०३७ मारीचकृतरावणबोधः

वाचनम्
ಭಾಗಸೂಚನಾ

ಮಾರೀಚನು ರಾವಣನಿಗೆ ಶ್ರೀರಾಮಚಂದ್ರನ ಗುಣ-ಪ್ರಭಾವವನ್ನು ತಿಳಿಸಿ ಸೀತಾಪಹರಣವನ್ನು ತಡೆದುದು

ಮೂಲಮ್ - 1

ತಚ್ಛ್ರುತ್ವಾ ರಾಕ್ಷಸೇಂದ್ರಸ್ಯ ವಾಕ್ಯಂ ವಾಕ್ಯವಿಶಾರದಃ ।
ಪ್ರತ್ಯುವಾಚ ಮಹಾತೇಜಾ ಮಾರೀಚೋ ರಾಕ್ಷಸೇಶ್ವರಮ್ ॥

ಅನುವಾದ

ರಾಕ್ಷಸರಾಜ ರಾವಣನ ಮಾತನ್ನು ಕೇಳಿ, ವಾಕ್ಯ ವಿಶಾರದನಾದ ಮಹಾತೇಜಸ್ವೀ ಮಾರೀಚನು ಅವನಿಗೆ ಈ ಪ್ರಕಾರ ಉತ್ತರಿಸಿದನು.॥1॥

ಮೂಲಮ್ - 2

ಸುಲಭಾಃ ಪುರುಷಾ ರಾಜನ್ ಸತತಂ ಪ್ರಿಯವಾದಿನಃ ।
ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ॥

ಅನುವಾದ

ರಾಜನೇ! ಸದಾ ಪ್ರಿಯವನ್ನೇ ಮಾತನಾಡುವ ಪುರುಷರು ಎಲ್ಲೆಡೆ ಸುಲಭವಾಗಿ ಸಿಗುತ್ತಾರೆ, ಆದರೆ ಅಪ್ರಿಯವಾದರೂ ಹಿತಕರವಾಗುವಂತಹ ಮಾತನ್ನು ಹೇಳುವವನು ಮತ್ತು ಕೇಳುವವನು ಇಬ್ಬರೂ ದುರ್ಲಭರಾಗಿದ್ದಾರೆ.॥2॥

ಮೂಲಮ್ - 3

ನ ನೂನಂ ಬುಧ್ಯಸೇ ರಾಮಂ ಮಹಾವೀರ್ಯಗುಣೋನ್ನತಮ್ ।
ಅಯುಕ್ತಚಾರಶ್ಚಪಲೋ ಮಹೇಂದ್ರವರುಣೋಪಮಮ್ ॥

ಮೂಲಮ್ - 4

ಅಪಿ ಸ್ವಸ್ತಿ ಭವೇತ್ತಾತ ಸರ್ವೇಷಾಮಪಿ ರಕ್ಷಸಾಮ್ ।
ಅಪಿ ರಾಮೋ ನ ಸಂಕ್ರುದ್ಧಃ ಕುರ್ಯಾಲ್ಲೋ ಕಾನರಾಕ್ಷಸಾನ್ ॥

ಅನುವಾದ

ನೀನು ಯಾರೇ ಗೂಢಚಾರರನ್ನು ಇರಿಸುವುದಿಲ್ಲ ಮತ್ತು ನಿನ್ನ ಹೃದಯವೂ ಬಹಳ ಚಂಚಲವಾಗಿದೆ. ಆದ್ದರಿಂದ ನಿಶ್ಚಯವಾಗಿಯೂ ನೀನು ಶ್ರೀರಾಮಚಂದ್ರನನ್ನು ಏನೂ ತಿಳಿದಿಲ್ಲ. ಅವನು ಪರಾಕ್ರಮೋಚಿತ ಗುಣಗಳಿಂದ ಇಂದ್ರ ವರುಣರಿಗೆ ಸಮಾನವಾಗಿದ್ದಾನೆ.॥3-4॥

