०१२ अगस्त्यदर्शनम्

वाचनम्
ಭಾಗಸೂಚನಾ

ಸೀತಾ-ರಾಮ-ಲಕ್ಷ್ಮಣರು ಅಗಸ್ತ್ಯರ ಆಶ್ರಮವನ್ನು ಪ್ರವೇಶಿಸಿದುದು, ಅತಿಥಿಸತ್ಕಾರ, ಅಗಸ್ತ್ಯರು ಶ್ರೀರಾಮನಿಗೆ ಅಸ್ತ್ರ- ಶಸ್ತ್ರಗಳನ್ನು ಅನುಗ್ರಹಿಸಿದುದು

ಮೂಲಮ್ - 1

ಸ ಪ್ರವಿಶ್ಯಾಶ್ರಮಪದಂ ಲಕ್ಷ್ಮಣೋ ರಾಘವಾನುಜಃ ।
ಅಗಸ್ತ್ಯಶಿಷ್ಯಮಾಸಾದ್ಯ ವಾಕ್ಯಮೇತದುವಾಚ ಹ ॥

ಅನುವಾದ

ರಾಮಾನುಜ ಲಕ್ಷ್ಮಣನು ಆಶ್ರಮವನ್ನು ಪ್ರವೇಶಿಸಿ ಅಗಸ್ತ್ಯರ ಶಿಷ್ಯರನ್ನು ಭೆಟ್ಟಿಯಾಗಿ ಅವರಲ್ಲಿ ಹೀಗೆ ಹೇಳಿದನು.॥1॥

ಮೂಲಮ್ - 2

ರಾಜಾ ದಶರಥೋ ನಾಮ ಜ್ಯೇಷ್ಠ ಸ್ತಸ್ಯ ಸುತೋ ಬಲೀ ।
ರಾಮಃ ಪ್ರಾಪ್ತೋ ಮುನಿಂ ದ್ರಷ್ಟುಂ ಭಾರ್ಯಯಾ ಸಹ ಸೀತಯಾ ॥

ಅನುವಾದ

ಮುನಿಗಳೇ! ಅಯೋಧ್ಯೆಯ ಪ್ರಸಿದ್ಧ ರಾಜಾ ದಶರಥನ ಜೇಷ್ಠ ಪುತ್ರ ಮಹಾಬಲಿ ಶ್ರೀರಾಮಚಂದ್ರನು ತನ್ನ ಪತ್ನಿ ಸೀತೆಯೊಂದಿಗೆ ಮಹರ್ಷಿಗಳ ದರ್ಶನಾರ್ಥವಾಗಿ ಬಂದಿರುವನು.॥2॥

ಮೂಲಮ್ - 3

ಲಕ್ಷ್ಮಣೋ ನಾಮ ತಸ್ಯಾಹಂ ಭ್ರಾತಾ ತ್ವವರಜೋ ಹಿತಃ ।
ಅನುಕೂಲಶ್ಚ ಭಕ್ತಶ್ಚ ಯದಿ ತೇ ಶ್ರೋತ್ರಮಾಗತಃ ॥

ಅನುವಾದ

ನಾನು ಅವನ ತಮ್ಮನಾಗಿದ್ದು, ಹಿತೈಷಿ ಮತ್ತು ಅನುಕೂಲವಾಗಿ ನಡೆಯುವ ಭಕ್ತನಾಗಿದ್ದೇನೆ. ನನ್ನ ಹೆಸರು ಲಕ್ಷ್ಮಣ ಎಂದಾಗಿದೆ. ಈ ಹೆಸರು ಎಂದಾದರೂ ನಿಮ್ಮ ಕಿವಿಗೆ ಬಿದ್ದಿರಬಹುದು.॥3॥

ಮೂಲಮ್ - 4

ತೇ ವಯಂ ವನಮತ್ಯುಗ್ರಂ ಪ್ರವಿಷ್ಟಾಃ ಪಿತೃಶಾಸನಾತ್ ।
ದೃಷ್ಟುಮಿಚ್ಛಾಮಹೇ ಸರ್ವೇ ಭಗವಂತಂ ನಿವೇದ್ಯತಾಮ್ ॥

ಅನುವಾದ

ನಾವೆಲ್ಲರೂ ಪಿತೃವಾಕ್ಯದಂತೆ ಈ ಅತ್ಯಂತ ಭಯಂಕರ ಕಾಡಿಗೆ ಬಂದಿದ್ದೇವೆ. ಮತ್ತು ಭಗವಾನ್ ಅಗಸ್ತ್ಯಮುನಿಗಳ ದರ್ಶನ ಮಾಡಲು ಬಯಸುತ್ತಿದ್ದೇವೆ. ತಾವು ಅಗಸ್ತ್ಯರಲ್ಲಿ ಈ ಸವಾಚಾರ ತಿಳಿಸಿರಿ.॥4॥

