ ನನ್ನ ತಾಯಿಯ ಸವತಿಯ ಮಗ ಕುಬೇರನೊಂದಿಗೆ ದ್ವಂದ್ವ ಯುದ್ಧಮಾಡಿ, ಪರಾಕ್ರಮದಿಂದ ರಣರಂಗದಲ್ಲಿ ಸೋಲಿಸಿಬಿಟ್ಟಿರುವ ಆ ರಾವಣ ನಾನೇ ಆಗಿದ್ದೇನೆ.॥3-4॥

ಮೂಲಮ್ - 5

ಮದ್ಭಯಾರ್ತಃ ಪರಿತ್ಯಜ್ಯ ಸ್ವಮಧಿಷ್ಠಾನಮೃದ್ಧಿಮತ್ ।
ಕೈಲಾಸಂ ಪರ್ವತಶ್ರೇಷ್ಠಮಧ್ಯಾಸ್ತೇ ನರವಾಹನಃ ॥

ಅನುವಾದ

ನನ್ನ ಭಯದಿಂದಲೇ ನರವಾಹನ ಕುಬೇರನು ತನ್ನ ಸಮೃದ್ಧಶಾಲಿ ಲಂಕಾಪುರಿಯನ್ನು ತ್ಯಜಿಸಿ ಈಗ ಪರ್ವತ ಶ್ರೇಷ್ಠ ಕೈಲಾಸವನ್ನು ಆಶ್ರಯಿಸಿರುವನು.॥5॥

ಮೂಲಮ್ - 6

ಯಸ್ಯ ತತ್ಪುಷ್ಪಕಂ ನಾಮ ವಿಮಾನಂ ಕಾಮಗಂ ಶುಭಮ್ ।
ವೀರ್ಯಾದಾವರ್ಜಿತಂ ಭದ್ರೇ ಯೇನ ಯಾಮಿ ವಿಹಾಯಸಮ್ ॥

ಅನುವಾದ

ಭದ್ರೆ! ಅವನ ಇಚ್ಛಾನುಸಾರ ಸಂಚರಿಸುವ ಅವನ ಪ್ರಸಿದ್ಧವಾದ ಸುಂದರ ಪುಷ್ಪಕವಿಮಾನವನ್ನು ನಾನು ಪರಾಕ್ರಮದಿಂದ ಗೆದ್ದುಕೊಂಡಿರುವೆನು. ಅದೇ ವಿಮಾನದಿಂದ ನಾನು ಆಕಾಶದಲ್ಲಿ ವಿಚರಿಸುತ್ತಾ ಇರುತ್ತೇನೆ.॥6॥

ಮೂಲಮ್ - 7

ಮಮ ಸಂಜಾತರೋಷಸ್ಯ ಮುಖಂ ದೃಷ್ಟ್ವೈವಮೈಥಿಲಿ ।
ವಿದ್ರವಂತಿ ಪರಿತ್ರಸ್ತಾಃ ಸುರಾಃ ಶಕ್ರಪುರೋಗಮಾಃ ॥

ಅನುವಾದ

ಮಿಥಿಲೇಶ ಕುಮಾರಿ! ನನಗೆ ಕೋಪವು ಕೆಂಡಾಮಂಡಲವಾದಾಗ ಇಂದ್ರಾದಿ ಸಮಸ್ತ ದೇವತೆಗಳು ನನ್ನ ಮುಖ ನೋಡಿಯೇ ಭಯದಿಂದ ಗಡ-ಗಡನೆ ನಡುಗುತ್ತಾ ಪಲಾಯನ ಮಾಡುತ್ತಾರೆ.॥7॥

ಮೂಲಮ್ - 8

ಯತ್ರ ತಿಷ್ಠಾಮ್ಯಹಂ ತತ್ರ ಮಾರುತೋ ವಾತಿ ಶಂಕಿತಃ ।
ತೀವ್ರಾಂಶುಃ ಶಿಶಿರಾಂಶುಶ್ಚ ಭಯಾತ್ ಸಂಪದ್ಯತೇ ದಿವಿಃ ॥

