०२३ खरेणोत्पातदर्शनम्

वाचनम्
ಭಾಗಸೂಚನಾ

ಭಯಂಕರವಾದ ಉತ್ಪಾತಗಳನ್ನು ನೋಡಿಯೂ ಲೆಕ್ಕಿಸದೆ ಖರನ ಮುನ್ನಡೆ, ರಾಕ್ಷಸ ಸೈನಿಕರು ಶ್ರೀರಾಮನ ಆಶ್ರಮದ ಬಳಿಗೆ ತೆರಳಿದುದು

ಮೂಲಮ್ - 1

ತತ್ ಪ್ರಯಾತಂ ಬಲಂ ಘೋರ ಮಶಿವಂ ಶೋಣಿತೋದಕಮ್ ।
ಅಭ್ಯವರ್ಷನ್ಮಹಾಮೇಘಸ್ತುಮುಲೋ ಗರ್ದಭಾರುಣಃ ॥

ಅನುವಾದ

ಜನಸ್ಥಾನದಿಂದ ಆ ಸೈನ್ಯವು ಪ್ರಯಾಣ ಹೊರಟೊಡನೆಯೇ, ಆಕಾಶದಲ್ಲಿ ಕತ್ತೆಯಂತೆ ಕಂದುಬಣ್ಣದ ಮೇಗಳು ತುಮುಲ ಗರ್ಜನೆ ಮಾಡುತ್ತಾ ಅಮಂಗಳಕರ ರಕ್ತಮಯ ಮಳೆಯನ್ನು ಸುರಿಸಿದವು.॥1॥

ಮೂಲಮ್ - 2

ನಿಪೇತುಸ್ತುರಗಾಸ್ತಸ್ಯ ರಥಯುಕ್ತಾ ಮಹಾಜವಾಃ ।
ಸಮೇ ಪುಷ್ಪಚಿತೇ ದೇಶೇ ರಾಜಮಾರ್ಗೇ ಯದೃಚ್ಛಯಾ ॥

ಅನುವಾದ

ಖರನ ರಥಕ್ಕೆ ಹೂಡಿದ ಮಹಾವೇಗಶಾಲಿ ಕುದುರೆಗಳು ಹೂವುಗಳನ್ನು ಹಾಸಿದ್ದ ಸಮತಟ್ಟಾದ ರಸ್ತೆಯಲ್ಲಿ ನಡೆಯುತ್ತಾ ಇರುವಂತೆ ಅಕಸ್ಮಾತ್ತಾಗಿ ಕುಸಿದು ಬಿದ್ದವು.॥2॥

ಮೂಲಮ್ - 3

ಶ್ಯಾಮಂ ರುಧಿರಪರ್ಯಂತಂ ಬಭೂವ ಪರಿವೇಷಣಮ್ ।
ಅಲಾತಚಕ್ರಪ್ರತಿಮಂ ಪ್ರತಿಗೃಹ್ಯ ದಿವಾಕರಮ್ ॥

ಅನುವಾದ

ಸೂರ್ಯನ ಸುತ್ತಲೂ ಕೆಂಪಾದ ತುದಿಯಿಂದ ಕೂಡಿದ ಶ್ಯಾಮಲವರ್ಣದ ಕೊಳ್ಳಿಯ ಚಕ್ರದಂತೆ ಪರಿವೇಷವು ಕಂಡು ಬರತೊಡಗಿತು.॥3॥

ಮೂಲಮ್ - 4

ತತೋ ಧ್ವಜಮುಪಾಗಮ್ಯ ಹೇಮದಂಡಂ ಸಮುಚ್ಛ್ರಿತಮ್ ।
ಸಮಾಕ್ರಮ್ಯ ಮಹಾಕಾಯಸ್ತಸ್ಥೌ ಗೃಧ್ರಃ ಸುದಾರುಣಃ ॥

ಅನುವಾದ

ಖರನ ರಥದ ಸುವರ್ಣಮಯ ಎತ್ತರವಾದ ಧ್ವಜದ ಮೇಲೆ ದೊಡ್ಡದಾದ ಶರೀರವುಳ್ಳ ಭಯಂಕರವಾದ ಹದ್ದೊಂದು ಬಂದು ಕುಳಿತುಬಿಟ್ಟಿತು.॥4॥