ಮೂಲಮ್ - 5

ಅಪಿ ತೇ ಜೀವಿತಾಂತಾಯ ನೋತ್ಪನ್ನಾ ಜನಕಾತ್ಮಜಾ ।
ಅಪಿ ಸೀತಾನಿಮಿತ್ತಂ ಚ ನ ಭವೇದ್ ವ್ಯಸನಂ ಮಹತ್ ॥

ಅನುವಾದ

ಅಯ್ಯಾ! ಸಮಸ್ತ ರಾಕ್ಷಸರ ಕಲ್ಯಾಣವಾಗಬೇಕೆಂದೇ ನಾನು ಬಯಸುತ್ತೇನೆ. ಎಲ್ಲಾದರೂ ಶ್ರೀರಾಮಚಂದ್ರನು ಅತ್ಯಂತ ಕುಪಿತನಾಗಿ ಸಮಸ್ತ ಲೋಕಗಳನ್ನು ರಾಕ್ಷಸರಿಂದ ಶೂನ್ಯವಾಗಿಸದಿರಲಿ.॥5॥

ಮೂಲಮ್ - 6

ಅಪಿ ತ್ವಾಮೀಶ್ವರಂ ಪ್ರಾಪ್ಯ ಕಾಮವೃತ್ತಂ ನಿರಂಕುಶಮ್ ।
ನ ವಿನಶ್ಯೇತ್ ಪುರೀ ಲಂಕಾ ತ್ವಯಾ ಸಹ ಸರಾಕ್ಷಸಾ ॥

ಅನುವಾದ

ನಿನ್ನಂತಹ ಸ್ವೇಚ್ಛಾಚಾರೀ, ಉಚ್ಛ್ರಂಖಲ ರಾಜನನ್ನು ಪಡೆದು ನಿನ್ನ ಮತ್ತು ರಾಕ್ಷಸರೊಂದಿಗೆ ಲಂಕೆಯು ನಾಶವಾಗದಿರಲಿ.॥6॥

ಮೂಲಮ್ - 7

ತ್ವದ್ವಿಧಃ ಕಾಮವೃತ್ತೋ ಹಿ ದುಃಶೀಲಃ ಪಾಪಮಂತ್ರಿತಃ ।
ಆತ್ಮಾನಂ ಸ್ವಜನಂ ರಾಷ್ಟ್ರಂ ಸ ರಾಜಾ ಹಂತಿ ದುರ್ಮತಿಃ ॥

ಅನುವಾದ

ನಿನ್ನಂತಹ ದುರಾಚಾರೀ, ಸ್ವೇಚ್ಛಾಚಾರೀ, ಪಾಪಪೂರ್ಣ ವಿಚಾರವುಳ್ಳ ಹಾಗೂ ಕೆಟ್ಟಬುದ್ಧಿಯುಳ್ಳ ರಾಜನು ತನ್ನ ಮತ್ತು ತನ್ನ ಸ್ವಜನರನ್ನು ಹಾಗೂ ಇಡೀ ರಾಷ್ಟ್ರವನ್ನೇ ವಿನಾಶ ಮಾಡುತ್ತಾನೆ.॥7॥

ಮೂಲಮ್ - 8

ನ ಚ ಪಿತ್ರಾ ಪರಿತ್ಯಕ್ತೋ ನಾಮರ್ಯಾದಃ ಕಥಂಚನಃ ।
ನ ಲುಬ್ಧೋ ನ ಚ ದುಃಶೀಲೋ ನ ಚ ಕ್ಷತ್ರಿಯಪಾಂಸನಃ ॥

ಅನುವಾದ

ಶ್ರೀರಾಮಚಂದ್ರನನ್ನು ತಂದೆಯು ತ್ಯಜಿಸಲಿಲ್ಲ, ಅವನು ಧರ್ವಾಮರ್ಯಾದೆಯನ್ನು ತ್ಯಜಿಸಲಿಲ್ಲ, ಅವನು ಲೋಭಿಯೂ ಅಲ್ಲ, ದೂಷಿತವಿಚಾರವುಳ್ಳವನೂ ಅಲ್ಲ ಮತ್ತು ಕ್ಷತ್ರಿಯ ಕುಲಕಲಂಕಿತನೂ ಅಲ್ಲ.॥8॥

