०३४ सीतापहरणे रावणोत्तेजनम्

वाचनम्
ಭಾಗಸೂಚನಾ

ರಾವಣನು ಕೇಳಿದಾಗ ಶೂರ್ಪಣಖಿಯು ರಾಮ - ಲಕ್ಷ್ಮಣ ಮತ್ತು ಸೀತೆಯರ ಪರಿಚಯ ಮಾಡಿ ಕೊಡುತ್ತಾ, ಸೀತೆಯನ್ನು ಭಾರ್ಯೆಯನ್ನಾಗಿಸಿಕೊಳ್ಳಲು ಪ್ರೇರೇಪಿಸಿದುದು

ಮೂಲಮ್ - 1

ತತಃ ಶುರ್ಪಣಖಾಂ ದೃಷ್ಟ್ವಾ ಬ್ರುವತೀಂ ಪರುಷಂ ವಚಃ ।
ಅಮಾತ್ಯಮಧ್ಯೇ ಸಂಕ್ರುದ್ಧಃ ಪರಿಪಪ್ರಚ್ಛ ರಾವಣಃ ॥

ಅನುವಾದ

ಶೂರ್ಪಣಖಿಯು ಈ ಪ್ರಕಾರ ಕಠೋರ ಮಾತುಗಳನ್ನು ಹೇಳುತ್ತಿರುವುದನ್ನು ನೋಡಿ ಮಂತ್ರಿಗಳ ನಡುವೆ ಕುಳಿತಿದ್ದ ರಾವಣನು ಅತ್ಯಂತ ಕುಪಿತನಾಗಿ ಕೇಳಿದನು .॥1॥

ಮೂಲಮ್ - 2

ಕಶ್ಚ ರಾಮಃ ಕಥಂವೀರ್ಯಃ ಕಿಂರೂಪಃ ಕಿಂಪರಾಕ್ರಮಃ ।
ಕಿಮರ್ಥಂ ದಂಡಕಾರಣ್ಯಂ ಪ್ರವಿಷ್ಟಃಶ್ಚ ಸುದುಸ್ತರಮ್ ॥

ಅನುವಾದ

ರಾಮನೆಂದರೆ ಯಾರು? ಅವನ ಬಲ ಎಂತಹುದು? ರೂಪ ಮತ್ತು ಪರಾಕ್ರಮ ಹೇಗಿದೆ? ಅತ್ಯಂತ ದುಸ್ತರ ದಂಡಕಾರಣ್ಯಕ್ಕೆ ಅವನು ಏಕೆ ಪ್ರವೇಶಿಸಿದ್ದಾನೆ.॥2॥

ಮೂಲಮ್ - 3

ಆಯುಧಂ ಕಿಂ ಚ ರಾಮಸ್ಯ ಯೇನ ತೇ ರಾಕ್ಷಸಾ ಹತಾಃ ।
ಖರಶ್ಚ ನಿಹತಃ ಸಂಖ್ಯೇ ದೂಷಣಸಿಶಿರಾಸ್ತಥಾ ॥

ಅನುವಾದ

ಎಲ್ಲ ರಾಕ್ಷಸರು ಸತ್ತುಹೋಗಿ ಖರ-ದೂಷಣ ಮತ್ತು ತ್ರಿಶಿರರೂ ಯುದ್ಧದಲ್ಲಿ ಸಂಹಾರವಾಗಿ ಹೋದರು; ಹಾಗಿರುವಾಗ ರಾಮನ ಬಳಿ ಯಾವ-ಯಾವ ಅಸ್ತ್ರಗಳಿವೆ.॥3॥

ಮೂಲಮ್ - 4

ತತ್ತ್ವಂ ಬ್ರೂಹಿ ಮನೋಜ್ಞಾಂಗಿ ಕೇನ ತ್ವಂ ಚ ವಿರೂಪಿತಾ ।
ಇತ್ಯುಕ್ತಾ ರಾಕ್ಷಸೇಂದ್ರೇಣ ರಾಕ್ಷಸೀ ಕ್ರೋಧಮೂರ್ಛಿತಾ ॥