ಮೂಲಮ್ - 5

ತಸ್ಯ ತದ್ವಚನಂ ಶ್ರುತ್ವಾ ಲಕ್ಷ್ಮಣಸ್ಯ ತಪೋಧನಃ ।
ತಥೇತ್ಯುಕ್ತ್ವಾಗ್ನಿಶರಣಂ ಪ್ರವಿವೇಶ ನಿವೇದಿತುಮ್ ॥

ಅನುವಾದ

ಲಕ್ಷ್ಮಣನ ಮಾತನ್ನು ಕೇಳಿ ‘ಹಾಗೆಯೇ ಆಗಲಿ’ ಎಂದು ಹೇಳಿ ಆ ತಪೋಧನನು ಮಹರ್ಷಿಗಳಿಗೆ ಸಮಾಚಾರ ತಿಳಿಸಲು ಅಗ್ನಿಶಾಲೆಯನ್ನು ಪ್ರವೇಶಿಸಿದನು.॥5॥

ಮೂಲಮ್ - 6½

ಸ ಪ್ರವಿಶ್ಯ ಮುನಿಶ್ರೇಷ್ಠಂ ತಪಸಾ ದುಷ್ಪ್ರಧರ್ಷಣಮ್ ।
ಕೃತಾಂಜಲಿರುವಾಚೇದಂ ರಾಮಾಗಮನಮಂಜಸಾ ॥
ಯಥೋಕ್ತಂ ಲಕ್ಷ್ಮಣೇನೈವ ಶಿಷ್ಯೋಽಗಸ್ತ್ಯಸ್ಯ ಸಮ್ಮತಃ ।

ಅನುವಾದ

ಅಗ್ನಿಶಾಲೆಯನ್ನು ಪ್ರವೇಶಿಸಿ ಆ ಅಗಸ್ತ್ಯರ ಪ್ರಿಯ ಶಿಷ್ಯನು-ತಮ್ಮ ತಪಸ್ಸಿನ ಪ್ರಭಾವದಿಂದ ಇತರರಿಗೆ ದುರ್ಜಯರಾಗಿದ್ದ, ಮುನಿಶ್ರೇಷ್ಠ ಅಗಸ್ತ್ಯರ ಬಳಿ ಹೋಗಿ ಕೈ ಮುಗಿದುಕೊಂಡು ಲಕ್ಷ್ಮಣನು ಹೇಳಿದ ಶ್ರೀರಾಮಚಂದ್ರನು ಆಗಮಿಸಿದ ಸಮಾಚಾರವನ್ನು ಅವಸರ-ಅವಸರವಾಗಿ ತಿಳಿಸಿದನು.॥6½॥

ಮೂಲಮ್ - 7

ಪುತ್ರೌ ದಶರಥಸ್ಯೇಮೌ ರಾಮೋ ಲಕ್ಷ್ಮಣ ಏವ ಚ ॥

ಮೂಲಮ್ - 8½

ಪ್ರವಿಷ್ಟಾವಾಶ್ರಮಪದಂ ಸೀತಯಾ ಸಹ ಭಾರ್ಯಯಾ ।
ದ್ರಷ್ಟುಂ ಭವಂತಮಾಯಾತೌ ಶುಶ್ರೂಷಾರ್ಥಮರಿಂದಮೌ ॥
ಯದತ್ರಾನಂತರಂ ತತ್ ತ್ವಮಾಜ್ಞಾಪಯಿತುಮರ್ಹಸಿ ।

ಅನುವಾದ

ಮಹಾಮುನಿಗಳೇ! ದಶರಥ ಮಹಾರಾಜರ ಇಬ್ಬರು ಪುತ್ರರು ಶ್ರೀರಾಮ-ಲಕ್ಷ್ಮಣರು ಆಶ್ರಮಕ್ಕೆ ಆಗಮಿಸಿರುವರು. ಶ್ರೀರಾಮನು ತನ್ನ ಧರ್ಮಪತ್ನೀ ಸೀತೆಯೊಂದಿಗೆ ಇದ್ದಾನೆ. ಅವರಿಬ್ಬರು ಶತ್ರುದಮನ ವೀರರು ತಮ್ಮ ಸೇವೆಯ ಉದ್ದೇಶದಿಂದ ತಮ್ಮನ್ನು ದರ್ಶಿಸಲು ಬಂದಿರುವರು. ಈ ವಿಷಯದಲ್ಲಿ ಏನು ಮಾಡಬೇಕೆಂದು ತಾವು ಅಪ್ಪಣೆ ಕೊಡಬೇಕು.॥7-8½॥

ಮೂಲಮ್ - 9½

ತತಃ ಶಿಷ್ಯಾದುಪಶ್ರುತ್ಯ ಪ್ರಾಪ್ತಂ ರಾಮಂ ಸಲಕ್ಷ್ಮಣಮ್ ॥
ವೈದೇಹೀಂ ಚ ಮಹಾಭಾಗಾಮಿದಂ ವಚನಮಬ್ರವೀತ್ ।

