०३२ बलस्तुतिः

वाचनम्
ಭಾಗಸೂಚನಾ

ಶೂರ್ಪಣಖೆಯು ಲಂಕೆಗೆ ರಾವಣನ ಬಳಿಗೆ ಹೋದುದು

ಮೂಲಮ್ - 1

ತತಃ ಶೂರ್ಪಣಖಾದೃಷ್ಟ್ವಾ ಸಹಸ್ರಾಣಿ ಚತುರ್ದಶ ।
ಹತಾನ್ಯೇಕೇನ ರಾಮೇಣ ರಕ್ಷಸಾಂ ಭೀಮಕರ್ಮಣಾಮ್ ॥

ಮೂಲಮ್ - 2

ದೂಷಣಂ ಚ ಖರಂ ಚೈವ ಹತಂ ತ್ರಿಶಿರಸಂ ರಣೇ ।
ದೃಷ್ಟ್ವಾ ಪುನರ್ಮಹಾನಾದಾನ್ ನನಾದ ಜಲದೋಪಮಾ ॥

ಅನುವಾದ

ಶ್ರೀರಾಮನು ಭಯಂಕರ ಕರ್ಮ ಮಾಡುವ ಹದಿನಾಲ್ಕು ಸಾವಿರ ರಾಕ್ಷಸರನ್ನು ಒಬ್ಬಂಟಿಗನಾಗಿ ಕೊಂದು ಕಳೆದು, ಖರ-ದೂಷಣ ಮತ್ತು ತ್ರಿಶಿರರನ್ನು ಯುದ್ಧದಲ್ಲಿ ಸಂಹಾರ ಮಾಡಿದುದನ್ನು ನೋಡಿದಾಗ ಶೂರ್ಪಣಖಿಯು ಶೋಕದಿಂದ ಮೇಘಗಳಂತೆ ಗರ್ಜಿಸುತ್ತಾ ಪುನಃ ಜೋರಾಗಿ ಕಿರುಚ ತೊಡಗಿದಳು.॥1-2॥

ಮೂಲಮ್ - 3

ಸಾ ದೃಷ್ಟ್ವಾ ಕರ್ಮ ರಾಮಸ್ಯ ಕೃತಮನ್ಯೈಃ ಸುದುಷ್ಕರಮ್ ।
ಜಗಾಮ ಪರಮೋದ್ವಿಗ್ನಾ ಲಂಕಾಂ ರಾವಣಪಾಲಿತಾಮ್ ॥

ಅನುವಾದ

ಇತರರಿಗೆ ಅತ್ಯಂತ ದುಷ್ಕರವಾದ ಕಾರ್ಯವನ್ನು ಶ್ರೀರಾಮನು ಮಾಡಿ ತೋರಿದುದನ್ನು ನೋಡಿ, ಅವಳು ಅತ್ಯಂತ ಉದ್ವಿಗ್ನಳಾಗಿ ರಾವಣನಿಂದ ರಕ್ಷಿತವಾದ ಲಂಕಾಪುರಿಗೆ ಹೋದಳು.॥3॥

ಮೂಲಮ್ - 4

ಸಾ ದದರ್ಶ ವಿಮಾನಾಗ್ರೇ ರಾವಣಂ ದೀಪ್ತತೇಜಸಮ್ ।
ಉಪೋಪವಿಷ್ಟಂ ಸಚಿವೈರ್ಮರುದ್ಭಿರಿವ ವಾಸವಮ್ ॥

ಅನುವಾದ

ಅಲ್ಲಿಗೆ ಹೋಗಿ ರಾವಣನು ಏಳು ಅಂತಸ್ತಿನ ಮೇಲಿನ ಭಾಗದಲ್ಲಿ ಕುಳಿತಿರುವುದನ್ನು ನೋಡಿದಳು. ಅವನ ರಾಜೋಚಿತ ತೇಜ ಉದ್ದೀಪ್ತವಾಗಿತ್ತು, ಮರುದ್ಗಣರಿಂದ ಸೇವಿತ ಇಂದ್ರನಂತೆ ಅವನು ಮಂತ್ರಿಗಳಿಂದ ಸುತ್ತುವರಿದು ಕುಳಿತಿದ್ದನು.॥4॥