ಅನುವಾದ

ಮನೋಹರ ರೂಪವುಳ್ಳ ಶೂರ್ಪಣಖೇ! ಯಾರು ನಿನ್ನನ್ನು ಕುರೂಪಗೊಳಿಸಿದರು? ಯಾರು ನಿನ್ನ ಮೂಗು ಮತ್ತು ಕಿವಿಗಳನ್ನು ಕತ್ತರಿಸಿದರು? ಸರಿಯಾಗಿ ಹೇಳು. ರಾಕ್ಷಸರಾಜ ರಾವಣನು ಹೀಗೆ ಕೇಳಿದಾಗ ಆ ರಾಕ್ಷಸಿಯು ಕ್ರೋಧ ಮೂರ್ಛಿತಳಂತಾದಳು.॥4॥

ಮೂಲಮ್ - 5½

ತತೋ ರಾಮಂ ಯಥಾನ್ಯಾಯ ಮಾಖ್ಯಾತುಮುಪಚಕ್ರಮೇ ।
ದೀರ್ಘಬಾಹುರ್ವಿಶಾಲಾಕ್ಷಶ್ಚೀರಕೃಷ್ಣಾಜಿನಾಂಬರಃ ।
ಕಂದರ್ಪಸಮರೂಪಶ್ಚ ರಾಮೋ ದಶರಥಾತ್ಮಜಃ ॥

ಅನುವಾದ

ಅನಂತರ ಆಕೆಯು ಶ್ರೀರಾಮನ ಯಥಾವತ್ ಪರಿಚಯ ಮಾಡಿಕೊಡಲು ಪ್ರಾರಂಭಮಾಡಿದಳು - ಅಣ್ಣಾ! ಶ್ರೀರಾಮಚಂದ್ರನು ದಶರಥರಾಜನ ಪುತ್ರನಾಗಿದ್ದಾನೆ. ಅವನು ದೀರ್ಘಬಾಹು ಆಗಿದ್ದು ಅವನ ಕಣ್ಣುಗಳು ವಿಶಾಲವಾಗಿದೆ. ರೂಪವು ಕಾಮ ದೇವನಂತೆ ಇದೆ. ಅವನು ನಾರುಮಡಿಯನ್ನು ಮೃಗಚರ್ಮವನ್ನು ಧರಿಸಿದ್ದಾನೆ.॥5॥

ಮೂಲಮ್ - 6½

ಶಕ್ರಚಾಪನಿಭಂ ಚಾಪಂ ವಿಕೃಷ್ಯ ಕನಕಾಙ್ಗದಮ್ ॥
ದೀಪ್ತಾನ್ಕ್ಷಿಪತಿ ನಾರಾಚಾನ್ ಸರ್ಪಾನಿವ ಮಹಾವಿಷಾನ್ ।

ಅನುವಾದ

ಶ್ರೀರಾಮನು ಇಂದ್ರಧನುಸ್ಸಿನಂತಹ ಸ್ವರ್ಣಭೂಷಿತ ವಿಶಾಲಧನುಸ್ಸನ್ನು ಸೆಳೆದು ಅದರ ಮೂಲಕ ಮಹಾ ವಿಷವುಳ್ಳ ಸರ್ಪಗಳಂತಹ ತೇಜಸ್ವೀ ಬಾಣಗಳನ್ನು ಮಳೆಗರೆಯುತ್ತಾನೆ.॥6½॥

ಮೂಲಮ್ - 7½

ನಾದದಾನಂ ಶರೋನ್ಘೋರಾನ್ ವಿಮುಂಚತಂ ಮಹಾಬಲಮ್ ॥
ನ ಕಾರ್ಮುಕಂ ವಿಕರ್ಷಂತಂ ರಾಮಂ ಪಶ್ಯಾಮಿ ಸಂಯುಗೇ ।

ಅನುವಾದ

ಆ ಮಹಾಬಾಹು ರಾಮನು ಯುದ್ಧದಲ್ಲಿ ಯಾವಾಗ ಧನುಸ್ಸನ್ನು ಸೆಳೆಯುತ್ತಾನೋ, ಯಾವಾಗ ಭಯಂಕರ ಬಾಣವನ್ನು ಕೈಗೆತ್ತಿಕೊಳ್ಳುತ್ತಾನೋ, ಯಾವಾಗ ಬಿಡುತ್ತಾನೋ ಎಂಬುದನ್ನು ನನ್ನಿಂದ ನೋಡಲಾಗಲಿಲ್ಲ.॥7½॥