ಮೂಲಮ್ - 9

ನ ಚ ಧರ್ಮಗುಣೈರ್ಹೀನಃ ಕೌಸಲ್ಯಾನಂದವರ್ಧನಃ ।
ನ ಚ ತೀಕ್ಷ್ಣೋ ಹಿ ಭೂತಾನಾಂ ಸರ್ವಭೂತಹಿತೇ ರತಃ ॥

ಅನುವಾದ

ಕೌಸಲ್ಯಾ ನಂದವರ್ಧನ ಶ್ರೀರಾಮನು ಧರ್ಮಸಂಬಂಧೀ ಗುಣಗಳಿಂದ ಹೀನನಾಗಿಲ್ಲ. ಅವನ ಸ್ವಭಾವವೂ ಯಾವುದೇ ಪ್ರಾಣಿಯ ಕುರಿತು ತೀಕ್ಷ್ಣವಾಗಿಲ್ಲ. ಅವನು ಸದಾ ಸಮಸ್ತ ಪ್ರಾಣಿಗಳ ಹಿತದಲ್ಲೇ ತತ್ಪರನಾಗಿರುತ್ತಾನೆ.॥9॥

ಮೂಲಮ್ - 10

ವಂಚಿತಂ ಪಿತರಂ ದೃಷ್ಟ್ವಾ ಕೈಕೇಯ್ಯಾ ಸತ್ಯವಾದಿನಮ್ ।
ಕರಿಷ್ಯಾಮೀತಿ ಧರ್ಮಾತ್ಮಾ ತತಃ ಪ್ರವ್ರಜಿತೋ ವನಮ್ ॥

ಅನುವಾದ

ಸತ್ಯವಾದಿಯಾದ ತಂದೆಯು ಕೈಕೇಯಿಯಿಂದ ವಂಚಿತರಾದರು ಎಂದು ಧರ್ಮಾತ್ಮನಾದ ಶ್ರೀರಾಮನು ತಿಳಿದು ‘ತಂದೆಯ ಮಾತನ್ನು ನಡೆಸಿಕೊಡುತ್ತೇನೆ, ಅವನನ್ನು ಮಿಥ್ಯಾ ಪ್ರತಿಜ್ಞನನ್ನಾಗಿಸುವುದಿಲ್ಲ’ ಎಂದು ನಿಶ್ಚಯಿಸಿ ಸ್ವೇಚ್ಛೆಯಿಂದಲೇ ಅರಣ್ಯಕ್ಕೆ ಹೊರಟುಬಂದಿರುವನು.॥10॥

ಮೂಲಮ್ - 11

ಕೈಕೇಯ್ಯಾಃ ಪ್ರಿಯಕಾಮಾಥಂ ಪಿತುರ್ದಶರಥಸ್ಯ ಚ ।
ಹಿತ್ವಾ ರಾಜ್ಯಂ ಚ ಭೋಗಾಂಶ್ಚ ಪ್ರವಿಷ್ಟೋ ದಂಡಕಾ ವನಮ್ ॥

ಅನುವಾದ

ತಾಯಿ ಕೈಕೇಯಿ ಮತ್ತು ತಂದೆ ದಶರಥ ರಾಜನ ಪ್ರಿಯಮಾಡುವ ಇಚ್ಛೆಯಿಂದ ಅವನು ಸ್ವತಃ ರಾಜ್ಯ ಮತ್ತು ಭೋಗಗಳನ್ನು ಪರಿತ್ಯಾಗ ಮಾಡಿ ದಂಡಕಾರಣ್ಯಕ್ಕೆ ಆಗಮಿಸಿರುವನು.॥11॥

ಮೂಲಮ್ - 12

ನ ರಾಮಃ ಕರ್ಕಶಸ್ತಾತ ನಾವಿದ್ವಾನ್ನಾಜಿತೇಂದ್ರಿಯಃ ।
ಅನೃತಂ ನ ಶ್ರುತಂ ಚೈವ ನೈವ ತ್ವಂ ವಕ್ತುಮರ್ಹಸಿ ॥