ಅನುವಾದ

ಲಕ್ಷ್ಮಣ ಸಹಿತ ಶ್ರೀರಾಮ ಮತ್ತು ಮಹಾಭಾಗಾ ವಿದೇಹನಂದಿನೀ ಸೀತೆಯ ಶುಭಾಗಮನದ ಸವಾಚಾರ ಶಿಷ್ಯನಿಂದ ಕೇಳಿ ಮಹರ್ಷಿಗಳು ಈ ಪ್ರಕಾರ ಹೇಳಿದರು.॥9½॥

ಮೂಲಮ್ - 10

ದಿಷ್ಟ್ಯಾ ರಾಮಶ್ಚಿರಸ್ಯಾದ್ಯ ದ್ರಷ್ಟುಂ ಮಾಂ ಸಮುಪಾಗತಃ ॥

ಮೂಲಮ್ - 11½

ಮನಸಾ ಕಾಂಕ್ಷಿತಂ ಹ್ಯಸ್ಯ ಮಯಾಪ್ಯಾಗಮನಂ ಪ್ರತಿ ।
ಗಮ್ಯತಾಂ ಸತ್ಕೃತೋ ರಾಮಃ ಸಭಾರ್ಯಃ ಸಹಲಕ್ಷ್ಮಣಃ ॥
ಪ್ರವೇಶ್ಯತಾಂ ಸಮೀಪಂ ಮೇ ಕಿಮಸೌ ನ ಪ್ರವೇಶಿತಃ ।

ಅನುವಾದ

ಬಹಳ ಕಾಲದ ಬಳಿಕ ಇಂದು ಶ್ರೀರಾಮಚಂದ್ರನು ಸ್ವತಃ ನನ್ನನ್ನು ನೋಡಲು ಬಂದಿರುವನು, ಇದು ಸೌಭಾಗ್ಯದ ಮಾತಾಗಿದೆ. ಅವನು ಒಮ್ಮೆ ನನ್ನ ಆಶ್ರಮಕ್ಕೆ ಆಗಮಿಸ ಬೇಕೆಂಬ ಅಭಿಲಾಷೆ ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಇತ್ತು. ಹೋಗು ಪತ್ನೀಸಹಿತ ಶ್ರೀರಾಮ ಮತ್ತು ಲಕ್ಷ್ಮಣರನ್ನು ಸತ್ಕಾರಪೂರ್ವಕ ಆಶ್ರಮದೊಳಗೆ ನನ್ನ ಬಳಿಗೆ ಕರೆದುಕೊಂಡು ಬಾ. ನೀನು ಇಷ್ಟರೊಳಗೆ ಅವರನ್ನು ಏಕೆ ಕರೆದುಕೊಂಡು ಬಂದಿಲ್ಲ.॥10-11½॥

ಮೂಲಮ್ - 12½

ಏವಮುಕ್ತಸ್ತು ಮುನಿನಾ ಧರ್ಮಜ್ಞೇನ ಮಹಾತ್ಮನಾ ॥
ಅಭಿವಾದ್ಯಾಬ್ರವೀಚ್ಛಿಷ್ಯಸ್ತಥೇತಿ ನಿಯಂತಾಂಜಲಿಃ ।

ಅನುವಾದ

ಧರ್ಮಜ್ಞ ಮಹಾತ್ಮಾ ಅಗಸ್ತ್ಯ ಮುನಿಗಳು ಹೀಗೆ ಹೇಳಿದಾಗ ಶಿಷ್ಯನು ಕೈಮುಗಿದು ವಂದಿಸಿ ಹಾಗೆ ಆಗಲಿ ಈಗಲೇ ಕರೆತರುವೆನು ಎಂದು ಹೇಳಿದನು.॥12½॥

ಮೂಲಮ್ - 13½

ತದಾ ನಿಷ್ಕ್ರಮ್ಯ ಸಂಭ್ರಾಂತಃ ಶಿಷ್ಯೋಲಕ್ಷ್ಮಣಮಬ್ರವೀತ್ ॥
ಕೋಽಸೌ ರಾಮೋ ಮುನಿಂ ದ್ರಷ್ಟುಮೇತು ಪ್ರವಿಶತು ಸ್ವಯಮ್ ।

ಅನುವಾದ

ಅನಂತರ ಆ ಶಿಷ್ಯನು ಆಶ್ರಮದಿಂದ ಹೊರಟು ಶೀಘ್ರವಾಗಿ ಲಕ್ಷ್ಮಣನ ಬಳಿಗೆ ಹೋಗಿ ಹೇಳಿದನು - ಶ್ರೀರಾಮಚಂದ್ರನು ಯಾರು? ಅವನು ಸ್ವತಃ ಆಶ್ರಮವನ್ನು ಪ್ರವೇಶಿಸಿ, ಮುನಿಯ ದರ್ಶನ ಮಾಡಲ.॥13½॥