ಮೂಲಮ್ - 8½

ಹನ್ಯಮಾನಂ ತು ತತ್ಸೈನ್ಯಂ ಪಶ್ಯಾಮಿ ಶರವೃಷ್ಟಿಭಿಃ ॥
ಇಂದ್ರೇಣೇವೋತ್ತಮಂ ಸಸ್ಯಮಾಹತಂ ತ್ವಶ್ಮವೃಷ್ಟಿಭಿಃ ।

ಅನುವಾದ

ಅವನ ಬಾಣಗಳ ಮಳೆಯಿಂದ ರಾಕ್ಷಸರ ಸೈನ್ಯ ಸಾಯುತ್ತಾ ಇದೆ; ಅಷ್ಟೇ ನನಗೆ ಕಂಡುಬರುತ್ತದೆ. ಇಂದ್ರನು ಮೇಘಗಳ ಮೂಲಕ ಸುರಿಸುತ್ತಿರುವ ಆಲಿಕಲ್ಲಿನ ಮಳೆಯಿಂದ ಒಳ್ಳೆಯ ಫಸಲು ನಾಶವಾಗುವಂತೆಯೇ ರಾಮನ ಬಾಣಗಳಿಂದ ರಾಕ್ಷಸರ ವಿನಾಶವಾಯಿತು.॥8½॥

ಮೂಲಮ್ - 9

ರಕ್ಷಸಾಂ ಭೀಮವೀರ್ಯಾಣಾಂ ಸಹಸ್ರಾಣಿ ಚತುರ್ದಶ ॥

ಮೂಲಮ್ - 10

ನಿಹತಾನಿ ಶರೈ ಸ್ತೀಕ್ಷ್ಣೈಸ್ತೇನೈಕೇನ ಪದಾತಿನಾ ।
ಅರ್ಧಾಧಿಕಮುಹೂರ್ತೇನ ಖರಶ್ಚ ಸಹದೂಷಣಃ ॥

ಮೂಲಮ್ - 11

ಋಷೀಣಾಮಭಯಂ ದತ್ತಂ ಕೃತಕ್ಷೇಮಾಶ್ಚ ದಂಡಕಾಃ ।

ಅನುವಾದ

ಶ್ರೀರಾಮನು ಒಬ್ಬಂಟಿಗನಾಗಿದ್ದು ಕಾಲ್ನಡಿಗೆಯಲ್ಲೇ ಇದ್ದರೂ ಅವನು ಮೂರು ಗಳಿಗೆಯಲ್ಲಿ ಖರ-ದೂಷಣ ಸಹಿತ ಹದಿನಾಲ್ಕು ಸಾವಿರ ಭಯಂಕರ ಬಲಶಾಲಿ ರಾಕ್ಷಸರನ್ನು ಹರಿತವಾದ ಬಾಣಗಳಿಂದ ಸಂಹಾರ ಮಾಡಿಬಿಟ್ಟನು. ಋಷಿಗಳಿಗೆ ಅಭಯನೀಡಿ, ಸಮಸ್ತ ದಂಡಕಾರಣ್ಯವನ್ನು ರಾಕ್ಷಸರ ವಿಘ್ನಗಳಿಂದ ರಹಿತವನ್ನಾಗಿಸಿದನು.॥9-11॥

ಮೂಲಮ್ - 12

ಏಕಾ ಕಥಂ ಚಿನ್ಮುಕ್ತಾಹಂ ಪರಿಭೂಯ ಮಹಾತ್ಮನಾ ।
ಸ್ತ್ರೀವಧಂ ಶಂಕಮಾನೇನ ರಾಮೇಣ ವಿದಿತಾತ್ಮನಾ ॥

ಅನುವಾದ

ಆತ್ಮಜ್ಞಾನೀ ಮಹಾತ್ಮಾ ಶ್ರೀರಾಮನು ಸ್ತ್ರೀವಧೆಯ ಭಯದಿಂದ ಏಕಮಾತ್ರ ನನ್ನನ್ನು ಕೇವಲ ಅವಮಾನಿತಳನ್ನಾಗಿಸಿ ಬಿಟ್ಟುಬಿಟ್ಟಿರುವನು.॥12॥

