वाचनम्
ಭಾಗಸೂಚನಾ
ಪಂಚವಟಿಗೆ ಹೋಗುವ ಮಾರ್ಗದಲ್ಲಿ ಶ್ರೀರಾಮನು ಜಟಾಯುವನ್ನು ಸಂಧಿಸಿದುದು, ಜಟಾಯು ತನ್ನ ಪರಿಚಯವನ್ನು ಮಾಡಿಕೊಟ್ಟುದು
ಮೂಲಮ್ - 1
ಅಥ ಪಂಚವಟೀಂ ಗಚ್ಛನ್ನಂತರಾ ರಘುನಂದನಃ ।
ಅಸಸಾದ ಮಹಾಕಾಯಂ ಗೃಧ್ರಂ ಭೀಮಪರಾಕ್ರಮಮ್ ॥
ಅನುವಾದ
ಪಂಚವಟಿಗೆ ಹೋಗುವಾಗ ದಾರಿಯಲ್ಲಿ ರಘುನಂದನನು ಭಯಂಕರ ಪರಾಕ್ರಮಿಯಾಗಿದ್ದ, ವಿಶಾಲ-ಕಾಯನಾದ ಒಂದು ಹದ್ದನ್ನು ನೋಡಿದನು.॥1॥
ಮೂಲಮ್ - 2
ತಂ ದೃಷ್ಟ್ವಾ ತೌ ಮಹಾಭಾಗೌ ವನಸ್ಥಂ ರಾಮಲಕ್ಷ್ಮಣೌ ।
ಮೇನಾತೇ ರಾಕ್ಷಸಂ ಪಕ್ಷಿಂ ಬ್ರುವಾಣೌ ಕೋ ಭವಾನಿತಿ ॥
ಅನುವಾದ
ವನದಲ್ಲಿ ಕುಳಿತಿರುವ ಆ ದೊಡ್ಡ ಪಕ್ಷಿಯನ್ನು ನೋಡಿ ಮಹಾಭಾಗ ಶ್ರೀರಾಮ-ಲಕ್ಷ್ಮಣರು ಅವನನ್ನು ರಾಕ್ಷಸನೆಂದು ತಿಳಿದು ‘ನೀನು ಯಾರು?’ ಎಂದು ಕೇಳಿದರು.॥2॥
ಮೂಲಮ್ - 3
ತತೋ ಮಧುರಯಾ ವಾಚಾ ಸೌಮ್ಯಯಾ ಪ್ರೀಣಯನ್ನಿವ ।
ಉವಾಚ ವತ್ಸ ಮಾಂ ವಿದ್ಧಿ ವಯಸ್ಯಂ ಪಿತುರಾತ್ಮನಃ ॥
ಅನುವಾದ
ಆಗ ಆ ಪಕ್ಷಿಯು ಮಧುರ ಹಾಗೂ ಕೋಮಲ ವಾಣಿಯಿಂದ ಅವರನ್ನು ಸಂತೋಷಪಡಿಸುತ್ತಾ ‘ವತ್ಸ! ನಾನು ನಿಮ್ಮ ತಂದೆಯವರ ಮಿತ್ರನೆಂದು ತಿಳಿಯಿರಿ’ ಎಂದು ಹೇಳಿದನು.॥3॥
ಮೂಲಮ್ - 4
ಸ ತಂ ಪಿತೃಸಖಂ ಮತ್ವಾ ಪೂಜಯಾಮಾಸ ರಾಘವಃ ।
ಸ ತಸ್ಯ ಕುಲಮವ್ಯಗ್ರಮಥ ಪಪ್ರಚ್ಛ ನಾಮ ಚ ॥
ಅನುವಾದ
ತಂದೆಯ ಮಿತ್ರನೆಂದು ತಿಳಿದು ಶ್ರೀರಾಮನು ಆ ಹದ್ದನ್ನು ಆದರಿಸಿ ಶಾಂತವಾಗಿ ಅವನ ಕುಲ ಮತ್ತು ಹೆಸರನ್ನು ಕೇಳಿದನು.॥4॥
ಮೂಲಮ್ - 5
ರಾಮಸ್ಯ ವಚನಂ ಶ್ರುತ್ವಾ ಕುಲಮಾತ್ಮಾನಮೇವ ಚ ।
ಆಚಚಕ್ಷೇ ದ್ವಿಜಸ್ತಸ್ಮೈ ಸರ್ವಭೂತ ಸಮುದ್ಭವಮ್ ॥
ಅನುವಾದ
ಶ್ರೀರಾಮನ ಪ್ರಶ್ನೆಯನ್ನು ಕೇಳಿ ಆ ಪಕ್ಷಿಯು ತನ್ನ ಕುಲ-ನಾಮದ ಪರಿಚಯವನ್ನು ಕೊಡುತ್ತಾ ಸಮಸ್ತ ಪ್ರಾಣಿಗಳ ಉತ್ಪತ್ತಿಯ ಕ್ರಮವನ್ನು ಹೇಳಲು ಪ್ರಾರಂಭಿಸಿದನು.॥5॥