ಮೂಲಮ್ - 5

ಜನಸ್ಥಾನಸಮೀಪೇ ಚ ಸಮಾಕ್ರಮ್ಯ ಖರಸ್ವನಾಃ ।
ವಿಸ್ವರಾನ್ ವಿವಿಧಾನ್ ನಾದಾನ್ ಮಾಂಸಾದಾ ಮೃಗಪಕ್ಷಿಣಃ ॥

ಮೂಲಮ್ - 6

ವ್ಯಾಜಹ್ರುರಭಿದೀಪ್ತಾಯಾಂ ದಿಶಿ ವೈ ಭೈರವಸ್ವನಮ್ ।
ಅಶಿವಂ ಯಾತುಧಾನಾನಾಂ ಶಿವಾ ಘೋರಾ ಮಹಾಸ್ವನಾಃ ॥

ಅನುವಾದ

ಕಠೋರ ಸ್ವರವುಳ್ಳ ಮಾಂಸಭಕ್ಷಿ ಪಶು-ಪಕ್ಷಿಗಳು, ಜನಸ್ಥಾನಕ್ಕೆ ಬಂದು ವಿಕತವಾದ ಧ್ವನಿಯಿಂದ ವಿಕಟವಾಗಿ ಕೂಗತೊಡಗಿದವು. ಸೂರ್ಯನ ಪ್ರಭೆಯಿಂದ ಪ್ರಕಾಶಿತವಾದ ದಿಕ್ಕುಗಳಲ್ಲಿ ಬಾಯಿಯಿಂದ ಬೆಂಕಿಯನ್ನು ಉಗುಳುತ್ತಾ ಭಯಂಕರ ನರಿಗಳು ರಾಕ್ಷಸರಿಗೆ ಅಮಂಗಳಕರವಾಗಿ ಜೋರು ಜೋರಾಗಿ ಭೈರವನಾದ ಮಾಡತೊಡಗಿದವು.॥5-6॥

ಮೂಲಮ್ - 7

ಪ್ರಭಿನ್ನಗಜಸಂಕಾಶಾಸ್ತೋಯಶೋಣಿತಧಾರಿಣಃ ।
ಆಕಾಶಂ ತದನಾಕಾಶಂ ಚಕ್ರುರ್ಭೀಮಾಂಬು ವಾಹಕಾಃ ॥

ಅನುವಾದ

ಮದಜಲವನ್ನು ಸುರಿಸುತ್ತಿರುವ ಗಜರಾಜನಂತೆ ಭಯಂಕರ ಮೇಗಳು ಕಂಡುಬರುತ್ತಿದ್ದವು ಮತ್ತು ನೀರಿನ ಬದಲಿಗೆ ರಕ್ತವನ್ನು ಧರಿಸಿದ ಮೋಡಗಳು ಆವರಿಸಿಕೊಂಡವು. ಅವುಗಳು ಇಡೀ ಆಕಾಶವನ್ನೇ ಮುಚ್ಚಿಬಿಟ್ಟವು.॥7॥

ಮೂಲಮ್ - 8

ಬಭೂವ ತಿಮಿರಂ ಘೋರಮುದ್ಧತಂ ರೋಮಹರ್ಷಣಮ್ ।
ದಿಶೋ ವಾ ಪ್ರದಿಶೋ ವಾಪಿ ಸುವ್ಯಕ್ತಂ ನಚಕಾಶಿರೇ ॥

ಅನುವಾದ

ಎಲ್ಲೆಡೆ ಅತ್ಯಂತ ಭಯಂಕರ ಹಾಗೂ ರೋಮಾಂಚಕಾರೀ ದಟ್ಟವಾದ ಕತ್ತಲೆ ಆವರಿಸಿತು. ಅದರಿಂದ ದಿಕ್ಕುಗಳು ಸ್ಪಷ್ಟವಾಗಿ ಕಾಣದಂತಾಗಿತ್ತು.॥8॥

ಮೂಲಮ್ - 9

ಕ್ಷತಜಾರ್ದ್ರಸವರ್ಣಾಭಾ ಸಂಧ್ಯಾ ಕಾಲಂ ವಿನಾ ಬಭೌ ।
ಖರಂಚ್ಯಾಭಿಮುಖಂ ನೇದುಸ್ತದಾ ಘೋರಾ ಮೃಗಾಃ ಖಗಾಃ ॥