ಮೂಲಮ್ - 13

ಭ್ರಾತಾ ಚಾಸ್ಯ ಮಹಾತೇಜಾ ಗುಣತಸ್ತುಲ್ಯವಿಕ್ರಮಃ ।
ಅನುರಕ್ತಶ್ಚ ಭಕ್ತಶ್ಚ ಲಕ್ಷ್ಮಣೋ ನಾಮ ವೀರ್ಯವಾನ್ ॥

ಮೂಲಮ್ - 14

ಅಮರ್ಷೀ ದುರ್ಜಯೋ ಜೇತಾ ವಿಕ್ರಾಂತೋ ಬುದ್ಧಿಮಾನ್ಬಲೀ ।
ರಾಮಸ್ಯ ದಕ್ಷಿಣೋ ಬಾಹುರ್ನಿತ್ಯಂ ಪ್ರಾಣೋ ಬಹಿಶ್ಚರಃ ॥

ಅನುವಾದ

ಅವನಿಗೆ ಒಬ್ಬ ಮಹಾತೇಜಸ್ವಿ ತಮ್ಮನಿದ್ದಾನೆ, ಅವನು ಗುಣ-ಪರಾಕ್ರಮದಲ್ಲಿ ಅವನಿಗೆ ಸಮಾನನಾಗಿದ್ದಾನೆ. ಅವನ ಹೆಸರು ಲಕ್ಷ್ಮಣ ಎಂದಾಗಿದೆ. ಆ ಪರಾಕ್ರಮೀ ವೀರನು ತನ್ನ ಅಣ್ಣನ ಪ್ರೇಮೀ ಮತ್ತು ಭಕ್ತನಾಗಿದ್ದಾನೆ. ಅವನ ಬುದ್ಧಿ ಬಹಳ ತೀಕ್ಷ್ಣವಾಗಿದ್ದು, ಅವನು ಕ್ರೋಧಿ, ದುರ್ಜಯಿ, ವಿಜಯೀ ಹಾಗೂ ಬಲ-ವಿಕ್ರಮದಿಂದ ಸಂಪನ್ನನಾಗಿದ್ದಾನೆ. ಅವನು ಶ್ರೀರಾಮನ ಬಲ ಕೈ ಮತ್ತು ಸದಾ ಹೊರಗೆ ಸಂಚರಿಸುವ ಪ್ರಾಣನಾಗಿದ್ದಾನೆ.॥13-14॥

ಮೂಲಮ್ - 15

ರಾಮಸ್ಯ ತು ವಿಶಾಲಾಕ್ಷೀ ಪೂರ್ಣೇಂದುಸದೃಶಾನನಾ ।
ಧರ್ಮಪತ್ನೀ ಪ್ರಿಯಾ ನಿತ್ಯಂ ಭರ್ತುಃ ಪ್ರಿಯಹಿತೇ ರತಾ ॥

ಅನುವಾದ

ಶ್ರೀರಾಮನ ಧರ್ಮಪತ್ನಿಯೂ ಅವನ ಜೊತೆಗೆ ಇದ್ದಾಳೆ. ಅವಳು ಪತಿಗೆ ಬಹಳ ಪ್ರಿಯಳಾಗಿದ್ದು, ಸದಾ ತನ್ನ ಸ್ವಾಮಿಯ ಪ್ರಿಯವನ್ನು ಹಾಗೂ ಹಿತವನ್ನು ಮಾಡುವುದರಲ್ಲೇ ತೊಡಗಿರುತ್ತಾಳೆ. ಆಕೆಯ ಕಣ್ಣುಗಳು ವಿಶಾಲವಾಗಿದ್ದು, ಮುಖವು ಪೂರ್ಣಚಂದ್ರನಂತೆ ಮನೋಹರವಾಗಿದೆ.॥15॥