ಮೂಲಮ್ - 6
ಪೂರ್ವಕಾಲೇ ಮಹಾಬಾಹೋ ಯೇ ಪ್ರಜಾಪತಯೋಽಭವನ್ ।
ತಾನ್ಮೇ ನಿಗದತಃ ಸರ್ವಾನಾದಿತಃ ಶೃಣು ರಾಘವ ॥
ಅನುವಾದ
ಮಹಾಬಾಹು ರಘುನಂದನ! ಹಿಂದೆ ಆಗಿ ಹೋದ ಎಲ್ಲ ಪ್ರಜಾಪತಿಗಳನ್ನು ಮೊದಲಿನಿಂದ ವರ್ಣಿಸುವೆನು ಕೇಳು.॥6॥
ಮೂಲಮ್ - 7
ಕರ್ದಮಃ ಪ್ರಥಮಸ್ತೇಷಾಂ ವಿಕ್ರೀತಸ್ತದನಂತರಮ್ ।
ಶೇಷಶ್ಚ ಸಂಶ್ರಯಶ್ಚೈವ ಬಹುಪುತ್ರಶ್ಚ ವೀರ್ಯವಾನ್ ॥
ಅನುವಾದ
ಆ ಪ್ರಜಾಪತಿಗಳಲ್ಲಿ ಮೊಟ್ಟಮೊದಲು ಕರ್ದಮನಾದನು. ಅನಂತರ ಎರಡನೆಯವನು ವಿಕೃತ ಎಂಬ ಪ್ರಜಾಪತಿಯಾದನು, ಮೂರನೆಯವನು ಶೇಷ, ನಾಲ್ಕನೆಯವನು ಸಂಶ್ರಯ, ಐದನೆಯವನು ಪರಾಕ್ರಮಿ ಬಹುಪುತ್ರನಾದನು.॥7॥
ಮೂಲಮ್ - 8
ಸ್ಥಾಣುರ್ಮರೀಚಿರತ್ರಿಶ್ಚ ಕ್ರತುಶ್ಚೈವ ಮಹಾಬಲಃ ।
ಪುಲಸ್ತ್ಯಶ್ಚಾಂಗಿರಾಶ್ಚೈವ ಪ್ರಚೇತಾಃ ಪುಲಹಸ್ತಥಾ ॥
ಅನುವಾದ
ಆರನೆಯವ ಸ್ಥಾಣು, ಏಳನೆಯವನು ಮರೀಚಿ, ಎಂಟನೆಯವನು ಅತ್ರಿ, ಒಂಭತ್ತನೆಯವನು ಕ್ರತು, ಹತ್ತನೆಯವನು ಪುಲಸ್ತ್ಯ, ಹನ್ನೊಂದನೆಯವನು ಅಂಗಿರಾ, ಹನ್ನೆರಡನೆಯವನು ಪ್ರಚೇತಾ (ವರುಣ) ಹದಿಮೂರನೆಯದಾಗಿ ಪುಲಹ ಪ್ರಜಾಪತಿಯಾದನು.॥8॥
ಮೂಲಮ್ - 9
ದಕ್ಷೋ ವಿವಸ್ವಾನಪರೋಽರಿಷ್ಟನೇಮಿಶ್ಚ ರಾಘವ ।
ಕಶ್ಯಪಶ್ಚ ಮಹಾತೇಜಾಸ್ತೇಷಾಮಾಸೀಚ್ಚ ಪಶ್ಚಿಮಃ ॥
ಅನುವಾದ
ಹದಿನಾಲ್ಕನೆಯವನು ದಕ್ಷ, ಹದಿನೈದನೆಯವನು ವಿವಸ್ವಾನ್, ಹದಿನಾರನೆಯವನು ಅರಿಷ್ಟನೇಮಿ, ಹದಿನೇಳನೆಯವನು ಮಹಾತೇಜಸ್ವೀ ಕಶ್ಯಪನಾದನು. ರಘುನಂದನ! ಈ ಕಶ್ಯಪನೇ ಕೊನೆಯ ಪ್ರಜಾಪತಿಯಾಗಿ ಹೋದನು.॥9॥
ಮೂಲಮ್ - 10
ಪ್ರಜಾಪತೇಸ್ತು ದಕ್ಷಸ್ಯ ಬಭೂವುರಿತಿ ವಿಶ್ರುತಾಃ ।
ಷಷ್ಟಿ ರ್ದುಹಿತರೋ ರಾಮ ಯಶಸ್ವಿನ್ಯೋ ಮಹಾಯಶಃ ॥
ಅನುವಾದ
ಮಹಾಯಶಸ್ವೀ ಶ್ರೀರಾಮ! ಪ್ರಜಾಪತಿ ದಕ್ಷನಿಗೆ ಅರವತ್ತು ಯಶಸ್ವಿನೀ ಕನ್ಯೆಯರು ಹುಟ್ಟಿದರು. ಅವರು ಬಹಳ ವಿಖ್ಯಾತರಾಗಿದ್ದರು.॥10॥