ಮೂಲಮ್ - 14½

ತತೋ ಗತ್ವಾಽಽಶ್ರಮಪದಂ ಶಿಷ್ಯೇಣ ಸಹ ಲಕ್ಷ್ಮಣಃ ॥
ದರ್ಶಯಾಮಾಸ ಕಾಕುತ್ಸ್ಥಂ ಸೀತಾಂ ಚ ಜನಕಾತ್ಮಜಾಮ್ ।

ಅನುವಾದ

ಆಗ ಲಕ್ಷ್ಮಣನು ಶಿಷ್ಯನೊಂದಿಗೆ ಆಶ್ರಮದ ಬಾಗಿಲಿಗೆ ಹೋಗಿ ಶ್ರೀರಾಮಚಂದ್ರನ ಹಾಗೂ ಜನಕಾತ್ಮಜೆ ಸೀತೆಯನ್ನು ದರ್ಶನ ಮಾಡಿಸಿದನು.॥14½॥

ಮೂಲಮ್ - 15½

ತಂ ಶಿಷ್ಯಃ ಪ್ರಶ್ರಿತಂ ವಾಕ್ಯಮಗಸ್ತ್ಯವಚನಂ ಬ್ರುವನ್ ॥
ಪ್ರಾವೇಶಯದ್ಯಥಾನ್ಯಾಯಂ ಸತ್ಕಾರಾರ್ಹಂ ಸುಸತ್ಕೃತಮ್ ।

ಅನುವಾದ

ಶಿಷ್ಯನು ತುಂಬಾ ವಿನಯದೊಂದಿಗೆ ಮಹರ್ಷಿ ಅಗಸ್ತ್ಯರು ಹೇಳಿದ ಮಾತನ್ನು ತಿಳಿಸಿದನು ಮತ್ತು ಸತ್ಕಾರಕ್ಕೆ ಯೋಗ್ಯನಾದ ಶ್ರೀರಾಮನಿಗೆ ಯಥೋಚಿತ ರೀತಿಯಿಂದ ಚೆನ್ನಾಗಿ ಸತ್ಕರಿಸಿ, ಅವರನ್ನು ಆಶ್ರಮಕ್ಕೆ ಕರೆದುಕೊಂಡು ಹೋದನು.॥15½॥

ಮೂಲಮ್ - 16

ಪ್ರವಿವೇಶ ತತೋ ರಾಮಃ ಸೀತಯಾ ಸಹ ಲಕ್ಷ್ಮಣಃ ॥

ಮೂಲಮ್ - 17

ಪ್ರಶಾಂತ ಹರಿಣಾಕೀರ್ಣಮಾಶ್ರಮಂ ಹ್ಯವಲೋಕಯನ್ ।
ಸತತ್ರ ಬ್ರಹ್ಮಣಃ ಸ್ಥಾನಮಗ್ನೇಃ ಸ್ಥಾನಂ ತಥೈವ ಚ ॥

ಅನುವಾದ

ಆಗ ಶ್ರೀರಾಮನು ಲಕ್ಷ್ಮಣ ಮತ್ತು ಸೀತೆಯೊಂದಿಗೆ ಆಶ್ರಮವನ್ನು ಪ್ರವೇಶಿಸಿದನು. ಆ ಆಶ್ರಮವು ಶಾಂತವಾಗಿ ಇರುವ ಜಿಂಕೆಗಳಿಂದ ತುಂಬಿ ಹೋಗಿತ್ತು. ಆಶ್ರಮದ ಆನಂದವನ್ನು ನೋಡುತ್ತಾ, ಅವರು ಅಲ್ಲಿ ಬ್ರಹ್ಮನ ಸ್ಥಾನ ಮತ್ತು ಯಜ್ಞೇಶ್ವರನ ಸ್ಥಾನವನ್ನು ನೋಡಿದರು.॥16-17॥

ಮೂಲಮ್ - 18

ವಿಷ್ಣೋಃ ಸ್ಥಾನಂ ಮಹೇಂದ್ರಸ್ಯ ಸ್ಥಾನಂ ಚೈವ ವಿವಸ್ವತಃ ।
ಸೋಮಸ್ಥಾನಂ ಭಗಸ್ಥಾನಂ ಸ್ಥಾನಂ ಕೌಬೇರಮೇವ ಚ ॥

ಮೂಲಮ್ - 19

ಧಾತುರ್ವಿಧಾತುಃ ಸ್ಥಾನಂ ಚ ವಾಯೋಃಸ್ಥಾನಂ ತಥೈವ ಚ ।
ಸ್ಥಾನಂ ಚ ಪಾಶಹಸ್ತಸ್ಯ ವರುಣ್ಯ ಮಹಾತ್ಮನಃ ॥

ಮೂಲಮ್ - 20½

ಸ್ಥಾನಂ ತಥೈವ ಗಾಯತ್ರ್ಯಾ ವಸೂನಾಂ ಸ್ಥಾನಮೇವ ಚ ।
ಸ್ಥಾನಂ ಚ ನಾಗರಾಜಸ್ಯ ಗರುಡಸ್ಥಾನಮೇವ ಚ ॥
ಕಾರ್ತಿಕೇಯಸ್ಯ ಚ ಸ್ಥಾನಂ ಧರ್ಮಸ್ಥಾನಂ ಚ ಪಶ್ಯತಿ ।