ಅನುವಾದ

ಆ ಕಾಲದಲ್ಲಿ ರಕ್ತದಿಂದ ತೋಯ್ದ ಬಟ್ಟೆಯಂತೆ ಸಂಧ್ಯೆಯು ಪ್ರಕಟವಾಯಿತು. ಆಗ ಭಯಂಕರ ಪಶು-ಪಕ್ಷಿಗಳು ಖರನ ಮುಂದೆ ಬಂದು ಗರ್ಜಿಸತೊಡಗಿದವು.॥9॥
(ಶ್ಲೋಕ - 10½)

ಮೂಲಮ್

ಕಂಕಗೋಮಾಯುಗೃಧ್ರಾಶ್ಚ ಚುಕ್ರುಶುರ್ಭಯಶಂಸಿನಃ ।
ನಿತ್ಯಾಶಿವಕರಾ ಯುದ್ಧೇ ಶಿವಾ ಘೋರನಿದರ್ಶನಾಃ ॥
ನೇದುರ್ಬಲಸ್ಯಾಭಿಮುಖಂ ಜ್ವಾಲೋದ್ಗಾರಿಭಿರಾನನೈಃ ।

ಅನುವಾದ

ಭಯವು ಸನ್ನಿಹಿತವಾಗಿರುವುದನ್ನು ಸೂಚಿಸುವ ಬಿಳೀಹದ್ದುಗಳು, ಕೆಂಪುಹದ್ದುಗಳೂ, ಗುಳ್ಳೇನರಿಗಳೂ ಗಟ್ಟಿಯಾಗಿ ಕಿರಿಚಿಕೊಳ್ಳುತ್ತಿದ್ದವು. ಅಮಂಗಳವನ್ನು ಸೂಚಿಸುವ ಭಯಂಕರ ಹೆಣ್ಣು ಗುಳ್ಳೆನರಿಗಳು ಮುಖಗಳಿಂದ ಬೆಂಕಿಯನ್ನು ಉಗುಳುತ್ತಾ ಖರನ ಸೈನ್ಯದ ಎದುರಾಗಿ ನಿಂತು ಅರಚಿಕೊಳ್ಳುತ್ತಿದ್ದವು.॥10॥

ಮೂಲಮ್ - 11

ಕಬಂಧಃ ಪರಿಘಾಭಾಸೋ ದೃಶ್ಯತೇ ಭಾಸ್ಕರಾಂತಿ ಕೇ ॥

ಮೂಲಮ್ - 12

ಜಗ್ರಾಹ ಸೂರ್ಯಂ ಸ್ವರ್ಭಾನುರಪರ್ವಣಿ ಮಹಾಗ್ರಹಃ ।
ಪ್ರವಾತಿ ಮಾರುತಃ ಶೀಘ್ರಂ ನಿಷ್ಪ್ರಭೋಽಭೂದ್ದಿವಾಕರಃ ॥

ಅನುವಾದ

ಪರಿದಂತೆ ಕಾಣುತ್ತಿದ್ದ ತಲೆಯಿಲ್ಲದ ಮುಂಡವು ಸೂರ್ಯನ ಸಮೀಪದಲ್ಲಿ ಕಾಣಿಸತೊಡಗಿತು. ಮಹಾಗ್ರಹ ರಾಹುವು ಅಮಾವಾಸ್ಯೆ ಇಲ್ಲದಿದ್ದಾಗ ಸೂರ್ಯನನ್ನು ನುಂಗಿತು. ಸುಂಟರಗಾಳಿಯು ಎಲ್ಲೆಡೆ ರಭಸದಿಂದ ಬೀಸತೊಡಗಿತು. ಸೂರ್ಯನು ಕಾಂತಿಹೀನನಾದನು.॥11-12॥

ಮೂಲಮ್ - 13

ಉತ್ಪೇತುಶ್ಚ ವಿನಾ ರಾತ್ರಿಂ ತಾರಾಃ ಖದ್ಯೋತಸಪ್ರಭಾಃ ।
ಸಂಲೀನಮೀನವಿಹಗಾ ನಲಿನ್ಯಃ ಶುಷ್ಕಪಂಕಜಾಃ ॥