ಮೂಲಮ್ - 11½
ಕಶ್ಯಪಃ ಪ್ರತಿಜಗ್ರಾಹ ತಾಸಾಮಷ್ಟೌ ಸುಮಧ್ಯಮಾಃ ।
ಆದಿತಿಂ ಚ ದಿತಿಂ ಚೈವ ದನೂಮಪಿ ಚ ಕಾಲಿಕಾಮ್ ॥
ತಾಮ್ರಾಂ ಕ್ರೋಧವಶಾಂ ಚೈವ ಮನುಂ ಚಾಪ್ಯನಲಾಮಪಿ ।
ಅನುವಾದ
ಅವರಲ್ಲಿ ಎಂಟು ಪುರಾಣ ಗ್ರಂಥಗಳಲ್ಲಿ ‘ಕಶ್ಯಪಾಯ ತ್ರಯೋದಶ’ ಇತ್ಯಾದಿ ವಚನಗಳಿಂದ ಕಶ್ಯಪನಿಗೆ ಹದಿಮೂರು ಪತ್ನಿಯರ ಉಲ್ಲೇಖವಿದ್ದರೂ, ಇಲ್ಲಿ ಸಂತಾನ ಪರಂಪರೆಯನ್ನು ವರ್ಣಿಸುವಾಗ ಎಂಟೇ ಉಪಯೋಗವಾಗಿದೆ. ಅದಕ್ಕಾಗಿ ಇಲ್ಲಿ ಎಂಟರ ಸಂಖ್ಯೆಯನ್ನೇ ಕೊಡಲಾಗಿದೆ. ಸುಂದರೀ ಕನ್ಯೆಯರನ್ನು ಪ್ರಜಾಪತಿ ಕಶ್ಯಪನು ಪತ್ನಿಯರಾಗಿ ಸ್ವೀಕರಿಸಿದನು. ಅವರ ಹೆಸರು ಇಂತಿದ್ದವು-ಅದಿತಿ, ದಿತಿ, ದನು, ಕಾಲಕಾ, ತಾಮ್ರಾ, ಕ್ರೋಧವಶಾ, ಮನು ಮತ್ತು ಅನಲ.॥11½॥
ಮೂಲಮ್ - 12½
ತಾಸ್ತು ಕನ್ಯಾಸ್ತತಃ ಪ್ರೀತಃ ಕಶ್ಯಪಃ ಪುನರಬ್ರವೀತ್ ॥
ಪುತ್ರಾಂಸ್ತ್ರೈ ಲೋಕ್ಯಭರ್ತೃ ನ್ವೈ ಜನಯಿಷ್ಯಥ ಮತ್ಸಮಾನ್ ।
ಅನುವಾದ
ಅನಂತರ ಆ ಕನ್ಯೆಯರಿಂದ ಪ್ರಸನ್ನರಾದ ಕಶ್ಯಪರು ಅವರಲ್ಲಿ ಹೇಳಿದರು-ದೇವಿಯರೇ! ನೀವು ಮೂರು ಲೋಕಗಳ ಭರಣ-ಪೋಷಣ ಮಾಡುವುದರಲ್ಲಿ ಸಮರ್ಥರಾದ ನನ್ನಂತೆಯೇ ತೇಜಸ್ವೀಗಳಾಗಿ ಇರುವ ಪುತ್ರರನ್ನು ಪಡೆಯಿರಿ.॥12½॥
ಮೂಲಮ್ - 13½
ಅದಿತಿಸ್ತನ್ಮನಾ ರಾಮ ದಿತಿಶ್ಚ ದನುರೇವ ಚ ॥
ಕಾಲಕಾ ಚ ಮಹಾಬಾಹೋ ಶೇಷಾಸ್ತ್ವಮನಸೋಽಭವನ್ ।
ಅನುವಾದ
ಮಹಾಬಾಹು ಶ್ರೀರಾಮ! ಇವರಲ್ಲಿ ಅದಿತಿ, ದಿತಿ, ದನು, ಮತ್ತು ಕಾಲಕಾ, ಈ ನಾಲ್ವರೂ ಕಶ್ಯಪರು ಹೇಳಿದ ಮಾತನ್ನು ಮನಃಪೂರ್ವಕವಾಗಿ ಒಪ್ಪಿಕೊಂಡರು. ಆದರೆ ಉಳಿದ ಪತ್ನಿಯರು ಆ ಕಡೆಗೆ ಮನ ಕೊಡಲಿಲ್ಲ ಅವರ ಮನಸ್ಸಿನಲ್ಲಿ ಅಂತಹ ಮನೋರಥ ಉಂಟಾಗಲಿಲ್ಲ.॥13½॥
ಮೂಲಮ್ - 14½
ಅದಿತ್ಯಾಂ ಜಜ್ಞೀರೇ ದೇವಾಸ್ತ್ರಯಸ್ತ್ರಿಂಶದರಿಂದಮ ॥