ಮೂಲಮ್ - 16

ಸಾ ಸುಕೇಶೀ ಸುನಾಸೋರುಃ ಸುರೂಪಾ ಚ ಯಶಸ್ವಿನೀ ।
ದೇವತೇವ ವನಸ್ಯಾಸ್ಯ ರಾಜತೇ ಶ್ರೀರಿವಾಪರಾ ॥

ಅನುವಾದ

ಆಕೆಯ ಕೂದಲು, ಮೂಗು, ತೊಡೆ ಹಾಗೂ ರೂಪ ಬಹಳ ಸುಂದರ ಮತ್ತು ಮನೋಹರವಾಗಿದೆ. ಆ ಯಶಸ್ವಿನೀ ರಾಜ ಕುಮಾರಿಯು ಈ ದಂಡಕಾರಣ್ಯದ ದೇವಿಯಂತೆ ಕಾಣುವಳು ಹಾಗೂ ಇನ್ನೋರ್ವ ಲಕ್ಷ್ಮಿಯಂತೆ ಶೋಭಿಸುತ್ತಿರುವಳು.॥16॥

ಮೂಲಮ್ - 17

ತಪ್ತಕಾಂಚನವರ್ಣಾಭಾ ರಕ್ತು ತುಂಗನಖೀ ಶುಭಾ ।
ಸೀತಾ ನಾಮ ವರಾರೋಹಾ ವೈದೇಹೀ ತನುಮಧ್ಯಮಾ ॥

ಅನುವಾದ

ಆಕೆಯ ಸುಂದರ ಶರೀರವು ಪುಟಕ್ಕಿಟ್ಟ ಸುವರ್ಣಕಾಂತಿಯಿಂದ ಒಡಗೊಂಡಿದೆ, ಉಗುರುಗಳು ಕೆಂಪಾಗಿದ್ದು ಉಬ್ಬಿಕೊಂಡಿವೆ. ಅವಳು ಶುಭಲಕ್ಷಣಗಳಿಂದ ಸಂಪನ್ನಳಾಗಿದ್ದು, ಕಟಿ ಭಾಗವು ಸಣ್ಣದಾಗಿದ್ದು, ಸರ್ವಾಂಗಗಳು ಸುಂದರವಾಗಿವೆ. ಅವಳ ಹೆಸರು ಸೀತೆಯಾಗಿದ್ದು, ವಿದೇಹರಾಜಾ ಜನಕನ ಕನ್ಯೆಯಾಗಿದ್ದಾಳೆ.॥17॥

ಮೂಲಮ್ - 18

ನೈವ ದೇವೀ ನ ಗಂಧರ್ವೀ ನ ಯಕ್ಷೀ ನ ಚ ಕಿಂನರೀ ।
ತಥಾರೂಪಾ ಮಯಾ ನಾರೀ ದೃಷ್ಟಪೂರ್ವಾ ಮಹೀತಲೇ ॥

ಅನುವಾದ

ದೇವತೆಗಳ, ಗಂಧರ್ವರ, ಯಕ್ಷರ, ಕಿನ್ನರರ ಸ್ತ್ರೀಯರಲ್ಲಿ ಯಾರೂ ಆಕೆಗೆ ಸಮಾನರಾಗಿಲ್ಲ. ಈ ಭೂತಳದಲ್ಲಿ ಇಂತಹ ರೂಪವತಿ ನಾರಿಯನ್ನು ನಾನು ಮೊದಲು ಎಂದೂ ನೋಡಿಲ್ಲ.॥18॥

ಮೂಲಮ್ - 19

ಯಸ್ಯ ಸೀತಾ ಭವೇದ್ಭಾರ್ಯಾ ಯಂಚ ಹೃಷ್ಟಾ ಪರಿಷ್ವಜೇತ್ ।
ಅಭಿಜೀವೇತ್ಸ ಸರ್ವೇಷು ಲೋಕೇಷ್ವಪು ಪುರಂದರಾತ್ ॥