ಅನುವಾದ

ನಾನು ನಿಂತಿರುವಲ್ಲಿ ವಾಯು ಹೆದರಿ ಮಂದವಾಗಿ ಬೀಸುತ್ತಿರುತ್ತದೆ. ನನ್ನ ಭಯದಿಂದಲೇ ಆಕಾಶದಲ್ಲಿ ಪ್ರಚಂಡ ಕಿರಣಗಳುಳ್ಳ ಸೂರ್ಯನೂ ಕೂಡ ಚಂದ್ರನಂತೆ ಶೀತಲನಾಗುತ್ತಾನೆ.॥8॥

ಮೂಲಮ್ - 9

ನಿಷ್ಕಂಪಪತ್ರಾಸ್ತರವೋ ನದ್ಯಶ್ಚ ಸ್ತಿಮಿತೋದಕಾಃ ।
ಭವಂತಿ ಯತ್ರ ಯತ್ರಾಹಂ ತಿಷ್ಠಾಮಿ ಚ ಚರಾಮಿಚ ॥

ಅನುವಾದ

ನಾನು ತಿರುಗಾಡುವಲ್ಲಿ ಅಥವಾ ಇರುವಲ್ಲಿ ಮರಗಳ ಎಲೆಗಳೂ ಕೂಡ ಅಲುಗಾಡುವುದಿಲ್ಲ ಹಾಗೂ ನದಿಗಳೂ ಕೂಡ ಹರಿಯದೆ ಸ್ಥಿರವಾಗಿರುತ್ತವೆ.॥9॥

ಮೂಲಮ್ - 10

ಮಮ ಪಾರೇ ಸಮುದ್ರಸ್ಯ ಲಂಕಾ ನಾಮ ಪುರೀ ಶುಭಾ ।
ಸಂಪೂರ್ಣಾ ರಾಕ್ಷಸೈರ್ಘೋರೈರ್ಯಥೇಂದ್ರಸ್ಯಾಮರಾವತೀ ॥

ಅನುವಾದ

ಸಮುದ್ರದ ಆಚೆ ಲಂಕೆ ಎಂಬ ನನ್ನ ಸುಂದರ ಪುರಿ ಇದೆ. ಅದು ಇಂದ್ರನ ಅಮರಾವತಿಯಂತೆ ಮನೋಹರ ಹಾಗೂ ಘೋರ ರಾಕ್ಷಸರಿಂದ ತುಂಬಿಕೊಂಡಿದೆ.॥10॥

ಮೂಲಮ್ - 11

ಪ್ರಾಕಾರೇಣ ಪರಿಕ್ಷಿಪ್ತಾ ಪಾಂಡುರೇಣ ವಿರಾಜತಾ ।
ಹೇಮಕಕ್ಷ್ಯಾ ಪುರೀ ರಮ್ಯಾ ವೈದೂರ್ಯಮಯತೋರಣಾ ॥

ಅನುವಾದ

ಅದರ ಸುತ್ತಲೂ ಇರುವ ಪ್ರಕಾರದಿಂದ ಅದರ ಶೋಭೆ ಹೆಚ್ಚಿದೆ. ಲಂಕಾಪುರಿಯ ಸೌಧಗಳ ಹಜಾರ, ನೆಲ, ಸುವರ್ಣದಿಂದ ರಚಿತವಾಗಿದೆ. ಅದರ ಹೊರ ಬಾಗಿಲುಗಳು ವೈಢೂರ್ಯಮಯವಾಗಿದ್ದು, ಅದು ಬಹಳ ರಮಣೀಯವಾಗಿದೆ.॥11॥

ಮೂಲಮ್ - 12

ಹಸ್ತ್ಯಶ್ವರಥಸಂಬಾಧಾ ತೂರ್ಯನಾದವಿನಾದಿತಾ ।
ಸರ್ವಕಾಮಲೈರ್ವೃಕ್ಷೈಃ ಸಂಕುಲೋದ್ಯಾನಭೂಷಿತಾ ॥

ಅನುವಾದ

ಆನೆ, ಕುದುರೆ, ರಥಗಳಿಂದ ಅಲ್ಲಿಯ ಬೀದಿಗಳು ತುಂಬಿರುತ್ತವೆ. ಬಗೆ-ಬಗೆ ವಾದ್ಯಗಳ ಧ್ವನಿಗಳು ಅಲ್ಲಿ ಪ್ರತಿಧ್ವನಿಸುತ್ತವೆ. ಎಲ್ಲ ರೀತಿಯ ಮನೋಕಾಮನೆಯ ಫಲಗಳನ್ನು ಕೊಡುವ ವೃಕ್ಷಗಳಿಂದ ನಾನಾ ಪ್ರಕಾರದ ಉದ್ಯಾನ ವನಗಳಿಂದ ಆ ಲಂಕೆಯು ವ್ಯಾಪ್ತವಾಗಿದೆ.॥12॥