ಆದಿತ್ಯಾ ವಸವೋ ರುದ್ರಾ ಹ್ಯಶ್ವಿನೌ ಚ ಪರಂತಪ ।
ಅನುವಾದ
ಪರಂತಪ ರಘುವೀರನೇ! ಅದಿತಿಯ ಗರ್ಭದಿಂದ ಮೂವತ್ತಮೂರು ದೇವತೆಗಳು ಉತ್ಪನ್ನರಾದರು-ಹನ್ನೆರಡು ಆದಿತ್ಯರು, ಎಂಟು ವಸುಗಳು, ಹನ್ನೊಂದು ರುದ್ರರು, ಇಬ್ಬರೂ ಅಶ್ವಿನಿ ಕುಮಾರರು, ಹೀಗೆ ಮೂವತ್ತಮೂರು ದೇವತೆಗಳ.॥14½॥
ಮೂಲಮ್ - 15½
ದಿತಿಸ್ತ್ವಜನಯತ್ ಪುತ್ರಾನ್ ದೈತ್ಯಾಂಸ್ತಾತ ಯಶಸ್ವಿನಃ ॥
ತೇಷಾಮಿಯಂ ವಸುಮತೀ ಪುರಾಽಽಸೀತ್ಸವನಾರ್ಣವಾ ।
ಅನುವಾದ
ಅಯ್ಯಾ! ದಿತಿಯು ದೈತ್ಯರೆಂಬ ಪ್ರಸಿದ್ಧ ಯಶಸ್ವೀ ಪುತ್ರರಿಗೆ ಜನ್ಮನಿಡಿದಳು. ಹಿಂದೆ ವನ, ಪರ್ವತಗಳ ಸಹಿತ ಇಡೀ ಪೃಥ್ವಿಯು ಇವರ ಅಧಿಕಾರದಲ್ಲೇ ಇತ್ತು.॥15½॥
ಮೂಲಮ್ - 16½
ದನುಸ್ತ್ವಜನಯತ್ ಪುತ್ರಮಶ್ವಗ್ರೀವಮರಿಂದಮ ॥
ನರಕಂ ಕಾಲಕಂ ಚೈವ ಕಾಲಕಾಪಿ ವ್ಯಜಾಯತ ।
ಅನುವಾದ
ಶತ್ರುದಮನ! ದನುವು ಅಶ್ವಗ್ರೀವ ಎಂಬ ಪುತ್ರರನ್ನು ಉತ್ಪನ್ನಮಾಡಿದಳು. ಕಾಲಕೆಯು ನರಕ ಹಾಗೂ ಕಾಲಕ ಎಂಬ ಇಬ್ಬರು ಪುತ್ರರಿಗೆ ಜನ್ಮನೀಡಿದಳು.॥16½॥
ಮೂಲಮ್ - 17½
ಕ್ರೌಂಚೀಂ ಭಾಸೀಂ ತಥಾ ಶ್ಯೇನೀಂ ಧೃತರಾಷ್ಟ್ರೀಂ ತಥಾ ಶುಕೀಮ್ ॥
ತಾಮ್ರಾತು ಸುಷವೇ ಕನ್ಯಾಃ ಪಂಚ್ಚೈತಾ ಲೋಕವಿಶ್ರುತಾಃ ।
ಅನುವಾದ
ತಾಮ್ರಾಳು ಕ್ರೌಂಚೀ, ಭಾಸೀ, ಶೈನೀ, ಧೃತರಾಷ್ಟ್ರಿ ಹಾಗೂ ಶುಕಿ ಈ ಐವರು ವಿಶ್ವವಿಖ್ಯಾತ ಕನ್ಯೆಯರಿಗೆ ಜನ್ಮ ನೀಡಿದಳು.॥17½॥
ಮೂಲಮ್ - 18
ಉಲೂಕಾಂಜನಯತ್ ಕ್ರೌಂಚೀ ಭಾಸೀ ಭಾಸಾನ್ವ್ಯ ಜಾಯತ ॥
ಮೂಲಮ್ - 19
ಶ್ಯೇನೀ ಶ್ಯೇನಾಂಶ್ಚ ಗೃಧ್ರಾಂಶ್ಚವ್ಯಜಾಯತ ಸುತೇಜಸಃ ।
ಧೃತರಾಷ್ಟ್ರೀ ತು ಹಂಸಾಂಶ್ಚ ಕಲಹಂಸಾಂಶ್ಚ ಸರ್ವಶಃ ॥
ಅನುವಾದ
ಇವರಲ್ಲಿ ಕ್ರೌಂಚಿಯು ಗೂಬೆಗಳನ್ನು, ಭಾಸಿಯು ಭಾಸ ಎಂಬ ಪಕ್ಷಿಗಳನ್ನು, ಶೈನಿಯು ಪರಮತೇಜಸ್ವಿ ಶ್ಯೇನ (ಹದ್ದು)ಗಳನ್ನು ಮತ್ತು ಗದ್ಧಗಳನ್ನು ಹಾಗೂ ಧೃತರಾಷ್ಟ್ರಿಯು ಎಲ್ಲ ಪ್ರಕಾರದ ಹಂಸಗಳನ್ನು ಮತ್ತು ಕಲಹಂಸರನ್ನು ಪ್ರಸವಿಸಿದಳು.॥18-19॥