ಅನುವಾದ

ರಾತ್ರಿಯಲ್ಲದೆಯೇ ಮಿಣುಕುಹುಳಗಳಂತೆ ಹೊಳೆಯುವ ನಕ್ಷತ್ರಗಳು ಆಕಾಶದಲ್ಲಿ ಉದಯಿಸಿದವು. ಸರೋವರದಲ್ಲಿದ್ದ ಮೀನು, ನೀರುಹಕ್ಕಿಗಳು ಅಲ್ಲಿಯೇ ವಿಲೀನವಾದವು. ಕಮಲಗಳು ಒಣಗಿಹೋದವು.॥13॥

ಮೂಲಮ್ - 14

ತಸ್ಮಿನ್ ಕ್ಷಣೇ ಬಭೂವುಶ್ಚ ವಿನಾ ಪುಷ್ಪಫಲೈರ್ದ್ರುಮಾಃ ।
ಉದ್ಧೂತಶ್ಚ ವಿನಾ ವಾತಂ ರೇಣುರ್ಜಲಧರಾರುಣಃ ॥

ಅನುವಾದ

ಆ ಸಮಯದಲ್ಲಿ ವೃಕ್ಷಗಳು ಪುಷ್ಪ-ಫಲಗಳಿಂದ ವಿಹೀನವಾದವು. ಗಾಳಿಯೇ ಇಲ್ಲದಿದ್ದರೂ ಮೇದಂತೆ ಎಣ್ಣೆಗೆಂಪಾದ ಧೂಳು ಮೇಲಕ್ಕೆದ್ದು ಆಕಾಶದಲ್ಲಿ ಆವರಿಸಿತು.॥14॥

ಮೂಲಮ್ - 15

ಚೀಚೀಕೂಚೀತಿ ವಾಶ್ಯಂತ್ಯೋ ಬಭೂವುಸ್ತತ್ರ ಶಾರಿಕಾಃ ।
ಉಲ್ಕಾಶ್ಚಾಪಿ ಸನಿರ್ಘೋಷಾ ನಿಪೇತುರ್ಘೋರದರ್ಶನಾಃ ॥

ಅನುವಾದ

ಅಲ್ಲಿ ಕಾಡಿನ ಶಾರಿಕಾ ಪಕ್ಷಿಗಳು ಚೀಚಿ-ಚೀಚಿ ಮಾಡತೊಡಗಿದವು. ಭಯಂಕರವಾದ ಉಲ್ಕೆಗಳು ಘೋರ ಶಬ್ಧ ಮಾಡುತ್ತಾ ಆಕಾಶದಿಂದ ಬೀಳತೊಡಗಿದವು.॥15॥

ಮೂಲಮ್ - 16

ಪ್ರಚಚಾಲ ಮಹೀ ಚಾಪಿ ಸಶೈಲವನಕಾನನಾ ।
ಖರಸ್ಯ ಚ ರಥಸ್ಥಸ್ಯ ನರ್ದಮಾನಸ್ಯ ಧೀಮತಃ ॥

ಮೂಲಮ್ - 17

ಪ್ರಾಕಂಪತ ಭುಜಃ ಸವ್ಯಃ ಸ್ವರಶ್ಚಾಸ್ಯಾವಸಜ್ಜತ ।
ಸಾಸ್ರಾ ಸಂಪದ್ಯತೇ ದೃಷ್ಟಿಃ ಪಶ್ಯಮಾನಸ್ಯ ಸರ್ವತಃ ॥

ಅನುವಾದ

ಪರ್ವತ, ವನ ಮತ್ತು ಕಾನನ ಸಹಿತ ಭೂಮಿಯು ನಡುಗಿತು. ಧೀಮಂತನಾದ ಖರನು ರಥದಲ್ಲಿ ಕುಳಿತು ಗರ್ಜಿಸುತ್ತಿರುವಾಗ ಅವನ ಎಡಭುಜವು ಅದುರಿತು. ಅವನ ಸ್ವರವು ಕುಗ್ಗಿಹೋಗಿ ಸುತ್ತಲೂ ನೋಡುತ್ತಿದ್ದ ರಾಕ್ಷಸನ ಕಣ್ಣುಗಳು ನೀರು ತುಂಬಿಕೊಂಡಿತು.॥16-17॥

ಮೂಲಮ್ - 18½

ಲಲಾಟೇ ಚ ರುಜೋ ಜಾತಾ ನ ಚ ಮೋಹಾನ್ನ್ಯವರ್ತತ ।
ತಾನ್ ಸಮೀಕ್ಷ್ಯ ಮಹೋತ್ಪಾತಾನುತ್ಥಿತಾನ್ ರೋಮಹರ್ಷಣಾನ್ ॥
ಅಬ್ರವೀದ್ರಾಕ್ಷಸಾನ್ಸರ್ವಾನ್ಪ್ರಹಸನ್ ಸ ಖರಸ್ತದಾ ।