ಅನುವಾದ

ಅಯ್ಯಾ! ಶ್ರೀರಾಮನು ಕ್ರೂರಿಯಲ್ಲ, ಮೂರ್ಖ ಮತ್ತು ಅಜಿತೇಂದ್ರಿಯನೂ ಅಲ್ಲ, ಶ್ರೀರಾಮನಲ್ಲಿ ಸುಳ್ಳನ್ನು ಹೇಳುವ ದೋಷವನ್ನು ನಾನು ಎಂದೂ ನೋಡಿಲ್ಲ. ಆದ್ದರಿಂದ ಅವನ ವಿಷಯದಲ್ಲಿ ಹೀಗೆ ವಿಪರೀತವಾಗಿ ಎಂದೂ ಮಾತನಾಡಬಾರದು.॥12॥

ಮೂಲಮ್ - 13

ರಾಮೋ ವಿಗ್ರಹವಾನ್ ಧರ್ಮಃ ಸಾಧುಃ ಸತ್ಯಪರಾಕ್ರಮಃ ।
ರಾಜಾ ಸರ್ವಸ್ಯ ಲೋಕಸ್ಯ ದೇವಾನಾಮಿವ ವಾಸವಃ ॥

ಅನುವಾದ

ಶ್ರೀರಾಮನು ಧರ್ಮದ ಮೂರ್ತಿಮಂತ ಸ್ವರೂಪನಾಗಿದ್ದಾನೆ. ಅವನು ಸಾಧು ಮತ್ತು ಸತ್ಯ ಪರಾಕ್ರಮಿಯೂ ಆಗಿದ್ದಾನೆ. ಇಂದ್ರನು ಸಮಸ್ತ ದೇವತೆಗಳಿಗೆ ಅಧಿಪತಿ ಇರುವಂತೆಯೇ ಶ್ರೀರಾಮನು ಇಡೀ ಜಗತ್ತಿಗೆ ರಾಜನಾಗಿದ್ದಾನೆ.॥13॥

ಮೂಲಮ್ - 14

ಕಥಂ ನು ತಸ್ಯ ವೈದೇಹೀಂ ರಕ್ಷಿತಾಂ ಸ್ವೇನ ತೇಜಸಾ ।
ಇಚ್ಛಸೇ ಪ್ರಸಭಂ ಹರ್ತುಂ ಪ್ರಭಾಮಿವ ವಿವಸ್ವತಃ ॥

ಅನುವಾದ

ಅವನ ಪತ್ನಿ ವಿದೇಹಕುಮಾರೀ ಸೀತೆಯು ತನ್ನ ಪಾತಿವ್ರತ್ಯದಿಂದಲೇ ಸುರಕ್ಷಿತಳಾಗಿದ್ದಾಳೆ. ಸೂರ್ಯನ ಪ್ರಭೆಯನ್ನು ಅವನಿಂದ ಬೇರ್ಪಡಿಸದಂತೆ ಸೀತೆಯನ್ನು ರಾಮನಿಂದ ಬೇರ್ಪಡಿಸುವುದು ಅಸಂಭವವಾಗಿದೆ. ಇಂತಹ ಸ್ಥಿತಿಯಲ್ಲಿ ನೀನು ಬಲಾತ್ಕಾರವಾಗಿ ಆಕೆಯನ್ನು ಹೇಗೆ ಅಪಹರಣ ಮಾಡಲು ಬಯಸುತ್ತಿರುವೆ.॥14॥

ಮೂಲಮ್ - 15

ಶರಾರ್ಚಿಷಮನಾಧೃಷ್ಯಂ ಚಾಪಖಡ್ಗೇಂಧನಂ ರಣೇ ।
ರಾಮಾಗ್ನಿಂ ಸಹಸಾ ದೀಪ್ತಂ ನ ಪ್ರವೇಷ್ಟುಂ ತ್ವಮರ್ಹಸಿ ॥