ಮೂಲಮ್ - 20
ಚಕ್ರವಾಕಾಂಶ್ಚ ಭದ್ರಂ ತೇ ವಿಜಜ್ಞೇ ಸಾಪಿ ಭಾಮಿನೀ ।
ಶುಕೀ ನತಾಂ ವಿಜಜ್ಞೇ ತು ನತಾಯಾಂ ವಿನತಾ ಸುತಾ ॥
ಅನುವಾದ
ಶ್ರೀರಾಮಾ! ನಿನಗೆ ಮಂಗಳವಾಗಲಿ ಅದೇ ಭಾಮಿನೀ ಧೃತರಾಷ್ಟ್ರಿಯು ಚಕ್ರವಾಕ ಎಂಬ ಪಕ್ಷಿಗಳನ್ನು ಉತ್ಪನ್ನ ಮಾಡಿದ್ದಳು. ತಾಮ್ರಾಳ ಕಿರಿಯ ಪುತ್ರಿ ಶುಕಿಯು ನತಾ ಎಂಬ ಕನ್ಯೆಗೆ ಜನ್ಮಕೊಟ್ಟಳು. ನತಾಳಿಂದ ವಿನತಾ ಎಂಬ ಪುತ್ರಿ ಹುಟ್ಟಿದಳು.॥20॥
ಮೂಲಮ್ - 21
ದಶ ಕ್ರೋಧವಶಾ ರಾಮ ವಿಜಜ್ಞೇಽಪ್ಯಾತ್ಮ ಸಂಭವಾಃ ।
ಮೃಗೀಂ ಚ ಮೃಗಮಂದಾಂ ಚ ಹರೀಂ ಭದ್ರಮದಾಮಪಿ ॥
ಮೂಲಮ್ - 22
ಮಾತಂಗೀಮಥ ಶಾರ್ದೂಲೀಂ ಶ್ವೇತಾಂ ಚ ಸುರಭಿಂ ತಥಾ ।
ಸರ್ವಲಕ್ಷಣಸಂಪನ್ನಾಂ ಸುರಸಾಂ ಕದ್ರುಕಾಮಪಿ ॥
ಅನುವಾದ
ಶ್ರೀರಾಮಾ! ಕ್ರೋಧವಶಾಳು-ಮೃಗೀ, ಮೃಗ ಮಂದಾ, ಹರೀ, ಭದ್ರಮದಾ, ಮಾತಂಗಿ, ಶಾರ್ಮಾಲಿ, ಶ್ವೇತಾ, ಸುರಭಿ, ಸರ್ವಲಕ್ಷಣ ಸಂಪನ್ನ ಸುರಸಾ ಮತ್ತು ಕದ್ರು, ಹೀಗೆ ಹತ್ತು ಕನ್ಯೆಯರಿಗೆ ಜನ್ಮನೀಡಿದಳು.॥21-22॥
ಮೂಲಮ್ - 23
ಅಪತ್ಯಂ ತು ಮೃಗಾಃ ಸರ್ವೇ ಮೃಗ್ಯಾ ನರವರೋತ್ತಮ ।
ಋಕ್ಷಾಶ್ಚ ಮೃಗಮಂದಾಯಾಃ ಸೃಮರಾಶ್ಚಮರಾಸ್ತಥಾ ॥
ಅನುವಾದ
ನರೋತ್ತಮ ಶ್ರೀಮಾ! ಮೃಗೀಯ ಸಂತಾನ ಎಲ್ಲ ಮೃಗಗಳಾಗಿವೆ ಮತ್ತು ಮೃಗ ಮಂದೆಯಲ್ಲಿ ಋಕ್ಷ, ಸೃಮರ ಮತ್ತು ಚಮರ ಹುಟ್ಟಿದರು.॥23॥
ಮೂಲಮ್ - 24
ತತಸ್ತ್ವಿರಾವತೀಂ ನಾಮ ಜಜ್ಞೇ ಭದ್ರಮದಾ ಸುತಾಮ್ ।
ತಸ್ಯಾಸ್ತ್ವೆರಾವತಃ ಪುತ್ರೋ ಲೋಕಾನಾಥೋ ಮಹಾಗಜಃ ॥
ಅನುವಾದ
ಭದ್ರಮದೆಯು ಇರಾವತೀ ಎಂಬ ಕನ್ಯೆಗೆ ಜನ್ಮನೀಡಿದಳು, ಆಕೆಯ ಪುತ್ರ ಐರಾವತ ಎಂಬ ಲೋಕನಾಯಕ ಮಹಾಗಜರಾಜನು ಹುಟ್ಟಿದನು.॥24॥
ಮೂಲಮ್ - 25