ಅನುವಾದ

ಅವನ ತಲೆ ನೋಯತೊಡಗಿತು, ಹೀಗಿದ್ದರೂ ಮೊಹವಶ ಅವನು ಯುದ್ಧದಿಂದ ಹಿಂದಿರುಗಲಿಲ್ಲ. ಆಗ ಪ್ರಕಟವಾದ ದೊಡ್ಡ-ದೊಡ್ಡ ರೋಮಾಂಚಕರ ಉತ್ಪಾತಗಳನ್ನು ನೋಡಿ ಖರನು ಜೋರಾಗಿ ನಗುತ್ತಾ, ಸಮಸ್ತ ರಾಕ್ಷಸರಲ್ಲಿ ಹೇಳಿದನು .॥18॥

ಮೂಲಮ್ - 19

ಮಹೋತ್ಪಾತಾನಿಮಾನ್ಸರ್ವಾನುತ್ಥಿ ತಾನ್ ಘೋರದರ್ಶನಾನ್ ॥

ಮೂಲಮ್ - 20

ನ ಚಿಂತಯಾಮ್ಯಹಂ ವೀರ್ಯಾದ್ಬಲವಾನ್ದುರ್ಬಲಾನಿವ ।
ತಾರಾ ಅಪಿ ಶರೈಸ್ತೀಕ್ಷ್ಣೈಃ ಪಾತಯೇಯಂ ನಭಸ್ಥಲಾತ್ ॥

ಅನುವಾದ

ಭಯಾನಕವಾಗಿ ಕಂಡುಬರುವ ಈ ದೊಡ್ಡ-ದೊಡ್ಡ ಉತ್ಪಾತಗಳು ಪ್ರಕಟವಾಗುತ್ತಿವೆ. ನಾನು ನನ್ನ ಬಲದ ಭರವಸೆಯಿಂದ ಬಲಿಷ್ಠವಾದ ವೀರನು ದುರ್ಬಲ ಶತ್ರುವನ್ನು ಕಡೆಗಣಿಸುವಂತೆ ಇವೆಲ್ಲವನ್ನು ಗಣನೆಗೆ ತರುವುದಿಲ್ಲ. ನಾನು ನನ್ನ ಹರಿತವಾದ ಬಾಣಗಳಿಂದ ಆಕಾಶದ ನಕ್ಷತ್ರಗಳನ್ನು ಕೆಡಹಿಬಿಡಬಲ್ಲೆನು.॥19-20॥

ಮೂಲಮ್ - 21½

ಮೃತ್ಯುಂ ಮರಣಧರ್ಮೇಣ ಸಂಕ್ರುದ್ಧೋ ಯೋಜಯಾಮ್ಯಹಮ್ ।
ರಾಘವಂ ತಂ ಬಲೋತ್ಸಿಕ್ತಂ ಭ್ರಾತರಂ ಚಾಪಿ ಲಕ್ಷ್ಮಣಮ್ ॥
ಅಹತ್ವಾ ಸಾಯಕೈಸ್ತೀಕ್ಷ್ಣೈರ್ನೋಪಾವರ್ತಿತುಮುತ್ಸಹೇ ।

ಅನುವಾದ

ನಾನು ಕುಪಿತನಾದರೆ ಮೃತ್ಯುವನ್ನೂ ಕೂಡ ಸಾವಿನ ದವಡೆಯಲ್ಲಿ ನೂಕಬಲ್ಲೆನು. ಬಲಗರ್ವಿತನಾದ ರಾಮ ಮತ್ತು ಅವನ ತಮ್ಮ ಲಕ್ಷ್ಮಣನನ್ನು ಇಂದು ಹರಿತವಾದ ಬಾಣಗಳಿಂದ ಕೊಲ್ಲದೆ ನಾನು ಹಿಂದಿರುಗಲಾರೆನು.॥21½॥