ಮೂಲಮ್ - 5

ಆಸೀನಂ ಸೂರ್ಯಸಂಕಾಶೇ ಕಾಂಚನೇ ಪರಮಾಸನೇ ।
ರುಕ್ಮವೇದಿಗತಂ ಪ್ರಾಜ್ಯಂ ಜ್ವಲಂತಮಿವ ಪಾವಕಮ್ ॥

ಅನುವಾದ

ರಾವಣನು ವಿರಾಜಿಸುತ್ತಿದ್ದ ಸಿಂಹಾಸನವು ಸೂರ್ಯನಂತೆ ಹೊಳೆಯುತ್ತಿತ್ತು. ಚಿನ್ನದ ಇಟ್ಟಿಗೆಗಳಿಂದ ಮಾಡಿದ ವೇದಿಯಲ್ಲಿ ಸ್ಥಾಪಿತವಾದ ಅಗ್ನಿಯು ತುಪ್ಪದ ಆಹುತಿಗಳಿಂದ ಧಗ-ಧಗನೆ ಪ್ರಜ್ವಲಿಸುವಂತೆ ಆ ಸ್ವರ್ಣ ಸಿಂಹಾಸನದಲ್ಲಿ ರಾವಣನು ಶೋಭಿಸುತ್ತಿದ್ದನು.॥5॥

ಮೂಲಮ್ - 6

ದೇವಗಂಧರ್ವಭೂತಾನಾಮೃಷೀಣಾಂ ಚ ಮಹಾತ್ಮನಾಮ್ ।
ಅಜೇಯಂ ಸಮರೇ ಘೋರಂ ವ್ಯಾತ್ತಾನನಮಿವಾಂತಕಮ್ ॥

ಮೂಲಮ್ - 7

ದೇವಾಸುರವಿಮರ್ದೇಷು ವಜ್ರಾಶನಿಕೃತವ್ರಣಮ್ ।
ಐರಾವತವಿಷಾಣಾಗ್ರೈರುತ್ಕೃಷ್ಟಕಿಣವಕ್ಷಸಮ್ ॥

ಅನುವಾದ

ದೇವತೆಗಳು, ಗಂಧರ್ವರು, ಭೂತರು, ಮಹಾತ್ಮಾ ಋಷಿಗಳೂ ಅವನನ್ನು ಗೆಲ್ಲಲು ಅಸಮರ್ಥರಾಗಿದ್ದರು. ಸಮರಾಂಗಣದಲ್ಲಿ ಬಾಯನ್ನು ಅಗಲಿಸಿ ನಿಂತಿರುವ ಯಮನಂತೆ ಅವನು ಭಯಾನಕವಾಗಿ ಕಾಣುತ್ತಿದ್ದನು. ದೇವತೆಗಳ ಮತ್ತು ಅಸುರರ ಸಂಗ್ರಾಮದ ಸಂದರ್ಭದಲ್ಲಿ ಅವನ ಶರೀರದಲ್ಲಾದ ವಜ್ರ ಮತ್ತು ಶಸ್ತ್ರಾಸ್ತ್ರಗಳ ಗಾಯಗಳ ಚಿಹ್ನೆಗಳು ಸ್ಪಷ್ಟವಾಗಿದ್ದವು. ಐರಾವತವು ಅವನ ಎದೆಗೆ ದಂತದಿಂದ ತಿವಿದ ಗುರುತು ಇನ್ನೂ ಕಂಡುಬರುತ್ತಿತ್ತು.॥6-7॥