ಹರ್ಯಾಶ್ಚ ಹರಯೋಽಪತ್ಯಂ ವಾನರಾಶ್ಚ ತಪಸ್ವಿನಃ ।
ಗೋಲಾಂಗೂಲಾಶ್ಚ ಶಾರ್ದೂಲೀ ವ್ಯಾಘ್ರಾಂಶ್ಚಾಜನಯತ್ಸುತಾನ್ ॥
ಅನುವಾದ
ಹರೀಯ ಸಂತಾನಗಳು ಹರಿ (ಸಿಂಹ), ತಪಸ್ವೀ (ವಿಚಾರಶೀಲ) ವಾನರ ಮತ್ತು ಗೋಲಾಂಗೊಲ ಆದವು. ಕ್ರೋಧವಶೆಯ ಪುತ್ರಿ ಶಾರ್ಮಲಿಯು ವ್ಯಾಘ್ರ ಎಂಬ ಪುತ್ರನನ್ನು ಹಡೆದಳು.॥25॥
ಮೂಲಮ್ - 26
ಮಾತಂಗ್ಯಾಸ್ತ್ವಥ ಮಾತಂಗಾ ಅಪತ್ಯಂ ಮನುಜರ್ಷಭ ।
ದಿಶಾಗಜಂತು ಕಾಕುತ್ಸ್ಥ ಶ್ವೇತಾ ವ್ಯಜನಯತ್ಸುತಾನ್ ॥
ಅನುವಾದ
ನರಶ್ರೇಷ್ಠನೆ! ಮಾತಂಗಿಯ ಸಂತಾನಗಳು ಮಾತಂಗ (ಆನೆ)ವಾಗಿವೆ. ಕಾಕುತ್ಸ್ಥ! ಶ್ವೇತಾಳು ಪುತ್ರರೂಪದಿಂದ ಒಬ್ಬ ದಿಗ್ಗಜನಿಗೆ ಜನ್ಮನೀಡಿದಳು.॥26॥
ಮೂಲಮ್ - 27
ತತೋ ದುಹಿತರೌ ರಾಮ ಸುರಭಿರ್ದ್ವೇ ವ್ಯಜಾಯತ ।
ರೋಹಿಣೀಂ ನಾಮ ಭದ್ರಂ ತೇ ಗಂಧರ್ವೀಂ ಚ ಯಶಸ್ವಿನೀಮ್ ॥
ಅನುವಾದ
ಶ್ರೀರಾಮ! ನಿನಗೆ ಮಂಗಳವಾಗಲಿ. ಕ್ರೋಧವಶೆಯ ಪುತ್ರಿ ಸುರಭಿ ದೇವಿಯು ರೋಹಿಣಿ ಮತ್ತು ಯಶಸ್ವಿನೀ ಗಂಧರ್ವ ಎಂಬ ಎರಡು ಕನ್ಯೆಯರನ್ನು ಉತ್ಪನ್ನಮಾಡಿದಳು.॥27॥
ಮೂಲಮ್ - 28
ರೋಹಿಣ್ಯ ಜನಯದ್ಗಾವೋ ಗಂಧರ್ವೀ ವಾಜಿನಃ ಸುತಾನ್ ।
ಸುರಸಾಜನಯನ್ನಾಗಾನ್ ರಾಮ ಕದ್ರೂಶ್ಚ ಪನ್ನಗಾನ್ ॥
ಅನುವಾದ
ರೋಹಿಣಿಯು ಗೋವುಗಳಿಗೆ ಜನ್ಮ ನೀಡಿದಳು ಮತ್ತು ಗಂಧರ್ವಿಯು ಕುದುರೆಗಳನ್ನು ಪುತ್ರರಾಗಿ ಉತ್ಪನ್ನ ಮಾಡಿದಳು. ಶ್ರೀರಾಮ! ಸುರಸೆಯು ನಾಗಗಳನ್ನು ಮತ್ತು ಕದ್ರುವು ಸರ್ಪಗಳಿಗೆ ಜನ್ಮ ನೀಡಿದಳು.॥28॥
ಮೂಲಮ್ - 29
ಮನುರ್ಮನುಷ್ಯಾಂಜನಯತ್ ಕೂಶ್ಯಪಸ್ಯ ಮಹಾತ್ಮನಃ ।
ಬ್ರಾಹ್ಮಣಾನ್ಕ್ಷತ್ರಿಯಾನ್ವೈಶ್ಯಾನ್ ಶೂದ್ರಾಂಶ್ಚ ಮನುಜರ್ಷಭ ॥
ಅನುವಾದ
ನರಶ್ರೇಷ್ಠನೇ! ಮಹಾತ್ಮಾ ಕಶ್ಯಪನ ಪತ್ನೀ ಮನುವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರಜಾತಿಯ ಮನುಷ್ಯರಿಗೆ ಜನ್ಮಕೊಟ್ಟಳು.॥29॥