ಮೂಲಮ್ - 22½

ಯನ್ನಿಮಿತ್ತಂತು ರಾಮಸ್ಯ ಲಕ್ಷ್ಮಣಸ್ಯ ವಿಪರ್ಯಯಃ ॥
ಸಕಾಮಾ ಭಗಿನೀ ಮೇಽಸ್ತು ಪೀತ್ವಾತು ರುಧಿರಂ ತಯೋಃ ।

ಅನುವಾದ

ಯಾರನ್ನು ದಂಡಿಸಲು ರಾಮ ಮತ್ತು ಲಕ್ಷ್ಮಣನ ಬುದ್ಧಿಯಲ್ಲಿ ವಿಪರೀತ ಕ್ರೂರ ವಿಚಾರ ಉದಯಿಸಿದೆಯೋ ಆ ನನ್ನ ತಂಗಿ ಶೂರ್ಪಣಖೆಯು ಅವರಿಬ್ಬರ ರಕ್ತವನ್ನು ಕುಡಿದು ಸಫಲ ಮನೋರಥಳಾಗುವಳು.॥22½॥

ಮೂಲಮ್ - 23½

ನ ಕ್ವಚಿತ್ ಪ್ರಾಪ್ತ ಪೂರ್ವೋ ಮೇ ಸಂಯುಗೇಷು ಪರಾಜಯಃ ॥
ಯುಷ್ಮಾಕಮೇತತ್ಪ್ರತ್ಯಕ್ಷಂ ನಾನೃತಂ ಕಥಾಯಾಮ್ಯಹಮ್ ।

ಅನುವಾದ

ಇಂದಿನ ತನಕ ನಡೆದ ಯುದ್ಧದಲ್ಲಿ ಯಾರಿಂದಲೂ ನನ್ನನ್ನು ಪರಾಜಯಗೊಳಿಸಲಾಗಲಿಲ್ಲ. ಇದನ್ನು ನೀವೆಲ್ಲ ಪ್ರತ್ಯಕ್ಷವಾಗಿ ನೋಡಿರುವಿರಿ. ನಾನು ಸುಳ್ಳು ಹೇಳುತ್ತಿಲ್ಲ.॥23½॥

ಮೂಲಮ್ - 24½

ದೇವರಾಜಮಪಿ ಕ್ರುದ್ಧೋ ಮತ್ತೈರಾವತಗಾಮಿನಮ್ ॥
ವಜ್ರಹಸ್ತಂ ರಣೇ ಹನ್ಯಾಂ ಕಿಂ ಪುನಸ್ತೌ ಚ ಮಾನವೌ ।

ಅನುವಾದ

ಮದಿಸಿದ ಐರಾವತವನ್ನೇರಿದ ವಜ್ರಧಾರೀ ದೇವೇಂದ್ರನನ್ನು ಕೂಡ ರಣಭೂಮಿಯಲ್ಲಿ ಕುಪಿತನಾದ ನಾನು ಕಾಲನ ದವಡೆಯಲ್ಲಿ ಹಾಕಬಲ್ಲೆನು. ಹಾಗಿರುವಾಗ ಈ ಇಬ್ಬರು ಮನುಷ್ಯರ ಮಾತೇನು.॥24½॥

ಮೂಲಮ್ - 25½

ಸಾ ತಸ್ಯ ಗರ್ಜಿತಂ ಶ್ರುತ್ವಾ ರಾಕ್ಷಸಾನಾಂ ಮಹಾಚಮೂಃ ॥
ಪ್ರಹರ್ಷಮತುಲಂ ಲೇಭೇ ಮೃತ್ಯುಪಾಶಾವಪಾಶಿತಾ ।

ಅನುವಾದ

ಖರನ ಈ ಗರ್ಜನೆಯನ್ನು ಕೇಳಿ ಮೃತ್ಯುಪಾಶದಿಂದ ಬಂಧಿತವಾದ ಆ ರಾಕ್ಷಸರ ವಿಶಾಲ ಸೈನ್ಯವು ಅನುಪಮ ಹರ್ಷಗೊಂಡಿತು.॥25½॥

ಮೂಲಮ್ - 26

ಸಮೇಯುಶ್ಚ ಮಹಾತ್ಮಾನೋ ಯುದ್ಧ ದರ್ಶನಕಾಂಕ್ಷಿಣಃ ॥

ಮೂಲಮ್ - 27

ಋಷಯೋ ದೇವಗಂಧರ್ವಾಃ ಸಿದ್ಧಾಶ್ಚ ಸಹ ಚಾರಣೈಃ ।
ಸಮೇತ್ಯ ಚೋಚುಃ ಸಹಿತಾಸ್ತೇಽನ್ಯೋನ್ಯಂ ಪುಣ್ಯಕರ್ಮಣಃ ॥