ಅನುವಾದ

ಶ್ರೀರಾಮನು ಪ್ರಜ್ವಲಿತ ಅಗ್ನಿಯಂತೆ ಇದ್ದಾನೆ. ಬಾಣವೇ ಆ ಅಗ್ನಿಯ ಜ್ವಾಲೆಯಾಗಿದೆ. ಧನುಸ್ಸು ಮತ್ತು ಖಡ್ಗವೇ ಅದರ ಉರುವಲು ಆಗಿದೆ. ನೀನು ಯುದ್ಧಕ್ಕಾಗಿ ಒಮ್ಮೆಲೇ ಆ ಅಗ್ನಿಯಲ್ಲಿ ಪ್ರವೇಶಿಸಬೇಡ.॥15॥

ಮೂಲಮ್ - 16

ಧನುರ್ವ್ಯಾದಿತದೀಪ್ತಾಸ್ಯಂ ಶರಾರ್ಚಿಷಮಮರ್ಷಣಮ್।
ಚಾಪಪಾಶಧರಂ ತೀಕ್ಷ್ಣಂ ಶತ್ರುಸೇನಾಪಹಾರಿಣಮ್ ॥

ಮೂಲಮ್ - 17

ರಾಜ್ಯಂ ಸುಖಂ ಚ ಸಂತ್ಯಜ್ಯ ಜೀವಿತಂ ಚೇಷ್ಟಮಾತ್ಮನಃ ।
ನಾತ್ಯಾಸಾದಯಿತುಂ ತಾತ ರಾಮಾಂತಕಮಿಹಾರ್ಹಸಿ ॥

ಅನುವಾದ

ಅಯ್ಯಾ! ಧನುಸ್ಸೇ ಯಾರ ತೆರೆದ ಪ್ರಕಾಶಮಾನ ಬಾಯಿಯಾಗಿದೆಯೋ, ಬಾಣವೇ ಪ್ರಭೆಯಾಗಿದೆಯೋ, ಸಿಟ್ಟಿನಿಂದ ಕೂಡಿರುವನೋ, ಧನುರ್ಬಾಣಗಳನ್ನು ಧರಿಸಿ ನಿಂತಿರುವನೋ, ತೀಕ್ಷ್ಣ ಸ್ವಭಾವ ಪರಿಚಯವನ್ನು ಕೊಡುತ್ತಿರುವನೋ, ಶತ್ರುಗಳ ಪ್ರಾಣಾಪಹಾರದಲ್ಲಿ ಸಮರ್ಥವಾಗಿರುವನೋ ಅಂತಹ ರಾಮರೂಪೀ ಯಮನ ಬಳಿಗೆ ನೀನು ಇಲ್ಲಿ ತನ್ನ ರಾಜ್ಯಸುಖ ಮತ್ತು ಪ್ರಾಣಗಳ ಮೋಹವನ್ನು ಬಿಟ್ಟು ಹೋಗಬಾರದು.॥16-17॥

ಮೂಲಮ್ - 18

ಅಪ್ರಮೇಯಂ ಹಿ ತತ್ತೇಜೋ ಯಸ್ಯ ಸಾ ಜನಕಾತ್ಮಜಾ ।
ನ ತ್ವಂ ಸಮರ್ಥಸ್ತಾಂ ಹರ್ತುಂ ರಾಮಚಾಪಾಶ್ರಯಾಂ ವನೇ ॥

ಅನುವಾದ

ಜನಕಕಿಶೋರೀ, ಸೀತೆಯು ಆತನ ಧರ್ಮಪತ್ನಿಯಾಗಿದ್ದಾಳೆ. ಆಕೆಯ ತೇಜ ಅಪ್ರಮೇಯವಾಗಿದೆ. ಶ್ರೀರಾಮಚಂದ್ರನ ಧನುಸ್ಸೇ ಆಕೆಯ ಆಶ್ರಯವಾಗಿದೆ. ಆದ್ದರಿಂದ ವನದಲ್ಲಿ ಆಕೆಯನ್ನು ಅಪಹರಿಸುವಷ್ಟು ಶಕ್ತಿ ನಿನ್ನಲ್ಲಿ ಇಲ್ಲ.॥18॥

ಮೂಲಮ್ - 19

ತಸ್ಯ ವೈ ನರಸಿಂಹಸ್ಯ ಸಿಂಹೋರಸ್ಕಸ್ಯ ಭಾಮಿನೀ ।
ಪ್ರಾಣೇಭ್ಯೋಽಪಿ ಪ್ರಿಯತರಾ ಭಾರ್ಯಾ ನಿತ್ಯಮನುವ್ರತಾ ॥