ಮೂಲಮ್ - 30
ಮುಖತೋ ಬ್ರಾಹ್ಮಣಾ ಜಾತಾ ಉರಸಃ ಕ್ಷತ್ರಿಯಾಸ್ತಥಾ ।
ಊರುಭ್ಯಾಂ ಜಜ್ಞಿರೇ ವೈಶ್ಯಾಃ ಪದ್ಭ್ಯಾಂ ಶೂದ್ರಾ ಇತಿ ಶ್ರುತಿಃ ॥
ಅನುವಾದ
ಮುಖದಿಂದ ಬ್ರಾಹ್ಮಣರು ಉತ್ಪನ್ನರಾದರು, ಹೃದಯದಿಂದ ಕ್ಷತ್ರೀಯರು, ಎರಡೂ ತೊಡೆಗಳಿಂದ ವೈಶ್ಯರ ಜನ್ಮವಾಯಿತು. ಎರಡೂ ಕಾಲುಗಳಿಂದ ಶೂದ್ರರು ಹುಟ್ಟಿದರು ಎಂದು ಪ್ರಸಿದ್ಧಿ ಇದೆ.॥30॥
ಮೂಲಮ್ - 31
ಸರ್ವಾನ್ ಪುಣ್ಯ ಫಲಾನ್ ವೃಕ್ಷಾನನಲಾಪಿ ವ್ಯಜಾಯತ ।
ವಿನತಾ ಚ ಶುಕೀಪೌತ್ರೀ ಕದ್ರೂಶ್ಚ ಸುರಸಾಸ್ವಸಾ ॥
ಅನುವಾದ
(ಕಶ್ಯಪ ಪತ್ನೀ) ಅನಲೆಯು ಪವಿತ್ರ ಫಲವುಳ್ಳ ಸಮಸ್ತ ವೃಕ್ಷಗಳಿಗೆ ಜನ್ಮ ನೀಡಿದಳು. ಕಶ್ಯಪಪತ್ನೀ ತಾಮ್ರಾಳ ಪುತ್ರಿ ಶುಕಿಯ ಮೊಮ್ಮಗಳು ವಿನತಾ ಇದ್ದಳು ಹಾಗೂ ಕದ್ರು ಸುರಸೆಯ ತಂಗಿ (ಕ್ರೋಧವಶೆಯ ಪುತ್ರಿ) ಎಂದು ಹೇಳಲಾಗಿದೆ.॥31॥
ಮೂಲಮ್ - 32
ಕದ್ರೂರ್ನಾಗಸಹಸ್ರಂ ತು ವಿಜಜ್ಞೇ ಧರಣೀಧರಾನ್ ।
ದ್ವೌ ಪುತ್ರೌ ವಿನತಾಯಾಸ್ತು ಗರುಡೋಽರುಣ ಏವ ಚ ॥
ಅನುವಾದ
ಇವರಲ್ಲಿ ಕದ್ರವು ಒಂದು ಸಾವಿರ ನಾಗಗಳನ್ನು ಉತ್ಪನ್ನ ಮಾಡಿದಳು. ಅವು ಈ ಪೃಥ್ವಿಯನ್ನು ಧರಿಸಿವೆ. ವಿನತೆಯಲ್ಲಿ ಗರುಡ ಮತ್ತು ಅರುಣ ಎಂಬ ಇಬ್ಬರು ಪುತ್ರರಾದರ.॥32॥
ಮೂಲಮ್ - 33
ತಸ್ಮಾಜ್ಜಾತೋಽಹಮರುಣಾತ್ಸಂಪಾತಿಶ್ಚ ಮಮಾಗ್ರಜಃ ।
ಜಟಾಯುರಿತಿ ಮಾಂ ವಿದ್ಧಿ ಶ್ಯೇನೀಪುತ್ರಮರಿಂದಮ ॥
ಅನುವಾದ
ಅದೇ ವಿನತಾನಂದನ ಅರುಣನಿಂದ ನಾನು ಮತ್ತು ನನ್ನ ಅಣ್ಣ ಸಂಪಾತಿ ಹುಟ್ಟಿದೆವು. ಶತ್ರುದಮನ ರಘುವೀರನೇ! ನನ್ನ ಹೆಸರು ಜಟಾಯು ಎಂದು ತಿಳಿ. ನಾನು ಶ್ಯೇನಿಯ ಪುತ್ರನಾಗಿದ್ದೇನೆ. (ತಾಮ್ರಾಳ ಪುತ್ರಿ ಶ್ಯೇನಿಯ ಪರಂಪರೆಯಲ್ಲಿ ಉತ್ಪನ್ನಳಾದ ಓರ್ವ ಶ್ಯೇನಿಯು ನನ್ನ ತಾಯಿಯಾದಳು.॥33॥
ಮೂಲಮ್ - 34