ಅನುವಾದ

ಮತ್ತೆ ಕ್ರಮವಾಗಿ ಭಗವಾನ್ ವಿಷ್ಣು, ಮಹೇಂದ್ರ, ಸೂರ್ಯ, ಚಂದ್ರ, ಭಗ, ಕುಬೇರ, ಧಾತಾ, ವಿಧಾತಾ, ವಾಯು, ಪಾಶಧಾರೀ ಮಹಾತ್ಮಾ ವರುಣ, ಗಾಯತ್ರೀ, ವಸು, ನಾಗರಾಜ, ಅನಂತ, ಗರುಡ, ಕಾರ್ತಿಕೇಯ ಹಾಗೂ ಧರ್ಮರಾಜ, ಇವರ ಬೇರೆ ಬೇರೆ ಸ್ಥಾನಗಳನ್ನು ನಿರೀಕ್ಷಿಸಿದರು.॥18-20½॥

ಮೂಲಮ್ - 21

ತತಃ ಶಿಷ್ಯೈಃ ಪರಿವೃತೋ ಮುನಿರಪ್ಯಭಿನಿಷ್ಪತತ್ ॥

ಮೂಲಮ್ - 22

ತಂ ದದರ್ಶಾಗ್ರತೋ ರಾಮೋ ಮುನಿನಾಂ ದೀಪ್ತತೇಜಸಾಮ್ ।
ಅಬ್ರವೀದ್ವಚನಂ ವೀರೋ ಲಕ್ಷ್ಮಣಂ ಲಕ್ಷ್ಮಿವರ್ಧನಮ್ ॥

ಅನುವಾದ

ಇಷ್ಟರಲ್ಲಿ ಮುನಿವರ ಅಗಸ್ತ್ಯರೂ ಶಿಷ್ಯರೊಂದಿಗೆ ಅಗ್ನಿ ಶಾಲೆಯಿಂದ ಹೊರಗೆ ಬಂದರು. ವೀರ ಶ್ರೀರಾಮನು ಮುನಿಗಳನ್ನು ಮುಂದುಮಾಡಿ ಬರುತ್ತಿರುವ ಉದ್ದೀಪ್ತ ತೇಜಸ್ವೀ ಅಗಸ್ತ್ಯರನ್ನು ದರ್ಶಿಸಿದನು. ಮತ್ತು ತನ್ನ ಶೋಭೆಯನ್ನು ವಿಸ್ತರಿಸುವ ಲಕ್ಷ್ಮನಲ್ಲಿ ಈ ಪ್ರಕಾರ ಹೇಳಿದನು.॥21-22॥

ಮೂಲಮ್ - 23

ಬಹಿರ್ಲಕ್ಷ್ಮಣ ನಿಷ್ಕ್ರಾಮತ್ಯಗಸ್ತ್ಯೋ ಭಗವಾನೃಷಿಃ ।
ಔದಾರ್ಯೇಣಾವಗಚ್ಛಾಮಿ ನಿಧಾನಂ ತಪಸಾಮಿಮಮ್ ॥

ಅನುವಾದ

ಲಕ್ಷ್ಮಣಾ! ಭಗವಾನ್ ಅಗಸ್ತ್ಯಮುನಿಗಳು ಆಶ್ರಮದಿಂದ ಹೊರಗೆ ಬರುತ್ತಿದ್ದಾರೆ. ಇವರು ತಪಸ್ಸಿನ ನಿಧಿಗಳಾಗಿದ್ದಾರೆ. ಇವರ ವಿಶಿಷ್ಟ ತೇಜದಿಂದ ಇವರೇ ಅಗಸ್ತ್ಯರಾಗಿದ್ದಾರೆ ಎಂದು ನನಗೆ ತಿಳಿಯಿತು.॥23॥

ಮೂಲಮ್ - 24

ಏವಮುಕ್ತ್ವಾ ಮಹಾಬಾಹುರಗಸ್ತ್ಯಂ ಸೂರ್ಯವರ್ಚಸಮ್ ।
ಜಗ್ರಾಹಾಪತತಸ್ತಸ್ಯ ಪಾದೌ ಚ ರಘುನಂದನಃ ॥

ಅನುವಾದ

ಸೂರ್ಯನಂತೆ ತೇಜಸ್ವೀ ಮಹರ್ಷಿ ಅಗಸ್ತ್ಯರ ವಿಷಯದಲ್ಲಿ ಹೀಗೆ ಹೇಳಿ ಮಹಾಬಾಹು ರಘುನಂದನನು ಇದಿರಾಗಿ ಬರುತ್ತಿರುವ ಮುನೀಶ್ವರರ ಚರಣಗಳನ್ನು ಸ್ಪರ್ಶಿಸಿದನು.॥24॥