ಮೂಲಮ್ - 8

ವಿಂಶದ್ಭುಜಂ ದಶಗ್ರೀವಂ ದರ್ಶನೀಯಪರಿಚ್ಛದಮ್ ।
ವಿಶಾಲವಕ್ಷಸಂ ವೀರಂ ರಾಜಲಕ್ಷಣಲಕ್ಷಿತಮ್ ॥

ಮೂಲಮ್ - 9

ನದ್ಧ್ಧವೈಡೂರ್ಯಸಂಕಾಶಂ ತಪ್ತಕಾಂಚನ ಭೂಷಣಮ್ ।
ಸುಭುಜಂ ಶುಕ್ಲವದನಂ ಮಹಾಸ್ಯಂ ಪರ್ವತೋಪಮಮ್ ॥

ಅನುವಾದ

ಅವನಿಗೆ ಇಪ್ಪತ್ತು ಭುಜಗಳು, ಹತ್ತು ತಲೆಗಳಿದ್ದವು. ಅವನ ಛತ್ರ-ಚಾಮರ, ಆಭೂಷಣಾದಿ ಉಪಕರಣಗಳು ನೋಡಲು ಯೋಗ್ಯವಾಗಿದ್ದವು. ವಕ್ಷಸ್ಥಲವು ವಿಶಾಲವಾಗಿತ್ತು. ವೀರ ರಾಜೋಚಿತ ಲಕ್ಷಣಗಳಿಂದ ಸಂಪನ್ನನಾದ ಅವನು ಶರೀರದಲ್ಲಿ ನೀಲಮಣಿಯ ಒಡವೆಗಳನ್ನು ಧರಿಸಿದ್ದನು. ಪುಟಕ್ಕಿಟ್ಟ ಚಿನ್ನದ ಆಭರಣಗಳನ್ನು ತೊಟ್ಟಿದ್ದನು. ಅವನು ಸುಂದರವಾದ ಭುಜಗಳಿಂದ, ಬೆಳ್ಳಗಿನ ದಂತಪಂಕ್ತಿಯಿಂದ, ವಿಶಾಲವಾದ ಮುಖಗಳಿಂದ, ಪರ್ವತದಂತಹ ಶರೀರದಿಂದ ಶೋಭಿಸುತ್ತಿದ್ದನು.॥8-9॥

ಮೂಲಮ್ - 10

ವಿಷ್ಣುಚಕ್ರನಿಪಾತೈಶ್ಚ ಶತಶೋ ದೇವಸಂಯುಗೇ ।
ಅನ್ಯೈಃ ಶಸ್ತೈಃಪ್ರಹಾರೈಶ್ಚ ಮಹಾಯುದ್ಧೇಷು ತಾಡಿತಮ್ ॥

ಅನುವಾದ

ದೇವತೆಗಳೊಂದಿಗೆ ನಡೆದ ಯುದ್ಧದಲ್ಲಿ ಅವನ ಶರೀರದಲ್ಲಿ ನೂರಾರುಬಾರಿ ಭಗವಾನ್ ವಿಷ್ಣುವಿನ ಚಕ್ರದ ಪ್ರಹಾರವಾಗಿತ್ತು. ದೊಡ್ಡ-ದೊಡ್ಡ ಯುದ್ಧಗಳಲ್ಲಿಯೂ ಇತರ ಅಸ್ತ್ರ-ಶಸ್ತ್ರಗಳ ಏಟುಗಳೂ ಬಿದ್ದಿದ್ದವು. (ಅವುಗಳ ಗುರುತು ಗಳೂ ಕಂಡು ಬರುತ್ತಿದ್ದವು.॥10॥

ಮೂಲಮ್ - 11

ಅಹತಾಂಗೈಃ ಸಮಸ್ತೈಸ್ತಂ ದೇವಪ್ರಹರಣೈಸ್ತದಾ ।
ಅಕ್ಷೋಭ್ಯಾಣಾಂ ಸಮುದ್ರಾಣಾಂ ಕ್ಷೋಭಣಂ ಕ್ಷಿಪ್ರಕಾರಿಣಮ್ ॥