ಅನುವಾದ

ಶ್ರೀರಾಮಚಂದ್ರನು ಮನುಷ್ಯರಲ್ಲಿ ಸಿಂಹದಂತೆ ಪರಾಕ್ರಮಿಯಾಗಿದ್ದಾನೆ. ಅವನ ವಕ್ಷಸ್ಥಳವು ಸಿಂಹದಂತೆ ಉನ್ನತವಾಗಿದೆ. ಭಾಮಿನೀ ಸೀತೆಯು ಅವನಿಗೆ ಪ್ರಾಣಗಳಿಗಿಂತ ಹೆಚ್ಚು ಪ್ರಿಯ ಪತ್ನಿಯಾಗಿದ್ದಾಳೆ. ಅವಳು ಸದಾ ತನ್ನ ಪತಿಯನ್ನೇ ಅನುಸರಿಸುತ್ತಿರುವಳು.॥19॥

ಮೂಲಮ್ - 20

ನ ಸಾ ಧರ್ಷಯಿತುಂ ಶಕ್ಯಾ ಮೈಥಿಲ್ಯೋಜಸ್ವಿನಃ ಪ್ರಿಯಾ ।
ದೀಪ್ತಸ್ಯೇವ ಹುತಾಶಸ್ಯ ಶಿಖಾ ಸೀತಾ ಸುಮಧ್ಯಮಾ ॥

ಅನುವಾದ

ಮಿಥಿಲೇಶಕುಮಾರಿ ಸೀತೆಯು ಓಜಸ್ವೀ ಶ್ರೀರಾಮನ ಪ್ರಿಯಪತ್ನಿಯಾಗಿರುವಳು. ಅವಳು ಉರಿಯುವ ಬೆಂಕಿಯ ಜ್ವಾಲೆಯಂತೆ ಅಹನೀಯಳಾಗಿದ್ದಾಳೆ. ಆದ್ದರಿಂದ ಆ ಸುಂದರೀ ಸೀತೆಯ ಮೇಲೆ ಬಲಾತ್ಕಾರ ಮಾಡಲಾಗುವುದಿಲ್ಲ.॥20॥

ಮೂಲಮ್ - 21

ಕಿಮುದ್ಯಮಂ ವ್ಯರ್ಥಮಿಮಂ ಕೃತ್ವಾ ತೇ ರಾಕ್ಷಸಾಧಿಪ ।
ದೃಷ್ಟಶ್ಚೇತ್ತ್ವಂ ರಣೇ ತೇನ ತದಂತಮುಪಜೀವಿತಮ್ ॥

ಅನುವಾದ

ರಾಕ್ಷಸರಾಜನೇ! ಈ ವ್ಯರ್ಥವಾದ ಉದ್ಯೋಗ ಮಾಡುವುದರಿಂದ ನಿನಗೆ ಏನು ಲಾಭವಾಗಬಹುದು? ಯಾವ ದಿನ ಯುದ್ಧದಲ್ಲಿ ನಿನ್ನ ಮೇಲೆ ಶ್ರೀರಾಮನ ದೃಷ್ಟಿ ಬೀಳುವುದೋ, ಅದೇ ದಿನ ನಿನ್ನ ಜೀವನದ ಕೊನೆ ಎಂದು ತಿಳಿ.॥21॥

ಮೂಲಮ್ - 22

ಜೀವಿತಂ ಚ ಸುಖಂ ಚೈವ ರಾಜ್ಯಂ ಚೈವ ಸುದುರ್ಲಭಮ್ ।
ಯದೀಚ್ಛ ಸಿ ಚಿರಂ ಭೋಕ್ತುಂ ಮಾ ಕೃಥಾ ರಾಮವಿಪ್ರಿಯಮ್ ॥