ಮೂಲಮ್ - 25

ಅಭಿವಾದ್ಯ ತು ಧರ್ಮಾತ್ಮಾ ತಸ್ಥೌ ರಾಮಃ ಕೃತಾಂಜಲಿಃ ।
ಸೀತಯಾ ಸಹ ವೈದೇಹ್ಯಾ ತದಾ ರಾಮಃ ಸಲಕ್ಷ್ಮಣಃ ॥

ಅನುವಾದ

ಯೋಗಿಗಳ ಮನಸ್ಸು ರಮಮಾಣವಾಗುವ, ಭಕ್ತರಿಗೆ ಆನಂದಪ್ರದಾನ ಮಾಡುವ ಆ ಧರ್ಮಾತ್ಮಾ ಶ್ರೀರಾಮನು ಆಗ ವಿದೇಹಕುವಾರೀ ಸೀತೆ ಮತ್ತು ಲಕ್ಷ್ಮಣನೊಂದಿಗೆ ಮಹರ್ಷಿಯರ ಚರಣಗಳಿಗೆ ವಂದನೆ ಮಾಡಿ ಕೈ ಮುಗಿದು ನಿಂತುಕೊಂಡನು.॥25॥

ಮೂಲಮ್ - 26

ಪ್ರತಿಗೃಹ್ಯ ಚ ಕಾಕುತ್ಸ್ಥ ಮರ್ಚಯಿತ್ವಾಽಽಸನೋದಕೈಃ ।
ಕುಶಲಪ್ರಶ್ನಮುಕ್ತ್ವಾ ಚ ಆಸ್ಯತಾಮಿತಿ ಸೋಽಬ್ರವೀತ್ ॥

ಅನುವಾದ

ಮಹರ್ಷಿಗಳು ಭಗವಾನ್ ಶ್ರೀರಾಮನನ್ನು ಎದೆಗಪ್ಪಿಕೊಂಡು, ಆಸನ, ಪಾದ್ಯ, ಅರ್ಘ್ಯಾದಿಗಳನ್ನು ಕೊಟ್ಟು ಅವನಿಗೆ ಆತಿಥ್ಯ ಸತ್ಕಾರಮಾಡಿದರು ಮತ್ತೆ ಕ್ಷೇಮ ಸಮಾಚಾರ ಕೇಳಿ ಕುಳಿತುಕೊಳ್ಳಲು ಹೇಳಿದರು.॥26॥

ಮೂಲಮ್ - 27

ಅಗ್ನಿಂ ಹುತ್ವಾ ಪ್ರದಾಯಾರ್ಘ್ಯಮತಿಥೀನ್ ಪ್ರತಿಪೂಜ್ಯ ಚ ।
ವಾನಪ್ರಸ್ಥೇನ ಧರ್ಮೇಣ ಸತೇಷಾಂ ಭೋಜನಂ ದದೌ ॥

ಅನುವಾದ

ಅಗಸ್ತ್ಯರು ಮೊದಲಿಗೆ ಅಗ್ನಿಗೆ ಆಹುತಿಯನಿತ್ತು, ಮತ್ತೆ ವಾನಪ್ರಸ್ಥ ಧರ್ಮಕ್ಕನುಸಾರ ಅರ್ಘ್ಯವನ್ನು ಕೊಟ್ಟು ಅತಿಥಿಗಳನ್ನು ಚೆನ್ನಾಗಿ ಪೂಜಿಸಿ ಅವರಿಗೆ ಭೋಜನವನ್ನು ನೀಡಿದರು.॥27॥

ಮೂಲಮ್ - 28

ಪ್ರಥಮಂ ಚೋಪವಿಶ್ಯಾಥ ಧರ್ಮಜ್ಞೋ ಮುನಿಪುಂಗವಃ ।
ಉವಾಚ ರಾಮಮಾಸೀನಂ ಪ್ರಾಂಜಲಿಂ ಧರ್ಮಕೋವಿದಮ್ ॥

ಮೂಲಮ್ - 29

ಅಗ್ನಿಂ ಹುತ್ವಾ ಪ್ರದಾಯಾರ್ಘ್ಯಮತಿಥಿಂ ಪ್ರತಿಪೂಜಯೇತ್ ।
ಅನ್ಯಥಾ ಖಲು ಕಾಕುತ್ಸ್ಥ ತಪಸ್ವೀ ಸಮುದಾಚರನ್ ।
ದುಃಸಾಕ್ಷೀವ ಪರೇ ಲೋಕೇ ಸ್ವಾನಿ ಮಾಂಸಾನಿ ಭಕ್ಷಯೇತ್ ॥