ಅನುವಾದ

ಸೀತೆ ಯಾರ ಭಾರ್ಯೆಯಾಗುವಳೋ, ಅವಳು ಹರ್ಷದಿಂದ ಯಾರನ್ನು ಆಲಂಗಿಸಿಕೊಳ್ಳುವಳೋ ಅವನ ಜೀವನ ಸಮಸ್ತಲೋಕಗಳಲ್ಲಿ ಇಂದ್ರನಿಗಿಂತಲೂ ಹೆಚ್ಚು ಭಾಗ್ಯಶಾಲಿಯಾಗಿದೆ.॥19॥

ಮೂಲಮ್ - 20

ಸಾ ಸುಶೀಲಾ ವಪುಃಶ್ಲಾಘ್ಯಾ ರೂಪೇಣಾಪ್ರತಿಮಾ ಭುವಿ ।
ತವಾನುರೂಪಾ ಭಾರ್ಯಾ ಸಾ ತ್ತ್ವಂ ಚ ತಸ್ಯಾಃಪತಿರ್ವರಃ ॥

ಅನುವಾದ

ಆಕೆಯ ಶೀಲ ಸ್ವಭಾವ ಬಹಳ ಉತ್ತಮವಾಗಿದೆ, ಆಕೆಯ ಪ್ರತಿಯೊಂದು ಅಂಗವೂ ಶ್ಲಾಘನೀಯವಾಗಿದೆ. ರೂಪದಲ್ಲಿ ಆಕೆಗೆ ಸರಿಗಟ್ಟುವ ಸ್ತ್ರೀಯು ಭೂಮಂಡಲದಲ್ಲಿ ಬೇರೆಯಾರೂ ಇಲ್ಲ. ಅವಳು ನಿನಗೆ ಯೋಗ್ಯಭಾರ್ಯೆ ಆಗುವಳು ಮತ್ತು ನೀನು ಆಕೆಗೆ ಯೋಗ್ಯ ಶ್ರೇಷ್ಠ ಪತಿಯಾಗಿರುವೆ.॥20॥

ಮೂಲಮ್ - 21½

ತಾಂ ತು ವಿಸ್ತೀರ್ಣಜಘನಾಂ ಪೀನೋತ್ತುಂಗಪಯೋಧರಾಮ್ ।
ಭಾರ್ಯಾರ್ಥೇ ತು ತವಾನೇತುಮುದ್ಯತಾಹಂ ವರಾನನಾಮ್ ॥
ವಿರೂಪಿತಾಸ್ಮಿ ಕ್ರೂರೇಣ ಲಕ್ಷ್ಮಣೇನ ಮಹಾಭುಜ ।

ಅನುವಾದ

ಮಹಾಬಾಹುವೇ! ಸುಂದರಳೂ, ಸುಮುಖಿಯೂ ಆದ ಆ ಸ್ತ್ರೀಯನ್ನು ನಾನು ನಿನಗೆ ಭಾರ್ಯೆಯಾಗಿಸಲು ತರಲು ಮುಂದಾದಾಗ ಕ್ರೂರ ಲಕ್ಷ್ಮಣನು ನನ್ನನ್ನು ಈ ರೀತಿಯಾಗಿ ಕುರೂಪಗೊಳಿಸಿದನು.॥21½॥

ಮೂಲಮ್ - 22½

ತಾಂ ತು ದೃಷ್ಟ್ವಾದ್ಯ ವೈದೇಹೀಂ ಪೂರ್ಣಚಂದ್ರನಿಭಾನನಾಮ್ ॥
ಮನ್ಮಥಸ್ಯ ಶರಾಣಾಂಚ ತ್ವಂ ವಿಧೇಯೋ ಭವಿಷ್ಯಸಿ ।

ಅನುವಾದ

ಪೂರ್ಣಚಂದ್ರನಂತೆ ಮನೋಹರ ಮುಖವುಳ್ಳ ವಿದೇಹರಾಜಕುಮಾರೀ ಸೀತೆಯನ್ನು ನೀನು ನೋಡುತ್ತಲೇ ಕಾಮದೇವನಿಗೆ ಗುರಿಯಾಗುವೆ.॥22॥