ಅನುವಾದ

ನೀನು ತನ್ನ ಜೀವನದ, ಸುಖದ ಮತ್ತು ಪರಮ ದುರ್ಲಭ ರಾಜ್ಯವನ್ನು ಚಿರಕಾಲ ಅನುಭವಿಸಲು ಬಯಸುವೆಯಾದರೆ ಶ್ರೀರಾಮನಿಗೆ ಅಪರಾಧ ಮಾಡಬೇಡ.॥22॥

ಮೂಲಮ್ - 23

ಸ ಸರ್ವೈಃ ಸಚಿವೈಃ ಸಾರ್ಧಂ ವಿಭೀಷಣಪುರಸ್ಕೃತೈಃ ।
ಮಂತ್ರಯಿತ್ವಾ ಸ ಧರ್ಮಿಷ್ಠೈಃ ಕೃತ್ವಾನಶ್ಚಯಮಾತ್ಮನಃ ॥

ಮೂಲಮ್ - 24

ದೋಷಾಣಾಂ ಚ ಗುಣಾನಾಂ ಚ ಸಂಪ್ರಧಾರ್ಯ ಬಲಾಬಲಮ್ ।
ಆತ್ಮನಶ್ಚ ಬಲಂ ಜ್ಞಾತ್ವಾ ರಾಘವಸ್ಯ ಚ ತತ್ತ್ವತಃ ।
ಹಿತಂ ಹಿತವ ವಿನಿಶ್ಚಿತ್ಯ ಕ್ಷಮಂ ತ್ವಂ ಕರ್ತುಮರ್ಹಸಿ ॥

ಅನುವಾದ

ನೀನು ವಿಭಿಷಣಾದಿ ಎಲ್ಲ ಧರ್ಮಾತ್ಮಾ ಮಂತ್ರಿಗಳಿಂದ ಸಲಹೆ ಪಡೆದು ತನ್ನ ಕರ್ತವ್ಯವನ್ನು ನಿಶ್ಚಯಿಸು. ತನ್ನ ಮತ್ತು ಶ್ರೀರಾಮನ ಗುಣ-ದೋಷಗಳ ಬಲಾಬಲ ಕುರಿತು ವಿಚಾರ ಮಾಡಿ, ತನ್ನ ಮತ್ತು ಶ್ರೀರಾಮಚಂದ್ರನ ಶಕ್ತಿಯನ್ನು ಸರಿಯಾಗಿ ತಿಳಿದುಕೋ. ಮತ್ತೆ ಏನು ಮಾಡುವುದರಿಂದ ನಿನ್ನ ಹಿತವಾಗುವುದೋ ಇದನ್ನು ನಿಶ್ಚಯಿಸಿ ಉಚಿತವೆನಿಸುವುದನ್ನೇ ನೀನು ಮಾಡಬೇಕು.॥23-24॥

ಮೂಲಮ್ - 25

ಅಹಂ ತು ಮನ್ಯೇ ತವ ನ ಕ್ಷಮಂ ರಣೇ
ಸಮಾಗಮಂ ಕೋಸಲರಾಜಸೂನುನಾ ।
ಇದಂ ಹಿ ಭೂಯಃ ಶೃಣು ವಾಕ್ಯಮುತ್ತಮಂ
ಕ್ಷಮಂ ಚ ಯುಕ್ತಂ ಚ ನಿಶಾಚರಾಧಿಪ ॥

ಅನುವಾದ

ನಿಶಾಚರರಾಜನೇ! ಕೋಸಲ ರಾಜಕುಮಾರ ಶ್ರೀರಾಮ ಚಂದ್ರನೊಂದಿಗೆ ನೀನು ಯುದ್ಧಮಾಡುವುದು ಉಚಿತವಲ್ಲ ಎಂದು ನಾನು ತಿಳಿಯುತ್ತೇನೆ. ಈಗ ಪುನಃ ನನ್ನದೊಂದು ಮಾತನ್ನು ಕೇಳು, ಇದು ನಿನಗಾಗಿ ಬಹಳ ಉತ್ತಮ ಮತ್ತು ಉಪಯುಕ್ತವಾದೀತು.॥25॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂವತ್ತೇಳನೆಯು ಸರ್ಗ ಸಂಪೂರ್ಣವಾಯಿತು.॥37॥