ಅನುವಾದ

ಆ ಸಮಯದಲ್ಲಿ ಯುದ್ಧವನ್ನು ನೋಡುವ ಇಚ್ಛೆಯುಳ್ಳ ಅನೇಕ ಪುಣ್ಯಕರ್ಮ, ಮಹಾತ್ಮರೂ, ಋಷಿಗಳೂ, ದೇವತೆಗಳೂ, ಗಂಧರ್ವರೂ, ಸಿದ್ಧರೂ, ಚಾರಣರೂ ಅಲ್ಲಿ ಬಂದು ಸೇರಿದರು. ಒಟ್ಟಿಗೆ ಸೇರಿದ ಅವರೆಲ್ಲರೂ ಪರಸ್ಪರ ಹೀಗೆ ಮಾತನಾಡಿ ಕೊಳ್ಳುತ್ತಿದ್ದರು.॥26-27॥

ಮೂಲಮ್ - 28½

ಸ್ವಸ್ತಿ ಗೋಬ್ರಾಹ್ಮಣೇಭ್ಯೋಽಸ್ತು ಲೋಕಾನಾಂ ಯೇ ಚ ಸಂಮತಾಃ ।
ಜಯತಾಂ ರಾಘವೋ ಯುದ್ಧೇ ಪೌಲಸ್ತ್ಯಾನ್ ರಜನೀಚರಾನ್ ॥
ಚಕ್ರಹಸ್ತೋ ಯಥಾ ವಿಷ್ಣುಃ ಸರ್ವಾನಸುರಸತ್ತಮಾನ್ ।

ಅನುವಾದ

ಗೋವುಗಳಿಗೆ, ಬ್ರಾಹ್ಮಣರಿಗೆ ಮಂಗಳವಾಗಲಿ. ಇತರ ಲೋಕಪ್ರಿಯ ಮಹಾತ್ಮರಿಗೂ ಕೂಡ ಮಂಗಳವಾಗಲಿ, ಚಕ್ರಧಾರೀ ವಿಷ್ಣು ಸಮಸ್ತ ಅಸುರ ಶ್ರೇಷ್ಠರನ್ನು ಸೋಲಿಸುವಂತೆಯೇ ರಘುಕುಲಭೂಷಣ ಶ್ರೀರಾಮನು ಈ ಪುಲಸ್ತ್ಯವಂಶೀ ನಿಶಾಚರರನ್ನು ಸೋಲಿಸಲಿ.॥28½॥

ಮೂಲಮ್ - 29

ಏತಚ್ಚಾನ್ಯಚ್ಚ ಬಹುಶೋ ಬ್ರುವಾಣಾಃ ಪರಮರ್ಷಯಃ ॥

ಮೂಲಮ್ - 30

ಜಾತಕೌತೂಹಲಾಸ್ತತ್ರ ವಿಮಾನಸ್ಥಾಶ್ಚ ದೇವತಾಃ ।
ದದೃಶುರ್ವಾಹಿನೀಂ ತೇಷಾಂ ರಾಕ್ಷಸಾನಾಂ ಗತಾಯುಷಾಮ್ ॥

ಅನುವಾದ

ಇವರು ಹೀಗೆ ಅನೇಕ ಮಂಗಳಾಶಾಸನಪರ ಮಾತುಗಳನ್ನು ಹೇಳುತ್ತಿರುವ ಮಹರ್ಷಿಗಳು ಮತ್ತು ದೇವತೆಗಳು ವಿವಾನದಲ್ಲಿ ಕುಳಿತು. ಆಯುಸ್ಸು ಮುಗಿದ ರಾಕ್ಷಸರ ಆ ವಿಶಾಲ ವಾಹಿನಿಯನ್ನು ನೋಡಿದರು.॥29-30॥

ಮೂಲಮ್ - 31

ರಥೇನ ತು ಖರೋ ವೇಗಾತ್ ಸೈನ್ಯಸ್ಯಾಗ್ರಾದ್ ವಿನಿಃಸೃತಃ ।
ಶ್ಯೇನಗಾಮೀ ಪೃಥುಗ್ರೀವೋ ಯಜ್ಞಶತ್ರುರ್ವಿಹಂಗಮಃ॥