ಅನುವಾದ

ದೇವತೆಗಳ ಸಮಸ್ತ ಆಯುಧಗಳ ಪ್ರಹಾರದಿಂದಲೂ ಭಂಗವಾಗದ ಅಂಗಗಳಿಂದಲೇ ಅವನು ಅಕ್ಷೋಭ್ಯ ಸಮುದ್ರಗಳಲ್ಲಿಯೂ ಕ್ಷೋಭೆಯನ್ನುಂಟುಮಾಡುತ್ತಿದ್ದನು. ಅವನು ಎಲ್ಲ ಕಾರ್ಯಗಳನ್ನು ಶೀಘ್ರವಾಗಿ ಮಾಡಿ ಮುಗಿಸುತ್ತಿದ್ದನು.॥11॥

ಮೂಲಮ್ - 12

ಕ್ಷೇಪ್ತಾರಂ ಪರ್ವತಾಗ್ರಾಣಾಂ ಸುರಾಣಾಂ ಚ ಪ್ರಮರ್ದನಮ್ ।
ಉಚ್ಛೇತ್ತಾರಂ ಚ ಧರ್ಮಾಣಾಂ ಪರದಾರಾಭಿಮರ್ಶನಮ್ ॥

ಅನುವಾದ

ಪರ್ವತ ಶಿಖರಗಳನ್ನು ಕಿತ್ತು ಎಸೆಯುತ್ತಿದ್ದನು. ದೇವತೆಗಳನ್ನೂ ಹೊಸಕಿ ಹಾಕುತ್ತಿದ್ದನು. ಅವನು ಧರ್ಮದ ಬೇರುಗಳನ್ನೇ ತುಂಡರಿಸಿ ಬಿಡುತ್ತಿದ್ದು, ಪರಸ್ತ್ರೀಯರ ಸತೀತ್ವವನ್ನು ನಾಶಮಾಡುವಂತಹವನಾಗಿದ್ದನು.॥12॥

ಮೂಲಮ್ - 13½

ಸರ್ವದಿವ್ಯಾಸ್ತ್ರಯೋಕ್ತಾರಂ ಯಜ್ಞವಿಘ್ನಕರಂ ಸದಾ ।
ಪುರೀಂ ಭೋಗವತೀಂ ಗತ್ವಾ ಪರಾಜಿತ್ಯ ಚ ವಾಸುಕಿಮ್ ॥
ತಕ್ಷಕಸ್ಯ ಪ್ರಿಯಾಂ ಭಾರ್ಯಾಂ ಪರಾಜಿತ್ಯ ಜಹಾರ ಯಃ ।

ಅನುವಾದ

ಅವನು ಎಲ್ಲ ರೀತಿಯ ದಿವ್ಯಾಸ್ತ್ರಗಳನ್ನು ಪ್ರಯೋಗಿಸುವವನಾಗಿದ್ದು, ಸದಾ ಯಜ್ಞಗಳಲ್ಲಿ, ವಿಘ್ನಗಳನ್ನೊಡ್ಡುತ್ತಿದ್ದನು. ಒಮ್ಮೆ ಪಾತಾಳದ ಭೋಗವತೀ ಪುರಿಗೆ ಹೋಗಿ ನಾಗರಾಜ ವಾಸುಕಿಯನ್ನು ಸೋಲಿಸಿ, ತಕ್ಷಕನನ್ನು ಗೆದ್ದು ಅವನ ಪ್ರಿಯ ಪತ್ನಿಯನ್ನು ಕದ್ದುತಂದಿದ್ದನು.॥13½॥

ಮೂಲಮ್ - 14½

ಕೈಲಾಸಂ ಪರ್ವತಂ ಗತ್ವಾ ವಿಜಿತ್ಯ ನರವಾಹನಮ್ ॥
ವಿಮಾನಂ ಪುಷ್ಪಕಂತಸ್ಯ ಕಾಮಗಂ ವೈ ಜಹಾರ ಯಃ ।

ಅನುವಾದ

ಹೀಗೆಯೇ ಕೈಲಾಸ ಪರ್ವತಕ್ಕೆ ಹೋಗಿ ಕುಬೇರನನ್ನು ಯುದ್ಧದಲ್ಲಿ ಸೋಲಿಸಿ ಅವನು ಕುಬೇರನ ಇಚ್ಛಾನುಸಾರ ಸಂಚರಿಸುವ ಪುಷ್ಪಕ ವಿಮಾನವನ್ನು, ತನ್ನ ಅಧಿಕಾರದಲ್ಲಿ ಇರಿಸಿಕೊಂಡಿದ್ದನು.॥14½॥