ಮೂಲಮ್ - 23

ಯದಿ ತಸ್ಯಾಮಭಿಪ್ರಾಯೋ ಭಾರ್ಯಾತ್ವೇ ತವ ಜಾಯತೇ ।
ಶೀಘ್ರಮುದ್ಧ್ರಿಯತಾಂ ಪಾದೋ ಜಯಾರ್ಥಮಿಹ ದಕ್ಷಿಣಃ ॥

ಅನುವಾದ

ನಿನಗೆ ಸೀತೆಯನ್ನು ತನ್ನ ಭಾರ್ಯೆಯಾಗಿಸಿಕೊಳ್ಳುವ ಇಚ್ಛೆ ಇದ್ದರೆ ಬೇಗನೇ ಶ್ರೀರಾಮನನ್ನು ಗೆಲ್ಲಲು ಇಗಲೇ ಬಲಗಾಲನ್ನು ಮುಂದಿಡು.॥23॥

ಮೂಲಮ್ - 24

ರೋಚತೇ ಯದಿ ತೇ ವಾಕ್ಯಂ ಮಮೈತದ್ರಾಕ್ಷಸೇಶ್ವರ।
ಕ್ರಿಯತಾಂ ನಿರ್ವಿಶಂಕೇನ ವಚನಂ ಮಮ ರಾವಣ ॥

ಅನುವಾದ

ರಾಕ್ಷಸರಾಜ ರಾವಣನೇ! ನಿನಗೆ ನನ್ನ ಮಾತು ಮೆಚ್ಚಿಕೆಯಾದರೆ ನಿಃಶಂಕವಾಗಿ ನಾನು ಹೇಳಿದಂತೆ ಮಾಡ.॥24॥

ಮೂಲಮ್ - 25

ವಿಜ್ಞಾಯೈಷಾಮಶಕ್ತಿಂ ಚ ಕ್ರಿಯಾತಾಂ ಚ ಮಹಾಬಲ ।
ಸೀತಾ ತವಾನವದ್ಯಾಂಗೀ ಭಾರ್ಯಾತ್ವೇ ರಾಕ್ಷಸೇಶ್ವರ ॥

ಅನುವಾದ

ಮಹಾಬಲೀ ರಾಕ್ಷಸೇಶ್ವರನೇ! ಈ ರಾಮಾದಿಗಳ ಅಸಮರ್ಥತೆ ಮತ್ತು ತನ್ನ ಶಕ್ತಿಯ ವಿಚಾರ ಮಾಡಿ, ಸರ್ವಾಂಗ ಸುಂದರೀ ಸೀತೆಯನ್ನು ತನ್ನ ಭಾರ್ಯೆಯಾಗಿಸಿಕೊಳ್ಳುವ ಪ್ರಯತ್ನ ಮಾಡು (ಆಕೆಯನ್ನು ಕದ್ದುತಾ.॥25॥

ಮೂಲಮ್ - 26

ನಿಶಮ್ಯ ರಾಮೇಣ ಶರೈರಜಿಹ್ಮಗೈ-
ರ್ಹತಾಂಜನಸ್ಥಾನಗತಾನ್ನಿಶಾಚರಾನ್ ।
ಖರಂ ಚ ದೃಷ್ಟ್ವಾ ನಿಹತಂ ಚ ದೂಷಣಂ
ತ್ವಮದ್ಯ ಕೃತ್ಯಂ ಪ್ರತಿಪತ್ತುಮರ್ಹಸಿ ॥

ಅನುವಾದ

ಶ್ರೀರಾಮನು ತನ್ನ ಬಾಣಗಳಿಂದ ಜನಸ್ಥಾನ ನಿವಾಸಿ ನಿಶಾಚರರನ್ನು ಕೊಂದುಹಾಕಿದನು ಮತ್ತು ಖರ ದೂಷಣರನ್ನೂ ಮೃತ್ಯುಮುಖವಾಗಿಸಿದನು. ಇದೆಲ್ಲವನ್ನು ಕೇಳಿ, ನೋಡಿ ಈಗ ನಿನ್ನ ಕರ್ತವ್ಯವೇನೆಂಬುದನ್ನು ನಿಶ್ಚಯಿಸು.॥26॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂವತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥34॥