ಮೂಲಮ್ - 13

ತತ್ರ ತ್ವಂ ವಸ ಹೇ ಸೀತೇ ರಾಜಪುತ್ರಿ ಮಯಾ ಸಹ ।
ನ ಸ್ಮರಿಷ್ಯಸಿ ನಾರೀಣಾಂ ಮಾನುಷೀಣಾಂ ಮನಸ್ವಿನಿ ॥

ಅನುವಾದ

ರಾಜಕುಮಾರೀ ಸೀತೆ! ನೀನು ನನ್ನೊಂದಿಗೆ ಆ ಪುರಿಗೆ ಹೋಗಿ ವಾಸಿಸು. ಮನಸ್ವಿನೀ! ಅಲ್ಲಿ ಇದ್ದು ನೀನು ಮಾನವೀ ಸ್ತ್ರೀಯೆಂಬುದನ್ನು ಮರೆತುಬಿಡು.॥13॥

ಮೂಲಮ್ - 14

ಭುಂಜಾನಾ ಮಾನುಷಾನ್ ಭೋಗಾನ್ ದಿವ್ಯಾಂಶ್ಚ ವರವರ್ಣಿನಿ ।
ನ ಸ್ಮರಿಷ್ಯಸಿ ರಾಮಸ್ಯ ಮಾನುಷಸ್ಯಗತಾಯುಷಃ ॥

ಅನುವಾದ

ಸುಂದರೀ! ಲಂಕೆಯಲ್ಲಿ ದಿವ್ಯಮಾನುಷ ಭೋಗಗಳನ್ನು ಅನುಭವಿಸುತ್ತಾ ನೀನು ಆ ಮನುಷ್ಯ ರಾಮನನ್ನು ಎಂದೂ ಸ್ಮರಿಸಲಾರೆ, ಅವನ ಆಯುಸ್ಸು ಈಗ ಮುಗಿಯುತ್ತಾ ಸಾಗಿದೆ.॥14॥

ಮೂಲಮ್ - 15

ಸ್ಥಾಪಯಿತ್ವಾ ಪ್ರಿಯಂ ಪುತ್ರಂ ರಾಜ್ಯೇ ದಶರಥೋ ನೃಪಃ ।
ಮಂದವೀರ್ಯಸ್ತತೋ ಜೇಷ್ಠಃ ಸುತಃ ಪ್ರಸ್ಥಾಪಿತೋ ವನಮ್ ॥

ಮೂಲಮ್ - 16

ತೇನ ಕಿಂ ಭ್ರಷ್ಟರಾಜ್ಯೇನ ರಾಮೇಣ ಗತಚೇತಸಾ ।
ಕರಿಷ್ಯಸಿ ವಿಶಾಲಾಕ್ಷಿ ತಾಪಸೇನ ತಪಸ್ವಿನಾ ॥

ಅನುವಾದ

ವಿಶಾಲಲೋಚನೇ! ದಶರಥರಾಜನು ತನ್ನ ಪ್ರಿಯ ಪುತ್ರನಿಗೆ ರಾಜನನ್ನಾಗಿಸಿ, ಅಲ್ಪ ಪರಾಕ್ರಮಿಯಾದ ಜೇಷ್ಠಪುತ್ರನನ್ನು ಅರಣ್ಯಕ್ಕೆ ಕಳಿಸಿರುವನು. ಆ ರಾಜ್ಯಭ್ರಷ್ಠ, ಬುದ್ಧಿ ಹೀನ ಹಾಗೂ ತಪಸ್ಸಿನಲ್ಲಿ ತೊಡಗಿದ ತಾಪಸೀ ರಾಮನನ್ನು ಪಡೆದು ಏನು ಮಾಡುವೆ.॥15-16॥