ಮೂಲಮ್ - 15½

ವನಂ ಚೈತ್ರರಥಂ ದಿವ್ಯಂ ನಲಿನೀಂ ನಂದನಂ ವನಮ್ ।
ವಿನಾಶಯತಿ ಯಃ ಕ್ರೋಧಾದ್ದೇವೋದ್ಯಾನಾನಿ ವೀರ್ಯವಾನ್ ॥

ಅನುವಾದ

ಆ ಪರಾಕ್ರಮೀ ನಿಶಾಚರನು ಕ್ರೋಧದಿಂದ ಕುಬೇರನ ಚೈತ್ರರಥವನವನ್ನು ಹಾಗೂ ದೇವತೆಗಳ ಬೇರೆ-ಬೇರೆ ಉದ್ಯಾನ ವನಗಳನ್ನು ನಾಶಮಾಡುತ್ತಿದ್ದನು.॥15½॥

ಮೂಲಮ್ - 16½

ಚಂದ್ರಸೂರ್ಯೌ ಮಹಾಭಾಗಾವುತ್ತಿಷ್ಠಂತೌ ಪರಂತಪೌ ॥
ನಿವಾರಯತಿ ಬಾಹುಭ್ಯಾಂ ಯಃ ಶೈಲಶಿಖರೋಪಮಃ ।

ಅನುವಾದ

ಪರ್ವತ ಶಿಖರದಂತೆ ಆಕಾರ ಹೊಂದಿ ಶತ್ರುಗಳಿಗೆ ಸಂತಾಪ ಕೊಡುವ ಆತನು ಮಹಾಭಾಗ ಚಂದ್ರ-ಸೂರ್ಯರನ್ನು ಉದಯಕಾಲದಲ್ಲಿ ತನ್ನ ಕೈಗಳಿಂದ ತಡೆದುಬಿಡುತ್ತಿದ್ದನು.॥16½॥

ಮೂಲಮ್ - 17½

ದಶವರ್ಷಸಹಸ್ರಾಣಿ ತಪಸ್ತಪ್ತ್ವಾ ಮಹಾವನೇ ।
ಪುರಾ ಸ್ವಯಂಭುವೇ ಧೀರಃ ಶಿರಾಂಸ್ಯುಪಜಹಾರ ಯಃ ॥

ಅನುವಾದ

ಆ ಧೀರ ಸ್ವಭಾವದ ರಾವಣನು ಹಿಂದೆ ಒಂದು ವಿಶಾಲ ವನದಲ್ಲಿ ಹತ್ತುಸಾವಿರ ವರ್ಷ ಘೋರ ತಪಸ್ಸು ಮಾಡಿ ಬ್ರಹ್ಮದೇವರಿಗೆ ತನ್ನ ತಲೆಗಳನ್ನೇ ಬಲಿಕೊಟ್ಟಿದ್ದನು.॥17½॥

ಮೂಲಮ್ - 18½

ದೇವದಾನವಗಂಧರ್ವಪಿಶಾಚಪತಗೋರಗೈಃ ।
ಅಭಯಂ ಯಸ್ಯ ಸಂಗ್ರಾಮೇ ಮೃತ್ಯುತೋ ಮಾನುಷಾದೃತೇ ॥

ಅನುವಾದ

ಅದರ ಪ್ರಭಾವದಿಂದ ದೇವತೆಗಳಿಂದ ದಾನವರಿಂದ, ಗಂಧರ್ವ, ಪಿಶಾಚ, ಪಕ್ಷಿ ಮತ್ತು ಸರ್ಪಗಳಿಂದಲೂ ಸಂಗ್ರಾಮದಲ್ಲಿ ಅವನಿಗೆ ಅಭಯ ಪ್ರಾಪ್ತವಾಗಿತ್ತು. ಮನುಷ್ಯರಲ್ಲದೆ ಬೇರೆಯಾರಿಂದಲೂ ಅವನಿಗೆ ಮೃತ್ಯುಭಯ ಇರಲಿಲ್ಲ.॥18½॥