ಸೋಽಹಂ ವಾಸಸಹಾಯಸ್ತೇ ಭವಿಷ್ಯಾಮಿ ಯದೀಚ್ಛಸಿ ।
ಇದಂ ದುರ್ಗಂ ಹಿ ಕಾಂತಾರಂ ಮೃಗರಾಕ್ಷಸಸೇವಿತಮ್ ।
ಸೀತಾಂ ಚ ತಾತ ರಕ್ಷಿಷ್ಯೇ ತ್ವಯಿ ಯಾತೇ ಸ ಲಕ್ಷ್ಮಣೇ ॥
ಅನುವಾದ
ಅಯ್ಯಾ! ನೀನು ಬಯಸುವೆಯಾದರೆ ಇಲ್ಲಿ ನಿನ್ನ ನಿವಾಸಕ್ಕೆ ಸಹಾಯಕನಾಗುವೆನು. ಈ ದುರ್ಗಮ ವನವು ಮೃಗಗಳಿಂದ ಮತ್ತು ರಾಕ್ಷಸರಿಂದ ಸೇವಿತವಾಗಿದೆ. ಲಕ್ಷ್ಮಣ ಸಹಿತ ನೀನು ತನ್ನ ಪರ್ಣಶಾಲೆಯಿಂದ ಎಂದಾದರೂ ಹೊರಗೆ ಹೋದರೆ ಆಗ ನಾನು ಸೀತಾದೇವಿಯನ್ನು ರಕ್ಷಿಸುವೆನು.॥34॥
ಮೂಲಮ್ - 35
ಜಟಾಯುಷಂ ತಂ ಪ್ರತಿಪೂಜ್ಯ ರಾಘವೋ
ಮುದಾ ಪರಿಷ್ವಜ್ಯ ಚ ಸಂನತೋಭವತ್ ।
ಪಿತುರ್ಹಿ ಶುಶ್ರಾವ ಸಖಿತ್ವಮಾತ್ಮವಾನ್
ಜಟಾಯುಷಾ ಸಂಕಥಿತಂ ಪುನಃ ಪುನಃ ॥
ಅನುವಾದ
ಇದನ್ನು ಕೇಳಿ ಶ್ರೀರಾಮಚಂದ್ರನು ಜಟಾಯುವನ್ನು ಬಹಳ ಸಮ್ಮಾನಿಸಿ ಸಂತೋಷದಿಂದ ಅವನನ್ನು ಆಲಂಗಿಸಿ, ನತಮಸ್ತಕನಾದನು. ಮತ್ತೆ ತಂದೆಯೊಂದಿಗೆ ಅವನ ಮಿತ್ರತೆ ಹೇಗಾಗಿತ್ತು ಎಂಬ ಪ್ರಸಂಗವನ್ನು ಮನಸ್ವೀ ಶ್ರೀರಾಮನು ಜಟಾಯುವಿನಿಂದ ಪದೇ-ಪದೇ ಕೇಳಿದನು.॥35॥
ಮೂಲಮ್ - 36
ಸ ತತ್ರ ಸೀತಾಂ ಪರಿದಾಯ ಮೈಥಿಲೀಂ
ಸಹೈವ ತೇನಾತಿಬಲೇನ ಪಕ್ಷಿಣಾ ।
ಜಗಾಮ ತಾಂ ಪಂಚವಟೀಂ ಸಲಕ್ಷ್ಮಣೋ
ರಿಪೂನ್ ದಿಧಕ್ಷನ್ ಶಲಭಾನಿವಾನಲಃ ॥
ಅನುವಾದ
ಅನಂತರ ಅವನು ಮಿಥಿಲೇಶಕುವಾರೀ ಸೀತೆಯನ್ನು ಅವನ ಸಂರಕ್ಷಣೆಯಲ್ಲಿ ಒಪ್ಪಿಸಿ ಲಕ್ಷ್ಮಣ ಮತ್ತು ಆ ಅತ್ಯಂತ ಬಲಶಾಲೀ ಪಕ್ಷಿ ಜಟಾಯುವಿನೊಂದಿಗೆ ಪಂಚವಟಿಯ ಕಡೆಗೆ ಹೊರಟನು. ಶ್ರೀರಾಮಚಂದ್ರನು ಮುನಿದ್ರೋಹಿ ರಾಕ್ಷಸರನ್ನು ಶತ್ರುಗಳೆಂದು ತಿಳಿದು ಬೆಂಕಿಯು ಪತಂಗವನ್ನು ಸುಟ್ಟು ಬೂದಿ ಮಾಡುವಂತೆಯೇ ಸುಟ್ಟುಬಿಡಲು ಬಯಸುತ್ತಿದ್ದನು.॥36॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹದಿನಾಲ್ಕನೆಯ ಸರ್ಗ ಸಂಪೂರ್ಣವಾಯಿತು. ॥14॥