ಮೂಲಮ್ - 17

ರಕ್ಷರಾಕ್ಷಸಭರ್ತಾರಂ ಕಾಮಯ ಸ್ವಯಮಾಗತಮ್ ।
ನ ಮನ್ಮಥಶರಾವಿಷ್ಟಂ ಪ್ರತ್ಯಾಖ್ಯಾತುಂ ತ್ವಮರ್ಹಸಿ ॥

ಅನುವಾದ

ಈ ರಾಕ್ಷಸರ ಒಡೆಯ ಸ್ವತಃ ನಿನ್ನ ಬಾಗಿಲಿಗೇ ಬಂದಿರುವನು, ನೀನು ಅವನನ್ನು ರಕ್ಷಿಸು, ಅವನನ್ನು ಮನಃಪೂರ್ವಕ ಬಯಸು. ಅವನು ಮನ್ಮಥನ ಬಾಣದಿಂದ ಪೀಡಿತನಾಗಿದ್ದಾನೆ. ಅವನನ್ನು ತಿರಸ್ಕರಿಸುವುದು ನಿನಗೆ ಉಚಿತವಲ್ಲ.॥17॥

ಮೂಲಮ್ - 18

ಪ್ರತ್ಯಾಖ್ಯಾಯ ಹಿ ಮಾಂ ಭೀರು ಪಶ್ಚಾತಾಪಂ ಗಮಿಷ್ಯಸಿ ।
ಚರಣೇನಾಭಿಹತ್ಯೇವ ಪುರೂರವಸಮುರ್ವಶೀ ॥

ಅನುವಾದ

ಭೀರು! ನನ್ನನ್ನು ತಿರಸ್ಕರಿಸಿ, ಪುರೂರವನನ್ನು ತಿರಸ್ಕರಿಸಿ ಊರ್ವಶಿಯಂತೆ ನೀನೂ ಪಶ್ಚಾತ್ತಾಪ ಪಡುವ.॥18॥

ಮೂಲಮ್ - 19

ಆಂಗುಲ್ಯಾ ನ ಸಮೋ ರಾಮೋ ಮಮ ಯುದ್ಧೇ ಸ ಮಾನುಷಃ ।
ತವ ಭಾಗ್ಯೇನ ಸಂಪ್ರಾಪ್ತಂ ಭಜಸ್ವ ವರವರ್ಣಿನಿ ॥

ಅನುವಾದ

ಸುಂದರೀ! ಯುದ್ಧದಲ್ಲಿ ಮನುಷ್ಯನಾದ ರಾಮನು ನನ್ನ ಒಂದು ಬೆರಳಿಗೂ ಸಮಾನನಲ್ಲ. ನಿನ್ನ ಭಾಗ್ಯದಿಂದಲೇ ನಾನು ಬಂದಿರುವೆನು. ನೀನು ನನ್ನನ್ನು ಸ್ವೀಕರಿಸು.॥19॥

ಮೂಲಮ್ - 20

ಏವಮುಕ್ತಾ ತು ವೈದೇಹೀ ಕ್ರುದ್ಧಾ ಸಂರಕ್ತಲೋಚನಾ ।
ಅಬ್ರವೀತ್ ಪರುಷಂ ವಾಕ್ಯಂ ರಹಿತೇ ರಾಕ್ಷಸಾಧಿಪಮ್ ॥

ಅನುವಾದ

ರಾವಣನು ಹೀಗೆ ಹೇಳಿದಾಗ ವಿದೇಹಕುಮಾರಿ ಸೀತೆಯ ಕಣ್ಣುಗಳು ಸಿಟ್ಟಿನಿಂದ ಕೆಂಪಾದವು. ಅವಳು ಆ ಏಕಾಂತಸ್ಥಾನದಲ್ಲಿ ರಾಕ್ಷಸಾಧಿಪ ರಾವಣನಲ್ಲಿ ಕಠೋರವಾಗಿ ಇಂತೆಂದಳು.॥20॥