ಮೂಲಮ್ - 19½

ಮಂತ್ರೈರಭಿಷ್ಟುತಂ ಪುಣ್ಯಮಧ್ವರೇಷು ದ್ವಿಜಾತಿಭಿಃ ।
ಹವಿರ್ಧಾನೇಷು ಯಃ ಸೋಮಮುಪಹಂತಿ ಮಹಾಬಲಃ ॥

ಅನುವಾದ

ಆ ಮಹಾಬಲಿ ರಾಕ್ಷಸನು ಸೋಮಸವನ ಯಜ್ಞಗಳಲ್ಲಿ ದ್ವಿಜಾತಿಗಳಿಂದ ವೇದಮಂತ್ರೋಚ್ಛಾರಪೂರ್ವಕ ತೆಗೆದ ವೈದಿಕ ಮಂತ್ರಗಳಿಂದ ಸುಸಂಕ್ಕೃತವಾದ ಪವಿತ್ರ ಸೋಮರಸವನ್ನು ಅಲ್ಲಿಗೆ ಹೋಗಿ ನಾಶಮಾಡುತ್ತಿದ್ದನು.॥19½॥

ಮೂಲಮ್ - 20½

ಪ್ರಾಪ್ತಯಜ್ಞ ಹರಂ ದುಷ್ಟಂ ಬ್ರಹ್ಮಘ್ನಂ ಕ್ರೂರಕಾರಿಣಮ್ ।
ಕರ್ಕಶಂ ನಿರನುಕ್ರೋಶಂಪ್ರಜಾನಾಮಹಿತೇ ರತಮ್ ॥

ಅನುವಾದ

ಸಮಾಪ್ತಿಗೊಳ್ಳಲಿರುವ ಯಜ್ಞಗಳನ್ನು ವಿಧ್ವಂಸಗೊಳಿಸುವ ಆ ದುಷ್ಟ ನಿಶಾಚರನು ಬ್ರಾಹ್ಮಣರ ಹತ್ಯೆಯನ್ನು ಹಾಗೂ ಇತರ ಕ್ರೂರಕರ್ಮಗಳನ್ನು ಮಾಡುತ್ತಿದ್ದನು. ಅವನು ಬಹಳ ಶುಷ್ಕ ಮತ್ತು ನಿರ್ದಯ ಸ್ವಭಾವದವನಾಗಿದ್ದನು. ಸದಾಕಾಲ ಪ್ರಜೆಯ ಅಹಿತದಲ್ಲೇ ತೊಡಗಿರುತ್ತಿದ್ದನು.॥20½॥

ಮೂಲಮ್ - 21½

ರಾವಣಂ ಸರ್ವಭೂತಾನಾಂ ಸರ್ವಲೋಕಭಯಾವಹಮ್ ।
ರಾಕ್ಷಸೀ ಭ್ರಾತರಂ ಕ್ರೂರಂ ಸಾ ದದರ್ಶ ಮಹಾಬಲಮ್ ॥

ಅನುವಾದ

ಸಮಸ್ತ ಲೋಕಗಳನ್ನು ಭಯಪಡಿಸುವ ಮತ್ತು ಸಂಪೂರ್ಣ ಪ್ರಾಣಿಗಳನ್ನು ಅಳುವಂತೆ ಮಾಡುವ ಈ ಮಹಾಬಲಿ ತನ್ನ ಕ್ರೂರ ಅಣ್ಣನನ್ನು ರಾಕ್ಷಸೀ ಶೂರ್ಪಣಖಿಯು ಆಗ ನೋಡಿದಳು.॥21½॥