ಮೂಲಮ್ - 32½

ದುರ್ಜಯಃ ಕರವೀರಾಕ್ಷಃ ಪುರುಷಃ ಕಾಲಕಾರ್ಮುಕಃ ।
ಹೇಮಮಾಲೀ ಮಹಾಮಾಲೀ ಸರ್ಪಾಸ್ಯೋ ರುಧಿರಾಶನಃ ॥
ದ್ವಾದಶೈತೇ ಮಹಾವೀರ್ಯಾಃ ಪ್ರತಸ್ಥು ರಭಿತಃ ಖರಮ್ ।

ಅನುವಾದ

ಖರನು ರಥದ ಮೂಲಕ ಬಹಳ ವೇಗದಿಂದ ನಡೆದು ಸೈನ್ಯದ ಮುಂಭಾಗಕ್ಕೆ ಬಂದನು. ಶ್ಯೇನಗಾಮೀ, ಪಥುಗ್ರೀವ, ಯಜ್ಞಶತ್ರು, ವಿಹಂಗಮ, ದುರ್ಜಯ, ಕವೀರಾಕ್ಷ, ಪರುಷ, ಕಾಲ ಕಾರ್ಮುಕ, ಹೇಮವಾಲೀ, ಮಹಾವಾಲೀ, ಸರ್ಪಾಶ್ವಸ್ಯ ಮತ್ತು ರುಧಿರಾಶನ ಈ ಹನ್ನೆರಡು ಮಹಾಪರಾಕ್ರಮಿ ರಾಕ್ಷಸರು ಖರನನ್ನು ಸುತ್ತುವರೆದು ಅವನೊಂದಿಗೆ ನಡೆಯ ತೊಡಗಿದರು.॥31-32½॥

ಮೂಲಮ್ - 33

ಮಹಾಕಪಾಲಃ ಸ್ಥೂಲಾಕ್ಷಃ ಪ್ರಮಾಥಸ್ತ್ರಿಶಿರಾಸ್ತಥಾ ।
ಚತ್ವಾರ ಏಶೇ ಸೇನಾಗ್ರೇ ದೂಷಣಂ ಪೃಷ್ಠತೋಽನ್ವಯುಃ ॥

ಅನುವಾದ

ಮಹಾಕಪಾಲ, ಸ್ಥೂಲಾಕ್ಷ, ಪ್ರಮಾಥ, ತ್ರಿಶಿರ, ಈ ನಾಲ್ವರೂ ವೀರರು ಸೈನ್ಯದ ಮುಂದೆ ಮತ್ತು ಸೇನಾಪತಿ ದೂಷಣನ ಹಿಂದೆ-ಹಿಂದೆ ನಡೆಯುತ್ತಿದ್ದರು.॥33॥

ಮೂಲಮ್ - 34

ಸಾ ಭೀಮವೇಗಾ ಸಮರಾಭಿಕಾಂಕ್ಷಿಣೀ
ಸುದಾರುಣಾ ರಾಕ್ಷಸವೀರಸೇನಾ ।
ತೌ ರಾಜಪುತ್ರೌ ಸಹಸಾಭ್ಯುಪೇತಾ
ಮಾಲಾ ಗ್ರಹಾಣಾಮಿವ ಚಂದ್ರಸೂರ್ಯೌ ॥

ಅನುವಾದ

ಯುದ್ಧದ ಅಭಿಲಾಷೆಯಿಂದ ಬಂದಿರುವ ರಾಕ್ಷಸವೀರರ ಆ ಭಯಂಕರ ವೇಗವುಳ್ಳ ಅತ್ಯಂತ ದಾರುಣಸೈನ್ಯವು ರಾಜಕುಮಾರ ಶ್ರೀರಾಮ-ಲಕ್ಷ್ಮಣರ ಬಳಿಗೆ ಗ್ರಹಪಂಕ್ತಿಗಳು ಚಂದ್ರ ಮತ್ತು ಸೂರ್ಯರ ಸಮೀಪ ಪ್ರಾಕಶಿತವಾಗದಂತೆ ಬಂದು ತಲುಪಿತು.॥34॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಇಪ್ಪತ್ತಮೂರನೆಯ ಸರ್ಗ ಸಂಪೂರ್ಣವಾಯಿತು.॥23॥