ಮೂಲಮ್ - 21

ಕಥಂ ವೈಶ್ರವಣಂ ದೇವಂ ಸರ್ವದೇವನಮಸ್ಕೃತಮ್ ।
ಭ್ರಾತರಂ ವ್ಯಪದಿಶ್ಯ ತ್ವಮಶುಭಂ ಕರ್ತುಮಿಚ್ಛಸಿ ॥

ಅನುವಾದ

ಎಲವೋ! ಭಗವಾನ್ ಕುಬೇರನಾದರೋ ಸಮಸ್ತ ದೇವತೆಗಳಿಗೆ ವಂದನೀಯನಾಗಿದ್ದಾನೆ. ನೀನು ಅವನನ್ನು ತನ್ನ ಅಣ್ಣನೆಂದು ತಿಳಿಸಿ ಇಂತಹ ಪಾಪಕರ್ಮವನ್ನು ಮಾಡಲು ಏಕೆ ಬಯಸಿದೆ.॥21॥

ಮೂಲಮ್ - 22

ಅವಶ್ಯಂ ವಿನಶಿಷ್ಯಂತಿ ಸರ್ವೇ ರಾವಣ ರಾಕ್ಷಸಾಃ ।
ಯೇಷಾಂ ತ್ವಂ ಕರ್ಕಶೋ ರಾಜಾ ದುರ್ಬುದ್ಧಿರಜಿತೇಂದ್ರಿಯಃ ॥

ಅನುವಾದ

ರಾವಣ! ನಿನ್ನಂತಹ ಕ್ರೂರಿ, ದುರ್ಬುದ್ಧಿ, ಅಜಿತೇಂದ್ರಿಯ ರಾಜನಾಗಿರುವ ಎಲ್ಲ ರಾಕ್ಷಸರು ಖಂಡಿತವಾಗಿ ನಾಶವಾಗಿ ಹೋಗುವರು.॥22॥

ಮೂಲಮ್ - 23

ಅಪಹೃತ್ಯ ಶಚೀಂ ಭಾರ್ಯಾಂ ಶಕ್ಯಮಿಂದ್ರಸ್ಯ ಜೀವಿತುಮ್ ।
ನಹಿ ರಾಮಸ್ಯ ಭಾರ್ಯಾಂ ಮಾಮಾನೀಯ ಸ್ವಸ್ತಿಮಾನ್ ಭವೇತ್ ॥

ಅನುವಾದ

ಇಂದ್ರನ ಪತ್ನೀ ಶಚಿಯನ್ನು ಕದ್ದುಕೊಂಡು ಯಾರಾದರೂ ಬದುಕಿರುವ ಸಂಭವವಿದೆ, ಆದರೆ ರಾಮಪತ್ನಿಯಾದ ನನ್ನನ್ನು ಅಪಹರಿಸಿ ಯಾರೂ ಕ್ಷೇಮದಿಂದ ಇರಲಾರನು.॥23॥

ಮೂಲಮ್ - 24

ಜೀವೇಚ್ಚಿರಂ ವಜ್ರಧರಸ್ಯ ಪಶ್ಚಾ-
ಚ್ಛಚೀಂ ಪ್ರಧೃಷ್ಯಾಪ್ರತಿರೂಪರೂಪಾಮ್ ।
ನ ಮಾದೃಶೀಂ ರಾಕ್ಷಸ ಧರ್ಷಯಿತ್ವಾ
ಪೀತಾಮೃತಸ್ಯಾಪಿ ತವಾಸ್ತಿ ಮೋಕ್ಷಃ ॥

ಅನುವಾದ

ರಾಕ್ಷಸನೇ! ವಜ್ರಧಾರೀ ಇಂದ್ರನ ಅನುಪಮ ರೂಪವತೀ ಭಾರ್ಯೆ ಶಚಿಯನ್ನು ತಿರಸ್ಕರಿಸಿದರೂ ಯಾರಾದರೂ ಮತ್ತೆ ಚಿರಕಾಲ ಬದುಕಿರುವ ಸಂಭವವಿದೆ, ಆದರೆ ನನ್ನಂತಹ ಸ್ತ್ರೀಯ ಅಪಮಾನ ಮಾಡಿ ನೀನು ಅಮೃತ ಕುಡಿದರೂ ನೀನು ಬದುಕಿರಲಾರೆ.॥24॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ನಲವತ್ತೆಂಟನೆಯ ಸರ್ಗ ಸಂಪೂರ್ಣವಾಯಿತು.॥48॥