ಅನುವಾದ

ಧರ್ಮಜ್ಞರಾದ ಮುನಿವರ್ಯ ಅಗಸ್ತ್ಯರು ಮೊದಲು ಸ್ವತಃ ಕುಳಿತುಕೊಂಡ ಬಳಿಕ ಧರ್ಮಜ್ಞ ಶ್ರೀರಾಮನು ಕೈಮುಗಿದು ಆಸನದಲ್ಲಿ ವಿರಾಜಿಸಿದನು. ಬಳಿಕ ಮಹರ್ಷಿಗಳು ಅವನಲ್ಲಿ ಹೇಳಿದರು- ಕಾಕುತ್ಸ್ಥನೇ! ವಾನಪ್ರಸ್ಥಿಯು ಮೊದಲು ಅಗ್ನಿಗೆ ಆಹುತಿ ಕೊಡಬೇಕು. ಅನಂತರ ಅರ್ಘ್ಯವನ್ನು ಕೊಟ್ಟು ಅತಿಥಿಯನ್ನು ಪೂಜಿಸಬೇಕು. ತಪಸ್ವಿಯಾದವನು ಇದಕ್ಕೆ ವಿಪರೀತವಾಗಿ ಆಚರಿಸಿದರೆ ಅವನಿಗೆ ಸುಳ್ಳು ಸಾಕ್ಷಿ ಹೇಳಿದವನಂತೆ ಪರಲೋಕದಲ್ಲಿ ತನ್ನ ಶರೀರದ ಮಾಂಸವನ್ನೇ ತಿನ್ನಬೇಕಾಗುತ್ತದೆ.॥28-29॥

ಮೂಲಮ್ - 30

ರಾಜಾ ಸರ್ವಸ್ಯ ಲೋಕಸ್ಯ ಧರ್ಮಚಾರೀ ಮಹಾರಥಃ ।
ಪೂಜನೀಯಶ್ಚ ಮಾನ್ಯಶ್ಚ ಭವಾನ್ಪ್ರಾಪ್ತಃ ಪ್ರಿಯಾತಿಥಿಃ ॥

ಅನುವಾದ

ನೀನು ಸಮಸ್ತ ಲೋಕಗಳ ರಾಜನೂ, ಮಹಾರಥಿಯೂ, ಧರ್ಮವನ್ನು ಆಚರಿಸುವವನೂ ಹಾಗೂ ನನ್ನ ಪ್ರಿಯ ಅತಿಥಿಯಾಗಿಯೂ ಈ ಆಶ್ರಮಕ್ಕೆ ಆಗಮಿಸಿರುವೆ. ಆದ್ದರಿಂದ ನೀನು ನಮಗೆ ಮಾನ್ಯನೂ, ಪೂಜನೀಯನೂ ಆಗಿರುವೆ.॥30॥

ಮೂಲಮ್ - 31

ಏವಮುಕ್ತ್ವಾ ಫಲೈರ್ಮೂಲೈಃ ಪುಷ್ಪೈಶ್ಚಾನ್ಯೈಶ್ಚ ರಾಘವಮ್ ।
ಪೂಜಯಿತ್ವಾ ಯಥಾಕಾಮಂ ತತೋಽಗಸ್ತ್ಯಮಬ್ರವೀತ್ ॥

ಅನುವಾದ

ಹೀಗೆ ಹೇಳಿ ಮಹರ್ಷಿ ಅಗಸ್ತ್ಯರು ಫಲ-ಮೂಲ-ಪುಷ್ಪ ಹಾಗೂ ಇತರ ಉಪಕರಣಗಳಿಂದ ಇಚ್ಛಾನುಸಾರ ಭಗವಾನ್ ಶ್ರೀರಾಮನನ್ನು ಪೂಜಿಸಿದರು. ಅನಂತರ ಅವನಲ್ಲಿ ಇಂತೆಂದರು .॥31॥

ಮೂಲಮ್ - 32

ಇದಂ ದಿವ್ಯಂ ಮಹಚ್ಚಾಪಂ ಹೇಮವಜ್ರ ವಿಭೂಷಿತಮ್ ।
ವೈಷ್ಣವಂ ಪುರುಷವ್ಯಾಘ್ರ ನಿರ್ಮಿತಂ ವಿಶ್ವಕರ್ಮಣಾ ॥