ಮೂಲಮ್ - 22

ತಂ ದಿವ್ಯವಸ್ತ್ರಾಭರಣಂ ದಿವ್ಯಮಾಲ್ಯೋಪಶೋಭಿತಮ್ ।
ಆಸನೇ ಸೂಪವಿಷ್ಟಂ ಚ ಕಾಲೇ ಕಾಲಮಿವೋದ್ಯತಮ್ ॥

ಮೂಲಮ್ - 23

ರಾಕ್ಷಸೇಂದ್ರ ಮಹಾಭಾಗಂ ಪೌಲಸ್ತ್ಯಕುಲನಂದನಮ್ ।
ಉಪಗಮ್ಯಾಬ್ರವೀದ್ವಾಕ್ಯಂ ರಾಕ್ಷಸೀ ಭಯವಿಹ್ವಲಾ ॥

ಅನುವಾದ

ಅವನು ದಿವ್ಯವಸ್ತ್ರಗಳಿಂದ ಮತ್ತು ಆಭೂಷಣಗಳಿಂದ ವಿಭೂಷಿತನಾಗಿದ್ದನು. ದಿವ್ಯಪುಷ್ಪಗಳ ಮಾಲೆಗಳು ಅವನ ಶೋಭೆಯನ್ನು ಹೆಚ್ಚಿಸಿತ್ತು. ಸಿಂಹಾಸನದಲ್ಲಿ ಕುಳಿತ ರಾಕ್ಷಸರಾಜ ಪುಲಸ್ತ್ಯನಂದನ ಮಹಾಭಾಗ ದಶಗ್ರೀವನು ಪ್ರಳಯ ಕಾಲದಲ್ಲಿ ಸಂಹಾರಕ್ಕಾಗಿ ಹೊರಟ ಮಹಾಕಾಲನಂತೆ ಕಂಡುಬರುತ್ತಿದ್ದನು.॥22-23॥

ಮೂಲಮ್ - 24

ರಾವಣಂ ಶತ್ರುಹಂತಾರಂ ಮಂತ್ರಿಭಿಃ ಪರಿವಾರಿತಮ್ ॥

ಅನುವಾದ

ಮಂತ್ರಿಗಳಿಂದ ಸುತ್ತುವರಿದ ಶತ್ರುಹಂತಾ ಅಣ್ಣನಾದ ರಾವಣನ ಬಳಿಗೆ ಹೋಗಿ ಭಯದಿಂದ ವಿಹ್ವಲಳಾದ ಆ ಶೂರ್ಪಣಖಿಯು ಏನೋ ಹೇಳಲು ಮುಂದಾದಳು.॥24॥

ಮೂಲಮ್ - 25

ತಮಬ್ರವೀದ್ದೀಪ್ತ ವಿಶಾಲಲೋಚನಂ
ಪ್ರದರ್ಶಯಿತ್ವಾ ಭಯಲೋಭಮೋಹಿತಾ ।
ಸುದಾರುಣಂ ವಾಕ್ಯಮಭೀತಚಾರಿಣೀ
ಮಹಾತ್ಮನಾ ಶೂರ್ಪಣಖಾ ವಿರೂಪಿತಾ ॥

ಅನುವಾದ

ಮಹಾತ್ಮಾ ಲಕ್ಷ್ಮಣನು ಮೂಗು-ಕಿವಿಗಳನ್ನು ಕತ್ತರಿಸಿ ಯಾರನ್ನು ವಿರೂಪಗೊಳಿಸಿದ್ದನೋ, ಯಾರು ನಿರ್ಭಯವಾಗಿ ಸಂಚರಿಸುತ್ತಿದ್ದಳೋ, ಅವಳು ಭಯ ಮತ್ತು ಲೋಭದಿಂದ ಮೋಹಿತಳಾದ ಆ ಶೂರ್ಪಣಖಿಯು ಹೊಳೆಯುವ ವಿಶಾಲ ನೇತ್ರವುಳ್ಳ ಅತ್ಯಂತ ಕ್ರೂರ ರಾವಣನಿಗೆ ತನ್ನ ದುರ್ದಶೆಯನ್ನು ತೋರಿಸಿ ಅವನಲ್ಲಿ ಇಂತೆಂದಳು.॥25॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷ ರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಮೂವತ್ತೆರಡನೆಯ ಸರ್ಗ ಸಂಪೂರ್ಣವಾಯಿತು.॥32॥