ಮೂಲಮ್ - 33

ಅಮೋಘಃ ಸೂರ್ಯಸಂಕಾಶೋ ಬ್ರಹ್ಮದತ್ತಃ ಶರೋತ್ತಮಃ ।
ದತ್ತೌ ಮಮ ಮಹೇಂದ್ರೇಣ ತೂಣೀ ಚಾಕ್ಷಯಸಾಯಕೌ ॥

ಮೂಲಮ್ - 34

ಸಂಪೂರ್ಣೌ ನಿಶಿತೈರ್ಬಾಣೈರ್ಜ್ವಲದ್ಬಿರಿವ ಪಾವಕೈಃ ।
ಮಹಾರಾಜತಕೋಶೋಽಯಮಸಿರ್ಹೇಮವಿಭೂಷಿತಃ ॥

ಅನುವಾದ

ಪುರುಷ ಸಿಂಹನೇ! ವಿಶ್ವಕರ್ಮನು ನಿರ್ಮಿಸಿದ ಇದು ಮಹಾನ್ ಧನಸ್ಸು ಆಗಿದೆ. ಇದರಲ್ಲಿ ಸುವರ್ಣ ಮತ್ತು ನವರತ್ನಳು ಜೋಡಿಸಿವೆ. ಇದು ಭಗವಾನ್ ವಿಷ್ಣುವು ಕೊಟ್ಟಿರುವುದಾಗಿದೆ. ಹಾಗೂ ಸೂರ್ಯನಂತೆ ದೇದಿಪ್ಯವಾನ ಈ ಅಮೋ ಉತ್ತಮ ಬಾಣ ಬ್ರಹ್ಮದೇವರು ನೀಡಿರುವರು. ಇದಲ್ಲದೆ ಇಂದ್ರನು ಈ ಎರಡು ಬತ್ತಳಿಕೆ ಕೊಟ್ಟಿರುವನು. ಇವು ಹರಿತವಾದ ಹಾಗು ಉರಿಯುವ ಅಗ್ನಿಯಂತೆ ತೇಜಸ್ವೀ ಬಾಣಗಳಿಂದ ಸದಾ ತುಂಬಿರುತ್ತವೆ. ಎಂದೂ ಬರಿದಾಗುವುದಿಲ್ಲ. ಜೊತೆಗೆ ಈ ಖಡ್ಗವಿದೆ, ಇದರ ಹಿಡಿಯು ಚಿನ್ನದಿಂದಾಗಿ ಮಾಡಿದುದಾಗಿದೆ. ಇದರ ಒರೆಯೂ ಕೂಡ ಬಂಗಾರದಿಂದ ಮಾಡಿದುದಾಗಿದೆ.॥32-34॥

ಮೂಲಮ್ - 35

ಆನೇನ ಧನುಷಾ ರಾಮ ಹತ್ವಾ ಸಂಖ್ಯೇ ಮಹಾಸುರಾನ್ ।
ಆಜಹಾರ ಶ್ರಿಯಂ ದೀಪ್ತಾಂ ಪುರಾ ವಿಷ್ಣು ರ್ದಿವೌಕಸಾಮ್ ॥

ಮೂಲಮ್ - 36

ತದ್ಧನುಸ್ತೌ ಚ ತೂಣೀ ಚ ಶರಂ ಖಡ್ಗಂ ಚ ಮಾನದ ।
ಜಯಾಯ ಪ್ರತಿಗೃಹ್ಣೀಷ್ವ ವಜ್ರಂ ವಜ್ರಧರೋ ಯಥಾ ॥

ಅನುವಾದ

ಶ್ರೀರಾಮಾ! ಹಿಂದೆ ಭಗವಾನ್ ವಿಷ್ಣುವು ಇದೇ ಧನುಸ್ಸಿನಿಂದ ಯುದ್ಧದಲ್ಲಿ ದೊಡ್ಡ-ದೊಡ್ಡ ಅಸುರರನ್ನು ಸಂಹರಿಸಿ ದೇವತೆಗಳ ಅತುಲ ಲಕ್ಷ್ಮಿಯನ್ನು ಅವರಿಗೆ ಮರಳಿಸಿದ್ದನು. ಮಾನದ! ನೀನು ಈ ಧನುಸ್ಸು, ಇವೆರಡು ಬತ್ತಳಿಕೆಗಳು, ಈ ಬಾಣ ಮತ್ತು ಈ ಖಡ್ಗ ಇವನ್ನು ರಾಕ್ಷಸರ ಮೇಲೆ ವಿಜಯ ಪಡೆಯಲು ಸ್ವೀಕರಿಸು. ವಜ್ರಧಾರೀ ಇಂದ್ರನು ವಜ್ರವನ್ನು ಧರಿಸುವಂತೆಯೇ ನೀನು ಇವನ್ನು ಧರಿಸು.॥35-36॥

ಮೂಲಮ್ - 37

ಏವಮುಕ್ತ್ವಾ ಮಹಾತೇಜಾಃ ಸಮಸ್ತಂ ತದ್ವರಾಯುಧಮ್ ।
ದತ್ತ್ವಾರಾಮಾಯ ಭಗವಾನಗಸ್ತ್ಯಃ ಪುನರಬ್ರವೀತ್ ॥

ಅನುವಾದ

ಹೀಗೆ ಹೇಳಿ ಮಹಾತೇಜಸ್ವೀ ಅಗಸ್ತ್ಯರು ಆ ಎಲ್ಲ ಶ್ರೇಷ್ಠ ಆಯುಧಗಳನ್ನು ಶ್ರೀರಾಮಚಂದ್ರನಿಗೆ ಒಪ್ಪಿಸಿದರು, ಮತ್ತೆ ಹೇಳಿದರು.॥37॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಅರಣ್ಯಕಾಂಡದಲ್ಲಿ ಹನ್ನೆರಡನೆಯ ಸರ್ಗ ಸಂಪೂರ್ಣವಾಯಿತು.॥12॥